ಕಲಬುರಗಿ: ನಗರದ ರಾಜಾಪುರ ಬಡಾವಣೆಯ ನಿವಾಸಿಯಾದ ರೇವಣಸಿದ್ದ ಅನ್ನೋ ಯುವಕನನ್ನು ಆತನ ಸ್ನೇಹಿತರೆ ಬರ್ಬರವಾಗಿ ಹತ್ಯೆ ನಡೆಸಿ ಪರಾರಿಯಾದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಭಾನುವಾರ ತಡರಾತ್ರಿ ರೇವಣಸಿದ್ದ ಆತನ ಸ್ನೇಹಿತರೊಂದಿಗೆ ಮನೆಯಿಂದ ಆಚೆ ಹೋಗಿ ವಾಪಸ್ ಬಂದಿದ್ದಾರೆ. ವಾಪಸ್ ಮನೆ ಬಳಿ ಬರ್ತಿದ್ದ ವೇಳೆ ಮನೆಯಿಂದ 50 ಅಡಿ ದೂರದಲ್ಲೇ ಆತನ ಸ್ನೇಹಿತರು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಕೊಲೆಯಾದ ರೇವಣಸಿದ್ದ ಫೈನಾನ್ಸ್ ನಡೆಸುತ್ತಿದ್ದ, ಪ್ರತಿ ರಾತ್ರಿ 10 ಗಂಟೆಯೊಳಗೆ ಮಗ ಮನೆಗೆ ಬರುತ್ತಿದ್ದ ಆದ್ರೆ 12 ಆದರೂ ಬಾರದ ಹಿನ್ನೆಲೆ ಮಗನಿಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ನೇಹಿತರ ಜೊತೆಗೆ ಇದ್ದೇನೆ ಎಂದು ಕರೆ ಕಟ್ ಮಾಡಿದ್ದ. ಬಳಿಕ ಆತನ ಬೈಕ್ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಬಳಿ ಬಿಟ್ಟು ಉಳಿದ ಸ್ನೇಹಿತರ ಬೈಕ್ ನಲ್ಲಿ ಕರೆ ತಂದು, ಮನೆ ಹತ್ತಿರ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಬೆಳಗ್ಗೆ ವಾಕಿಂಗ್ ಗೆ ಬಂದವರು ಕೊಲೆ ದೃಶ್ಯವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ರೇವಣಸಿದ್ದ ಕುಟುಂಬಸ್ಥರಿಗೆ ಕೊಲೆಯಾದ ವಿಚಾರ ಮುಟ್ಟಿಸಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4