Subscribe to Updates
Get the latest creative news from FooBar about art, design and business.
- ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಪರ ಸಂಘಟನೆಗಳ ಆಗ್ರಹ
- ಮಹಾರಾಜವಾಡಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ: ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ
- ಬೀದರ್: ಔರಾದ್ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ
- ತುಮಕೂರಿನಲ್ಲಿ ಡ್ರೀಮ್ ಡೀಲ್ ಲಕ್ಕಿ ಡ್ರಾ: 53 ಜನರಿಗೆ ಭರ್ಜರಿ ಬಹುಮಾನ
- ನಟರಾಜು ಜಿ.ಎಲ್. ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ: ಸಮಾಜಮುಖಿ ಹೋರಾಟಕ್ಕೆ ಮನ್ನಣೆ
- ತುಮಕೂರು: ಎರಡು ದಿನ ವಿದ್ಯುತ್ ವ್ಯತ್ಯಯ: ವಿವರಗಳಿಗಾಗಿ ಈ ಸುದ್ದಿ ಓದಿ
- ಆರ್ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ
- “ಗಿಲ್ಲಿ ಒಬ್ಬನನ್ನು ಬಿಟ್ಟು ಮನೆಯವರೆಲ್ಲರೂ ನನಗೆ ಅಣ್ಣಂದಿರು” ಎಂದು ವೀಕ್ಷಕರ ತಲೆಗೆ ಹುಳಬಿಟ್ಟ ರಕ್ಷಿತಾ!
Author: admin
ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕು, ಪೋಲೇನ ಹಳ್ಳಿಯಲ್ಲಿ ದಲಿತ ಯುವಕ ಆನಂದ ಎಂಬುವನನ್ನು ಕುಡಿಯುವ ನೀರು ಕೇಳಿದಕ್ಕೆ ಬರ್ಬರವಾಗಿ ಕೊಲೆ ಮಾಡಲಾಗಿದೆ, ಪಾವಗಡ ತಾಲ್ಲೂಕು ಬೆಳ್ಳಿಬಟ್ಟಲು ಗ್ರಾಮದ ದಲಿತ ಹನುಮಂತರಾಯಪ್ಪ ಎಂಬುವರನ್ನು ಕುಲ್ಲಕ ಕಾರಣಕ್ಕಾಗಿ ಹತ್ಯೆಗೈಯಲಾಗಿದೆ, ಈ ಘನ ಘೋರವಾದ ಕೃತ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ತುಮಕೂರು ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡರು, ಹತ್ಯೆಗೊಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ನಿಯಮದಂತೆ ಸರ್ಕಾರಿ ಉದ್ಯೋಗ ನೀಡಲು ಜಿಲ್ಲಾ ಸರ್ಕಾರವನ್ನು ಆಗ್ರಹಿಸಿದರು. ಜಿಲ್ಲೆಯಲ್ಲಿ ಎಸ್ ಸಿ/ಎಸ್ ಟಿ, ದೌರ್ಜನ್ಯ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಮತ್ತು ಸುಳ್ಳು ಕೌಂಟರ್ ಕೇಸ್ ಅನ್ನು ತಡೆಯಲು ಕ್ರಮವಹಿಸಬೇಕು, ಜಿಲ್ಲೆಯ ಮೂರು ಉಪವಿಭಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ ಪಿ.ಟಿ.ಸಿ.ಎಲ್ ಕಾಯ್ದೆ ಪ್ರಕರಣಗಳನ್ನು ಕೂಡಲೇ ಇತ್ಯರ್ಥಗೊಳಿಸಿ ದಲಿತರಿಗೆ ಜಮೀನನ್ನು ಸ್ವಾಧೀನ ಕೂಡಿಸಿಕೊಡಬೇಕು, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಹಾಗೂ ಜಮೀನು ಮಂಜುರಾತಿ ಫಾರಂ, 50.53,57. ಅರ್ಜಿ ಸಲ್ಲಿಸಿರುವ ಎಲ್ಲಾ…
ಬೀದರ್: ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ 15 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಜಮಾ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼ2025–26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಹೆಚ್ಚುವರಿಯಾಗಿ ಮಳೆಯಾಗಿ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಮಾಂಜ್ರಾ ನದಿಗೆ ಧನೆಗಾಂವ ಆಣೆಕಟ್ಟಿನಿಂದ ನೀರು ಹರಿಸಿರುವುದರಿಂದ ಪ್ರವಾಹ ಉಂಟಾಗಿ ಜಿಲ್ಲಾದ್ಯಂತ ಒಟ್ಟು 1,67,202 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆʼ ಎಂದರು. ʼಬೆಳೆ ಹಾನಿಯಾದ ಬಗ್ಗೆ ಜಿಲ್ಲಾಡಳಿತ ಅತ್ಯಂತ ಶ್ರಮ ವಹಿಸಿ ಸಮೀಕ್ಷೆ ಕಾರ್ಯಕೈಗೊಂಡಿದ್ದು, ಪರಿಹಾರ ತಂತ್ರಾಂಶದಲ್ಲಿ ನಮೂದಿಸಿರುವ 1.68 ಲಕ್ಷ ಹೆಕ್ಟೇರ್ ಬೆಳೆ ಹಾನಿಯ ಎನ್ ಡಿಆರ್ ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಅಂದಾಜು ಪರಿಹಾರ ಮೊತ್ತು ಒಟ್ಟು ₹143.34 ಕೋಟಿಯಾಗಿದೆʼ ಎಂದು ವಿವರಿಸಿದರು. ʼಅ.30ರೊಳಗಾಗಿ…
ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಶೇಕಡ 1ರಷ್ಟು ಮೀಸಲಾತಿಯನ್ನು ಯಾವ ರೀತಿಯಲ್ಲಿ ಕಲ್ಪಿಸಬಹುದು ಎಂಬ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಒಳಮೀಸಲಾತಿಗೆ ಸಂಬಂಧಿಸಿದಂತೆ ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳ ನಿಯೋಗದ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಸಿಎಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸುಧಾರಣೆಗೆ ಎಸ್ ಸಿಪಿ /ಟಿಎಸ್ ಪಿ ಕಾರ್ಯ ಕ್ರಮಗಳನ್ನು ಜಾರಿಗೊಳಿಸಿದ್ದೇ ನಮ್ಮ ಸರ್ಕಾರ. ಪ್ರತಿಯೊಬ್ಬರಿಗೂ ನ್ಯಾಯ ಸಿಗಲಿ ಎನ್ನುವುದೇ ಸರ್ಕಾರದ ಉದ್ದೇಶ. ಯಾವುದೇ ಜಾತಿಯೊಳಗೆ ಇನ್ನೊಂದನ್ನು ಸೇರಿಸುವ, ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಇದಕ್ಕೊಂದು ಪರಿಹಾರ ಹುಡುಕಿ, ನ್ಯಾಯ ಒದಗಿಸುತ್ತೇವೆ ಎಂದರು. ಒಳಮೀಸಲಾತಿ ಕಲ್ಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈಗ ಉಂಟಾಗಿರುವ ಗೊಂದಲಗಳಿಗೂ ಆದ್ಯತೆ ಮೇರೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಹುಳಿಯಾರು: ಹುಳಿಯಾರಿನ ಪಶು ಆಸ್ಪತ್ರೆಯ ಮುಂಭಾಗ ನಡೆಯುತ್ತಿದ್ದ ವಾರದ ಸಂತೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಅಲ್ಲಿನ ಗಿಡಗಂಟಿಗಳನ್ನು ತೆರವು ಮಾಡಿ ಕುಳಿತು ವ್ಯಾಪಾರ ಮಾಡಲು ಅನುಕೂಲ ಆಗುವಂತೆ ಮಣ್ಣು ಹಾಕಿಸಿ, ನೀರು ಮತ್ತು ಶೌಚಾಲಯ ಸುಸ್ಥಿತಿಯಲ್ಲಿಟ್ಟು ಜಾಗ ಹಂಚಿಕೆ ಮಾಡಲು ಪಟ್ಟಣ ಪಂಚಾಯ್ತಿಯ ತುರ್ತು ಸಭೆಯಲ್ಲಿ ಬುಧವಾರ ನಿರ್ಧರಿಸಲಾಯಿತು. ಹೂವು ಹೊನ್ನು, ಹಣ್ಣಿನ ವ್ಯಾಪಾರಿಗಳಿಗೆ 5*5 ಅಳತೆಯ ಜಾಗ ನೀಡಿ ವಾರಕ್ಕೆ ರೂ.50 ಸುಂಕ, ತರಕಾರಿ ವ್ಯಾಪಾರಿಗಳಿಗೆ 10*10 ಅಳತೆಯ ಜಾಗ ನೀಡಿ ವಾರಕ್ಕೆ ರೂ.100 ಸುಂಕ, ದಿನಸಿ ಅಂಗಡಿಗಳಿಗೆ 10*15 ಅಳತೆ ಜಾಗ ನೀಡಿ ವಾರಕ್ಕೆ ರೂ.150 ಸುಂಕ ವಸೂಲಿ ಮಾಡಲು ತೀರ್ಮಾನಿಸಲಾಯಿತು. ಹಾಲಿ ವಾರದ ಸಂತೆಯಲ್ಲಿ ವ್ಯಾಪಾರ ಮಾಡುವವರಿಗೆ ಮೊದಲ ಆದ್ಯತೆಯಂತೆ ವ್ಯಾಪಾರಕ್ಕೆ ಜಾಗ ನೀಡಿ ಜಾಗ ಉಳಿದರೆ ನಂತರ ಅರ್ಜಿ ಕರೆದು ಸ್ಥಳ ನೀಡುವಂತೆಯೂ ಎಲ್ಲರಿಗೂ ಲಕ್ಕಿಡಿಪ್ ಮೂಲಕ ಸ್ಥಳದ ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಗುರುವಾರದ ವಾರದ ಸಂತೆಯ ಬದಲಿಗೆ…
ತುಮಕೂರು: ನಗರದ ಸಮೀಪದಲ್ಲಿರುವ ಮೈದಾಳದ ಕೆರೆಯ ಕಟ್ಟೆಯಲ್ಲಿ ನೀರು ಸೋರಿಕೆಯಾಗುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ನೀರು ಸೋರಿಕೆಯಾಗುತ್ತಿದ್ದ ಸ್ಥಳಕ್ಕೆ ಈಗಾಗಲೇ ಮಣ್ಣನ್ನು ಹಾಕುವ ಕಾರ್ಯ ಪೂರ್ಣಗೊಂಡಿದ್ದು, ನೀರಿನ ಸೋರಿಕೆ ಪ್ರಮಾಣವನ್ನೂ ನಿಯಂತ್ರಿಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಮೈದಾಳ ಕರೆ ಕಟ್ಟೆಯಲ್ಲಿ ನೀರು ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಸಂಚರಿಸಿದ ಅವರು, ತಕ್ಷಣವೇ ಪಿಡಿಒ ಹಾಗೂ ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಮಳೆ ಪ್ರಮಾಣ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಬಲಪಡಿಸಬೇಕು. ಕೆರೆ ಹತ್ತಿರ ಇರುವ ಮನೆ, ಶಾಲೆಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಿಗೆ ಯಾವುದೇ ಹಾನಿ ಉಂಟಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಅವರು ಮುಂದುವರಿದು ಕಟ್ಟೆ ಬಲಪಡಿಸುವ ತುರ್ತು…
ತುಮಕೂರು: ನವೆಂಬರ್ ತಿಂಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ ಪ್ರಯುಕ್ತ ‘ಸರ್ದಾರ್ 150’ ಏಕತಾ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಸರ್ದಾರ್ 150’ ಪಾದಯಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾದಯಾತ್ರೆಯ ಮೂಲಕ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ರಾಷ್ಟ್ರ ಏಕೀಕರಣದ ಪಾತ್ರ, ಸಾಹಸ, ಆಡಳಿತ ಹಾಗೂ ದೇಶಭಕ್ತಿಯ ಸಂದೇಶವನ್ನು ಯುವ ಪೀಳಿಗೆಗೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಸ್ವಚ್ಛತಾ ಕಾರ್ಯಕ್ರಮ, ಜಾಗೃತಿ ಜಾಥಾ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ಪ್ರಾರಂಭಿಸುವಂತೆ ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಶ್ರೀವಾಣಿ ಅವರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಈಶ್ವರಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ. ಗೋಪಾಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ…
ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಹೊಸಳ್ಳಿ ಚಂದ್ರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಆಹೋರಾತ್ರಿ ಧರಣಿ 22 ನೇ ದಿನಕ್ಕೆ ತಲುಪಿದ್ದು, ಕರ್ನಾಟಕ ರಾಜ್ಯ ರೈತ ಸಂಘವು ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷರಾದ ಈಚಘಟ್ಟದ ಸಿದ್ಧವೀರಪ್ಪ ಅವರು, ಪಟ್ಟಣ ಪಂಚಾಯಿತಿ ಮತ್ತು ಸರ್ಕಾರಗಳ ಡಕಾಯತಿಯಂತಹ ತೆರಿಗೆ ನೀತಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವವರಿಗೆ ಕುಡಿಯುವ ನೀರು, ನೆರಳಿಗಾಗಿ ಮೇಲ್ಛಾವಣಿ, ಶೌಚಾಲಯ ಮತ್ತು ವಿಶ್ರಾಂತಿ ಸೌಲಭ್ಯಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ತೆರಿಗೆ ವಸೂಲಿ ಮಾಡುವುದು ಸಾರ್ವಜನಿಕರನ್ನು ಡಕಾಯಿತಿ ಮಾಡುವ ಕೆಲಸ ಎಂದು ಸಿದ್ಧವೀರಪ್ಪ ತೀವ್ರವಾಗಿ ಟೀಕಿಸಿದರು. ರೈತರು ತಂದ ಸರಕಿಗೆ ರೈತನಿಂದ ಒಂದು ತೆರಿಗೆ ಮತ್ತು ಅದನ್ನು ಮಾರಾಟ ಮಾಡುವ ವ್ಯಾಪಾರಿಯಿಂದ ಇನ್ನೊಂದು ತೆರಿಗೆ ಒಂದೇ ಸರಕಿನ ಮೇಲೆ ಎರಡು ಬಾರಿ ತೆರಿಗೆ ಸಂಗ್ರಹಿಸುವ ಈ ಡಬಲ್ ತೆರಿಗೆ ನೀತಿ ಅಥವಾ ದರೋಡೆಕೋರತನ ಕೂಡಲೇ…
ಕೊರಟಗೆರೆ: ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಸಿ ಅನಂತರಾಮ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ 2025–26ನೇ ಸಾಲಿನ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಡೆಯಿತು. ತಾಲ್ಲೂಕು ರಾಜ್ಯೋತ್ಸವ ಆಯ್ಕೆ ಸಮಿತಿಯ ಸಭೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಒಟ್ಟು 31 ಅರ್ಜಿಗಳು ಸ್ವೀಕೃತವಾಗಿದ್ದು, ಈ ಅರ್ಜಿಗಳಲ್ಲಿ ರಂಗಭೂಮಿ ಕ್ಷೇತ್ರಕ್ಕೆ 10, ಸಮಾಜ ಸೇವೆ/ ಸಾಮಾಜಿಕ ಹೋರಾಟಗಾರರು ಕ್ಷೇತ್ರಕ್ಕೆ 04, ಕನ್ನಡ ಸಾಹಿತ್ಯ / ಸಂಶೋಧನೆ ಕ್ಷೇತ್ರಕ್ಕೆ 03, ಕ್ರೀಡಾ/ ಯೋಗಾ ಕ್ಷೇತ್ರಕ್ಕೆ 02, ಕಲೆ/ ಸಂಗೀತ/ ಜನಪದ ಕ್ಷೇತ್ರಕ್ಕೆ 03, ಪತ್ರಿಕಾ ರಂಗ 03, ಆಡಳಿತ ಕ್ಷೇತ್ರ 02, ಕನ್ನಡ ಪರ ಹೋರಾಟಗಾರರು ಕ್ಷೇತ್ರಕ್ಕೆ 04 ರಂತೆ ಅರ್ಜಿಗಳು ಸ್ವೀಕೃತವಾಗಿರುವುದಾಗಿ ಸಭೆಗೆ ಮಾಹಿತಿ ನೀಡಿದರು. ಹಾಗೂ ಈ ಅರ್ಜಿಗಳಲ್ಲಿ 2025-26ನೇ ಸಾಲಿಗೆ ಒಟ್ಟು 14 ಅರ್ಜಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಪ್ರತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕನ್ನಡ ರಾಜ್ಯೋತ್ಸವದ ವಿಶೇಷ ಆಚರಣೆಗಾಗಿ 14 ಜನರನ್ನು ಮಾತ್ರ…
ಸರಗೂರು: ತಾಲೂಕಿನ ಬಿ ಮಟಕರೆ ಗ್ರಾಪಂ ವ್ಯಾಪ್ತಿಯ ಕಾಡು ಬೇಗೂರು ಗ್ರಾಮದಲ್ಲಿರುವ ದಲಿತರ ಸ್ವಾಧೀನದಲ್ಲಿರುವ ಜಮೀನನ್ನು ಕಾಡು ಬೇಗೂರು ಗ್ರಾಮದ ದಾಸಪ್ಪ ಮತ್ತು ಮಕ್ಕಳು ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾರೆ, ತೊಂದರೆ ನೀಡುತ್ತಿದ್ದಾರೆ ಎಂದು ಅದೇ ಗ್ರಾಮದ ನೊಂದ ಕುಟುಂಬದವರು ಗುರುವಾರ ಹುಣಸೂರು ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಯದುಗೀರಿಶ್ ಅವರಿಗೆ ದೂರು ಸಲ್ಲಿಸಿದರು. ನಂತರ ಮಾತನಾಡಿದ ದಲಿತ ಮಹಿಳೆ ಲತಾ, ಗ್ರಾಮದ ನನ್ನ ದೊಡ್ಡಪ್ಪನ ಹೆಸರಿನಲ್ಲಿ ಪುಟ್ಟಕಾಂತಯ್ಯ ಬಿನ್ ಲೇಟ್ ದಾಸಯ್ಯರವರಿಗೆ ದಿನಾಂಕ 02—11–1983 ರಂದು ಸರ್ಕಾರವು ಕಾಡುಬೇಗೂರು ಗ್ರಾಮದ ಸರ್ವೆ ನಂಬರು 6ರ ವಿಸ್ತೀರ್ಣ 4 ಎಕರೆ ಜಮೀನನ್ನು ಎಲ್ ಎನ್ ಡಿ.4/134/1971-72ರಂದು ಎಲ್ ಎನ್ ಡಿ.(ಎಸ್.ಇ.)ನಂ.12/12/1983–84ರಂದು ಸರ್ಕಾರವು ದರಖಾಸ್ತು ಮೂಲಕ ಉಚಿತವಾಗಿ ಸಾಗುವಳಿ ಚೀಟಿ ನೀಡಿ ಅದೇ ದಿನವೇ ಸ್ವಾಧೀನಾನುಭವ ನೀಡಿರುತ್ತಾರೆ. ನಾನು ಗ್ರಾಮೀಣ ಪ್ರದೇಶದ ಮುಗ್ಧ ಮಹಿಳೆಯಾಗಿರುತ್ತೇನೆ ಹಾಗೂ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದವಳಾಗಿರುತ್ತೇನೆ ಹಾಗೂ ಅವಿದ್ಯಾವಂತ ಮುಗ್ಧ ಮಹಿಳೆಯಾಗಿರುತ್ತೇನೆ. ಹಾಗೂ ಹಲವಾರು ಷರತ್ತುಗಳನ್ನು ನೀಡಿ ಮಂಜೂರು…
ಬೀದರ್: ಡಾನ್ ಬಾಸ್ಕೋ ಐಟಿಐ ಕಾಲೇಜಿನಲ್ಲಿ ಅಕ್ಟೋಬರ್ 29, 2025 ರಂದು ಹೊಸ ಟೈಲರಿಂಗ್ ತರಗತಿಯ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಬ್ಯಾಚ್ 30 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾನ್ ಬಾಸ್ಕೋ ಬೀದರ್ ನ ನಿರ್ದೇಶಕ ರೆವರೆಂಡ್ ಫಾದರ್ ಸ್ಟೀವನ್ ಎಲ್. ಮತ್ತು ಬೀದರ್ ಡಾನ್ ಬಾಸ್ಕೋ ಐಟಿಐ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ಫಾದರ್ ಮ್ಯಾಥ್ಯೂ ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ನಂತರ ದೀಪ ಬೆಳಗಿಸಲಾಯಿತು. ರೆವರೆಂಡ್ ಫಾದರ್ ಸ್ಟೀವನ್ ಎಲ್. ಮಾತನಾಡಿ, ಈ ಉಪಕ್ರಮವನ್ನು ಶ್ಲಾಘಿಸಿದರು ಮತ್ತು ಭಾಗವಹಿಸುವ ಮಹಿಳೆಯರು ಸ್ವಾವಲಂಬಿಗಳಾಗಿರಬೇಕು ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಉಜ್ವಲ ಭವಿಷ್ಯವನ್ನು ನಿರ್ಮಿಸಬೇಕು ಎಂದು ಪ್ರೋತ್ಸಾಹಿಸಿದರು. ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವಲ್ಲಿ ವೃತ್ತಿಪರ ಶಿಕ್ಷಣದ ಮಹತ್ವವನ್ನು ಅವರು ಒತ್ತಿ ಹೇಳಿದರು. ರೆವರೆಂಡ್ ಫಾದರ್ ಮ್ಯಾಥ್ಯೂ ಮಾತನಾಡಿದರು. ಟೈಲರಿಂಗ್ ತರಗತಿಯ ಉದ್ಘಾಟನೆ ಅನೇಕ ಮಹಿಳೆಯರಿಗೆ ಸ್ವಾವಲಂಬಿ ಭವಿಷ್ಯದ ಕನಸನ್ನು ಮೂಡಿಸಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್…