Author: admin

ಒಮ್ಮೆ ರಾಜನೊಬ್ಬ ಒಂದು ಕುಸ್ತಿ ಪಂದ್ಯ ಏರ್ಪಡಿಸಿ ಯಾರು ನನ್ನನ್ನು ಕುಸ್ತಿಯಲ್ಲಿ ಸೋಲಿಸುತ್ತಾರೋ ಅವರಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುವುದಾಗಿ ಡಂಗೂರ ಸಾರಿಸಿದನು. ರಾಜನನ್ನು ಸೋಲಿಸಲು ಬಹಳ ಜನ ಬಂದರು. ಕುಸ್ತಿ ಪಂದ್ಯ ಆರಂಭವಾಯಿತು ಎಲ್ಲರೂ ರಾಜನಿಂದ ಪರಾಭವಗೊಂಡು ಹೋಗುತ್ತಿದ್ದರೇ ಹೊರತು ಯಾರಿಂದಲೂ ರಾಜನನ್ನು ಸೋಲಿಸಲು ಆಗಲಿಲ್ಲ. ಜನರ ಗುಂಪಿನಲ್ಲಿ ಇದನ್ನೆಲ್ಲಾ ನೋಡುತ್ತಿದ್ದ ಒಬ್ಬ ಭಿಕ್ಷುಕನೊಬ್ಬನಿದ್ದ ತಾನೊಂದು ಕೈ ನೋಡಿಬಿಡುವ ಎಂದುಕೊಂಡು ಕಣಕ್ಕೆ ಬಂದ ಅವನ ಅದೃಷ್ಟವೋ ಏನೋ ಎಂಬಂತೆ ಕುಸ್ತಿಯಲ್ಲಿ ರಾಜನನ್ನು ಸೋಲಿಸಿಯೇ ಬಿಟ್ಟ, ಸಂತೋಷಗೊಂಡ ರಾಜ ನೀವೇನು ಕೆಲಸ ಮಾಡುತ್ತಿರುವಿರಿ ಎಂದಾಗ ಭಿಕ್ಷುಕ ತಾನು ಭಿಕ್ಷಾಟನೆ ಮಾಡುತ್ತಿರುವುದಾಗಿ ಹೇಳಿದ ಆದರೂ ರಾಜ ಅಳುಕದೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿವಾಹ ಕಾರ್ಯ ಆರಂಭಿಸಿಯೇ ಬಿಟ್ಟ. ಭಿಕ್ಷುಕನಿಗೆ ಇದು ಸತ್ಯವೇ, ನನಗೆ ರಾಜನ ಮಗಳೊಂದಿಗೆ ವಿವಾಹವಾಗುವುದೇ? ಇದು ನನಸೇ, ಎಂದು ತನ್ನನ್ನು ತಾನೇ ನಂಬದಾದ. ಮತ್ತು ರಾಜನ ಮಗಳನ್ನು ಕೇಳಿದ ನಿಮಗೆ ನನನ್ನೊಡನೆ ವಿವಾಹ ಬೇಸರವಿಲ್ಲವೇ ಎಂದಾಗ ರಾಜನ ಮಗಳು…

Read More

ತುಮಕೂರು: ನೋಡುಗರಿಂದ ಓದುಗರಿಂದ ಪತ್ರಿಕೆಗಳು ದೂರದಲ್ಲಿವೆ.  ರಾಜಕಾರಣಿಗಳು ಸಿನಿಮಾರಂಗದವರನ್ನ ಬಿಟ್ಟು ಜನಸಾಮನ್ಯರ ಬಳಿ ಪತ್ರಿಕೆಗಳು ಹೋಗಬೇಕಿದೆ ಆಗ ಓದುಗರ ಸಂಖ್ಯೆ ಹೆಚ್ಚುತ್ತದೆ, ಪತ್ರಿಕೆಗಳು ಸಿದ್ದಾಂತ, ನಡವಳಿಕೆಗಳನ್ನು ಬದಲಾಯಿಸದೆ ಹೋದರೆ ಕಷ್ಟ ಸಾಧ್ಯ, ನಾವು ವಿಶ್ವಾಸಾರ್ಹತೆ ಗಳಿಸಬೇಕು ಎಂದು ರವೀಂದ್ರ ಭಟ್‌ ಐನೈಕ್ಯ ಹೇಳಿದ್ದಾರೆ. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕರ್ನಾಟಕ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಮಕೂರಿನಲ್ಲಿ ನಡೆದ ಸಮ್ಮೇಳನ ಕ್ಕೆ ತುಮಕೂರು ಕಾ.ನಿ.ಪ. ಜಿಲ್ಲಾ ಸಂಘಕ್ಕೆ ಅಭಿನಂದನೆ ಸಲ್ಲಿಸುತ್ತೇನೆ,  ಪತ್ರಕರ್ತರ ರಾಜ್ಯ ಸಮ್ಮೇಳನ ರಾಷ್ಟ್ರೀಯ ಸಮ್ಮೇಳನವಾಗಿ ಪರಿವರ್ತನೆಯಾಗಬೇಕು ಸಮ್ಮೇಳನಕ್ಕೆ ಸರ್ವಾಧ್ಯಕ್ಷರೊಬ್ಬರನ್ನು ಸೃಷ್ಟಿ ಮಾಡಬೇಕು ಎಂದು ತಿಳಿಸಿದರು. ಗೋಷ್ಠಿ ಉದ್ಘಾಟಿಸಿ ಮಾತನಾಡಿದ ವಿಜಯವಾಣಿ ಸಂಪಾದಕ ಕೆ.ಎನ್‌.ಚೇನ್ನೆಗೌಡ, ಪತ್ರಿಕೋದ್ಯಮದಲ್ಲಿ ಓದುಗರ ಕೊರತೆ ಇದೆ, ಸೋಷಿಯಲ್ ಮೀಡಿಯಾ ಅಬ್ಬರ ಹೆಚ್ಚಿದೆ. ಅದರಲ್ಲೂ ಸವಾಲುಗಳನ್ನು ಎದುರಿಸಿ ಪತ್ರಿಕೆಗಳು ನಡೆಯುತ್ತಿವೆ. ಓದುಗರನ್ನ ಜಾಗೃತೆಗೊಳಿಸುವುದು ಸಂಪಾದಕರು ಜವಾಬ್ದಾರಿ ಓದುಗರಲ್ಲಿ ಸುದ್ದಿಯ ಕುತೂಹಲ ಕೆರಳಿಸುವ ಹಂತದಲ್ಲಿ ವಿಫಲರಾಗುದ್ದೇವೆ ಎನ್ನುವ…

Read More

ತುಮಕೂರು: ಪತ್ರಿಕೋದ್ಯಮ ಇಂದು ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿ ಹೊಂದಿದ್ದು ಪತ್ರಕರ್ತರಿಗೆ ಸಾಮಾಜಿಕ ಜಾಲತಾಣದಲ್ಲಿನ  ಅನುಕೂಲಗಳಿಗಿಂತ  ಸವಾಲುಗಳು ಹೆಚ್ಚಾಗಿವೆ ಎಂದು ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಅವರು ತಿಳಿಸಿದರು. ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಎರಡು ದಿನಗಳ ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ 39ನೇ ಸಮ್ಮೇಳನದ ‘ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಮೊಬೈಲ್ ಗಳಲ್ಲಿ ಒಂದು ಆಪ್ ಹೇಗೆ ಅಪ್ಡೇಟ್ ಆಗುತ್ತದೆಯೋ ಅದೇ ರೀತಿಯಾಗಿ ತಾಂತ್ರಿಕವಾಗಿ ಇಂದಿನ ಪತ್ರಕರ್ತರು ಬದಲಾವಣೆ ಕಾಣಬೇಕಿದೆ ಪೆನ್ನಿನಲ್ಲಿ ಬರೆಯುವ ಅನೇಕ ಪತ್ರಕರ್ತರು ಇಂದಿನ ಡಿಜಿಟಲ್ ಮಾಧ್ಯಮಕ್ಕೆ ಅನಿವಾರ್ಯವಾಗಿ ಹೊಂದಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸರ್ಕಾರಿ ಕಚೇರಿಯಲ್ಲಿ ತಾಂತ್ರಿಕ ವ್ಯವಸ್ಥೆಗಳು ಜಾರಿಯಲ್ಲಿವೆ. ಹಾಗೆಯೇ ಇಂದಿನ ಪತ್ರಕರ್ತರು ನವಮಾಧ್ಯಮದ ಅಂತರ್ಯಗಳನ್ನ ಅರಿತುಕೊಂಡು ಪತ್ರಿಕೋದ್ಯಮವನ್ನು ಮುನ್ನಡೆಸಬೇಕು ಎಂದು ತಿಳಿಸಿದರು. ಇಂದು AI ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಮ್ಮ ಪತ್ರಕರ್ತರ ಕಾರ್ಯವೈಖರಿಗಳನ್ನು ಕಸಿದುಕೊಂಡಿದ್ದು,  ಅನ್ಯ ಭಾಷೆಗಳ…

Read More

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ‘ಬಚ್ಚಾ’ ಎಂದು ರಮೇಶ್ ಜಾರಕಿಹೊಳಿ ಕರೆದಿರುವುದು ತಪ್ಪು ಎಂದು ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಬಚ್ಚಾ ಎಂಬ ಪದ ಬಳಕೆ ಮಾಡಿರುವುದು ತಪ್ಪು, ಅವರ ಪದ ಬಳಕೆಯನ್ನು ಒಪ್ಪಲಾಗದು ಎಂದರು. ವಿಜಯೇಂದ್ರ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಆ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು. ಇದನ್ನು ಯಾರೂ ಮರೆಯಬಾರದು. ಶಾಸಕರೊಬ್ಬರು ಈ ರೀತಿ ಮಾತನಾಡಿರುವುದು ತಪ್ಪು. ಇದನ್ನು ಒಪ್ಪಲಾಗದು ಎಂದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಮೈಸೂರು :  ಫೆಬ್ರವರಿ 10 ರಿಂದ 12 ರವರೆಗೆ ಟಿ ನರಸೀಪುರದ ತ್ರಿವೇಣಿ ಸಂಗಮದ ಬಳಿ ಕುಂಭಮೇಳ 2025 ನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು ಇಂದು ಕುಂಭ ಮೇಳ –2025 ರ ಆಚರಣೆಯ ಸಂಬಂಧ ಜಲದರ್ಶಿನಿ ಅಥಿತಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫೆಬ್ರವರಿ 10 ರಿಂದ 12 ಈವರೆಗೆ ಟಿ ನರಸೀಪುರದಲ್ಲಿ ಕುಂಭಮೇಳ ನಡೆಯುತ್ತದೆ. ಪ್ರಥಮ ಬಾರಿಗೆ 1989 ರಲ್ಲಿ ಪ್ರಾರಂಭವಾಯಿತು.  ಇದು 3 ವರ್ಷಗಳಿಗೆ ಒಮ್ಮೆ ನಡೆಯುವ ಮೇಳ. ಕುಂಭಮೇಳದಲ್ಲಿ ಸ್ವಚ್ಚತೆ ಕಾಪಾಡಬೇಕು. ಪ್ಲಾಸ್ಟಿಕ್ ಮುಕ್ತ  ಪ್ರದೇಶ ಎಂದು ಘೋಷಣೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು. ಸಾಂಸ್ಕೃತಿಕ ಹಾಗೂ ಜನಪದ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು. ಕೆ.ಎಸ್.ಆರ್.ಟಿ.…

Read More

ಧಾರವಾಡ: ಭಾರತ ಸರಕಾರದ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ದಿವ್ಯಾಂಗರಿಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತದೆ. ದಿವ್ಯಾಂಗರ ಸ್ವಾಲಂಬಿ ಬದುಕಿಗೆ ಮತ್ತು ಹಿರಿಯನಾಗರಿಕರ ಸ್ವಾಭಿಮಾನದ ಬದುಕಿಗೆ ನಮ್ಮ ಸರ್ಕಾರದ ಬೆಂಬಲ ಸದಾ ಇರುತ್ತದೆ. ಅಗತ್ಯ ಸಹಾಯ, ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ನಾಗರೀಕ ಸರಬರಾಜು ಮತ್ತು ಆಹಾರ, ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಸಚಿವರಾದ ಪ್ರಲ್ಹಾದ ಜೋಶಿ ಅವರು ಹೇಳಿದರು. ಅವರು ಇಂದು (ಜ.19) ಬೆಳಿಗ್ಗೆ ಧಾರವಾಡ ನಗರದ ಜೆ.ಎಸ್.ಎಸ್ ಕಾಲೇಜು ಸಭಾಂಗಣದಲ್ಲಿ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಅಂಗವಿಕಲ ವ್ಯಕ್ತಿಗಳಿಗೆ ನೆರವು (ADIP) ಯೋಜನೆಯಡಿಯಲ್ಲಿ 1051 ದಿವ್ಯಾಂಗ ಜನರಿಗೆ ಮತ್ತು ರಾಷ್ಟ್ರೀಯ ವಯೋಶ್ರೀ (RVY) ಯೋಜನೆಯಡಿಯಲ್ಲಿ 576 ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ, ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಈ ಶಿಬಿರದಲ್ಲಿ ಉಚಿತವಾಗಿ ಅರ್ಹರಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ವಿತರಿಸಲು ಕೇಂದ್ರ ಸರಕಾರ…

Read More

ಔರಾದ: ಸತತ ಮೂರು ಬಾರಿ ಪಟ್ಟಣದ ಪಿಕಾರ್ಡ ಬ್ಯಾಂಕ್ ನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ರಘುನಾಥ ಬಿರಾದರವರಿಗೆ ತಮ್ಮ ಸ್ವಗ್ರಾಮ ತೇಗಂಪೂರನಲ್ಲಿ ಗ್ರಾಮಸ್ಥರಿಂದ ಸನ್ಮಾನ ಮಾಡಲಾಯಿತು. ಸನ್ಮಾನ ಮಾಡಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕಾಶಪ್ಪ ಮುಕ್ತೆದಾರ, ರಘುನಾಥ ಬಿರಾದರ ಸತತ ಮೂರು ಬಾರಿ ಪಿಕಾರ್ಡ ಬ್ಯಾಂಕ್ ನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಇದಕ್ಕೆ ಕಾರಣ ಅವರ ಪ್ರಾಮಾಣಿಕತೆ, ಪ್ರತಿಯೊಂದು ಕೆಲಸದಲ್ಲೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಾರೆ,  ಹೀಗಾಗಿ ಅವರು ಸತತ ಮೂರು ಬಾರಿ ನಿರ್ದೇಶಕರಾಗಿ ಹಾಗೂ ಪಿಕಾರ್ಡ ಬ್ಯಾಂಕನ ಅಧ್ಯಕ್ಷರಾಗಿದಾರೆ, ಮತ್ತೆ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ನುಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸವಣಪ್ಪಾ ಮುಕ್ತೆದಾರ, ಗ್ರಾಪಂ ಮಾಜಿ ಸದಸ್ಯರಾದ ಕಾಶಪ್ಪಾ ಮುಕ್ತೆದಾರ ಗುರುನಾಥ ಮುಕ್ತೆದಾರ, ಪತ್ರಕರ್ತ ರವೀಂದ್ರ ಮುಕ್ತೆದಾರ, ಅಮರ ಮುಕ್ತೆದಾರ, ಯುವ ಉದ್ಯಮಿ ನಾಗೇಶ ಮುಕ್ತೆದಾರ, ಕಿರಣ ಬಿರಾದರ, ರತಿಕಾಂತ ಬಿರಾದರ ಹೀಗೆ ಅನೇಕರು ಭಾಗಿಯಾಗಿದ್ದರು. ವರದಿ: ಅರವಿಂದ…

Read More

ಬೀದರ್: ಜಿಲ್ಲೆಯ ಔರಾದ ತಾಲೂಕು  ಸಂತಪುರ  ಕ್ಷೇತ್ರದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂತಪುರ್ ಗ್ರಾಮದ   ಬಸವರಾಜ್ ಸಿದ್ದಯ್ಯ ಸ್ವಾಮಿ ಅವರನ್ನು ಪಿಕೆಪಿಎಸ್ ಸಂಘ ನಿಯಮಿತ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಹಿನ್ನೆಲೆ ಅವರನ್ನು ಸಂತಪೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ವರ್ಗದ ಜೊತೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಾ.ಹೋಮ ಹರೀಶ್, ವಿಲಾಸ್ ಹಸನ್ಮುಖಿ, ಜಯಪ್ರಕಾಶ್, ಅಲೀಮ್ ಕುರ್ಚೆ ಪಾಂಡು ರಾಥೋಡ್, ಸೂರ್ಯಕಾಂತ್ ಸೋನಿ ಇತರರು ಇದ್ದರು. ವರದಿ: ಅರವಿಂದ ಮಲ್ಲಿಗೆ,  ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಮುಂಬೈ: ನಟ ಸೈಫ್ ಅಲಿ ಖಾನ್‌ ಗೆ ಚಾಕು ಇರಿದಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ಬಂಧಿತ ಆರೋಪಿಯಾಗಿದ್ದಾನೆ.. ಆತನನ್ನು ಸೈಫ್ ನಿವಾಸದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕಾಸರ್ವಾಡವಲಿಯ ಹಿರಾನಂದಾನಿ ಎಸ್ಟೇಟ್ ಬಳಿ ಬಂಧಿಸಲಾಗಿದೆ. ದುಷ್ಕರ್ಮಿ ಥಾಣೆಯ ಬಾರ್‌ ನಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಆತ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಹೇಳಿಕೊಂಡಿದ್ದನಂತೆ., ಗುರುವಾರ ಮುಂಜಾನೆ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಆರೋಪಿ ದಾಳಿ ನಡೆಸಿದ್ದ. ಆರು ಬಾರಿ ಇರಿತಕ್ಕೊಳಗಾಗಿದ್ದ ಸೈಫ್‌ ಅವರನ್ನು ಆಟೋರಿಕ್ಷಾದಲ್ಲಿ ನಗರದ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನೀಡಿ, ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಅವರ ಬೆನ್ನುಮೂಳೆಯಿಂದ 2.5 ಇಂಚಿನ ಚಾಕುವಿನ ತುಂಡನ್ನು ತೆಗೆಯಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ಆಂಧ್ರಪ್ರದೇಶಕ್ಕೆ ಒಮ್ಮೆ ಹೋದಾಗ ಅಲ್ಲಿನ ಗ್ರಾಮಗಳಲ್ಲಿ ಸಿ.ಸಿ.ರಸ್ತೆ ಮಾತ್ರ ಕಾಣುತ್ತದೆ ಹೊರತು ಚರಂಡಿಗಳು ಕಾಣುವುದಿಲ್ಲ,  ಆದಾ ಕಾರಣ ಮನೆಗಳ ಬಚ್ಚಲುಗಳ ನೀರು CC ರಸ್ತೆಯ ಮೇಲೆ ನಿಂತಿರುತ್ತವೆ. ಇದರಿಂದ ಗ್ರಾಮ ನೈರ್ಮಲ್ಯಕ್ಕೆ ತೊಂದರೆ ಆಗುತ್ತದೆ.  ಇಂತ ಸಂದರ್ಭದಲ್ಲಿ ಚರಂಡಿಗಳ ಮಹತ್ವ ಗೊತ್ತಾಗುತ್ತದೆ. ಚರಂಡಿಗಳು ಗ್ರಾಮದ ಒಳಗೆ ಮನೆಗಳ ಬಚ್ಚಲು ನೀರು ( ಕೊಳಕು ನೀರು ) ಗ್ರಾಮದಿಂದ ಹೊರಕ್ಕೆ ಹರಿಯುವುದರಿಂದ ಗ್ರಾಮಗಳು ಸ್ವಚ್ಛತೆಯಿಂದ ಇರಲು ಸಾಧ್ಯ ಆಗುತ್ತದೆ. ನೀರು ಗ್ರಾಮದ ಒಳಗೆ ನಿಂತರೆ ಸೊಳ್ಳೆಗಳ ಉತ್ಪತಿಗೆ ಕಾರಣ ಆಗಿ ಡೇಂಗೆ, ಮಲೇರಿಯಾ ರೋಗಗಳು ಹರಡಲು ಕಾರಣ ಆಗುತ್ತದೆ. ಈ ಕಾರಣಕ್ಕೆ ಚರಂಡಿಗಳ ನೀರು ಗ್ರಾಮದಿಂದ ಹೊರಗೆ ಹೋಗುವ ವ್ಯವಸ್ಥೆ ಆಗಬೇಕಾಗಿದೆ. ಚರಂಡಿಗಳು ಎಷ್ಟು ಮಹತ್ವ ಎಂಬುದು ಸರಿ ಎನ್ನಿಸಿದರು. ಚರಂಡಿಗಳ ಹೆಸರಿನಲ್ಲಿ ಕಾಮಗಾರಿ ಹೆಸರಿನಲ್ಲಿ ಒಂದು ದಂಧೆ ಆಗಬಾರದು, ರಾಜ್ಯದಲ್ಲಿ ಏನಾಗಿದೆ ಎಂದರೆ ಟೆಂಡರ್ ನಲ್ಲಿ ಭಾಗವಹಿಸಿದ ಗುತ್ತಿಗೆದಾರರು ಗ್ರಾಮಗಳಿಗೆ ಬಂದು ರಸ್ತೆ ಪಕ್ಕದಲ್ಲಿ ಆ ವೈಜ್ಞಾನಿಕ ಚರಂಡಿಗಳನ್ನು ನಿರ್ಮಾಣ ಮಾಡಿ…

Read More