Author: admin

ಗುಬ್ಬಿ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ದ ಹೊಸಕೆರೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ನಡುವೆ ವೈಭವದಿಂದ ನಡೆಯಿತು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ ,ಸುಪ್ರಭಾತಸೇವೆ ಪಂಚಾಮೃತ ಅಭಿಷೇಕ ನಡೆಯಿತ್ತು. ಬೆಳಿಗ್ಗೆ ಲಕ್ಷ್ಮೀರಂಗನಾಥಸ್ವಾಮಿಯ ಉತ್ಸವದೊಂದಿಗೆ ರಥೋತ್ಸವಕ್ಕೆ ಆಗಮಿಸಿತ್ತು. ರಥೋತ್ಸವ ಹತ್ತಿರ ಹೋಮ ಪೂಜಾ ಕಾರ್ಯಗಳು ನಡೆದವು. ಮಧ್ಯಾಹ್ನ ಒಂದು ಗಂಟೆಗೆ ರಥೋತ್ಸವದ ಸುತ್ತ ಗರುಡಸ್ವಾಮಿ ಪ್ರದಕ್ಷಣೆ ಹಾಕಿದ ನಂತರ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಭಕ್ತರ ನಡುವೆ ನಡೆಯಿತ್ತು. ಪ್ರತಿವರ್ಷವೂ ಕೂಢ ಗರುಡಸ್ವಾಮಿ ರಥೋತ್ಸವಕ್ಕೆ ಪ್ರದಕ್ಷಣೆ ಹಾಕುವುದರ ಮೂಲಕ ಭಕ್ತರ ಗಮನ ಸೆಳೆಯಿತು. ಒಂದು ಕಡೆ ರಥೋತ್ಸವದ ಸುತ್ತು ಗರುಡ ಪ್ರದಕ್ಷಣೆ ಹಾಕುತ್ತಿದ್ದಾರೆ, ಇನ್ನೊಂದು ಕಡೆ ರಥೋತ್ಸವಕ್ಕೆ ಆಗಮಿಸಿದ ಭಕ್ತರು ಜೈಕಾರ ಹಾಕುತ್ತಿದ್ದರು. ಜಿಲ್ಲೆಯಿಂದ ಆಗಮಿಸಿದ ಭಕ್ತರು ರಥೋತ್ಸವಲ್ಲಿ ಸಾಕ್ಷಿಯಾದರು. ಸುಡು ಮಿಸಿಲನ್ನು ಲೆಕ್ಕಿಸದೇ ಭಕ್ತರು ರಥವನ್ನು ಎಳೆದು ಪುನೀತರಾದರು. ಭಕ್ತರಿಗೆ ಅಲ್ಲಲ್ಲಿ ಪಾನಕ ಫಲಹಾರ ಮಜ್ಜಿಗೆಯನ್ನು ವಿತರಿಸಲಾಯಿತು. ಇದೇ ಸಂಧರ್ಭದಲ್ಲಿ ಭಕ್ತಾಧಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿತ್ತು.…

Read More

ಸರಗೂರು: ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಬಾರಿ ಬೆಂಕಿ ಅನಾಹುತವಾಗಿತ್ತು. ಹಾಗಾಗಿ ಈ ಬಾರಿ,  ಮುನ್ನೆಚ್ಚರಿಕೆ ಕ್ರಮವಹಿಸಿ ಯಾವುದೇ ಬೆಂಕಿ ಅನಾಹುತ ನಡೆಯದಂತೆ ತಡೆಗಟ್ಟಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು  ಅರಣ್ಯ ಮತ್ತು ಪರಿಸರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಉಮೇಶ್ ವಿ.ಕತ್ತಿ ಸೂಚನೆ ನೀಡಿದರು. ಗುರುವಾರ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಣೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಅವರು, ಬಳಿಕ ನುಗು ವನ್ಯಜೀವಿ ವಲಯ ಮತ್ತು ರಾಮಪುರ ಆನೆಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸ್ಥಳೀಯ ಮನವಿಗಳನ್ನು ಆಲಿಸಿದರು. ಬಂಡೀಪುರ ಅರಣ್ಯವನ್ನು ರಕ್ಷಣೆ ಮಾಡುವ ದೃಷ್ಠಿಯಿಂದ ಈಗಾಗಲೇ ಸುಮಾರು 176 ಕಿ.ಮೀ.ನಷ್ಟು ಬ್ಯಾರಿಗೇಟ್ಸ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಈಗಾಗಲೇ ಶೇ.50 ನಿರ್ಮಿಸಲಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ ಕಳೆದ ಬಾರಿ ಬೆಂಕಿ ಅನಾಹುತವಾಗಿದ್ದರಿಂದ ಈ ಬಾರಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿತ್ತು. ಅದರಂತೆ ಇಲಾಖೆ…

Read More

ಕೊರಟಗೆರೆ : ತಾಲ್ಲೂಕಿನ ಇರಕಸಂದ್ರ ಕಾಲೊನಿಯ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ಇಂತಹ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದ ಸ್ಥಳೀಯ ಪಶು ವೈದ್ಯಾಧಿಕಾರಿ ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಿಳಿಸಿ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರೇವೈಟ್ ಲಿಮಿಟೆಡ್  ಕಂಪೆನಿಯ ಸಹಾಯ ಹಸ್ತದ ಮುಖೇನ  ಶಾಲಾ ಮಕ್ಕಳಿಗೆ ಸುಮಾರು 100 ಲೀಟರ್ ಫಿಲ್ಟರ್ ಮಾಡುವ ಫಿಲ್ಟರ್ ಘಟಕವನ್ನು ಉಚಿತವಾಗಿ ಶಾಲೆಗೆ ನೀಡಲಾಯಿತು. ಜನರಲ್ ಮ್ಯಾನೇಜರ್ ದಿಲೀಪ್ ಕುಮಾರ್ ಪುಣೆ  ಮಾತನಾಡಿ, ನಮ್ಮ ಕಂಪೆನಿಯ ಮುಖೇನ ಪಶುಗಳಿಗೆ ಉತ್ತಮ ಆರೋಗ್ಯಕ್ಕಾಗಿ ಹಲವು ಔಷಧಿಗಳನ್ನು ಕೊಡುತ್ತೇವೆ ಸಾಮಾಜಿಕ ಸೇವೆಗಳಲ್ಲೂ ಕೂಡ ಪಡಿಸಿಕೊಂಡಿದ್ದೇವೆ ಈ ಗ್ರಾಮದ ಪಶು ವೈದ್ಯರಾದ ಇವರು ನಮಗೆ ಇಲ್ಲಿನ ಶಾಲಾ ತಿಳಿಸಿದರು ನಾವು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ನಮ್ಮ ಅಧಿಕಾರಿ ವರ್ಗದವರ ಜತೆ ಮಾತನಾಡಿದಾಗ ಒಂದು ಫಿಲ್ಟರ್ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ  ಅದರಂತೆ ಇಂದು ವಿಶ್ವ…

Read More

ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು  ಭೂಮಿ ವಸತಿ ರಹಿತರು ನಡೆಸುತ್ತಿರುವ ಅಹೋರಾತ್ರಿ ಧರಣಿ 18ನೇ ದಿನಕ್ಕೆ ಕಾಲಿಟ್ಟಿದೆ. ಸಾಮಾಜಿಕ ಹೋರಾಟಗಾರ ನಾಗಭೂಷಣ್  ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ, ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅನಿರ್ದಿಷ್ಟ ಕಾಲ ಅಹೋರಾತ್ರಿ ಧರಣಿಯನ್ನು 18ನೇ ದಿನ ಮುಂದುವರಿಸುತ್ತಿದ್ದೇವೆ. ನಾವು ಕಳೆದ ತಿಂಗಳು ಮಾರ್ಚ್ 21ನೇ ತಾರೀಕಿನಲ್ಲಿ ನಮ್ಮ ಧರಣಿಯನ್ನು ಪ್ರಾರಂಭ ಮಾಡಿದ್ದೇವೆ. ಮಾರ್ಚ್ 25ನೇ ತಾರೀಕು ಜಿಲ್ಲಾ ಪಂಚಾಯಿತಿ ಸಿಇಓ ರವರು ಮತ್ತು ಜಿಲ್ಲಾಧಿಕಾರಿಗಳು ಈ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಗಳನ್ನು ಮತ್ತೊಮ್ಮೆ ಕೇಳಿ ತುರ್ತಾಗಿ ಹರಿಸಿ ಕೊಡುತ್ತೇವೆ ಎಂದು ಹೇಳಿ ಹೋದರು. ಆದರೆ ಇಲ್ಲಿಯವರೆಗೂ ಅವರು ಯಾವ ಕ್ರಮಕೈಗೊಂಡಿದ್ದಾರೆ ಎನ್ನುವ ಮಾಹಿತಿಯೇ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಯುಗಾದಿ ಹಬ್ಬವನ್ನು ಕೂಡ ನಾವು ಇಲ್ಲಿ ಆಚರಿಸಿದ್ದೇವೆ. ನೆನ್ನೆ 17 ನೇ ದಿನಕ್ಕೆ ವಿಧಾನಪರಿಷತ್ ಸದಸ್ಯರಾದ ಆರ್.ರಾಜೇಂದ್ರ ರವರು ಭೇಟಿಕೊಟ್ಟು, ನಿಮ್ಮ ಬೆಂಬಲವಾಗಿ ನಿಮ್ಮ ಸಮಸ್ಯೆಗಳಿಗೆ ನಾನಿರುತ್ತೇನೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡುತ್ತೇನೆ ಎಂದು ಅವರು…

Read More

ದಾವಣಗೆರೆ: 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ಇದೀಗ ನಿವೃತ್ತಿಹೊಂದಿ ತಾಲೂಕಿಗೆ ಆಗಮಿಸಿದ ಹೆಮ್ಮೆಯ ವೀರಯೋಧ  ಬೈರನಾಯಕನಹಳ್ಳಿ ನಾಗರಾಜ್ ಅವರಿಗೆ ಜಗಳೂರು ತಾಲೂಕಿನ ಕನ್ನಡಪರ ಸಂಘಟನೆಗಳು ಅದ್ದೂರಿ ಸ್ವಾಗತ ನೀಡಿತು. ಜಿಲ್ಲೆಯ ಜಗಳೂರು ತಾಲ್ಲೂಕಿನ ಪಟ್ಟಣದ ಐ.ವಿ.ಯಿಂದ ತಾಲ್ಲೂಕು ಕಚೇರಿ ಮುಂಭಾಗದ ಕುವೆಂಪು ವೃತ್ತದವರೆಗೂ ಮೆರವಣಿಗೆ ಮೂಲಕ ತೆರಳಿ ವೀರ ಯೋಧ ನಾಗರಾಜ್ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ  ಜಗಳೂರು ತಾಲೂಕು ತಹಶೀಲ್ದಾರರಾದ ಸಂತೋಷ್,  ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮಹೇಶ್,  ಪ್ರಗತಿಪರ ಹೋರಾಟಗಾರ ಆರ್.ಒಬಳೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ನವೀನ್ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ರಾಮೇಗೌಡ,  ತಾಲೂಕು ಅಧ್ಯಕ್ಷರಾದ  ಮಹಾಂತೇಶ್,  ಪಟ್ಟಣ ಪಂಚಾಯಿತಿ ಸದಸ್ಯ ಲುಕ್ಮಾನ್ ಉಲ್ಲಾ ಖಾನ್,  ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯ ಅಧ್ಯಕ್ಷ ಮಹಾಲಿಂಗಪ್ಪ ಜೆ.ಎಚ್.ಎಮ್. ಹೊಳೆ, ನಿವೃತ್ತ ಯೋಧರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಾಪ್ ರೆಡ್ಡಿ, ಕರುನಾಡ ರಕ್ಷಣಾ ಪಡೆಯ ರಾಜ್ಯ ಕಾರ್ಮಿಕ ಘಟಕದ…

Read More

ತುಮಕೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೆ ಬಿ ಕ್ರಾಸ್ ನಿಂದ ಒಂದುವರೆ ಕಿ.ಮೀ. ದೂರದ ರಸ್ತೆ ಪಕ್ಕದಲ್ಲಿರುವ ಹೆದ್ದಾರಿ ರಸ್ತೆ ನಿರ್ಮಾಣಕ್ಕೆ ಅಕ್ಕಪಕ್ಕದ ಮನೆಗಳನ್ನು ಬಿಡಿಸಿಕೊಂಡು ರಸ್ತೆ ನಿರ್ಮಾಣ ಮಾಡಿರುತ್ತಾರೆ 2013ರ ನಿಯಮದಂತೆ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಜಾಗ ಬಿಟ್ಟು ಕೊಟ್ಟವರಿಗೆ ಹಣ ಕೊಡಿ ಎಂದು ಆಗ್ರಹಿಸಿದರು.  ಕೆ ಬಿ ಕ್ರಾಸ ಭಾಗದ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಜಾಗ ಬಿಟ್ಟುಕೊಟ್ಟಿದ್ದು ತಮ್ಮ ಮನೆಗಳನ್ನು ಕಳೆದುಕೊಂಡಿರುತ್ತಾರೆ ಹಾಗೂ ಭೂಮಿಯನ್ನು ನೀಡಿರುತ್ತಾರೆ. ಇವರು ಮುಂದೆ ಮನೆ ಕಟ್ಟಲು ಆಗದೇ, ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಆಗದ ಸ್ಥಿತಿಯಲ್ಲಿದ್ದಾರೆ. ತಮ್ಮ ಮನೆ ಜಾಗವನ್ನು ಬಿಟ್ಟು ಕೊಟ್ಟ ಮಾಲೀಕರಿಗೆ ಸರ್ಕಾರದಿಂದ ಇದುವರೆಗೂ ಒಂದು ನಯಾಪೈಸೆ ಬಂದಿಲ್ಲ. ಇವರು ಪರಿಹಾರದ ಹಣಕ್ಕೋಸ್ಕರ ಆರು ವರ್ಷಗಳಿಂದಲೂ ಪರಿತಪಿಸುತ್ತಿದ್ದಾರೆ. ಅವರ ಕಷ್ಟಗಳಿಗೆ ಶಾಸಕರಾಗಲಿ, ಜನ ಪ್ರತಿನಿಧಿಯಾಗಲಿ, ಜಿಲ್ಲಾಡಳಿತವಾಗಲಿ, ಈ ಕಡೆ ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಕೆಲವು ತಿಂಗಳ ಹಿಂದೆ ಕೆಬಿ ಕ್ರಾಸ್ ಬಳಿ ನೂರಾರು ಸಂತ್ರಸ್ತರು ಉಪವಾಸ ಸತ್ಯಾಗ್ರಹ ಮಾಡಿದರು. ಇಷ್ಟಾದರೂ…

Read More

ಚಿತ್ರದುರ್ಗ: : ಅಂಗವಿಕಲರಿಗೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀಡಿದರೆ ಅನುಕೂಲವಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು. ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಅಂಗವಿಕಲರ ಸಬಲೀಕರಣ ಮತ್ತು ಹಿರಿಯ ನಾಗರಿಕರ ಇಲಾಖೆ, ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನಿಫ್ಯಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಯಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಅಂಗವಿಕಲರಿಗೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀಡಿದರೆ ಅನುಕೂಲವಾಗಲಿದೆ. ಉದ್ಯೋಗದಾತರು ಈ ಬಗ್ಗೆ ಆಲೋಚನೆ ಮಾಡುವುದು ಒಳಿತು ಎಂದು ಸಲಹೆ ನೀಡಿದರು. ‘ಅಂಗವಿಕಲರಲ್ಲಿ ಬಹುತೇಕರಿಗೆ ಸ್ವಾವಲಂಭಿಯಾಗುವ ಹಂಬಲವಿದೆ. ಉದ್ಯೋಗ ಅರಸಿ ಜನಪ್ರತಿನಿಧಿಗಳ ಬಳಿ ಬರುತ್ತಾರೆ. ಸರ್ಕಾರಿ ವ್ಯವಸ್ಥೆಯಲ್ಲಿ ಅಂಗವಿಕಲರಿಗೆ ಮೀಸಲಾತಿ ಸೌಲಭ್ಯವಿದೆ. ಇದೇ ಮಾದರಿಯಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ನವದೆಹಲಿ:  ದೆಹಲಿ ಭೇಟಿ ಫಲ ನೀಡಿದ್ದು, . ಜಲಶಕ್ತಿ, ಇಂಧನ, ಪರಿಸರ , ಹಣಕಾಸು, ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.  ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸ್ಥಾಪನಾ ದಿನದಲ್ಲಿ ನನಗೆ ಭಾಗವಹಿಸಲು ಅವಕಾಶ ನೀಡಿರುವುದು ಸಂತಸ ತಂದಿದೆ ಎಂದರು.  ಏಪ್ರಿಲ್ 16 ಮತ್ತು 17 ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ,  ಏಪ್ರಿಲ್ 16 ಮತ್ತು 17 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಚುನಾವಣೆಗೆ ಯಾವ ರೀತಿಯಲ್ಲಿ ಪೂರ್ವಭಾವಿ ತಯಾರಿಗಳನ್ನು ಮಾಡುಕೊಳ್ಳಬೇಕೆಂದು ಪಕ್ಷಕ್ಕೆ ಹಾಗೂ ನನಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯನ್ನು ನೀಡಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಪಾವಗಡ: ಪಾವಗಡ ನೂತನ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ವರದರಾಜ್ ರವರಿಗೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡ ಶುಭ ಕೋರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನೂತನ ತಹಸೀಲ್ದಾರ್ ರವರಿಗೆ ಪಾವಗಡ ತಾಲ್ಲೂಕಿನ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಹೆಲ್ಪ್ ಸೊಸೈಟಿ ತಂಡ ಚರ್ಚಿಸಲಾಯಿತು. ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಗೌತಮ್, ಇನಾಯತ್ ಈ ವೇಳೆ ಹಾಜರಿದ್ದರು ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು:  ಜಿಲ್ಲೆಯ ತಿಪಟೂರು ತಾಲ್ಲೂಕಿನ ಪವಾಡ ಕ್ಷೇತ್ರ ಕೆರಗೋಡಿರಂಗಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಗಳ ಜನ್ಮವರ್ಧಂತಿ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಶ್ರೀಗಳ ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀಶಂಕರೇಶ್ವರಸ್ವಾಮಿ ಶ್ರೀರಂಗನಾಥಸ್ವಾಮಿ, ಲಿಂಗೈಕ್ಯ ಹಿರಿಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆಸಲ್ಲಿಸಲಾಯಿತು. ಶ್ರೀಮಠದ ಸಮುದಾಯ ಭವನದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಕ್ತಾಧಿಗಳು ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಭಕ್ತರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗುರುಪರದೇಶಿಕೇಂದ್ರ ಮಹಾಸ್ವಾಮೀಜಿ,  ದೇಶ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಹಾಗೂ ಜಾತಿ ರಾಜಕಾರಣ ಆತಂಕ ಉಂಟುಮಾಡಿದೆ  ಎಲ್ಲಾರೂ ಶಾಂತಿ ಸಹಭಾಳ್ವೆಯಿಂದ ಬಾಳ ಬೇಕಿರುವಾಗ ಜಾತಿ ಧರ್ಮಗಳ ಹೆಸರಿನಲ್ಲಿ ಪರಸ್ಪರ ದ್ವೇಷ ಭಿತ್ತುತ್ತಿರುವುದು ನೋವುಂಟು ಮಾಡಿದೆ. ಕೆರಗೋಡಿ ರಂಗಾಪುರ ಮಠ   ಜಾತ್ಯಾತೀತ ಪರಂಪರೆ ಹೊಂದಿದ್ದು, ಟಿಪ್ಪು ಸುಲ್ತಾನ್ ಹೈದರಾಲಿ ಕಾಲದಿಂದಲೂ  ಮುಸ್ಲೀಂಮರು ಮಠದೊಂದಿಗೆ ಭಕ್ತಿ ಗೌರವ ಭಾವದಿಂದ ಉತ್ತಮ ಸಂಬಂದ ಹೊಂದಿದ್ದಾರೆ.  ಇಂದು ಹಿಂದೂ ಮುಸ್ಲಿಂ ಕ್ರೈಸ್ತ ಬಂಧುಗಳು ಮಠಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿರುವುದು ತುಂಬ ಸಂತೋಷ…

Read More