Author: admin

ತುಮಕೂರು: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವುದರ ಮೂಲಕ ಸಮಾನತೆಯ ಬದುಕನ್ನು ನಡೆಸಬೇಕೆಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಬಂಡೆ ಕುಮಾರ್ ತಿಳಿಸಿದರು. ನಗರದ ಗುಂಚಿ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ರವರ 65ನೇ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಾನತೆಯ ಸಾಮಾಜಿಕ ಹರಿಕಾರರಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬದುಕು ಅನುಕರಣೀಯ ಮತ್ತು ಆದರ್ಶಪ್ರಾಯವಾಗಿದೆ. ಅವರ ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ, ಶಾಂತಿ, ಭ್ರಾತೃತ್ವದ ಭಾವನೆಯಿಂದ ಬದುಕಬೇಕು. ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕಿ, ಸರ್ವರೂ ಸಮಾನರು ಎಂದು ಭಾವಿಸಿದಾಗ ಅಂಬೇಡ್ಕರ್ ರವರ ಕನಸು ಈಡೇರಿಸಿದಂತಾಗುತ್ತದೆ ಎಂದರು. ಸಂವಿಧಾನವು ಅತ್ಯಂತ ಮಹತ್ವ ಮತ್ತು ಪವಿತ್ರವಾದದ್ದು, ಅದರ ಆಶಯಗಳಿಗನುಗುಣವಾಗಿ ಪ್ರತಿಯೊಬ್ಬ ನಾಗರಿಕರು ಸಹ ದೇಶದಲ್ಲಿ ಬದುಕ ಬೇಕಾದದ್ದು ಅವರ ಕರ್ತವ್ಯವಾಗಿದೆ. ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುವುದು, ಪ್ರತೀ ಭಾರತೀಯನ ಕರ್ತವ್ಯವಾದ್ದರಿಂದ ಅದನ್ನು ರಕ್ಷಿಸುವ ಮತ್ತು…

Read More

ಮಧುಗಿರಿ: ಪಟ್ಟಣದ ಎಂ.ಎನ್.ಕೆ.  ಸಮುದಾಯ ಭವನದಲ್ಲಿ   ಜಿಲ್ಲಾ  ಪಂಚಾಯಿತಿ   ಮಾಜಿ  ಸದಸ್ಯ  ಹೆಚ್.  ಕೆಂಚಮಾರಯ್ಯ  ಮತ್ತು   ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್   ಸುದ್ದಿಗೋಷ್ಠಿ ನಡೆಸಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆರ್.ರಾಜೇಂದ್ರ ರವರ ಪರವಾಗಿ  ಮತಯಾಚಿಸಿದರು. ಕೆಂಚ ಮಾರಯ್ಯ  ಮಾತನಾಡಿ, ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ವಿಚಾರವಾಗಿ ಸಂಪೂರ್ಣವಾಗಿ ವಿಫಲವಾಗಿದ್ದು, ಎಸ್ .ಇ .ಪಿ ಮತ್ತು   ಟಿ.ಎಸ್ .ಪಿ. ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ 88 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದರು, ಆದರೆ  ಬಿಜೆಪಿ ಸರ್ಕಾರ 28 ಸಾವಿರ ರೂಪಾಯಿ ಮೀಸಲಿಟ್ಟು ಬಿಜೆಪಿ ದಲಿತರ ಪರ  ಇಲ್ಲ ಎಂದು ತೋರಿಸಿದೆ. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿಯೂ ಸಹ ಅನ್ಯಾಯ ಮಾಡಿದೆ  ಹಾಗೂ ಬಿಟ್ ಕಾಯಿನ್ ಹಗರಣನವು  ಸರ್ಕಾರದ ವೈಫಲ್ಯತೆಯನ್ನು  ಎತ್ತಿ  ತೋರಿಸುತ್ತಿದೆ. ರಾಜ್ಯ  ಗುತ್ತಿಗೆದಾರರ ಸಂಘದ ವತಿಯಿಂದ ರಾಜ್ಯ ಸರ್ಕಾರ ವಿರುದ್ಧ ಶೇಖರ 40% ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ  ಪತ್ರದ…

Read More

ಗುಬ್ಬಿ: ಭಾರತೀಯ ಜನತಾ ಪಾರ್ಟಿಯ ಗುಬ್ಬಿ ಮಂಡಲದ ವತಿಯಿಂದ ಇಂದು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಮಹಾಪರಿನಿಬ್ಬಾಣ ದಿನವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಯತೀಶ್, ಪ.ಪಂ. ಅಧ್ಯಕ್ಷರಾದ  ಅಣ್ಣಪ್ಪಸ್ವಾಮಿ ಸದಸ್ಯರಾದ ಶಶಿ ಹಾಗೂ ನಮ್ಮ ಭಾಜಪಾದ ಹಲವು ಕಾರ್ಯಕರ್ತರು ಹಾಜರಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ನಗರದ  ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜಿಗೆ ಸ್ವಂತ ನಿವೇಶನ ನೀಡುವಂತೆ ಸಾಕಷ್ಟು ಮನವಿ ಸಲ್ಲಿಸಿದರೂ, ತುಮಕೂರಿನ ತಹಸೀಲ್ದಾರ್ ಅವರು ಸರ್ಕಾರಿ ಜಾಗ ಲಭ್ಯವಿಲ್ಲ ಎಂದು ವರದಿ ಸಲ್ಲಿಸಿ ಕೈ ಚೆಲ್ಲಿರುವುದರ ವಿರುದ್ಧ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಹಂದ್ರಾಳ್ ನಾಗಭೂಷಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ನಗರದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜಿಗೆ ಸ್ವಂತ ನಿವೇಶನ ನೀಡುವಂತೆ ಒತ್ತಾಯಿಸಿ ಮಹಾವಿದ್ಯಾಲಯ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘ ಸಾಕಷ್ಟು ಪತ್ರ ವ್ಯವಹಾರ ನಡೆಸಿದರೂ, ಫಲಕೊಡದ ಹಿನ್ನೆಲೆಯಲ್ಲಿ ಭಾನುವಾರ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಹಂದ್ರಾಳ್ ನಾಗಭೂಷಣ್ ನಾಗಭೂಷಣ್ ಅವರನ್ನು ಭೇಟಿ ಮಾಡಿ, ಈ ಸಂಬಂಧ  ಕಾಲೇಜಿಗೆ ಬೆಂಬಲ ನೀಡುವಂತೆ ಸಂಘದ ಅಧ್ಯಕ್ಷರಾದ ನಟರಾಜು ಜಿ.ಎಲ್. ಹಾಗೂ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಮನವಿ ಮಾಡಿದರು. ಬಳಿಕ ಈ ಸಂಬಂಧ ಮಾತನಾಡಿದ ಹಂದ್ರಾಳ್ ನಾಗಭೂಷಣ್,  ತುಮಕೂರು ಜಿಲ್ಲೆಯು ಕಲೆಗೆ ಹೆಸರಾದ ಜಿಲ್ಲೆ, ರಾಜ್ಯದಲ್ಲಿ ಕಲಾವಿದರ ಸಾಲಿನಲ್ಲಿ ಪ್ರಖ್ಯಾತಿ ಪಡೆದ ಗುಬ್ಬಿ…

Read More

ಮಧುಗಿರಿ: ತಾಲೂಕಿನ ಕಸಬಾ ಹಾಗೂ ಕೊಡಿಗೇನಹಳ್ಳಿ ಹೋಬಳಿಯ ಶೆಟ್ಟಿ ಹಳ್ಳಿ ಹಾಗೂ ದೊಡ್ಡಮಾಲೂರು ಗ್ರಾಮಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳೇ ಇಲ್ಲದೇ ಜನರು ಸಂಕಷ್ಟಕ್ಕೀಡಾಗಿದ್ದು, ಇಲ್ಲಿನ ಜನರು ವಾಸವಿರುವ ಮನೆಯ ಮುಂದೆಯೇ ಕೊಳಚೆ ನೀರು ಹರಿಯುತ್ತಿದ್ದು, ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತಿದ್ದು, ಇಲ್ಲಿ ಸಣ್ಣ ಮಕ್ಕಳು ಬರಿಗಾಲಿನಲ್ಲಿಯೇ ಆಟವಾಡುತ್ತಾ ಹೋಗುತ್ತಿರುತ್ತಾರೆ. ಸೊಳ್ಳೆ, ನೊಣಗಳ ಕಾಟವಂತೂ ಹೇಳತೀರದು. ಈ ಭಾಗದಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ರೀತಿಯ ಸಮಸ್ಯೆ ತಲೆದೋರಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್, ಮಧುಗಿರಿ ತಾಲ್ಲೂಕು ಕಸಬಾ ಹಾಗೂ ಕೊಡಿಗೇನಹಳ್ಳಿ ಹೋಬಳಿಯ ಶೆಟ್ಟಿಹಳ್ಳಿ ಹಾಗೂ ದೊಡ್ಡಮಾಲೂರು ಗ್ರಾಮಗಳ ಈ ಕಣಿವೆಗಳನ್ನು ಸರಿಪಡಿಸಲು ಸ್ಥಳೀಯ ಅಧಿಕಾರಿಗಳು ಸುಮಾರು ಐದು ವರ್ಷಗಳಿಂದ ಅನುದಾನವಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ದಯಮಾಡಿ ಮಧುಗಿರಿ ತಾ.ಪಂ EO ಹಾಗೂ ತುಮಕೂರು ಸಮಾಜ ಕಲ್ಯಾಣ ಇಲಾಖೆಯ JD/DDರವರು…

Read More

ತುಮಕೂರು: ಕನ್ನಡ ನಾಡು ನುಡಿ ಸಂರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗನೂ ಕಂಕಣ ಬದ್ದರಾಗುವಂತೆ ನಗರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಕರೆ ನೀಡಿದರು. ನಗರದ ಉಪ್ಪಾರಹಳ್ಳಿ ಆಟೋ ನಿಲ್ದಾಣದಲ್ಲಿ ಉಪ್ಪಾರಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿ, ಕಟ್ಟಡ ಕಾರ್ಮಿಕರ ಸಂಘ ಹಾಗೂ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪ್ರತಿಯೊಬ್ಬ ಕನ್ನಡಿಗನೂ ಕೆಚ್ಚದೆಯ ಕನ್ನಡಿಗನಾಗಿ ನಾಡು ನುಡಿ ನೆಲ ಜಲವನ್ನು ಸಂರಕ್ಷಸುವ ಕಾರ್ಯ ಮಾಡುವ ಸಂಕಲ್ಪ ತೊಟ್ಟು ರಾಜ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಅಂತರಾಳದಿಂದ ನಾಡಗೌರವವಿಟ್ಟು ಈ ಮಣ್ಣಿನ ಋಣ ತೀರಿಸಬೇಕು. ಎಂತಹುದೇ ಸಂದರ್ಭದಲ್ಲಿಯೂ ನಮ್ಮ ನಾಡ ರಕ್ಷಣೆಗಾಗಿ ನಮ್ಮನ್ನು ನಾವು ಮೀಸಲಿಟ್ಟು ತಾಯಿ ಭುವನೇಶ್ವರಿಯ ರಥವನ್ನು ನಿತ್ಯ ಎಳೆಯುವುದರ ಮೂಲಕ ಪ್ರತೀ ದಿನ ನಿತ್ಯೋತ್ಸವವನ್ನು ಆಚರಿಸಬೇಕೆಂದು ಕರೆ ನೀಡಿದರು‌.  ಈ ಸಂದರ್ಭದಲ್ಲಿ ಸಮಿತಿಯ ಮಾರ್ಕೆಟ್ ಕುಮಾರ್, ಶಂಕರ್, ಸೇರಿದಂತೆ ಹಲವು ಮುಖಂಡರು…

Read More

ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿಯಲ್ಲಿ ಸುರಿದ ಮಳೆಯಿಂದಾಗಿ ಸುಮಾರು 3ರಿಂದ 4 ಮನೆಗಳು ಶಿಥಿಲಾವ್ಯವಸ್ಥೆಗೊಂಡಿದ್ದು, ಮಳೆಯಿಂದ ಗೋಡೆಗಳು ನನೆದು ಪೂರ್ತಿಯಾಗಿ ಮನೆಗಳು ಬಿದ್ದು ಹೋಗಿದೆ. ಮನೆ ಕುಸಿದು ಬಿದ್ದ ಪರಿಣಾಮ ಮನೆಯೊಳಗಿದ್ದ ವಸ್ತುಗಳು, ಆಹಾರ ಸಾಮಗ್ರಿಗಳು ಮಣ್ಣುಪಾಲಾಗಿದ್ದು, ನಾವು ಆತಂಕದಿಂದ ಇದ್ದೇವೆ ಎಂದು ಮನೆ ಮಾಲಿಕರು ಅಳಲು ತೋಡಿಕೊಂಡಿದ್ದಾರೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಲೆಕ್ಕಾಧಿಕಾರಿ ಮಂಜುಳಾ ಅವರು, ಪರಿಶೀಲನೆ ನಡೆಸಿ, ಘಟನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತಿಪಟೂರು: ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ನೆಲ್ಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಗ್ಗಾವೆ ಗ್ರಾಮದ ಕಾಲನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಇದ್ದರೂ ಇಲ್ಲದಂತಾಗಿದ್ದು, ಅವ್ಯವಸ್ಥೆಯಿಂದ ಕೂಡಿದೆ. ಗಿಡಗಂಟೆಗಳ ಮಧ್ಯೆ ಮುಳುಗಿಹೋಗಿರುವ ಸಮುದಾಯ ಭವನವನ್ನು ಕುಡುಕರು ವಶಪಡಿಸಿಕೊಂಡಿದ್ದಾರೆಯೇ ಏನೋ ಎಂದು ಅನ್ನಿಸುವಷ್ಟು ಮದ್ಯದ ಬಾಟಲಿಗಳು ಇಲ್ಲಿ ರಾಶಿ ಬಿದ್ದಿವೆ. ಈ ಭವನದ ಸುತ್ತ ಮುತ್ತಲಿನ ಪ್ರದೇಶದಲ್ಲಿ  ಕೆಲವರು ಶೌಚ ಮಾಡಲು ಬಳಸುತ್ತಿದ್ದಾರೆ. ಇಷ್ಟೆಲ್ಲ ಅವ್ಯವಸ್ಥೆಗಳಿದ್ದರೂ, ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಅಧ್ಯಕ್ಷರಿಗೆ ಕಾಲನಿಯ ನಿವಾಸಿಗಳು ನೂರು ಬಾರಿ ಮನವಿ ನೀಡಿದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಡಾ.ಎನ್.ಮೂರ್ತಿ ಸ್ಥಾಪಿತ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ ಆರೋಪಿಸಿದರು. ಸ್ಥಳೀಯ ನಿವಾಸಿಗಳಿಗೆ ಮತ್ತು ಅಕ್ಕಪಕ್ಕದ ಜನಸಾಮಾನ್ಯರಿಗೆ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಬಳಕೆಯಾಗಲಿ ಎಂದು ಸರಕಾರದ ಹಣವನ್ನು ವೆಚ್ಚ ಮಾಡಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಆದರೆ ಇಲ್ಲಿ ಭವನ ನೋಡಿದರೆ ಎಲ್ಲಾ ಗಿಡಗಂಟೆಗಳಿಂದ ಮುಚ್ಚಿಕೊಂಡು ಹೋಗಿದೆ ಇದು ನೆಪ…

Read More

ಮಂಡ್ಯ: ದೇಶದ 26 ರಾಜ್ಯಗಳಲ್ಲಿ ಕಾಂಗ್ರೆಸ್‌ ಉಸಿರಾಟ ನಿಲ್ಲಿಸಿದೆ, ಕರ್ನಾಟಕದಲ್ಲಿ ಕಾಂಗ್ರೆಸ್‌‌ ಅಷ್ಟು ಇಷ್ಟು ಉಸಿರಾಡುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಇಲ್ಲೂ ಕಾಂಗ್ರೆಸ್‌ ಉಸಿರು ನಿಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ವಿಧಾನ ಪರಿಷತ್‌ ಚುನಾವಣೆ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈ ಹಿಂದೆ 400 ಸ್ಥಾನಗಳಲ್ಲಿ ಗೆಲ್ಲುತ್ತಿತ್ತು. ಈಗ 40-45 ಸ್ಥಾನದಲ್ಲಿ ಗೆಲ್ಲುವ ಸ್ಥಿತಿಗೆ ಬಂದು ತಲುಪಿದೆ. ಲೋಕಸಭೆಯಲ್ಲಿ ಪ್ರಾತಿನಿಧ್ಯವಿಲ್ಲದೇ ಕಾಂಗ್ರೆಸ್‌ ಮರ್ಯಾದೆ ಕಳೆದುಕೊಂಡಿದೆ ಎಂದು ಅವರು ಹೇಳಿದರು. ಈಗಿನಿಂದಲೇ ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ 140 ಸ್ಥಾನ ಗಳಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಮುಂದಿನ ಗುರಿಯಾಗಿದೆ. ವಿಧಾನ ಪರಿಷತ್‌ ಚುನಾವಣೆ ಹಾಗೂ ಮಂಡ್ಯದಲ್ಲಿ ಜೆಡಿಎಸ್‌‌ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮ್ಮ ಅಭ್ಯರ್ಥಿ ಇಲ್ಲದ ಕಡೆಯಲ್ಲಿ ಬೆಂಬಲ ನೀಡುವಂತೆ ಕೇಳಿದ್ದಾರೆ. ನಮ್ಮ ಅಭ್ಯರ್ಥಿ ಇರುವ ಕಡೆ ಹೊಂದಾಣಿಕೆ ಇಲ್ಲ ಎಂದು ಅವರು ಹೇಳಿದರು. ನರೇಂದ್ರ ಮೋದಿ ಅವರ…

Read More

ಹೈದರಾಬಾದ್: ಚಾಲನಾ ಪರವಾನಗಿ ಪಡೆದ ದೇಶದ ಮೊದಲ ಕುಬ್ಜ ವ್ಯಕ್ತಿ  ಎಂಬ ಹೆಗ್ಗಲಿಕೆಗೆ ಹೈದರಾಬಾದ್ ನಿವಾಸಿ ಪಾತ್ರರಾಗಿದ್ದು, ಕೇವಲ ಮೂರು ಅಡಿ ಎತ್ತರದ ವ್ಯಕ್ತಿ ತನ್ನ ಅಂಗವೈಕಲ್ಯವನ್ನು ಮೀರಿಸಿ ಸಾಧನೆ ಮಾಡಿದ್ದು, ಇದೀಗ ಚಾಲನಾ ಪರವಾನಗಿ ಪಡೆದುಕೊಂಡಿದ್ದಾರೆ. ಹೈದರಾಬಾದ್ ನಿವಾಸಿ ಗಟ್ಟಿಪಲ್ಲಿಯ 42 ವರ್ಷ ವಯಸ್ಸಿನ ಶಿವಪಾಲ್  ಅವರು ಈ ಸಾಧನೆ ಮಾಡಿದವರಾಗಿದ್ದು, ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಚಾಲನಾ ಪರವಾನಗಿ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ ತನ್ನಂತೆಯೇ ಇರುವ ಇನ್ನಷ್ಟು ಕುಬ್ಜ ವ್ಯಕ್ತಿಗಳಿಗೆ ಡ್ರೈವಿಂಗ್ ತರಬೇತಿ ನೀಡುವುದು ತನ್ನ ಮುಂದಿನ ಗುರಿ ಎಂದು ಅವರು ಹೇಳಿದ್ದಾರೆ. ನನ್ನ ಎತ್ತರದ ಕಾರಣದಿಂದ ಅನೇಕ ಮಂದಿ ನನ್ನನ್ನು ಚುಡಾಯಿಸುತ್ತಿದ್ದರು. ಇಂದು ನಾನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಾಮನಿರ್ದೇಶನಗೊಂಡಿದ್ದೇನೆ. ಚಾಲನಾ ತರಬೇತಿಗಾಗಿ ಅನೇಕ ಕುಳ್ಳಗಿನ ಜನರು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ದೈಹಿಕ ವಿಕಲಚೇತನರಿಗಾಗಿ ಮುಂದಿನ ವರ್ಷ ಡ್ರೈವಿಂಗ್ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ:…

Read More