Author: admin

ಬೀದರ್: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೇ ಜುಲೈ 6ರ ಸೋಮವಾರದಂದು ಬೀದರ್ ಜಿಲ್ಲೆಗೆ ಅಧಿಕೃತ ಪ್ರವಾಸ ಹಮ್ಮಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಕರ್ತವ್ಯಾಧಿಕಾರಿ ಹಾಗೂ ಸರ್ಕಾರದ ಜಂಟಿ ಕಾರ್ಯದರ್ಶಿ ಬಿ.ಎಸ್.ಶ್ರೀಧರ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸಿಎಂ ಅವರ ವಿವರವಾದ ಪ್ರವಾಸದ ವೇಳಾಪಟ್ಟಿ ಇಂತಿದೆ: ಸಿಎಂ ಪ್ರವಾಸದ ವೇಳಾಪಟ್ಟಿ: ಮಧ್ಯಾಹ್ನ 1:30: ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ ಆರಂಭ. ಮಧ್ಯಾಹ್ನ 2:30: ಬೀದರ್ ವಿಮಾನ ನಿಲ್ದಾಣಕ್ಕೆ (ಏರ್ ಬೇಸ್) ಆಗಮನ. ಮಧ್ಯಾಹ್ನ 3:40: ಬೀದರ್‌ನಿಂದ ರಸ್ತೆ ಮಾರ್ಗದ ಮೂಲಕ ಬಸವಕಲ್ಯಾಣಕ್ಕೆ ತಲುಪಲಿರುವ ಸಿಎಂ, ಅಲ್ಲಿ ನಿರ್ಮಾಣವಾಗುತ್ತಿರುವ ನೂತನ ‘ಅನುಭವ ಮಂಟಪ’ಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಸಂಜೆ 6:00: ಬಸವಕಲ್ಯಾಣದಿಂದ ಹೊರಟು ರಸ್ತೆ ಮಾರ್ಗವಾಗಿ ಮತ್ತೆ ಬೀದರ್ ನಗರಕ್ಕೆ ವಾಪಸ್. ಸಂಜೆ 7:00: ಬೀದರ್ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.…

Read More

ಔರಾದ್: ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಜನರಿಗೆ ವಿಶ್ವಾಸಾರ್ಹ ಮಾಹಿತಿ ನೀಡುವುದು ಪತ್ರಕರ್ತರ ಪ್ರಮುಖ ಕರ್ತವ್ಯವಾಗಿದೆ. ಸ್ವಹಿತಕ್ಕಿಂತ ಸಮಾಜದ ಹಿತವೇ ಪತ್ರಿಕೋದ್ಯಮದ ಮುಖ್ಯ ಧ್ಯೇಯವಾಗಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯೆ ರಶ್ಮಿ ಎಸ್. ಅಭಿಪ್ರಾಯಪಟ್ಟರು. ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಪತ್ರಿಕಾ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ‘ಪತ್ರಿಕೋದ್ಯಮ–ಇತಿಹಾಸ ಮತ್ತು ವರ್ತಮಾನ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಮಕಾಲೀನ ವಿದ್ಯಮಾನಗಳ ಕುರಿತು ಪತ್ರಕರ್ತರು ಆಳವಾದ ಅಧ್ಯಯನ ನಡೆಸಬೇಕು. ಕೇವಲ ಸುದ್ದಿ ಬರೆಯುವುದಷ್ಟೇ ಅಲ್ಲ, ಆ ಸುದ್ದಿಯನ್ನು ಸರಿಯಾಗಿ ಅರ್ಥೈಸುವ ಸಾಮರ್ಥ್ಯವೂ ಪತ್ರಕರ್ತರಲ್ಲಿ ಇರಬೇಕು. ಕರ್ತವ್ಯನಿಷ್ಠೆ ಮತ್ತು ಜವಾಬ್ದಾರಿಯುತ ಮನೋಭಾವವೇ ಉತ್ತಮ ಪತ್ರಿಕೋದ್ಯಮದ ಅಡಿಪಾಯ ಎಂದ ಅವರು, ಹೊಸ ತಂತ್ರಜ್ಞಾನ, ಕಾನೂನು, ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿರಂತರ ಅಧ್ಯಯನ ನಡೆಸಿದಾಗ ಮಾತ್ರ ಗುಣಮಟ್ಟದ ಪತ್ರಿಕೋದ್ಯಮ ಸಾಧ್ಯವಾಗುತ್ತದೆ ಎಂದರು. ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಪ್ರತಿದಿನ ಸಂಪಾದಕೀಯ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು…

Read More

ಗುಬ್ಬಿ: ವಿಶಿಷ್ಟ ಆಚರಣೆ ಸಂಪ್ರದಾಯ ಮೂಲಕ ಬುಡಕಟ್ಟು ಮೂಲದ ಕಾಡು ಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ನಡೆಸಿದೆ. ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು. ಅವರು ಸೋಮಲಾಪುರ, ಬಿಳಿಗೆರೆ, ಕಂಚೀರಾಹಟ್ಟಿ, ಹೊಸಹಟ್ಟಿ, ಹೊಸಹಟ್ಟಿ, ಮೂಡಲಪಾಳ್ಯ ಹಾಗೂ ಜುಂಜಪ್ಪನ ಹಟ್ಟಿ ಗ್ರಾಮಗಳಲ್ಲಿ ಕಿರ್ಲೋಸ್ಕರ್ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಅಮಿತ್ ಶಾ ಅವರೊಂದಿಗೆ ಎಸ್ಟಿ ಮೀಸಲು ಬಗ್ಗೆ ಚರ್ಚಿಸಿದ್ದೇನೆ. ಪ್ರಧಾನಮಂತ್ರಿಗಳು ಸಹ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಹತ್ತು ತಿಂಗಳಲ್ಲಿ ಕಾಡು ಗೊಲ್ಲರಿಗೆ ಸಿಹಿ ಸುದ್ದಿ ಸಿಗಲಿದೆ. ಟಯೋಟಾ ಕಿರ್ಲೋಸ್ಕರ್ ಕಂಪೆನಿ ದೇಶದ ಉನ್ನತ ಉದ್ಯಮ ಕಂಪೆನಿ ಎನಿಸಿದೆ. ಅಲ್ಲಿನ 16 ಸಾವಿರ ಉದ್ಯೋಗಿಗಳು ಕನ್ನಡಿಗರು ಎಂಬುದು ನಮ್ಮ ಹೆಮ್ಮೆ. ಅಲ್ಲಿನ ಸಿಎಸ್‌ಆರ್ ಫಂಡ್ ಗೊಲ್ಲರ ಹಟ್ಟಿಗಳಿಗೆ ನೀರು ಒದಗಿಸುವ ಕೆಲಸಕ್ಕೆ…

Read More

ತುಮಕೂರು: ತುಮಕೂರು ತಾಲೂಕು ಕೋರ ಗ್ರಾಮದ ಬಳಿಯಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತರಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಎಂದು ಕೋರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ. ಪ್ರಕರಣ–1 : ಸುಮಾರು 83 ವರ್ಷದ ನಾರಾಯಣ ಬಿನ್ ಮದಲ್ಪ ಮುತ್ತು ಎಂಬ ಅಪರಿಚಿತ ವೃದ್ಧನು ಜೂನ್ 23ರಂದು ಮೃತಪಟ್ಟಿದ್ದು, ಮೃತ ದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಡಲಾಗಿದೆ. ಮೃತನು 153 ಸೆಂ.ಮೀ. ಎತ್ತರ, ಎಣ್ಣೆಗೆಂಪು ಮೈಬಣ್ಣ, ದೃಢಕಾಯ ಶರೀರ ಹೊಂದಿದ್ದು, ಮೃತನ ಮೈಮೇಲೆ ನಿರಾಶ್ರಿತ ಪರಿಹಾರ ಕೇಂದ್ರದವರು ನೀಡಿದ್ದ ಕೆಂಪು ಬಣ್ಣದ ಅಂಗಿ ಹಾಗೂ ಬರ್ಮುಡ ನಿಕ್ಕರ್ ಇರುತ್ತದೆ. ಪ್ರಕರಣ–2 : ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯು ಜೂನ್ 27ರಂದು ಮೃತಪಟ್ಟಿರುತ್ತಾನೆ. ಮೃತನು 165 ಸೆಂ.ಮೀ. ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದಾನೆ. ಮೃತನ ಮೈಮೇಲೆ ಬಿಳಿ, ಹಳದಿ, ನೀಲಿ ಚುಕ್ಕೆಗಳಿರುವ ಅರ್ಧ ತೋಳಿನ ಜುಬ್ಬಾ, ನೀಲಿ ಬಣ್ಣದ ನಿಕ್ಕರ್ ಇರುತ್ತದೆ. ಬಲ ಮೊಣಕೈ…

Read More

ಕುಣಿಗಲ್: ಚುನಾವಣಾ ಆಯೋಗದ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಬಿಎಲ್‌ ಒಗಳ ಕರ್ತವ್ಯಕ್ಕೆ, ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿ ಅವರನ್ನು ಭಯ ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಎಚ್.ಎಸ್.ದೀಪಕ್‌ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಅವರು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪಟ್ಟಣದ 19 ನೇ ವಾರ್ಡ್‌ನಲ್ಲಿ ಒಂದು ಮನೆಯಲ್ಲಿ ಕುಳಿತುಕೊಂಡು ಬಿಎಲ್‌ ಒ ಇಂದುಮತಿ ಎಸ್‌ ಐಆರ್ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಅವರ ಆರೋಪಕ್ಕೆ ತಿರುಗೇಟು ನೀಡಿದ ದೀಪಕ್‌ಗೌಡ ಇಂದುಮತಿ ಅವರು ಯಾವುದೇ ಒಂದು ಮನೆಯಲ್ಲಿ ಕುಳಿತುಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಲ್ಲ. ಇಂದುಮತಿ ಅವರಿಗೆ ನೀಡಿರುವ 19 ನೇ ವಾರ್ಡ್‌ನಲ್ಲಿ 1180 ಮತಗಳಿದ್ದು, ಅವರು ಅಂಗನವಾಡಿ ಕೇಂದ್ರದಲ್ಲಿ ಕುಳಿತುಕೊಂಡು ಆಯಾ ಕುಟುಂಬಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಬೇರ್ಪಡಿಸುತ್ತಿದ್ದ ವೇಳೆ ಅಲ್ಲಿಯ ಜನರು ನಮಗೆ ಸೇರಿದ ಫಾರಂ ಕೊಡಿ ಎಂದು ಬಿಎಲ್‌ ಒ ಇಂದುಮತಿ ಅವರನ್ನು…

Read More

ತುಮಕೂರು: ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲಕರ ಯೋಜನೆಗಳಿದ್ದು, ಅವುಗಳ ಪ್ರಯೋಜನ ಪಡೆದು ಮುಂದೆ ಬರುವಂತೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ನಂಜೇಗೌಡ ಅವರು ಕರೆ ನೀಡಿದರು. ಮಲ್ಲಸಂದ್ರದಲ್ಲಿರುವ ಡಾ.ಕುರಿಯನ್ ಸಭಾಂಗಣದಲ್ಲಿ ಶೆಟ್ಟಿಪ್ಪನಹಳ್ಳಿ ಹಾಗೂ ಬೇಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸದಸ್ಯರುಗಳಿಗೆ ಆಯೋಜಿಸಿದ್ದ ಕ್ಷೀರ ಸಂಜೀವಿನಿಯ ಯೋಜನೆಯ 6ನೇ ಹಂತದ ತರಬೇತಿ ಕಾರ್ಯಕ್ರಮ, ಅಂಚಿನ ಹಣದ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಮಹಿಳೆಯರಿಗೆ ಪೂರಕ ವಾತಾವರಣ ಇರಲಿಲ್ಲ. ಈಗ ಸಾಕಷ್ಟು ಅವಕಾಶಗಳಿವೆ. ಹಾಲು ಒಕ್ಕೂಟ, ಕ್ಷೀರ ಸಂಜೀವಿನಿ ಯೋಜನೆಯಡಿಯಲ್ಲಿ ಮಹಿಳೆಯರಿಗಾಗಿ ತರಬೇತಿಗಳು ಮತ್ತು ಸಹಾಯ ಧನದ ಆರ್ಥಿಕ ಅನುಕೂಲಗಳಿವೆ. ಇವುಗಳನ್ನು ಪಡೆದು ಕೊಂಡು ಅಭಿವೃದ್ಧಿ ಹೊಂದುವಂತೆ ಕರೆ ನೀಡಿದರು. ಗ್ರಾಮೀಣ ಮಹಿಳೆಯರಿಗೆ ಹೈನುಗಾರಿಕೆ ಉತ್ತಮವಾದ ದಾರಿಯಾಗಿದೆ. ಗುಣಮಟ್ಟದ ಹಾಲು ಉತ್ಪಾದನೆಯ ಕಡೆಗೆ ಗಮನ ಹರಿಸಿ ನಂದಿನಿಯ ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಸಂಘಟನೆಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸ್ಟೆಪ್ ಯೋಜನೆಯ ಮುಖ್ಯಸ್ಥರಾದ…

Read More

ಸಿರಾ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಾಗೂ ಕೆಲವು ಮುಖ್ಯ ಔಷಧಿಗಳ ಕೊರತೆ ಇದ್ದು, ಸದರಿ ಸಮಸ್ಯೆಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು. ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆ ಆರಂಭಗೊಳ್ಳುತ್ತಿದ್ದಂತೆ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ಸಿದ್ಧೇಶ್ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ.ಬಾಬು ರಾಜೇಂದ್ರ ಪ್ರಸಾದ್ ಆಸ್ಪತ್ರೆಯ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಡಾ.ಸಿದ್ಧೇಶ್ ಮಾತನಾಡಿ, ಸಾಮಾನ್ಯ ಔಷಧಿಗಳ ಕೊರತೆ ಇಲ್ಲವಾದರೂ ಕೆಲವು ಮುಖ್ಯ ಔಷಧಿಗಳ ಕೊರತೆ ಇದೆ ಎಂದರು. ಡಾ.ಬಾಬು ರಾಜೇಂದ್ರ ಪ್ರಸಾದ್ ಮಾತನಾಡಿ, ಇಬ್ಬರು ತುರ್ತು ಚಿಕಿತ್ಸಾ ವೈದ್ಯರು, ಓರ್ವ ಸರ್ಜನ್, ಒಬ್ಬರು ಫಿಜಿಷಿಯನ್ ಸೇರಿದಂತೆ 4 ಮಂದಿ ಶುಶ್ರೂಷಾಧಿಕಾರಿಗಳ ಕೊರತೆ ಇದೆ. ಖಾಲಿ ಇರುವ ಈ ಸ್ಥಾನಗಳ ಭರ್ತಿಯಾದರೆ ಸಿಬ್ಬಂದಿ ಕೊರತೆ ನೀಗಿಸಬಹುದು ಎಂದರು. ಕೂಡಲೇ ವೈದ್ಯರ ಕೊರತೆ ಹಾಗೂ ಔಷಧಿಗಳ ಕೊರತೆಯನ್ನು ನೀಗಿಸಲು…

Read More

ತಿಪಟೂರು: ನಗರದ ಹಳೇಪಾಳ್ಯ–ಕಲ್ಕೆರೆ ರಸ್ತೆಯಲ್ಲಿರುವ ಮಹದೇವ ಆಗ್ರೋ ಇಂಡಸ್ಟ್ರೀಯಲ್ ತೆಂಗಿನ ಕಾಯಿ ಕಾರ್ಖಾನೆಯ ಮೇಲೆ ದಾಳಿ ನಡೆಸಿರುವ ಕಾರ್ಮಿಕ ಇಲಾಖೆ ಹಾಗೂ ಪೊಲೀಸರು ಅಲ್ಲಿ ಕೆಲಸ ಮಾಡುತ್ತಿದ್ದ 7 ಬಾಲ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ. ಸದರಿ ಕಾರ್ಖಾನೆಯಲ್ಲಿ ತೆಂಗಿನ ಕಾಯಿ ಒಡೆಯುವುದು, ಚಿಪ್ಪು ತೆಗೆಯುವುದು, ಸೌದೆ ಸಾಗಿಸುವುದು ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಐದು ಬಾಲಕಿಯರು ಹಾಗೂ ಇಬ್ಬರು ಬಾಲಕರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಎಲ್ಲರೂ 9 ರಿಂದ 14 ವರ್ಷದ ಒಳಗಿನವರು ಎಂದು ತಿಳಿದು ಬಂದಿದ್ದು, ಇವರೆಲ್ಲರೂ ಬಿಹಾರದವರು ಎಂದು ಹೇಳಲಾಗಿದೆ. ಮಕ್ಕಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಪುನರ್ವಸತಿ ಕ್ರಮಕ್ಕಾಗಿ ಅವರನ್ನು ತುಮಕೂರಿನ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಕಾರ್ಖಾನೆ ಮಾಲೀಕರ ವಿರುದ್ಧ ಬಾಲ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ತುಮಕೂರು: ಕರ್ತವ್ಯದ ಒತ್ತಡಕ್ಕೆ ಸಿಲುಕಿ ಬೆಳ್ಳಂಬೆಳಗ್ಗೆಯೇ ಕೆಲಸಕ್ಕೆ ಹೊರಟಿದ್ದ ಮಹಿಳಾ ಗ್ರಾಮ ಲೆಕ್ಕಾಧಿಕಾರಿ (VA) ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವ ಮನಕಲಕುವ ಘಟನೆ ಶನಿವಾರ ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಎಸ್‌ ಐಆರ್ (SIR) ಕೆಲಸದ ಭರದಲ್ಲಿ ಜೀವ ಕಳೆದುಕೊಂಡ ನೌಕರಳ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ಸಹೋದ್ಯೋಗಿಗಳು ಹಾಗೂ ಪೋಷಕರು ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮೃತ ಮಹಿಳಾ ನೌಕರರನ್ನು ಗೂಳೂರು ಕಂದಾಯ ವೃತ್ತದ ಗ್ರಾಮ ಲೆಕ್ಕಿಗರಾದ ಭುವನಾ (26) ಎಂದು ಗುರುತಿಸಲಾಗಿದೆ. ಭುವನಾ ಅವರು ನೆಲಮಂಗಲದ ಟಿ.ಬೇಗೂರಿನ ವರದನಾಯಕನಪಾಳ್ಯದ ನಿವಾಸಿಯಾಗಿದ್ದು, ಶುಕ್ರವಾರ ಮುಂಜಾನೆ 5.45ಕ್ಕೆ ಮನೆಯಿಂದ ಹೊರಟು ತುಮಕೂರು ಬಸ್ ನಿಲ್ದಾಣ ತಲುಪಿದ್ದರು. ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ತಮ್ಮ ಕರ್ತವ್ಯದ ಸ್ಥಳವಾದ ಗೂಳೂರಿಗೆ ಎಸ್‌ ಐಆರ್ ಕಾರ್ಯಕ್ಕಾಗಿ 7.35ರ ಸಮಯದಲ್ಲಿ ತೆರಳುತ್ತಿದ್ದರು. ಗೂಳೂರು ರಸ್ತೆಯ ಬೇವಿನ ಮರದಮ್ಮ ಗುಡಿ ಬಳಿ ಬರುತ್ತಿದ್ದಂತೆ ವೇಗವಾಗಿ ಬಂದ ತಮಿಳುನಾಡು ಮೂಲದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ…

Read More

ಊರು: ಸುರಪುರವೆಂಬ ಹಳ್ಳಿ, ಮಿತ್ರರ ಹೆಸರು: ಸೋಮ, ಭೀಮ, ಮತ್ತು ಚಾಮ. ವರ್ಗ: ಸ್ವಲ್ಪ ಮಧ್ಯಮ ವರ್ಗದ ಬಡತನದ ಜೀವನ, ಮಾತಿಗೆ ಸೇರುವ ಜಾಗ: ಊರ ಹೊರಗಿನ ಅರಳಿ ಕಟ್ಟೆ. (ಒಮ್ಮೆ ಮೂವರೂ ಮಿತ್ರರು ಅದೇ ಅರಳಿ ಕಟ್ಟೆ ಮೇಲೆ ಕುಳಿತು ಬೇಸರದ ಮುಖ ಮಾಡಿಕೊಂಡು ತಮ್ಮ ತಮ್ಮ ಕಷ್ಟಗಳನ್ನು ಮಾತನಾಡಿಕೊಳ್ಳುತ್ತಿರುವಾಗ ಒಂದು ನಿರ್ದಾರಕ್ಕೆ ಬರುತ್ತಾರೆ ಅದರಂತೆ ….ಚಾಮನು..) ಚಾಮ: ನೋಡ್ರುಲಾ ನಾವು ಇಂಗೆ ನಿಯತ್ತಿಗಿದ್ರೆ ನಾವು ಇಂಗೆ ಇರ್ಬೇಕಾಯ್ತದೆ ಆರಕ್ಕೇರಲ್ಲ ಮೂ….. ಸೋಮ: ಮೂರಕ್ಕಿಳಿಯಲ್ಲ.. ಚಾಮ: ಏ ಈಗ ಅಂಗಲ್ಲ ಕಣ್ಲಾ ಗಾದೆ ಬದಲಾಗದೆ.. ಸೋಮ: ಮತ್ತೆ? ಚಾಮ: ಮೂರಕ್ಕೇನು ಎರಡಕ್ಕೂ ಇಳಿಬೇಕಾಯ್ತದೆ, ಒಂದಕ್ಕೂ ಇಳಿಬೇಕಾಯ್ತದೆ ಭೀಮ: ಅದು ಬೇರೆ ಅರ್ಥ ಬರ್ತದೆ ಬಿಡ್ಲಾ ಚಾಮ: ಏ ಅಂಗಲ್ಲ ಕಣ್ಲಾ ದಿನೇ ದಿನೇ ಇನ್ನ ಕೆಳಮಟ್ಟಕ್ಕೆ ಹೋಯ್ತಿರ್ತಿವಿ ಅಂತ ಭೀಮ: ಸರಿ ಈಗ ಏನ್ ಮಾಡವ ಅಂತ? ಚಾಮ: ಲೇ ಭೀಮ ಸೋಮ ನಿಮ್ಗೊಂದು ವಿಸಯ ಗೊತ್ತನ್ರುಲಾ… ಆ ನಮ್…

Read More