Author: admin

ತುಮಕೂರು: ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.1 ರಿಂದ 35ರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲಾ ಕಟ್ಟಡ, ಸರ್ಕಾರಿ ಕಾಂಪೌಂಡ್ ಗೋಡೆ, ಸರ್ಕಾರಿ ಇತರೆ ಕಟ್ಟಡಗಳು ಹಾಗೂ ಇತರೆ ಅಪಾಯಕಾರಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದು ಕಂಡು ಬಂದಲ್ಲಿ ಕೂಡಲೇ ತುಮಕೂರು ಮಹಾನಗರಪಾಲಿಕೆಗೆ ದೂರವಾಣಿ ಅಥವಾ ವಾಟ್ಸಾಪ್ ಮುಖಾಂತರ ಮಾಹಿತಿಯನ್ನು ನೀಡಬೇಕೆಂದು ಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಖಾಸಗಿ ಶಾಲೆಯ ಕಾಂಪೌಂಡ್ ಮತ್ತು ಖಾಸಗಿ ಶಾಲೆಯ ಕಟ್ಟಡ, ಖಾಸಗಿ ಕಟ್ಟಡ ಹಾಗೂ ಖಾಸಗಿ ಕಟ್ಟಡದ ಕಾಂಪೌಂಡ್ ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದಲ್ಲಿ / ಅಪಾಯಕಾರಿ ಇದ್ದಲ್ಲಿ ಮಹಾನಗರಪಾಲಿಕೆಯ ಗಮನಕ್ಕೆ ತಂದು ಸ್ವಂತ ತಾವೇ ತೆರವುಗೊಳಿಸತಕ್ಕದ್ದು. ತಪ್ಪಿದ್ದಲ್ಲಿ ಮಳೆಗಾಲದಲ್ಲಿ ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ತಾವೇ ನೇರ ಜವಾಬ್ದಾರಿಯಾಗಿರುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರವೀಣ್ ಕುಮಾರ್ ಎ. (ಮೊ.ಸಂ.9434843026), ಸುಮ ಎಸ್.ಬಿ.(ಮೊ.ಸಂ.8722309671), ಲಕ್ಕಿ (ಮೊ.ಸಂ. 8971881530) ಅಥವಾ ತುಮಕೂರು ಮಹಾನಗರಪಾಲಿಕೆ ಕಂಟ್ರೋಲ್ ರೂಂ ಮೊ.ಸಂ. 9449872599ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ…

Read More

ಮಧುಗಿರಿ: ದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಸಾರಿಗೆ ಮತ್ತು ತಂತ್ರಜ್ಞಾನ ವಲಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪುರುಷರು ಕಡ್ಡಾಯವಾಗಿ ಟಿಕೆಟ್ ಪಡೆದು ಪ್ರಯಾಣಿಸಬೇಕು ಎಂದು ರಾಜ್ಯ ಭರವಸೆ ಕಮಿಟಿ ಅಧ್ಯಕ್ಷರು ಹಾಗೂ ಮಧುಗಿರಿ ಶಾಸಕರಾದ ಕೆ.ಎನ್. ರಾಜಣ್ಣ ಮನವಿ ಮಾಡಿದರು. ಪಟ್ಟಣದ ಶಿರಾಗೇಟ್ ಬಳಿ ನೂತನ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಹಾಗೂ ಹೊಸ ನಗರ ಸಾರಿಗೆ ಬಸ್ ಮಾರ್ಗಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಮಧುಗಿರಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಅತ್ಯಾಧುನಿಕ ‘ಹೈಟೆಕ್’ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ನಗರ ಸಾರಿಗೆ ಬಸ್ ಮಾರ್ಗಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಅವರು ಭರವಸೆ ನೀಡಿದರು. “ಮುಂದಿನ ದಿನಗಳಲ್ಲಿ ಕೆಎಸ್‌ ಆರ್‌ ಟಿಸಿ ಡಿಪೋ ಬಳಿ ಮೀಸಲಿಡಲಾಗಿರುವ ಎರಡೂವರೆ ಎಕರೆ ಜಮೀನಿನಲ್ಲಿ ವಿಭಾಗೀಯ ಕಚೇರಿ ಮತ್ತು ಉಗ್ರಾಣಕ್ಕಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಭೂಮಿ…

Read More

ತಿಪಟೂರು: ನಗರದಲ್ಲಿ ಕಳೆದ ಸುಮಾರು 66 ವರ್ಷಗಳಿಂದ ನಿರಂತರವಾಗಿ ಜನಪರ ಹಾಗೂ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿರುವ ‘ತಿಪಟೂರು ರೋಟರಿ ಕ್ಲಬ್’, ಇದೀಗ ಯಶಸ್ವಿಯಾಗಿ 67ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂದರ್ಭದಲ್ಲೇ ಕ್ಲಬ್‌ ನ ಮುಕುಟಕ್ಕೆ ಮತ್ತೊಂದು ರಾಜ್ಯಮಟ್ಟದ ಗರಿ ಸೇರ್ಪಡೆಯಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಐ.ಸಿ.ಜಿ.ಎಫ್ (ICGF) ಕಾರ್ಯಕ್ರಮದಲ್ಲಿ, ತಿಪಟೂರು ರೋಟರಿ ಕ್ಲಬ್‌ನ ಪಬ್ಲಿಕ್ ಇಮೇಜ್ ವಿಭಾಗಕ್ಕೆ ರಾಜ್ಯಮಟ್ಟದ “ಎಕ್ಸಲೆನ್ಸ್ ಆಫ್ ಪಬ್ಲಿಕ್ ಇಮೇಜ್” (Excellence of Public Image) ಪ್ರಶಂಸನಾ ಪತ್ರ ಹಾಗೂ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ಸಂಸ್ಥೆಯ ಕೀರ್ತಿ ರಾಜ್ಯಮಟ್ಟದಲ್ಲಿ ಮತ್ತಷ್ಟು ಹೆಚ್ಚಿದಂತಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ತಿಪಟೂರು ರೋಟರಿ ಸಂಸ್ಥೆಯ ಪಬ್ಲಿಕ್ ಇಮೇಜ್ ನಿರ್ದೇಶಕರಾಗಿ ಅತ್ಯಂತ ಸಮರ್ಥ ಹಾಗೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರಕಾಶ್ ಕೆ. ಅವರನ್ನು ಸಂಸ್ಥೆಯ 67ನೇ ವರ್ಷದ ಚುನಾಯಿತ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಕಾಶ್ ಅವರ…

Read More

ಬೆಂಗಳೂರು: ರಾಜಧಾನಿಯಲ್ಲಿ ವಿಐಪಿ ಸಂಚಾರದ ಹೆಸರಿನಲ್ಲಿ ಸಾಮಾನ್ಯ ನಾಗರಿಕರಿಗೆ ಆಗುತ್ತಿರುವ ತೊಂದರೆಗೆ ಸಂಬಂಧಿಸಿದಂತೆ ಮತ್ತೊಂದು ಆಕ್ರೋಶದ ಘಟನೆ ಮುನ್ನೆಲೆಗೆ ಬಂದಿದೆ. ವಿಐಪಿ ಮೂವ್‌ಮೆಂಟ್ ಹಿನ್ನೆಲೆಯಲ್ಲಿ ಹೇರಲಾಗಿದ್ದ ಟ್ರಾಫಿಕ್ ನಿರ್ಬಂಧದಿಂದಾಗಿ ತನ್ನ ಗರ್ಭಿಣಿ ಪತ್ನಿ ಇದ್ದ ಕಾರು ರಸ್ತೆಯಲ್ಲೇ ಸಿಲುಕಿಕೊಂಡಿದ್ದನ್ನು ಪ್ರತಿಭಟಿಸಿ ವ್ಯಕ್ತಿಯೊಬ್ಬರು ನಡುರಸ್ತೆಯಲ್ಲೇ ಧರಣಿ ಕುಳಿತ ಘಟನೆ ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಘಟನೆ ಕುರಿತು ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ. ಭಾನುವಾರ ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ವಾಹನ ದಳದ ಸಂಚಾರದ ಹಿನ್ನೆಲೆಯಲ್ಲಿ ಪೊಲೀಸರು ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು (ಝೀರೋ ಟ್ರಾಫಿಕ್). ಅಂಡರ್‌ ಪಾಸ್ ಕಾಮಗಾರಿಯಿಂದಾಗಿ ಈಗಾಗಲೇ ಕಿರಿದಾಗಿದ್ದ ಈ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಈ ದಟ್ಟಣೆಯ ನಡುವೆ ಗರ್ಭಿಣಿ…

Read More

ಕಲಬುರಗಿ: ಎಮ್ಮೆಯನ್ನು ವಾಪಸ್ ಕರೆತರುವ ಸಲುವಾಗಿ ನದಿಗೆ ಇಳಿದಿದ್ದ ತಂದೆಯೊಬ್ಬರು ಮಗನ ಕಣ್ಣೆದುರೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ವಿಜಯ್ ರಾಜು ಎಂದು ಗುರುತಿಸಲಾಗಿದೆ. ಭೀಮಾ ನದಿಯ ದಡದಲ್ಲಿ ಈ ದುರಂತ ಸಂಭವಿಸಿದೆ. ವಿಜಯ್ ರಾಜು ಅವರು ತಮ್ಮ ಎಮ್ಮೆಯನ್ನು ವಾಪಸ್ ಕರೆತರಲು ಭೀಮಾ ನದಿಗೆ ಇಳಿದಿದ್ದರು. ಆದರೆ ಅವರಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ನದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನೀರು ಸೊಂಟದ ಮಟ್ಟಕ್ಕಿಂತ ಮೇಲಕ್ಕೆ ಬಂದಿದೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ ಅವರು, ಹೊರಬರಲಾರದೆ ಮುಳುಗಲು ಪ್ರಾರಂಭಿಸಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದಾಗ ವಿಜಯ್ ಅವರು “ಕಾಪಾಡಿ, ಕಾಪಾಡಿ” ಎಂದು ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ದಡದ ಮೇಲಿದ್ದ ಅವರ ಮಗನಿಗೆ ತಕ್ಷಣವೇ ಏನು ಮಾಡಬೇಕೆಂದು ತೋಚದೆ, ಅಸಹಾಯಕನಾಗಿ ನಿಂತಿದ್ದಾನೆ. ತಂದೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗದ ಆ ತಲ್ಲಣದ ಕ್ಷಣದಲ್ಲಿ, ತಂದೆ ನೀರಿನಲ್ಲಿ ಮುಳುಗುತ್ತಿರುವ ಇಡೀ ದೃಶ್ಯ ಮಗನ ಮೊಬೈಲ್…

Read More

ಕೊರಟಗೆರೆ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ನಿಯಂತ್ರಣ ತಪ್ಪಿದ ಟಾಟಾ ಏಸ್ ವಾಹನವೊಂದು ಹರಿದ ಪರಿಣಾಮ, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೈರೇನಹಳ್ಳಿಯ ಸಿರಾ-ಚಿಕ್ಕಬಳ್ಳಾಪುರ ಹೆದ್ದಾರಿ ರಸ್ತೆಯಲ್ಲಿರುವ ಬಸ್ ನಿಲ್ದಾಣದಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ನವೀನ್ (೧೮) ಮತ್ತು ನಕುಲ್ (೧೭) ಮೃತಪಟ್ಟ ದುರ್ದೈವಿ ಯುವಕರಾಗಿದ್ದಾರೆ. ಗೌರಿಬಿದನೂರು ಕಡೆಯಿಂದ ಮಧುಗಿರಿ ಕಡೆಗೆ ಅತೀ ವೇಗವಾಗಿ ಬಂದ ಟಾಟಾ ಏಸ್ ವಾಹನದ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ಚಾಲನೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ. ರಸ್ತೆ ಬದಿಯಲ್ಲಿದ್ದ ಯುವಕರಿಬ್ಬರನ್ನು ಬಲಿಪಡೆದ ವಾಹನವು, ಅಷ್ಟಕ್ಕೇ ನಿಲ್ಲದೆ ನಿಯಂತ್ರಣ ಕಳೆದುಕೊಂಡು ಹತ್ತಿರದಲ್ಲೇ ಇದ್ದ ಹೋಟೆಲ್‌ ಒಂದಕ್ಕೆ ನುಗ್ಗಿದೆ. ಘಟನೆಯಿಂದಾಗಿ ಹೋಟೆಲ್ ಒಳಗಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕೊರಟಗೆರೆ ಸಿಪಿಐ ಪುರುಷೋತ್ತಮ್ ಹಾಗೂ ಪಿಎಸ್‌ಐ ತೀರ್ಥೇಶ್ ಅವರು ಭೇಟಿ…

Read More

ಕೊರಟಗೆರೆ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಭಾರಿ ಮಳೆಗೆ ಸಾರ್ವಜನಿಕ ಆಸ್ತಿಪಾಸ್ತಿಗಳು ಜಲಾವೃತಗೊಂಡಿದ್ದು, ಸಾರ್ವಜನಿಕರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾ.ಪಂ ವ್ಯಾಪ್ತಿಯ ಕಾಶಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣಕ್ಕೆ ಮಳೆ ನೀರು ನುಗ್ಗಿದೆ. ಈ ಶಾಲೆಯಲ್ಲಿ ಒಟ್ಟು 78ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಚರಂಡಿಯಲ್ಲಿ ಹರಿಯಬೇಕಾದ ನೀರು ನೇರವಾಗಿ ಶಾಲಾ ಕೊಠಡಿಗಳತ್ತ ನುಗ್ಗುತ್ತಿದೆ. ಈಗಾಗಲೇ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಗೆ ನೀರು ನುಗ್ಗಿರುವುದರಿಂದ ಮಕ್ಕಳು ಎಲ್ಲಿ ಕುಳಿತು ಪಾಠ ಕೇಳಬೇಕು ಎಂದು ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕೊರಟಗೆರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಪ್ರದೇಶವು ತಗ್ಗು ಪ್ರದೇಶದಲ್ಲಿದೆ. ಸಣ್ಣ ಮಳೆ ಬಂದರೂ ಸಾಕು, ಇಡೀ ಪಾರ್ಕಿಂಗ್ ಸ್ಥಳವು ಕೆರೆಯಂತೆ ಭಾಸವಾಗುತ್ತದೆ.…

Read More

ತುಮಕೂರು: ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಕನಿಷ್ಠ ವೇತನವನ್ನು ರೂ. ೩೬ ಸಾವಿರಕ್ಕೆ ಹೆಚ್ಚಿಸಬೇಕು ಸೇರಿದಂತೆ ಒಟ್ಟು ೬ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ನಗರದ ಸ್ವತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಇತ್ತೀಚೆಗೆ (ಮೇ ೨೨) ರಾಜ್ಯ ಸರ್ಕಾರ ಹೊರಡಿಸಿರುವ ಏಕರೂಪದ ಕನಿಷ್ಠ ವೇತನ ಅಧಿಸೂಚನೆಯನ್ನು ಸ್ವಾಗತಿಸಿದ ಸಿಐಟಿಯು, ಅದರಲ್ಲಿರುವ ಹಲವು ನ್ಯೂನ್ಯತೆಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ಒತ್ತಾಯಿಸಿತು. ಈ ಕುರಿತು ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಅಧ್ಯಕ್ಷರಾದ ಕಾಂ. ಸೈಯದ್ ಮುಜೀಬ್, “ಸುಪ್ರೀಂ ಕೋರ್ಟ್‌ನ ‘ರೆಪ್ತಕೋಸ್ ಬ್ರೆಟ್’ ಮಾನದಂಡದಂತೆ ಕನಿಷ್ಠ ವೇತನ ಪರಿಷ್ಕರಿಸಬೇಕೆಂಬ ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ಈ ಅಧಿಸೂಚನೆ ಬಂದಿದೆಯಾದರೂ,…

Read More

ಕೊರಟಗೆರೆ : ನಾವು ಎಲ್ಲಿ ಕೆಲಸ ಮಾಡುತ್ತಿವೋ ಅಲ್ಲಿ ಸಾರ್ವಜನಿಕರು ನಮ್ಮ ಬಗ್ಗೆ ಒಳ್ಳೆಯ ಮಾತು ಹಾಡಿದಾಗ ಮಾತ್ರ ನಾವು ಜನಗಳ ಸೇವೆ ಮಾಡಿದಕ್ಕೂ ಸಾರ್ಥಕವಾಗಲಿದೆ. ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸಿ.ಎನ್.ದುರ್ಗ ಹೋಬಳಿಯ ಉಪ ತಹಶೀಲ್ದಾರ್ ಎ.ಜೆ.ರಾಜು ಹಾಗೂ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿದ ಶಾಂತಮ್ಮ ಅವರ ವಯೋನಿವೃತ್ತಿ ಹಿನ್ನಲೇ ಇಬ್ಬರಿಗೂ ಸನ್ಮಾನಿಸಿ ಮಾತನಾಡಿದರು. ಸರಕಾರಿ ಕಲಸ ಎಲ್ಲರಿಗೂ ಒಲಿದು ಬರುವುದಿಲ್ಲ. ನಾವು ಮಾಡುವ ಕೆಲಸ ನಿಷ್ಠೆ ಹಾಗೂ ಪ್ರಮಾಣ ಕವಾಗಿ ಇದ್ದಾಗ ಮಾತ್ರ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ. ಇಂತಹ ಸಾಲಿನಲ್ಲಿ ಉಪ ತಹಸೀಲ್ದಾರ್ ಎ.ಜೆ.ರಾಜು ಹಾಗೂ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿದ ಶಾಂತಮ್ಮ ಅವರು ಸಾಕಷ್ಟು ಜನರು ಇವರ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಇವರಿಗೆ ವಹಿಸಿದ ಕೆಲಸಗಳನ್ನ ಚಾಚು ತಪ್ಪದೇ ಕೆಲಸ ಮಾಡಿ ನನ್ನ ಮುಂದೆ ವರದಿ ಮಾಡುತ್ತಿದ್ದರು ಇಂತವರ…

Read More

ಸರಗೂರು: “ಹೈಕಮಾಂಡ್ ಕೇಳಿದ್ದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದ ಸಿದ್ದರಾಮಯ್ಯ ಅವರು, ಇದೀಗ ಹೈಕಮಾಂಡ್ ಸೂಚನೆಯಂತೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ಮುಂದಾಳತ್ವ ವಹಿಸುವ ಮೂಲಕ ಮತ್ತೊಮ್ಮೆ ತಾವು ‘ನುಡಿದಂತೆ ನಡೆದ ನಾಯಕ’ ಎಂಬುದನ್ನು ಸಾಬೀತುಪಡಿಸಿದ್ದಾರೆ” ಎಂದು ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು ಹೇಳಿದ್ದಾರೆ. ತಾಲೂಕಿನ ಗಡಿ ಭಾಗದಿಂದ ಆಯ್ಕೆಯಾಗಿರುವ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ನಮ್ಮ ಸರ್ಕಾರದಲ್ಲಿ ಉನ್ನತ ಮಟ್ಟದ ಸಚಿವ ಸ್ಥಾನ ನೀಡಬೇಕು ಎಂದು ಅವರು ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಎಚ್.ಡಿ. ಕೋಟೆ ಮತ್ತು ಸರಗೂರು ಎರಡು ತಾಲೂಕುಗಳು ಎರಡು ಕಣ್ಣುಗಳಿದ್ದಂತೆ. ಅವರು ಯಾವುದೇ ತಾರತಮ್ಯವಿಲ್ಲದೆ ಎರಡು ತಾಲೂಕುಗಳಲ್ಲೂ ನಿರಂತರವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಭಾಗದಲ್ಲಿ ಈ ಹಿಂದೆ ಎನ್. ರಾಜಯ್ಯ ಮತ್ತು ಎಂ. ಶಿವಣ್ಣ ಅವರನ್ನು ಹೊರತುಪಡಿಸಿದರೆ ಬೇರೆ ಯಾರೂ ಸಚಿವರಾಗಿಲ್ಲ. ಆದ್ದರಿಂದ ಸಾರ್ವಜನಿಕರ ಪರವಾಗಿ ಶಾಸಕರಿಗೆ…

Read More