Author: admin

ಗುಬ್ಬಿ: ತಾಲೂಕಿನ ಹಿಂಡಿಸ್ಗೆರೆ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸುಜಾತ, ಉಪಾಧ್ಯಕ್ಷರಾಗಿ ಗೀತಾ ಅವಿರೋಧವಾಗಿ ಆಯ್ಕೆಯಾದರು. ಸುಮಾರು ಎಂಟು ವರ್ಷಗಳ ಬಳಿಕ ಹಿಂಡಿಸ್ ಗೆರೆ  ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆದಿದ್ದು,  ಅಧ್ಯಕ್ಷ ಸ್ಥಾನಕ್ಕೆ ಸುಜಾತ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಮಾತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿಗಳು ಅವಿರೋಧವಾಗಿ ಆಯ್ಕೆ ಮಾಡಿದರು.  ಚುನಾವಣೆ ಅಧಿಕಾರಿಯಾಗಿ ಲಿಯಾಖಾತ್ ಅಲಿಖಾನ್ ಚುನಾವಣೆ ಪ್ರಕ್ರಿಯೆಗಳನ್ನ ನಡೆಸಿಕೊಟ್ಟರು. ನಂತರ ನೂತನ ಅಧ್ಯಕ್ಷೆ ಸುಜಾತ ಸುದ್ದಿಗಾರರ ಜೊತೆ ಮಾತನಾಡಿ, ನಮ್ಮ ಎಲ್ಲ  ನಿರ್ದೇಶಕ ಸಹಕಾರ ಪಡೆದು ಹಿಂಡಿಸ್ ಗೆರೆ  ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.   ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಹಾಲು ಉತ್ಪಾದಕರಿಗೆ ಹಾಗೂ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಲು ಪ್ರಯತ್ನ ಮಾಡುತ್ತೇನೆ.  ಗ್ರಾಮೀಣ ಭಾಗದ ರೈತರು ಹೈನುಗಾರಿಕೆಗೆ ಹೆಚ್ಚು ಆದ್ಯತೆಯನ್ನು ಕೊಟ್ಟು ಪ್ರತಿ ಮನೆಯಲ್ಲೂ ಹಸುಗಳನ್ನು ಕಟ್ಟಿಕೊಂಡು ಡೈರಿಗಳಿಗೆ  ಹಾಲು ಹಾಕುವುದರ ಮೂಲಕ ಸ್ವಾವಲಂಬಿ ಬದುಕನ್ನ…

Read More

ಬೆಂಗಳೂರು: ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರ ಕುರಿತು ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನಸಭೆಯಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 370 ಬಾಂಗ್ಲಾ ಪ್ರಜೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 196 ಜನರನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಎಲ್ಲೆಲ್ಲಿ ಎಷ್ಟು ಜನ?: ಗುರುತಿಸಲಾದ 370 ಜನರಲ್ಲಿ ಅತಿ ಹೆಚ್ಚು ಅಂದರೆ 284 ಮಂದಿ ಬೆಂಗಳೂರಿನಲ್ಲಿದ್ದಾರೆ. ಉಳಿದಂತೆ ಬೆಂಗಳೂರು ಗ್ರಾಮಾಂತರದಲ್ಲಿ 37, ಶಿವಮೊಗ್ಗದಲ್ಲಿ 12 ಮತ್ತು ಹಾಸನದಲ್ಲಿ 3 ಬಾಂಗ್ಲಾ ಪ್ರಜೆಗಳನ್ನು ಪತ್ತೆ ಹಚ್ಚಲಾಗಿದೆ. ಹಲವು ನಗರಗಳಿಗೆ ವಲಸೆ: ಅಕ್ರಮ ವಲಸಿಗರು ಸಾಮಾನ್ಯವಾಗಿ ಕೋಲ್ಕತ್ತಾ ಮೂಲಕ ದೇಶದ ಒಳಗೆ ನುಸುಳುತ್ತಾರೆ. ಅಲ್ಲಿಂದ ಕೆಲಸ ಅರಸಿ ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ವಲಸೆ ಹೋಗುತ್ತಾರೆ ಎಂದು ಸಚಿವರು ವಿವರಿಸಿದರು. ಲಕ್ಷಾಂತರ ಜನರಿದ್ದಾರೆ ಎಂಬ ಆರೋಪ ತಳ್ಳಿಹಾಕೆ: ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾ ವಲಸಿಗರಿದ್ದಾರೆ ಎಂಬ ವಿರೋಧ ಪಕ್ಷದ ಆರೋಪವನ್ನು ಸಚಿವರು ನಿರಾಕರಿಸಿದರು. “ಇಷ್ಟು…

Read More

ಬೆಂಗಳೂರು: “ನಮ್ಮ ಸರ್ಕಾರ ಹಾದಿ ತಪ್ಪಿಲ್ಲ ಮತ್ತು ನಾನು ಅಸಹಾಯಕ ಮುಖ್ಯಮಂತ್ರಿಯಲ್ಲ. ಜನರಿಗೆ ನೀಡಿದ್ದ ಭರವಸೆಗಳನ್ನು ಎರಡೂವರೆ ವರ್ಷಗಳಲ್ಲಿ ಈಡೇರಿಸಿದ್ದೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಪ್ರತಿಪಾದಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಸೋಮವಾರ ಸುದೀರ್ಘ ಉತ್ತರ ನೀಡಿದ ಅವರು, ವಿರೋಧ ಪಕ್ಷಗಳ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅಸಹಾಯಕನಲ್ಲ: ವಿರೋಧ ಪಕ್ಷದವರು ಸರ್ಕಾರವನ್ನು ‘ಅಸಹಾಯಕ’ ಮತ್ತು ‘ಸಂವಿಧಾನರಹಿತ’ ಎಂದು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಕೆಲವೊಮ್ಮೆ ಅಸತ್ಯದ ಎದುರು ಸತ್ಯ ಅಸಹಾಯಕವಾಗುತ್ತದೆ ಅಷ್ಟೇ. ಆದರೆ ನಾನು ಅಸಹಾಯಕನಲ್ಲ,” ಎಂದು ಸ್ಪಷ್ಟಪಡಿಸಿದರು. ಕರ್ನಾಟಕ ಮಾದರಿ ಅಭಿವೃದ್ಧಿ: ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ಕೇಂದ್ರ ಸಚಿವರು ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ. ನಾವು ಜನಪರ ಮತ್ತು ಸಮಾಜಮುಖಿ ಆಡಳಿತ ನೀಡುತ್ತಿದ್ದೇವೆ ಎಂದು ಎದೆತಟ್ಟಿ ಹೇಳಿದರು. ವಿರೋಧ ಪಕ್ಷದವರ ವಿರುದ್ಧ ವಾಗ್ದಾಳಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ಇಲ್ಲದೆ ಜನರು ಮೃತಪಟ್ಟಾಗ ನಿಮ್ಮ ಸಂವೇದನೆ ಎಲ್ಲಿತ್ತು? ನೀವು ಕೃಷಿ ಸಾಲ, ಕೃಷಿ ಭಾಗ್ಯದಂತಹ…

Read More

ಬೆಂಗಳೂರು: ದಶಕಗಳ ಕಾಲದ ಕನಸಿನ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಅರಣ್ಯ ಇಲಾಖೆಯ ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿಧಾನಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ವಿಧಾನಸಭೆಯ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ, ಕೇಂದ್ರ ಸರ್ಕಾರ ಅರಣ್ಯ ಇಲಾಖೆಯ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಕೇಂದ್ರದ ಈ ಧೋರಣೆಯಿಂದಾಗಿ ಬಯಲು ಸೀಮೆಯ ಜನರಿಗೆ ನೀರು ತಲುಪಿಸುವ ಯೋಜನೆಗೆ ಹಿನ್ನಡೆಯಾಗುತ್ತಿದೆ ಎಂದು ದೂರಿದರು. ಕೇಂದ್ರದ ವಿರುದ್ಧ ಕಿಡಿ: “ನಾವು ಈ ದೇಶದ ಪ್ರಜೆಗಳಲ್ಲವೇ? ನಮ್ಮ ಹಕ್ಕನ್ನು ಕೇಳಲು ನಮಗೆ ಅಧಿಕಾರವಿದೆ. ಪ್ರತಿಯೊಂದು ನೀರಾವರಿ ಯೋಜನೆಗೂ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ. ಮಹದಾಯಿ ಯೋಜನೆಗೆ ಇಂದಿನವರೆಗೂ ಪೂರ್ಣ ಪ್ರಮಾಣದ ಅವಕಾಶ ಕೊಟ್ಟಿಲ್ಲ, ಈಗ ಎತ್ತಿನಹೊಳೆ ಯೋಜನೆಗೂ ಇದೇ ಪರಿಸ್ಥಿತಿ ಬಂದೊದಗಿದೆ,” ಎಂದು ಶಿವಲಿಂಗೇಗೌಡ ಕಿಡಿಕಾರಿದರು. ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ…

Read More

ಬೆಂಗಳೂರು: ಸಾಮಾಜಿಕ ಅಸಮಾನತೆ ಹಾಗೂ ಜಾತಿಯಾಧಾರಿತ ಶೋಷಣೆಯ ವಿರುದ್ಧ ಧ್ವನಿ ಎತ್ತಿರುವ ನಟ ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಸಮಾಜದಲ್ಲಿ ಮೌಲ್ಯಯುತ ಸಂದೇಶಗಳನ್ನು ಬಿತ್ತಲು ಮತ್ತು ಸಾರ್ವತ್ರಿಕ ಅಭಿಪ್ರಾಯ ಮೂಡಿಸಲು ಸಿನಿಮಾ ಅತ್ಯಂತ ಪ್ರಬಲ ಮಾಧ್ಯಮವಾಗಿದೆ. ಸಾಮಾಜಿಕ ಅಸಮಾನತೆ ಮತ್ತು ಜಾತಿ ಪದ್ಧತಿಯಂತಹ ಪಿಡುಗುಗಳ ವಿರುದ್ಧ ಬೆಳಕು ಚೆಲ್ಲುವ ಚಿತ್ರಗಳಿಗೆ ಬೆಂಬಲ ನೀಡುವುದು ಸರ್ಕಾರದ ನೈತಿಕ ಜವಾಬ್ದಾರಿ ಎಂದು ತಿಳಿಸಿದ್ದಾರೆ. ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನಿಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಸರ್ಕಾರದ ನೈತಿಕ ಹೊಣೆ. ಈ ನಿಟ್ಟಿನಲ್ಲಿ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸೂಚಿಸಲಾಗಿದೆ ಅಂತಾ ಅವರು ತಿಳಿಸಿದ್ದಾರೆ. ಮುಂದಿನ…

Read More

ಬೆಂಗಳೂರು: ರಾಜ್ಯ ವಿಧಾನಸಭೆಯ ಕಲಾಪದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ನಾಯಕತ್ವ’ ಹಾಗೂ ‘ಅಧಿಕಾರ ಹಂಚಿಕೆ’ (Power Sharing) ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಸ್ವಾರಸ್ಯಕರ ವಾಗ್ವಾದ ನಡೆಯಿತು. ಸಿಎಂ ಸಿದ್ದರಾಮಯ್ಯ ವ್ಯಂಗ್ಯ: ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದವರ ಕಾಲೆಳೆಯುತ್ತಾ, “ನನಗೂ ಮತ್ತು ಡಿ.ಕೆ. ಶಿವಕುಮಾರ್ ಅವರಿಗೂ ಆಗುವುದಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಮ್ಮ ನಡುವೆ ಹಾಲಾಹಲ ಇದೆ ಎನ್ನುತ್ತಿದ್ದಾರೆ,” ಎಂದು ನಗುತ್ತಲೇ ಡಿಕೆಶಿ ಕಡೆ ನೋಡಿ ಹೇಳಿದರು. ಸಮಯವೇ ಉತ್ತರ ನೀಡಲಿದೆ: ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಎಲ್ಲದಕ್ಕೂ ಸಮಯವೇ ಉತ್ತರ ಕೊಡುತ್ತದೆ ಬಿಡಿ,” ಎಂದು ಮಾರ್ಮಿಕವಾಗಿ ನುಡಿದರು. ಆರ್. ಅಶೋಕ್ ಲೇವಡಿ: ಡಿಕೆಶಿ ಹೇಳಿಕೆಯನ್ನು ಹಿಡಿದು ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, “ಇದು ಡಿಕೆಶಿ ಅವರ ಸ್ಟೈಲ್. ಒಂದು ಮಾತಿಗೆ ನೂರು ಅರ್ಥವಿರುತ್ತದೆ. ಆ ಸಮಯ ಯಾವಾಗ ಬರುತ್ತದೆ ಎಂದು…

Read More

ಕೊರಟಗೆರೆ: ನಮ್ಮ ದೇಶದ ನಿಜವಾದ ಶಕ್ತಿ ಗ್ರಾಮಗಳಲ್ಲಿ ಅಡಗಿದೆ. ಗ್ರಾಮೀಣ ಜನರು ಜಾತಿ–ಮತ ಭೇದ ಮರೆತು ಒಗ್ಗಟ್ಟಾಗಿ ಬದುಕಿದಾಗ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಂತಹ ಏಕತೆಯನ್ನು ಬೆಳೆಸುವಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಕೋಳಾಲ ಹೋಬಳಿಯ ಪಾತಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ನೂತನವಾಗಿ ನಿರ್ಮಿಸಲಾದ ಶ್ರೀ ಚನ್ನಕೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ಗ್ರಾಮೀಣ ಜೀವನದ ಮೌಲ್ಯ, ಪರಸ್ಪರ ಸಹಕಾರ ಹಾಗೂ ಸಾಮಾಜಿಕ ಸಾಮರಸ್ಯದ ಅಗತ್ಯತೆಯನ್ನು ಬಗ್ಗೆ ತಿಳಿಸಿದರು. ಗ್ರಾಮಗಳಲ್ಲಿ ಇರುವ ಸೌಹಾರ್ದತೆಯೇ ದೇಶದ ಬಲ, ಧಾರ್ಮಿಕ ಕೇಂದ್ರಗಳು ಕೇವಲ ಪೂಜೆಯ ಸ್ಥಳಗಳಲ್ಲ, ಸಮಾಜವನ್ನು ಒಂದಾಗಿ ಕಟ್ಟುವ ಕೇಂದ್ರಗಳಾಗಬೇಕು. ಯುವಕರು ದುಶ್ಚಟಗಳಿಗೆ ಒಳಗಾಗದೆ ಸಂಸ್ಕೃತಿ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಅಳವಡಿಸಿ ಕೊಳ್ಳಬೇಕು ಎಂದು ಸ್ವಾಮೀಜಿ ಉಪದೇಶ ನೀಡಿದರು.…

Read More

ಹತ್ರಾಸ್: ಮದುವೆಯೆಂಬುದು ನೂರು ಕಾಲದ ಸುಖದ ಸಂಸಾರಕ್ಕೆ ನಾಂದಿ ಹಾಡಬೇಕಾದ ಪವಿತ್ರ ಬಂಧ. ಆದರೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಪತ್ನಿಯೊಬ್ಬಳು ತನ್ನ ಪತಿಯನ್ನು ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ. ಘಟನೆಯ ವಿವರ: ಆಗ್ರಾ ನಿವಾಸಿಯಾದ ಯುವತಿಯೊಬ್ಬಳು ಹತ್ರಾಸ್‌ನ ಅಭಿಷೇಕ್ ಎಂಬುವವರನ್ನು ಒಂದು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದೇ ಭಾವಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಪತ್ನಿ ತನ್ನ ಪತಿಯಿಂದ ದೂರವಾಗುವುದಾಗಿ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪತ್ನಿಯ ಆರೋಪವೇನು? ತನ್ನ ಪತಿ ಅಭಿಷೇಕ್ ಅವರ ಮೈಬಣ್ಣ ಕಪ್ಪಗಿದೆ ಹಾಗೂ ಅವರ ನಡುವಿನ ದೈಹಿಕ ಸಂಬಂಧ ತನಗೆ ತೃಪ್ತಿ ನೀಡುತ್ತಿಲ್ಲ ಎಂದು ಪತ್ನಿ ಆರೋಪಿಸಿದ್ದಾರೆ. “ನಮ್ಮ ನಡುವೆ ಯಾವುದೇ ಕೌಟುಂಬಿಕ ಸಮಸ್ಯೆಗಳಿಲ್ಲ, ಆದರೆ ದೈಹಿಕ ಸಂಬಂಧದಲ್ಲಿ ನನಗೆ ತೃಪ್ತಿಯಿಲ್ಲ. ಈ ಬಗ್ಗೆ ನಾನು ಬಹಿರಂಗವಾಗಿ ಚರ್ಚಿಸಲು…

Read More

ತುಮಕೂರು: ನಗರದ ಉದ್ಯಮಿಯೊಬ್ಬರಿಗೆ ಪ್ರಸಿದ್ಧ ಬಟ್ಟೆ ಬ್ರ್ಯಾಂಡ್ ‘ಸ್ನಿಚ್’ (Snitch) ಕಂಪನಿಯ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ಬರೋಬ್ಬರಿ 8.75 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಏನಿದು ಪ್ರಕರಣ? ನಗರದ ಕೆ.ಆರ್‌. ಬಡಾವಣೆಯ ನಿವಾಸಿ ಹಾಗೂ ಉದ್ಯಮಿ ಚಂದನ್ ಕುಮಾರ್ ಅವರು ‘ಸ್ನಿಚ್’ ಕಂಪನಿಯ ಬಟ್ಟೆ ಮಳಿಗೆಯನ್ನು ಆರಂಭಿಸಲು ನಿರ್ಧರಿಸಿದ್ದರು. ಈ ಸಂಬಂಧ ಫ್ರಾಂಚೈಸಿ ಪಡೆಯುವ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕುತ್ತಿದ್ದಾಗ, ಅಪರಿಚಿತ ವ್ಯಕ್ತಿಗಳು ಅವರನ್ನು ಸಂಪರ್ಕಿಸಿದ್ದಾರೆ. ತಾವು ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ವಂಚಕರು, ಚಂದನ್ ಅವರಿಂದ ಮಳಿಗೆಯ ವಿಡಿಯೊ, ಫೋಟೊ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದಾರೆ. ಹಂತ ಹಂತವಾಗಿ ಹಣ ವಸೂಲಿ: ಫ್ರಾಂಚೈಸಿ ಮಂಜೂರು ಮಾಡುವುದಾಗಿ ನಂಬಿಸಿದ ಕಿಲಾಡಿಗಳು, ಆರಂಭದಲ್ಲಿ ನೋಂದಣಿ ಶುಲ್ಕವಾಗಿ ₹2.75 ಲಕ್ಷ ಪಾವತಿಸುವಂತೆ ಕೇಳಿದ್ದಾರೆ. ಅದನ್ನು ಪಾವತಿಸಿದ ನಂತರ, ಭದ್ರತಾ ಠೇವಣಿಯಾಗಿ ₹12 ಲಕ್ಷ ನೀಡಬೇಕು ಎಂದು ತಿಳಿಸಿ, ಮೊದಲ ಕಂತಿನ ರೂಪದಲ್ಲಿ ಮತ್ತೆ ₹6 ಲಕ್ಷ ವರ್ಗಾಯಿಸಿಕೊಂಡಿದ್ದಾರೆ. ಹೀಗೆ ಒಟ್ಟು ₹8.75 ಲಕ್ಷ…

Read More

ಬೆಂಗಳೂರು: ನರೇಗಾ (MNREGA) ಯೋಜನೆಯ ಹೆಸರಿನಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಕೈಬಿಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಅವರು ಮಂಗಳವಾರ ಸದನದಲ್ಲಿ ಅಂಕಿಅಂಶಗಳ ಸಮೇತ ತಿರುಗೇಟು ನೀಡಿದರು. 454 ಯೋಜನೆಗಳ ಸುದೀರ್ಘ ಪಟ್ಟಿ: ಕಾಂಗ್ರೆಸ್ ಅವಧಿಯಲ್ಲಿ ಕೇವಲ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹೆಸರಿಡಲಾದ ಸುಮಾರು 454 ಯೋಜನೆಗಳು, ರಸ್ತೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಕಟ್ಟಡಗಳ ಪಟ್ಟಿಯನ್ನು ಅಶೋಕ್ ಸದನದಲ್ಲಿ ಪ್ರದರ್ಶಿಸಿದರು. ಅಂದಾಜು ಎರಡು ಮೀಟರ್ ಉದ್ದದ ಈ ಪಟ್ಟಿಯನ್ನು ಓದುವ ಮೂಲಕ ಅವರು ಸರ್ಕಾರದ ಗಮನ ಸೆಳೆದರು. ‘ನಕಲಿ ಗಾಂಧಿ’ಗಳ ವಾಗ್ದಾಳಿ: “ಮಹಾತ್ಮ ಗಾಂಧಿಯವರ ಪೂರ್ಣ ಹೆಸರು ಮೋಹನದಾಸ ಕರಮಚಂದ ಗಾಂಧಿ. ಆದರೆ ಕಾಂಗ್ರೆಸ್ ನಾಯಕರು ಮೊದಲ ಎರಡು ಹೆಸರುಗಳನ್ನು ಬಿಟ್ಟು ಕೇವಲ ‘ಗಾಂಧಿ’ ಹೆಸರನ್ನು ಮಾತ್ರ ಬಳಸಿಕೊಂಡು ರಾಜಕೀಯ ಅಸ್ತಿತ್ವಕ್ಕಾಗಿ ಅದನ್ನು ಹೈಜಾಕ್ ಮಾಡಿದ್ದಾರೆ. ಇವರೆಲ್ಲರೂ ನಕಲಿ ಗಾಂಧಿಗಳು” ಎಂದು ಅಶೋಕ್ ಟೀಕಿಸಿದರು. ಕಾಂಗ್ರೆಸ್‌ಗೆ ಪ್ರಶ್ನೆ: “ನಿಮ್ಮ…

Read More