Author: admin

ರಾಜ್ಯ ಗುಪ್ತಚರ ವಿಭಾಗ ಕೆಲ ದಿನಗಳಿಂದ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ. ಈ ಹಿಂದೆ ತಮ್ಮ ಕಚೇರಿಗೆ ನೀಡಲಾಗಿದ್ದ ರಕ್ಷಣೆಯನ್ನೂ ಕಡಿತಗೊಳಿಸಲಾಗಿದ್ದು, ವೈ-ಕೆಟಗರಿ ರಕ್ಷಣೆಯನ್ನು ಎಕ್ಸ್ ಕೆಟಗರಿಗೆ ಬದಲಾಯಿಸಲಾಗಿದೆ ಎಂದು ಹೇಳಿದರು. ತಮಿಳುನಾಡು ಪೊಲೀಸರ ಮೇಲೆ ಗುಪ್ತಚರ ಇಲಾಖೆ ಪ್ರಾಬಲ್ಯ ಸಾಸುತ್ತಿದೆ. ಗುಪ್ತಚರ ವಿಭಾಗದ ಎಡಿಜಿಪಿ ಪೊಲೀಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಫೋನ್ ಕದ್ದಾಲಿಕೆಯನ್ನು ಖಂಡಿಸುತ್ತೇನೆ. ಎಫ್‍ಐಆರ್ ದಾಖಲಿಸುವ ಮುನ್ನವೇ ಪೊಲೀಸರು ಒಂದು ತೀರ್ಮಾನಕ್ಕೆ ಬಂದಿರುವುದು ಇದೇ ಮೊದಲು ಎಂದು ದೂರಿದ್ದಾರೆ. ನಾವು ಏನೇ ಹೇಳಿದರೂ ಅದು ಸಾರ್ವಜನಿಕ ವಲಯದಲ್ಲಿ ಬರುತ್ತದೆ. ತಮಿಳುನಾಡು ಗುಪ್ತಚರ ತಂಡ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದೆ. ಇದನ್ನು ಸಾಬೀತುಪಡಿಸಲು ನಾನು ವಾಟ್ಸಪ್ ಚಾಟ್‍ಗಳ ಸ್ಕ್ರೀನ್‍ ಶಾಟ್‍ ಗಳನ್ನು ಸಹ ಹಂಚಿಕೊಂಡಿದ್ದೇನೆ. ಶೀಘ್ರವೇ ಔಪಚಾರಿಕವಾಗಿ ದೂರು ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ತುಮಕೂರು: ಸರ್ಕಾರ 1996ರ ಆದೇಶದಂತೆ ಕಾರ್ಮಿಕರಿಗೆ ರೂಪಿಸಬೇಕು ಎಂದು ರಾಜ್ಯ ಕಟ್ಟಡ ಮತ್ತು ಇತರೆ ‌ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಉಮೇಶ್ ಒತ್ತಾಯಿಸಿದರು. ನಗರದ ಕಾರ್ಮಿಕ ಇಲಾಖೆ ಕಚೇರಿ ಎದರು ಪ್ರತಿಭಟನೆ ನಡೆಸಿ ಮನವಿ ನೀಡಿ ನಂತರ ಮಾತನಾಡಿದ ಉಮೇಶ್,  ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ಸಂಹಿತಿಕರಣಗೊಳಿಸುವ ಪ್ರಕ್ರಿಯೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನು 1996′ ಹಾಗೂ ‘ಸೆಸ್ ಕಾನೂನು ರದ್ದು ಮಾಡಿದೆ. ಜೊತೆಗೆ ಕೇಂದ್ರದ ಓಹೆಚ್ಸಿ ಕಾರ್ಮಿಕ ಸಂಹಿತೆ ಅಡಿಯಲ್ಲಿ ಸೆಸ್ ಸಂಗ್ರಹ ಮಿತಿಯನ್ನು 10 ಲಕ್ಷ 1996″ ಈ ಎರಡೂ ಕಾನೂನುಗಳನ್ನು ರೂಪಾಯಿ ಮೌಲ್ಯದಿಂದ 50 ಲಕ್ಷ ರೂಪಾಯಿ ಮೌಲ್ಯ ಮೇಲ್ಪಟ್ಟು ಎಂದು ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ ಸೆಸ್ ಸಂಗ್ರಹ ಗಣನೀಯವಾಗಿ ಕುಸಿಯಲಿದೆ ಕೂಡಲೇ ಸರ್ಕಾರ 1996ರ ಆದೇಶದಂತೆ ಕಾರ್ಮಿಕರಿಗೆ ರೂಪಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಟ್ಟಡ ಕಾರ್ಮಿಕ ಮಂಡಳಿ ಮತ್ತು ಸೆಸ್ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಲು ಕ್ರಮವಹಿಸಬೇಕು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲೆ…

Read More

ಶಿಡ್ಲಘಟ್ಟ, ಮನೆಯ ಗವಾಕ್ಷಿ ಮೂಲಕ ಒಳನುಗ್ಗಿದ ದುಷ್ಕರ್ಮಿಗಳು ವೃದ್ದ ದಂಪತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಪಟ್ಟಣದ ಕಾಮಾಟಿಗರ ಪೇಟೆಯ ವಾಸವಿ ಕಲ್ಯಾಣ ಮಂಟಪದ ಹಿಂಭಾಗದ ಮನೆಯಲ್ಲಿ ವಾಸವಾಗಿದ್ದ ಶ್ರೀನಿವಾಸಲು(77) ಮತ್ತು ಪತ್ನಿ ಪದ್ಮಾವತಿ(66) ಕೊಲೆಯಾದ ವೃದ್ದ ದಂಪತಿ. ಶ್ರೀನಿವಾಸಲು ಪಟ್ಟಣದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರನ್ನು ಮದುವೆ ಮಾಡಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ದಂಪತಿ ಮಾತ್ರ ಈ ಮನೆಯಲ್ಲಿದ್ದರು. ತಡರಾತ್ರಿ ದುಷ್ಕರ್ಮಿಗಳು ಮನೆಯ ಗವಾಕ್ಷಿ ಮೂಲಕ ಒಳನುಗ್ಗಿದ್ದಾರೆ. ರೂಮ್‍ನಲ್ಲಿ ಮಲಗಿದ್ದ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದಾಗ ಬಾಗಿಲು ತೆಗೆದಿಲ್ಲ. ಅನುಮಾನಗೊಂಡು ಅಕ್ಕಪಕ್ಕದವರನ್ನು ಕರೆದಿದ್ದಾರೆ. ನೆರೆಮನೆಯವರು ಮನೆ ಬಳಿ ಬಂದು ನೋಡಿದಾಗ ದಂಪತಿಯ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಗರ ಠಾಣೆ…

Read More

ಜಮೀನುಗಳ ಹದ್ದುಬಸ್ತಿಗೆ, ಭೂ ಸರ್ವೇಗೆ ಇದ್ದ ದರವನ್ನು ರಾಜ್ಯ ಸರ್ಕಾರ ನೂರೈವತ್ತು ಪಟ್ಟು ಹೆಚ್ಚಳ ಮಾಡಿರುವುದನ್ನು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕೃತಿ ವಿಕೋಪ, ಕರೋನಾ, ಬೆಳೆ ಏರಿಳಿತ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ನಾನಾ ಕಾರಣಗಳಿಂದ ರೈತರ ಬದುಕು ಸಂಕಷ್ಟದಲ್ಲಿದೆ. ಇಂದಿಗೂ ನಮ್ಮ ರೈತರಿಗೆ ಸ್ಥಿರವಾದ ಬೆಲೆ ಎಂಬುದು ಸಿಗುತ್ತಿಲ್ಲ. ಸದಾ ಅನಿಶ್ಚಿತತೆಯಲ್ಲೇ ಬದುಕಬೇಕಾದ ಪರಿಸ್ಥಿತಿಯಲ್ಲಿ ರೈತರಿದ್ದಾರೆ. ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಹೊಸ ಆದೇಶ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಸರ್ವೇ ಶುಲ್ಕವನ್ನು ಬರೋಬ್ಬರಿ ನೂರು, ನೂರೈವತ್ತು ಪಟ್ಟು ಹೆಚ್ಚು ಮಾಡಿರುವುದು ನಿಜಕ್ಕೂ ಆತಂಕ ಸೃಷ್ಟಿಸಿದೆ ಎಂದಿದ್ದಾರೆ. ಜಮೀನು ಸರ್ವೇ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಹಲವು ಕಡೆ ಇನ್ನೂ ಹಕ್ಕು ಪತ್ರಗಳು ಸರಿಯಾಗಿ ಆಗಿರುವುದಿಲ್ಲ. ಎರಡು, ಮೂರು ತಲೆಮಾರುಗಳ ಜಮೀನುಗಳು ಸರಿಯಾದ ರೀತಿ…

Read More

ಪಾವಗಡ: ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ ಎಂದು ಮಾಜಿ ಪುರಸಭಾ ಅಧ್ಯಕ್ಷ ಮಾನಂ ವೆಂಕಟಸ್ವಾಮಿ ತಿಳಿಸಿದರು. ಪಾವಗಡ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಫೆಬ್ರವರಿ 11 ರಿಂದ 13 ರ ರವರೆಗೆ ನಡೆಯುವ ಕ್ರಿಕೆಟ್ ಪ್ರೇಮಿಯರ್ ಲೀಗ್ ತಂಡಗಳಿಗೆ ಹೆಲ್ಪ್ ಸೊಸೈಟಿ ವತಿಯಿಂದ ಟೀ -ಶರ್ಟ್ ವಿತರಣೆ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಅವರು,  ಸೋಲು –ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸೌಹಾರ್ದತೆ ಕಾಪಾಡಲು ಗ್ರಾಮೀಣ ಕ್ರೀಡೆಗಳನ್ನು ಮುನ್ನಡೆಸೋಣ ಎಂದರು. ದೈಹಿಕ ಶಿಕ್ಷಕ ಹಾಗೂ ಕ್ರಿಕೆಟ್ ತಂಡದ ಪ್ರಯೋಜಕರಾದ ಯತೀಶ್ ರವರು ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಯುವಕರ ನೆಚ್ಚಿನ ಪಂದ್ಯಗಳಾದ ಕ್ರಿಕೆಟ್ ಆಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಾವಗಡ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಇಂದು ಆಟಗಾರರಿಗೆ ಟೀ -ಶರ್ಟ್ ವಿತರಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮಾತನಾಡುತ್ತ, ಯುವಕರು ದುಷ್ಚಟಕ್ಕೆ ಬಲಿಯಾಗದೆ ಉತ್ತಮ ಹವ್ಯಾಸ ಜೊತೆಗೆ ಕ್ರೀಡೆಗಳ…

Read More

ಸೇಡಂ ಕ್ಷೇತ್ರದ ಶಾಸಕರ ವಿರುದ್ಧ ಸಂತ್ರಸ್ತೆ ನೀಡಿರುವ ದೂರಿನ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಎಸಿಪಿಯೊಬ್ಬರಿಗೆ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯ ರಾವ್ ಆದೇಶಿಸಿದ್ದಾರೆ. ಈ ಸಂಬಂಧ ಸಂಪೂರ್ಣ ವರದಿಯನ್ನು ಐದ ದಿನದೊಳಗೆ ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ಕ್ಷೇತ್ರದ ಶಾಸಕ ರಾಜ್‍ ಕುಮಾರ್ ಪಾಟೀಲ್ ತೇಲ್ಕೂರ್ ಹಲವಾರು ವರ್ಷಗಳಿಂದ ನನ್ನ ಜೊತೆ ಸಲುಗೆಯಿಂದ ಇದ್ದು ಆ ಸಂದರ್ಭದಲ್ಲಿ ಗಂಡು ಮಗು ಜನಿಸಿತು. ಈಗ ಆತನಿಗೆ 14 ವರ್ಷ. ತೇಲ್ಕೂರ್‍ನಿಂದ ನನಗೆ ಮತ್ತು ಮಗನಿಗೆ ಅನ್ಯಾಯವಾಗಿದೆ ಎಂದು ಮಹಿಳೆಯೊಬ್ಬರು ನ್ಯಾಯಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿದ್ದಾರೆ. ಕಳೆದ ಸೋಮವಾರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಶಾಸಕರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರ ವಿರುದ್ಧ ಆರೋಪ: ಪೊಲೀಸರು ನನ್ನನ್ನು ಒತ್ತಾಯವಾಗಿ ವಿಧಾನಸೌಧ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್‍ ನ ಪ್ರಚೋದನೆಯಿಂದ ಶಾಸಕರ ವಿರುದ್ಧ ಆರೋಪ…

Read More

ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 58,077 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದ 657 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ದೇಶಾದ್ಯಂತ ಒಟ್ಟು ಸೋಂಕಿತರ ಸಂಖ್ಯೆ 42,536,137ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,97,802ಕ್ಕೆ ಇಳಿಕೆಯಾಗಿದೆ. ದೈನಂದಿನ ಕೋವಿಡ್ ಪಾಸಿಟಿವ್ ರೇಟ್ ಶೇ.389ರಷ್ಟಿದೆ.ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್) ಮಹಾ ನಿರ್ದೇಶಕ ಡಾ.ಬಲರಾಮ್ ಅವರು ಲಸಿಕೆ ಸಂಬಂಧ ಮಾಹಿತಿ ನೀಡಿ ರಾಷ್ಟ್ರವ್ಯಾಪಿ ಕೋವಿಡ್-19 ಮೊದಲ ಡೋಸ್‍ ಅನ್ನು ಶೇ.96 ಪ್ರತಿಶತ ನೀಡಲಾಗಿದೆ. ಜತೆಗೆ ಭಾರತವು ಲಸಿಕೆ ಸೂಪರ್ ಪವರ್ ಆಗುವತ್ತ ಸಾಗಿದೆ ಎಂದು ಹೇಳಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು: ದಲಿತ ಶೋಷಿತ ತಳ ಸಮುದಾಯಗಳ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಎಸ್ಸಿ, ಎಸ್ಟಿ  ಉಪಯೋಜನಾ ಕಾಯ್ದೆಯನ್ನು  2002- 23 ನೇ ಸಾಲಿನ ಬಜೆಟ್ ನಲ್ಲಿ  ಸೇರಿಸಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಡಿಎಸ್ 4 ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಡಿಎಸ್ 4 ಮುಖಂಡ ಸತೀಸ್ ಕಂಟಲಗೆರೆ, ಸರ್ವಧರ್ಮ ಸಹಿಷ್ಣುತೆಯಿಂದ ಸ್ವಾಭಿಮಾನದಿಂದ ಸಮಾನವಾಗಿ ಬದುಕುತ್ತಿರುವ ಈ ಭಾರತದಲ್ಲಿ, ಎಸ್ಸಿ ಎಸ್ಟಿ ಸಮುದಾಯಗಳಿಗೆ ಸ್ವಾತಂತ್ರ್ಯ ನಂತರ ಅಂಬೇಡ್ಕರ್ ಅವರು ಸರ್ವರಿಗೂ ಸಮಪಾಲು ಸಮಬಾಳು ಎಂಬ ಸಾಮಾಜಿಕ ಕಳಕಳಿಯಿಂದ ಸಂವಿಧಾನದಡಿಯಲ್ಲಿ ಎಲ್ಲಾ ಸಮುದಾಯ ಗಳು ಜಾತಿ, ಧರ್ಮ, ಗಳ ಒಳಿತಿಗಾಗಿ ಮೀಸಲಾತಿ ಇಟ್ಟಿದ್ದಾರೆ. ಆದರೆ ಇತ್ತೀಚಿನ ಆಳುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಳ ಸಮುದಾಯಗಳ ಓಟ್ ಬ್ಯಾಂಕ್ ಬಳಸಿಕೊಂಡು ಅವರ ಅಭಿವೃದ್ಧಿ ಯೋಜನೆ ಗಳನ್ನು ನಿರ್ಲಕ್ಷ್ಯ…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೂನಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಐಮಂಗಲ ಹೋಬಳಿ ಬೀರೇನಹಳ್ಳಿ ಗ್ರಾಮದ ಸಮೀಪದ ಎನ್.ಹೆಚ್. 24ರಲ್ಲಿ ನಡೆದ ಭೀಕರ ಅಪಘಾತದಲ್ಲಿ  ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಬೆಂಗಳೂರು ನಗರದ ರಾಜಾಜಿನಗರ ನಿವಾಸಿ ಸಾಫ್ಟ್‌ವೇರ್ ಇಂಜನಿಯರ್ ಆಗಿರುವ ಹರೀಶ್ ಜೆ. ಅವರ ಪತ್ನಿ  ರೇಣುಕಾ ಮಕ್ಕಳಾದ ಸುದೀಕ್ಷ, ಪ್ರತೀಕ್ಷ , ಹಾಗೂ ವಿಶಾಲಾಕ್ಷಿ ಅಪಘಾತದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನಲ್ಲಿರುವ ಸಂಬಂಧಿಕರ ಮದುವೆಗೆ ತೆರಳಿ, ಮದುವೆ ಕಾರ್ಯಕ್ರಮ ಮುಗಿಸಿ, ಹೊಸದುರ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ರೇಣುಕಾ ಅವರು ಕಾರು ಚಲಾಯಿಸುತ್ತಿದ್ದು, ವೇಳೆ ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿ- ಭರಮಗಿರಿ ಸಮೀಪ ಯಾವುದೋ ಪ್ರಾಣಿ ರಸ್ತೆಗಡ್ಡವಾಗಿ ಬಂದಿದ್ದು, ಪ್ರಾಣಿಯನ್ನು ರಕ್ಷಿಸುವ ಭರದಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ವಿಷಯ…

Read More

ತುಮಕೂರು: ಮಹಿಳೆಯರು ಮತ್ತು ಮಕ್ಕಳು ಎಲ್ಲಾ ಹಂತದಲ್ಲೂ ದೌರ್ಜನ್ಯಕ್ಕೆ ಹಾಗೂ ತೊಂದರೆಗೆ ಒಳಗಾಗುವ ಸಮುದಾಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿದ್ಯಾಕುಮಾರಿ  ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,  ಸಮಾಜದಲ್ಲಿ ಮಹಿಳೆಯರಿಗೆ ಸಣ್ಣ ಪುಟ್ಟ ಆಮಿಷ ತೋರಿಸಿ ಮಹಿಳೆಯರ ಅಪಹರಣ ಪ್ರಕರಣ ನಡೆಯುತ್ತಿದೆ. ಮಹಿಳೆಯರ ಮತ್ತು ಮಕ್ಕಳ ಮಾರಾಟ ಜಾಲ ಬಹಳ ವ್ಯವಸ್ಥಿತವಾಗಿ ಸಂಚು ರೂಪಿಸುತ್ತಾ ಬರುತ್ತಿದೆ . ಇಂತಹ ಘಟನೆಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದ್ದರು ಬೆಳಕಿಗೆ ಬರುವುದಿಲ್ಲ ಎಂದರು. ಪೋಲಿಸ್ ಠಾಣೆಗಳಲ್ಲಿ ಮಹಿಳೆಯರ  ಮತ್ತು ಮಕ್ಕಳ ಕಾಣೆ ಬಗ್ಗೆ ಪ್ರಕರಣ ದಾಖಲಾದಾಗ ಮಾತ್ರ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಾವೆಲ್ಲರೂ ನಾಗರಿಕ ಸಮಾಜದಲ್ಲಿ ಇದ್ದು, 21 ನೇ ಶತಮಾನದಲ್ಲಿ ಇದ್ದರು ಕೂಡ ಇಂದಿಗೂ ಮಹಿಳೆಯರು ಮತ್ತು ಮಕ್ಕಳು ಇಂತಹ ಸ್ಥಿತಿಯಲ್ಲಿದ್ದಾರೆ ಎನ್ನುವುದು ಆಘಾತಕಾರಿ ವಿಚಾರ…

Read More