Author: admin

ಕೊರಟಗೆರೆ: ತುಮಕೂರು ಜಿಲ್ಲೆಯ ಯುವಕರು  ‘ದೋಖಾ ದೋಸ್ತಿ’  ಎಂಬ ಚಿತ್ರವನ್ನು ನಿರ್ಮಿಸಿದ್ದು, ಫೆಬ್ರವರಿ 18 ರಂದು ಜಿಲ್ಲೆಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ದೋಖಾ ದೋಸ್ತಿ ಚಿತ್ರದ  ನಿರ್ದೇಶಕ ಮಾತನಾಡಿ, ತುಮಕೂರು ಜಿಲ್ಲೆಯ ಯುವಕರು ಸೇರಿ ದೋಖಾ ದೊಸ್ತಿ ಎಂಬ ಚಿತ್ರವನ್ನು ಚಿತ್ರಿಕರಣ ಮಾಡಿದ್ದೇವೆ, ಫೆಬ್ರವರಿ 18 ರಂದು ತುಮಕೂರು ಜಿಲ್ಲೆಯ  ಚಿತ್ರಮಂದಿಗಳಲ್ಲಿ ದೋಖಾ ದೋಸ್ತಿ ಚಿತ್ರ ಬಿಡುಗಡೆಯಾಗುತ್ತಿದ್ದು,  ಪ್ರೇಕ್ಷಕರು ಸಿನಿಮಾವನ್ನು  ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿ ನಮ್ಮ ಚಿತ್ರತಂಡಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು. ದೋಖಾ ದೋಸ್ತಿ ಚಿತ್ರದ ನಾಯಕ  ಮಾತನಾಡಿ, ತುಮಕೂರು ಜಿಲ್ಲೆಯ ಯುವಕರ ತಂಡದಿಂದ ಈ ಚಿತ್ರವನ್ನು ಚಿತ್ರಿಕರಣ ಮಾಡಲಾಗಿದೆ . ಈ ಚಿತ್ರದಲ್ಲಿ ಸುಮಾರು 35 ರಿಂದ 40 ಜನರು ನಟನೆ ಮಾಡಿದ್ದಾರೆ ಎಂದು ತಿಳಿಸಿದರು. ಚಿತ್ರ ಪ್ರೇಮಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ನೋಡಿ ತುಮಕೂರು ಜಿಲ್ಲೆಯ ಹಳ್ಳಿ ಪ್ರತಿಭೆಗಳಿಗೆ ಆಶೀರ್ವಾದ ಮಾಡುವಂತೆ ಅವರು ಕೋರಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ,  ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುಮಕೂರು : ಬಹುಜನ ಸಮಾಜ ಪಾರ್ಟಿ ವತಿಯಿಂದ ‘ಜನಾಂದೋಲನ ತುಮಕೂರು’ ಜಿಲ್ಲಾಧಿಕಾರಿಗಳ ಕಚೇರಿ ಎದುರು  ಧರಣಿ ಸತ್ಯಾಗ್ರಹ ನಡೆಯಿತು. ಈ ಸಂದರ್ಭ ಮಾತನಾಡಿದ ಬಿಎಸ್ ಪಿ ಮುಖಂಡರು, ಭಾರತ ದೇಶವು ಸಂಪತ್ಭರಿತವಾದ ದೇಶವಾಗಿದೆ.  ಆದರೆ ಈ ದೇಶದಲ್ಲಿ ಬಹುಸಂಖ್ಯಾತರು ಬಡವರಾಗಿದ್ದಾರೆ.  ನಮ್ಮ ದೇಶದ ಭೂಮಿಯ ಒಡೆತನ ಬಂಡವಾಳ ಮತ್ತು ಅಧಿಕಾರ ಸ್ಥಾನಗಳನ್ನು ಜಾತಿ ವ್ಯವಸ್ಥೆಗೆ ಅನುಗುಣವಾಗಿ ಹಂಚಿಕೆಯಾಗಿವೆ,  ಅಂದರೆ ಕೆಲವೇ ಕೆಲವು ಮೇಲ್ಜಾತಿ ಜನರ ಒಡೆತನದಲ್ಲಿ ಪ್ರಮಾಣದ ಕೃಷಿ ಭೂಮಿ ಕೈಗಾರಿಕೆಗಳು ಉದ್ದಿಮೆಗಳು ಮತ್ತು ನೌಕರಿಗಳು ಇಂದಿಗೂ ಉಳಿದಿದೆ.  ಆದ್ದರಿಂದಲೇ ಬಹುಸಂಖ್ಯಾತರಾದ ಎಸ್ಸಿ ಎಸ್ಟಿ ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ನಿರ್ಗತಿಕ ಬಡ ಕೂಲಿ ಕಾರ್ಮಿಕರಾಗಿ ಅನಕ್ಷರಸ್ಥರಾಗಿ ಹಾಗೂ ನಿರುದ್ಯೋಗಿಗಳಾಗಿದ್ದಾರೆ  ಎಂದರು. ಈ ಅಸಮಾನತೆಯನ್ನು ತೊಲಗಿಸಿ ಸರ್ವರಿಗೂ ಸಮಪಾಲು ನೀಡಬೇಕೆಂದು ಬಾಬಾಸಾಹೇಬರು ಸಂವಿಧಾನವು ಸರ್ಕಾರದ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ನಡೆದ ಹಲವು ಜನಪರ ಚಳುವಳಿಗಳ ಫಲವಾಗಿ ಸರ್ಕಾರಗಳು ಭೂ ಪರಿಮಿತಿ ಕಾಯ್ದೆ ಭೂಸುಧಾರಣಾ ಕಾಯಿದೆ ಭೂ ಮಂಜೂರಾತಿ ಕಾಯ್ದೆ ಪರಿಶಿಷ್ಟ…

Read More

ಬೆಂಗಳೂರು: ಸೇಡು ತೀರಿಸಿಕೊಳ್ಳಲು ವ್ಯಕ್ತಿ ಯಾವ ಮಟ್ಟಕ್ಕೂ ಇಳಿಯಬಹುದು. ಕೌಟುಂಬಿಕ ಸಂಬಂಧಗಳ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಇಂತಹದೊಂದು ಪ್ರಕರಣ ಕರ್ನಾಟಕದಲ್ಲಿ ಮುನ್ನೆಲೆಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯ (Wife) ಮೇಲೆ ಸೇಡು ತೀರಿಸಿಕೊಳ್ಳಲುಮಾಡಿದ ಕೆಲಸ ಕೇಳಿದರೆ ನೀವು ಆಶ್ಚರ್ಯಪಡುತ್ತೀರಿ. ಆರೋಪಿಯು ಕ್ಯಾಬ್ ಚಾಲಕನಾಗಿದ್ದು, ಆತ ಎಚ್‌ಐವಿ (HIV) ಸೋಂಕಿತನಾಗಿದ್ದ. 2015 ರಲ್ಲಿ 28 ವರ್ಷದ ಯುವತಿಯನ್ನು ವಿವಾಹವಾಗಿದ್ದ. ಆರೋಪಿ ಎಚ್‌ ಐವಿ ಸೋಂಕಿತನಾಗಿದ್ದರೂ, ಸಂತ್ರಸ್ತೆ ಆತನೊಂದಿಗೆ ವಾಸಿಸಲು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಮಯದಲ್ಲಿ, ಇಬ್ಬರೂ ಸುರಕ್ಷಿತ ದೈಹಿಕ ಸಂಪರ್ಕ ಹೊಂದಿದ್ದರು. ಈ ಸಮಯದಲ್ಲಿ, ಇಬ್ಬರೂ ಸುಮಾರು 6 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಈ ಸಮಯದಲ್ಲಿ, ಮಹಿಳೆಯು ಎಚ್ಐವಿ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಆಕೆ ಸೋಂಕಿಗೆ ಒಳಗಾಗಿಲ್ಲ. ಪತಿಗೆ ಅಕ್ರಮ ಸಂಬಂಧ, ದೂರವಾದ ಪತ್ನಿ: ಈ ಎಲ್ಲದರ ಮಧ್ಯೆ ಆರೋಪಿಯು ಮತ್ತೋರ್ವ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಪತಿಯು (Husband) ಆ ಮಹಿಳೆಯನ್ನು…

Read More

ಭಾರತೀಯ ಸ್ಟೇಟ್ ಬ್ಯಾಂಕ್ (SBI) ಗ್ರಾಹಕರಿಗೆ ಒಂದು ಒಳ್ಳೆಯ ಸುದ್ದಿ ನಿಮಗಾಗಿ ಬಂದಿದೆ, ಭಾರತದ ಅತಿದೊಡ್ಡ ಬ್ಯಾಂಕ್ ಫೆಬ್ರವರಿ 15, 2022 ರಿಂದ ಜಾರಿಗೆ ಬರುವಂತೆ ಚಿಲ್ಲರೆ ದೇಶೀಯ ಅವಧಿಯ ಠೇವಣಿ 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳಿಗೆ(Fixed Deposits), ಬಡ್ಡಿದರಗಳನ್ನು ಶೇ. 5.20 ಕ್ಕೆ ಏರಿಸಲಾಗಿದೆ, ಇದು 10 ಮೂಲ ಅಂಕಗಳ ಹೆಚ್ಚಳವಾಗಿದೆ. ಆದರೆ, 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ ಅವಧಿಯ FD ಗಳನ್ನು ಶೇ. 5.3 ದಿಂದ 5.45 ಕ್ಕೆ ಹೆಚ್ಚಿಸಲಾಗಿದೆ, ಇದು 15 ಮೂಲ ಅಂಕಗಳ ಹೆಚ್ಚಳವಾಗಿದೆ.5 ವರ್ಷಗಳು ಮತ್ತು 10 ವರ್ಷಗಳವರೆಗಿನ FD ಅವಧಿಗೆ, ಬಡ್ಡಿ ದರ(Interest Rates)ವನ್ನು 10 ಮೂಲ ಅಂಕಗಳಿಂದ 5.50 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. 2 ವರ್ಷಗಳ ಕೆಳಗಿನ ಅವಧಿಯ FD ಗಳ ಮೇಲಿನ ಬಡ್ಡಿ ದರಗಳು ಬದಲಾಗದೆ ಉಳಿಯುತ್ತವೆ. ಎಸ್‌ ಬಿಐ…

Read More

ನವದೆಹಲಿ: ಕಸ್ಟಮರ್ ಕೇರ್ ಸಪೋರ್ಟ್ (Customer Support) ಮೂಲಕ ಸೇವೆಗಳನ್ನು ನೀಡುವ ನೆಪದಲ್ಲಿ ಹಲವಾರು ಜನರಿಗೆ ವಂಚಿಸಿದ ಆರೋಪದ ಮೇಲೆ ಜಾರ್ಖಂಡ್‌ನಿಂದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಅಭಿಷೇಕ್ ಕುಮಾರ್ (22) ಮತ್ತು ಆತನ ಸಹಚರ ರಾಜು ಅನ್ಸಾರಿ (22) ಅವರನ್ನು ಜಾರ್ಖಂಡ್‌ನ ದುಮ್ಕಾದಲ್ಲಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಅಪರಾಧದ ಮಾಸ್ಟರ್ ಮೈಂಡ್ ಆಗಿರುವ ಅಭಿಷೇಕ್ ಕುಮಾರ್ ತನ್ನ ಸಂಪರ್ಕ ಸಂಖ್ಯೆಯನ್ನು ವಿವಿಧ ಕಸ್ಟಮರ್ ಕೇರ್ ಸೈಟ್‌ಗಳ ಹೆಸರಿನಲ್ಲಿ ಅಂತರ್ಜಾಲದಲ್ಲಿ (Internet) ಅಪ್‌ಲೋಡ್ ಮಾಡುತ್ತಿದ್ದ. ಆತ ಕಳೆದ ಆರು ತಿಂಗಳಿನಿಂದ ತನ್ನ ಗ್ಯಾಂಗ್ ನಡೆಸುತ್ತಿದ್ದು, ಆತನ ಸಹಚರ ಅನ್ಸಾರಿ ತನ್ನ ಸ್ಥಳೀಯ ಗ್ರಾಮವಾದ ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ಬ್ಯಾಂಕ್ ಖಾತೆಗಳನ್ನು ವ್ಯವಸ್ಥೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನೇಕ ಸಂತ್ರಸ್ತರಿಂದ ₹82 ಲಕ್ಷ ವಂಚಿಸಿದ ಎಂಟು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದರು. ಆರೋಪಿಗಳಿಂದ ₹4.78 ಲಕ್ಷ ವಂಚನೆಗೊಳಗಾದ ಸಂತ್ರಸ್ತೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿದೆ.…

Read More

ಇಂದೋರ್: ಮಧ್ಯಪ್ರದೇಶ(Madhya Pradesh)ದ ಇಂದೋರ್ ಜಿಲ್ಲೆಯಲ್ಲಿ 75 ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆಕೆಯ ಮೊಮ್ಮಗ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. 500 ಗ್ರಾಂ ತೂಕದ ಬೆಳ್ಳಿಯ ಉಂಗುರಗಳಿಗಾಗಿ ಆರೋಪಿಗಳು ವೃದ್ಧೆಯನ್ನು ಕೊಂದು ಆಕೆಯ ಎರಡೂ ಕಾಲುಗಳನ್ನು ಕತ್ತರಿಸಿ ಆಭರಣಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ಳಿ ಉಂಗುರ ನೀಡಲು ಅಜ್ಜಿಯ ನಕಾರ ಇಂದೋರ್‌(Indore)ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಚೋಟಿ ಖುದೈಲ್  ಗ್ರಾಮದಲ್ಲಿ ಈ ಘಟನೆ ನಡೆದಿದೆ. 24 ವರ್ಷದ ರಾಜೇಶ್ ಬಗ್ರಿ ಸಂಬಂಧಿಕರ ಮಗನ ಮದುವೆಗೆ ಆರ್ಥಿಕ ಸಹಾಯಕ್ಕಾಗಿ ತನ್ನ ಅಜ್ಜಿ ಜಮುನಾ ಅವರಿಂದ ಬೆಳ್ಳಿ ಉಂಗುರಗಳನ್ನು ಕೇಳಿದ್ದಾನೆ. ಆದರೆ ಅಜ್ಜಿ ತನ್ನ ಕಾಲುಗಳಲ್ಲಿ ಧರಿಸಿದ್ದ ಎರಡು ಉಂಗುರಗಳನ್ನು ಕೊಡಲು ನಿರಾಕಿಸಿದ್ದಳೆಂದು ಎಸ್‌ಪಿ (ಗ್ರಾಮೀಣ) ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ.ಸ್ನೇಹಿತನೊಂದಿಗೆ ಸೇರಿ ಅಜ್ಜಿ ಕೊಂದ ಮೊಮ್ಮಗ ಅಜ್ಜಿ(Grandmother)ತನ್ನ ಬಳಿಯಿದ್ದ ಉಂಗುರಗಳನ್ನು ಕೊಡಲು ನಿರಾಕರಿಸಿದ್ದರಿಂದ ಮೊಮ್ಮಗ ತನ್ನ 19 ವರ್ಷದ ಸ್ನೇಹಿತ ವಿಜಯ್ ಧೋಲಿಯೊಂದಿಗೆ ಸೇರಿ ಆಕೆಯನ್ನು…

Read More

ಚಂಡೀಗಢ : ಕಳೆದ ವರ್ಷ ಗಣರಾಜ್ಯೋತ್ಸವ ದಿನದಂದು (Republic Day)ದೆಹಲಿಯ ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಪಂಜಾಬಿ ನಟ ದೀಪ್ ಸಿಧು (Deep Sidhu) ಮಂಗಳವಾರ (ಫೆಬ್ರವರಿ 15) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ದೀಪ್ ಸಿಧು ಅವರ ಕಾರು ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಟ್ರಕ್ ಚಾಲಕ : ಬಂಧಿತ ಆರೋಪಿ ಟ್ರಕ್ ಚಾಲಕನನ್ನು ಹರಿಯಾಣದ ನಹು ನಿವಾಸಿ ಖಾಸಿಂ ಎಂದು ಗುರುತಿಸಲಾಗಿದೆ. ಬಂಧಿತನನ್ನು ಇಂದು (ಫೆಬ್ರವರಿ 18) ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಟ್ರಕ್‌ಗೆ ಎಸ್‌ಯುವಿ ಡಿಕ್ಕಿ : ಹರಿಯಾಣದ ಸೋನಿಪತ್ ಜಿಲ್ಲೆಯ ಖರ್ಖೋಡಾ ಬಳಿ ಕುಂಡ್ಲಿ-ಮನೇಸರ್-ಪಲ್ವಾಲ್ ಹೆದ್ದಾರಿಯಲ್ಲಿ ದೀಪ್ ಸಿಧು (Deep Sidhu) ಅವರ ಎಸ್‌ಯುವಿ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ದೀಪ್ ಸಿಧು ಸಾವನ್ನಪ್ಪಿದ್ದರು. ಅಪಘಾತದ ವೇಳೆ ದೀಪ್ ಜೊತೆಗಿದ್ದ ಭಾವಿ ಪತ್ನಿ : ಅಪಘಾತದ ವೇಳೆ ದೀಪ್ ಸಿಧು ಅವರ…

Read More

ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿ (Food) ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ ದೇಹ ದುರ್ಬಲವಾಗುತ್ತಿದೆ. ಇದರಿಂದಾಗಿ ಸ್ವಲ್ಪ ದೂರ ನಡೆದರೂ ಸುಸ್ತಾಗುವ ಅನುಭವವಾಗುತ್ತದೆ. ಅದೇ ರೀತಿ ನಾವು ನಮ್ಮ ಮನೆಯ ಮೆಟ್ಟಿಲುಗಳನ್ನು (Steps) ಏರಿದಾಗ ಏದುಸಿರು ಬಿಡುತ್ತೇವೆ ಮತ್ತು ನಮ್ಮ ಹೃದಯ ಬಡಿತವೂ ತುಂಬಾ ವೇಗವಾಗಿರುತ್ತದೆ. ನಿಮ್ಮ ದೇಹ ದುರ್ಬಲವಾಗಿದೆಯೇ? ಇದು ಅನೇಕ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಮೆಟ್ಟಿಲುಗಳನ್ನು ಹತ್ತುವಾಗ (Climbing stairs) ದಣಿವಾಗುವುದು ದೊಡ್ಡ ವಿಷಯವಲ್ಲ, ಆದರೆ ಇದು ತುಂಬಾ ಸೀಮಿತ ಪ್ರಮಾಣದಲ್ಲಿರಬೇಕು. ಸಮಸ್ಯೆ ಹೆಚ್ಚಿದ್ದರೆ, ಅದು ದುರ್ಬಲ ದೇಹದ ಲಕ್ಷಣವನ್ನು ತೋರಿಸುತ್ತದೆ. ಮೆಟ್ಟಿಲು ಹತ್ತುವಾಗ ಸಾಕಷ್ಟು ಸುಸ್ತು ಇರುತ್ತದೆ ಮೆಟ್ಟಿಲುಗಳನ್ನು ಹತ್ತುವಾಗ ಮತ್ತು ಇಳಿಯುವಾಗ ಸಹ, ನಮ್ಮ ದೇಹದ ಕ್ಯಾಲೊರಿ ಖರ್ಚಾಗುತ್ತದೆ. ಇದರಿಂದಾಗಿ ನಾವು ಹೆಚ್ಚಿನ ಶಕ್ತಿಯನ್ನು ಹಾಕಬೇಕಾಗುತ್ತದೆ. ಇದರಿಂದ ದಣಿವಾಗುತ್ತದೆ. ಆದರೆ ಎರಡು ಮಹಡಿಗಳನ್ನು ಹತ್ತಿದ ನಂತರ ನೀವು ಸುಸ್ತಾಗಲು ಪ್ರಾರಂಭಿಸಿದರೆ, ಅದು ಒಳ್ಳೆಯ ಲಕ್ಷಣವಲ್ಲ. ಇದು ನಿಮ್ಮ ದೇಹದ ದೌರ್ಬಲ್ಯವನ್ನು ತೋರಿಸುತ್ತದೆ. ತಲೆ ತಿರುಗುವ…

Read More

ವಿವಾದ (Hijab Controversy) ನಿಧಾನವಾಗಿ ಇಡೀ ದೇಶಕ್ಕೆ ಹರಡಿದೆ. ಹಿಜಾಬ್ ವಿವಾದದ ಪ್ರಕರಣ, ಕರ್ನಾಟಕ ಹೈಕೋರ್ಟ್‌ನಲ್ಲಿ (Karnataka High Court) ವಿಚಾರಣೆ ನಡೆಯುತ್ತಿದ್ದು, ತೀರ್ಪು ಬರಬೇಕಿದೆ. ಈ ಮಧ್ಯೆ, ಉತ್ತರ ಪ್ರದೇಶದ ಅಲಿಗಢದ ಡಿಎಸ್ ಕಾಲೇಜು (DS College) ಸಮವಸ್ತ್ರ ಧರಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೋಲೆ ಹೊರಡಿಸಿದೆ. ನಿಯಮಗಳನ್ನು ಉಲ್ಲಂಘಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಸಮವಸ್ತ್ರವಿಲ್ಲದೆ ಕಾಲೇಜಿಗಿಲ್ಲ ಪ್ರವೇಶ : ಅಲಿಘರ್‌ನ ಡಿಎಸ್ ಕಾಲೇಜಿನಲ್ಲಿ (DS College)ನಿಗದಿತ ಸಮವಸ್ತ್ರವಿಲ್ಲದೆ, ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ರಾಜ್ ಕುಮಾರ್ ವರ್ಮಾ, ವಿದ್ಯಾರ್ಥಿಗಳು ಮುಖ ಮುಚ್ಚಿಕೊಂಡು ಕ್ಯಾಂಪಸ್‌ಗೆ ಪ್ರವೇಶಿಸುವಂತಿಲ್ಲ ಎಂದಿದ್ದಾರೆ. ಕಾಲೇಜು ಆವರಣದೊಳಗೆ ಕೇಸರಿ ಶಾಲು ಅಥವಾ ಹಿಜಾಬ್ (Hijab) ಧರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕಾಲೇಜಿನ ಆದೇಶದ ಬಗ್ಗೆ ವಿವಾದ ಪ್ರಾರಂಭವಾಗಬಹುದು : ಡಿಎಸ್ ಕಾಲೇಜಿನ (DS College)ಈ ಆದೇಶದ ಮೇಲೆ ವಿವಾದ ಪ್ರಾರಂಭವಾಗಬಹುದು ಎಂದು ಹೇಳಲಾಗಿದೆ. ಯಾಕೆಂದರೆ ಯಾವುದೇ ವಿದ್ಯಾರ್ಥಿಗೆ…

Read More

ಪಾವಗಡ: ತಾಲೂಕು ವಾಲ್ಮೀಕಿ ಜಾಗೃತಿ ವೇದಿಕೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ನಿಡಗಲ್ ಸಂಸ್ಥಾನ ವತಿಯಿಂದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ, ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಲಾಯಿತು. ಇದೇ ವೇಳೆ ಉಪ ತಹಶೀಲ್ದಾರ್  ಸುಮತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರತಿಭಟನೆಯನ್ನುದ್ದೇಶಿ ಶ್ರೀವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಮಾತನಾಡಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನ ನಂದಾಪುರಿ ಸ್ವಾಮೀಜಿ ರವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತತ ಎಂಟು ದಿನಗಳಿಂದ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡುತ್ತಿರುವ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ರವರ ಹೋರಾಟಕ್ಕೆ  ರಾಜ್ಯ ಸರ್ಕಾರ ಸ್ಪಂದಿಸಿ ಶೀಘ್ರವಾಗಿ ಸರ್ಕಾರ ಪರಿಶಿಷ್ಟ ಪಂಗಡದ ಶೇಕಡ 3ರಿಂದ 7.5 ಪರಿಶಿಷ್ಟ ಜಾತಿಯ ಸಮುದಾಯಗಳಿಗೆ 15ರಿಂದ 18 ಪರ್ಸೆಂಟ್ ಹೆಚ್ಚಿಸುವಂತೆ ರಾಜನಹಳ್ಳಿ ಶ್ರೀಗಳ ಹೋರಾಟಕ್ಕೆ  ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಿವಮೊಗ್ಗ ಸಿದ್ಧಾರೂಢ ಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ,…

Read More