nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜು. 29ರಂದು ಔರಾದ್‌ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ

    July 25, 2026

    ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ

    July 25, 2026

    ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!

    July 25, 2026
    Facebook Twitter Instagram
    ಟ್ರೆಂಡಿಂಗ್
    • ಜು. 29ರಂದು ಔರಾದ್‌ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ
    • ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ
    • ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!
    • ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ
    • ಧರ್ಮಸ್ಥಳ ಸಂಸ್ಥೆಯ ಸೇವೆ ಅನುಕರಣೀಯ: ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
    • ಸರ್ಕಾರಿ ಶಾಲೆಗಳ ಕಾರ್ಪೊರೇಟ್ ದತ್ತು ನೀತಿಗೆ ಎಐಡಿಎಸ್ ಒ ತೀವ್ರ ಆಕ್ರೋಶ: ಜನಾಂದೋಲನಕ್ಕೆ ಕರೆ
    • ಎಸ್‌ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
    • ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ
    ಕೊರಟಗೆರೆ July 25, 2026

    ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ

    By adminJuly 25, 2026No Comments2 Mins Read
    koratagere.jpg

    ಕೊರಟಗೆರೆ: ಕೊರಟಗೆರೆ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದ್ದು, ಕ್ಷೇತ್ರದ ಒಟ್ಟು 2,09,495 ಮತದಾರರಿಗೆ ಗಣಕೀಯ ನಮೂನೆ ಪತ್ರಗಳನ್ನು ತಲುಪಿಸುವ ಮೂಲಕ ಶೇಕಡಾ 100 ರಷ್ಟು ಪ್ರಗತಿ ಸಾಧಿಸಲಾಗಿದೆ. ಈಗಾಗಲೇ 1,68,482 (ಶೇ.82.25) ಮತದಾರರ ಡಿಜಿಟಲ್ ಸೇರ್ಪಡೆ ಪೂರ್ಣಗೊಂಡಿದೆ ಎಂದು ಮತದಾನ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದ್ದಾರೆ.

    ಕೊರಟಗೆರೆ ಪಟ್ಟಣದ 3ನೇ ವಾರ್ಡಿನಲ್ಲಿ ನಡೆಯುತ್ತಿರುವ ಮನೆ ಮನೆ ಬಿಎಲ್ ಓ (BLO) ಭೇಟಿ ಕಾರ್ಯಕ್ರಮಕ್ಕೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.

    8 ದಿನಗಳಲ್ಲಿ 100% ಡಿಜಿಟಲೀಕರಣದ ವಿಶ್ವಾಸ:

    ಕ್ಷೇತ್ರದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪರಿಷ್ಕರಣೆ ಕಾರ್ಯ ವೇಗವಾಗಿ ನಡೆಯುತ್ತಿದೆ. ಕೆಲಸ ನಿಧಾನವಾಗಿರುವ ಅಥವಾ ಗೊಂದಲವಿರುವ ಭಾಗಗಳಲ್ಲಿ ಹೆಚ್ಚುವರಿ ಬಿಎಲ್ಓ ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮುಂದಿನ 8 ದಿನಗಳ ಒಳಗಾಗಿ ಶೇ.100 ರಷ್ಟು ಡಿಜಿಟಲ್ ಸೇರ್ಪಡೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನೋಂದಣಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

    ಸ್ಥಳೀಯರ ಸಹಕಾರ ಅಗತ್ಯ: ತಹಶೀಲ್ದಾರ್ ಮಂಜುನಾಥ್.ಕೆ

    ಕೊರಟಗೆರೆ ತಹಶೀಲ್ದಾರ್ ಮಂಜುನಾಥ್.ಕೆ ಮಾತನಾಡಿ, “ಮತದಾರರ ಪಟ್ಟಿ ಶುದ್ಧೀಕರಣ ಮತ್ತು ಪರಿಷ್ಕರಣೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಮನೆ ಮನೆಗೆ ಬರುವ ಅಧಿಕಾರಿಗಳಿಗೆ ಮೃತರ, ಸ್ಥಳಾಂತರಗೊಂಡವರ ಹಾಗೂ ನಕಲಿ ಮತದಾರರ ಸರಿಯಾದ ಮಾಹಿತಿ ನೀಡಬೇಕು” ಎಂದು ಮನವಿ ಮಾಡಿದರು.

    7,448 ಮತದಾರರ ಮಾಹಿತಿ ಪತ್ತೆ:

    ಪ್ರಸ್ತುತ ನಡೆಸಿದ ಪರಿಶೀಲನೆಯಲ್ಲಿ ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣ ಭಾಗ ಸೇರಿ ಒಟ್ಟು 7,448 ಬದಲಾವಣೆಗಳ ಮಾಹಿತಿ ಲಭ್ಯವಾಗಿದೆ:

    • ಸಾವು: 3,398

    • ಶಾಶ್ವತ ಸ್ಥಳಾಂತರ: 3,180

    • ನಕಲಿ ನಮೂದು: 40

    • ಪತ್ತೆಯಾಗದವರು: 72

    • ಹೊಸ ಸೇರ್ಪಡೆ: 758

    ಈ ಮಾಹಿತಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಮರು ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.

    ಸಾರ್ವಜನಿಕರ ನೆರವಿಗೆ ಸಹಾಯವಾಣಿ ಕೇಂದ್ರ:

    “ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ದೂರುಗಳಿಗಾಗಿ ಕೊರಟಗೆರೆಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.”

    — ಮಂಜುನಾಥ್.ಕೆ, ತಹಶೀಲ್ದಾರ್, ಕೊರಟಗೆರೆ

    • ಗ್ರಾಮೀಣ ಭಾಗದ ಸಹಾಯವಾಣಿ: 08138-232153

    • ಪಟ್ಟಣ ಭಾಗದ ಸಹಾಯವಾಣಿ: 08138-295546

    ಈ ಪರಿಶೀಲನೆ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಸಿಇಓ ಉಮೇಶ್, ಚುನಾವಣಾ ಶಿರಸ್ತೇದಾರ್ ಮಂಜುನಾಥ್, ಬಸವರಾಜು, ನಕುಲ್, ಅರುಣ್, ಕಾಂಗ್ರೆಸ್ ಮುಖಂಡ ಅರವಿಂದ್, ಜೆಡಿಎಸ್ನ ಲಕ್ಷ್ಮಣ್, ಚಿಕ್ಕರಂಗಯ್ಯ, ರಂಗಣ್ಣ, ಬಿಜೆಪಿಯ ಮಾರುತಿ ಹಾಗೂ ಜನಪ್ರತಿನಿಧಿಗಳಾದ ಕಲೀಂವುಲ್ಲಾ, ಸೈಯದ್ ಸೈಪುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    Provided by
    Provided by
    admin
    • Website

    Related Posts

    ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!

    July 25, 2026

    ಧರ್ಮಸ್ಥಳ ಸಂಸ್ಥೆಯ ಸೇವೆ ಅನುಕರಣೀಯ: ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

    July 25, 2026

    ತ್ಯಾಜ್ಯವಲ್ಲ ಕರಟ, ರೈತರಿಗೆ ಬಂಪರ್ ಹಣ! ಕೊಬ್ಬರಿ ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಬೆಳೆಗಾರರ ಮೊಗದಲ್ಲಿ ಮಂದಹಾಸ

    July 19, 2026

    Leave A Reply Cancel Reply

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಜು. 29ರಂದು ಔರಾದ್‌ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ

    July 25, 2026

    ಔರಾದ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಔರಾದ್ ತಾಲೂಕು ಘಟಕದ ವತಿಯಿಂದ ಜುಲೈ 29ರಂದು ಬೆಳಿಗ್ಗೆ 10:30ಕ್ಕೆ ಪತ್ರಿಕಾ ದಿನಾಚರಣೆ…

    ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ

    July 25, 2026

    ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!

    July 25, 2026

    ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ

    July 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.