nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಂವಿಧಾನ ಬದ್ಧ ಮತದಾನದ ಹಕ್ಕನ್ನು ಉಳಿಸಿ: ಟಿ.ಬಿ. ಜಯಚಂದ್ರ ಕರೆ

    July 3, 2026

    ಪೋಷಕತ್ವ – ಮಕ್ಕಳ ಬಾಳಿಗೆ ಬೆಳಗಾಗಿ ಕಾರ್ಯಕ್ರಮ: ಪೋಷಕರಿಂದ ಅರ್ಜಿ ಆಹ್ವಾನ

    July 3, 2026

    ಎಸ್ ಐ ಆರ್: 3 ದಿನಗಳಲ್ಲಿ 5.15 ಲಕ್ಷ ಅರ್ಜಿ ವಿತರಣೆ | ಮನೆ ಭೇಟಿ ವೇಳೆ 59 ಮಂದಿ ಮೃತ ಮತದಾರರು ಪತ್ತೆ

    July 3, 2026
    Facebook Twitter Instagram
    ಟ್ರೆಂಡಿಂಗ್
    • ಸಂವಿಧಾನ ಬದ್ಧ ಮತದಾನದ ಹಕ್ಕನ್ನು ಉಳಿಸಿ: ಟಿ.ಬಿ. ಜಯಚಂದ್ರ ಕರೆ
    • ಪೋಷಕತ್ವ – ಮಕ್ಕಳ ಬಾಳಿಗೆ ಬೆಳಗಾಗಿ ಕಾರ್ಯಕ್ರಮ: ಪೋಷಕರಿಂದ ಅರ್ಜಿ ಆಹ್ವಾನ
    • ಎಸ್ ಐ ಆರ್: 3 ದಿನಗಳಲ್ಲಿ 5.15 ಲಕ್ಷ ಅರ್ಜಿ ವಿತರಣೆ | ಮನೆ ಭೇಟಿ ವೇಳೆ 59 ಮಂದಿ ಮೃತ ಮತದಾರರು ಪತ್ತೆ
    • ಕೇಂದ್ರದ ‘ರಿವಾರ್ಡ್’ ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಕ್ರಮಕ್ಕೆ ಭೀಮ ಆರ್ಮಿ ಒತ್ತಾಯ
    • ಅಕ್ರಮ ಚಟುವಟಿಕೆ ತಡೆಗೆ ಅಂತಾರಾಜ್ಯ ಪೊಲೀಸ್ ಸಮನ್ವಯ ಸಭೆ: ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ
    • ಬೆಂಗಳೂರಿನ ಜನಾಗ್ರಹ ಸಮಾವೇಶಕ್ಕೆ ಸರಗೂರು ತಾಲ್ಲೂಕಿನಿಂದ 200ಕ್ಕೂ ಹೆಚ್ಚು ದಲಿತ ಕಾರ್ಯಕರ್ತರ ಪ್ರಯಾಣ
    • 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಮಾಜಿ ಜಿ.ಪಂ. ಸದಸ್ಯ ಜಿ. ನಾರಾಯಣ್ ಘೋಷಣೆ
    • ಬಳ್ಳಾರಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; ಕಾಲೇಜು ವಿದ್ಯಾರ್ಥಿಗಳಿಂದ ಬೃಹತ್ ಜಾಗೃತಿ ಜಾಥಾ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎಸ್ ಐ ಆರ್: 3 ದಿನಗಳಲ್ಲಿ 5.15 ಲಕ್ಷ ಅರ್ಜಿ ವಿತರಣೆ | ಮನೆ ಭೇಟಿ ವೇಳೆ 59 ಮಂದಿ ಮೃತ ಮತದಾರರು ಪತ್ತೆ
    ತುಮಕೂರು July 3, 2026

    ಎಸ್ ಐ ಆರ್: 3 ದಿನಗಳಲ್ಲಿ 5.15 ಲಕ್ಷ ಅರ್ಜಿ ವಿತರಣೆ | ಮನೆ ಭೇಟಿ ವೇಳೆ 59 ಮಂದಿ ಮೃತ ಮತದಾರರು ಪತ್ತೆ

    By adminJuly 3, 2026No Comments2 Mins Read
    shubha kalyan

    ತುಮಕೂರು: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ ಐ ಆರ್) ಅಭಿಯಾನ ರಾಜ್ಯದೆಲ್ಲೆಡೆಯಂತೆ ಜಿಲ್ಲೆಯಲ್ಲಿಯೂ ಜೂ. 30 ರಿಂದ ಆರಂಭ ಗೊಂಡಿದ್ದು, ಮನೆ ಮನೆ ಭೇಟಿ ಭಾಗವಾಗಿ ಜುಲೈ 2ರ ಅಂತ್ಯಕ್ಕೆ ಒಟ್ಟು 5,15,328 ಸಂಖ್ಯೆಯ ಎನ್ಮುಮರೇಷನ್ ಅರ್ಜಿಗಳನ್ನು ಮತದಾರರಿಗೆ ಕಳೆದ 3 ದಿನಗಳಲ್ಲಿ ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈ ತಿಂಗಳ 29ರವರೆಗೆ ಎನ್ಮುಮರೇಷನ್ ಫಾರಂ ವಿತರಣೆ ಹಾಗೂ ಡಿಜಿಟೈಸ್ಡ್ ಕಾರ್ಯ ನಡೆಯಲಿದ್ದು, ಜಿಲ್ಲೆಯಲ್ಲಿ ಪಟ್ಟಿ ಮಾಡಿರುವ 22,98,879 ಮತದಾರರ ಪೈಕಿ ಕಳೆದ ಮೂರು ದಿನಗಳಲ್ಲಿ 5,15,328 ಮಂದಿ ಮತದಾರರಿಗೆ ಅರ್ಜಿಯನ್ನು ಮನೆಮನೆ ಭೇಟಿಯಲ್ಲಿ ಖುದ್ದು ವಿತರಿಸಿದ್ದು, ಶೇ. 22.42ರಷ್ಟು ಪ್ರಗತಿಯಾಗಿದೆ. ಆನ್ ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ 1025 ಮಂದಿ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ ಬಿಎಲ್ಒಗಳ ಮನೆ ಮನೆಭೇಟಿಯಲ್ಲಿ 91 ಮತದಾರರನ್ನು ಎಎಸ್ಡಿಡಿಟಿ (ಮೃತರು, ಸ್ಥಳಾಂತರಗೊಂಡವರು) ಪಟ್ಟಿಯಲ್ಲಿ ಗುರುತಿಸಲಾಗಿದ್ದು, 25 ಮಂದಿ ಶಾಶ್ವತವಾಗಿ ಸ್ಥಳಾಂತರ ಗೊಂಡಿರುವುದು ಪತ್ತೆಯಾಗಿದೆ. ಉಳಿದಂತೆ 59 ಮಂದಿ ಮತದಾರರು ಮೃತರಾಗಿರುವುದು ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿಧಾನ ಸಭಾವಾರು ಮತದಾರರ ಅಂಕಿ-ಅಂಶ:

    ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 2,20,625 ಮತದಾರರ ಪೈಕಿ ಈವರೆಗೆ 46,746 ಮಂದಿಗೆ ಎನ್ಮುಮರೇಷನ್ ಫಾರಂ ಕೊಟ್ಟಿದ್ದು, 427 ಸಂಖ್ಯೆಯಷ್ಟು ಡಿಜಿಟಲ್ ದಾಖಲೀಕರಣ ವಾಗಿದೆ. ತಿಪಟೂರಿನಲ್ಲಿ 1,86,174 ಮತದಾರರಲ್ಲಿ 62,867 ಮತದಾರರಿಗೆ ಫಾರಂ ಹಂಚಿದ್ದು, 152 ಮತದಾರರ ಅರ್ಜಿಗಳು ದಾಖಲೀಕರಣ ವಾಗಿದೆ. ತುರುವೇಕೆರೆಯಲ್ಲಿ 1,83,547 ಮಂದಿ ಮತದಾರರ ಪೈಕಿ 44,757 ಮಂದಿಗೆ ಅರ್ಜಿ ವಿತರಿಸಿ 236 ಅರ್ಜಿಗಳನ್ನು ಡಿಜಿಟಲ್ ದಾಖಲೀಕರಣ ಮಾಡಲಾಗಿದೆ. ಕುಣಿಗಲ್ನಲ್ಲಿ 2,05,998 ಮತದಾರರ ಪೈಕಿ 42,658 ಮತದಾರರಿಗೆ ಅರ್ಜಿ ವಿತರಿಸಿದ್ದು, 1395 ಮಂದಿ ಅರ್ಜಿಯನ್ನು ದಾಖಲೀಕರಣಗೊಳಿಸಲಾಗಿದೆ. ತುಮಕೂರು ನಗರದ 2,73,825 ಮತದಾರರ ಪೈಕಿ 50546 ಮತದಾರರಿಗೆ ಅರ್ಜಿ ವಿತರಿಸಿದ್ದು, 1008 ಅರ್ಜಿ ಡಿಜಿಟಲೀಕರಣಗೊಂಡಿದೆ. ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ 2,11,783 ಮತದಾರರ ಪೈಕಿ 31,769 ಮತದಾರರಿಗೆ ಅರ್ಜಿ ವಿತರಿಸಿ 1172 ಮಂದಿಯ ಅರ್ಜಿಗಳನ್ನು ದಾಖಲೀಕರಣಮಾಡಲಾಗಿದೆ. ಅದೇ ರೀತಿ ಕೊರಟಗೆರೆ ತಾಲ್ಲೂಕಿನ 2,09,495 ಮತದಾರರ ಪೈಕಿ 56770 ಮತದಾರರಿಗೆ ಅರ್ಜಿ ನೀಡಿದ್ದು, 1992 ಮಂದಿಯ ಅರ್ಜಿ ಡಿಜಿಟಲ್ ರೂಪದಲ್ಲಿ ದಾಖಲೀಕರಣಗೊಳಿಸಲಾಗಿದೆ. ಗುಬ್ಬಿ ಕ್ಷೇತ್ರದ 1,83,919 ಮತದಾರರ ಪೈಕಿ 38863 ಮಂದಿಗೆ ಅರ್ಜಿ ನೀಡಲಾಗಿದ್ದು, 3990 ಮಂದಿಯ ಅರ್ಜಿ ದಾಖಲೀಕರಣ ಮಾಡಲಾಗಿದೆ. ಸಿರಾ ಕ್ಷೇತ್ರದಲ್ಲಿ 2,30,792 ಮತದಾರರ ಪೈಕಿ 56,633 ಮಂದಿಗೆ ಅರ್ಜಿ ವಿತರಿಸಿದ್ದು, 959 ಅರ್ಜಿಗಳು ಡಿಜಿಟಲೀ ದಾಖಲೀಕರಣವಾಗಿದೆ. ಪಾವಗಡ ಕ್ಷೇತ್ರದಲ್ಲಿ 1,98,925 ಮತದಾರರ ಪೈಕಿ 29884 ಅರ್ಜಿಗಳು ವಿತರಣೆಯಾಗಿದ್ದು, 2349 ಅರ್ಜಿಗಳು ಡಿಜಿಟಲೀಕರಣಗೊಂಡಿದೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1,93,794 ಮತದಾರರ ಪೈಕಿ 53,835 ಮತದಾರರಿಗೆ ಅರ್ಜಿಗಳನ್ನು ನೀಡಲಾಗಿದ್ದು, ಇವುಗಳಲ್ಲಿ 1307 ಸಂಖ್ಯೆಯ ಅರ್ಜಿಗಳು ಡಿಜಿಟಲೀ ದಾಖಲೀಕರಣಗೊಂಡಿವೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ಪೋಷಕತ್ವ – ಮಕ್ಕಳ ಬಾಳಿಗೆ ಬೆಳಗಾಗಿ ಕಾರ್ಯಕ್ರಮ: ಪೋಷಕರಿಂದ ಅರ್ಜಿ ಆಹ್ವಾನ

    July 3, 2026

    ತಲೆಗೆ ಬಿದ್ದ ಏಟು: ಜು.5ರಂದು ಕೃತಿ ಬಿಡುಗಡೆ

    July 2, 2026

    ತುಮಕೂರಿನ ಹಿರಿಯ ಪತ್ರಕರ್ತ ಎಂ.ಈಶ್ವರ್ ಅನಾರೋಗ್ಯದಿಂದ ನಿಧನ

    July 2, 2026

    Leave A Reply Cancel Reply

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸಿರಾ

    ಸಂವಿಧಾನ ಬದ್ಧ ಮತದಾನದ ಹಕ್ಕನ್ನು ಉಳಿಸಿ: ಟಿ.ಬಿ. ಜಯಚಂದ್ರ ಕರೆ

    July 3, 2026

    ಸಿರಾ: ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎಸ್…

    ಪೋಷಕತ್ವ – ಮಕ್ಕಳ ಬಾಳಿಗೆ ಬೆಳಗಾಗಿ ಕಾರ್ಯಕ್ರಮ: ಪೋಷಕರಿಂದ ಅರ್ಜಿ ಆಹ್ವಾನ

    July 3, 2026

    ಎಸ್ ಐ ಆರ್: 3 ದಿನಗಳಲ್ಲಿ 5.15 ಲಕ್ಷ ಅರ್ಜಿ ವಿತರಣೆ | ಮನೆ ಭೇಟಿ ವೇಳೆ 59 ಮಂದಿ ಮೃತ ಮತದಾರರು ಪತ್ತೆ

    July 3, 2026

    ಕೇಂದ್ರದ ‘ರಿವಾರ್ಡ್’ ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಕ್ರಮಕ್ಕೆ ಭೀಮ ಆರ್ಮಿ ಒತ್ತಾಯ

    July 3, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.