Subscribe to Updates
Get the latest creative news from FooBar about art, design and business.
- ನನ್ನ ದೃಷ್ಟಿಕೋನದಲ್ಲಿ ಆತ್ಮಗಳ ಪರಿಕಲ್ಪನೆ
- ಬೀದರ್ | ಪೋಷಕತ್ವ ಯೋಜನೆ ಜಾಗೃತಿ ತರಬೇತಿಯ ಕಾರ್ಯಕ್ರಮ
- ಸರಗೂರು | ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ
- ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಿರೋಧ ಆಯ್ಕೆ
- ಸೆ.28ರಂದು ಪಾವಗಡದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ: ಯತ್ನಾಳ್ ಭಾಗಿ
- ಇಳಿಯುವ ಮುನ್ನವೇ ಚಲಿಸಿದ ಬಸ್: ಮಗಳ ಮನೆಗೆ ಹೋಗಿ ಬರುತ್ತಿದ್ದ ಮಹಿಳೆ ಸಾವು!
- ಬೀದರ್ | 1. 34 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತು ನಾಶ
- ತುಮಕೂರು | ಆಮೆ ವೇಗದಲ್ಲಿ ಸಾಗಿದ ಜಾತಿವಾರು ಸಮೀಕ್ಷೆ: ಕಾಡುತ್ತಿರುವ ಸಮಸ್ಯೆಗಳೇನು?
Author: admin
ಕುಣಿಗಲ್: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ನಾಗರಿಕರು ಗೌರವಿಸಬೇಕು. ಅಂತೆಯೇ ಪೌರಕಾರ್ಮಿಕರು ಪೌರರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕಿದೆ ಎಂದು ಶಾಸಕ ರಂಗನಾಥ್ ತಿಳಿಸಿದರು. ಪುರಸಭೆಯಲ್ಲಿ ಮಂಗಳವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ನಿವೇಶನ ನೀಡಲು ಮೂರು ಎಕರೆ ಜಮೀನು ಗುರುತಿಸಲಾಗಿದ್ದು, ರಸ್ತೆ ಸಮಸ್ಯೆ ಬಗೆಹರಿಯದ ಕಾರಣ ವಿತರಣೆ ತಡವಾಗಿದ್ದು, ಸಮಸ್ಯೆ ಬಗೆಹರಿಸಲು ತಹಶೀಲ್ದಾರ್ ಅರವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಿ ನಿವೇಶನ ಹಂಚಿಕೆ ಕ್ರಮ ಕೈಗೊಳ್ಳಲಾಗುವುದು. ಎಲ್ಲೆಂದರಲ್ಲಿ ಕಸ ಸುರಿಯುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಜಾಗೃತಿ ಮೂಡಿಸಬೇಕಿದೆ, ದುಶ್ಚಟಗಳಿಂದ ದೂರವಿದ್ದು,, ಕೀಳರಿಮೆ ಬಿಟ್ಟು ಕರ್ತವ್ಯ ನಿರ್ವಹಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲು ಸಲಹೆ ನೀಡಿದರು. ಆರೋಗ್ಯದ ದೃಷ್ಟಿಯಿಂದ ವಾರಕ್ಕೊಮೆ ಉಪವಾಸ ಮಾಡಿ, ದುಶ್ಚಟಗಳಿಂದ ದೂರವಿರಿ. ಪ್ರತಿವರ್ಷ ಉತ್ತಮ ಪೌರ ಕಾರ್ಮಿಕರಿಗೆ 25 ಸಾವಿರ ಬಹುಮಾನ ಘೋಷಣೆ ಮಾಡಿದರು. ಪುರಸಭೆ ಅಧ್ಯಕ್ಷೆ ಮಂಜುಳಾ ನಾಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷೆ ಅಸ್ಮಾ, ಪುರಸಭೆ ಸದಸ್ಯರು,…
ತುಮಕೂರು: ಪೌರ ಕಾರ್ಮಿಕರಿಗೆ ವಸತಿ ನಿರ್ಮಿಸಲು ಹೆಬ್ಬಾಕ ಬಳಿ 15 ಎಕರೆ ಜಾಗ ಗುರುತಿಸಲಾಗಿದ್ದು, ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ಮಂಗಳವಾರ ಮಹಾನಗರ ಪಾಲಿಕೆಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ, ಕಾರ್ಮಿಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಅನುಮತಿ ನೀಡಿದ ನಂತರ ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಅನಾರೋಗ್ಯದಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿವೆ. ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು. ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಜ, ‘ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಪೌರ ಕಾರ್ಮಿಕರಿಗೆ ಆರೋಗ್ಯ, ಜೀವ ಹಾಗೂ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ಕಸ ಬಿಸಾಡುವ ನಾಗರಿಕರಿಂದ 710 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದರು. ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಗಳಾದ…
ಶಿರಾ: ನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಮಹಮದ್ ರಫೀ (19) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಮಹಮದ್ ರಫೀ ನಗರದ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಸಿವಿಲ್ ವಿಭಾಗದಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದು, ಒಂದು ವಾರದಿಂದ ಸ್ವಗ್ರಾಮಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದ. ಮಂಗಳವಾರ ವಿದ್ಯಾರ್ಥಿ ನಿಲಯಕ್ಕೆ ವಾಪಸ್ ಬಂದಿದ್ದು. ರಾತ್ರಿ ಊಟ ಮಾಡಿ ಮಲಗಿದ್ದಾನೆ. ಬುಧವಾರ ಮುಂಜಾನೆ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಎಷ್ಟು ಸಮಯವಾದರೂ ಶೌಚಾಲಯದಿಂದ ಹೊರಕ್ಕೆ ಬರದ ಕಾರಣ ಇತರೇ ವಿದ್ಯಾರ್ಥಿಗಳು ಕೂಗಿದರು ಒಳಗಿನಿಂದ ಯಾವುದೇ ಶಬ್ದ ಬರದ ಕಾರಣ ಬಾಗಿಲನ್ನು ಹತ್ತಿ ನೋಡಿದಾಗ ಮಹಮದ್ ರಫೀ ಬಿದ್ದಿರುವುದನ್ನು ನೋಡಿ ವಾರ್ಡನ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಾಗಿಲು ತೆರೆದು ನೋಡುವ ವೇಳೆಗೆ ರಫೀ ಮೃತ ಪಟ್ಟಿದ್ದಾನೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ…
ತುಮಕೂರು: ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಹಣಕಾಸು ವಿಭಾಗದ ಆಡಳಿತ ಅಧೀಕ್ಷಕ ಆರ್.ಎಸ್.ವಿನಯ್ ಕೆಲವು ದಿನಗಳಿಂದ ಕಚೇರಿಯಲ್ಲಿ ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದಾರೆ. ನಾನು ದಲಿತ ಎಂಬ ಕಾರಣಕ್ಕೆ ಕಚೇರಿಯಲ್ಲಿ ಕುರ್ಚಿ, ಟೇಬಲ್ ಕೊಡುತ್ತಿಲ್ಲ. ಡೇರಿ ಮೇಲ್ವಿಚಾರಕ ಎಸ್.ಉಮೇಶ್, ಆಡಳಿತ ವಿಭಾಗದ ವ್ಯವಸ್ಥಾಪಕ ಮಂಜುನಾಥ್ ನಾಯಕ ಎಂಬುವರು ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಿಂಗಳ ಹಿಂದೆ ಆಡಳಿತ ವಿಭಾಗದಿಂದ ಹಣಕಾಸು ವಿಭಾಗಕ್ಕೆ ವರ್ಗಾವಣೆಯಾಗಿದ್ದು, ವಿಭಾಗದಲ್ಲಿ ಕೂಡಲು ಸ್ಥಳ ಕೊಡದೆ ಅವಮಾನಿಸಿದ್ದರು. ಬಳಿಕ ಹಣಕಾಸು ವಿಭಾಗದ ವ್ಯವಸ್ಥಾಪಕರು ಕಚೇರಿ ಮೂಲೆಯಲ್ಲಿದ್ದ ಕಿರಿದಾದ ಕಂಪ್ಯೂಟರ್, ಫೈಲ್ ತುಂಬಿದ್ದ ಕೊಠಡಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದರು ಎಂದಿದ್ದಾರೆ. ಕಿರಿದಾದ ಕೊಠಡಿ ಸ್ವಚ್ಛಗೊಳಿಸಿ ಕೆಲಸ ಮಾಡುತ್ತಿದ್ದೆ. ಬಳಿಕ ಕೊಠಡಿ ಖಾಲಿ ಮಾಡಿಸಿದರು. ಇದರಿಂದ ಬೇಸತ್ತು ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದೇನೆ. ಪರಿಶಿಷ್ಟ ಜಾತಿಗೆ ಸೇರಿದವನು ಎಂಬ ಕಾರಣಕ್ಕೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕಿರುಕುಳ ನೀಡುತ್ತಿರುವ…
ಸರಗೂರು: ತಾಲ್ಲೂಕಿನಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರ ಜೀವನ ಕಷ್ಟಕರವಾಗಿದೆ, ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ನೆರವಿಗೆ ಬರುತ್ತಿಲ್ಲ’ ಹಾಗೂ ರೈತರ ಬಗ್ಗೆ ಅವಹೇಳನಾಕಾರಿ ಮಾತನಾಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ವಿರುದ್ಧ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆ ಮಂಗಳವಾರದಂದು ಅರಣ್ಯ ಇಲಾಖೆ ಕಚೇರಿ ಮುಂಭಾಗ ವಿವಿಧ ಘೋಷಣೆ ಕೂಗಿ ಎಸಿಎಫ್ ಸತೀಶ್ ರವರನ್ನು ವರ್ಗಾವಣೆ ಮಾಡಬೇಕು ಪ್ರತಿಭಟನೆ ಒತ್ತಾಯಿಸಿದರು. ನಂತರ ಸಭೆ ಕುರಿತು ಮಾತನಾಡಿದ ರೈತ ಸಂಘದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹಳೆಹೆಗ್ಗುಡಿಲು ನವೀನ್, ಸೆ.10ರಂದು ರೈತ ಸಭೆಯಲ್ಲಿ “ರೈತರು ನಿಮಗೆ ನಾಚಿಕೆಯಾಗಬೇಕು” ಎಂದು ಅವಹೇಳನಾಕಾರಿಯಾಗಿ ಮಾತನಾಡಿರುವ ಈ ಭಾಗದ ಸಹಾಯಕ ಸಂರಕ್ಷಣಾಧಿಕಾರಿ ರೈತರ ಬಗ್ಗೆ ಅರಿವು ಇಲ್ಲದಂತೆ ಮಾತನಾಡಿದ ವ್ಯಕ್ತಿಯನ್ನು ಅಮಾನತು ಮತ್ತು ವರ್ಗಾವಣೆ ಮಾಡಿ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ದಸಂಸ ಮುಖಂಡ ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎ.ಎಸ್.ಡಿ.ಸಣ್ಣಸ್ವಾಮಿ ಮಾತನಾಡಿ, ಕಾಡು ಪ್ರಾಣಿಗಳು ಮತ್ತು ಕಾಡಾನೆಗಳು ನಿರಂತರವಾಗಿ…
ಕೊರಟಗೆರೆ : ತಾಲೂಕಿನ ಮಾವತ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಗೆ ಸರ್ವ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡದ ಕಾರಣಕ್ಕೆ ಸಭೆ ರದ್ದಾಗಿದೆ. ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪–೨೫ನೇ ಸಾಲಿನ ವಾರ್ಷಿಕ ಮಹಾಸಭೆಯನ್ನ ಏರ್ಪಡಿಸಲಾಗಿತ್ತು. ವಾರ್ಷಿಕ ಸಭೆ ನಡೆಸಲು ಸರ್ವ ಸದಸ್ಯರಿಗೆ ೧೫ ದಿನ ಮುಂಚೆಯೇ ಆಹ್ವಾನ ಪತ್ರಿಕೆ ನೀಡಬೇಕಾಗಿತ್ತು ಸಂಘದ ಎರಡು ಬಣದ ಸದಸ್ಯರ ನಡುವೆ ಮಾತಿನ ಜಟಾಪಟಿಯಿಂದ ರೈತರಿಗೆ ಸೇರಿದ ೩೦ ಸಾವಿರಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ಆಯೋಜಿಸಿದ್ದ ಸಭೆಯನ್ನ ರದ್ದುಪಡಿಸಲಾಗಿದೆ. ರೈತರಿಗೆ ಕಳೆದ ೪ ವರ್ಷದಿಂದ ಸಹಕಾರ ಸಂಘದಿಂದ ಯಾವುದೇ ಸಾಲ ಸೌಲಭ್ಯ ನೀಡಲಾಗಿದೆ ಎಂದು ರೈತರ ಪಹಣಿಯಲ್ಲಿ ಉಲ್ಲೇಖವಾಗಿದೆ. ಹಾಗೂ ಒಂದು ಮೂಟೆ ಗೊಬ್ಬರವನ್ನು ಮಾರಾಟ ಮಾಡಿಲ್ಲ ಎಂದು ರೈತರು ಸಭೆಯಲ್ಲಿ ಸದಸ್ಯರನ್ನ ತರಾಟೆ ತೆಗೆದುಕೊಂಡರು. ಇದರ ಜೊತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಧನಂಜಯ…
ಕೊರಟಗೆರೆ: ಕೊರಟಗೆರೆ ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರು ಮತ್ತು ಆಡಳಿತ ಮಂಡಳಿ ನಡುವೆ ಉತ್ತಮ ಸಹಕಾರವಿದ್ದು, ಸಾರ್ವಜನಿಕರು ಠೇವಣಿಗಳನ್ನು ಸಹಕಾರ ಸಂಘದಲ್ಲಿ ಇಟ್ಟರೆ ಅದು ರೈತರಿಗೆ ಉಪಯೋಗವಾಗಲಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ವಿನಯ್ಕುಮಾರ್ ತಿಳಿಸಿದರು. ಕೊರಟಗೆರೆ ಪಟ್ಟಣದಲ್ಲಿ ಕಸಬಾ ಪ್ರಾಥಮಿಕ ಸಹಾಕಾರ ಸಂಘ ಏರ್ಪಡಿಸಿದ್ದ ೨೦೨೪–೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಕಸಬಾ ವಿ.ಎಸ್.ಎಸ್.ಎನ್. ಸಂಘವು ಬಹಳ ಸಂಕಷ್ಠದಲ್ಲಿದ್ದು ನಂತರ ಚೇತರಿಕೆ ಕಂಡಿದೆ, ತಾಲೂಕಿನಲ್ಲೇ ಹೆಚ್ಚಿನ ಸದಸ್ಯರನ್ನು ಹಾಗೂ ವ್ಯಾಪ್ತಿಯನ್ನು ಹೊಂದಿದ್ದು, ದೊಡ್ಡ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಡೆದಿದೆ, ಈ ಹಿಂದೆ ಸಂಘದಲ್ಲಿ ಜಿಡಿಪಿ ಸಾಲಗಳನ್ನು ನೀಡಿದ್ದು ಅವುಗಳನ್ನು ವಸೂಲಿ ಮಾಡುವುದು ಪ್ರಸ್ತುತವಿರುವ ಆಡಳಿತ ಮಂಡಳಿಗೆ ತಲೆ ನೋವಾಗಿದೆ, ಆದರೂ ಎಲ್ಲರೂ ಒಟ್ಟಾಗಿ ಸಾಲ ಮರುಪಾವತಿಗೆ ಶ್ರವಹಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ, ಕೆಸಿಸಿ ಸಾಲದಲ್ಲಿ ರೈತರು ಮರಣ ಹೊಂದಿದ್ದಾಗ ಅದನ್ನು ಮತ್ತೆ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಿ…
ಮಧುಗಿರಿ: ಚಿತ್ರ ನಿರ್ದೇಶಕ ರವಿ ಆರ್.ರಗಣಿ ರವರು ಜೆಡಿಎಸ್ ಪಕ್ಷದ ಬಗ್ಗೆ ಹಾಗೂ ನಮ್ಮ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ, ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದ್ದು ಈಗ ಚುನಾವಣೆ ನಡೆದರೂ ನಾವು ಗೆಲ್ಲಲಿದ್ದೇವೆ ಎಂದು ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿಜವರ ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ 3 ಬಾರಿ ಶಾಸಕರನ್ನು ಕೊಟ್ಟ ಜೆಡಿಎಸ್ ಪಕ್ಷವು ಸಧೃಡವಾಗಿದ್ದು, ಈಗ ಚುನಾವಣೆ ನಡೆದರೂ ನಾವು ಗೆಲ್ಲಲಿದ್ದೇವೆ, ರವಿ ಆರ್. ಗರಣಿಯವರು ಅಭಿವೃದ್ಧಿ ನೋಡಿ ಮಾತನಾಡಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಗೆ ವಿರೋಧ ಪಕ್ಷವೇ ಇಲ್ಲ. ಎಲ್ಲವೂ ರಾಜಣ್ಣನವರ ಪರವಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಈವರೆಗೂ ಮೂವರು ಶಾಸಕರು ಆಯ್ಕೆಯಾಗಿರುವುದನ್ನು ಮರೆಯಬೇಡಿ ಎಂದು ಟಾಂಗ್ ನೀಡಿದರು. ಮುಖಂಡ ಸಿಡ್ರಗಲ ಶ್ರೀನಿವಾಸ್ ಮಾತನಾಡಿ, ರವಿ ಆರ್. ಗರಣಿ ಎಂಬ ವ್ಯಕ್ತಿ ಜೆಡಿಎಸ್ ಎಲ್ಲಿದೆ, ವಿರೋಧ ಪಕ್ಷ ಇಲ್ಲ ಎಂದಿದ್ದಾರೆ. ರವಿ ಮೊದಲು…
ಬೆಂಗಳೂರು: ಸಿನಿಮಾ ಟಿಕೆಟಿಗೆ ಗರಿಷ್ಟ 200 ರೂ. ದರ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾ. ರವಿ ಹೊಸಮನಿ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿದೆ. ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಟಿಕೆಟ್ ದರ ಗರಿಷ್ಠ 200 ಏಕರೂಪ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಬೇಕೆಂದು ಕೋರಿ ಅರ್ಜಿದಾರರು ಮನವಿ ಮಾಡಿದ್ದರು. ಟಿಕೆಟ್ ದರ ನಿಗದಿ ಸಂಬಂಧ ಜಾರಿಗೆ ತಂದಿರುವ ‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು–2025’ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನ್ಮೆಂಟ್ ಹಾಗೂ ವಿ.ಕೆ. ಫಿಲ್ಮ್ಸ್ ತಕಾರರು ಅರ್ಜಿ ತ್ಯರ್ಥವಾಗುವವರೆಗೆ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು. ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ…
ತುಮಕೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ದರ ಪರಿಷ್ಕರಣೆ ಮೂಲಕ ಬಡವರು, ಮಧ್ಯಮ ವರ್ಗದ ಜನರಲ್ಲಿ ಉತ್ಸಾಹ ತುಂಬಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ನಗರದಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ಜಿಎಸ್ ಟಿ 2.0 ವಿಜಯೋತ್ಸವದಲ್ಲಿ ಮಾತನಾಡಿದರು. ಭಾರತದ ಬೆಳವಣಿಗೆಯ ವೇಗ ನಿಯಂತ್ರಿಸಲು ಅಮೆರಿಕದಂತಹ ದೇಶಗಳು ಹೊಂಚು ಹಾಕುತ್ತಿವೆ. ಇದನ್ನು ಮೆಟ್ಟಿ ನಿಲ್ಲಲು ತೆರಿಗೆ ಸುಧಾರಣೆ ಮಹತ್ವದ ಬೆಳವಣಿಗೆಯಾಗಿದೆ. ಇದರಿಂದ ಸ್ವದೇಶಿ ವಸ್ತು ಉತ್ಪಾದನೆ ಮತ್ತು ಬಳಕೆ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಕೆ.ಧನುಷ್, ಮುಖಂಡರಾದ ಟಿ.ಎಚ್.ಹನುಮಂತರಾಜು, ಎಸ್.ಪಿ.ಚಿದಾನಂದ್, ಬ್ಯಾಟರಂಗೇಗೌಡ, ವಿರುಪಾಕ್ಷಪ್ಪ, ರವೀಶಯ್ಯ, ಬಾಲಾಜಿ, ಮಧು, ಕುಮಾರ್, ಶಿವರಾಜು, ಗಂಗೇಶ್, ಅಖಿಲ್, ವೆಂಕಟೇಶ್, ವರ್ತಕರಾದ ಗಿರೀಶ್, ದರ್ಶನ್, ಪ್ರಸನ್ನ, ಪ್ರಶಾಂತ್, ನಂದಕಿಶೋರ್ ಇತರರು ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC