Author: admin

ಶೆಟ್ಟಿಗೊಂಡನಹಳ್ಳಿ: ರಾಜ್ಯದ ವಿವಿಧೆಡೆ ಇಂದು ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ನಡೆಯುತ್ತಿದ್ದು,  ಶೆಟ್ಟಿಗೊಂಡನಹಳ್ಳಿಯಲ್ಲಿ  ಕೂಡ ಲಸಿಕೆಗೆ ಚಾಲನೆ ನೀಡಲಾಯಿತು. ಬೆಳಗಿನ ಜಾವ 7ಕ್ಕೆ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯತ್ ನ  ಅಧ್ಯಕ್ಷ  ಶಶಿಧರ್ ಅವರು  ಸರ್ಕಾರಿ ಪ್ರಾಥಮಿಕ  ಆರೋಗ್ಯ ಕೇಂದ್ರದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿಗಳು  ಹಾಜರಿದ್ದರು. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಪುಟ್ಟಸಂದ್ರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಂಗಸಜ್ಜಿಕೆ ವರ್ಣ ವಸ್ತ್ರಾಲಂಕಾರ ಕೊಡಿಗೇನಹಳ್ಳಿ ನಾಗರಾಜಕೊಡಿಗೇನಹಳ್ಳಿ ನಾಗರಾಜುರವರ ಶ್ರೀಲಕ್ಷ್ಮೀನರಸಿಂಹಸ್ವಾಮಿ ಡ್ರಾಮಾ ಸೀನ್ಸ್ ಮತ್ತು ಶ್ರೀ ವಿಷ್ಣು ಸಾಯಿ ಕಲಾವಿದರ ಸಂಘ ತುಮಕೂರು ಇವರ ಕಲಾ ತಂಡದ ವತಿಯಿಂದ ಪುಟ್ಟ ಸಂಗ್ರಾಮದಲ್ಲಿ ಶ್ರೀ ಕುರುಕ್ಷೇತ್ರ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ದಿವಂಗತ ಚನ್ನಿಗಪ್ಪ ರವರ ಹಿರಿಯ ಪುತ್ರ ಅರುಣ್ ಕುಮಾರ್ ,  ಕೊರಟಗೆರೆ ವಿಧಾನಸಭಾ ಕ್ಷೇತ್ರವು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಡಾ.ಜಿ.ಪರಮೇಶ್ವರ್ ರವರ ಶ್ರಮವಹಿಸಿ ಪ್ರಸ್ತುತ ಸರ್ಕಾರದಿಂದ  ನೂರಾರು ಕೋಟಿ ಅನುದಾನತಂದು ಕ್ಷೇತ್ರವನ್ನು ಸಾಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಡಾ.ಜಿ ಪರಮೇಶ್ವರ್ ಅವರನ್ನು ಗೆಲ್ಲಿಸಿ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಹಾಗೆಯೇ ತುಮಕೂರು ಜಿಲ್ಲೆಯ ಹೆಸರಾಂತ ರಾಜಕಾರಣಿಯಾದ ಕೆ.ಎನ್ .ರಾಜಣ್ಣ ರವರನ್ನು ಮಧುಗಿರಿ ಕ್ಷೇತ್ರದಿಂದ…

Read More

ತುಮಕೂರು: ಉಕ್ರೇನ್ ನಲ್ಲಿ ಸಿಲುಕಿರುವ ತುಮಕೂರಿನ ವಿದ್ಯಾರ್ಥಿಗಳ ಪೋಷಕರ ಮನೆಗಳಿಗೆ ಶಾಸಕ ಜ್ಯೋತಿ ಗಣೇಶ್ ಅವರು ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದರು. ವಿದ್ಯಾರ್ಥಿನಿ ರೂಪಶ್ರೀ ಹಾಗೂ ಸಮಂತ್ ಪೋಷಕರ ಮನೆಗೆ ಭೇಟಿ ನೀಡಿದ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಧೈರ್ಯವಾಗಿರುವಂತೆ ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ. ತುಮಕೂರಿನ ಕ್ಯಾತಸಂದ್ರ ಬಳಿ ಬಸವಪಟ್ಟಣದಲ್ಲಿ ರೂಪಶ್ರೀ ಹಾಗೂ ಸಮಂತ್ ಪೋಷಕರ ಮನೆ ಇದೆ. ಇವರ ಮನೆಗೆ ಭೇಟಿ ನೀಡಿದ ಶಾಸಕರು,  ತುಮಕೂರು ನಗರದಿಂದ ತೆರಳಿರುವ ವಿದ್ಯಾರ್ಥಿಗಳ ರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಧೈರ್ಯ ತುಂಬಿದರು. ವರದಿ: ಎ.ಎನ್.ಪೀರ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು :ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಂದೆ-ತಾಯಿ ಹಾಗೂ ಗುರು-ಹಿರಿಯರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಕರೆ ನೀಡಿದರು ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಜಾನಪದ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು ಉತ್ತಮ ಸಂಸ್ಕಾರಯುತ ಬದುಕನ್ನು ವಿದ್ಯಾರ್ಥಿದೆಸೆಯಲ್ಲಿ ಅಳವಡಿಸಿಕೊಳ್ಳಬೇಕು. ಗುರು ಹಿರಿಯರು ಮತ್ತು ತಂದೆ-ತಾಯಿ ಗಳಲ್ಲಿ ಅತ್ಯಂತ ಶ್ರದ್ಧೆಯನ್ನು ಹೊಂದಿದವರಾಗಿ ವಿದ್ಯಾಭ್ಯಾಸ ಮಾಡಿದಾಗ ಜೀವನದಲ್ಲಿ ಉತ್ತಮ ಸ್ಥಿತಿಯನ್ನು ತಲುಪಲು ಸಹಕಾರಿಯಾಗುತ್ತದೆ ಎಂದರು. ಹರ ಮುನಿದರೆ ಗುರು ಕಾಯುವನು ಆದರೆ ಗುರು ಮುನಿದರೆ ಹರ ಕಾಯುವನೇ? ಎಂಬ ಪ್ರಶ್ನೆಯನ್ನು ದಾಸ ಶ್ರೇಷ್ಠರು ಹಾಗೂ ಯತಿವರೇಣ್ಯರೇ ಕೇಳಿರುವಾಗ ಸಾಮಾನ್ಯ ಜನರಾದ ನಾವು ಗುರುಗಳನ್ನು ಗೌರವಿಸದಿದ್ದರೆ, ಬದುಕಿನಲ್ಲಿ ಉನ್ನತಿ ಕಾಣಲು ಸಾಧ್ಯವಿಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಮುಂದೆ ಹಲವಾರು ಆಕರ್ಷಣೆಗಳಿದ್ದು ಅವುಗಳು ಅವರ ವ್ಯಕ್ತಿತ್ವವನ್ನು ರಚಿಸಬಹುದು ಅಥವಾ ನಿರ್ಣಾಮ ಮಾಡಬಹುದು, ಬಹಳ ಎಚ್ಛರಿಕೆಯಿಂದ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ…

Read More

ಬೇಗೂರು: ಡಿಎಸ್ ಎಸ್ ಅಲ್ಪಸಂಖ್ಯಾತರ ಅಧ್ಯಕ್ಷರು ಬೆಂಗಳೂರು ಇವರ ನೇತೃತ್ವದಲ್ಲಿ  ರವಿ ಸಿಂಗ್ ಹಾಗೂ ನಿಧಿ ಆಹುಜ, ಜಗನ್, ವಾಹಿದ್, ಜಗನ್ ಹಾಗೂ ಶಾಲಾ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಹುಳಿಮಾವಿನ ಸಮರ್ಥನಂ ವಿಕಲಚೇತನ ಮಕ್ಕಳ ಶಾಲೆ’ಯಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಅಬ್ದುಲ್ ಬೇಗೂರು ಈಗಾಗಲೇ ಅನೇಕ ರೀತಿಯಲ್ಲಿ ಸಾಮಾಜಿಕ ಸೇವೆಗಳಲ್ಲಿ ತೊಡಗಿದ್ದು, ಕೋವಿಡ್ ಸಮಯದಲ್ಲಿ  ಅನೇಕರಿಗೆ ನಾನಾ ವಿಧದಲ್ಲಿ ಸಹಾಯವನ್ನು ಮಾಡಿದ್ದಾರೆ. ಅಬ್ದುಲ್ ಬೇಗೂರು, ರವಿ ಸಿಂಗ್, ನಿಧಿ ಅಹುಜ ಈ ಮೂವರು ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಮಾನವೀಯತೆ ಮೆರೆಯುತ್ತಿದ್ದಾರೆ. ರವಿ ಸಿಂಗ್ ಅವರ ಧರ್ಮಪತ್ನಿ ನಿಧಿ ಆಹುಜ ಅವರು ಕೂಡ ಈ ಸಾಮಾಜಿಕ ಕೆಲಸಗಳಿಗೆ ಕೈ ಜೋಡಿಸಿದ್ದಾರೆ. ಎಲ್ಲರೂ ನಮ್ಮ ಹೊಟ್ಟೆ ತುಂಬಿದರೆ ಸಾಕು ಎಂದು ಸುಮ್ಮನಿರುತ್ತಾರೆ. ಆದರೆ ಈ ಸಾಮಾಜಿಕ ಸೇವೆಯನ್ನು ಮಾಡುತ್ತಿರುವ ಕೈಗಳು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಾಡುತ್ತಿದ್ದು, ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಬೆಂಗಳೂರು:  ಫ್ರೀಡಂಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಸೂಕ್ತ ಪೋಲಿಸ್  ಬಂದೋಬಸ್ತ್ ನೀಡುವಂತೆ  ಉಪ್ಪಾರ್ ಪೇಟೆ ಪೊಲೀಸ್ ಠಾಣೆ ಡಿಸಿಪಿ ಅವರಿಗೆ ಹಿರಿಯೂರು ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಮಾಡಲಾಯಿತು. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮಾರ್ಚ್ 15ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪ್ರತಿಭಟನೆಗೆ ಸೂಕ್ತ ಭದ್ರತೆ ಒದಗಿಸುವಂತೆ ಉಪ್ಪಾರ್ ಪೇಟೆ ಪೊಲೀಸ್ ಠಾಣೆ ಡಿಸಿಪಿಗೆ ಮನವಿ ಮಾಡಲಾಯಿತು. ಸಮಾಜ ಸೇವಾ ರತ್ನ ಡಾ.ಹೆಚ್.ಎಸ್. ಬಿರಾವರ್ ರವರ ನೇತೃತ್ವದಲ್ಲಿ ಹಿರಿಯೂರು ತಾಲ್ಲೂಕಿನ ಭಾರತೀಯ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು.  ಹಿರಿಯೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಪಿಐ ರವಿ ಅವರು ಪ್ರಸ್ತುತ ಉಪ್ಪಾರ್ ಪೇಟೆ ಎಸಿಪಿ ಆಗಿದ್ದು, ಇದೇ ವೇಳೆ ರವಿ ಅವರಿಗೆ  ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ  ಸನ್ಮಾನಿಸಲಾಯಿತು. ವರದಿ: ಮುರುಳಿಧರನ್ ಆರ್.,  (  ಚಿತ್ರದುರ್ಗ-…

Read More

ನವದೆಹಲಿ: ರಾಜ್ಯದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆ ಸಿದ್ಧತೆಗಾಗಿ ಕಾಂಗ್ರೆಸ್ ಹೈಕಮಾಂಡ್ ಕಡೆಯಿಂದಲೇ ರಾಜ್ಯಕ್ಕೆ ‘ ಚುನಾವಣಾ ಸಿದ್ಧತಾ ತಂಡ ಕಳುಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ರಾಜ್ಯ ಕಾಂಗ್ರೆಸ್‌ನಾಯಕರಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು  ತಿಳಿದುಬಂದಿದೆ . ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಶಮನಗೊಳಿಸುವ ಹಾಗೂ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಶತಾಯ ಗತಾಯ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಗುರುವಾರ ರಾಹುಲ್‌ ಗಾಂಧಿ ಅವರು ದೆಹಲಿಯ ತಮ ನಿವಾಸದಲ್ಲಿ ರಾಜ್ಯ ನಾಯಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು . ಈ ವೇಳೆ ಮುಂಬರುವ ಚುನಾ ವಣೆ ದೃಷ್ಟಿಯಿಂದ ಅಧ್ಯಯನ ನಡೆಸಲು , ರಣತಂತ್ರ ರೂಪಿಸಲು ಹಾಗೂ ಚುನಾವಣೆಯಲ್ಲಿ ಗೆಲ್ಲಲು ಕೈಗೊ ಳ್ಳಬೇಕಾದ ಕ್ರಮಗಳ ಕುರಿತು ಕೆಪಿಸಿಸಿ , ಎಐಸಿಸಿಗೆ ಸಲಹೆ ನೀಡಲು ಅನುವಾಗುವಂತೆ ಚುನಾವಣಾ ಸಿದ್ಧತಾ ತಂಡ ರಚನೆಯಾಗಲಿದೆ . ಈ ತಂಡ ಕಾಲ ಕಾಲಕ್ಕೆ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಸರ್ಕಾರದ ವಿರುದ್ಧದ ಯಾವೆಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕು ಎಂಬ…

Read More

ಮಾಯಸಂದ್ರ: ಫೆಬ್ರವರಿ 27ರಂದು ರಾಜ್ಯದ ವಿವಿಧೆಡೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಇರುವುದರಿಂದ ಎಲ್ಲೆಡೆ ಇಂದು ಜಾಥ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತುರುವೇಕೆರೆ ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಜಾಥಾ ಕಾರ್ಯಕ್ರಮ ನಡೆಯಿತು. ಆಶಾ ಕಾರ್ಯಕರ್ತರು ಮತ್ತು ಶಾಲಾ ಶಿಕ್ಷಕರು ಮಕ್ಕಳ ಜೊತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜಾಥಾ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾದ  ಶ್ರೀ ಸಿದ್ದರಾಮಯ್ಯ ( CBS ) ,ಆಶಾ ಕಾರ್ಯಕರ್ತರಾದ  ಭಾಗ್ಯಮ್ಮನವರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ: ವೆಂಕಟೇಶ ಜೆ ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಸಿರಾ:  ಕಾರು ಅಪಘಾತಗೊಂಡು ಕಾರಿನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ವಾಣಿಜ್ಯೋದ್ಯಮಿ ಕೆ.ಸಿ.ವೀರೇಂದ್ರ ಪಪ್ಪಿ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತುಮಕೂರು ಜಿಲ್ಲೆಯ ಸಿರಾ ಸಮೀಪ ಕಾರು ಮಗುಚಿ ಬಿದ್ದಿದ್ದು, ಈ ಘಟನೆಯನ್ನು ಗಮನಿಸಿದ ಕೆ.ಸಿ.ವೀರೇಂದ್ರ ಪಪ್ಪಿ ಅವರು ತಕ್ಷಣವೇ ವ್ಯಕ್ತಿಯನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇನ್ನೂ ಕೆ.ಸಿ.ವೀರೇಂದ್ರ ಪಪ್ಪಿ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಿ: ಮುರುಳಿಧರನ್ ಆರ್.,  ಹಿರಿಯೂರು ( ಚಿತ್ರದುರ್ಗ – ದಾವಣಗೆರೆ ). ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು: ಸದನದ ಕಲಾಪ ವ್ಯರ್ಥ ಮಾಡಿದ ಕಾಂಗ್ರೆಸ್ ಹಾಗೂ ಹರ್ಷ ಹತ್ಯೆ ಖಂಡಿಸಿ ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ನಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಜ್ಯೋತಿ ಗಣೇಶ್,  ಕಾಂಗ್ರೆಸ್  ನವರು ಕೇವಲ ತಮ್ಮ ಒಂದು ಹುಳುಕನ್ನು ಮರೆಮಾಚಲು ಅಮೂಲ್ಯವಾದ ಕಾರ್ಯಕಲಾಪಗಳ ಸಮಯವನ್ನು ನುಂಗಿಹಾಕಿ ಮಂಗಳವಾರ ಮತ್ತು ಬುಧವಾರದಿಂದ ಗಲಾಟೆಯನ್ನು ಮಾಡಿ ಕಲಾಪವನ್ನು ಹಾಳುಮಾಡುತ್ತಿದ್ದಾರೆ. ದೇಶದ ರಾಜ್ಯದ ಮತ್ತು ಜನರ ಕಷ್ಟಗಳನ್ನು ಚರ್ಚೆ ಮಾಡುವುದಕ್ಕೆ ಅವಕಾಶ ಕೊಡದೆ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ವಿರೋಧವಾಗಿ ಕಾಂಗ್ರೆಸ್ ವರ್ತಿಸುತ್ತಿದೆ. ಹಿಜಾಬಿನ  ವಿಚಾರವನ್ನು ಮರೆಮಾಚಲು ಕೋರ್ಟಿನ ಮಧ್ಯಾಂತರ ಆದೇಶ ಇದ್ದರೂ ಕೂಡ ಎಲ್ಲೋ ಒಂದು ಕಡೆ ರಿವರ್ಸ್ ಆಗುತ್ತದೆ ಎಂದು ಹೇಳಿ ಈ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಈಶ್ವರಪ್ಪನವರ ಹೇಳಿಕೆ ಇಟ್ಟುಕೊಂಡು ಐದಾರು ದಿವಸಗಳಿಂದ ಸದನವನ್ನು ಹಾಳುಮಾಡುತ್ತಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಬಿಜೆಪಿಗೆ ಯಾರು ಕೂಡ ಪಾಠ ಕಲಿಸಿ ಕೊಡಬೇಕಾಗಿಲ್ಲ.…

Read More