Subscribe to Updates
Get the latest creative news from FooBar about art, design and business.
- ತುಮಕೂರು: ಎರಡು ದಿನ ವಿದ್ಯುತ್ ವ್ಯತ್ಯಯ: ವಿವರಗಳಿಗಾಗಿ ಈ ಸುದ್ದಿ ಓದಿ
- ಆರ್ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ
- “ಗಿಲ್ಲಿ ಒಬ್ಬನನ್ನು ಬಿಟ್ಟು ಮನೆಯವರೆಲ್ಲರೂ ನನಗೆ ಅಣ್ಣಂದಿರು” ಎಂದು ವೀಕ್ಷಕರ ತಲೆಗೆ ಹುಳಬಿಟ್ಟ ರಕ್ಷಿತಾ!
- ಕಾಡಾನೆ ಹಾವಳಿ ತಡೆಗೆ ‘ಎಐ’ ತಂತ್ರಜ್ಞಾನ: ಅರಣ್ಯ ಇಲಾಖೆಯಿಂದ ಹೊಸ ಪ್ರಯೋಗ
- ಅರಣ್ಯ ಇಲಾಖೆ ಸಿಬ್ಬಂದಿಗೆ ಬಂಪರ್ ಕೊಡುಗೆ: 1 ಕೋಟಿ ರೂ. ಅಪಘಾತ ವಿಮೆ ಘೋಷಿಸಿದ ಸಚಿವ ಈಶ್ವರ ಖಂಡ್ರೆ
- ಭಾರತದಲ್ಲಿ ಜಾತಿಭೇದ ಸೃಷ್ಟಿಸಿದ ಮನುಸ್ಮೃತಿಯನ್ನು ಅಂಬೇಡ್ಕರ್ ಸುಟ್ಟ ದಿನ: ಸರಗೂರಿನಲ್ಲಿ ಅರ್ಥಪೂರ್ಣ ಆಚರಣೆ
- ತಿಪಟೂರು | ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ
- ಗುಬ್ಬಿ: SBI ಬ್ಯಾಂಕ್ ನ ಎಟಿಎಂನಿಂದ ಹಣ ದೋಚಿದ ಕಳ್ಳರು
Author: admin
ತುಮಕೂರು: ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಖಾಸಗಿ/ ಸರ್ಕಾರಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕ್ರೀಡಾ ಸಂಕೀರ್ಣ, ಬಸ್/ರೈಲ್ವೆ ನಿಲ್ದಾಣಗಳ ಆವರಣದಲ್ಲಿ ಯಾವುದೇ ಬೀದಿ ನಾಯಿಗಳು ವಾಸವಿದ್ದಲ್ಲಿ ಪರಿಶೀಲಿಸಿ, ಅವುಗಳ ಸಂಖ್ಯೆಯನ್ನು ಲೆಕ್ಕ ಮಾಡಿ, ಕೂಡಲೇ ಮಹಾನಗರ ಪಾಲಿಕೆಯ ಆಯುಕ್ತರಿಗೆ ವರದಿ ನೀಡಬೇಕೆಂದು ಪಾಲಿಕೆ ಆಯುಕ್ತರು ಸಂಬಂಧಿಸಿದ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಸರ್ಮೋಚ್ಛ ನ್ಯಾಯಾಲಯ ಆದೇಶದನ್ವಯ ಬೀದಿ ನಾಯಿಗಳ ಉಪಟಳ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಬೀದಿ ನಾಯಿಗಳ ಪ್ರದೇಶವನ್ನು ನಿಯಂತ್ರಿಸಲು ಹಾಗೂ ಅವುಗಳ ಪ್ರವೇಶವನ್ನು ನಿರ್ಬಂಧಿಸಲು, ನಗರ ಸ್ಥಳೀಯ ಸಂಸ್ಥೆಯಿಂದ ಸ್ಥಳಾಂತರಿಸುವುದನ್ನು ಮೇಲ್ವಿಚಾರಣೆ ಮಾಡಲು ಸಂಸ್ಥೆಗಳ ಒಬ್ಬ ಜವಾಬ್ದಾರಿಯುತ ನೌರಕನನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಬೇಕು. ಸಂಸ್ಥೆಯ ಆವರಣದಲ್ಲಿ ಬೀದಿ ನಾಯಿಗಳು ವಾಸ ಮಾಡಲು ಅವಕಾಶ ಕೊಟ್ಟರೆ ಸ್ಥಳಾಂತರ ವೆಚ್ಚವನ್ನು ಸಂಬಂಧಿತ ಸಂಸ್ಥೆಯಿಂದಲೇ ವಸೂಲಿ ಮಾಡಲಾಗುವುದು. ಸರ್ಮೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ತುಮಕೂರು: ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ 2025–26 ಸಾಲಿಗೆ ಕೃಷಿಕ್ ಎಂಡೋಮೆಂಟ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ. ಕೃಷಿಕ್ ಸರ್ವೋದಯ ಫೌಂಡೇಷನ್ (ರಿ) ಇದು ಒಂದು ಧರ್ಮಾರ್ಥ ಸಂಸ್ಥೆಯಾಗಿದ್ದು ಕಳೆದ 33 ವರ್ಷಗಳಿಂದ ಕರ್ನಾಟಕದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಕ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಾ ಬಂದಿದ್ದು, ಸಾವಿರಾರು ಅಭ್ಯರ್ಥಿಗಳು ಇದರ ಅನುಕೂಲತೆ ಪಡೆದಿರುತ್ತಾರೆ. ಇದರ ಜೊತೆಗೆ ಕಳೆದ 13 ವರ್ಷಗಳಿಂದ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಅರ್ಹ ಬಡ ವಿದ್ಯಾರ್ಥಿಗಳಿಗೆ ಕೃಷಿಕ್ ಎಂಡೋಮೆಂಟ್ ವಿದ್ಯಾರ್ಥಿವೇತನವನ್ನು ಕೊಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಈಗ ಪ್ರಥಮ ವರ್ಷದ ಪಿ.ಯು.ಸಿ, ಸ್ನಾತಕ, ವೃತ್ತಿಪರ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಹಿಂದಿನ (2024–25) ಸಾಲಿನ ಪರೀಕ್ಷೆಯಲ್ಲಿ 80% ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 2025–26ನೇ ಸಾಲಿಗೆ ಕೆ.ಎಸ್.ಎಫ್. ಎಂಡೋಮೆಂಟ್ ವಿದ್ಯಾರ್ಥಿವೇತನ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ನ.30ರವರೆಗೆ…
ಮಧುಗಿರಿ: ಸಂಪೂರ್ಣ ಒಳಮೀಸಲಾತಿ ಜಾರಿಗಾಗಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನ.29 ಮತ್ತು ನ.30 ರಂದು ಶಿಬಿರವನ್ನು ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ಶೈಲ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಿ.ಆರ್.ಭಾಸ್ಕರ್ ಪ್ರಸಾದ್ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಸಮುದಾಯದ ವಿಚಾರವಂತರು, ಹೋರಾಟಗಾರರು, ಕಾನೂನು ಪಂಡಿತರು ಮತ್ತು ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಟಿ.ಹೆಚ್.ಮೈಲಾರಪ್ಪತಿಪ್ಪಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಮೂರು ಅಂಗಡಿಗಳ ಶೀಟ್ ಕತ್ತರಿಸಿ ಕಳವು ಮಾಡಿರುವ ಘಟನೆ ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಇಲ್ಲಿನ ಅಂಗಡಿಗಳ ಮೇಲ್ಛಾವಣಿಯ ಸೀಟುಗಳನ್ನು ಕಳ್ಳರು ಕತ್ತರಿಸಿ ಒಳ ನುಗ್ಗಿ ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ. ಪಾವಗಡ ಹೊಸ ಬಸ್ ನಿಲ್ದಾಣದ ಗುರಪ್ಪಲೇಔಟ್ ನಲ್ಲಿ ಒಂದೇ ರಾತ್ರಿ ಮೂರು ಹೋಲ್ ಸೇಲ್ ಅಂಗಡಿಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಚಂದ್ರಪ್ಪ ಎಂಬುವರಿಗೆ ಸೇರಿದ ಅಶ್ವಿನ್ ಮಾರ್ಕೆಟಿಂಗ್ ಅಂಗಡಿಯ ಮೇಲ್ಬಾವಣಿ ಕತ್ತರಿಸಿ ಒಳ ನುಗ್ಗಿ 2 ಲಕ್ಷ ರೂ. ಹಣ ದೋಚಿದ್ದಾರೆ. ಇದರ ಪಕ್ಕದಲ್ಲೇ ಇರುವ ಸಾಗರ್ ಎಂಬುವರಿಗೆ ಸೇರಿದ ಆರ್. ಎಸ್.ಮೆಗಾ ಹೋಲ್ ಅಂಗಡಿಗೂ ನುಗ್ಗಿ ಹುಂಡಿಯಲ್ಲಿದ್ದ 60 ಸಾವಿರ ರೂ.ಗಳನ್ನು ಕಳ್ಳರು ದೋಚಿದ್ದಾರೆ. ರವಿತೇಜ ಎಂಬುವರಿಗೆ ಸೇರಿದ ಲಕ್ಷ್ಮೀ ಹೋಲ್ ಸೇಲ್ ಅಂಗಡಿಯಲ್ಲಿ ಕಳ್ಳರು ನುಗ್ಗಿದ್ದು, ಅಲ್ಲಿ ಯಾವುದೇ ಕಳ್ಳತನ ಮಾಡಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ…
ಔರಾದ: ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಔರಾದ್ ತಾಲ್ಲೂಕಿನ ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜನಾಬಾಯಿ ದಿಗಂಬರ ಭಾಷಣ ಸ್ಪರ್ಧೆಯಲ್ಲಿ ಹಾಗೂ ಲಕ್ಷ್ಮೀ ಅನೀಲ್ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಚಂದ್ರಕಾಂತ್ ಶಾಹಾಬಾದಕರ್, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು. ಪ್ರಾಂಶುಪಾಲ ಓಂಪ್ರಕಾಶ್ ದಡ್ಡೆ, ಉಪನ್ಯಾಸಕರು ಇದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಔರಾದ: ತಾಲೂಕಿನ ಕೊಳ್ಳುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈಷ್ಣವಿ ಕ್ಲಿನಿಕ್ ಹಾಗೂ ಶಿವಾ ಮೆಡಿಕಲ್ ಏಕಾಲಾರ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಡಾ.ಶಿಲ್ಪಾ ಎಂ. ಪುಲಾರಿ ಅವರು ಜನರ ಆರೋಗ್ಯ ತಪಾಸಣೆ ನಡೆಸಿದರು. ಶಿವ ಮೆಡಿಕಲ್ ಏಕಲಾರನ ಮಾಲೀಕರಾದ ಅಂಬರೀಶ್ ರವರು ಆರೋಗ್ಯ ತಪಾಸಣೆಗೆ ಬಂದ ಜನರಿಗೆ ಉಚಿತ ಔಷಧಿಗಳು ವಿತರಿಸಿದರು. ಡಾಕ್ಟರ್ ಮಹೇಶ್ ಪುಲಾರಿ, ಡಾಕ್ಟರ್ ಶಿಲ್ಪ ಮಹೇಶ್ ಪುಲಾರಿ ಅವರ ಮದುವೆ ವಾರ್ಷಿಕೋತ್ಸವ ನಿಮಿತ್ತ ಕೊಳ್ಳುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸುವುದಕ್ಕಾಗಿ ಗ್ರಾಮಸ್ಥರ ವತಿಯಿಂದ ಅವರಿಗೆ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಮುಖಂಡರಾದ ಸುಧಾಕರ್ ಕೊಳ್ಳುರ, ಶಿವಶಂಕರ ಮಣಿಗಂಪುರೆ, ಬಸವರಾಜ್ ದೆಗಲವಾಡೆ, ಬಂಡೆಪ್ಪ ದಗಲವಾಡೆ, ಗ್ರಾಮ ಪಂಚಾಯತ್ ಸದಸ್ಯರಾದ ಸುಲೋಚನಾ ವಿಜಯಕುಮಾರ್, ವಿಶ್ವನಾಥ್ ದಬಾಡೆ, ಈರಣ್ಣ ವಡಿಯರ, ಶರಣಪ್ಪ, ಅಕ್ಬರ್ ಪಾಷಾ, ಅಜ್ಮುದ್ದೀನ್, ಶಾಲೆ ಪ್ರವಾರಿ ಮುಖ್ಯ ಗುರುಗಳಾದ ರಾಜಕುಮಾರ್ ಚಳ್ಳಕಪುರೆ ಮುಂತಾದವರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ…
ಕೊರಟಗೆರೆ : ರಾಜ್ಯದಲ್ಲಿ ಮತ್ತು ಸ್ಥಳೀಯವಾದ ಸಮಸ್ಯೆಗಳು ಬಗ್ಗೆ ಹಾಗೂ ಸಮಾಜದಲ್ಲಿ ಏನಾಗುತ್ತಿದೆ ಎಂದು ಪತ್ರಕರ್ತರ ಸುದ್ದಿಯಿಂದ ತಿಳಿದುಕೊಳ್ಳುವ ಸರ್ಕಾರ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಆಲಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ವಿಷಾದ ವ್ಯಕ್ತ ಪಡಿಸಿದರು. ಅವರು ಕೊರಟಗೆರೆ ತಾಲ್ಲೂಕಿನ ಸಸ್ಯ ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದಲ್ಲಿ ಆಯೋಜಿಸಲಾಗಿದ್ದ, ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತರಿಗೆ ಹಾಗೂ ಇತ್ತೀಚೆಗೆ ನಡೆದ ಜಿಲ್ಲಾ ಪತ್ರಕರ್ತ ಸಂಘದ ಚುನಾವಣೆಯಲ್ಲಿ ವಿಜೇತರಾದ ಪಧಾದಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಈ ಮೂರು ರಂಗಗಳಿಗೆ ವಿಶೇಷ ಸ್ಥಾನಮಾನ ನೀಡಿರುವ ಸರ್ಕಾರ ಹೆಸರಿಗಷ್ಟೇ ಸೀಮಿತವಾದ ನಾಲ್ಕನೇ ಅಂಗವಾದ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಬಹಳ ಸಮಸ್ಯೆಗಳಾಗುತ್ತಿದ್ದು, ಅದರಲ್ಲೂ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಭದ್ರತೆ ಇಲ್ಲದಂತಾಗಿದೆ ಹಾಗೂ ಪತ್ರಕರ್ತರು ಜೀವನ ನಿರ್ವಹಣೆಯು ಕಷ್ಟಕರವಾಗಿದ್ದು, ಸರ್ಕಾರ…
ತುಮಕೂರು: ಪ್ರಸ್ತುತ ಸಮಾಜದಲ್ಲಿನ ಯುವಜನತೆಯಲ್ಲಿ ಕನ್ನಡ ಪ್ರೇಮ ಹೆಚ್ಚಾಗುವುದರ ಜೊತೆಗೆ ಬೆಳೆಸುವ ಮನೋಭಾವ ಬರಬೇಕೆಂದು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಗೋವಿಂದರಾಯ ಎಂ. ತಿಳಿಸಿದರು ನಗರದ ಸತ್ಯಮಂಗಲದಲ್ಲಿನ ಜೈನ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಾ, ಕನ್ನಡ ನಾಡಿನ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಕನ್ನಡದ ಏಕೀಕರಣಕ್ಕೆ ಅನೇಕರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ, ದಿವಂಗತ ಮುಖ್ಯಮಂತ್ರಿ ದೇವರಾಜ ಅರಸು ಅವರಿಂದ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂತು, ಬದುಕನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಭಾಷೆಯನ್ನು ಮರೆಯಬಾರದು, ಕನ್ನಡವೆಂಬುದು ವಿವಿಧತೆಯಲ್ಲಿ ಏಕತೆಯನ್ನು ತೋರುವ ಭಾಷೆಯಾಗಿದೆ, ಈ ನಾಡಿನಲ್ಲಿ ಅನೇಕ ಸಾಧಕರನ್ನು ಕಾಣಬಹುದು ತಮ್ಮ ಒಡವೆಯನ್ನು ಅಡವಿಟ್ಟು ಕಾಲುವೆ, ಅಣೆಕಟ್ಟುಗಳನ್ನು ಕಟ್ಟಿಸಿದ ಮೈಸೂರಿನ ಅರಸರನ್ನು ಈ ಸಂದರ್ಭದಲ್ಲಿ ಅವರು ನೆನೆದರು, ಕನ್ನಡ ಮಾತನಾಡಿದರೆ ದಂಡ ಹಾಕುವ ಪರಿ ಶೋಚನೀಯ, ಇಂಗ್ಲಿಷ್ ಬೇಕು ಆದರೆ ಕನ್ನಡ ನಾಶವಾಗದಿರಲಿ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ…
ಪಾವಗಡ: ಮೊಬೈಲ್ ಹವ್ಯಾಸದಿಂದ ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಎಚ್. ನಾಗರಾಜ ಅಭಿಪ್ರಾಯಪಟ್ಟರು. ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದಲ್ಲಿ ಅವರು ಮಾತನಾಡಿದರು. ಗ್ರಂಥಾಲಯಗಳು ಓದುಗರ ಕೈಗೆಟುವಂತಿರಬೇಕು. ಮೊಬೈಲ್ ಬಳಕೆ ಮಿತಿ ಮೀರಿದ್ದು. ಮೊಬೈಲ್ ಗೀಳಿನಿಂದಾಗಿ ಪುಸ್ತಕ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆ, ಪ್ರಮುಖ ಪುಸ್ತಕಗಳನ್ನು ಮೊಬೈಲ್‌ನಲ್ಲಿಯೇ ಓದುವ ಹವ್ಯಾಸ ಹೆಚ್ಚುತ್ತಿದೆ ಎಂದು ತಿಳಿಸಿದರು. ಗ್ರಂಥಾಲಯ ಸಹಾಯಕ ಟಿ.ಕೆ. ಬಸವರಾಜ್ ಮಾತನಾಡಿ, ಓದುವ ಹವ್ಯಾಸವುಳ್ಳವರಿಗೆ ಸ್ನೇಹಿತರ ಅಗತ್ಯವಿರುವುದಿಲ್ಲ. ಗ್ರಂಥಾಲಯದಲ್ಲಿ ಎಲ್ಲರಿಗೂ ಎಲ್ಲಾ ತರಹದ ಪುಸ್ತಕಗಳಿರುತ್ತವೆ. ವಿವಿಧ ದಿನಪತ್ರಿಕೆಗಳಿರುತ್ತವೆ. ವಿದ್ಯಾರ್ಥಿಗಳು ಸಾರ್ವಜನಿಕ ಓದುಗರು ಅವುಗಳನ್ನು ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು. ಪಟ್ಟಣದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಪ್ರವೀಣ್ ಕುಮಾರ್, ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿ ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನನ ಸಂಪಾದಿಸಿ ಎಂದರು. ಸಪ್ತಾಹದ ಅಂಗವಾಗಿ ವಿವಿಧ ಶಾಲಾ…
ಶಿರಾ: ತಾಲೂಕಿನ ಬಂದಕುಂಟೆ ಗೊಲ್ಲರಹಟ್ಟಿಯಲ್ಲಿ ಗುರುವಾರ ರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ ಪರಿಣಾಮ ಮನೆಯಲ್ಲಿದ್ದ ಎಲ್ಲ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬಂದಕುಂಟೆ ಗೊಲ್ಲರಹಟ್ಟಿಯ ಮೂಡ್ಲಪ್ಪ ಅವರ ಮನೆಗೆ ಬೆಂಕಿ ಬಿದ್ದಿದ್ದು, ಕುರಿ ಮಾರಾಟ ಮಾಡಿ ಸಂಪಾದಿಸಿದ್ದ 3 ಲಕ್ಷ ರೂಪಾಯಿ, ಧಾನ್ಯ, ಚಿನ್ನಾಭರಣ, ಬಟ್ಟೆ ಸೇರಿದಂತೆ ಎಲ್ಲವೂ ಸುಟ್ಟು ಕರಕಲಾಗಿದೆ. ಘಟನೆ ನಡೆದ ವೇಳೆ ಕುಟುಂಬಸ್ಥರು ದೇವಸ್ಥಾನಕ್ಕೆ ತೆರಳಿದ್ದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲೇ ಮನೆ ಸಂಪೂರ್ಣ ಭಸ್ಮವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC