Author: admin

ತುಮಕೂರು : ದಿವ್ಯದೃಷ್ಟಿ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ವಿದ್ಯಾವಾಚಸ್ಪತಿ ಖ್ಯಾತ ಸಾಹಿತಿ ಡಾ.ಕವಿತಾಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ರಾಜ್ಯ ಪ್ರಶಸ್ತಿ ವಿಜೇತ ನವರತ್ನ ಇಂದುಕುಮಾರ್, ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮಹಿಳಾ ಸಬ್ ಇನ್ಸ್ಪೆಕ್ಟರ್ ಚಂದ್ರಕಲಾ ಟಿ.ಎಸ್. ಹಾಗೂ ರಮೋ ಮಜಾ ಟಾಕೀಸ್ ಖ್ಯಾತಿ ಗೌರವ ನಿರ್ದೇಶಕರು ದಿವ್ಯದೃಷ್ಟಿ ಸಂಸ್ಥೆ ಇವರುಗಳು ಉದ್ಘಾಟಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಜಾ ಟಾಕೀಸ್ ರೆಮೋ , ಎಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು ತಿಳಿಸಿ, ಸಾಧಕಿ ಕುಸುಮಾ ಜೈನ್ ಜೈನ್ ಅವರ ಸಾಧನೆಯನ್ನು ಶ್ಲಾಘಿಸಿದರು. ಜೊತೆಗೆ ಎಲ್ಲರೂ ಒಟ್ಟಾಗಿ ಇರೋಣ ನಗುನಗುತ ಇರೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಣಿ ಚಂದ್ರಶೇಖರ್, ಜಲಜ ಜೈನ್ ಕಾರ್ಯದರ್ಶಿ ದಿವ್ಯದೃಷ್ಟಿ ಸಂಸ್ಥೆ, ಕುಮಾರಿ ಚೈತ್ರಲಿ ನೃತ್ಯ ಕಲಾವಿದೆ ಡ್ಯಾನ್ಸ್…

Read More

ತುಮಕೂರು: ತುಮಕೂರಿನ 19 ವರ್ಷದ ಯುವತಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೃತ ಯುವತಿಯ ತಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯುತ್ತಿದೆಯೆಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವಾಡ್ ರವರು ತಿಳಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯದ ನೆಪದಲ್ಲಿ ಬಂದ ವ್ಯಕ್ತಿ ನನ್ನ ಮಗಳನ್ನ ದುರುಪಯೋಗಪಡಿಸಿಕೊಂಡಿದ್ದು, ನಂತರ ಆತ ನೀಡಿದ ಔಷಧಿಯ ಪರಿಣಾಮ ಯುವತಿ ಮೃತಪಟ್ಟಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೃತ ಯುವತಿಯ ತಾಯಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲು ಮಾಡಿಕೊಂಡಿದ್ದು, ತುಮಕೂರು ನಗರ ಠಾಣೆಯ ಇನ್ಸ್ಪೆಕ್ಟರ್  ರವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಉತ್ತರ ಪ್ರದೇಶ, ಗೋವಾ,  ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗರಿಷ್ಠ ಸಂಖ್ಯೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಳ್ಳುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ ಇದರ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ  ತುಮಕೂರು ನಗರದ ಟೌನ್ಹಾಲ್ ವೃತ್ತದಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಲಕ್ಷ್ಮೀಶ್ ರವರ ನೇತೃತ್ವದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ವಿರೋಧಿ ಹಾಗೂ ದೇಶ ವಿರೋಧಿ ಕೃತ್ಯಗಳ  ವಿರುದ್ಧವಾಗಿ ಹೋರಾಡಿದ ಬಿಜೆಪಿ ಪಕ್ಷಕ್ಕೆ ಈ ಬಾರಿ ಮತದಾರರು ಒಲವು ತೋರಿದ್ದು, ಈ ಮೂಲಕ ಮತದಾರರು ವಿರೋಧ ಪಕ್ಷಗಳಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದರು. ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ರವರ ನೇತೃತ್ವದಲ್ಲಿ ಈ ಬಾರಿಯ ಚುನಾವಣೆ ಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು…

Read More

ಕೊರಟಗೆರೆ: ಪಟ್ಟಣದ  ಎಲ್&ಟಿ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಲಾಕರ್ ಒಡೆದು ಕಳ್ಳತನ ನಡೆಸಲು ಕಳ್ಳರು ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ಪಟ್ಟಣದ ಕರ್ನಾಟಕ ಬ್ಯಾಂಕ್ ಎಟಿಎಂ ಪಕ್ಕದಲ್ಲಿ ಇತ್ತೀಚೆಗಷ್ಟೇ ನೂತನವಾಗಿ ಎಲ್&ಟಿ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಶಾಖೆಯನ್ನು ಪ್ರಾರಂಭಿಸಲಾಗಿತ್ತು . ಬಹಳ ದಿನಗಳಿಂದ ಹೊಂಚು ಹಾಕಿಕೂತಿದ್ದ ಕಳ್ಳರ ತಂಡ  ಶಾಖೆಯಲ್ಲಿ ಲೋನ್ ಗಳ ವಹಿವಾಟನ್ನು ಗಮನಿಸಿ, ಈ ಶಾಖೆಯಲ್ಲಿ ಬಹಳಷ್ಟು ಹಣ ಇದೆಯೆಂದು ತಿಳಿದು ಬುಧವಾರ ರಾತ್ರಿ ಫೈನಾನ್ಸ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಹೋದ ನಂತರ  ಕಳವಿಗೆ ಯತ್ನಿಸಿದ್ದಾರೆ. ಬಿಲ್ಡಿಂಗ್ ಮೆಟ್ಟಿಲುಗಳ  ಮುಖಾಂತರ ಬಿಲ್ಡಿಂಗ್ ಪ್ರವೇಶಿಸಿ, ಶಾಖೆಯ ಬೀಗವನ್ನು ಒಡೆದು ಒಳನುಗ್ಗಿ ಲಾಕರ್ ಒಡೆಯಲು ಪ್ರಯತ್ನಿಸಿದ್ದಾರೆ. ಸಾಕಷ್ಟು ಪ್ರಯತ್ನಪಟ್ಟರೂ ಲಾಕರ್ ಓಪನ್ ಆಗದ ಕಾರಣ ಬಂದ ಕೆಲಸಕ್ಕೆ ಸುಂಕವಿಲ್ಲದೆ ವಾಪಸ್ ಮರಳಿದ್ದಾರೆ ಎಂದು ಹೇಳಲಾಗಿದೆ. ಕಳ್ಳತನಕ್ಕೆ ಸಂಬಂಧಿಸಿದಂತೆ ಶಾಖೆಯ ವ್ಯವಸ್ಥಾಪಕ ಶಿವು ಮಾತನಾಡಿ, ನಮ್ಮ ಕಂಪೆನಿ ಶಾಖೆಯು ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದು, ಬಿಲ್ಡಿಂಗ್ ಒಳಗೆ ಹೊರಗೆ ಸಿಸಿ…

Read More

ಬೆಂಗಳೂರು: ಈ ಹಿಂದೆ ಸ್ಯಾಂಡಲ್‌ವುಡ್  ಡ್ರಗ್ಸ್‍ ಪ್ರಕರಣ ಭಾರೀ ಸದ್ದು ಮಾಡಿತ್ತು. ಚಂದನವನದ ನಟ-ನಟಿಯರಿಗೆ ಮಾದಕವಸ್ತು ಲೋಕದ ನಂಟಿರುವುದು ಬಹಿರಂಗವಾಗಿತ್ತು. ಡ್ರಗ್ಸ್ ಪ್ರಕರಣದಲ್ಲಿ ಕೆಲ ನಟಿಯರು ಜೈಲಿಗೂ ಹೋಗಿ ಬಂದಿದ್ದರೂ. ಇದಾದ ನಂತರವೂ ಬೆಂಗಳೂರು ಡ್ರಗ್ಸ್ ವಿಚಾರಕ್ಕೆ ಪದೇ ಪದೇ ಸುದ್ದಿಯಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ(Drugs Mafia) ಆಳವಾಗಿ ಬೇರೂರಿದ್ದು, ದಿನೇ ದಿನೇ ಹೊಸ ಹೊಸ ಪ್ರಕಣಗಳು ಬೆಳಕಿಗೆ ಬರುತ್ತಲೇ ಇದೆ. ಬೆಂಗಳೂರಿನ ಹುಳಿಮಾವು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 8 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಆಯಿಲ್(Hashish Oil), ಗಾಂಜಾ(Ganja)ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಲವರ್ಸ್‍(Lovers Arrested) ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ಬಳಿಕ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದ್ದು, ಖಾಕಿಪಡೆಯೇ ಬೆಚ್ಚಿಬಿದ್ದಿದೆ.8 ಕೋಟಿ ರೂ. ಮೌಲ್ಯದ ಮಾದಕವಸ್ತು ವಶಕ್ಕೆ ಹುಳಿಮಾವು ಠಾಣೆ ಪೊಲೀಸರು(Hulimavu Police Station) ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಬರೋಬ್ಬರಿ 8 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಆಯಿಲ್,…

Read More

ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ (Under Construction Building) ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜರುಗಿದೆ. ತಮಿಳುನಾಡು ಮೂಲದ ಏಳುಮಲೈ (42) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಏಳುಮಲೈ ನಿರ್ಮಾಣ ಹಂತದ ಕಟ್ಟಡದಿಂದ ಕಾಲು ಜಾರಿ ಬಿದ್ದಿದ್ದರು. ನಾಗರಬಾವಿಯ ಎನ್ ಜಿಇಎಫ್ ಲೇಔಟ್ ನಲ್ಲಿ ಘಟನೆ ಜರುಗಿತ್ತು. ಕಟ್ಟಡ ಕಾಮಗಾರಿ ಮಾಡುತಿದ್ದ ವೇಳೆ, ರಾತ್ರಿ 7 ಗಂಟೆ ಸುಮಾರು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮೆಟ್ಟಿಲು ಬಳಸಿ ಇಳಿಯುತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಲೆಗೆ (Head) ಗಂಭೀರ ಗಾಯವಾಗಿದೆ. ಏಳುಮಲೈ ಅವರನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಏಳುಮಲೈ ಅಸುನೀಗಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಎಫ್ ಐಆರ್ (FIR) ಕೂಡ ದಾಖಲಾಗಿದೆ. ಮಾಲೀಕ ಮುನಿರಾಜು ಬಾಬು, ಶಿವಶಂಕರ್ ಚೌಧರಿ, ಕಾಂಟ್ರ್ಯಾಕ್ಟರ್…

Read More

ಯಾದಗಿರಿ: ಶಾಲೆಯ ವಿದ್ಯಾರ್ಥಿಗಳಿಗೆ ಕನಿಷ್ಟ ಸೌಲಭ್ಯ ಒದಗಿಸುವಲ್ಲಿಯೂ ಯಾದಗಿರಿ ಜಿಲ್ಲಾಡಳಿತ ವಿಫಲವಾಗಿದ್ದು, ನೀರಿಗಾಗಿ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಹುಣಸಗಿ ತಾಲೂಕಿನ ಕನಗೊಂಡನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆಗೆ ಇದು ಕೈಗನ್ನಡಿಯಂತಿದೆ. ಶಾಲೆಯಲ್ಲಿ ಬಿಸಿಯೂಟ  ಮಾಡಿದ ಬಳಿಕ ಮಕ್ಕಳು, ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಇಲ್ಲಿದೆ. ವಿದ್ಯಾರ್ಥಿಗಳಿಗೆ ಕನಿಷ್ಟ ಸೌಲಭ್ಯ ಒದಗಿಸಲು ಸಹ ಶಿಕ್ಷಣ ಇಲಾಖೆ  ವಿಫಲವಾಗಿದೆ. ಶಾಲೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಬೋರವೆಲ್ ಇದೆ. ಮಕ್ಕಳು ನೀರು ಬೇಕಾದರೆ ಶಾಲೆಯಿಂದ 1 ಕಿ.ಮೀ ದೂರ ಸಾಗಬೇಕು. ಬಿಸಿಯೂಟ ತಯಾರಿಸಲು ಸಹ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವರದಿ: ಆಂಟೋನಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಧಾರವಾಡ: ಮದುವೆ ಮನೆಯಲ್ಲಿ ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಧಾರವಾಡ(Dharwad)ದಲ್ಲಿ ನಡೆದಿದೆ. ಪೆಂಡಾರ್ ಗಲ್ಲಿಯ ಹಾಲ್ ನಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದ ಜಾಂಬವಂತನಗರ ನಿವಾಸಿ ಸಾಧಿಕ್ ಮೃತಪಟ್ಟವರು. ಮದುವೆ ಮನೆಯಲ್ಲಿ ಇಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜಗಳ ಬಿಡಿಲು ಸಾಧಿಕ್ ಹೋಗಿದ್ದಾನೆ. ಈ ವೇಳೆ ನಡೆದ ತಳ್ಳಾಟ-ನೂಕಾಟದಲ್ಲಿ ಸಿಲುಕಿದ್ದರಂತೆ ಸಾಧಿಕ್ ತಲೆಗೆ ಗೇಟ್ ಬಡಿದಿದೆ. ಪರಿಣಾಮ ಆತನ ತಲೆಗೆ ಗಂಭೀರ ಪೆಟ್ಟಿ ಬಿದ್ದು ಗಾಯಗೊಂಡಿದ್ದಾನೆ.ಗಂಭೀರವಾಗಿ ಗಾಯಗೊಂಡಿದ್ದ ಸಾಧಿಕ್‌ನನ್ನು ಸ್ಥಳೀಯರು ತಕ್ಷಣವೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ(Kims Hospital Hubli)ಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ರಿಜ್ವಾನ್ ಎಂಬಾತ ಸಾಧಿಕ್‌ನನ್ನು ತಳ್ಳಿದ್ದರಿಂದ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು(Sahara Police Station) ಭೇಟಿ ನೀಡಿದ್ದು, ಆರೋಪಿ ರಿಜ್ವಾನ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.…

Read More

ಚಿತ್ರದುರ್ಗ :  ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿ ಅಬ್ಬಿನಹೊಳೆ  ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯದಲ್ಲಿ  ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಅಬ್ಬಿನಹೊಳೆ  ಗ್ರಾಮ ಪಂಚಾಯಿತಿ ಕಾರ್ಯಾಲಯವು ವಿಫಲವಾಗಿದೆ  ಎಂದು ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹೊಸಹಳ್ಳಿ ಗ್ರಾಮಕ್ಕೆ ಇಂದಿಗೂ ಸಹ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಸಂಬಂಧಪಟ್ಟ  ಅಭಿವೃದ್ಧಿ ಅಧಿಕಾರಿಗಳು,  ವಿಫಲರಾಗುತ್ತಿದ್ದಾರೆ, ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ ಅವರೇ  ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಹೊಸಕೆರೆ ಗ್ರಾಮದಲ್ಲಿನ ಎ.ಕೆ. ಕಾಲೋನಿಯಲ್ಲಿ  ಇಂದಿಗೂ  ಇಲ್ಲಿನ ಸ್ಥಳೀಯರಿಗೆ ಕುಡಿಯುವ ನೀರು, ಬೀದಿ ದೀಪಗಳು  ಸಹ ಸರಿಯಾದ ರೀತಿಯಲ್ಲಿ ಇಲ್ಲ.  ಇಲ್ಲಿನ ಸರ್ಕಾರಿ ಶಾಲೆಯ ಮುಂದೆ ಕೊಚ್ಚೆ ತುಂಬಿದ್ದರೂ  ಯಾರು ಸಹ ಗಮನಕ್ಕೆ ತೆಗೆದುಕೊಳ್ಳದೇ ಬೇಜಾವ್ದಾರಿತನ ತೋರುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ  ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ವರದಿ:  ಮುರುಳಿಧರನ್ ಆರ್.,  ಹಿರಿಯೂರು. ( ಚಿತ್ರದುರ್ಗ…

Read More

ಹೊಸದುರ್ಗ: ಭಾರತೀಯ ದಲಿತ ಸಂಘರ್ಷ ಸಮಿತಿ(ಸಮಾಜಸೇವಾ ರತ್ನ ಡಾ.ಪ್ರಕಾಶ್ ಬಿರಾವರ್ ಸ್ಥಾಪಿತ)  ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಪ್ರಕಾಶ್  ಬಿರಾವಾರ  ಅವರ ಆದೇಶದ ಮೇರೆಗೆ ರಾಜ್ಯ ಕಾರ್ಯಾಧ್ಯಕ್ಷರಾದ ಕೆ ತಿಮ್ಮರಾಜು, ರಾಜ್ಯ ಹಿರಿಯ  ಉಪಾಧ್ಯಕ್ಷರಾದ ಚೋಳಗುಡ್ಡ ಚಂದ್ರಣ್ಣ, ಮತ್ತೊಬ್ಬ ರಾಜ್ಯ ಉಪಾಧ್ಯಕ್ಷರಾದ ಚಂದ್ರಣ್ಣ ಘಾಟ್  ಹಾಗೂ ಚಿತ್ರದುರ್ಗ  ಜಿಲ್ಲಾ ಅಧ್ಯಕ್ಷರಾದ ಹರೀಶ್  ನೇತೃತ್ವದಲ್ಲಿ ಹೊಸದುರ್ಗ ದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ  ಪೂಜಾರ್ ಕರಿಯಪ್ಪ ಅವರನ್ನು ಚಿತ್ರದುರ್ಗ ಜಿಲ್ಲಾ ಹಿರಿಯ ಉಪಾಧ್ಯಕ್ಷರನ್ನಾಗಿ ಆಯ್ಕೆ  ಮಾಡಲಾಯಿತು. ಹೊಸದುರ್ಗ ತಾಲ್ಲೂಕು ಅಧ್ಯಕ್ಷರನ್ನಾಗಿ ಪರಮೇಶ್ ಬಿ. ಅವರನ್ನು ಆಯ್ಕೆ ಮಾಡಲಾಯಿತು. ತಾಲ್ಲೂಕಿನ ಕಾರ್ಯಾಧ್ಯಕ್ಷರನ್ನಾಗಿ ರ೦ಗಸ್ವಾಮಿ ಎಸ್. ಅವರನ್ನು ಆಯ್ಕೆ ಮಾಡಲಾಯಿತು. ತಾಲ್ಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ನಿರಂಜನ್ ಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು.  ತಾಲ್ಲೂಕು ಉಪಾಧ್ಯಕ್ಷರನ್ನಾಗಿ ಕರಡಿ ಬಸವರಾಜು ಅವರನ್ನು ಆಯ್ಕೆ ಮಾಡಲಾಯಿತು . ನಂತರ ಕರ್ನಾಟಕದ ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿ.ಯನ್ನು ಹೊಸದುರ್ಗ ತಾಲ್ಲೂಕು ಸಮಿತಿ ವತಿಯಿಂದ  ಸನ್ಮಾನಿಸಲಾಯಿತು. ಸಭೆಯಲ್ಲಿ ಕಾಳಪ್ಪ  ಹನಮಂತಪ್ಪ .ವರದರಾಜು ದೇವರಾಜ್…

Read More