Author: admin

ಸಿರಾ: ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎಸ್ ಐ ಆರ್ ಅರ್ಜಿಗಳನ್ನು ವಿತರಿಸಲಿದ್ದು ಪ್ರತಿಯೊಬ್ಬ ನಾಗರಿಕರೂ ತಮ್ಮ ಸಂವಿಧಾನಬದ್ಧವಾದ ಮತದಾನದ ಹಕ್ಕು ಉಳಿಸಿಕೊಳ್ಳಬೇಕು ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ತಿಳಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯ ಎಸ್ ಐಆರ್ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮತ ಪರಿಷ್ಕರಣೆಯ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅರ್ಜಿ ಸಲ್ಲಿಸದಿದ್ದರೆ, ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಬೇರೆಡೆಗೆ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ಇರುತ್ತದೆಯಾದ್ದರಿಂದ ಜಾಗೃತರಾಗುವುದು ಅತಿ ಅಗತ್ಯ ಎಂದರು. ಚುನಾವಣಾ ಆಯೋಗದ ಸೂಚನೆಯಂತೆ ಈ ಎಸ್ ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಯನ್ನು ಸಲ್ಲಿಸುವುದು ಪ್ರತಿಯೊಬ್ಬ…

Read More

ತುಮಕೂರು: ಪ್ರತಿಯೊಂದು ಕುಟುಂಬವು ಪ್ರೀತಿ, ವಾತ್ಸಲ್ಯದೊಂದಿಗೆ ಕುಟುಂಬದಲ್ಲಿ ಬೆಳೆಯುವ ಹಕ್ಕನ್ನು ಹೊಂದಿದ್ದು, ಕುಟುಂಬವು ಮಕ್ಕಳ ಬದುಕಿಗೆ ಜೀವನಾಡಿ” ಯಾಗಿ ಮಹತ್ತರವಾದ ಪಾತ್ರ ವಹಿಸುತ್ತದೆ. ಪೋಷಕರು ಕುಟುಂಬದ ಕೇಂದ್ರ ಬಿಂದುವಾಗಿ ಮಕ್ಕಳ ಸುರಕ್ಷತೆಯನ್ನು ಕಾಪಾಡುವುದು ಮತ್ತು ಅವರಿಗೆ ಮಮತೆಯ ಸಾನಿಧ್ಯಗಳನ್ನು ಎಲ್ಲಾ ಸಂದರ್ಭಗಳಲ್ಲೂ ಒದಗಿಸುವುದಾಗಿದೆ. ಆದರೆ ಕಾರಣಾಂತರಗಳಿಂದ ಕೆಲವು ಮಕ್ಕಳು ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲು ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮಗುವನ್ನು ಸ್ವಂತ ಕುಟುಂಬದಲ್ಲಿ ಇರಿಸಲು ಸಾಧ್ಯವಾಗದಿದ್ದಾಗ, ಅಂತಹ ಮಕ್ಕಳಿಗೆ ತಾತ್ಕಾಲಿಕವಾಗಿ ಕುಟುಂಬದ ಆರೈಕೆಯನ್ನು ಒದಗಿಸುವ ಹಿತದೃಷ್ಟಿಯಿಂದ ಪೋಷಕತ್ವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ 6 ರಿಂದ 18 ವರ್ಷದ ಒಳಗಿನ ಮಕ್ಕಳ ಪಾಲನಾ ಸಂಸ್ಥೆಯಲ್ಲಿರುವ ಹಿರಿಯ ಮಕ್ಕಳನ್ನು ಕುಟುಂಬದ ವಾತಾವರಣಕ್ಕೆ ಅಳವಡಿಸಿಕೊಳ್ಳಲು ಮಗುವನ್ನು ಪಡೆಯಲು ಆಸಕ್ತಿ ಇರುವ ಪೋಷಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಮಕ್ಕಳಿಗೆ ಸುರಕ್ಷಿತ ಮತ್ತು ಪ್ರೀತಿಯ ವಾತಾವರಣ ನೀಡಬಲ್ಲವರು ಹಾಗೂ ಮಕ್ಕಳನ್ನು ಪಾಲನೆ ಮಾಡಲು ಸಿದ್ಧರಿರುವ ಕಾಳಜಿ ಇರುವ ಯಾವುದೇ ಅರ್ಹ ದಂಪತಿ/ ವ್ಯಕ್ತಿಗಳು ಅರ್ಜಿಯನ್ನು ಪಡೆದು…

Read More

ತುಮಕೂರು: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ ಐ ಆರ್) ಅಭಿಯಾನ ರಾಜ್ಯದೆಲ್ಲೆಡೆಯಂತೆ ಜಿಲ್ಲೆಯಲ್ಲಿಯೂ ಜೂ. 30 ರಿಂದ ಆರಂಭ ಗೊಂಡಿದ್ದು, ಮನೆ ಮನೆ ಭೇಟಿ ಭಾಗವಾಗಿ ಜುಲೈ 2ರ ಅಂತ್ಯಕ್ಕೆ ಒಟ್ಟು 5,15,328 ಸಂಖ್ಯೆಯ ಎನ್ಮುಮರೇಷನ್ ಅರ್ಜಿಗಳನ್ನು ಮತದಾರರಿಗೆ ಕಳೆದ 3 ದಿನಗಳಲ್ಲಿ ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈ ತಿಂಗಳ 29ರವರೆಗೆ ಎನ್ಮುಮರೇಷನ್ ಫಾರಂ ವಿತರಣೆ ಹಾಗೂ ಡಿಜಿಟೈಸ್ಡ್ ಕಾರ್ಯ ನಡೆಯಲಿದ್ದು, ಜಿಲ್ಲೆಯಲ್ಲಿ ಪಟ್ಟಿ ಮಾಡಿರುವ 22,98,879 ಮತದಾರರ ಪೈಕಿ ಕಳೆದ ಮೂರು ದಿನಗಳಲ್ಲಿ 5,15,328 ಮಂದಿ ಮತದಾರರಿಗೆ ಅರ್ಜಿಯನ್ನು ಮನೆಮನೆ ಭೇಟಿಯಲ್ಲಿ ಖುದ್ದು ವಿತರಿಸಿದ್ದು, ಶೇ. 22.42ರಷ್ಟು ಪ್ರಗತಿಯಾಗಿದೆ. ಆನ್ ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ 1025 ಮಂದಿ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ ಬಿಎಲ್ಒಗಳ ಮನೆ ಮನೆಭೇಟಿಯಲ್ಲಿ 91 ಮತದಾರರನ್ನು ಎಎಸ್ಡಿಡಿಟಿ (ಮೃತರು, ಸ್ಥಳಾಂತರಗೊಂಡವರು) ಪಟ್ಟಿಯಲ್ಲಿ ಗುರುತಿಸಲಾಗಿದ್ದು, 25 ಮಂದಿ ಶಾಶ್ವತವಾಗಿ ಸ್ಥಳಾಂತರ ಗೊಂಡಿರುವುದು ಪತ್ತೆಯಾಗಿದೆ. ಉಳಿದಂತೆ…

Read More

ಔರಾದ್: ತಾಲೂಕಿನ ಕೌಠಾ (ಬಿ) ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲ್ಲೂರ (ಜೆ), ಪಾಶಾಪೂರ ಹಾಗೂ ಕೌಠಾ (ಬಿ) ವಲಯಗಳಲ್ಲಿ ಕೇಂದ್ರ ಸರ್ಕಾರದ ‘ರಿವಾರ್ಡ್’ (REWARD) ಯೋಜನೆಯಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಭೀಮ ಆರ್ಮಿ ಭಾರತ ಏಕತಾ ಮಿಷನ್ ತಾಲೂಕು ಘಟಕ ಆರೋಪಿಸಿದೆ. ಈ ಕುರಿತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. 2025–2026ನೇ ಸಾಲಿನಲ್ಲಿ ರೈತರ ಹಿತದೃಷ್ಟಿಯಿಂದ ರಬ್ಬರ್ ಬಂಡ, ನಾಲಾ ಟರ್ನಿಂಗ್, ಚೆಕ್ ಡ್ಯಾಂ, ಖರ್ಸಿ ಹೊಂಡಾ ಹಾಗೂ ವಾಟರ್ ಪೈಪ್ ಸೇರಿದಂತೆ ಹಲವು ಮುಖ್ಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಈ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸದೆ, ಕೇವಲ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ. ಸಂತಪೂರ ಹೋಬಳಿ ವ್ಯಾಪ್ತಿಯ ಕೃಷಿ ಅಧಿಕಾರಿಗಳಾದ ಅಂಬರೀಷ (AO) ಹಾಗೂ ವೈಜಿನಾಥ ರೆಡ್ಡಿ ಅವರು ರೈತರ ಹೆಸರಿನಲ್ಲಿ…

Read More

ಔರಾದ್: ಗಡಿ ಪ್ರದೇಶಗಳಲ್ಲಿ ಕಳ್ಳಸಾಗಣೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಮತ್ತು ಗಡಿ ಭದ್ರತೆಯನ್ನು ಬಲಪಡಿಸಲು ನೆರೆಯ ರಾಜ್ಯಗಳ ಪೊಲೀಸ್ ಅಧಿಕಾರಿಗಳೊಂದಿಗಿನ ಸಮನ್ವಯ ಸಭೆಗಳು ಹೆಚ್ಚು ನೆರವಾಗುತ್ತವೆ ಎಂದು ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಜ್ಯ ಗಡಿ ಅಪರಾಧ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು. ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮತ್ತು ಕುಖ್ಯಾತ ಅಪರಾಧಿಗಳನ್ನು ಪತ್ತೆಹಚ್ಚಲು ಅಂತಾರಾಜ್ಯ ಪೊಲೀಸ್ ಅಧಿಕಾರಿಗಳು ಪರಸ್ಪರ ಕೈಜೋಡಿಸಿದರೆ ಕಠಿಣ ಪ್ರಕರಣಗಳನ್ನು ಸುಲಭವಾಗಿ ಬೇಧಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಭೆಯ ನಿರ್ಧಾರಗಳು: ಮಾಹಿತಿ ವಿನಿಮಯ: ಅಪರಾಧಿಗಳ ಕುರಿತಾದ ಪ್ರಮುಖ ಮಾಹಿತಿಯನ್ನು ರಾಜ್ಯಗಳ ನಡುವೆ ಹಂಚಿಕೊಳ್ಳುವುದು. ಜಂಟಿ ಗಸ್ತು: ಗಡಿ ಭದ್ರತೆಯನ್ನು ಹೆಚ್ಚಿಸಲು ಗಡಿ ಭಾಗಗಳಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಬಲಪಡಿಸುವುದು. ಉತ್ತಮ ಸಮನ್ವಯತೆ: ಗಡಿ ಭಾಗದ ಪೊಲೀಸ್ ಠಾಣೆಗಳ ನಡುವೆ ನಿರಂತರ ಸಂಪರ್ಕ ಸಾಧಿಸಿ, ತನಿಖಾ ಪ್ರಕ್ರಿಯೆಯನ್ನು ಸುಲಭಗೊಳಿಸುವುದು. ಕಾನೂನು ಸುವ್ಯವಸ್ಥೆ: ಕಳ್ಳಸಾಗಾಣಿಕೆ ತಡೆದು ಗಡಿ…

Read More

ಸರಗೂರು: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿರುವ ‘ಜನಾಗ್ರಹ ಸಮಾವೇಶ’ದಲ್ಲಿ ಭಾಗವಹಿಸಲು ಸರಗೂರು ತಾಲ್ಲೂಕಿನಿಂದ ದಲಿತ ಸಂಘರ್ಷ ಸಮಿತಿ (ದಸಂಸ-ಅಂಬೇಡ್ಕರ್ವಾದ) ವತಿಯಿಂದ 200ಕ್ಕೂ ಹೆಚ್ಚು ಕಾರ್ಯಕರ್ತರು ಶುಕ್ರವಾರ ಪ್ರಯಾಣ ಬೆಳೆಸಿದರು. ಪ್ರಯಾಣದ ಆರಂಭಕ್ಕೂ ಮುನ್ನ ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಳಿಕ ಕಾರ್ಯಕ್ರಮಕ್ಕೆ ಅಧಿಕರ್ನಾಟಕ ಮಹಾಸಭಾದ ಎಚ್.ಡಿ. ಶಿವರಾಜು ಅವರು ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಎಚ್.ಡಿ. ಶಿವರಾಜು ಅವರು, “ದಲಿತ ಸಮುದಾಯದ ಏಳಿಗೆ ಮತ್ತು ಹಕ್ಕುಗಳಿಗಾಗಿ ದಸಂಸ ನಿರಂತರವಾಗಿ ಶ್ರಮಿಸುತ್ತಾ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಜನಾಗ್ರಹ ಸಮಾವೇಶವು ಯಶಸ್ವಿಯಾಗಲಿ ಮತ್ತು ಸಮುದಾಯಕ್ಕೆ ಅನುಕೂಲ ಕಲ್ಪಿಸುವಂತಾಗಲಿ” ಎಂದು ಹಾರೈಸಿದರು. ತಾಲ್ಲೂಕು ದಸಂಸ (ಅಂಬೇಡ್ಕರ್ವಾದ) ಸಮಿತಿ ಸಂಚಾಲಕರಾದ ಕೂಡಗಿ ಗೋವಿಂದರಾಜು ಮಾತನಾಡಿ, “ಈ ಮಹತ್ವದ ಸಮಾವೇಶದಲ್ಲಿ ಭಾಗವಹಿಸಲು ನಮ್ಮ ತಾಲ್ಲೂಕಿನಿಂದ ಎರಡು ಬಸ್ಗಳ ಮೂಲಕ 200ಕ್ಕೂ ಹೆಚ್ಚು ಜನರು…

Read More

ತಿಪಟೂರು: ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಿ. ನಾರಾಯಣ್ ಸ್ಪಷ್ಟಪಡಿಸಿದ್ದಾರೆ. ನಗರದ ಹುಳಿಯಾರು ರಸ್ತೆಯ ಟಿ.ಎಂ. ಮಂಜುನಾಥ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಸನ್ಮಾನಿಸಿ, ಸಿಹಿ ಹಂಚಿ ಅವರು ಮಾತನಾಡಿದರು. “ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಕ್ಕರೆ ಪಕ್ಷದ ಪರವಾಗಿ, ಇಲ್ಲವಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಂಡಿತ,” ಎಂದು ಅವರು ತಮ್ಮ ರಾಜಕೀಯ ನಿಲುವನ್ನು ಪ್ರಕಟಿಸಿದರು. ಕಳೆದ 18–19 ವರ್ಷಗಳಿಂದ ತಾಲೂಕಿನ ಜನತೆಯೊಂದಿಗೆ ನಿರಂತರ ಒಡನಾಟ ಹೊಂದಿರುವುದನ್ನು ಸ್ಮರಿಸಿದ ನಾರಾಯಣ್, ಈ ಬಾರಿ ಅಭಿಮಾನಿಗಳ ಆಸೆಯಂತೆ ಜುಲೈ 27ರಂದು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ 288 ಸರ್ಕಾರಿ ಶಾಲೆಗಳ ಒಟ್ಟು 13,000 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ, ಕ್ಷೇತ್ರದ 10,000 ಹೆಣ್ಣು ಮಕ್ಕಳಿಗೆ ಜನ್ಮದಿನದ…

Read More

ಬಳ್ಳಾರಿ: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಹಮ್ಮಿಕೊಳ್ಳಲಾಗಿರುವ ‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ’ ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ನಗರದ ಸರ್ಕಾರಿ (ಮಾ.ಪು) ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಗುರುವಾರ ಬೃಹತ್ ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು, “ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಪ್ರತಿಯೊಬ್ಬ ನಾಗರಿಕರು ತಮ್ಮ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ಎಸ್‌ಐಆರ್ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಇದರಿಂದ ಪಾರದರ್ಶಕ ಹಾಗೂ ವಿಶ್ವಾಸಾರ್ಹ ಮತದಾರರ ಪಟ್ಟಿ ಸಿದ್ಧಗೊಳ್ಳಲು ಸಾಧ್ಯವಾಗುತ್ತದೆ. ಈ ಕುರಿತು ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಹಾಗೂ ಪೋಷಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು” ಎಂದು ಕರೆ ನೀಡಿದರು. 18 ವರ್ಷ…

Read More

ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ : ಕೊರಟಗೆರೆ ತಾಲೂಕಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದ 8,589 ಮಂದಿ ಫಲಾನುಭವಿಗಳಿಗೆ ಕಳೆದ ಕೆಲ ದಿನಗಳಿಂದ ಪಿಂಚಣಿ ಜಮೆಯಾಗದೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ವೃದ್ಧರು, ವಿಧವೆಯರು ಹಾಗೂ ವಿಕಲಚೇತನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ತಹಶೀಲ್ದಾರ್ ಮಂಜುನಾಥ್, “ತಾಲೂಕಿನಲ್ಲಿ ಒಟ್ಟು 45,287 ಮಂದಿ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿದ್ದಾರೆ. ಅದರಲ್ಲಿ 8,589 ಪ್ರಕರಣಗಳು ಮೇಲ್ನೋಟಕ್ಕೆ ಅನರ್ಹ ಅಥವಾ ದಾಖಲೆಗಳ ಪರಿಶೀಲನೆಗೆ ಒಳಪಟ್ಟಿವೆ” ಎಂದು ತಿಳಿಸಿದರು. ಪಿಂಚಣಿ ಏಕೆ ಸ್ಥಗಿತ ? ಪಿಂಚಣಿ ಸ್ಥಗಿತಕ್ಕೆ ಪ್ರಮುಖ ಕಾರಣಗಳನ್ನು ವಿವರಿಸಿದ ತಹಶೀಲ್ದಾರ್, “ನಿಗದಿತ ಅರ್ಹ ವಯಸ್ಸು ಪೂರ್ಣಗೊಳ್ಳದಿರುವುದು, ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವುದು, ಆಧಾರ್–ರೇಷನ್ ಕಾರ್ಡ್‌ನಲ್ಲಿ ಹೆಸರು–ವಯಸ್ಸು ವ್ಯತ್ಯಾಸ, ಮರುಪರಿಶೀಲನೆಯಲ್ಲಿ ಅನರ್ಹತೆ ಕಂಡುಬಂದಿರುವುದು ಸೇರಿದಂತೆ ವಿವಿಧ ಆಡಳಿತಾತ್ಮಕ ಕಾರಣಗಳಿವೆ” ಎಂದರು. “ರೂ.4,000ಕ್ಕೂ ಹೆಚ್ಚು ಪಿಂಚಣಿ ದರದ ಮಾಹಿತಿ ಪಡೆದ ಪ್ರಕರಣಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ಇನ್ನುಳಿದ ಪ್ರಕರಣಗಳು ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಂಡಿವೆ, ಶಾಶ್ವತವಲ್ಲ” ಎಂದು ಅವರು…

Read More

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಐಸಿಎಸ್‌ ಎಸ್‌ ಆರ್–ಪ್ರಾಯೋಜಿತ ಸಂಶೋಧನ ಯೋಜನೆಗೆ ಸಂಶೋಧನ ಸಹಾಯಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರೊ. ಗುಂಡೂರ್ ಎನ್. ಎಸ್. ಅವರು ಪ್ರಧಾನ ಸಂಶೋಧಕರಾಗಿರುವ ‘ರಿಕನ್‌ ಸ್ಟ್ರಕ್ಟಿಂಗ್ ಇಂಡಿಯನ್ ಐಡಿಯಾಸ್: ಕೀ ಕಾನ್ಸೆಪ್ಟ್ಸ್ ಇನ್ ವೀರಶೈವ ಡಿಸ್ಕೋರ್ಸ್’ ಎಂಬ ಈ ಸಂಶೋಧನ ಯೋಜನೆಗೆ ಒಂದು ವರ್ಷದ ಅವಧಿಗೆ ಸಂಶೋಧನ ಸಹಾಯಕರ ಅಗತ್ಯವಿದ್ದು ಯಾವುದೇ ಸಮಾಜ ವಿಜ್ಞಾನ ಅಥವಾ ಸಂಬಂಧಿತ ವಿಷಯಗಳಲ್ಲಿ ಕನಿಷ್ಠ ಶೇ. 55 ರಷ್ಟು ಅಂಕಗಳೊಂದಿಗೆ (ಪ.ಜಾ./ಪ.ಪಂ./ದಿವ್ಯಾಂಗ ಅಭ್ಯರ್ಥಿಗಳಿಗೆ ಶೇ. 50) ಸ್ನಾತಕೋತ್ತರ ಪದವಿ, ನೆಟ್ ತೇರ್ಗಡೆ/ ಎಂ.ಫಿಲ್/ ಪಿಹೆಚ್.ಡಿ ಪದವಿ ಪಡೆದಿರಬೇಕು. ಜು.9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ತುಮಕೂರು ವಿಶ್ವವಿದ್ಯಾನಿಲಯದ ಜಾಲತಾಣ www.tumkuruniversity.ac.in ಗೆ ಭೇಟಿ ನೀಡಲು ಕೋರಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More