Subscribe to Updates
Get the latest creative news from FooBar about art, design and business.
- ಶಿವಾನಂದ ತಗಡೂರು ಅವರಿಗೆ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
- ದಲಿತ ಯುವಕ ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ವಿವಿಧ ಸಂಘಟನೆಗಳಿಂದ ಮನವಿ
- ಎನ್ ಎಂಎಂಎಸ್ ಆ್ಯಪ್ ಅಪ್ ಡೇಟ್ ಕಿರಿಕಿರಿ: ಬೀದರ್ ನಲ್ಲಿ ಹೈರಾಣಾದ ಕೂಲಿ ಕಾರ್ಮಿಕರು
- ಬೀದರ್: ಹೊಲದಲ್ಲಿ 1.5 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿಯ ಬಂಧನ
- ಬೀದರ್: ನಿವೃತ್ತ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತರ ದಾಳಿ
- ರಾಜ್ಯದಲ್ಲಿ ಬರ ಘೋಷಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ: ಮೂರನೇ ಹಂತದಲ್ಲಿ 53 ಹೊಸ ತಾಲೂಕುಗಳು ಸೇರ್ಪಡೆ!
- ಹೊಳೆನರಸೀಪುರ: ಕುಪ್ಪೆ ಗ್ರಾಮದಲ್ಲಿ ಕತ್ತಲೆಯಲ್ಲಿ ಮುಳುಗಿದ ಪ್ರಮುಖ ವೃತ್ತಗಳು; 35 ದಿನ ಕಳೆದರೂ ಕಣ್ಣುಮುಚ್ಚಿ ಕುಳಿತ ಪಿಡಿಒಗಳು!
- ಹೊಳೆನರಸೀಪುರ: ತಾತನಹಳ್ಳಿ ಡೈರಿ ಅವ್ಯವಸ್ಥೆ – ಸಾವಿರಾರು ಲೀಟರ್ ಹಾಲು ಹಾಳು, ರೈತರಿಂದ ಆಕ್ರೋಶಭರಿತ ಪ್ರತಿಭಟನೆ
Author: admin
ವಿಜಯಪುರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಖಾಸಿಂಸಾಬ್ ಹುಸೇನಸಾಬ್ ಬಿಜಾಪುರ(88) ನಿಧನರಾಗಿದ್ದಾರೆ. ಮೆದುಳಿಗೆ ಪಾರ್ಶ್ವವಾಯುವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾಹು ಭಾನುವಾರ ತಡರಾತ್ರಿ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಾನಪದ ಸಾಹಿತ್ಯದಲ್ಲಿ ಕೃಷಿ ಮಾಡಿ ಕಾಹು ಎಂದೇ ಹೆಸರುವಾಸಿಯಾಗಿದ್ದರು. 1935 ಫೆಬ್ರವರಿ 4 ರಂದ ಜನಿಸಿದ್ದ ಕಾಹು 2003 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಮೃತರು ಇಬ್ಬರು ಪುತ್ರರು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಕಾಹು ಬಿಜಾಪುರ ಅಗಲಿಕೆಗೆ ಜಾನಪದ ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ವಿಕ್ರಾಂತ್ ರೋಣ’ ಚಿತ್ರದ ಮೂಲಕ ಕಿಚ್ಚ ಸುದೀಪ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಅನುಪ್ ಭಂಡಾರಿ ನಿರ್ದೇಶನದ ಈ ಚಿತ್ರ ಜುಲೈ 28 ರಂದು ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು. ಈ ಚಿತ್ರ ಸುದೀಪ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಯಿತು. ಇದಲ್ಲದೆ, ಬಿಡುಗಡೆಯಾದ ಪ್ರತಿಯೊಂದು ಭಾಷೆಯಲ್ಲೂ ಭಾರೀ ಕಲೆಕ್ಷನ್ ಗಳಿಸುವ ಮೂಲಕ ಡಬಲ್ ಬ್ಲಾಕ್ ಬಸ್ಟರ್ ಆಯಿತು. ‘ಕೆಜಿಎಫ್’ ನಂತರ ‘ವಿಕ್ರಾಂತ್ ರೋಣ’ ಮೊದಲ ವಾರಾಂತ್ಯದಲ್ಲಿಯೇ ಬ್ರೇಕ್ ಈವೆನ್ ಮಾಡಿ ಆ ಮಟ್ಟದಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ಕನ್ನಡ ಚಿತ್ರವಾಯಿತು. ಇತ್ತೀಚೆಗಷ್ಟೇ ಈ ಸಿನಿಮಾದ ಕನ್ನಡ ಅವತರಣಿಕೆ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಈ ಚಿತ್ರ ಒಟಿಟಿಯಲ್ಲೂ ದಾಖಲೆ ಸೃಷ್ಟಿಸಲಿದೆ. ಚಿತ್ರದ ಕನ್ನಡ ಆವೃತ್ತಿಯು ಶುಕ್ರವಾರದಿಂದ ಪ್ರಮುಖ OTT ಚಾನೆಲ್ ‘G-5’ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಚಿತ್ರವು ಕೇವಲ 24 ಗಂಟೆಗಳಲ್ಲಿ 500 ಮಿಲಿಯನ್ ವೀಕ್ಷಣೆಯನ್ನು ಗಳಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ…
ಅಹಮದಾಬಾದ್ ಸೆಪ್ಟೆಂಬರ್ 3: ಗುಜರಾತ್ ಭೇಟಿಯ ಅಂತಿಮ ದಿನವಾದ ಇಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೇಸರಿ ಪಕ್ಷವನ್ನು ತೊರೆಯದೆ ‘ಒಳಗಿನಿಂದ’ ತಮ್ಮ ಪಕ್ಷಕ್ಕಾಗಿ ಕೆಲಸ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಬಿಜೆಪಿಯ ಭದ್ರಕೋಟೆಯಾದ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಹಾಗೂ ಎಎಪಿ ಭರ್ಜರಿ ಸಿದ್ಧತೆ ನಡೆದಿವೆ. ಅದರಲ್ಲೂ ಆಡಳಿತ ಪಕ್ಷಕ್ಕೆ ಆಮ್ ಆದ್ಮಿ ಪಕ್ಷ ನೇರ ಪೈಪೋಟಿ ನಡೆಸಲಿದೆ. ಈಗಾಗಲೇ ಎಎಪಿಯ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುಜರಾತ್‌ನಲ್ಲಿ ಮತಭೇಟೆಯನ್ನು ಆರಂಭಿಸಿದ್ದಾರೆ. ಹಲವಾರು ಭರವಸೆಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಗುಜರಾತ್ ಭೇಟಿಯ ಎರಡನೇ ದಿನವಾದ ಇಂದು ಅರವಿಂದ್ ಕೇಜ್ರಿವಾಲ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಬಿಜೆಪಿಯಿಂದ “ಹಣ” ಪಡೆಯುವುದನ್ನು ಮುಂದುವರಿಸಬೇಕು. ಆದರೆ ಆಪ್‌ಗಾಗಿ “ಒಳಗಿನಿಂದ” ಕೆಲಸ ಮಾಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ಜೊತೆಗೆ ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ…
ಕಳೆದ ಕೆಲ ವಾರಗಳಿಂದ ಪಾಕಿಸ್ತಾನದಲ್ಲಿ ಪ್ರವಾಹಕ್ಕೆ ಸಿಲುಕಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಪರಿಸ್ಥಿತಿ ಈಗಾಗಲೇ ಕೆಟ್ಟದಾಗಿದೆ. ಜೊತೆಗೆ ಪ್ರವಾಹದ ವಿನಾಶವು ಇಸ್ಲಾಮಾಬಾದ್ ಅನ್ನು ಜರ್ಜರಿತಗೊಳಿಸಿದೆ. ಒಂದು ಅಂದಾಜಿನ ಪ್ರಕಾರ, ತೀವ್ರ ಪ್ರವಾಹದಿಂದಾಗಿ ದೇಶವು ಅಂದಾಜು ಹತ್ತು ಶತಕೋಟಿ ಡಾಲರ್ ನಷ್ಟವನ್ನು ಅನುಭವಿಸಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ESA) ಉಪಗ್ರಹ ಚಿತ್ರಗಳ ಪ್ರಕಾರ, ಪಾಕಿಸ್ತಾನದ ಮೂರನೇ ಒಂದು ಭಾಗದಷ್ಟು ಭೂಮಿ ತೀವ್ರ ಪ್ರವಾಹದ ಹಿಡಿತದಲ್ಲಿದೆ. ಇದು ಪಾಕಿಸ್ತಾನದ ಇತಿಹಾಸದಲ್ಲಿ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಎಂದು ಹೇಳಲಾಗಿದೆ. ಸಿಎನ್ಎನ್ ಪ್ರಕಾರ, ಪಾಕಿಸ್ತಾನದಲ್ಲಿ ತೀವ್ರ ಪ್ರವಾಹದಿಂದಾಗಿ ಇನ್ನೂ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿ ಆಹಾರದ ಕೊರತೆ ಎದುರಾಗಿದೆ. ಸಾವಿರಾರು ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಪ್ರವಾಹದಿಂದಾಗಿ ಜನರು ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತಿದೆ. ಒಟ್ಟಿನಲ್ಲಿ ಪಾಕಿಸ್ತಾನ ಸದ್ಯಕ್ಕೆ ಭೀಕರ ಪ್ರಕೃತಿ ವಿಕೋಪವನ್ನು ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ದೊಡ್ಡ…
ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರು ‘ಸನಾತನ ಪಂಚಾಂಗ – 2023′ ನ್ನು ಆ.30ರಂದು ಲೋಕಾರ್ಪಣೆ ಮಾಡಿದರು. ಪಂಚಾಂಗದ ರಚನೆಯ ಬಗ್ಗೆ ಹೆಗ್ಗಡೆಯವರು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಉದ್ಯಮಿಗಳು ಹಾಗೂ ಹಿಂದೂ ಜಾಗರಣ ವೇದಿಕೆಯ ಪದ್ಮನಾಭ ಶೆಟ್ಟಿಗಾರ್, ವಕೀಲರಾದ ಉದಯಕುಮಾರ್ ಬಂದಾರು, ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕರು ಹಾಗೂ ಒಕ್ಕಲಿಗ ಯಾನೆ ಗೌಡರ ಯುವ ವೇದಿಕೆ ನಿಡ್ಲೆ ಗ್ರಾಮದ ಅಧ್ಯಕ್ಷರಾದ ಗಿರೀಶ್ ಗೌಡ ನಿಡ್ಲೆ, ಸನಾತನ ಸಂಸ್ಥೆಯ ಆನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಎಂ ಗೌಡ ಮತ್ತಿತರರು ಉಪಸ್ಥಿತರಿದ್ದರು. ಸನಾತನ ಪಂಚಾಂಗವು ಕಳೆದ 17 ವರ್ಷಗಳಿಂದ 7 ಭಾಷೆಗಳಲ್ಲಿ ಲಕ್ಷಾಂತರ ಪ್ರತಿಗಳಲ್ಲಿ ಮುದ್ರಣವಾಗುತ್ತಿದೆ. ಈ ಪಂಚಾಂಗದಲ್ಲಿ ಪ್ರತಿ ತಿಂಗಳುಗಳಲ್ಲಿ ಬರುವ ಹಬ್ಬ-ಹರಿದಿನಗಳನ್ನು ಧರ್ಮಶಾಸ್ತ್ರದಂತೆ ಹೇಗೆ ಆಚರಿಸಬೇಕು…
ಬೆಂಗಳೂರು: ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ದಾಖಲಾದ ಪೋಕ್ಸೋ ಕೇಸ್ ನಲ್ಲಿ ಬಂಧಿಸಲಾಗಿದೆ. ಈ ಕಾರಣದಿಂದಾಗಿ ಅವರನ್ನು ಅನಾಥಸೇವಾಶ್ರಮದ ವಿಶ್ವಸ್ಥ ಸಮಿತಿಯ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮ ವಿಶ್ವಸ್ತ ಸಮಿತಿಯ ಗೌರವ ಕಾರ್ಯದರ್ಶಿ ಪ್ರೊ.ಕೆ.ಇ ರಾಧಾಕೃಷ್ಣ ಅವರು, ಕ್ರಿಮಿನಲ್ ಆಪಾದನೆಯನ್ನು ಎದುರಿಸುತ್ತಿರುವ ಶ್ರೀ ಶಿವಮೂರ್ತಿ ಮುರುಘಾಶರಣರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನಾಥಸೇವಾಶ್ರಮದ ಅಧ್ಯಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನದಿಂದ ವಿಮುಕ್ತಿಗೊಳಿಸಲಾಗಿದೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಆಪ್ತ ಹಾಗೂ ಪೊಲೀಸರ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನೆಹರು ನಗರದಲ್ಲಿ ಬೆಳಕಿಗೆ ಬಂದಿದೆ. 28 ವರ್ಷದ ಸಾವಿಯೋ ಪಿಳೈ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಕ್ಯಾಂಪ್ ಠಾಣೆಯ ಪಿಎಸ್‌ಐ, ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಡೆತ್ ನೋಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಕ್ಯಾಂಪ್ ಠಾಣಾ ವ್ಯಾಪ್ತಿಯ ಮಹಿಳೆಯೋರ್ವಳ ಜೊತೆ ಸಾವಿಯೋ ಅಕ್ರಮ ಸಂಬಂಧ ಹೊಂದಿದ್ದ. ಆದ್ರೆ, ಇಬ್ಬರ ಮಧ್ಯೆ ಮನಸ್ತಾಪವಾಗಿ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಈ ವೇಳೆ ಬಿಜೆಪಿ ಮುಖಂಡ ಪೃಥ್ವಿ ಸಿಂಗ್, ಕ್ಯಾಂಪ್ ಪಿಎಸ್‌ಐ ಸೇರಿ 1.50 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ. ಪೃಥ್ವಿ ಸಿಂಗ್ ರಮೇಶ ಜಾರಕಿಹೊಳಿ ಆಪ್ತ, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. 1.50 ಲಕ್ಷ ಹಣ ಪಡೆದಿದ್ದಲ್ಲೇ ಇನ್ನು ಹೆಚ್ಚಿನ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಡೆತ್‌ನೋಟ್ ಬರೆದಿಟ್ಟು…
ಚೆನ್ನೈ: ಚೆನ್ನೈನಲ್ಲಿ ಯುವತಿಯೊಬ್ಬಳು ಸಾಂಪ್ರದಾಯಿಕ ತಮಿಳು ಬ್ರಾಹ್ಮಣ ಸಂಪ್ರದಾಯಗಳ ಪ್ರಕಾರ ಬಾಂಗ್ಲಾದೇಶದ ಮಹಿಳೆಯನ್ನು ವಿವಾಹವಾಗಿದ್ದಾರೆ. ವರದಿಯ ಪ್ರಕಾರ, ಕೆನಡಾದ ಕ್ಯಾಲ್‌ಗರಿಯಲ್ಲಿ ನೆಲೆಸಿರುವ ತಮಿಳು ಬ್ರಾಹ್ಮಣ ಪೋಷಕರ ಮಗಳು ಸುಭಿಕ್ಷಾ ಸುಬ್ರಮಣಿ, ಬಾಂಗ್ಲಾದೇಶದ ಹಿಂದೂ ಕುಟುಂಬದಿಂದ ಬಂದ ಟೀನಾ ಅವರೊಂದಿಗೆ ವಿವಾಹವಾಗಿದ್ದಾರೆ. ಆರು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿ ಇದ್ದರು ವರದಿ ತಿಳಿಸಿದೆ. ಮದುವೆಗೆ ಕುಟುಂಬಸ್ಥರ ವಿರೋಧವನ್ನು ಸಹ ಎದುರಿಸಿದ್ದರು. ಆದ್ರೆ, ಇದೀಗ ಕುಟುಂಬಗಳ ಒಪ್ಪಿಗೆ ಮೇರೆಗೆ ತಮಿಳು ಬ್ರಾಹ್ಮಣ ಶೈಲಿಯಲ್ಲಿ ವಿವಾಹವಾದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ : ಇತ್ತೀಚಿನ ಅತಿವೃಷ್ಟಿಯಿಂದ ಬೆಳೆಹಾನಿಯಾಗಿರುವ ಕುರಿತು ಜಂಟಿ ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ಪರಿಹಾರ ಪೊರ್ಟಲ್ ನಲ್ಲಿ ಅಪ್ ಲೋಡ್ ಮಾಡಿ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಸಚಿವರಾದ ಬಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸುವರ್ಣ ವಿಧಾನಸೌಧದಲ್ಲಿ ಶನಿವಾರ(ಸೆ.3) ನಡೆದ ಕೃಷಿ ಇಲಾಖೆಯ ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿಬ್ಬಂದಿ ಕೊರತೆ ಮತ್ತಿತರ ನೆಪ ಹೇಳಿ ಬೆಳೆಹಾನಿ ಪರಿಹಾರ ನೀಡುವ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಈಗಾಗಲೇ ನಿರ್ದೇಶನ ನೀಡಿರುವಂತೆ ಎಲ್ಲ ಜಿಲ್ಲೆಗಳಲ್ಲಿ ಹೆಸರು, ಉದ್ದು ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ನೋಂದಣ ಜತೆ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದರು. ರೈತರ ಮೂಲಕ ಬೆಳೆ ಸಮೀಕ್ಷೆಗೆ ನಡೆಸಲು ಸೂಚನೆ: ಇಲಾಖೆ ಅಭಿವೃದ್ಧಿಪಡಿಸಿರುವ ಆಪ್ ಮೂಲಕ ರೈತರೇ ಸ್ವತಃ ಬೆಳೆಸಮೀಕ್ಷೆ ಮಾಡಲು ಪ್ರೋತ್ಸಾಹ ನೀಡಬೇಕು. ಇದಕ್ಕಾಗಿ ಸೂಕ್ತ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಸಚಿವ…
ಬೆಂಗಳೂರು : ರಾಜ್ಯದಲ್ಲಿ ನೂತನವಾಗಿ 4,244 ಅಂಗನವಾಡಿ ಕೇಂದ್ರಗಳ ಆರಂಭ ಮಾಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಗರ ಪ್ರದೇಶದಲ್ಲಿ 2,589 ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ಇನ್ನು ಕಡಿಮೆ ಆದಾಯದ ಜನಸಂಖ್ಯೆ ಹೆಚ್ಚಾಗಿ ವಾಸಸ್ತಿರುವ ಪ್ರದೇಶದಲ್ಲಿ, ವಲಸೆ ಕಾರ್ಮಿಕರಿರುವ ಸ್ಥಳದಲ್ಲಿ 1,655 ಕೇಂದ್ರಗಳನ್ನ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 1,655 ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ರಾಜ್ಯ ಸರ್ಕಾರ ಅಂಗನವಾಡಿಗಳಿಗೆ 268.98 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದು, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz