Subscribe to Updates
Get the latest creative news from FooBar about art, design and business.
- ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ನೀಡಿದ್ದ ಬೆನ್ನಲ್ಲೇ ಬೆಂಗಳೂರಿನ ಮಹಿಳೆ ನಾಪತ್ತೆ!
- ಸಿದ್ದೇಶ್ವರ ಜಾತ್ರೆ: ಶತ್ರುಗಳ ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ, ಎಂಟು ಮಂದಿ ಬಂಧನ
- ದ್ವಿತೀಯ ಪಿಯುಸಿ ಫಲಿತಾಂಶ 2026: ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆ ವಿರುದ್ಧ ಕೇಸ್
- ಹೈನುಗಾರರ ಸೇವೆಗೆ ಮರಳಿರುವುದು ಸಂತಸ ತಂದಿದೆ: ತುಮುಲ್ ಕಚೇರಿಯಲ್ಲಿ ಕೊಂಡವಾಡಿ ಚಂದ್ರಶೇಖರ್
- ಜನಗಣತಿ ತರಬೇತಿ ವೇಳೆ ಶಿಕ್ಷಕಿ ಅಸ್ವಸ್ಥ: ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ತಹಶೀಲ್ದಾರ್
- ತುಮಕೂರು: ಇಂದು ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಜನತಾದರ್ಶನ: ವಿವಿಧ ಇಲಾಖಾವಾರು ಪ್ರತ್ಯೇಕ 10 ಕೌಂಟರ್ ಗಳು
- ಮಂಡ್ಯ: ಮಾಜಿ ಶಾಸಕ ಡಾ.ಅನ್ನದಾನಿ ವಿರುದ್ಧ ಅಕ್ರಮ ಸಂಬಂಧದ ಗಂಭೀರ ಆರೋಪ; ಕುಮಾರಸ್ವಾಮಿ ಕಾಲಿಗೆ ಬಿದ್ದು ಪತಿಯ ಗೋಳಾಟ!
Author: admin
ಮಧುಗಿರಿ: ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ರಥಸಪ್ತಮಿ ಅಂಗವಾಗಿ’ ಬ್ರಹ್ಮ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಮಂಗಳವಾರ ನಡೆಸಲಾಯಿತು. ಉತ್ಸವಮೂರ್ತಿಯನ್ನು ದೇವಸ್ಥಾನದ ಪ್ರಾಂಗಣದಲ್ಲಿ ಮೂರು ಬಾರಿ ಪ್ರಾಕಾರೋತ್ಸವ ನಡೆಸಿ ದೇವಸ್ಥಾನದ ಮುಂಭಾಗದಲ್ಲಿ ರಥೋತ್ಸವಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಮಂಗಳವಾದ್ಯಗಳೊಂದಿಗೆ ತಂದು ಕುಳ್ಳಿರಿಸಲಾಯಿತು. ಪೂಜೆ ನಡೆಸಿ ರಥವನ್ನು ಎಳೆಯಲಾಯಿತು. ಈ ವೇಳೆ ಭಕ್ತರು ಬಾಳೆಹಣ್ಣನ್ನು ರಥದ ಮೇಲೆ ಎಸೆದು ತಮ್ಮ ಇಷ್ಟಾರ್ಥಗಳು ಸಿದ್ದಿಗಾಗಿ ಪ್ರಾರ್ಥಿಸಿಕೊಂಡರು. ಈ ವೇಳೆ ಧಾರ್ಮಿಕ ಮುಖಂಡ ಡಾ.ಎಂ.ಜಿ. ಶ್ರೀನಿವಾಸ ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಶಂಕರ ಸೇವಾ ಸಮಿತಿಯ ಬಿ.ಆರ್.ಸತ್ಯನಾರಾಯಣ, ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು, ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್, ರೆವಿನ್ಯೂ ಇನ್ಸ್ ಪೆಕ್ಟರ್ ಜಯರಾಮಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಹನಾ ನಾಗೇಶ್, ಪುರಸಭಾ ಸದಸ್ಯ ಲಾಲಾಪೇಟೆ ಮಂಜುನಾಥ್, ಮಾಜಿ ಸದಸ್ಯ ರುಗಳಾದ ಆರ್.ಎಲ್.ಎಸ್. ರಮೇಶ್ ,ಮಂಜುನಾಥ್, ಸೇವಾಕರ್ತರಾದ ದೂಲಿ ಬಾಬು, ಯತೀಶ್ ಬಾಬು ,ಎಸ್ ಬಿ ಐ ಗೋಪಾಲ್, ಜಿ. ಆರ್.ಧನ್…
ಪಾವಗಡ: ತಾಲ್ಲೂಕು ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಮ್ಮನಹಳ್ಳಿ ಗ್ರಾಮದಲ್ಲಿ 20 ಲಕ್ಷ ವೆಚ್ಚದ ಸಿಸಿ ರಸ್ತೆ, ಸಿ ಆರ್ ಪಾಳ್ಯ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಸಿಸಿ ರಸ್ತೆ, ಎ ಎಚ್ ಪಾಳ್ಯ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಸಿಸಿ ರಸ್ತೆ, ಗುಜ್ಜನಡು ಗ್ರಾಮದಲ್ಲಿ 15 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ವೆಂಕಟರಮಣಪ್ಪ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಮುಖಂಡರುಗಳಾದ ಬೋಜರಾಜ್, ನಂಜುಂಡಪ್ಪ,ಸೀನಪ್ಪ, ಡಿ.ಮಂಜುನಾಥ್, ಕೆ.ಎಚ್. ಪ್ರಕಾಶ್, ಸ್ವಾರಣ್ಣ,ಅನಿಲ್ ಕುಮಾರ್, ಜಿ.ಸಿ.ದೇವರಾಜ್,ಗುತ್ತಿಗೆದಾರರಾದ ಕೋಡೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಸುಜಿತ್,ಮಹಿಳಾ ನಾಯಕಿ ನಾಗಮ್ಮ, ಪೂಜಾರಪ್ಪ, ಸಾಮಾಜಿಕ ಜಾಲತಾಣ ಸದಸ್ಯ ಪಾಪಣ್ಣ ವಿ.ಹೆಚ್. ಪಾಳ್ಯ ಸೇರಿದಂತೆ ಲೋಕೋಪಯೋಗಿ ಇಲಾಖೆ ಎಇಇ ಅನಿಲ್ ಕುಮಾರ್, ಸತ್ಯೆಂದ್ರ ಪ್ರಸಾದ್ ಮತ್ತಿತರರು ಹಾಜರಿದ್ದರು. ವರದಿ: ದೇವರಹಟ್ಟಿ ನಾಗರಾಜು, ಕಸಬಾ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಸರಗೂರು: ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ರಾಯಚೂರು ಜಿಲ್ಲೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನ ಸೇವೆಯಿಂದ ವಜಾಗೊಳಿಸಿ ಬೃಹತ್ ಪ್ರತಿಭಟನೆ ನಡಿಸಲಾಯಿತು. ಸರಗೂರು ಪಟ್ಟಣದ ಅಂಗಡಿ ಮುಗ್ಗಟ್ಟು ಮಾಲಿಕರು ಸೇರಿದಂತೆ, ಸರಗೂರು ಬಂದ್ ಗೆ ಸಂವಿಧಾನ ಸಂರಕ್ಷಣಾ ಸಮಿತಿ ವರ್ತಕರ ಮಂಡಳಿ ಕರೆ ನೀಡಿದ ಬಳಿಕ ಎಲ್ಲಾ ಬಂದ್ ಗೆ ಬೆಂಬಲ ನೀಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಿಂದ ಶುರುವಾದ ಮೆರವಣಿಗೆ ತಹಶೀಲ್ದಾರ್ ಕಚೇರಿವರೆಗೆ ನಡೆಯಿತು. ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅನುಯಾಯಿಗಳು , ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಜನರು ಭಾರೀ ಜನಸಂಖ್ಯೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿ ಮತ್ತು ಗಡಿಪಾರು ಮಾಡಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ, ಪ.ಪಂ. ಸದಸ್ಯ ಎಸ್.ಎಲ್.ರಾಜಣ್ಣ, ಮಲ್ಲಿಕಾರ್ಜುನ ಗೌಡ ಕಿಡಿಗೇಡಿ, ದೇಶದ್ರೋಹಿ, ಮನುವಾದಿ ಮನಸ್ಥಿತಿಯ ನ್ಯಾಯಾಧೀಶ ಎಂದು ಆಕ್ರೋಶ ವ್ಯಕ್ತಪಡಿಸಿ, ಅವರನ್ನು ತಕ್ಷಣವೇ ವಜಾಗೊಳಿಸಿ, ಗಡಿಪಾರು ಮಾಡಲು ಒತ್ತಾಯಿಸಿದರು. ಮೈಸೂರು…
ತುಮಕೂರು: ಜಿಲ್ಲೆ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ತೀತಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೀತಾ ಗ್ರಾಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಕಾರ್ಯಕ್ರಮವನ್ನು ಕೊರಟಗೆರೆ ತಾಲೂಕು ದಂಡಾಧಿಕಾರಿಗಳಾದ ನಹಿದಾ ಜಮ್ ಜಮ್ ರವರು ಉದ್ಘಾಟನೆ ಮಾಡಿದರು ಈ ಯೋಜನೆಯಲ್ಲಿ ಸರ್ಕಾರದ 790 ಹೆಚ್ಚು ಸೇವೆಗಳು ದೊರೆಯಲಿವೆ ಎಂದು ದಂಡಾಧಿಕಾರಿಗಳು, ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕೋಳಾಲ ಉಪತಹಶೀಲ್ದಾರ್ ಮಧುಚಂದ್ರ, ಕೊರಟಗೆರೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕರವೇ ನಟರಾಜ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಯತಿಂದ್ರ ಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗದೀಶ್ ಟಿ.ಕೆ ಮತ್ತು ವಿ.ಎ.ಮಂಜುನಾಥ್ ಮತ್ತು ಗ್ರಾಮ ಒನ್ ಸೇವಾ ಕರ್ತರಾದ ಜಾನಕಿ ಟಿ.ಕೆ. ಮತ್ತು ನರಸಿಂಹಮೂರ್ತಿ ಹಾಜರಿದ್ದರು. ವರದಿ : ಸಿದ್ದೇಶ್ ನೇಗಲಾಲ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy…
ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ಅವರನ್ನು ಬಂಧಿಸಲು ಆಗ್ರಹಿಸಿ, ದಲಿತ ಸಂಘಟನೆಗಳ ಒಕ್ಕೂಟದಿಂದ ‘ರಾಯಚೂರು ಚಲೋ’ ನಡೆಯಿತು. ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘಟನೆಯ ಒಕ್ಕೂಟದ ಮುಖಂಡರುಗಳು, ನಾವು ರಾಯಚೂರು ತಲುಪುವುದರೊಳಗೆ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ಅಮಾನತು ಮಾಡಿ, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪ್ತಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ವೇದಿಕೆಯಿಂದ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ಹೇಳಿದ್ದಲ್ಲದೆ, ಅದನ್ನು ಮಾಡಿಯೇ ತೋರಿಸಿದ ಜಿಲ್ಲಾ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲರು ದುರಹಂಕಾರಕ್ಕೆ ಪಾಠ ಕಲಿಸಬೇಕು ಮತ್ತು ಅಪರಾಧ ಕಾನೂನಿನ ಕಠಿಣ ಶಿಕ್ಷೆ ಆಗಬೇಕೆಂದು ರಾಜ್ಯ ವ್ಯಾಪ್ತಿ ಆಕ್ರೋಶ ಭುಗಿಲೆದ್ದಿದೆ. ಈತನ ಮೇಲೆ ಪೊಲೀಸ್ ಕೇಸು ದಾಖಲಿಸಿ ಜೈಲಿಗೆ ಹಾಕಲು…
ತುಮಕೂರು: ಕೇಂದ್ರ ಸರ್ಕಾರದ 290 ಕೋಟಿ ಹಾಗೂ ರಾಜ್ಯ ಸರ್ಕಾರದ 297 ಕೋಟಿ ರೂ. ಅನುದಾನದಲ್ಲಿ ನಗರದಲ್ಲಿ ಅನುಷ್ಠಾನಗೊಂಡಿರುವ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಮುಂದಿನ ದಿನ ಗಳಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಮಾಜಿ ಶಾಸಕ ಡಾ.ಎಸ್. ರಫೀಕ್ ಅಹಮದ್ ಎಚ್ಚರಿಕೆ ನೀಡಿದರು. ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಇಲಾಖೆಯವರಿಗೆ ಪತ್ರ ಬರೆದು ಮಾಹಿತಿ ಕೇಳಿದರೆ ಪೂರ್ಣ ಮಾಹಿತಿಯನ್ನು ಕೊಟ್ಟಿಲ್ಲ. ಬಂದಿರುವ ಅನುದಾನ ಖರ್ಚಾಗಿರುವುದೆಷ್ಟು, ಕಾಮ ಗಾರಿಗಳ ಪ್ರಗತಿಗೆ ಸಂಬಂಧಿ ಸಿದಂತೆ ಅಪೂರ್ಣ ಮಾಹಿತಿ ನೀಡಿದ್ದು, ಇದರ ವಿರುದ್ಧ ಸ್ಮಾರ್ಟ್ ಸಿಟಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಗ್ರಂಥಾಲಯ, ಕ್ರೀಡಾಂಗಣ, ಟ್ರಾಮಸೆಂಟರ್ ಇತ್ಯಾದಿ ಕಾಮಗಾರಿಗಳ ಜೊತೆಗೆ ಅಲ್ಲಲ್ಲಿ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದು, ಈ ಎಲ್ಲ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು…
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯ ಬೇಡ ಎನ್ನುತ್ತಲೇ ತಾವು ಸ್ಪರ್ಧೆ ಮಾಡೋ ಕ್ಷೇತ್ರಗಳ ಪಟ್ಟಿಯನ್ನು ತೆರೆದಿಡುವ ಮೂಲಕ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ. ಬಳ್ಳಾರಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನನಗೆ ಬಳ್ಳಾರಿ, ಗಂಗಾವತಿ, ಕೊಪ್ಪಳ, ಯಲಬುರ್ಗಾ, ಬೆಂಗಳೂರಿನ ಕೆ.ಆರ್.ಪುರಂ, ಬಿಟಿಎಂ ಲೇಔಟ್, ಕೋಲಾರದಲ್ಲಿ ಸ್ಪರ್ಧಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಜನಾರ್ದನ್ ರೆಡ್ಡಿ ಹೇಳಿದ್ದಾರೆ. ನನ್ನ ಸಹೋದರರು ಶಾಸಕರಾಗಿದ್ದಾರೆ, ನಾನೂ ಶಾಸಕನಿದ್ದಂತೆ. ನನ್ನ ಮಿತ್ರ ಶ್ರೀರಾಮುಲು ಬಳ್ಳಾರಿ ಉಸ್ತುವಾರಿಯಾಗಿದ್ದಾರೆ. ಅವರು ಮಂತ್ರಿ ಆದರೆ ನಾನು ಕೂಡ ಮಂತ್ರಿಯಾದಂತೆ. ನಾನು ಕೇವಲ ರಾಜಕೀಯಕ್ಕಾಗಿ ಬಳ್ಳಾರಿಗೆ ಬಂದಿಲ್ಲ. ಬಳ್ಳಾರಿಯನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಬಂದಿದ್ದೇನೆ ಎಂದು ಹೇಳಿದರು. ಬಳ್ಳಾರಿಯಲ್ಲಿ ಇನ್ನೊಂದೆರಡು ವರ್ಷದಲ್ಲಿ ಕ್ರಿಕೆಟ್ ವರ್ಲ್ಡ್‌ಕಪ್ ನಡೆಯುವ ಮಟ್ಟಕ್ಕೆ ಬಳ್ಳಾರಿಯನ್ನು ಅಭಿವೃದ್ಧಿ ಮಾಡುವೆ. ಈ ಹಿಂದೆ ನಾನು ಹೇಳಿದ ಕೆಲಸಗಳು ವೇಗವಾಗಿ ನಡೀತಿತ್ತು. ಈಗ ಆಗುತ್ತಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಹೀಗಾಗಿ ಚಿಂತೆ ಮಾಡಬೇಡ ಎಂದು ರಾಮುಲುಗೆ ತಿಳಿಸಿದ್ದೇನೆ ಎಂದು ತಿಳಿಸಿದರು. ವರದಿ:…
ಬಿಹಾರ: ಭಿಕ್ಷುಕನೊಬ್ಬ ಚಿಲ್ಲರೆ ಇಲ್ಲದಿದ್ದರೆ ಡಿಜಿಟಲ್ ರೂಪದಲ್ಲಿ ಭಿಕ್ಷೆ ನೀಡಿ ಎಂದು ವಿಶಿಷ್ಠವಾಗಿ ಭಿಕ್ಷೆ ಬೇಡುತ್ತಿರುವ ಪ್ರಸಂಗ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಪಟ್ಟಣದಲ್ಲಿ ನಡೆದಿದೆ. ನಿಮ್ಮಲ್ಲಿ ಚಿಲ್ಲರೆ ಇಲ್ಲದಿದ್ದರೆ, ಚಿಂತಿಸಬೇಡಿ. ನೀವು ನನಗೆ ಇ ವ್ಯಾಲೆಟ್ ಮೂಲಕ ಪಾವತಿಸಬಹುದು. ಈಗ ನಾನು ಡಿಜಿಟಲ್ ಪಾವತಿಯ ಸೌಲಭ್ಯವನ್ನು ಹೊಂದಿದ್ದೇನೆ. ಎಂದು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಪಟ್ಟಣದ ನಿವಾಸಿ ಭಿಕ್ಷುಕ ರಾಜು ಪ್ರಸಾದ್ (40) ಅವರು ಡಿಜಿಟಲ್ ರೂಪದಲ್ಲಿ ಪಾವತಿಸುವಂತೆ ಕೇಳುತ್ತಿದ್ದಾರೆ. ಶುಕ್ರವಾರ ಅವರು ತಮ್ಮ ಇ ವ್ಯಾಲೆಟ್‌ನಲ್ಲಿ ಭಿಕ್ಷಾಟನೆಯಿಂದ 57 ರೂಪಾಯಿಗಳನ್ನು ಗಳಿಸಿದರು. ಪ್ರಸಾದ್ ಅವರು ತಮ್ಮ 10ನೇ ವಯಸ್ಸಿನಿಂದ ಬೆಟ್ಟಿಯಾ ರೈಲು ನಿಲ್ದಾಣದ ಆಸುಪಾಸಿನಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ‘ಡಿಜಿಟಲ್ ಇಂಡಿಯಾ’ ಅಭಿಯಾನದ ಕಟ್ಟಾ ಬೆಂಬಲಿಗರಾದ ಪ್ರಸಾದ್ ಅವರು ಡಿಜಿಟಲ್ ಪಾವತಿಯ ಸೌಲಭ್ಯವನ್ನು ಪಡೆಯಲು ಇತ್ತೀಚೆಗೆ ಬ್ಯಾಂಕ್ ಖಾತೆಯನ್ನು ತೆರೆದರು. ನನ್ನ ಬಳಿ ಆಧಾರ್ ಕಾರ್ಡ್ ಇದ್ದರೂ ಪ್ಯಾನ್ ಕಾರ್ಡ್ ಇರಲಿಲ್ಲ, ಇದರಿಂದ…
ಸರಗೂರು: ಗ್ರಾಮ ಸಭೆಗೆ ಪ್ರಮುಖ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸರಗೂರು ತಾಲ್ಲೂಕಿನ ಹಾದನೂರಿನಲ್ಲಿ ನಡೆದಿದೆ. ಸಭೆಗೆ ಕೆಲವೇ ಕೆಲವು ಅಧಿಕಾರಿಗಳು ಆಗಮಿಸಿದ್ದು, ಈ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಗ್ರಾಮಸ್ಥರು, ಎಲ್ಲಅಧಿಕಾರಿಗಳೂ ಕೂಡ ಗ್ರಾಮ ಸಭೆಗೆ ಆಗಮಿಸಬೇಕು ಎಂದು ಒತ್ತಾಯಿಸಿದರು. ತಾಲ್ಲೂಕಿನ ತಹಶೀಲ್ದಾರ್ ಹಾಗೂ ಕಾರ್ಯನಿರ್ವಹಕ ಅಧಿಕಾರಿಗಳು ಸಭೆಗೆ ಬರಬೇಕು, ನಮ್ಮ ಸಮಸ್ಯೆಗಳನ್ನು ಅವರಿಗೆ ತಿಳಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹಾದನೂರು ಅತೀ ಹೆಚ್ಚು ದಲಿತರೇ ಇರುವ ಗ್ರಾಮವಾಗಿದ್ದು, ಈ ಗ್ರಾಮವನ್ನು ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ. ಗ್ರಾಮಸಭೆಯನ್ನು ಕಾಟಾಚಾರಕ್ಕೆ ನಡೆಸುತ್ತಿದ್ದು, ಸಭೆಗೆ ಮುಖ್ಯ ಅಧಿಕಾರಿಗಳೇ ಆಗಮಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಚಿತ್ರದುರ್ಗ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಡರಾತ್ರಿ ಚಿತ್ರದುರ್ಗದಲ್ಲಿ ನಡೆದಿದೆ. ಗೀತಾ(32), ಶಾರದಾ (60) ಹಾಗೂ ಧೃತಿ (5) ಮೃತರು ಎಂದು ಗುರುತಿಸಲಾಗಿದೆ. ತಡರಾತ್ರಿ ಕಾರಿನಲ್ಲಿ ಒಂದೇ ಕುಟುಂಬದ 7 ಜನರು ಕುಂದಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಆಗ ಕಾರು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಾಪುರ ಬಳಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 5 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ನಾಲ್ವರಿಗೆ ಗಾಯಗಳಾಗಿದ್ದು, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಕುಂದಾಪುರ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ. ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB