Author: admin

ಕಲಬುರಗಿ: ನಗರದ ರಾಜಾಪುರ ಬಡಾವಣೆಯ ನಿವಾಸಿಯಾದ ರೇವಣಸಿದ್ದ ಅನ್ನೋ ಯುವಕನನ್ನು ಆತನ ಸ್ನೇಹಿತರೆ ಬರ್ಬರವಾಗಿ ಹತ್ಯೆ ನಡೆಸಿ ಪರಾರಿಯಾದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ರೇವಣಸಿದ್ದ ಆತನ ಸ್ನೇಹಿತರೊಂದಿಗೆ ಮನೆಯಿಂದ ಆಚೆ ಹೋಗಿ ವಾಪಸ್ ಬಂದಿದ್ದಾರೆ. ವಾಪಸ್ ಮನೆ ಬಳಿ ಬರ್ತಿದ್ದ ವೇಳೆ ಮನೆಯಿಂದ 50 ಅಡಿ ದೂರದಲ್ಲೇ ಆತನ ಸ್ನೇಹಿತರು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕೊಲೆಯಾದ ರೇವಣಸಿದ್ದ ಫೈನಾನ್ಸ್ ನಡೆಸುತ್ತಿದ್ದ, ಪ್ರತಿ ರಾತ್ರಿ 10 ಗಂಟೆಯೊಳಗೆ ಮಗ ಮನೆಗೆ ಬರುತ್ತಿದ್ದ ಆದ್ರೆ 12 ಆದರೂ ಬಾರದ ಹಿನ್ನೆಲೆ ಮಗನಿಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ನೇಹಿತರ ಜೊತೆಗೆ ಇದ್ದೇನೆ ಎಂದು ಕರೆ ಕಟ್ ಮಾಡಿದ್ದ. ಬಳಿಕ ಆತನ ಬೈಕ್ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಬಳಿ ಬಿಟ್ಟು ಉಳಿದ ಸ್ನೇಹಿತರ ಬೈಕ್ ನಲ್ಲಿ ಕರೆ ತಂದು, ಮನೆ ಹತ್ತಿರ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ವಾಕಿಂಗ್ ಗೆ ಬಂದವರು ಕೊಲೆ ದೃಶ್ಯವನ್ನು ಕಂಡು ಪೊಲೀಸರಿಗೆ ಮಾಹಿತಿ…

Read More

ಭುವನೇಶ್ವರ: ವ್ಯಕ್ತಿಯೊಬ್ಬ ತನಗೆ ಮೂರು ಬಾರಿ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಮಯೂರ್ಭಂಜ್ ಜಿಲ್ಲೆಯ ಉದಲಾದಲ್ಲಿ ಈ ಘಟನೆ ನಡೆದಿದೆ. ಅಜಿತ್ ಕರ್ಮಾಕರ್ ಅವರಿಗೆ ಅವರ ಮನೆಯ ಆವರಣದಲ್ಲಿ ನಾಗರ ಹಾವು ಸುಮಾರು ಮೂರು ನಾಲ್ಕು ಬಾರಿ ಕಚ್ಚಿತ್ತು. ತಕ್ಷಣವೇ ಹಾವನ್ನು ಹೊಡೆದು ಕೊಂದ ಅವರು ಪ್ಲಾಸ್ಟಿಕ್ ಚೀಲದಲ್ಲಿ ಹಾವನ್ನು ತುಂಬಿಸಿ ನೇರವಾಗಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ. ವೈದ್ಯರು ಯಾವ ಹಾವು ಕಚ್ಚಿರುವುದು ಎಂದು ಕೇಳಿದರೆ ತೋರಿಸಲು ಈ ವ್ಯಕ್ತಿ ಹೀಗೆ ಮಾಡಿದ್ದಾರಂತೆ, ಆಸ್ಪತ್ರೆಯ ಡಾ. ರಾಜ್ಕುಮಾರ್ ನಾಯಕ್ ತಕ್ಷಣವೇ ಕಚ್ಚಿದ ಹಾವನ್ನು ಗುರುತಿಸಿ ಅಜಿತ್ ಕರ್ಮಾಕರ್ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ವ್ಯಕ್ತಿ ಹಾವನ್ನು ತನ್ನ ಜೊತೆಗೆ ಆಸ್ಪತ್ರೆಗೆ ತಂದಿರುವುದರಿಂದ ತ್ವರಿತವಾಗಿ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಯ್ತು ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More

ನಟ ದರ್ಶನ್ ಇನ್ ಸ್ಟಾಗ್ರಾಮ್ ನಲ್ಲಿ ಸುಮಲತಾ ಸೇರಿದಂತೆ ಕೆಲವೇ ಕೆಲವರನ್ನು ಫಾಲೋ ಮಾಡುತ್ತಿದ್ದರು. ಈ ಪೈಕಿ ಅಂಬರೀಷ್ ಕುಟುಂಬದ ಸುಮಲತಾ, ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಇದ್ದರು. ಎಲ್ಲರನ್ನೂ ದರ್ಶನ್ ಅನ್ ಫಾಲೋ ಮಾಡಿದ್ದರು, ಇದೀಗ ಸುಮಲತಾ ಮನೆಯ ಪ್ರಮುಖ ಕಾರ್ಯಕ್ರಮಕ್ಕೆ ದರ್ಶನ್ ಗೈರಾಗಿದ್ದಾರೆ. ಅಭಿಷೇಕ್ ಅಂಬರೀಷ್ ಮಗನಿಗೆ ನಾಮಕರಣ ಶಾಸ್ತ್ರ. ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಈ ಶಾಸ್ತ್ರ ನೆರವೇರಿತು. ಈ ಕಾರ್ಯಕ್ರಮಕ್ಕೆ ಸುದೀಪ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಆದರೆ ದರ್ಶನ್ ಮಾತ್ರ ಗೈರಾಗಿದ್ದರು. ಯಮ ಕರೆದರೆ ಅಮ್ಮನ ಒಂದು ಕೆಲಸ ಇದೆ ಮುಗಿಸಿ ಬರ್ತೀನಿ ಎಂದು ಹೇಳುತ್ತೇನೆ ಎಂದು ಒಂದು ಕಾಲದಲ್ಲಿ ನಟ ದರ್ಶನ್ ಹೇಳಿದ್ದರು. ಆದರೆ ತಾನು ಜೈಲು ಸೇರಿದ ವೇಳೆ ಯಾರೂ ಬೆನ್ನ ಹಿಂದೆ ನಿಲ್ಲಲಿಲ್ಲ ಎಂದು ಅವರು ನೊಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More

ಬೆಂಗಳೂರು: ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಮರಿಗೆ ಮಾತ್ರ ಮೀಸಲಾತಿ ನೀಡುವುದನ್ನು ವಿರೋಧಿಸುವುದಾಗಿ ಹೇಳಿರುವ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದರ ವಿರುದ್ಧ ಉಭಯ ಸದನಗಳಲ್ಲೂ  ಹೋರಾಡುವುದಾಗಿ ತಿಳಿಸಿದ್ದಾರೆ. ನಮ ಹೋರಾಟಕ್ಕೆ ಸರ್ಕಾರ ಬಗ್ಗದಿದ್ದರೆ ಜನರ ಮುಂದೆ ಈ ಹೋರಾಟವನ್ನು ಕೊಂಡೊಯ್ಯುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿ ಆಕೋಶ ಹೊರ ಹಾಕಿರುವ ಅವರು, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವಕ್ಕೆ ಬಿಜೆಪಿ ಸದಾ ಬದ್ಧವಾಗಿದೆ ಎಂದಿದ್ದಾರೆ. ಕಾಂಗ್ರೆಸ್‌‍ ಸರ್ಕಾರ ಮುಸ್ಲಿಮರಿಗೆ ಬಹುಪಾಲು ಇತರರಿಗೆ ಅಲ್ಪಪಾಲು ಎಂಬ ನೀತಿ ಅನುಸರಿಸಲು ಹೊರಟು ಕುವೆಂಪು ಅವರು ಕಲ್ಪಿಸಿದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ವಿಜಯಪುರ: ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಸಚಿವರ ಹೆಸರು ಶೀಘ್ರವೇ ವಿಧಾನಸಭೆಯಲ್ಲಿ ಬಹಿರಂಗ ಪಡಿಸುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ರನ್ಯಾ ಜೊತೆ ಯಾರೆಲ್ಲಾ ಸಂಬಂಧ ಹೊಂದಿದ್ದಾರೆ, ಅವರಿಗೆ ಯಾವ ರೀತಿಯ ಭದ್ರತೆ ಒದಗಿಸಲಾಗಿದೆ ಎಂಬುದನ್ನು ವಿಧಾನಸಭೆಯಲ್ಲಿ ಬಹಿರಂಗಪಡಿಸುತ್ತೇನೆ. ಅವರು ಚಿನ್ನವನ್ನು ಎಲ್ಲಿಂದ ಪಡೆದರು ಎಂಬುದು ಸೇರಿದಂತೆ ಎಲ್ಲಾ ಮಾಹಿತಿಯನ್ನು ನಾವು ಸಂಗ್ರಹಿಸಿದ್ದೇವೆ ಎಂದರು. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಚಿವರ ಹೆಸರುಗಳನ್ನು ಬಹಿರಂಗಪಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಒತ್ತಾಯಿಸುತ್ತಿದೆ. ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಹೇಳಿಕೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಚಿತ್ರದುರ್ಗ:  ಕುಡಿಯುವ ನೀರಿನ ವಿಚಾರಕ್ಕೆ ಜಗಳ ನಡೆದು ಮದುವೆಯೇ ಮುರಿದು ಬಿದ್ದ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಲಿಜ ಶ್ರೇಯ ಭವನದಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ಯುವತಿ ಹಾಗೂ ಜಗಳೂರು ಪಟ್ಟಣದ ಯುವಕನ ವಿವಾಹ ನಿಶ್ಚಯವಾಗಿತ್ತು. ವಧು ಹಾಗೂ ವರ ಇಬ್ಬರೂ ಇಂಜಿನಿಯರಿಂಗ್ ಪದವೀಧರರಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ಆರತಕ್ಷತೆ ಮುಗಿಸಿಕೊಂಡು ಊಟಕ್ಕೆ ಹೋದ ವರನ ಕಡೆಯ ಕೆಲವರಿಗೆ ಕುಡಿಯುವ ನೀರು ಸಿಕ್ಕಿಲ್ಲ. ಇದೇ ವಿಚಾರಕ್ಕೆ ವಧು ಹಾಗೂ ವರನ ಕಡೆಯವರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿತ್ತು. ವರನ ಕಡೆಯವರ ಜಗಳ ಕಂಡು ಚಿಂತೆಗೆ ಜಾರಿಗೆ ವಧು ನನಗೆ ಈ ಮದುವೆ ಬೇಡ ಎಂದು ನಿರಾಕರಿಸಿದ್ದಾಳೆ ಎನ್ನಲಾಗಿದೆ. ಮದುವೆ ಮುರಿದು ಬಿದ್ದ ಹಿನ್ನೆಲೆ ಸಂಬಂಧಿಕರು ಬಂದ ದಾರಿಯಲ್ಲೇ ವಾಪಸ್ ಆಗಿದ್ದಾರೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠಕ್ಕೆ ನವದಂಪತಿಗಳಾದ ಸಂಸದ ತೇಜಸ್ವಿ ಸೂರ್ಯ, ಶಿವಶ್ರೀ ಭೇಟಿ ನೀಡಿ ದೇವರ ಸನ್ನಿಧಿಯಲ್ಲಿ ಕೀರ್ತನೆ, ಸಂಗೀತ ಸೇವೆ ಸಲ್ಲಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದ ದಂಪತಿ ಕೀರ್ತನೆ, ಸಂಗೀತ ಸೇವೆ ಸಲ್ಲಿಸಿದರು. ಮದುವೆಯ ನಂತರ ತೇಜಸ್ವಿ ಸೂರ್ಯ ಅವರು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ . ಇಬ್ಬರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ದಂಪತಿಯಾಗಿದ್ದಾರೆ ಎಂದು ಇದೇ ವೇಳೆ ನವದಂಪತಿಗಳನ್ನು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಡಿ ಹೊಗಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ನವದೆಹಲಿ: ಪಾಕಿಸ್ತಾನವು ಸಾಮರಸ್ಯದ ಸಹಬಾಳ್ವೆಯನ್ನು ಬಯಸುತ್ತಿಲ್ಲ. ಬದಲಾಗಿ ಭಾರತದ ವಿರುದ್ಧ ಪರೋಕ್ಷ ಯುದ್ಧ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕ ಮೂಲದ ಖ್ಯಾತ ಪಾಡ್‌ ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ ಮನ್ ಜೊತೆಗಿನ ಸಂವಾದದಲ್ಲಿ ಪ್ರಧಾನಿ ಮಾತನಾಡುತ್ತಿದ್ದರು. ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಶಾಂತಿ ಮತ್ತು ಸಾಮರಸ್ಯದಿಂದ ಸಹಬಾಳ್ವೆ ನಡೆಸಬಹುದೇ? ಎಂದು ಲೆಕ್ಸ್ ಫ್ರಿಡ್‌ಮನ್ ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ,  ಪಾಕಿಸ್ತಾನ ಭಯೋತ್ಪಾದಕ ಮನಸ್ಥಿತಿಯಿಂದಾಗಿ ನಡೆಯುತ್ತಿದೆ, ಭಾರತ, ಪಾಕ್‌ ವಿಭಜನೆ ಕಥೆ ಮತ್ತು ನಂತರದ ರಕ್ತಪಾತದ ಹೃದಯಸ್ಪರ್ಶಿ ವಿಚಾರವನ್ನು ಹಂಚಿಕೊಂಡರು. ಕಾಲ ಕಳೆದರೂ, ರಕ್ತಪಾತ ಮತ್ತು ಭಯೋತ್ಪಾದನೆಯಿಂದ ಅಭಿವೃದ್ಧಿ ಹೊಂದುವ ಸಿದ್ಧಾಂತದಿಂದ ಉತ್ತೇಜಿಸಲ್ಪಟ್ಟ ಪಾಕಿಸ್ತಾನ, ಭಾರತದ ವಿರುದ್ಧ ಪರೋಕ್ಷ ಯುದ್ಧವನ್ನು ಮುಂದುವರೆಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತಿಪಟೂರು: ದಲಿತ ವಿರೋಧಿ ಅಸ್ಪೃಶ್ಯತಾ ಮನಸ್ಥಿತಿ ಹೊಂದಿರುವ ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ರವರನ್ನು  ತುಮಕೂರು ಜಿಲ್ಲೆಯಿಂದ ಬೇರಡೆ ವರ್ಗಾವಣೆ ಮಾಡಬೇಕೆಂದು ದಲಿತ ಪ್ರಗತಿಪರ ಸಂಘಟನೆಗಳು ಒತ್ತಾಯ ಮಾಡಿದರು. ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ  ಮಾತನಾಡಿದ ದಲಿತ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ. ಶಾಂತಪ್ಪ, ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿ. ಪ್ರಭು ಅವರು  ಅಧಿಕಾರ ದುರ್ಬಳಕೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಲಿತ ಸರ್ಕಾರಿ ನೌಕರರುಗಳಿಗೆ ನೀಡುತ್ತಿರುವ ಮಾನಸಿಕ ಹಿಂಸೆ ಮತ್ತು ಅಮಾನತು ಶಿಕ್ಷೆಗಳನ್ನು  ದಲಿತ ಅಧಿಕಾರಿಗಳನ್ನು ಗುರಿಯನ್ನಾಗಿಸಿ ನೀಡುತ್ತಿರುವುದು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ದಲಿತ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಅಸ್ಪೃಶ್ಯತೆಯನ್ನ ತುಮಕೂರು ಜಿಲ್ಲಾ ಪಂಚಾಯತಿ ಸಿಇಓ ರವರು ಜೀವಂತವಾಗಿಸಲು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿರುವುದು ದಲಿತ ನೌಕರರ ಮೇಲಿನ ದೌರ್ಜನ್ಯದಿಂದ  ರುಜುವಾತಾಗಿರುತ್ತದೆ ಆದಕಾರಣ ದಲಿತ…

Read More

ಬೀದರ್: ಸಿಎಂ ಸಿದ್ದರಾಮಯ್ಯ ಮಾದಿಗರ ವಿರೋಧಿ,  ದಲಿತ ವಿರೋಧಿ ರಾಜ್ಯ ಸರ್ಕಾರ, ಒಳಮೀಸಲಾತಿ ಜಾರಿಗೆ ಹಿಂದೇಟು ಹಾಕುತ್ತಿದೆ ಎಂದು ಮಾದಿಗ ದಂಡೋರ ಔರಾದ್ ತಾಲ್ಲೂಕು ಮಾಜಿ ಉಪಾಧ್ಯಕ್ಷ ಅರವಿಂದ ಮಲ್ಲಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಮಾಡಿ,  ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ. ಸದಾಶಿವ ಆಯೋಗದ ಪ್ರಕಾರ ಒಳಮೀಸಲಾತಿ ಜಾರಿಗೊಳಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸದ ಸರ್ಕಾರ, ದಲಿತರ ಪಾಲಿಗೆ ಸತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದು,  ಒಳಮೀಸಲಾತಿ ಜಾರಿಗೆ ಆಗ್ರಹಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More