ಕೊರಟಗೆರೆ : ನಾವು ಎಲ್ಲಿ ಕೆಲಸ ಮಾಡುತ್ತಿವೋ ಅಲ್ಲಿ ಸಾರ್ವಜನಿಕರು ನಮ್ಮ ಬಗ್ಗೆ ಒಳ್ಳೆಯ ಮಾತು ಹಾಡಿದಾಗ ಮಾತ್ರ ನಾವು ಜನಗಳ ಸೇವೆ ಮಾಡಿದಕ್ಕೂ ಸಾರ್ಥಕವಾಗಲಿದೆ. ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸಿ.ಎನ್.ದುರ್ಗ ಹೋಬಳಿಯ ಉಪ ತಹಶೀಲ್ದಾರ್ ಎ.ಜೆ.ರಾಜು ಹಾಗೂ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿದ ಶಾಂತಮ್ಮ ಅವರ ವಯೋನಿವೃತ್ತಿ ಹಿನ್ನಲೇ ಇಬ್ಬರಿಗೂ ಸನ್ಮಾನಿಸಿ ಮಾತನಾಡಿದರು.
ಸರಕಾರಿ ಕಲಸ ಎಲ್ಲರಿಗೂ ಒಲಿದು ಬರುವುದಿಲ್ಲ. ನಾವು ಮಾಡುವ ಕೆಲಸ ನಿಷ್ಠೆ ಹಾಗೂ ಪ್ರಮಾಣ ಕವಾಗಿ ಇದ್ದಾಗ ಮಾತ್ರ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ. ಇಂತಹ ಸಾಲಿನಲ್ಲಿ ಉಪ ತಹಸೀಲ್ದಾರ್ ಎ.ಜೆ.ರಾಜು ಹಾಗೂ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿದ ಶಾಂತಮ್ಮ ಅವರು ಸಾಕಷ್ಟು ಜನರು ಇವರ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಇವರಿಗೆ ವಹಿಸಿದ ಕೆಲಸಗಳನ್ನ ಚಾಚು ತಪ್ಪದೇ ಕೆಲಸ ಮಾಡಿ ನನ್ನ ಮುಂದೆ ವರದಿ ಮಾಡುತ್ತಿದ್ದರು ಇಂತವರ ಮಾರ್ಗದರ್ಶನ ಪಡೆದು ಅವರಂತೆ ಜನ ಮನ್ನಣೆ ಪಡೆಯಿರಿ ಎಂದು ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪ ತಹಶೀಲ್ದಾರ್ ಎ.ಜೆ.ರಾಜು ಅವರು ಸರಕಾರಿ ಕೆಲಸಕ್ಕೆ ಬಂದ ಮೇಲೆ ವರ್ಗಾವಣೆ ಹಾಗೂ ವಯೋನಿವೃತ್ತಿ ಇವೆರಡು ಸಹಜ ಪ್ರಕ್ರೀಯೆಗಳು. ನಾವು ಮೇಲಾಧಿಕಾರಿಗಳು ಏನೇ ಕೆಲಸ ಹೇಳಿದರೂ ನಮ್ಮ ಪ್ರಮಾಣ ಕ ಪ್ರಯತ್ನ ಕೆಲಸ ಮಾಡಬೇಕು. ನಾನು ಉಪ ತಹಸೀಲ್ದಾರ್ ಆಗಿ ಕೆಲಸ ಮಾಡುತ್ತಿರುವ ಸಿ.ಎನ್.ದುರ್ಗ ಹೋಬಳಿಯಲ್ಲಿ ಯಾವಾಗಲೂ ನಂಬರ್ ಒನ್ ನಲ್ಲಿ ಇರುತ್ತದೆ. ಏಕೆ ಎಂದರೆ ನಮ್ಮ ಕೆಳ ವರ್ಗದ ಅಧಿಕಾರಿಗಳ ಶ್ರಮದಿಂದ ಅದರಂತೆ ಎಲ್ಲಾ ಹೋಬಳಿಗಳಲ್ಲಿ ಅದೇ ರೀತಿ ಕೆಲಸ ಮಾಡದಾಗ ತಹಸೀಲ್ದಾರ್ ಅವರಿಗೆ ಹಾಗೂ ತಾಲೂಕಿಗೆ ಹೆಸರು ಬರಲು ಸಾಧ್ಯ ಎಂದು ತಿಳಿಸಿದರು.
ಇದೆ ವೇಳೆ ಕಂದಾಯ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಸಿ.ಎನ್.ದುರ್ಗ ಹೋಬಳಿಯ ಉಪ ತಹಸೀಲ್ದಾರ್ ಎ.ಜೆ.ರಾಜು ಹಾಗೂ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿದ ಶಾಂತಮ್ಮ ಅವರನ್ನ ಸನ್ಮಾನಿಸಿ ಗೌರವಿಸಿದರು.
ಇದೆ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ವಸಂತಣ್ಣ, ಸಿ.ಡಿ. ಪ್ರಭಾಕರ್, ಶಿರಸ್ತೇದಾರ್ ವೆಂಕಟೇಶ್, ವೆಂಕಟರಂಗನ್, ಮಂಜುನಾಥ್, ಆರ್.ಐ ಬಸವರಾಜು, ಸಲ್ಮಾನ್, ಪವನ್, ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


