Subscribe to Updates
Get the latest creative news from FooBar about art, design and business.
- ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ
- ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸ್ಪರ್ಧಾ ಕಾರ್ಯಕ್ರಮ ಮುಂದೂಡಿಕೆ
- ನ.10: ಶ್ರೀ ಗುರುಸಂಗಮೇಶ್ವರಸ್ವಾಮಿ ಅವರ ಲಕ್ಷದೀಪೋತ್ಸವ ಆಚರಣೆ
- ವಿದ್ಯಾರ್ಥಿ ವೇತನ: ಬಯೋಮೆಟ್ರಿಕ್ ಇ–ದೃಢೀಕರಣ ಕಡ್ಡಾಯ
- ನವೆಂಬರ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತುಮಕೂರು ಜಿಲ್ಲಾ ಪ್ರವಾಸ
- ತುಮಕೂರು | SSLC ಫಲಿತಾಂಶ ಸೇರಿದಂತೆ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು ಜಿಲ್ಲೆಯ ಹಲವು ಸಮಸ್ಯೆಗಳು!
- ಜಮೀನಿನ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲೋಕಾಯುಕ್ತ ಬಲೆಗೆ
Author: admin
ಸಾಮಾನ್ಯವಾಗಿ ದೊಡ್ಡ ದೊಡ್ಡ ಅಂಗಡಿಗಳು, ಸ್ಥಿತಿವಂತರ ಮನೆಯಲ್ಲಿ ಕಳ್ಳತನ ಆಗುವ ಘಟನೆಗಳ ಬಗ್ಗೆ ನಿತ್ಯ ಕೇಳುತ್ತೇವೆ. ಆದರೆ, ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳ್ಳತನಕ್ಕಾಗಿ ಬಂದ ಕಳ್ಳನಿಗೆ ಯಾವುದೇ ಬೆಲೆ ಬಾಳುವ ವಸ್ತು ಸಿಗದಿದ್ದಾಗ ಆತ ಮಾಡಿದ್ದೇನು ಎಂದು ತಿಳಿದರೆ ನೀವು ಆಚ್ಚರಿ ಪಡಬಹುದು. ಜೊತೆಗೆ ಇವನೆಂತ ಆಸಾಮಿ ಎಂದೂ ಅನಿಸಬಹುದು. ವಾಸ್ತವವಾಗಿ, ಇಲ್ಲೊಬ್ಬ ಕಳ್ಳ ಅಂಗನವಾಡಿಯಲ್ಲಿ ಕನ್ನ ಹಾಕಲು ಯೋಜನೆ (Robbery In Anganwadi) ರೂಪಿಸಿದ್ದ. ಕಳ್ಳತನಕ್ಕೆಂದು ಬಂದಿದ್ದ ಕಳ್ಳನಿಗೆ ಅಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ ಕಾರಣ ಅಲ್ಲಿದ್ದ ಪದಾರ್ಥದಲ್ಲೆ ಅಡುಗೆ ಮಾಡಿ ತಿಂದು ಹೋಗಿದ್ದಾನೆ. ಹೋಗುವ ಮುನ್ನ ಅಲ್ಲಿದ್ದ ಪುಸ್ತಕದಲ್ಲಿ ಮೂರು ಪುಟಗಳ ಪತ್ರ ಬರೆದು, ತನ್ನ ಜೀವನದ ಪ್ರಮುಖ ಘಟನೆಗಳು ಸೇರಿದಂತೆ ತನ್ನ ಅನಿಸಿಕೆ ಬರೆದು ಹೋಗಿದ್ದಾನೆ ಎನ್ನಲಾಗಿದೆ.ಹೌದು, ಈ ಘಟನೆ ವಿಚಿತ್ರ ಎಂದೆನಿಸಿದರೂ ಸತ್ಯ. ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಈ ಘಟನೆ…
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರವು ಗೃಹಬಳಕೆಯ LPG ಸಂಪರ್ಕಗಳನ್ನು ಒದಗಿಸುತ್ತದೆ. ಈ ಯೋಜನೆಯಡಿಯಲ್ಲಿ, ದೇಶದ ಎಪಿಎಲ್, ಬಿಪಿಎಲ್ ಮತ್ತು ಪಡಿತರ ಚೀಟಿ ಹೊಂದಿರುವ ಮಹಿಳೆಯರಿಗೆ ಭಾರತ ಸರ್ಕಾರದಿಂದ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಇದುವರೆಗೆ 9 ಕೋಟಿ ಜನರು ಉಚಿತ ಎಲ್ಪಿಜಿ ಸಂಪರ್ಕ ಪಡೆದಿದ್ದಾರೆ. ಇಂಡಿಯನ್ ಆಯಿಲ್ ತನ್ನ ಟ್ವಿಟರ್ ನಲ್ಲಿ ಈ ಕುರಿತು ಈ ಮಾಹಿತಿಯನ್ನು ನೀಡಿದೆ. ಈ ಯೋಜನೆ(Pradhan Mantri Ujjwala Yojana)ಯನ್ನು 1 ಮೇ 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ELPG ಗ್ಯಾಸ್ ಸಿಲಿಂಡರ್ನ ಪ್ರಯೋಜನವನ್ನು ನೀವು ಉಚಿತವಾಗಿ ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿದೆ ನೋಡಿ.. ಈ ರೀತಿ ಅರ್ಜಿ ಸಲ್ಲಿಸಿ: – ಯೋಜನೆಯ ಲಾಭ ಪಡೆಯಲು, ಮೊದಲಿಗೆ pmujjwalayojana.com ಅಧಿಕೃತ ವೆಬ್ಸೈಟ್ಗೆ ಹೋಗಿ. – ಇಲ್ಲಿ ಡೌನ್ಲೋಡ್ ಫಾರ್ಮ್ ಆಯ್ಕೆಯು ನಿಮ್ಮ ಮುಂದೆ ಕಾಣಿಸುತ್ತದೆ. ಅದನ್ನು ಡೌನ್ಲೋಡ್ ಮಾಡಿ. – ಈಗ…
ಇತ್ತೀಚಿಗೆ ಜೂಜಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಕಂಡು ಬಂದಿರುವ ತಮ್ಮ ಭಾವಚಿತ್ರದ ವಿಚಾರವಾಗಿ ಕ್ರಿಕೆಟ್ ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಕುರಿತಾಗಿ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಅವರು ತಾವೆಂದಿಗೂ ಜೂಜು, ತಂಬಾಕು, ಮಧ್ಯಪಾನಗಳಿಗೆ ಸಂಬಂಧಿಸಿದ ಜಾಹಿರಾತುಗಳನ್ನು ಬೆಂಬಲಿಸಿಲ್ಲ ಜನರನ್ನು ದಾರಿತಪ್ಪಿಸಲು ಅವರ ಚಿತ್ರಗಳನ್ನು ಬಳಸುವುದನ್ನು ನೋಡುವುದು ನನಗೆ ನೋವಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ತೆಂಡೂಲ್ಕರ್ ಅವರು ಕ್ಯಾಸಿನೊವನ್ನು ಅನುಮೋದಿಸುವ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಚಿತ್ರಗಳು ಇದ್ದ ನಂತರ ಅವರ ಸ್ಪಷ್ಟೀಕರಣ ಬಂದಿದೆ.ಆದಾಗ್ಯೂ, ಈ ವಿಷಯದಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಾಸ್ಟರ್ ಬ್ಲಾಸ್ಟರ್ ಸ್ಪಷ್ಟಪಡಿಸಿದ್ದಾರೆ ಮತ್ತು ಅವರ ಕಾನೂನು ತಂಡವು ಸಹ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.”ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಹಲವಾರು ಜಾಹೀರಾತುಗಳನ್ನು ತೋರಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ತಿರುಚಿರುವ ಫೋಟೋದಲ್ಲಿ ಕ್ಯಾಸಿನೊವನ್ನು ಅನುಮೋದಿಸುತ್ತಿದ್ದೇನೆ ಎನ್ನುವುದನ್ನು ತೋರಿಸಲಾಗಿದೆ.ಆದರೆ ನಾನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜೂಜು, ತಂಬಾಕು ಅಥವಾ ಮದ್ಯವನ್ನು ಎಂದಿಗೂ ಅನುಮೋದಿಸಿಲ್ಲ, ನನ್ನ ಚಿತ್ರಗಳನ್ನು…
ಹೈದರಾಬಾದ್: ಸೈಬರಾಬಾದ್ ಮತ್ತು ರಾಚಕೊಂಡದ ಟ್ರಾಫಿಕ್ ಪೊಲೀಸರು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನ ನೋಂದಣಿ ಸಂಖ್ಯೆಯನ್ನು ಹೊಂದಿರುವ ವಾಹನಗಳಿಗೆ ಟ್ರಾಫಿಕ್ ದಂಡಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದ್ದಾರೆ (discount on traffic fine). ಮೂಲಗಳ ಪ್ರಕಾರ 600 ಕೋಟಿ ರೂಪಾಯಿ ಬಾಕಿ ಇರುವ ದಂಡಗಳನ್ನು ಗುರುತಿಸಿದ ನಂತರ ಈ ಹೊಸ ಘೋಷಣೆ ಮಾಡಲಾಗಿದೆ. ಹೈದರಾಬಾದ್ ಟ್ರಾಫಿಕ್ ಪೊಲೀಸರು (traffic police)ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಾನವೀಯತೆಯ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ COVID-19 ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರವನ್ನು ನೀಡಲಾಗಿದೆ. ದ್ವಿಚಕ್ರ ವಾಹನ ಚಾಲಕರಿಗೆ 75% ರಿಯಾಯಿತಿ: ಈ ರಿಯಾಯಿತಿ ಯೋಜನೆಯಡಿ, ದ್ವಿಚಕ್ರ ವಾಹನ ಚಾಲಕರು ಒಟ್ಟು ದಂಡದ ಶೇಕಡಾ 25 ರಷ್ಟು ಮಾತ್ರ ಪಾವತಿಸಬೇಕಾಗುತ್ತದೆ, ಆದರೆ ಲಘು ಮೋಟಾರು ವಾಹನಗಳು, ಕಾರುಗಳು, ಎಸ್ಯುವಿಗಳು (SUV)ಮತ್ತು ಭಾರೀ ವಾಹನ ಚಾಲಕರು ದಂಡದ ಶೇಕಡಾ 50 ರಷ್ಟು ಪಾವತಿಸಬೇಕಾಗುತ್ತದೆ. RTC ಅಂದರೆ ರಸ್ತೆ ಸಾರಿಗೆ ಸಂಸ್ಥೆಯ ಬಸ್…
ರಾಜಧಾನಿ ಬೆಂಗಳೂರಿನ ಆಟೋ ಚಾಲಕರಿಗೆ (Auto Driver) ಸರ್ಕಾರ ಶಾಕ್ ಕೊಡೋಕೆ ಸಿದ್ಧವಾಗಿದೆ. ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣ ಹೆಸರಿನಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು 2stroke ಆಟೋಗಳ ಬ್ಯಾನ್ ಗೆ ಮುಂದಾಗಿದೆ.ಏಪ್ರಿಲ್ 1 ರಿಂದ ಅಂತಹ ಆಟೋಗಳು ನಗರದಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ ಎಂದಿರುವ ಸರ್ಕಾರದ ವಿರುದ್ಧ ಆಟೋ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ. ಕೊರೊನಾ ಕರ್ಫ್ಯೂ (Corona Curfew) ಹಾಗೂ ಲಾಕ್ ಡೌನ್ ನಿಂದ ಬಸವಳಿದಿದ್ದ ಆಟೋ ಚಾಲಕರನ್ನು ಈ ನಿಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ವಾಯುಮಾಲಿನ್ಯ ನಿಯಂತ್ರಣ ನೆಪದಲ್ಲಿ ಸರ್ಕಾರ ಮಾಡಿದ ಈ ನಿಯಮ ಚಾಲಕರಿಗೆ ಬರೆ ಎಳೆದಂತಾಗಿದೆ. ಮಾರ್ಚ್ 31ಕ್ಕೆ 2stroke ಆಟೋಗಳಿಗೆ ಅವಕಾಶ ಇಲ್ಲ. ಸರ್ಕಾರದ ನಿರ್ಧಾರದಿಂದ ಆಟೋ ಚಾಲಕರ ಬದುಕು ಅತಂತ್ರ ಸ್ಥಿತಿಗೆ ತಲುಪಿದಂತಾಗಿದೆ. ಹೆಚ್ಚು ಹೊಗೆ ಉಗುಳುವ ಕಾರಣ 2 ಸ್ಟ್ರೋಕ್ ಆಟೋ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ದ್ವಂದ್ವ ನೀತಿ ವಿರುದ್ಧ ಕೋರ್ಟ್ ಮೊರೆ ಹೊರಡಲು ಆಟೋ ಚಾಲಕರು ಸಿದ್ಧತೆ…
ಪಾವಗಡ: ಪಟ್ಟಣದ ಸರ್ಕಾರಿ YER ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯಿಂದ ಬಿ. ಗ್ರೇಡ್ ನೀಡಿರುವುದಾಗಿ ಪ್ರಾಂಶುಪಾಲರಾದ ಡಾ. ಎನ್. ಶ್ರೀಧರ್ ಹರ್ಷ ತಿಳಿಸಿದ್ದರು. ಗುರುವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರೋಪದಲ್ಲಿ ಮಾತನಾಡಿದ ಅವರು, ಫೆಬ್ರವರಿ 18 ಮತ್ತು 19 ರಂದು ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡಿದ್ದು, ಸಮಿತಿಯ ಮುಖ್ಯಸ್ಥ ಪ್ರೊ.ಮಹಮದ್ ಇಕ್ಬಾಲ್ ಅಲಿ, ವೇದಂ, ಭೇಟಿ ನೀಡಿ ಪರಿಶೀಲಿಸಿ ಕಾಲೇಜಿನ ಕಾರ್ಯವೈಖಾಲಿ ಬಗ್ಗೆ ಗುಣಗಾನ ಮಾಡಿದ್ದಾರೆ ಎಂದು ತಿಳಿಸಿದರು. ಇನ್ನೂ ಕಳೆದ ಸಾಲಿನಲ್ಲಿ ಕೂಡ ಕಾಲೇಜು ಬಿ ಗ್ರೇಡ್ ನ್ನು ಪಡೆದುಕೊಂಡಿತ್ತು. ಈ ಬಾರಿಯೂ ಬಿ ಗ್ರೇಡ್ ಪಡೆದುಕೊಂಡಿದೆ. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಪಾವಗಡ: 4ನೇ ಕ್ಲಸ್ಟರ್ ಹಂತದ SDMC ಮತ್ತು ಪೋಷಕರ ತರಬೇತಿಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮರಿದಾಸನಹಳ್ಳಿಯಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ CRP ನರೇಂದ್ರ ನಾಯ್ಕ ಎನ್., SOP ಅಡಿಯಲ್ಲಿ ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶುಚಿಯಾದ ನೀರು ಕುಡಿಯುವುದು, ಆರೋಗ್ಯವನ್ನು ಆಗಾಗ ತೋರಿಸಿಕೊಳ್ಳಬೇಕು. ಪೋಷಕರು ಹೆಚ್ಚು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಗಮನ ಹರಿಸಬೇಕು ಎಂದರು. 100 ದಿನಗಳು ಓದು ಕರ್ನಾಟಕ ಮತ್ತು ಓದುವ ಆಂದೋಲನದ ಬಗ್ಗೆ ಇದೇ ವೇಳೆ ಮಾಹಿತಿ ನೀಡಿದರು. SDMC ಅವರು ಗ್ರಾಮ ಪಂಚಾತಿಯಿಂದ ಶಾಲೆಗೆ ಬರುವ ಅನುಕೂಲತೆಗಳನ್ನು ತುರ್ತಾಗಿ ಅರ್ಜಿ ಸಲ್ಲಿಸುವುದರೊಂದಿಗೆ ಪಡೆಯಲು ತಿಳಿಸಲಾಯಿತು. ಈ ಕಾರ್ಯದಲ್ಲಿ ಮರಿದಾಸನಹಳ್ಳಿ ಪ್ರೌಢ ಶಾಲೆಯ ಮುಖ್ಯಶಿಕ್ಷಕರಾದ ರಾಜ ಗೋಪಾಲ, ಮರಿದಾಸನಹಳ್ಳಿ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತರಾಜು B N, SDMC ಅಧ್ಯಕ್ಷರಾದ ಹೆಂಜರಪ್ಪ, ಕ್ಲಸ್ಟರಿನ ಎಲ್ಲಾ ಮುಖ್ಯಶಿಕ್ಷಕರು, ಎಲ್ಲಾ ಶಾಲೆಯ SDMC ಅಧ್ಯಕ್ಷರುಗಳು ಹಾಗೂ ಪೋಷಕ ಪ್ರತಿನಿಧಿಗಳು ಭಾಗಿಯಾಗಿದ್ದರು. ವರದಿ:…
ಪಾವಗಡ: ತಾಲೂಕು ಕೆ.ಟಿ. ಹಳ್ಳಿ ಕ್ಲಸ್ಟರ್ ಸಿ.ಅರ್. ಪಿ. ಬಸವರಾಜ್ ಅವರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದ ಕೆ.ಟಿ.ಹಳ್ಳಿ. ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ. ಮಂಜುನಾಥ್ ಉದ್ಘಾಟಿಸಿ ಮಾತನಾಡಿ, ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಕಲಿಕೆಗೆ ಉತ್ತಮ ರೀತಿಯ ಸಹಾಯ ಸಹಕಾರ ನೀಡಿ ಐದು ವರ್ಷಗಳ ಕಾಲ ಸಲ್ಲಿಸಿರುವ ಸೇವೆಯನ್ನು ಪ್ರಶಂಸಿಸಿದರು. ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಿ.ಅರ್. ಪಿ. ಬಸವರಾಜು, ಸುಮಾರು ಐದು ವರ್ಷಗಳ ಕಾಲ ಕ್ಲಸ್ಟರ್ ಶಾಲೆಗಳ ಸಂಪನ್ಮೂಲ ವ್ಯಕ್ತಿಯಾಗಿ ಎಲ್ಲಾ ಶಾಲೆಗಳ ಶಿಕ್ಷಕರುಗಳ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಗಳ ಸಹಾಯ ಸಹಕಾರದೊಂದಿಗೆ ಉತ್ತಮ ರೀತಿಯ ಕೆಲಸಗಳನ್ನು ಮಾಡಿದ್ದೇನೆ. ನನಗೆ ಶಿಕ್ಷಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಕ್ಲಸ್ಟರ್ ಗೆ ಉತ್ತಮ ಹೆಸರು ಬರಲು ಶಿಕ್ಷಕರ ಸಹಕಾರವೇ ಕಾರಣ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ತಮ್ಮ ಶಾಲೆಗಳನ್ನು ಉತ್ತಮ ಗುಣಮಟ್ಟದ…
ಪಾವಗಡ: ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾಗಿ ಕಡಪಲಕೆರೆ ನವೀನ್ ಆಯ್ಕೆಯಾಗಿದ್ದಾರೆ,. ಈ ಸಂಬಂಧ ತಾಲ್ಲೂಕು ಬಿಜೆಪಿ ಘಟಕವು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆದೇಶ ಪ್ರತಿ ನೀಡಿ ಮಾತನಾಡಿದ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ರವಿಶಂಕರ್ ನಾಯ್ಕ ಪಕ್ಷವು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ, ಉತ್ತಮ ಜವಾಬ್ದಾರಿಗಳನ್ನು ವಹಿಸುತ್ತಿದೆ. ಈ ನಿಟ್ಟಿನಲ್ಲಿ ಆಯ್ಕೆಯಾದ ಕಾರ್ಯಕರ್ತರು ಜನಸಾಮಾನ್ಯರ ಸೇವೆ ಮಾಡಿ ಉತ್ತಮ ಹೆಸರು ಪಡೆಯಬೇಕು ಎಂದು ತಿಳಿಸಿದರು. ಗ್ರಾ.ಪಂ. ಸದಸ್ಯ ಹಾಗೂ ಬಿ.ಜೆ.ಪಿ.ಮುಖಂಡ ಕಡಪಲಕೆರೆ ನವೀನ್ ಮಾತನಾಡಿ, ನನ್ನನ್ನು ಪಕ್ಷ ಗುರುತಿಸಿ ಜವಾಬ್ದಾರಿ ಕೆಲಸ ನೀಡಿದೆ. ಅದನ್ನು ಸಮರ್ಪಕವಾಗಿ ನಿರ್ವಹಿಸಿ ನನ್ನ ಮೇಲೆ ಪಕ್ಷ ಇಟ್ಟಿರುವ ನಂಬಿಕೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರತಿಕ್ರಿಯಿಸಿದರು. ತಾಲ್ಲೂಕು ಬಿ.ಜೆ.ಪಿ.ಯ ಕಾರ್ಯಕರ್ತ ರಾದ ಬೆಳ್ಳಿಬಟ್ಲು ಪಾಲಯ್ಯ, ಕನ್ನಮೇಡಿಯ ಸಿದ್ದಗಂಗಮ್ಮ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷರು ಶ್ರೀ ರವಿಶಂಕರ್ ನಾಯ್ಕ್, ನಾಮನಿರ್ದೇಶನ ಸದಸ್ಯರಾದ ಕೆ.ಎಸ್.ನವೀನ್ ಕುಮಾರ್, ಬಿ.ಓ. ಪಾಲಯ್ಯ, ಸಿದ್ದಗಂಗಾಮ್ಮ ಮತ್ತು ಜಿಲ್ಲಾ ಪ್ರಧಾನ…
ತುಮಕೂರು: ಕಲ್ಪತರು ನಾಡು ತುಮಕೂರು ನಗರದಲ್ಲಿ ಸಾಕಷ್ಟು ಕಾಲೇಜುಗಳು ಮೂಲಭೂತ ಸೌಕರ್ಯಗಳು ಇದ್ದು ಅಧಿಕೃತವಾಗಿ ನಡೆಯುತ್ತವೆ ಇನ್ನು ಕೆಲವು ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಕರ್ಯಗಳು ಇಲ್ಲದೆ ಇದ್ದರೂ ಅನಧಿಕೃತವಾಗಿ ಕೆಲ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಪಿಯು ಇಲಾಖಾ ಮಂಡಳಿ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ಬೆಳಗುಂಬ ಟಿ.ದಾಸಪ್ಪ ಎಂಬುವವರು ಆರೋಪ ಮಾಡಿದ್ದಾರೆ. ಆರ್. ಟಿ ಐ ಅಡಿಯಲ್ಲಿ ತುಮಕೂರು ನಗರದ ಕೆಲ ಕಾಲೇಜುಗಳ ಮಾಹಿತಿಯನ್ನು ದಾಸಪ್ಪ ಎಂಬುವರು ಪಿಯು ಶಿಕ್ಷಣ ಇಲಾಖೆಯಿಂದ ಪಡೆಯಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪಿಯು ಉಪನಿರ್ದೇಶಕರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು ಆರೋಪಿಸಿದ್ದಾರೆ. ಇನ್ನು ಕೆಲ ಖಾಸಗಿ ಕಾಲೇಜುಗಳು ಇಲಾಖೆಗಳ ಗಮನಕ್ಕೆ ತಾರದೆ ಸರ್ಕಾರಿ ಆದೇಶಗಳನ್ನು ಗಾಳಿಗೆ ತೂರಿ ಯಾವುದೇ ಮಾಹಿತಿ ನೀಡದೆ ಸ್ಥಳಾಂತರಗೊಂಡಿದ್ದು , ಇದಕ್ಕೆ ಸಂಬಂಧಿಸಿದಂತೆ ಆರ್ ಟಿ ಐ ಅಡಿಯಲ್ಲಿ 2019ರಿಂದ ಇಲ್ಲಿಯವರೆಗೂ ಸತತ ಹೋರಾಟ ಮಾಡಿ ಆಯೋಗದ ಮೊರೆಹೋದರು…