Author: admin

ತುಮಕೂರು: ಸರ್ಕಾರಿ ಭೂಮಿ ಆಸ್ತಿ ರಕ್ಷಣೆಗೆ ಮುಂದಾದ ತುಮಕೂರು ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ರವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಸುಳ್ಳು ಆರೋಪಗಳನ್ನು ತುಮಕೂರು ಜಿಲ್ಲಾ ನಾಗರಿಕರ ಹಿತರಕ್ಷಣಾ ಸಮಿತಿ ಖಂಡಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಮುಖಂಡರು,  ಎರಡು, ಮೂರು ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಕೆಲವೊಂದು ಪತ್ರಿಕೆಗಳಲ್ಲಿ ಪ್ರಸಾರ ಆಗುತ್ತಿರುವಂತೆ ಹೆಚ್.ಜಿ.ರಮೇಶ್ ಎಂಬುವರು ತುಮಕೂರು ಉಪ ವಿಭಾಗದ ಆಡಳಿತ ಕಚೇರಿ ಮುಂದೆ ಹಣದ ನೋಟುಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತ ಅನವಶ್ಯಕ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿರುತ್ತಾರೆ. ಇದರ ಬಗ್ಗೆ ಉಪ ವಿಭಾಗ ಕಚೇರಿಯಲ್ಲಿ ಮಾಹಿತಿ ಪಡೆದಾಗ ನಿಖರ ಮಾಹಿತಿ ಬಹಿರಂಗವಾಗಿದೆ ಎಂದಿದ್ದಾರೆ. ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಕುಂದೂರು ಗ್ರಾಮದ ಸರ್ವೇ ನಂಬರ್ 19 ರಲ್ಲಿ ದರಖಾಸ್ತು ಜಮೀನು ಮಂಜೂರಾಗಿರುತ್ತದೆ.  ಈ ಪಹಣಿಯಲ್ಲಿ ನಮೂದು ಮಾಡಲಾಗಿದ್ದ ಸರ್ಕಾರಿ ನಿಬಂಧನೆ ತೆಗೆಯಲು ಕುಣಿಗಲ್ ತಾಲ್ಲೂಕು ಕಚೇರಿಗೆ ಪಹಣಿದಾರರು ಅರ್ಜಿ ಸಲ್ಲಿಸಿದ್ದರ ಮೇರೆಗೆ ಕಡತವನ್ನು…

Read More

ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲೆಯಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲು ಹಾಗೂ ಅಸಂಘಟಿತ ಕಲಾವಿದರಿಗೆ ವಾದ್ಯ ಪರಿಕರ ವೇಷಭೂಷಣ ಖರೀದಿ ಹಾಗೂ ಚಿತ್ರಕಲೆ/ ಶಿಲ್ಪ ಕಲಾಕೃತಿಗಳ ಪ್ರದರ್ಶಕ್ಕಾಗಿ ಧನ ಸಹಾಯ ನೀಡಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಸಾಮಾನ್ಯ /ವಿಶೇಷ ಘಟಕ / ಪರಿಶಿಷ್ಟ ಪಂಗಡ ಉಪಯೋಜನೆಯಡಿ ಸೇವಾ ಸಿಂಧು ವೆಬ್ ಸೈಟ್ www.sevasindhu.karnataka.gov.in  ಮೂಲಕ ಡಿಸೆಂಬರ್ 1 ರಿಂದ 30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0816- 2275204, 9986276869, 9916891939  ಅಥವಾ 080-222135300ನ್ನು ಸಂಪರ್ಕಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅರ್ಜಿಯನ್ನು ನೇರವಾಗಿ ಇಲಾಖೆಯಲ್ಲಿ ಸ್ವೀಕರಿಸುವುದಿಲ್ಲ. ಧನ ಸಹಾಯಕ್ಕೆ ಅರ್ಜಿ ಸಲ್ಲಿಕೆಗೆ ಅನ್ವಯಿಸುವ ಮಾರ್ಗಸೂಚಿಗಳನ್ನು ಸೇವಾ ಸಿಂಧು ಪೋರ್ಟಲ್ ಮತ್ತು ಇಲಾಖೆಯ ವೆಬ್…

Read More

ತುಮಕೂರು: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಹೊರಡಿಸಿರುವ ವೇಳಾಪಟ್ಟಿಯನ್ವಯ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಲು ಡಿಸೆಂಬರ್ 10 ಕಡೆಯ ದಿನವಾಗಿದೆ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಆಯೋಗದ ವೇಳಾಪಟ್ಟಿಯನ್ವಯ De–novo ಮತದಾರರ ಪಟ್ಟಿಯನ್ನು ತಯಾರಿಸುವ ಸಂಬಂಧ ಈಗಾಗಲೇ ನಿಗದಿತ ನಮೂನೆ–18 ಅನ್ನು ವಿತರಿಸುವ ಕಾರ್ಯ ಆರಂಭವಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿಯ ಅರ್ಹ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಲು ನಿಗದಿತ ನಮೂನೆ 18ನ್ನು ಭರ್ತಿ ಮಾಡಿ ತುಮಕೂರು ಮಹಾನಗರಪಾಲಿಕೆಯ ಚುನಾವಣಾ ಶಾಖೆಯಲ್ಲಿ ನಿಗದಿಪಡಿಸಿರುವ ನಿಯೋಜಿತ ಅಧಿಕಾರಿ/ಸಿಬ್ಬಂದಿಗೆ ಡಿಸೆಂಬರ್ 10ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಮತದಾರರ ಪಟ್ಟಿಗೆ ನೋಂದಾಯಿಸಲು ನಿಗದಿತ ನಮೂನೆ–18ನ್ನು ಭರ್ತಿ ಮಾಡಿ ಸಹಿ ಮಾಡಿ ಸಲ್ಲಿಸಬೇಕು. ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಬೇಕು. ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿ ಪ್ರಮಾಣ ಪತ್ರ/ಕಾನೊಕೇಶನ್ ಸರ್ಟಿಫಿಕೇಟ್ (ದೃಢೀಕೃತ), ಚುನಾವಣಾ ಗುರುತಿನ…

Read More

ತುಮಕೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘ ಇವರ ವತಿಯಿಂದ ನ.28 ರಂದು ಬೆಳಗ್ಗೆ 11.30ಕ್ಕೆ ಪತ್ರಿಕಾ ಭವನದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪತ್ರಿಕಾ ವಿತರಕರ ಕ್ರೀಡಾಕೂಟದಲ್ಲಿ ವಿಜೇತರಾದ ಪತ್ರಿಕಾ ವಿತರಕರ ಕುಟುಂಬದವರಿಗೆ ಬಹುಮಾನ ವಿತರಣೆ ಸಮಾರಂಭ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಶಾಸಕ  ಜಿ.ಬಿ.ಜ್ಯೋತಿಗಣೇಶ್ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಶಂಭುಲಿಂಗ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿವಾನ೦ದ ತಗಡೂರು, ಯೋಗೀಶ್, ಡಾ.ಎಸ್.ನಾಗಣ್ಣ, ಶಶಿಧರ್ ದೋಣಿಹಕ್ಕು, ಸೊಗಡು ವೆಂಕಟೇಶ್, ರಾಜೇಶ್ವರಿ ರುದ್ರಪ್ಪ, ವಿಶೇಷ ಆಹ್ವಾನಿತರಾಗಿ ಪ್ರಶಾಂತ್ ಕುಮಾರ್ ಎನ್., ಸುರೇಶ್ ಪಿ, ಶಿವಶಾತ್, ಜಗದೀಶ್‌, ಎಂ.ಟಿ.ಗೋಪಾಲ್, ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅನು ಶಾಂತರಾಜ್, ಜಿಲ್ಲಾ ಹಾಗೂ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದವರನ್ನು ಗೌರವಿಸಲಾಗುವುದು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More

ತುಮಕೂರು: ಶ್ರೀಅಭಯ ಆಂಜನೇಯಸ್ವಾಮಿ ದೇವಸ್ಥಾನ, ಅಭಯಪುರಿ ಪುಣ್ಯ ಕ್ಷೇತ್ರ, ಮೆಳೇಕೋಟೆ, ತುಮಕೂರು ಇವರ ವತಿಯಿಂದ ಡಿ.6 ಮತ್ತು 7ರಂದು ಶ್ರೀಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ. ಡಿ.6 ರಂದು ಬೆಳಗ್ಗೆ 6ಗಂಟೆಗೆ ಗೋಪೂಜೆ, 7ಕ್ಕೆ ಶ್ರೀ ಅಭಯ ಆಂಜನೇಯಸ್ವಾಮಿಗೆ ಸುಪ್ರಭಾತ ಸೇವೆ, ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಮಹಾನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅಲಂಕಾರ, ಯೋಗ, ಸಂಜೆ 4 ಗಂಟೆಗೆ ಮಹಾಗಣಪತಿ ಪೂಜೆ, ಅನುಜ್ಞೆ, ಗಂಗಾಪೂಜೆ, ಪುಣ್ಯಾಹ, ರಕ್ಷಾ ಬಂಧನ, ಅಂಕುರಾರ್ಪಣ, ಕಳರಾರಾಧನೆ, ಆದಿವಾಸ ಸಂಜೆ 6 ಗಂಟೆಗೆ ಯಕ್ಷದೀವಿಗೆ ತುಮಕೂರು ಇವರಿಂದ ಡಾ.ಆರತಿ ಪಟ್ರಮೆಯವರ ನಿರ್ದೇಶನದಲ್ಲಿ ಶಬರಿಮಲೈ ಸ್ವಾಮಿ ಅಯ್ಯಪ್ಪರವರ ಯಕ್ಷಗಾನ ಪ್ರಸ್ತುತ ಪಡಿಸಲಾಗುವುದು. ನಂತರ ಮಹಾ ನೈವೇದ್ಯ, ಮಹಾ ಮಂಗಳಾರತಿ ನಡೆಯಲಿದೆ. ಡಿ.7 ರಂದು ಬೆಳಗ್ಗೆ 5.30ಕ್ಕೆ ಅಯ್ಯಪ್ಪಸ್ವಾಮಿಗೆ ಸುಪ್ರಭಾತ ಸೇವೆ, ಕಳಪಾರಾಧನೆ, ಮೂಲಮಂತ್ರ ಹೋಮ, 8 ರಿಂದ 9ರವರೆಗೆ ಸ್ವಾಮಿಗೆ ಪ್ರಾಣ ಪ್ರತಿಷ್ಠಾಪನೆ, ನೇತ್ರೋಲನ ಹಾಗೂ ಶ್ರೀ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಹಾ ಪೂರ್ಣಾಹುತಿ,…

Read More

ತುಮಕೂರು: ಮಹಿಳೆಯೊಬ್ಬರಿಗೆ ಕಳ್ಳನೊಬ್ಬ ಚಾಕು ತೋರಿಸಿ, ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಹೇಮಾ ಎಂಬುವರು ಮನೆಯಲ್ಲಿ ಒಬ್ಬರೇ ಇದ್ದಾಗ ಕಳ್ಳನೊಬ್ಬ ಇವರ ಬಳಿ ಬಂದು ಮನೆ ಬಾಡಿಗೆ ಕೇಳುವ ನೆಪದಲ್ಲಿ ಹೇಮಾ ಅವರಿಗೆ ಚಾಕು ತೋರಿಸಿ, ಬೆದರಿಸಿ ಅವರ ಕೊರಳಿನಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಡಕಾಯಿತಿಗೆ ಸಂಚು ರೂಪಿಸಿ, ಮಾರಕಾಸ್ತ್ರ ಹಿಡಿದು ಕುಳಿತಿದ್ದ ಐವರು ಖದೀಮರನ್ನು ಹೊಸ ಬಡಾವಣೆಯ ಪೊಲೀಸರು ಬಂಧಿಸಿದ್ದಾರೆ. ವಿಕಾಸ್ ಅಲಿಯಾಸ್ ವಿಕ್ಕಿ, ವಿನಯ್ ಅಲಿಯಾಸ್ ಕಂಟಿ, ಮಂಜುನಾಥ್ ಅಲಿಯಾಸ್ ಟುವ್ವ ಜೀವನ್ ಅಲಿಯಾಸ್ ಜೀವ, ಆಕಾಶ್ ಬಂಧಿತ ಆರೋಪಿಗಳಾಗಿದ್ದಾರೆ. ವಿಕಾಸ್ ಎಂಬಾತ ನೆಲಮಂಗಲದವನಾಗಿದ್ದು, ಉಳಿದವರು ತುಮಕೂರು ತಾಲ್ಲೂಕಿನ ಊರುಕೆರೆ, ಕೋರ, ತಿಮ್ಮಲಾಪುರದ ನಿವಾಸಿಗಳು. ಬಂಧಿತರಿಂದ ಮಚ್ಚು, ಲಾಂಗ್, ಡ್ರಾಗರ್, ಖಾರದ ಪುಡಿಯನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಹೊಸ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಮಧುಗಿರಿ: ಕರ್ನಾಟಕ ಪದವೀಧರರ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ನವೆಂಬರ್ 25ರಂದು ಮಧುಗಿರಿ ತಾಲೂಕು ಕಚೇರಿಯಲ್ಲಿ ಪುರಸಭಾ ಕಚೇರಿಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲೇ ನಾಡಕಚೇರಿಗಳಲ್ಲಿ ಪ್ರಚುರಪಡಿಸಿದ ಮತದಾರ ಮತದಾರರ ಪಟ್ಟಿ ಪರಿಶೀಲನೆಗೆ ತಾಲೂಕು ಕಚೇರಿ ಚುನಾವಣಾ ಶಾಖೆಯಲ್ಲಿ ಲಭ್ಯವಿರುತ್ತದೆ. ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಮಧುಗಿರಿ ತಾಲೂಕಿನಲ್ಲಿ 4,093 ಅರ್ಜಿಗಳು ಸ್ವೀಕಾರಗೊಂಡಿದ್ದು ಅದರಲ್ಲಿ 4067 ಅರ್ಜಿಗಳು ಅಂಗೀಕಾರಗೊಂಡಿವೆ. 46 ಅರ್ಜಿಗಳು ತಿರಸ್ಕೃತ ಗೊಂಡಿವೆ. ಒಟ್ಟು 2,549 ಪುರುಷ ಮತದಾರರು 1,498 ಮಹಿಳಾ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ನವೆಂಬರ್ 25 ರಿಂದ ಡಿಸೆಂಬರ್ 10 ವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಅಗತ್ಯ ದಾಖಲೆಗಳೊಂದಿಗೆ ನಮೂನೆ 18ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಕರಡು ಮತದಾರರ ಪಟ್ಟಿಯಲ್ಲಿ ಇರುವವರು ತಿದ್ದುಪಡಿಗಳಿದ್ದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಎಂದು ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ತುಮಕೂರು: ತುಮಕೂರು ಗಾಯನ ಸಭಾ(ರಿ) ವತಿಯಿಂದ ನವೆಂಬರ್ 30ರ ಭಾನುವಾರದಂದು ನಗರದ ಟೌನ್ ಹಾಲ್ ಸಮೀಪವಿರುವ ಶ್ರೀ ಸಿದ್ದಗಂಗಾ ಪದವಿ ಕಾಲೇಜಿನ ಡಾ.ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಬೆಂಗಳೂರಿನ ಸಂಗೀತ ವಿದುಷಿ ಜೆ, ಯೋಗಕೀರ್ತನ ರವರಿಂದ ಅಮೋಘ ಸಂಗೀತ ಕಛೇರಿ ಏರ್ಪಡಿಸಲಾಗಿದೆ. ಪಕ್ಕವಾದ್ಯದಲ್ಲಿ ಮೃದಂಗ: ಅನಿರುದ್ಧ್ ಎಸ್.ಭಟ್, ಪಿಟೀಲು: ಅದಿತಿ ಕೃಷ್ಣಪ್ರಕಾಶ್, ಖಂಜಿರ: ರಾಜಾಪುರಂ ಆರ್ ಕಾರ್ತಿಕ್ ರವರುಗಳು ವಾದ್ಯ ಸಹಕಾರ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ವಿದ್ವಾಂಸರುಗಳು, ಸಂಗೀತಾಸಕ್ತರು ಆಗಮಿಸಲು ಸಭಾವತಿಯಿಂದ ಕೋರಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಹುಳಿಯಾರು: ಪಟ್ಟಣ ಪಂಚಾಯಿತಿಯಿಂದ ಹೋಬಳಿಯ ಮೇಲನಹಳ್ಳಿ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ಅವಕಾಶ ಕೊಡುವುದಿಲ್ಲ ಎಂದು ಗ್ರಾಮಸ್ಥರು ಮಂಗಳವಾರ ವಿರೋಧ ವ್ಯಕ್ತಪಡಿಸಿದರು. ಹುಳಿಯಾರು ಪಟ್ಟಣದ ಕಸದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈಗಾಗಲೇ ಐದಾರು ಕಡೆ ಘಟಕ ಸ್ಥಾಪಿಸಲು ಅಧಿಕಾರಿಗಳು ಸ್ಥಳ ಗುರುತಿಸಿದ್ದಾರೆ. ಎಲ್ಲ ಕಡೆಯೂ ಆಯಾಯ ಗ್ರಾಮಸ್ಥರ ವಿರೋಧದಿಂದ ಘಟಕ ಸ್ಥಾಪನೆ ಆಗುತ್ತಿಲ್ಲ. ಈ ನಡುವೆ ಹೋಬಳಿಯ ಗಡಿ ಭಾಗವಾದ ಮೇಲನಹಳ್ಳಿ ಗ್ರಾಮದ ಸರ್ಕಾರಿ ಸರ್ವೆ ನಂಬರ್ 69 ರಲ್ಲಿ ಕಂದಾಯ ಅಧಿಕಾರಿಗಳು ಸ್ಥಳ ಗುರುತು ಮಾಡಿದ್ದರು. ಗೋಮಾಳ ಜಾಗವಾಗಿದ್ದು ರೈತರು ಉಳುಮೆ ಮಾಡದ ಕಾರಣ ರೈತರು ಹಾಕಿದ್ದ ಅರ್ಜಿಯನ್ನು ಉಪವಿಭಾಗಾಧಿಕಾರಿ ವಜಾಗೊಳಿಸಿದ್ದರು. ಮಂಗಳವಾರ ಕಂದಾಯ ಅಧಿಕಾರಿಗಳು ಸ್ಥಳ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಯಾವುದೇ ಕಾರಣಕ್ಕೂ ಘಟಕ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಘಟಕ ಸ್ಥಾಪನೆಯಿಂದ ಜನ–ಜಾನುವಾರುಗಳಿಗೆ ತೊಂದರೆ ಆಗುತ್ತದೆ. ಅಲ್ಲದೆ…

Read More