ತುಮಕೂರು: ಅಮೃತಾ ಐಎನ್ಸಿ ಆಶ್ರಯದಲ್ಲಿ ನಗರದ ಗಾಜಿನ ಮನೆಯಲ್ಲಿ ಜೂನ್ 13 ಮತ್ತು 14ರಂದು ನಡೆಯಲಿರುವ ಆಟೋ ಎಕ್ಸ್ ಪೋ ಎಲೆಕ್ಟ್ರಾನಿಕ್ ಕಾರ್ ಮತ್ತು ಬೈಕ್ ಪ್ರದರ್ಶನ ಕಾರ್ಯಕ್ರಮದಲ್ಲಿ ವಾಹನ ಪ್ರಿಯರಿಗೆ ಹಾಗೂ ಹೊಸ ಕಾರು–ಬೈಕ್ ಖರೀದಿಸಲು ಬಯಸುವ ಗ್ರಾಹಕರಿಗೆ ಸುವರ್ಣಾವಕಾಶ ಒದಗಿಸುವ ಉದ್ದೇಶದಿಂದ ಮೂರನೇ ಆವೃತ್ತಿಯ ಆಟೋ ಎಕ್ಸ್ ಪೋ 2026 ಆಯೋಜಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಶ್ರೀ ಆಟೋ ಮಾಲೀಕ ಶ್ರೀನಿವಾಸ್ ಹಾಗೂ ಅಮೃತಾ ಐಎನ್ಸಿ ಸಂಸ್ಥೆಯ ಅಮೃತಾ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟೋ ಎಕ್ಸ್ ಪೋದಲ್ಲಿ ಭಾರತೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು, ಬೈಕ್ ಗಳು ವಾಹನಗಳು ಸೇರಿದಂತೆ ವಿವಿಧ ಮಾದರಿಯ ವಾಹನಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿವೆ. ವಾಹನಗಳ ಮಾರಾಟ, ಟೆಸ್ಟ್ ಡ್ರೈವ್, ಆನ್‌ಸ್ಪಾಟ್ ಬುಕಿಂಗ್ ಹಾಗೂ ಹಣಕಾಸು ಯೋಜನೆಗಳ ಮಾಹಿತಿ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ಪ್ರಮುಖ ವಾಹನ ಸಂಸ್ಥೆಗಳು ಭಾಗವಹಿಸುತ್ತಿದ್ದು, ಸುಮಾರು 14ರಿಂದ 15 ಕಾರು ಕಂಪನಿಗಳು ಮತ್ತು ಹಲವು ದ್ವಿಚಕ್ರ ವಾಹನ ಬ್ರಾಂಡ್‌ಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಹಳೆಯ ವಾಹನಗಳ ವಿನಿಮಯ (ಎಕ್ಸ್ ಚೇಂಜ್) ಸೌಲಭ್ಯವೂ ಗ್ರಾಹಕರಿಗೆ ದೊರೆಯಲಿದೆ. ಒಂದು ವಾಹನ ಖರೀದಿಸಲು ಬೆಂಗಳೂರಿಗೆ ತೆರಳಿ ಹಲವು ಶೋರೂಮ್‌ಗಳನ್ನು ಸುತ್ತುವ ಅಗತ್ಯ ಇಲ್ಲ, ಒಂದೇ ಸ್ಥಳದಲ್ಲಿ ವಿವಿಧ ಬ್ರಾಂಡ್‌ಗಳ ವಾಹನಗಳನ್ನು ನೋಡಿ, ಸ್ಪರ್ಶಿಸಿ, ಹೋಲಿಕೆ ಮಾಡಿ, ಟೆಸ್ಟ್ ಡ್ರೈವ್ ಮಾಡಿ ನಿರ್ಧಾರ ಕೈಗೊಳ್ಳಬಹುದು.
ಗ್ರಾಹಕರ ಸಮಯ ಮತ್ತು ಹಣ ಎರಡೂ ಉಳಿಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುಮಾರು 14 ರಿಂದ 15 ಪ್ರಮುಖ ವಾಹನ ಕಂಪನಿಗಳು ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


