nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಹುಲ್ ಗಾಂಧಿಗೆ ‘ರಾಹು ಕಾಲ’ ಬಂದಿದೆ, ಅವರ ಪ್ರತಿಭಟನೆಗೆ ಯಾವುದೇ ಅರ್ಥವಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ

    October 7, 2026

    ಹಾಸನ: ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ — ಕೊಲೆ ಶಂಕೆ, ಪ್ರಕರಣ ದಾಖಲು

    October 7, 2026

    ಬೆಂಗಳೂರು: ಅಮೆಜಾನ್ ಕಚೇರಿ ಹೊರಗೆ ಟ್ರಾನ್ಸ್‌’ಫಾರ್ಮರ್ ಸ್ಫೋಟ; ಪಾದಚಾರಿಗೆ ಗಾಯ

    October 7, 2026
    Facebook Twitter Instagram
    ಟ್ರೆಂಡಿಂಗ್
    • ರಾಹುಲ್ ಗಾಂಧಿಗೆ ‘ರಾಹು ಕಾಲ’ ಬಂದಿದೆ, ಅವರ ಪ್ರತಿಭಟನೆಗೆ ಯಾವುದೇ ಅರ್ಥವಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ
    • ಹಾಸನ: ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ — ಕೊಲೆ ಶಂಕೆ, ಪ್ರಕರಣ ದಾಖಲು
    • ಬೆಂಗಳೂರು: ಅಮೆಜಾನ್ ಕಚೇರಿ ಹೊರಗೆ ಟ್ರಾನ್ಸ್‌’ಫಾರ್ಮರ್ ಸ್ಫೋಟ; ಪಾದಚಾರಿಗೆ ಗಾಯ
    • ತುಮಕೂರು: ಸ್ವಂತ ಉದ್ಯಮ ಸ್ಥಾಪನೆಗೆ ಉದ್ಯಮಶೀಲತಾ ತರಬೇತಿ – ಅರ್ಜಿ ಆಹ್ವಾನ
    • ತುಮಕೂರು: ಹಳೆ ದ್ವೇಷದ ಹಿನ್ನೆಲೆ ಯುವಕನ ಬರ್ಬರ ಹತ್ಯೆ; ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
    • ತುಮಕೂರಿನಲ್ಲಿ ವಿದ್ಯಾರ್ಥಿಗಳಿಗೆ ಕಯಾಕಿಂಗ್, ಕನೋಯಿಂಗ್,  ಶೂಟಿಂಗ್ ವಿಶೇಷ ತರಬೇತಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
    • ನಂದಿನಿ ಹಾಲಿನ ದರ ಲೀಟರ್‌ ಗೆ ₹8 ಏರಿಕೆ?; ನವೆಂಬರ್ 1ರಿಂದ ಹೊಸ ದರ ಜಾರಿ?
    • ಫ್ರಿಡ್ಜ್‌’ನಲ್ಲಿಟ್ಟ ಆಹಾರ ಎಷ್ಟು ದಿನ ಸೇಫ್? ಈ ವಸ್ತುಗಳನ್ನು ಹೆಚ್ಚು ದಿನ ಇಟ್ಟರೆ ಅಪಾಯ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವೈದ್ಯರ, ಔಷಧಿಗಳ ಕೊರತೆ ಪರಿಹರಿಸಲು ಶೀಘ್ರ ಕ್ರಮ: ಟಿ.ಬಿ.ಜಯಚಂದ್ರ
    ಸಿರಾ July 5, 2026

    ವೈದ್ಯರ, ಔಷಧಿಗಳ ಕೊರತೆ ಪರಿಹರಿಸಲು ಶೀಘ್ರ ಕ್ರಮ: ಟಿ.ಬಿ.ಜಯಚಂದ್ರ

    By adminJuly 5, 2026No Comments2 Mins Read
    t b jayachandra

    ಸಿರಾ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಾಗೂ ಕೆಲವು ಮುಖ್ಯ ಔಷಧಿಗಳ ಕೊರತೆ ಇದ್ದು, ಸದರಿ ಸಮಸ್ಯೆಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

    ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಭೆ ಆರಂಭಗೊಳ್ಳುತ್ತಿದ್ದಂತೆ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ಸಿದ್ಧೇಶ್ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ.ಬಾಬು ರಾಜೇಂದ್ರ ಪ್ರಸಾದ್ ಆಸ್ಪತ್ರೆಯ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಡಾ.ಸಿದ್ಧೇಶ್ ಮಾತನಾಡಿ, ಸಾಮಾನ್ಯ ಔಷಧಿಗಳ ಕೊರತೆ ಇಲ್ಲವಾದರೂ ಕೆಲವು ಮುಖ್ಯ ಔಷಧಿಗಳ ಕೊರತೆ ಇದೆ ಎಂದರು.

    ಡಾ.ಬಾಬು ರಾಜೇಂದ್ರ ಪ್ರಸಾದ್ ಮಾತನಾಡಿ, ಇಬ್ಬರು ತುರ್ತು ಚಿಕಿತ್ಸಾ ವೈದ್ಯರು, ಓರ್ವ ಸರ್ಜನ್, ಒಬ್ಬರು ಫಿಜಿಷಿಯನ್ ಸೇರಿದಂತೆ 4 ಮಂದಿ ಶುಶ್ರೂಷಾಧಿಕಾರಿಗಳ ಕೊರತೆ ಇದೆ. ಖಾಲಿ ಇರುವ ಈ ಸ್ಥಾನಗಳ ಭರ್ತಿಯಾದರೆ ಸಿಬ್ಬಂದಿ ಕೊರತೆ ನೀಗಿಸಬಹುದು ಎಂದರು.

    ಕೂಡಲೇ ವೈದ್ಯರ ಕೊರತೆ ಹಾಗೂ ಔಷಧಿಗಳ ಕೊರತೆಯನ್ನು ನೀಗಿಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಜಯಚಂದ್ರ ಭರವಸೆ ನೀಡಿದರು.

    ವಿಪ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ, ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಒಟ್ಟು 43,441 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ 16,708 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಹಾಗೂ 26,733 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟ, ಮೂಲಸೌಕರ್ಯ ಮತ್ತು ಕಲಿಕಾ ವಾತಾವರಣವನ್ನು ಇನ್ನಷ್ಟು ಉತ್ತಮಗೊಳಿಸಿದರೆ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗಲಿದ್ದು, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂದು ಹೇಳಿದರು.

    ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗರಾಜು ಮಾತನಾಡಿ, ಮುಂಗಾರು ಚದುರಿದಂತೆ ಆಗಿದ್ದು ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೃಷಿ ಇಲಾಖೆಯೊಂದರಲ್ಲಿಯೇ ಪ್ರಸಕ್ತ ವರ್ಷ 116 ಲಕ್ಷ ರೂ. ಬೆಳೆ ವಿಮೆ ನೀಡಲಾಗಿದೆ ಎಂದರು.

    ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೇರೆ ಮಹೇಶ್, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ನಾಗರಾಜು ಆರ್., ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಶಶಿಧರ್ ಜಿ.ಆರ್., ತಾಪಂ ಇಒ ಹರೀಶ್, ತಹಸೀಲ್ದಾರ್ ಆನಂದ್ ಕುಮಾರ್, ನಗರಸಭೆ ಆಯುಕ್ತ ರುದ್ರೇಶ್, ಯೋಜನಾಧಿಕಾರಿ ರಂಗನಾಥ್ ಸೇರಿದಂತೆ ಅನೇಕ ಪ್ರಮುಖರು ಸಭೆಯಲ್ಲಿದ್ದರು.

    ಕಳೆದ ಮೂರು ನಾಲ್ಕು ವರ್ಷಗಳಿಗಿಂತಲೂ ಹೆಚ್ಚಾಗಿ ಕಳೆದ ವರ್ಷದಿಂದ ಕೆಲವೆಡೆ ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ತಾಲೂಕಿನ ಸುಮಾರು 6 ಗ್ರಾಮಗಳ ಮುಖ್ಯ ಕೇಂದ್ರಗಳಲ್ಲಿ ನೂತನ ಸರ್ಕಾರಿ ಹೈಟೆಕ್ ಶಾಲಾ ಕಟ್ಟಡಗಳ ನಿರ್ಮಾಣ. ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವುದು ಶಿಕ್ಷಣ ಇಲಾಖೆಯ ಕರ್ತವ್ಯವಾಗಬೇಕು.

    — ಚಿದಾನಂದ್ ಎಂ. ಗೌಡ, ವಿ.ಪ.ಸದಸ್ಯ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬುಕ್ಕಾಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಸಭೆ: ತಹಶೀಲ್ದಾರ್ ಆನಂದ್ ಕುಮಾರ್ ವಿರುದ್ಧ ಎಂಎಲ್ಸಿ ಬೆಂಬಲಿಗರ ತೀವ್ರ ಆಕ್ರೋಶ

    September 20, 2026

    ಕೊಳಗೇರಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಗೆ ಐತಿಹಾಸಿಕ ಹೆಜ್ಜೆ

    September 9, 2026

    ಸಿರಾ: ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಬಿಡುಗಡೆ

    September 7, 2026

    Leave A Reply Cancel Reply

    Our Picks

    50 ಪೈಸೆ ನಾಣ್ಯ ಇನ್ನೂ ಮಾನ್ಯವೇ? RBI ನಿಯಮ ತಿಳಿದರೆ ಅಚ್ಚರಿಯಾಗುತ್ತೆ!

    October 6, 2026

    35 ವರ್ಷಗಳ ಬಳಿಕ ಮರಳಿ ಕುಟುಂಬ ಸೇರಿದ ಮಹಿಳೆ: ಪತ್ತೆಗೆ ಸುಳಿವು ನೀಡಿದ ಕೈಯಲ್ಲಿದ್ದ ಹಚ್ಚೆ!

    October 6, 2026

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಹುಲ್ ಗಾಂಧಿಗೆ ‘ರಾಹು ಕಾಲ’ ಬಂದಿದೆ, ಅವರ ಪ್ರತಿಭಟನೆಗೆ ಯಾವುದೇ ಅರ್ಥವಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ

    October 7, 2026

    ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.…

    ಹಾಸನ: ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ — ಕೊಲೆ ಶಂಕೆ, ಪ್ರಕರಣ ದಾಖಲು

    October 7, 2026

    ಬೆಂಗಳೂರು: ಅಮೆಜಾನ್ ಕಚೇರಿ ಹೊರಗೆ ಟ್ರಾನ್ಸ್‌’ಫಾರ್ಮರ್ ಸ್ಫೋಟ; ಪಾದಚಾರಿಗೆ ಗಾಯ

    October 7, 2026

    ತುಮಕೂರು: ಸ್ವಂತ ಉದ್ಯಮ ಸ್ಥಾಪನೆಗೆ ಉದ್ಯಮಶೀಲತಾ ತರಬೇತಿ – ಅರ್ಜಿ ಆಹ್ವಾನ

    October 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.