Author: admin

ಶಿವಮೊಗ್ಗದಲ್ಲಿ ಪ್ರಾರಂಭವಾಗಿ ಕೋಮು ಕಲಹಕ್ಕೆ ಕಾರಣವಾಗಿರುವ ಫ್ಲೆಕ್ಸ್‌ ವಿವಾದ ಇದೀಗ ತುಮಕೂರಿನಲ್ಲಿ ಬಿಗುವಿನ ವಾತಾವರಣ ಸೃಷ್ಠಿಗೆ ಕಾರಣವಾಗಿದೆ. ತುಮಕೂರು ನಗರದಲ್ಲಿ ಸಾವರ್ಕರ್ ಫ್ಲೆಕ್ಸ್ ವಿವಾದ ಬಿಸಿಯೇರಿದ್ದು, ನಗರದ ಟೌನ್ ಹಾಲ್ ವೃತ್ತದಲ್ಲಿನ ಸಾವರ್ಕರ್ ಫ್ಲೆಕ್ಸ್’ಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಅಶೋಕ ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಾವರ್ಕರ್ ಫ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ನಗರದ ಟೌನ್‌ಹಾಲ್ ವೃತ್ತದಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಿದ್ದಾರೆ. ಸದರಿ ಗಣಪತಿ ದೇವಸ್ಥಾನದ ಎದುರು ದರ್ಗಾ ಇದ್ದು, ಶಾಂತಿ ಕದಡುವ ಆತಂಕ ಇದೆ‌. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದಲೇ ಫ್ಲೆಕ್ಸ್ ಬಳಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಈಗಾಗಲೇ ಫ್ಲೆಕ್ಸ್ ವಿಚಾರವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಉಂಟಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದೆ. ಇದರ ಬೆನ್ನಲ್ಲೇ ತುಮಕೂರು ನಗರದಲ್ಲಿ ಕೂಡ ಫ್ಲೆಕ್ಸ್ ವಿಚಾರದಲ್ಲಿ ವಿವಾದ ಏರ್ಪಡುತ್ತಿರುವುದು ಸಾರ್ವಜನಿಕವಾಗಿ ಆತಂಕಕ್ಕೆ ಕಾರಣವಾಗಿದೆ. ಸದ್ಯ ಪೊಲೀಸರು…

Read More

ಗದಗ : ಮಲಗಿದ್ದ ತಂದೆಯ ತಲೆಗೆ ಕೊಡಲಿಯಿಂದ ಹೊಡೆದು ಸ್ವಂತ ಮಗನೇ ಹತ್ಯೆ ಮಾಡಿರುವ ಘಟನೆ ಗದಗ ತಾಲೂಕಿನ ಹುಲಕೋಟೆ ಗ್ರಾಮದಲ್ಲಿ ನಡೆದಿದೆ. ಕುಡಿದು ಗಲಾಟೆ ಮಾ ಡುತ್ತಿದ್ದ ತಂದೆಯ ವರ್ತನೆಯಿಂದ ಬೇಸತ್ತ ಮಗ ಈ ಕೃತ್ಯ ಎಸಗಿದ್ದಾನೆ. ತಂದೆಯನ್ನೇ ಕೊಲೆ ಮಾಡಿದ ಮಗನನ್ನು ವಿಜಯ್ ಚಿಕ್ಕನಟ್ಟಿ ಎಂದು ಗುರುತಿಸಲಾಗಿದೆ. ಇನ್ನು ಗಣೇಶ್ ಚಿಕ್ಕನಟ್ಟಿ ಮಗನಿಂದ ಹತನಾದ ತಂದೆ. 51 ವರ್ಷದ ಗಣೇಶ್ ಕಳೆದ ಕೆಲ ವರ್ಷದಿಂದ ಕುಡಿತದ ದಾಸನಾಗಿದ್ದ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಗಣೇಶ್, ಸಂಜೆ ಆಗುತ್ತಿದ್ದಂತೆಯೇ ಕಂಠಪೂರ್ತಿ ಕುಡಿದು ಕಿರಿಕ್ ಶುರು ಮಾಡುತ್ತಿದ್ದ. ಕುಡಿದು ಬಂದು ಹೆಂಡತಿ ಮಕ್ಕಳನ್ನ ಪೀಡಿಸೋದು ಗಣೇಶನ ನಿತ್ಯದ ಕಾಯಕವಾಗಿತ್ತು. ಇದರಿಂದ ಬೇಸತ್ತಿದ್ದ ಗಣೇಶನ ಕಿರಿಯ ಮಗ, ಊರು ಬಿಟ್ಟು ಅಕ್ಕನ ಮನೆ ಸೇರಿದ್ದ ಆದರೆ ಹಿರಿಯ ಮಗ ಊರಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದು, ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದ. ದಿನ ನಿತ್ಯ ಈ ರೀತಿ ಕಿರಿ ಕಿರಿ ಮಾಡುತ್ತಿದ್ದ ತಂದೆಯ ಕೃತ್ಯದಿಂದ ವಿಜಯ್…

Read More

ಮಂಕಿಪಾಕ್ಸ್ ಪ್ರಕರಣಗಳ ಬಗ್ಗೆ ಡಬ್ಲ್ಯುಎಚ್‌ಒ ಎಚ್ಚರಿಕೆ: ವಿಶ್ವದಾದ್ಯಂತ ಮಂಗನ ಕಾಯಿಲೆಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದುವರೆಗೆ ಮಂಗನ ಕಾಯಿಲೆ ಸೋಂಕಿತ ರೋಗಿಗಳ ಸಂಖ್ಯೆ 35000 ಕ್ಕೆ ಏರಿದೆ. ಕಳೆದ ಒಂದು ವಾರದಲ್ಲಿ 7500 ಹೊಸ ರೋಗಿಗಳು ಪತ್ತೆಯಾಗಿದೆ. ಈ ನಡುವೆ ಮನುಷ್ಯರಿಂದ ನಾಯಿಗೆ ಮಂಗನ ಕಾಯಿಲೆ ಹರಡಿರುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ, ಮಾನವನಿಂದ ನಾಯಿಗೆ ಮೊದಲ ಬಾರಿಗೆ ಮಂಕಿಪಾಕ್ಸ್ ಸೋಂಕು ಹರಡಿರುವ ಬಗ್ಗೆ ವರದಿ ಆಗಿದೆ. ಇದು ವಿಶ್ವದ ಮೊದಲ ಅಪರೂಪದ ಪ್ರಕರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಮಂಕಿಪಾಕ್ಸ್ ಸೋಂಕು ಮನುಷ್ಯರಿಂದ ನಾಯಿಗೆ ಹರಡುವುದು ಗಂಭೀರ ಪ್ರಕರಣ: ಸುದ್ದಿ ಸಂಸ್ಥೆ ಎಎಫ್‌ಪಿ ಪ್ರಕಾರ, ಮಾನವನಿಂದ ನಾಯಿಗೆ ವೈರಸ್ ಹರಡುವ ಪ್ರಕರಣ ಬೆಳಕಿಗೆ ಬಂದ ನಂತರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ. ಮಂಗನ ಕಾಯಿಲೆಯಿಂದ ಬಳಲುತ್ತಿರುವ ಜನರು ಪ್ರಾಣಿಗಳ ಸಂಪರ್ಕಕ್ಕೆ ಬರದಂತೆ ಡಬ್ಲ್ಯುಎಚ್‌ಒ ಸಲಹೆ ನೀಡಿದೆ.…

Read More

ಉತ್ತರ ಕನ್ನಡ : ಜಿಲ್ಲೆಯ ಯಲ್ಲಾಪುರದ ಅರಣ್ಯವಲಯದಲ್ಲಿ ಅಪರೂಪ ಹಾಗೂ ಹೊಸ ಪ್ರಬೇಧದ ಸಿಹಿ ನೀರಿನ ಏಡಿ ಪತ್ತೆಯಾಗಿದೆ. ಬಿಳಿ ಮೈ ಬಣ್ಣ ಮತ್ತು ನೇರಳೆ ಬಣ್ಣದ ಕಾಲುಗಳನ್ನ ಹೊಂದಿರುವ ಈ ಏಡಿಯನ್ನು ಘಾಟಿಯಾನ ದ್ವೀವರಣ ಎಂದು ಸೈಂಟಿಫಿಕ್ ಹೆಸರು ನಾಮಕರಣ ಮಾಡಲಾಗಿದೆ. ಕಪ್ಪು ಕಣ್ಣು, ಬಿಳಿ ಬಣ್ಣದ ಕೊಕ್ಕೆ, ನೇರಳೆ ಬಣ್ಣದ ನೀಳ ಕಾಲುಗಳನ್ನು ಹೊಂದಿರುವ ಅಪರೂಪದ ಏಡಿಯಾಗಿದೆ. ಹೊಸ ಪ್ರಬೇಧದ ಏಡಿ ಕಂಡು ಅರಣ್ಯ ಅಧಿಕಾರಿಗಳು ತಮ್ಮ ಕ್ಯಾಮಾರದಲ್ಲಿ ಏಡಿಯ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ಎಲ್ಲಾ ಶಾಲೆ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ ಅನುದಾನರಹಿತ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿ ದಿನ ಸಾಮೂಹಿಕ ಪ್ರಾರ್ಥನೆ ವೇಳೆಯಲ್ಲಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರಗೀತೆ ಹಾಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರದ ಬಗ್ಗೆ ಗೌರವದ ಭಾವನೆಗಳನ್ನ ಮೂಡಿಸಬೇಕು ಎಂದು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ಬೈಕ್ ಸವಾರನ ಹುಚ್ಚಾಟಕ್ಕೆ 4 ವರ್ಷದ ಬಾಲಕ ಬಲಿಯಾದ ಘಟನೆ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮಹಾಂತೇಶ ನಗರದಲ್ಲಿ ನಡೆದಿದೆ. ಮೃತ ಬಾಲಕನನ್ನು ಅಜಯ್ ಸುಭಾಷ್ (4) ಎಂದು ಗುರುತಿಸಲಾಗಿದೆ. ಮೃತ ಅಜಯ್ ಗೇಟ್ ತೆಗೆಯುತ್ತಿದ್ದಾಗ ವೇಗವಾಗಿ ಬಂದ ಬೈಕ್ ಸವಾರ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಗೇಟ್ ಸಮೇತವಾಗಿ ಗೋಡೆ ಬಾಲಕನ ಮೇಲೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿಪಟೂರು: ನಗರದ ಸತ್ಯ ಗಣಪತಿ ಆಸ್ಥಾನ ಮಂಟಪದ ಆವರಣದಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವ ಸಮಾರಂಭ ನಡೆಯಿತು. ಈ ವೇಳೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮೊಬೈಲ್ ಬ್ಯಾಂಕಿಂಗ್ ಸೇವೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಹಕಾರಿ ಸಂಘಗಳು ಎಲ್ಲಾ ವರ್ಗದ ಜನರಿಗೂ ಸೇವೆ ನೀಡುತ್ತಾ ಬಂದಿದೆ, ಒಂದು ಬ್ಯಾಂಕ್ ಮಾಡಿದ ತಪ್ಪಿಗೆ ಬೇರೆ ಬ್ಯಾಂಕುಗಳಿಗೆ ಕೆಟ್ಟ ಹೆಸರು ಬರಬಾರದು ಎಂದು ಸೋಮಶೇಖರ್ ತಿಳಿಸಿದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ದೇಶದ ಆರ್ಥಿಕ ಪ್ರಗತಿಗೆ ಸಹಕಾರ ಸಂಘಗಳು ಸಹಕಾರಿಯಾಗಿದೆ ಎಂದರು. ಬ್ಯಾಂಕ್ ನ ಅಧ್ಯಕ್ಷ ಬಾಗೇಪಲ್ಲಿ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಸಮಾಜ ಸೇವೆಯನ್ನು ಗುರುತಿಸಿ ನಿವೃತ್ತ ಎಸಿಪಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ನಗರಸಭೆಯ ಅಧ್ಯಕ್ಷರಾದ ರಾಮ್ ಮೋಹನ್, ಬ್ಯಾಂಕ್ ನ ಉಪಾಧ್ಯಕ್ಷ ಬಿ.ಎಸ್.ನಾಗೇಂದ್ರ ಗುಪ್ತ, ಸಿ.ಎಸ್. ಹರಿ , ಬಾಬು, ಶಿವಶಂಕರ್, ಬ್ಯಾಂಕ್ ನ ಸಿಇಒ ಟಿಪಿ ಚಂದನ್ ಹಾಗೂ ಬ್ಯಾಂಕ್ ನ ಶೇರುದಾರರು ಸಿಬ್ಬಂದಿಯವರು ಉಪಸ್ಥಿತರಿದ್ದರು. ವರದಿ: ಆನಂದ್ ತಿಪಟೂರು…

Read More

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸುಪ್ರಸಿದ್ಧ ಮುಧೋಳದ ನಾಯಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ವಿಶೇಷ ರಕ್ಷಣಾ ಗುಂಪಿನ (ಎಸ್ಪಿಜಿ) ಭಾಗವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತಿಮ್ಮಾಪುರದ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರಾಗಿರುವ ಡಾ.ಸುಶಾಂತ್ ಹಂದಗೆ ಎರಡು ತಿಂಗಳ ವಯಸ್ಸಿನ ಎರಡು ಗಂಡು ಮುಧೋಳ ಮರಿಗಳನ್ನು ಏಪ್ರಿಲ್ 25, 2022 ರಂದು ಎಸ್ಪಿಜಿಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಅಂತ ಹೇಳಿದ್ದಾರೆ. ಏಪ್ರಿಲ್ 25 ರಂದು ನಾಯಿಮರಿಗಳನ್ನು ಸಂಗ್ರಹಿಸಲು ಎಸ್ಪಿಜಿಯ ಪಶುವೈದ್ಯರು ಮತ್ತು ಇಬ್ಬರು ತರಬೇತುದಾರರು ಬಂದಿದ್ದರು ಸೂಕ್ಷ್ಮತೆಯಿಂದಾಗಿ, ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳದಂತೆ ನಮ್ಮನ್ನು ಕೇಳಲಾಗಿದೆ ಅಂಥ ಅವರು ಇದೇ ವೇಳೆ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಳಗಾವಿ : ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಕಸಾಯಿಖಾನೆ, ಮಾಂಸಾಹಾರಿ ಅಂಗಡಿಗಳನ್ನು ಆ 19 ಬಂದ್ ಮಾಡಬೇಕು. ಆ.19 ರಂದು ಕಸಾಯಿಖಾನೆ/ ಮಾಂಸಾಹಾರಿ ಅಂಗಡಿ ತೆರದರೆ ಅಂತಹ ಮಾಲೀಕರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಮಂಡ್ಯ: ತಾಲ್ಲೂಕಿನ ಬಸರಾಳು ಹೋಬಳಿಯ ಮುತ್ತೇಗೆರೆ ಪಂಚಾಯತಿಯ ಆಡಳಿತ ವ್ಯವಸ್ಥೆ ವಿರುದ್ಧ ಗ್ರಾಮ ಪಂಚಾಯತ್ ಸದಸ್ಯರು ಶಿವಕುಮಾರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪಂಚಾಯತ್ ನಲ್ಲಿ ಎರಡು ವರ್ಷಗಳಿಂದ  ಯಾವುದೇ ಅಭಿವೃದ್ಧಿ ಕಂಡಿಲ್ಲ, ಹುನುಗನಹಳ್ಳಿ  ಎಸ್ ಸಿ ಕಾಲೋನಿ ತೊಂಬೆ ಹಾಕಿ ಎರಡು ವರ್ಷ ಆದರು ನೀರೇ ಕಂಡಿಲ್ಲ.  PDO ಇದ್ದರು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಎರಡು ವರ್ಷಗಳಾದರು ಬಿಲ್ ಕಲೆಕ್ಟರ್ ಮತ್ತು ಕಾರ್ಯದರ್ಶಿಗಳು ಇಲ್ಲದೆ ಪಂಚಾಯಿತಿ ಅವ್ಯವಸ್ಥೆಯಿಂದ ಕೂಡಿದೆ.  ನಡವಳಿಕೆ ಪುಸ್ತಕದಲ್ಲಿ ಸಾಮಗ್ರಿ ಸೇರಿಸಿಲ್ಲ,  ಬೀದಿ ದೀಪ ಖರೀದಿಯ ಬಿಲ್ ಇಲ್ಲ,  ನಡುವಳಿ ಪುಸ್ತಕ ಹಾಗೂ ಬ್ಯಾಂಕ್ ಪಾಸ್ ಬುಕ್ ವ್ಯತ್ಯಾಸ ಕಂಡುಬಂದಿದೆ. ಆಡಳಿತ ಅಧಿಕಾರಿಗಳು ಅಧಿಕಾರ ಹಸ್ತಾಂತರ ಮಾಡುವಾಗ ಯಾವುದೇ ಬಾಕಿ ಮೊತ್ತ ತೋರಿಸುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಪಂಚಾಯತ್ ನ ದಾಖಲಾತಿ ಅಂಶಗಳನ್ನು ಸರಿಯಾಗಿ ಪರಿಶೀಲನೆ ನಡೆಸಿದರೆ, ಇಲ್ಲಿ ನಡೆಯುವ ಕರ್ಮಕಾಂಡಗಳು ಬಯಲಾಗಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದು, ತಪ್ಪಿತಸ್ಥರಿಗೆ ಕಾನೂನು ರೀತಿಯ ಶಿಕ್ಷೆಯಾಗಬೇಕು…

Read More