Author: admin

ಔರಾದ್: ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವಾನಂದ್ ಮೊಕ್ತೆದಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅನಿಲಕುಮಾರ್ ದೇಶಮುಖ ಆಯ್ಕೆಯಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಘಟಕದ ವತಿಯಿಂದ ಗೌಪ್ಯ ಮತದಾನದ ಮೂಲಕ ಚುನಾವಣೆ ನಡೆಸಲಾಗಿದ್ದು, ಫಲಿತಾಂಶವನ್ನು ಜಿಲ್ಲಾ ಅಧ್ಯಕ್ಷ ಆನಂದ್ ದೇವಪ್ಪ ಪ್ರಕಟಿಸಿದರು. ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ್ ಮೊಕ್ತೆದಾರ್ ಚುನಾಯಿತರಾದರೆ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲಕುಮಾರ್ ದೇಶಮುಖ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಆನಂದ್ ದೇವಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದ್ದು, ಪತ್ರಕರ್ತರ ಹಿತಾಸಕ್ತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಸಂಘದ ವಿರುದ್ಧ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡದೆ, ಎಲ್ಲ ಪತ್ರಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬೀದರದಲ್ಲಿ ನಡೆದ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಯಶಸ್ವಿಯಾಗಲು ಜಿಲ್ಲೆಯ ಪತ್ರಕರ್ತರ ಸಹಕಾರವೇ ಕಾರಣವಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ ಮಾತನಾಡಿ, ಸಂಘದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಪತ್ರಕರ್ತರಿಗೆ…

Read More

ಪಾವಗಡ: ಪಟ್ಟಣದ ಶ್ರೀನಿವಾಸ ನಗರದ ಜ್ಞಾನ ಬೋಧಿನಿ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಸ್ಕೂಲ್ ಪ್ಯುಪಿಲ್ ಲೀಡರ್ SPL ಚುನಾವಣೆಯು ಜೂ.19, ಶುಕ್ರವಾರ ನಡೆಯಲಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಚುನಾವಣೆಯನ್ನು ಆಯೋಜಿಸಲಾಗಿದೆ. “ಪ್ರತಿಯೊಂದು ಮೂಲೆಯಿಂದ ಉದಾತ್ತ ಆಲೋಚನೆಗಳು ನಮ್ಮ ಬಳಿಗೆ ಬರಲಿ” ಎಂಬ ಶಾಲೆಯ ಧ್ಯೇಯವಾಕ್ಯದಂತೆ, ವಿದ್ಯಾರ್ಥಿಗಳೇ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಕಲಿಯಲಿದ್ದಾರೆ. ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ ಶಾಲಾ ಆವರಣದಲ್ಲಿ ನಡೆಯುವ ಈ ಚುನಾವಣೆಗೆ ವೈ.ಎನ್. ಹೋಸಕೋಟೆಯ ವಸವಿ ವಿದ್ಯಾನಿಕೇತನದ ಎನ್.ಜಿ.ಶ್ರೀನಿವಾಸ್, JBE & CT ಅಧ್ಯಕ್ಷ ಜಿ.ಅನಿಲ್ ಕುಮಾರ್ ಹಾಗೂ ಕಾರ್ಯದರ್ಶಿ ಡಾ.ಕೆ.ಎಸ್. ಅನಿಲ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಜವಾಬ್ದಾರಿಯುತ ನಾಯಕರನ್ನು ಆಯ್ಕೆ ಮಾಡುವಂತೆ ಶಾಲಾ ಆಡಳಿತ ಮಂಡಳಿ ಎಲ್ಲಾ ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ. ನಿಮ್ಮ ಒಂದು ಮತ ಶಾಲೆಯ ಭವಿಷ್ಯ ನಿರ್ಧರಿಸುತ್ತದೆ. ಬುದ್ಧಿವಂತಿಕೆಯಿಂದ…

Read More

ವೈ.ಎನ್.ಹೊಸಕೋಟೆ: ರೋಗನಿರ್ಣಯ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ಕಾಲಿಡುತ್ತಿರುವ ಲಕ್ಷ್ಮೀನಾರಾಯಣ ಆಸ್ಪತ್ರೆ, ಜೂ.17ರಂದು ಅತ್ಯಾಧುನಿಕ ಡಿಜಿಟಲ್ ಎಕ್ಸ್–ರೇ ಘಟಕವನ್ನು ಉದ್ಘಾಟಿಸಲು ಸಜ್ಜಾಗಿದೆ. ಆಸ್ಪತ್ರೆಯಲ್ಲಿ ಅಳವಡಿಸಿರುವ “Next–Gen DR System” ಡಿಜಿಟಲ್ ರೇಡಿಯೋಗ್ರಫಿ ಹಾಗೂ 150 mA “High–Frequency” ಎಕ್ಸ್–ರೇ ತಂತ್ರಜ್ಞಾನವು ರೋಗಿಗಳಿಗೆ ಕಡಿಮೆ ವಿಕಿರಣ, ವೇಗದ ಸ್ಕ್ಯಾನ್ ಮತ್ತು ಅತ್ಯಂತ ಸ್ಪಷ್ಟ ಚಿತ್ರಣ ನೀಡಲಿದೆ. ಸಾಂಪ್ರದಾಯಿಕ ಎಕ್ಸ್–ರೇಗಿಂತ ಈ ವ್ಯವಸ್ಥೆಯಲ್ಲಿ ಚಿತ್ರಗಳು ತಕ್ಷಣ ಲಭ್ಯವಾಗುವುದರಿಂದ ಚಿಕಿತ್ಸೆ ವೇಗವಾಗಲಿದೆ. ಈ ಹೊಸ ಘಟಕದ ಉದ್ಘಾಟನಾ ಸಮಾರಂಭವು ಬುಧವಾರ, ಜೂ.17 ರಂದು ಸಂಜೆ 5:00 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಆಸ್ಪತ್ರೆಯ ಮುಖ್ಯಸ್ಥ ಡಾ.ಎಂ.ಪ್ರೇಮಯೋಗಿ ಹಾಗೂ ಕುಟುಂಬದವರು ಆತಿಥ್ಯ ವಹಿಸಲಿದ್ದಾರೆ. ವೈ.ಎನ್.ಹೊಸಕೋಟೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಮಹತ್ವದ್ದಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಕಾರ್ಯಕ್ರಮಕ್ಕೆ ಸ್ನೇಹಿತರು, ವೈದ್ಯಕೀಯ ವೃಂದ ಹಾಗೂ ಸಾರ್ವಜನಿಕರಿಗೆ ಆತ್ಮೀಯ ಆಹ್ವಾನ ನೀಡಲಾಗಿದೆ. ವರದಿ: ನಂದೀಶ್ ನಾಯ್ಕ ಪಿ.,…

Read More

ಊರು: ಸುರಪುರವೆಂಬ ಹಳ್ಳಿ, ಮಿತ್ರರ ಹೆಸರು: ಸೋಮ, ಭೀಮ, ಮತ್ತು ಚಾಮ. ವರ್ಗ: ಸ್ವಲ್ಪ ಮಧ್ಯಮ ವರ್ಗದ ಬಡತನದ ಜೀವನ, ಮಾತಿಗೆ ಸೇರುವ ಜಾಗ: ಊರ ಹೊರಗಿನ ಅರಳಿ ಕಟ್ಟೆ. (ಭೀಮ ಮತ್ತು ಚಾಮ ಅರಳಿ ಕಟ್ಟೆ ಮೇಲೆ ಕುಳಿತುಕೊಂಡು, ಎಲೆ ಅಡಿಕೆ ಹಾಕಿಕೊಂಡು ಮಾತನಾಡಿಕೊಳ್ಳುತ್ತಿರುವಾಗ, ಚಾಮ ತಾನು ಕಂಡ ಕೆಟ್ಟ ಕನಸನ್ನು ವರ್ಣಿಸುತ್ತಿರುವಾಗ…) ಚಾಮ: ಇವತ್ತೇನೋ ಅಯ್ತದೆ ಕಣ್ಲ ಭೀಮ, ಯಾರ್ಗೋ ಏಟು ಒಡಿತದೆ ನೋಡ್ತಿರು.. ಭೀಮ: ಹೂ ಕಣ್ಲಾ ಬಿಡ್ಲಾ ನೀನು ಹೇಳದು ಸರಿ ಐತೆ, ಎಂತ ಕೆಟ್ಟ ಕನಸ್ಲಾ ಅದು, ಕಂಡಂಗೆ ಕಣ್ಣ ಎದುರೇ ದುಡ್ಡು ಎತ್ತುಕೊಂಡು ಓಡೋದಂಗೆ ಕನಸಾಗೆ…? ಚಾಮ: ಹೂ ಕಣ್ಲಾ.. (ಅದೇ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಆತುರ ಆತುರವಾಗಿ ಓಡಿ ಬಂದ ಸೋಮ…) ಸೋಮ: ಎಲ್ಲ ಮುಗಿದು ಹೋಯ್ತು ಕಣ್ರಪ್ಪೋ ಎಲ್ಲ ಮುಗಿದು ಹೋಯ್ತು… ಭೀಮ: ಅಂತದ್ದು ಏನಾಯ್ತೋ…? ಹಿಂಗ ಬಡ್ಕೋತ್ತಿದ್ದೀ.. ಸೋಮ: ನನ್ನ ಬ್ಯಾಂಕ್ ನಿಂದ ಯಾರೊ ಹ್ಯಾಕ್ ಮಾಡಿ ಹಣ…

Read More

ಸಿರಾ: ತಾಲೂಕು ಶ್ರೀ ಶಂಕರ ಸೇವಾ ಟ್ರಸ್ಟ್ ಮತ್ತು ವಿಪ್ರ ಗೆಳೆಯರ ಬಳಗ ವತಿಯಿಂದ 2025–2026 ನೆ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85 ಕ್ಕೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜುಲೈ: 8 ರಂದು ಏರ್ಪಡಿಸಲಾಗಿದೆ. ಮೇಲ್ಕಂಡ ಶ್ರೇಣಿಯ ಸಂಬಂಧಪಟ್ಟ ವಿಪ್ರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ದಿನಾಂಕ 25/6/2026 ನೇ ಗುರುವಾರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಿಎನ್ ಅಚ್ಯುತರಾವ್–91 9448251171, ಸತ್ಯನಾರಾಯಣ ಶರ್ಮ–91 72592 84238, ಸುರೇಶ್ ಶಾಸ್ತ್ರಿ–9194484 43603. ಈ ದೂರವಾಣಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಿಪಟೂರು ಶಾಸಕ ಷಡಕ್ಷರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಬೆಂಗಳೂರಿಗೆ ಭಾನುವಾರ ಮರಳಿದ್ದಾರೆ. ದೆಹಲಿಯಿಂದ ವಿಮಾನದ ಮೂಲಕ ಷಡಕ್ಷರಿ ಅವರು ಮಧ್ಯಾಹ್ನ 2.55 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್–1ಕ್ಕೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಯುವ ಕಾಂಗ್ರೆಸ್ ಮುಖಂಡ ಯೋಗೀಶ್ ಇತರರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಸಂಪುಟದಲ್ಲಿ ಅವಕಾಶ ಕಲ್ಪಿಸುವಂತೆ ಹೈಕಮಾಂಡ್ ನಾಯಕರಿಗೆ ಮನವಿ ಮಾಡಲು ದೆಹಲಿಗೆ ತೆರಳಿದ್ದ ಷಡಕ್ಷರಿ ಅವರು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾಗಲೇ ಅಸ್ವಸ್ಥಗೊಂಡಿದ್ದರು. ಅವರನ್ನು ಎಂಎಲ್ ಎ ಆರ್.ರಾಜೇಂದ್ರ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ಕೊಡಿಸಲು ನೆರವಾದರು. ಸಿಎಂ ಡಿ.ಕೆ. ಶಿವಕುಮಾರ್ ಅವರು ಸಹ ಆಸ್ಪತ್ರೆಗೆ ಭೇಟಿಕೊಟ್ಟು ಶಾಸಕರ ಆರೋಗ್ಯ ವಿಚಾರಿಸಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೆಹಲಿಗೆ ತೆರಳಿದ ಸಂದರ್ಭದಲ್ಲಿ ಅಸ್ವಸ್ಥತೆ ಉಂಟಾಗಿದ್ದು, ಸಕಾಲಿಕ ಚಿಕಿತ್ಸೆಯ ನೆರವಿನಿಂದ ಗುಣಮುಖನಾಗಿರುವೆ. ನನ್ನ ಆರೋಗ್ಯ ಕಾಳಜಿ ವಹಿಸಿದ ಸಿಎಂ, ಡಿಸಿಎಂ,…

Read More

ಪಾವಗಡ : ತಾಲ್ಲೂಕಿನ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಸಾಗರದಹಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ಗ್ರಾಮಸ್ಥರಿಗೆ ಸಂಕಷ್ಟ ತಂದೊಡ್ಡಿದೆ. ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಆರಂಭವಾದ ಕೆಲವೇ ದಿನಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಮಳೆ ನೀರು ಹಲವು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮನೆಗಳೊಳಗೆ ನೀರು ನುಗ್ಗಿದ ಪರಿಣಾಮ ಶುಕ್ರವಾರ ರಾತ್ರಿ ಮತ್ತು ಶನಿವಾರದ ಇಡೀ ರಾತ್ರಿ ಮಕ್ಕಳು ಹಾಗೂ ಹಿರಿಯರು ರಾತ್ರಿ ಪೂರ್ತಿ ನಿದ್ರೆಯಿಲ್ಲದೆ ಕಾಲ ಕಳೆಯುವಂತಾಯಿತು. ಮನೆಯಲ್ಲಿದ್ದ ದವಸ–ಧಾನ್ಯ, ದಿನನಿತ್ಯದ ಬಳಕೆಯ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳು ನೀರಿನ ಪಾಲಾಗಿ ಹಾನಿಗೊಳಗಾಗಿದ್ದು, ಕುಟುಂಬಗಳಿಗೆ ಆರ್ಥಿಕ ನಷ್ಟ ಉಂಟಾಗಿದೆ. ಸಮರ್ಪಕ ಚರಂಡಿ ಹಾಗೂ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸದೆ ರಸ್ತೆ ಕಾಮಗಾರಿ ಕೈಗೊಂಡಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಲ್ಯಾಂಡ್ ಆರ್ಮಿ ಸಂಸ್ಥೆಯ ಇಂಜಿನಿಯರ್ಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜೊತೆಗೆ…

Read More

ಕೊರಟಗೆರೆ: ಸ್ವಚ್ಛ ಭಾರತ, ಅಭಿವೃದ್ಧಿ ಮತ್ತು ಡಿಜಿಟಲ್ ಗ್ರಾಮಗಳ ಘೋಷಣೆಗಳು ಒಂದೆಡೆಯಾದರೆ, ಗ್ರಾಮೀಣ ಪ್ರದೇಶಗಳ ನೈಜ ಸ್ಥಿತಿ ಮತ್ತೊಂದೆಡೆಯಾಗಿದೆ. ಗ್ರಾಮದ ರಸ್ತೆ ಹಾಗೂ ವಸತಿ ಪ್ರದೇಶಗಳ ಪಕ್ಕದಲ್ಲಿರುವ ತೆರೆದ ಚರಂಡಿಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದ್ದು, ಇಡೀ ಗ್ರಾಮ ದುರ್ವಾಸನೆಯಿಂದ ಬಳಲುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ದಿನನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮಕ್ಕೆ ಕಾಲಿಟ್ಟ ತಕ್ಷಣವೇ ಮೂಗು ಮುಚ್ಚಿಕೊಳ್ಳುವಂತಹ ದುರ್ವಾಸನೆ ಎದುರಾಗುತ್ತದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ತಿಂಗಳುಗಟ್ಟಲೆ ನಿಂತು ಕೊಳೆಯುತ್ತಿದ್ದು, ಪ್ಲಾಸ್ಟಿಕ್ ಬಾಟಲಿಗಳು, ಹೂಳು ಹಾಗೂ ಇತರ ತ್ಯಾಜ್ಯ ವಸ್ತುಗಳು ತುಂಬಿಕೊಂಡಿವೆ. ಹಲವೆಡೆ ಗರಿಕೆ ಹುಲ್ಲು ಹಾಗೂ ಗಿಡಗಳು ಬೆಳೆದಿರುವುದರಿಂದ ಮಳೆ ಬಂದಾಗ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಹಗಲು-ರಾತ್ರಿ ಎನ್ನದೆ ಹರಡುತ್ತಿರುವ ದುರ್ವಾಸನೆಯಿಂದ ಗ್ರಾಮಸ್ಥರು ಮನೆಗಳ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಿಕೊಂಡೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳ ಕಾಟ, ಸಾಂಕ್ರಾಮಿಕ ರೋಗಗಳ ಭೀತಿ: ಕೊಳೆಯುತ್ತಿರುವ ಚರಂಡಿ ನೀರು ಸೊಳ್ಳೆ ಹಾಗೂ ಕೀಟಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.…

Read More

ಕೊರಟಗೆರೆಯಲ್ಲಿ ಹಬ್ಬದ ಸಡಗರ: ಕಡ್ಲೆಚಿಕ್ಕಿ ಹಾರಕ್ಕೆ ಮನಸೋತ ಉಪಮುಖ್ಯಮಂತ್ರಿ | ಎತ್ತಿನಹೊಳೆ ಯೋಜನೆ ರೈತರಿಗೆ ವರದಾನ ಕೊರಟಗೆರೆ: “ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹ ಸಚಿವ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡಿದ ಕೊರಟಗೆರೆ ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ. ೨೦೨೮ಕ್ಕೆ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕೊರಟಗೆರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ. ನನ್ನ ಆರೋಗ್ಯಕ್ಕಿಂತ ನಿಮ್ಮ ಅಭಿಮಾನವೇ ನನಗೆ ದೊಡ್ಡದು” ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು. ಇಲ್ಲಿನ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್, ಮಹಿಳಾ, ಯುವ ಕಾಂಗ್ರೆಸ್ ಮತ್ತು ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಎತ್ತಿನಹೊಳೆ ಯೋಜನೆಯನ್ನು ನಾವು ಮಾಡೇ ಮಾಡುತ್ತೇವೆ. ರೈತರ ನೀರಾವರಿ ಸಮಸ್ಯೆಯನ್ನು ನಿವಾರಿಸುವುದು ನಮ್ಮ ಸಂಕಲ್ಪ. ಬೈರಗೊಂಡ್ಲು ಬಳಿ ವಿರೋಧ ಪಕ್ಷದವರ ಮಾತು ಕೇಳಿ ರೈತರು ನೀರಾವರಿ ಯೋಜನೆಗೆ ಅಡ್ಡಿಪಡಿಸಿದರು. ಇದರಿಂದಾಗಿ ೨,೫೦೦ ಎಕರೆ ವಿಸ್ತೀರ್ಣದ ಜಲಾಶಯದ ಯೋಜನೆ ಈಗ…

Read More

ತುಮಕೂರು: ತುಮಕೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮೆಟ್ರಿಕ್ ನಂತರದ (ಪಿ.ಯು.ಸಿ., ಸಮಾನಾಂತರ ಡಿಪ್ಲೋಮಾ, ಐ.ಟಿ.ಐ ಕೋರ್ಸ್ ವಿದ್ಯಾರ್ಥಿಗಳಿಗೆ ಮಾತ್ರ) ಬಾಲಕ / ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಪ್ರವರ್ಗ–1, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ 2.50 ಲಕ್ಷ ಹಾಗೂ ಪ್ರವರ್ಗ–2ಎ, 2ಬಿ, 3ಎ, 3ಬಿ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ 1 ಲಕ್ಷ ರೂ. ಮಿತಿಯೊಳಗಿರಬೇಕು. ಅರ್ಹ ವಿದ್ಯಾರ್ಥಿಗಳು ಜೂನ್ 15ರೊಳಗಾಗಿ ತಮ್ಮ ಅರ್ಜಿಯನ್ನು ಜಾಲತಾಣ: https://shp.karnataka.gov.in/bcwd ಮೂಲಕ ಸಲ್ಲಿಸಬಹುದಾಗಿದೆ. ತಾಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ, ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ, ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಾಲತಾಣ: https://bcwd.karnataka.gov.in/ ಅನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ ಇ-ಅಂಚೆ: bcwdhelpline@gmail.com ಮೂಲಕ ಅಥವಾ ಜಿಲ್ಲಾ / ತಾಲೂಕು ಮಟ್ಟದ ಇಲಾಖಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ…

Read More