Author: admin

ತುಮಕೂರು: ಶನಿವಾರ ನಡೆದ ಪಾವಗಡದ ಬಸ್ ದುರಂತದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿ ಜಿಲ್ಲೆಯ ಜನತೆಯನ್ನು ಆತಂಕಕ್ಕೆ ದೂಡಿದ್ದು, ತುಮಕೂರು ಜಿಲ್ಲೆಯಲ್ಲಿ ಜವರಾಯನ ಅಟ್ಟಹಾಸಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಚಾಲಕನ ಅಜಾಗರೂಕತೆಯ ಚಾಲನೆಯಿಂದ ಪ್ರಾಣ ಕಳೆದುಕೊಂಡ ಅಮಾಯಕರು ಒಂದೆಡೆಯಾದರೆ, ಸಾಕಷ್ಟು ಕನಸುಗಳನ್ನು ಹೊತ್ತು ವಿದ್ಯಾಭ್ಯಾಸಕ್ಕಾಗಿ ಹಳ್ಳಿಯಿಂದ ಪಾವಗಡ ಪಟ್ಟಣಕ್ಕೆ ಆಗಮಿಸಿ ವಿದ್ಯಾಭ್ಯಾಸದಲ್ಲಿ ನಿರತರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಸಮೀಪವಿರುವ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವ ಆತಂಕ ಸೃಷ್ಟಿಯಾಗಿದೆ. ಈ ಅಪಘಾತದಲ್ಲಿ ಗಾಯಗೊಂಡ ಯುವಕ ರಾಜು ಎಂಬಾತ ತನ್ನ ಎಡಕೈ ಅನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ. ಇತ್ತೀಚೆಗೆ ಯುವಕ ರಾಜು ಗಾರೆ ಕೆಲಸ ನಿರ್ವಹಿಸುತ್ತಿದ್ದು, ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ತಾನು ಹೊತ್ತುಕೊಂಡಿದ್ದ. ಇತ್ತೀಚೆಗೆ ಆತ ತನ್ನ ತಂಗಿಯ ಮದುವೆಯನ್ನು ಸಹ ನೆರವೇರಿಸಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಸಾಲವನ್ನು ಮಾಡಿದ್ದಾನೆ. ಸಾಲ ತೀರಿಸುವ ಸಲುವಾಗಿ ಪ್ರತಿನಿತ್ಯ ಗರೆ ಕೆಲಸಕ್ಕಾಗಿ ಪಾವಗಡಕ್ಕೆ ಆಗಮಿಸುತ್ತಿದ್ದ ಇದರ ನಡುವೆಯೇ ಇಂದು ನಡೆದ ಬಸ್ ಅಪಘಾತದಲ್ಲಿ ರಾಜು ತನ್ನ ಎಡಗೈಯನ್ನು ಕಳೆದುಕೊಂಡು…

Read More

ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ: ಬೇಸಿಗೆಯಲ್ಲಿ ಅಡಿಕೆ ಮರಗಳ ತೇವಾಂಶವನ್ನು ಕಾಪಾಡಲು ವಿವಿಧ ರೀತಿಯ ಹಸಿರು ಗೊಬ್ಬರದ ಗಿಡಗಳನ್ನು ಬೆಳೆಸುವ ಪದ್ದತಿ, ಈಗಲೂ ತಾಲ್ಲೂಕಿನ ಹಲವು ಗ್ರಾಮಗಳ ರೈತರ ಅಡಿಕೆ ತೋಟಗಳಲ್ಲಿ ಜೀವಂತವಾಗಿದೆ. ಆರೇಳು ವರ್ಷಗಳಿಂದ ಜಿಲ್ಲೆಯಲ್ಲಿ ಇತರೆ ಯಾವುದೇ ಬೆಳೆಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಅಡಿಕೆ ಸಸಿಗಳ ನಾಟಿ‌ ನಡೆಯುತ್ತದೆ. ಅಡಿಕೆ ಬೆಳೆಗೆ ಇತರೆ ಬೆಳೆಗಳಿಗಿಂತ ಸಮೃದ್ಧವಾದ ನೀರು ಬೇಕು.ಬೇಸಿಗೆ ಕಾಲದಲ್ಲಿ ಅಡಿಕೆ ಬೆಳೆಗೆ ನೀರು ನೀಡುವುದು ಸುಲಭದ ಕೆಲಸವಲ್ಲ. ಬಹಳ ಹಿಂದಿನಿಂದಲೂ ಸ್ಥಳೀಯರು ಸರಳವಾದ ಉಪಯೋಗಕರ ಪರಿಹಾರ ಕ್ರಮಗಳನ್ನು ಹುಡುಕಿಕೊಂಡಿದ್ದಾರೆ. ರೈತರು ಅಡಿಕೆ ತೋಟದಲ್ಲಿ ಸಿರಿ ಧಾನ್ಯಗಳಾದ ಕೊರಲೆ  ಮತ್ತು ಹಾರಕ ಬೆಳೆದು ತೇವಾಂಶವನ್ನು  ತೋಟದ ಮಣ್ಣಿನಲ್ಲಿ ಉಳಿಸುವುದು.  ಅಳಿಲು ಮತ್ತು ಇಲಿಗಳು ಅಡಿಕೆ ಮರಗಳನ್ನು ಹತ್ತಿ ಅಡಿಕೆ ಪೀಚುಗಳನ್ನು ಕಡಿದು ನೆಲಕ್ಕೆ ಬೀಳಿಸುತ್ತಿದ್ದವು.ಇದನ್ನು ರೈತರು ಗಮನಿಸಿ ಈ ಪ್ರಾಣಿಗಳಿಗೆ ಆಹಾರ ಸಿಗುವಂತೆ ತೋಟದ ನೆಲದಲ್ಲಿ ಸಿರಿ ಧಾನ್ಯ ಬೆಳೆಗಳನ್ನು ಬೆಳೆಯುತ್ತಾರೆ. ರೈತರು ತಮ್ಮ ತೋಟಗಳಲ್ಲಿ ಅಲಸಂದೆ, ಹೆಸರು , ಸೆಣಬು, ಉದ್ದು…

Read More

ಕೊರಟಗೆರೆ: ವಿಶ್ವದಾದ್ಯಂತ,  ರಾಜ್ಯಾದ್ಯಂತ 4 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಪುನೀತ್ ರಾಜ್ ಕುಮಾರ್ ಅಭಿನಯದ  ಜೇಮ್ಸ್ ಚಿತ್ರವು ಶತದಿನೋತ್ಸವ ಆಚರಿಸಲೆಂದು ಕೊರಟಗೆರೆಯ ಡಾ. ರಾಜ್ ಕುಮಾರ್  ಅಭಿಮಾನಿ ಬಳಗ ಹಾರೈಸಿತು. ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿ, ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಜೇಮ್ಸ್ ಚಿತ್ರವು ಶತದಿನೋತ್ಸವ ಆಚರಿಸಲೆಂದು ಅಭಿಮಾನಿಗಳು ಶುಭ ಕೋರಿದರು . ಪ.ಪಂ. ಸದಸ್ಯ ಕೆ.ಆರ್. ಓಬಳರಾಜು  ಮಾತನಾಡಿ, ನಾವು ಚಿಕ್ಕಂದಿನಿಂದಲೂ ಡಾ.ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡಿ ಬೆಳೆದವರು. ಅವರಂತೆಯೇ ಅವರ ಮಕ್ಕಳು ಕೂಡ ಅದರಲ್ಲಿಯೂ ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳು ಎಂದರೆ , ಬಹುತೇಕ ಯುವ ಪೀಳಿಗೆಗೆ ಅಚ್ಚುಮೆಚ್ಚು. ಅವರು ಮಾಡಿರುವ ಸಾಧನೆಗಳು ಅವರು ನಮ್ಮನೆಲ್ಲ ಅಗಲಿದ ನಂತರ ನಮಗೆ ತಿಳಿಯುವಂತಾಯಿತು. ಅವರಿಗೆ ಅಭಿಮಾನಿಗಳು ಇಡೀ ದೇಶ ಸೇರಿದಂತೆ, ಹೊರ ದೇಶಗಳಲ್ಲಿ ಕೂಡ ಅಪಾರವಾದ ಅಭಿಮಾನಿಗಳಿದ್ದಾರೆ ಎಂದು ತಿಳಿಸಿದರು . ತಾಲ್ಲೂಕು ಬಿಜೆಪಿ ಘಟಕದ…

Read More

ತುಮಕೂರು: ಜಿಲ್ಲೆಯ, ತುರುವೇಕೆರೆ ಪಟ್ಟಣದಲ್ಲಿ,ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ , ಆಟೋ ನಿಲ್ದಾಣದಲ್ಲಿ, ವೀರವನಿತೆ ಒನಕೆ ಓಬವ್ವ,  ಹಾಗೂ  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮ ದಿನಾಚರಣೆಯನ್ನು  ಆಚರಿಸಲಾಯಿತು. ಈ ಕಾರ್ಯಕ್ರಮವನ್ನುದ್ದೇಶಿಸಿ ತುರುವೇಕೆರೆ ತಾಲ್ಲೂಕು ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ,  ಓಬವ್ವ ದಲಿತ ಕುಟುಂಬದಲ್ಲಿ ಹುಟ್ಟಿದರು.  ರಾಜ ಪರಂಪರೆ , ವೀರತ್ವ ಹೊಂದಿದ್ದ ಮಹಿಳೆ  ದಿಟ್ಟ ತನದಿಂದ ಹೋರಾಡಿ, ತನ್ನ ಪ್ರಾಣವನ್ನು ಅರ್ಪಿಸಿದ ಮಹಿಳೆ. ಇವರ ಜಯಂತಿಯನ್ನು ರಾಜಕಾರಣಿಗಳು ಆಚರಣೆಗೆ ತರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಒಬ್ಬ ದಲಿತ ಮಹಿಳೆ ಎಂಬ ಮನೋಭಾವದಿಂದ ಓಬವ್ವ ಅವರು ಜಯಂತಿ ಆಚರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೇವಲ ದಲಿತರು ಮಾತ್ರವೇ ಓಬವ್ವಳ ಜನ್ಮ ದಿನಾಚರಣೆ ಆಚರಿಸುವಂತಾಗಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಸಮಾರಂಭದಲ್ಲಿ ಅಟೋ ಚಾಲಕರ ಸಂಘದ ಅಧ್ಯಕ್ಷ,ಗಂಗಾಧರಗೌಡ, ಜಯ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಮಾರುತಿ, ತಾಲ್ಲೂಕು ಸವಿತಾ ಸಮಾಜದ ಸದಸ್ಯರುಗಳು…

Read More

ಪಾವಗಡ: ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಭೀಕರ ಶನಿವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಖಾಸಗಿ ಬಸ್ಸೊಂದು ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ ನಾಲ್ಕು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಪಾವಗಡಕ್ಕೆ 5 ಕಿಲೋಮೀಟರ್ ಸಮೀಪವಿರುವ ಪಳವಳ್ಳಿ ಕಟ್ಟೆ ಬಳಿ ವೈ.ಎನ್ ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ಬರುತ್ತಿದ ಎಸ್ ವಿ ಟಿ ಎಂಬ ಖಾಸಗಿ ಬಸ್ಸು ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಉರುಳಿಬಿದ್ದು ನಾಲ್ಕು ಜನ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು 25 ಅಧಿಕ ಮಂದಿಗೆ ತೀವ್ರ ತರನಾಗಿ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹಾಗೂ ತುಮಕೂರಿನ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ವೈ.ಎನ್. ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ಸುಮಾರು 27 ಕಿಲೋಮೀಟರ್ ದೂರವಿದ್ದು ಎಂದಿನಂತೆ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಖಾಸಗಿ ಬಸ್ಸು ಚಾಲಕನ ಅಜಾಗರೂಕತೆ ಹಾಗೂ ಅತಿವೇಗದ ಪರಿಣಾಮ ಉರುಳಿಬಿದ್ದು ಈ ದುರ್ಘಟನೆ ಸಂಭವಿಸಿದೆ ಇನ್ನು ಪಾವಗಡ ವೈ.ಎನ್. ಹೊಸಕೋಟೆ ರಸ್ತೆಯಲ್ಲಿ ಅಂಕು ಡೊಂಕು ರಸ್ತೆಯಿದ್ದು ಬಸ್ ಚಲಾಯಿಸುವ ವೇಳೆ…

Read More

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಪಾವಗಡ ತಾಲೂಕಿನ ಪಳವಳಿ ಕಟ್ಟೆ ಗ್ರಾಮದ ಬಳಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸದ್ಯದ ಮಾಹಿತಿಗಳ ಪ್ರಕಾರ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ತಿರುವಿನ ಬಳಿ ಈ ಭೀಕರ ರಸ್ತೆ ಅಪಘಾತವಾಗಿದ್ದು, ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಸರಗೂರು: ಜೇಮ್ಸ್ ಚಿತ್ರ ಬಿಡುಗಡೆ ಹಾಗೂ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಆಚರಣೆಯ ವೇಳೆ ಅಭಿಮಾನಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ. ಆಕಾಶ್ ಎಂಬ ಅಪ್ಪು ಅಭಿಮಾನಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಜೇಮ್ಸ್ ಚಿತ್ರ ಹಾಗೂ ಪುನೀತ್ ಹುಟ್ಟು ಹಬ್ಬದ ಅಚರಿಸಿಕೊಂಡು ಗೆಳೆಯರ ಜೊತೆಯಲ್ಲಿ ಕುಣಿದು ಆಕಾಶ್ ಮನೆಗೆ ಬಂದಿದ್ದ. ತೀವ್ರ ಸುಸ್ತಾಗಿದ್ದ ಆತನ ತಕ್ಷಣವೇ ಬಂದು ನೀರು ಕುಡಿದಿದ್ದು, ಈ ವೇಳೆ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ಹೇಳಲಾಗಿದೆ. ಬೆಳೆದು ನಿಂತ ಮಗ ಏಕಾಏಕಿ ಮೃತಪಟ್ಟಿರುವುದರಿಂದ ಆಕಾಶ್ ಕುಟುಂಬಸ್ಥರು ತೀವ್ರವಾಗಿ ಆಘಾತಕ್ಕೊಳಗಾಗಿದ್ದಾರೆ. ಸಣ್ಣ ವಯಸ್ಸಿನ ಯುವಕರೇ ಇತ್ತೀಚೆಗೆ ಏಕಾಏಕಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ತೀವ್ರ ಆತಂಕವನ್ನುಂಟು ಮಾಡಿದೆ. ಇನ್ನೂ ಆಕಾಶ್ ಮೃತದೇಹವನ್ನು ಸ್ವಗ್ರಾಮದಲ್ಲೇ ಸಂಸ್ಕಾರ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಸ್ವಗ್ರಾಮದವರು ಹಾಗೂ ಅಪ್ಪು ಅಭಿಮಾನಿಗಳು ಭಾಗಿಯಾಗಿದ್ದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಮಧುಗಿರಿ: ಕಸಬಾ ಹೋಬಳಿ ಬಸವನಹಳ್ಳಿ ಸಮೀಪ ಈರಣ್ಣನ ಬೆಟ್ಟದ ಮೇಲ್ಭಾಗದ ಜಾಲಗಿರಿ ಮರಕ್ಕೆ ಅಪರಿಚಿತ ವ್ಯಕ್ತಿ ನೇಣುಬಿಗಿದುಕೊಂಡು ಮೃತಪಟ್ಟಿರುತ್ತಾನೆ. ಸ್ಥಳಕ್ಕೆ ಸಿಪಿಐ ಸರ್ದಾರ್ ಪಿಎಸ್ ಐ ತಾರಾ ಸಿಂಗ್ ಭೇಟಿ ನೀಡಿದರು ಸ್ಥಳ ಪರಿಶೀಲಿಸಿ ದೂರನ್ನು ದಾಖಲಿಸಿಕೊಂಡಿದ್ದಾರೆ. ಮಧುಗಿರಿ ಪೊಲೀಸ್ ಪ್ರಫೆಷನರಿ ಪಿಎಸ್ ಐ ಧಮಾಜಿ, ಪೊಲೀಸ್ ಸಿಬ್ಬಂದಿ ಕಾಂತರಾಜು, ಕಲ್ಲೇಶ್, ಶಿವಣ್ಣ, ಈರಣ್ಣಬೆಟ್ಟದಿಂದ  ಮರಕ್ಕೆ ನೇಣು ಬಿಗಿದುಕೊಂಡಿದ ವ್ಯಕ್ತಿಯ ಮೃತದೇಹವನ್ನು ಬೆಟ್ಟದಿಂದ ಕೆಳಗೆ ಇಳಿಸಿದರು. ವರದಿ: ಅಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಮಧುಗಿರಿ : ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ವಿದ್ಮಹಿ ಪ್ರೊಡಕ್ಷನ್ ಬಿಡುಗಡೆ ಮಾಡಿದ ಜೇಮ್ಸ್ ಚಲನ ಚಿತ್ರ ವೀಕ್ಷಣೆ ಅಭಿಮಾನಿಗಳು ಮುಗಿಬಿದ್ದರು. ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಬಾಲಾಜಿ ಚಲನಚಿತ್ರ ಮಂದಿರದಲ್ಲಿ ವಿದ್ಮಯಿ ಪ್ರೋಡಕ್ಷನ್   ರವರ ಜೆಮ್ಸ್ ಚಲನ ಚಿತ್ರವು ಪ್ರದರ್ಶನ ಆರಂಭಗೊಂಡಿದ್ದು  ಅಪ್ಪು ಅಭಿಮಾನಿಗಳು ಅಪ್ಪು ರವರ ಭಾವಚಿತ್ರವನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಬ್ಯಾಂಡ್ ಸೆಟ್ ಬಾರಿಸಿ ಕುಣಿಯುತ್ತಾ , ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಅಪ್ಪು ರವರ ಜನಮ ದಿನವನ್ನು ಆಚರಿಸಿದರು. ತಾಲ್ಲೂಕಿನ ವಿವಿಧ ಕಡೆ ಜೇಮ್ಸ್  ಚಲನ ಚಿತ್ರವು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಿದ್ದಗೊಳ್ಳುತ್ತಿದ್ದು ಅಪ್ಪು ಅಭಿಮಾನಿಗಳು ದೊಡ್ಡ ದೊಡ್ಡ ಕಟ್ ಓಟ್ ಗಳಿಗೆ ಬೃಹತ್ ಹೂವಿನ ಹಾರ, ಹಾಲಿನ ಅಭಿಷೇಕ ಮಾಡುವುದರೊಂದಿಗೆ ತಮ್ಮ ನೆಚ್ಚಿನ ಚಿತ್ರ ನಟ ಅಪ್ಪುರವರ ಚಲನ ಚಿತ್ರಕ್ಕೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ. ಯೋಧನ ಲುಕ್ ನಲ್ಲಿರುವ ಪವರ್ ಸ್ಟಾರ್ ಪುನೀತ್ ರವರ  ಕಟ್‌ಓಟ್ ಗಳು…

Read More

ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ದೊಡ್ಡೇರಿ ಗ್ರಾಮದಲ್ಲಿ ಶ್ರೀ ಕೋಡಿ ಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಬಹಳ ಅದ್ದೂರಿಯಿಂದ ನೇರವೇರಿತು. ಭಕ್ತಾದಿಗಳ ಮಂಡೆ ಕಾಯ೯ಕ್ರಮ, ವೀರಗಾರರ ಭಾನ ಸುಲಿಗೆ ಸೇವೆ, ರುದ್ರಾಭಿಷೇಕ ಶಯನೋತ್ಸವ , ಶ್ರೀ ರಾಮದೇವರು ಶ್ರೀ ಕೋಡಿ ಲಿಂಗೇಶ್ವರ ಸ್ವಾಮಿ,  ಶ್ರೀ ಪಾವ೯ತಿ ಅಮ್ಮನವರ ಮೆರವಣಿಗೆ ಉತ್ಸವ  ಊರಿನ ಗ್ರಾಮಸ್ಥರಿಂದ ಯಕ್ಷಗಾನ, ನಾಟಕ  ಕಾಯ೯ಕ್ರಮಗಳು ಜರುಗಿದವು. ಗ್ರಾಮದ ಯಜಮಾನರು ,  ದೊಡ್ಡೇರಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾದಿಗಳು ದೊಡ್ಡೇರಿ ನಾಡಕಛೇರಿ ಗ್ರಾಮಪಂಚಾಯಿತಿ ಅಡಳಿತ ವಗ೯ದವರು ತಹಶೀಲ್ದಾರ್ ಮುಜರಾಯಿ ಇಲಾಖೆಅಧಿಕಾರಿಗಳು ಭಾಗವಹಿಸಿದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More