Author: admin

ತಿಪಟೂರು: ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಂದೂ ಸಮಾಜೋತ್ಸವ ಸಮಿತಿಯಿಂದ ಮನೆ ಮನೆ ಸಂಪರ್ಕ ಅಭಿಯಾನ ನಡೆಯಿತು. ಗುರುಕುಲಾನಂದಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯಾವುದೇ ಜಾತಿ, ಧರ್ಮ, ಬೇಧವಿಲ್ಲದೆ ವಿಚಾರಗಳ ಆಧಾರದಲ್ಲಿ ರಾಷ್ಟ್ರಸೇವೆಯೇ ಪರಮ ಗುರಿಯೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. ಸಂಘ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನೂರು ವರ್ಷಗಳಲ್ಲಿ ಹಲವು ಸಮಸ್ಯೆ, ಸಂಕಷ್ಟಗಳನ್ನು ಎದುರಿಸಿ ನಿಂತಿದೆ. ಲಕ್ಷಾಂತರ ಸೇವೆ ಮಾಡಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಬೃಹದಾಕಾರವಾಗಿ ಬೆಳೆದಿದೆ ಎಂದು ಹೇಳಿದರು. ಮನೆ ಮನೆಗೆ ಭೇಟಿ ನೀಡಿ ಪಂಚ ಪರಿವರ್ತನೆ ವಿಷಯಗಳ ಮೂಲಕ ರಾಷ್ಟ್ರ ಜನರನ್ನು ಜಾಗೃತಗೊಳಿಸುವ ಮನೆ ಮನೆ ಮಹಾ ಸಂಪರ್ಕ ಅಭಿಯಾನವನ್ನು ಡಿಸೆಂಬರ್ 7 ರಿಂದ 18ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲಾ ಕಾರ್ಯವಾಹ ರವೀಂದ್ರ ತಗ್ಗಿನಮನೆ, ಸಂಸ್ಕಾರ ಭಾರತಿಯ ಶ್ರೀಧರ್ ಲಕ್ಕವಳ್ಳಿ, ರಾಜೀವ ಲೋಚನ್‌, ಪ್ರಭಾ ವಿಶ್ವನಾಥ್‌, ಗ್ರಾಮಾಂತರ ಸಮಿತಿ ಅಧ್ಯಕ್ಷ ಕೊಪ್ಪ ಹೇಮಂತ್‌ಕುಮಾರ್‌,…

Read More

ತುಮಕೂರು: ಡಾ.ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಡಾ.ಜಯರಾಮ್ ಸ್ಮರಣಾರ್ಥ ರಾಜ್ಯಮಟ್ಟದ ಹೊನಲು ಬೆಳಕಿನ ‘ಪುನೀತ್ ರಾಜ್ ಕಪ್‌’ ಕ್ರಿಕೆಟ್‌ ಪಂದ್ಯಾವಳಿ ನಗರದಲ್ಲಿ ಡಿಸೆಂಬರ್ 25ರಿಂದ 28ರ ವರೆಗೆ ನಡೆಯಲಿದೆ. ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಪೋಸ್ಟರ್‌ ಅನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಿಡುಗಡೆ ಮಾಡಿದರು. ವರನಟ ಡಾ.ರಾಜ್ ಕುಮಾರ್ ಕುಟುಂಬದ ಪುನೀತ್ ರಾಜ್‌ ಕುಮಾರ್ ಹೆಸರಿನಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು. ವಿಜಯ ಸೇನೆ ಅಧ್ಯಕ್ಷ ಎಚ್.ಎನ್.ದೀಪಕ್ ಮಾತನಾಡಿ, ಪ್ರತಿ ವರ್ಷವೂ ಯಾವುದಾದರೂ ಒಂದು ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಅದರಲ್ಲಿ ಕ್ರಿಕೆಟ್‌ ಗೆ ಒತ್ತು ಕೊಡುತ್ತಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್‌ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಈ ಬಾರಿಯ ಪಂದ್ಯಾವಳಿಗೆ 14 ತಂಡಗಳು ಬರುತ್ತಿವೆ. ಮೊದಲ ಬಹುಮಾನ 5 ಲಕ್ಷ, ಎರಡನೇ ಬಹುಮಾನ 2.50 ಲಕ್ಷ, ಮೂರು, ನಾಲ್ಕನೇ ಬಹುಮಾನವಾಗಿ ತಲಾ 50 ಸಾವಿರ ನೀಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.…

Read More

ತುಮಕೂರು: ಡಿಸೆಂಬರ್‌ ನಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲೇಖಕ ಕರೀಗೌಡ ಬೀಚನಹಳ್ಳಿ ಆಯ್ಕೆ ಆಗಿದ್ದಾರೆ. ನಗರದ ಗಾಜಿನ ಮನೆಯಲ್ಲಿ ಡಿ.29 ಹಾಗೂ 30ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕಳೆದ ಮೂರು ವರ್ಷಗಳಿಂದ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಸಮ್ಮೇಳನ ಸಂಘಟಿಸುತ್ತಾ ಬರಲಾಗಿದೆ. ಈ ಸಲ ಡಿಸೆಂಬರ್‌ ನಲ್ಲಿ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷರ ಪರಿಚಯ: ಕರೀಗೌಡ ಬೀಚನಹಳ್ಳಿ ಅವರು ಅಧ್ಯಾಪಕ ವೃತ್ತಿಯ ಜತೆಗೆ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡವರು. ಕರಿಮಣ್ಣಿನ ಗೊಂಬೆಗಳು’, ‘ಸಂಜೀವಿನಿ ಮರ’, ‘ಕಥನ ಕಲೆಯ ನೆಲೆಗಳು’, ‘ಸಂಧಾನ’, ‘ಜಾತ್ರೆಗಳು’, ‘ತೇಜಸ್ವಿ ಕಥೆಗಳ ಅಧ್ಯಯನ ಪ್ರಮುಖ ಕೃತಿಗಳು. ಅವರ ಕಥೆ ಹಾಗೂ ಕವನಗಳು ಪದವಿ ತರಗತಿಗಳಿಗೆ ಪಠ್ಯವಾಗಿವೆ. ಸಾಕಷ್ಟು ಕಥೆಗಳು ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಶ್ರೀಕೃಷ್ಣ ಆಲನಹಳ್ಳಿ ಕಥಾ ಸ್ಪರ್ಧೆ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಹಿನ್ನಲೆ: 1951 ಸೆಪ್ಟೆಂಬರ್ 10ರಂದು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಜನನ,…

Read More

ಕುಣಿಗಲ್‌: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗ್ರಾಮವೊಂದರ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಲೆ 44 ವರ್ಷದ ಮಲ್ಲೇಶ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್‌ ನಲ್ಲಿ ಪೋಷಕರು ಬಾಲಕಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ 7 ತಿಂಗಳ ಗರ್ಭಿಣಿಯಾಗಿರುವುದು ತಿಳಿದಿದೆ. ನವೆಂಬರ್ 18ರಂದು ಮಗು ಜನಿಸಿದೆ. ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಸರಗೂರು:  ಕನ್ನಡ ನಾಡು ನುಡಿ ಭಾಷೆಯ ಮೇಲಿರುವ ಆಟೋ ಚಾಲಕರ ಭಾಷಾಭಿಮಾನವನ್ನು ನಾವೆಲ್ಲರೂ ಗೌರವಿಸಬೇಕು. ಕನ್ನಡ ಭಾಷೆಯನ್ನು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ ವರ್ಷ ಪೂರ್ತಿ ನಡೆಸಿ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಪಪಂ ಅಧ್ಯಕ್ಷೆ ಚೈತ್ರಾ ಸ್ವಾಮಿ ತಿಳಿಸಿದರು. ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಚಾಮುಂಡೇಶ್ವರಿ ಆಟೋ ಚಾಲಕರು ಹಾಗೂ ಮಾಲಿಕರ ಸಂಘದ ವತಿಯಿಂದ ಶನಿವಾರದಂದು 70 ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷ ಗಳ ಇತಿಹಾಸವಿದ್ದು, ಇತ್ತೀಚಿನ ವರ್ಷಗಳಲ್ಲಿ ಬೇರೆ ರಾಜ್ಯಗಳ ಅನ್ಯಭಾಷೆಕಾರ ವಲಸೆಯಿಂದ ಕನ್ನಡ ಭಾಷೆಗೆ ತೊಡಕ್ಕಾಗುತ್ತಿದೆ, ಕನ್ನಡದ ಹಿರಿಮೆ–ಗರಿಮೆ ಸಾರುವ ಕೆಲಸ ಪ್ರತಿಯೊಬ್ಬ ಕನ್ನಡಿಗರ ಗುರಿಯಾಗಬೇಕು. ಕನ್ನಡದ ಅಭಿಮಾನವನ್ನು ಒಂದು ದಿನಕ್ಕೆ ಸಿಮಿತವಾಗಿರದೆ ಪ್ರತಿದಿನವೂ ಕನ್ನಡದ ಅಭಿಮಾನ, ಆಚರಣೆಯಾಗಬೇಕು. ಕನ್ನಡಪರ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಂಡು ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ವಾಗಬೇಕು. ನಾಡು ನುಡಿ ಪರಂಪರೆ ಬಿಂಬಿಸು ಕಾರ್ಯವಾಗಬೇಕು ಎಂದರು. ಪಪಂ ಸದಸ್ಯ ಹಾಗೂ ನಾಯಕ ಸಮಾಜದ ಉಪಾಧ್ಯಕ್ಷ…

Read More

ಕೊರಟಗೆರೆ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲೇ ಕಾಲಹರಣ ಮಾಡುತ್ತಾ ರೈತರ ಮತ್ತು ಸಾರ್ವಜನಿಕರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ತಾಲ್ಲೂಕು ಬಿಜೆಪಿ ಮಂಡಲಾಧ್ಯಕ್ಷ ರುದ್ರೇಶ್ ಆಕ್ರೋಶ ವ್ಯಕ್ತ ಪಡಿಸಿದರು. ಅವರು ಕೊರಟಗೆರೆ ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಮತ್ತು ಜನ ವಿರೋಧಿ ಆಡಳಿತ ನಡೆಸುತ್ತಿರುವ ಬಗ್ಗೆ ಮತ್ತು ಸೂಕ್ತ ಬೆಂಬಲ ಬೆಲೆ ಘೋಷಣೆ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್ ಕೆ.ಮಂಜುನಾಥ್ ಮೂಲಕ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಅಧಿಕಾರ ಕುರ್ಚಿಗಾಗಿ ಸಿಎಂ ಮತ್ತು ಡಿಸಿಎಂ ಕಿತ್ತಾಡುತ್ತಿದ್ದು, ರಾಜ್ಯದ ಜನರನ್ನು ಮರೆತಿದ್ದಾರೆ ಜನ ವಿರೋಧಿ ಆಡಳಿತದಿಂದ ಸಾರ್ವಜನಿಕರು ಬೇಸತ್ತಿದ್ದು ನಿಮಗೆ ಬುದ್ದಿ ಕಲಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದ…

Read More

ಸರಗೂರು:  ಎಐಸಿಸಿ ಅಧ್ಯಕ್ಷ  ದಲಿತ ಬಲಗೈ ಸಮುದಾಯದ ಪ್ರಮುಖ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ತಾಲೂಕು ಅಧ್ಯಕ್ಷ ದೇವಲಾಪುರ ಸಿದ್ದರಾಜು ಆಗ್ರಹಿಸಿದರು. ಪಟ್ಟಣದಲ್ಲಿ ಶನಿವಾರದಂದು ಪತ್ರಿಕೆ ಪ್ರಕಟಣೆಯಲ್ಲಿ ಮಾತನಾಡಿದ ಅವರು, ‘ಆಯಾ ಸಮುದಾಯದ ಹಿತ ಕಾಪಾಡಬೇಕಾದದ್ದು ಆಯಾ ಸಮಾಜದ ಮುಖಂಡರ ಕರ್ತವ್ಯ.  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಅದೇ ರೀತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಮೈಸೂರು ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಸ್.ಸಿ.ಮಹದೇವಪ್ಪ ರವರು ಮುಖ್ಯಮಂತ್ರಿ ಬಲಗೈ ಸಮಾಜಕ್ಕೆ ಅನುಕೂಲ ಮಾಡಬೇಕು ಎಂದು ಮನವಿ ಸಲ್ಲಿಸುತ್ತೇನೆ. ದಲಿತ ಬಲಗೈ ಸಮುದಾಯದ ಮುಖಂಡ ಹಾಗೂ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷಯಾಗಿ ಬಲಗೈ ಸಮುದಾಯದ ಪರವಾಗಿ ಹಕ್ಕೊತ್ತಾಯ ಮಾಡುತ್ತಿದ್ದೇನೆ ಎಂದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಯಲ್ಲಿದೆ. ದಲಿತ ಮುಖ್ಯಮಂತ್ರಿ ವಿಚಾರ ಬಂದರೆ ಬಲಗೈ ಸಮುದಾಯಕ್ಕೆ ಅವಕಾಶ ನೀಡಬೇಕು…

Read More

ತುಮಕೂರು: ಕರ್ನಾಟಕ ಎಲ್ಲಾ ಕಾಲದಿಂದಲೂ ವೈವಿಧ್ಯಮಯ ಪ್ರದೇಶ,  ಇಲ್ಲಿಗೆ ಬಂದು ನೆಲೆಸಲು,  ಕಾರ್ಯ ನಿರ್ವಹಿಸಲು ಎಲ್ಲ ರಾಜ್ಯದ ಜನರು, ಉನ್ನತ ಹಂತದ ಅಧಿಕಾರಿಗಳು ಇಷ್ಟಪಡುತ್ತಾರೆ ಎಂದರೆ ಇಲ್ಲಿ ನೆಲೆಸಿರುವ ಶಾಂತಿ,  ಸೌಹಾರ್ದತೆ,  ಜನರ ತಾಳ್ಮೆ,  ಪ್ರೀತಿಯ ಮನೋಭಾವನೆ ಕಾರಣ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಧಿಕಾರಿಗಳಾದ ಬಿ. ನಂಜುಂಡಪ್ಪ ಹೇಳಿದರು. ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯ ತುಮಕೂರು ಇಲ್ಲಿ ನಡೆದ ವೈಭವದ ಕನ್ನಡ ರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಭಾಷೆಯ ಬಗ್ಗೆ ಅತೀ ಹೆಚ್ಚು ಸಂಶೋಧನೆ,  ಅಧ್ಯಯನ ನಡೆದಿರುವುದು ಕೂಡ ಕನ್ನಡ ಭಾಷೆಯ ಬಗ್ಗೆ ಮಾತ್ರವೇ, ಅದನ್ನು ಅರಿಯುವ,  ಪಸರಿಸುವ ಜವಾಬ್ದಾರಿ ನಮ್ಮದು.  ಪ್ರೋಟೊ ದ್ರಾವಿಡ ಭಾಷೆಯಿಂದ ಪಂಚ ದ್ರಾವಿಡ ಭಾಷೆ ಹುಟ್ಟಿದೆ, ಅದರ ಇತಿಹಾಸ, ಮೂಲವನ್ನು ಮತ್ತು  ಬೆಳವಣಿಗೆ ಬಗ್ಗೆ ನಾವೆಲ್ಲ ತಿಳಿಯಬೇಕು ಎಂದರು. ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಶಿಕ್ಷಣಾಧಿಕಾರಿಗಳಾದ ಹೆಚ್.ತಿಪ್ಪೇಸ್ವಾಮಿ ಅವರು ದಾಸ ಶ್ರೇಷ್ಠ ಕನಕದಾಸರ ಜನ್ಮ ವೃತ್ತಾಂತ, ಅವರ ಸಾರ್ಥಕ ಜೀವನ…

Read More

ತುಮಕೂರು: ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿ ಕಲ್ಪಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ನಿರ್ದೇಶಿಸಿದರು. ನಗರದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಗುರುವಾರ ನಡೆದ ಮಕ್ಕಳು ಮತ್ತು ಹದಿಹರೆಯದವರ ಕಾರ್ಮಿಕ ಪದ್ಧತಿ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ–1986ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗ್ಯಾರೇಜ್, ಟೋಲ್, ಕಾರ್ಖಾನೆ, ಹೋಟೆಲ್, ಅಂಗಡಿ, ಮತ್ತಿತರ ಅಪಾಯಕಾರಿ ಉದ್ಯೋಗದ ಸ್ಥಳಗಳಲ್ಲಿ ತಪಾಸಣೆ ಹೆಚ್ಚಿಸಬೇಕು. ತಪಾಸಣೆ ತೀವ್ರವಾದರೆ ಬಾಲ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಲು ಉದ್ಯೋಗದಾತರು ಹೆದರುತ್ತಾರೆ. ಪತ್ತೆ ಹಚ್ಚಿದ ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿ ಮುಖ್ಯವಾಹಿನಿಗೆ ತಂದರೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಬಾಲ ಕಾರ್ಮಿಕರ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಮಕ್ಕಳು ಬಾಲಕಾರ್ಮಿಕರಾಗುವುದನ್ನು ತಪ್ಪಿಸಬಹುದು. ಇಲ್ಲವಾದರೆ ಕೊನೆಯವರೆಗೂ ಕಾರ್ಮಿಕರಾಗಿಯೇ ಉಳಿದುಬಿಡುತ್ತಾರೆ ಎಂದು ಎಚ್ಚರಿಸಿದರು. ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಬಾಲ ಕಾರ್ಮಿಕರ ನಿಷೇಧ…

Read More

ಔರಾದ: ತಾಲೂಕಿನ ಬೆಳಕುಣಿ ಚೌದ್ರಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸ.ಪ್ರಾ ಶಾಲೆ ಬೆಳಕುಣಿ ಚೌದ್ರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಾಲೂಕು ನೋಡೆಲ್ ಅಧಿಕಾರಿ ಸಂಜಯ ಮೆತ್ರೆ,  ಎಲ್ಲ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಅನುಗುಣವಾಗಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪಂಢರಿ ಅಡೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಬೋಧನೆ ನೀಡುವ ಮೂಲಕ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ  ಮಹೇಶ್ ಎಸ್.ಡಿ.ಎಂ.ಸಿ ಅಧ್ಯಕ್ಷ, ಪ್ರೌಢ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಎಂ.ಡಿ ನಯುಮ್, ಪಂಚಾಯತ ಸದಸ್ಯ ದೇವಿದಾಸ್ ಧುಳೆ, ಸಂತೋಷ ರೆಡ್ಡಿ, ಸಚಿನ ಶಿಂಧೆ, ವಿವೇಕಾನಂದ್ ಢಗೆ, ಬಿ.ಆ.ಪಿ.ನಾಯ್ಮೊದ್ದಿನ, ಸಿ.ಆ.ಪಿ.ಪ್ರಕಾಶ, ಪ್ರವೀಣ, ನವನಾಥ್ ಹಾಗೂ ಅಝೀಮ್ ಫ್ರೇಂಜಿ ಫೌಂಡೇಷನ್ ನೋಡಲ್ ಶಿವಾಜಿ ಹಾಗೂ ಸಂಜೀವನ್ ಬಿರಾದಾರ ಇವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಸಿ. ಆರ್. ಪಿ. ಸಂತೋಷ ರೆಡ್ಡಿ ಸ್ವಾಗತಿಸಿದರು. ಸೂತ್ರ ಸಂಚಲನ  ಪ್ರಕಾಶ ದೇಶಮುಖ್…

Read More