nammatumakuru

    Subscribe to Updates

    Get the latest creative news from FooBar about art, design and business.

    What's Hot

    ಭಾರೀ ಮಳೆಗೆ ಮನೆ ಮೇಲೆ ಗೋಡೆ ಕುಸಿದು ಮಹಿಳೆ ಸಾವು

    May 19, 2025

    ಮಳೆ ಹಾನಿಯ ಪರಿಹಾರಕ್ಕೆ ಕ್ರಮವಹಿಸಿ : ಸಚಿವ ಈಶ್ವರ್ ಖಂಡ್ರೆ ಸೂಚನೆ

    May 19, 2025

    ಬೆಂಗಳೂರಿನಲ್ಲಿ ಮಳೆ ಆರ್ಭಟ: ಬರೊಬ್ಬರಿ 10 ಕಿ.ಮೀ ಟ್ರಾಫಿಕ್ ಜಾಮ್

    May 19, 2025
    Facebook Twitter Instagram
    ಟ್ರೆಂಡಿಂಗ್
    • ಭಾರೀ ಮಳೆಗೆ ಮನೆ ಮೇಲೆ ಗೋಡೆ ಕುಸಿದು ಮಹಿಳೆ ಸಾವು
    • ಮಳೆ ಹಾನಿಯ ಪರಿಹಾರಕ್ಕೆ ಕ್ರಮವಹಿಸಿ : ಸಚಿವ ಈಶ್ವರ್ ಖಂಡ್ರೆ ಸೂಚನೆ
    • ಬೆಂಗಳೂರಿನಲ್ಲಿ ಮಳೆ ಆರ್ಭಟ: ಬರೊಬ್ಬರಿ 10 ಕಿ.ಮೀ ಟ್ರಾಫಿಕ್ ಜಾಮ್
    • ಬೀದರ್‌: ಗುಡುಗು ಸಹಿತ ಭಾರೀ ಮಳೆ
    • ಎಫ್‌ ಎಸ್‌ ಟಿಪಿ ಘಟಕ ಸ್ಥಾಪನೆಗೆ ಸಾರ್ವಜನಿಕರ ವಿರೋಧ: ಕಂದಾಯ ಇಲಾಖೆಯಿಂದ ಹದ್ದುಬಸ್ತು ಕಾರ್ಯ ಯಶಸ್ವಿ
    • ಸಂತಪೂರ ಪೊಲೀಸ್ ಠಾಣೆ: ಅಪಘಾತ ತಡೆಗಟ್ಟಲು ಬ್ಯಾರಿಕೇಡ್ ಅಳವಡಿಕೆ
    • ಆಂಧ್ರಪ್ರದೇಶ ಕರ್ನೂಲ್ ಬಳಿ ಭೀಕರ ಅಪಘಾತ: ತುಮಕೂರು ಮೂಲದ ಮೂವರು ಸಾವು
    • ಅಲ್ಪಾವಧಿಯಲ್ಲಿ ವೃತ್ತಿ ಜೀವನ ನಡೆಸಲು ಡಿಪ್ಲೋಮಾ ಕೋರ್ಸುಗಳು ಉಪಯುಕ್ತ: ಜಯಪ್ರಕಾಶ್ ಜೆ.ಕೆ.
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 8 ಕೋಟಿ ರೂ. ಮೌಲ್ಯದ ಡ್ರಗ್ಸ್ ಡೀಲ್! ಮನೆಯಲ್ಲಿಯೇ ನಶೆ ಲೋಕ ಸೃಷ್ಟಿಸಿದ್ದ ಜೋಡಿ
    ರಾಜ್ಯ ಸುದ್ದಿ March 10, 2022

    8 ಕೋಟಿ ರೂ. ಮೌಲ್ಯದ ಡ್ರಗ್ಸ್ ಡೀಲ್! ಮನೆಯಲ್ಲಿಯೇ ನಶೆ ಲೋಕ ಸೃಷ್ಟಿಸಿದ್ದ ಜೋಡಿ

    By adminMarch 10, 2022No Comments2 Mins Read
    drugs mafia

    ಬೆಂಗಳೂರು: ಈ ಹಿಂದೆ ಸ್ಯಾಂಡಲ್‌ವುಡ್  ಡ್ರಗ್ಸ್‍ ಪ್ರಕರಣ ಭಾರೀ ಸದ್ದು ಮಾಡಿತ್ತು. ಚಂದನವನದ ನಟ-ನಟಿಯರಿಗೆ ಮಾದಕವಸ್ತು ಲೋಕದ ನಂಟಿರುವುದು ಬಹಿರಂಗವಾಗಿತ್ತು. ಡ್ರಗ್ಸ್ ಪ್ರಕರಣದಲ್ಲಿ ಕೆಲ ನಟಿಯರು ಜೈಲಿಗೂ ಹೋಗಿ ಬಂದಿದ್ದರೂ. ಇದಾದ ನಂತರವೂ ಬೆಂಗಳೂರು ಡ್ರಗ್ಸ್ ವಿಚಾರಕ್ಕೆ ಪದೇ ಪದೇ ಸುದ್ದಿಯಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ(Drugs Mafia) ಆಳವಾಗಿ ಬೇರೂರಿದ್ದು, ದಿನೇ ದಿನೇ ಹೊಸ ಹೊಸ ಪ್ರಕಣಗಳು ಬೆಳಕಿಗೆ ಬರುತ್ತಲೇ ಇದೆ.

    ಬೆಂಗಳೂರಿನ ಹುಳಿಮಾವು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 8 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಆಯಿಲ್(Hashish Oil), ಗಾಂಜಾ(Ganja)ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಲವರ್ಸ್‍(Lovers Arrested) ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ಬಳಿಕ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದ್ದು, ಖಾಕಿಪಡೆಯೇ ಬೆಚ್ಚಿಬಿದ್ದಿದೆ.8 ಕೋಟಿ ರೂ. ಮೌಲ್ಯದ ಮಾದಕವಸ್ತು ವಶಕ್ಕೆ ಹುಳಿಮಾವು ಠಾಣೆ ಪೊಲೀಸರು(Hulimavu Police Station) ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಬರೋಬ್ಬರಿ 8 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಆಯಿಲ್, ಗಾಂಜಾ ವಶಕ್ಕೆ ಪಡೆದಿದ್ದಾರೆ. 12 ಲೀಟರ್‌ 940 ಗ್ರಾಂ ಹ್ಯಾಶಿಶ್ ಆಯಿಲ್, 26 ಕೆಜಿ 250 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಬರೋಬ್ಬರಿ 8 ಕೋಟಿ ರೂ. ಎಂದು ತಿಳಿದುಬಂದಿದೆ.


    Provided by

    ಡ್ರಗ್ಸ್ ಡೀಲ್ ಹಿಂದೆ ಲವ್ ಬರ್ಡ್ಸ್!

    ಡ್ರಗ್ಸ್ ಡೀಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಷ್ಣುಪ್ರಿಯ ಹಾಗೂ ಸಿಗಿಲ್ ವರ್ಗಿಸ್ ಎಂಬುವರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಕೇರಳ ಮೂಲದವರಾಗಿದ್ದು, ಪ್ರೇಮಿಗಳಾಗಿದ್ದರು. ಇವರ ಹಿನ್ನೆಲೆ, ಡ್ರಗ್ಸ್ ಡೀಲ್(Drugs Mafia) ಮಾಡುವ ರೀತಿ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

    ಕಾಲೇಜು ದಿನಗಳಿಂದಲೇ ಡ್ರಗ್ಸ್ ದಾಸರಾಗಿದ್ದರು ವಿಷ್ಣುಪ್ರಿಯ ಕುಟುಂಬಸ್ಥರು ಕೊಯಮತ್ತೂರುಗೆ ಶಿಫ್ಟ್ ಆಗಿದ್ದರಂತೆ. ವಿಷ್ಣುಪ್ರಿಯ ಅವರ ತಾಯಿ‌ ಬಾಲ್ಯದಲ್ಲಿದ್ದಾಗಲೇ ಸಾವನ್ನಪ್ಪಿದ್ದರಂತೆ, ಹೀಗಾಗಿ ಅವರು ತಂದೆ ಜೊತೆಗೆ ವಾಸವಾಗಿದ್ದರೆಂದು ತಿಳಿದುಬಂದಿದೆ. ಕೊಯಮುತ್ತೂರಿನಲ್ಲಿಯೇ ವಿಷ್ಣುಪ್ರಿಯ ವಿದ್ಯಾಭ್ಯಾಸ ನಡೆಸ್ತಿದ್ದರು. ಪಿಯುಸಿವರೆಗೂ ಕೇರಳದಲ್ಲಿ ವಿದ್ಯಾಭ್ಯಾಸ ನಡೆಸಿದ್ದ ಸಿಗಿಲ್ ನಂತರ ಬಿಬಿಎಗೆ ಕೊಯಮುತ್ತೂರು ಕಡೆ ಮುಖ ಮಾಡಿದ್ದ. ವಿಷ್ಣುಪ್ರಿಯ ಮೂಲತಃ ಕೇರಳದವಳಾಗಿದ್ದರಿಂದ ಇಬ್ಬರ ಮಧ್ಯೆ ಹೆಚ್ಚು ಆತ್ಮೀಯತೆ ಬೆಳೆದಿತ್ತು. ಇದೇ ಆತ್ಮೀಯತೆ ಇಬ್ಬರ ಮಧ್ಯೆ ಪ್ರೀತಿಯಾಗಿ ಬದಲಾಗಿತ್ತು. ಕಾಲೇಜು ದಿನಗಳಿಂದಲೇ ಇವರಿಬ್ಬರೂ ಡ್ರಗ್ಸ್ ದಾಸರಾಗಿದ್ದರು. ಹೆಚ್ಚು ಹಣ ಕೊಟ್ಟು ಗಾಂಜಾ‌‌, ಮಾದಕ ವಸ್ತು ಖರೀದಿ ಮಾಡ್ತಿದ್ರು. ಕೆಲಸ ಅರಿಸೋದನ್ನು ಬಿಟ್ಟು ಡ್ರಗ್ಸ್ ಪೆಡ್ಲಿಂಗ್ ಗೆ ಪ್ಲಾನ್ ಮಾಡಿಕೊಂಡ್ರು. ಕೊಯ್ಯಮುತ್ತೂರಿಗಿಂತ ಬೆಂಗಳೂರಲ್ಲಿ ಡ್ರಗ್ಸ್ ಗೆ ಹೆಚ್ಚು ಬೇಡಿಕೆ ಇರೋದನ್ನು ಈ ಜೋಡಿ ತಿಳಿದುಕೊಂಡಿತ್ತು.

    ಮನೆಯನ್ನೇ ನಶಾಲೋಕ ಮಾಡಿದ್ದ ಜೋಡಿ

    ಬಂಧಿತ ವಿಷ್ಣು ಪ್ರಿಯ ಹಾಗೂ ಸಿಗಿಲ್ ವರ್ಗಿಸ್ ಇಬ್ಬರೂ ಬೆಂಗಳೂರಿನ ಕೊತ್ತನೂರು ದಿನ್ನೆಯ ಪ್ಲಾಟ್ ಒಂದರಲ್ಲಿ ವಾಸವಾಗಿದ್ದರು. ಮಾದಕವಸ್ತು ಸೇವನೆಗೆಂದೇ ತಮ್ಮ ಮನೆಯನ್ನೇ ಕಲರ್ ಫುಲ್ ಲೈಂಟಿಂಗ್ಸ್‍ ಗಳಿಂದ ಸಿಂಗರಿಸಿದ್ದರಂತೆ. ಟ್ಯಾಟೂ ಆರ್ಟಿಸ್ಟ್ ಆಗಿದ್ದ ವಿಷ್ಣುಪ್ರಿಯ ತಮ್ಮ ರೂಂಅನ್ನು ಡಿಸೈನ್ ಮಾಡಿದ್ದರಂತೆ. ಬೆಂಗಳೂರಿನಲ್ಲಿಯೇ ಡ್ರಗ್ಸ್ ಡೀಲ್(Drugs Deal) ಮಾಡುತ್ತಾ ಮೋಜು-ಮಸ್ತಿ ಮಾಡುತ್ತಿದ್ದರಂತೆ.ಮನೆಯಲ್ಲಿಯೇ ಭರ್ಜರಿ ಡ್ರಗ್ಸ್ ಪಾರ್ಟಿ

    ಈ ಜೋಡಿ ಪ್ರತಿದಿನವೂ ಮನೆಯಲ್ಲಿಯೇ ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದರೆಂದು ತಿಳಿದುಬಂದಿದೆ. ಡ್ರಗ್ಸ್(Hashish Oil)ತೆಗೆದುಕೊಂಡು ಕಲರ್ ಲೈಟಿಂಗ್ಸ್ ಹಾಕಿದ್ರೆ ನಶೆ ಏರುತ್ತೆ ಅಂತಾ ತಮ್ಮ ಕೋಣೆಯನ್ನು ಡಿಸೈನ್ ಮಾಡಿಕೊಂಡಿದ್ದರು. ಮೊಬೈಲ್ ಮೇಲೆ ಡ್ರಗ್ಸ್ ಹಾಕಿ ಸೇವನೆ ಮಾಡೋದು, ರೂಂನಲ್ಲಿ ಲೈಟಿಂಗ್ಸ್ ಹಾಕಿ ಮೋಜು-ಮಸ್ತಿ ಮಾಡಿ ಅದನ್ನು ವಿಡಿಯೋ ಮಾಡುತ್ತಿದ್ದರಂತೆ.

    ಕೇರಳ ಮೂಲದ ವಿದ್ಯಾರ್ಥಿಗಳೇ ಟಾರ್ಗೆಟ್!

    ಈ ಜೋಡಿ ಕೇರಳ ಮೂಲದ ವಿದ್ಯಾರ್ಥಿಗಳ(Kerala Student’s)ನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದರಂತೆ. ಐಷಾರಾಮಿ ಜೀವನ ನಡೆಸಲು ಡ್ರಗ್ಸ್ ಸಪ್ಲೈ ಮಾಡುವುದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಆಂಧ್ರದ ವಿಶಾಖಪಟ್ಟಣಂಗೆ ಬಸ್‌ನಲ್ಲಿ ಹೋಗಿ ಆಶಿಶ್ ಆಯಿಲ್ ತರುತ್ತಿದ್ದರಂತೆ. ಬಸ್ ನಲ್ಲಿ ಮಾದಕವಸ್ತು ತಂದರೆ ಪೊಲೀಸರಿಗೆ ಗೊತ್ತಾಗುವುದಿಲ್ಲವೆಂದು ಮಾಸ್ಟರ್ ಪ್ಲಾನ್ ಮಾಡಿದ್ದರಂತೆ.

    ವರದಿ: ಆಂಟೋನಿ ಬೇಗೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಭಾರೀ ಮಳೆಗೆ ಮನೆ ಮೇಲೆ ಗೋಡೆ ಕುಸಿದು ಮಹಿಳೆ ಸಾವು

    May 19, 2025

    ಬೆಂಗಳೂರಿನಲ್ಲಿ ಮಳೆ ಆರ್ಭಟ: ಬರೊಬ್ಬರಿ 10 ಕಿ.ಮೀ ಟ್ರಾಫಿಕ್ ಜಾಮ್

    May 19, 2025

    ಪ.ಜಾತಿಗಳ ಸಮಗ್ರ ಸಮೀಕ್ಷೆ: ಅವಧಿ ವಿಸ್ತರಣೆ: ಶುಭ ಕಲ್ಯಾಣ್

    May 18, 2025
    Our Picks

    ಆಂಧ್ರಪ್ರದೇಶ ಕರ್ನೂಲ್ ಬಳಿ ಭೀಕರ ಅಪಘಾತ: ತುಮಕೂರು ಮೂಲದ ಮೂವರು ಸಾವು

    May 19, 2025

    ನ್ಯೂಸ್ ಪೇಪರ್ ನ್ನೇ ಡ್ರೆಸ್ ಮಾಡಿಕೊಂಡು, “ನನ್ನನ್ನು ಓದುವಿರಾ?” ಎಂದು ಕೇಳಿದ ನಟಿ ಪೂನಂ ಪಾಂಡೆ

    May 17, 2025

    ಆಪರೇಷನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ: ಯುವಕ ಅರೆಸ್ಟ್

    May 17, 2025

    ಮೌಂಟ್ ಎವರೆಸ್ಟ್ ನಿಂದ ಇಳಿಯುತ್ತಿದ್ದ ವೇಳೆ ಭಾರತೀಯ ಪರ್ವತಾರೋಹಿ ಸಾವು

    May 17, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಭಾರೀ ಮಳೆಗೆ ಮನೆ ಮೇಲೆ ಗೋಡೆ ಕುಸಿದು ಮಹಿಳೆ ಸಾವು

    May 19, 2025

    ಬೆಂಗಳೂರು: ಭಾರೀ ಮಳೆಗೆ ಬೆಂಗಳೂರಲ್ಲಿ ಮನೆಯ ಗೋಡೆ ಕುಸಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ವೈಟ್‌ ಫೀಲ್ಡ್‌ ನಲ್ಲಿ…

    ಮಳೆ ಹಾನಿಯ ಪರಿಹಾರಕ್ಕೆ ಕ್ರಮವಹಿಸಿ : ಸಚಿವ ಈಶ್ವರ್ ಖಂಡ್ರೆ ಸೂಚನೆ

    May 19, 2025

    ಬೆಂಗಳೂರಿನಲ್ಲಿ ಮಳೆ ಆರ್ಭಟ: ಬರೊಬ್ಬರಿ 10 ಕಿ.ಮೀ ಟ್ರಾಫಿಕ್ ಜಾಮ್

    May 19, 2025

    ಬೀದರ್‌: ಗುಡುಗು ಸಹಿತ ಭಾರೀ ಮಳೆ

    May 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.