Subscribe to Updates
Get the latest creative news from FooBar about art, design and business.
- “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು
- 26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!
- ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!
- ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: KRS ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ವಿರುದ್ಧ ಕೇಸು ದಾಖಲು
- ಸಿರಾ: ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಬ್ಲಾಕ್ ಕಾಂಗ್ರೆಸ್ ಒತ್ತಾಯ
- ತುಮಕೂರು ವಿಶ್ವವಿದ್ಯಾನಿಲಯ: ವಿವಿಧ ಪದವಿಗಳ ಉಳಿಕೆ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
- ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
- ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ
Author: admin
ತುಮಕೂರು: ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಜನರು ಮೇಲ್ನೋಟಕ್ಕೆ ಆರೋಗ್ಯವಂತರಾಗಿ ಕಂಡರೂ, ಒಳಗಿನಿಂದ ಮಾನಸಿಕವಾಗಿ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್. ನಿಂಗಪ್ಪ ಕಳವಳ ವ್ಯಕ್ತಪಡಿಸಿದ್ದಾರೆ. ತುಮಕೂರು ತಾಲ್ಲೂಕಿನ ಹೊನ್ನುಡಿಕೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನರ ಮತ್ತು ಮನೋರೋಗ ಚಿಕಿತ್ಸೆ ಹಾಗೂ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸೇಜಲ್ ನ್ಯೂ ಲೈಫ್ ಫೌಂಡೇಷನ್ ಹಾಗೂ ಸ್ನೇಹ ಮನೋವಿಕಾಸ ಕೇಂದ್ರದ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಭಾಗದ ಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ನರ ಸಂಬಂಧಿ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು. ಜನರ ಆರೋಗ್ಯ ರಕ್ಷಣೆಯಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ. ಸಾರ್ವಜನಿಕರು ಇವುಗಳ ಪ್ರಯೋಜನ ಪಡೆದುಕೊಂಡು ಸುದೃಢ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ನಿಂಗಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ವೈದ್ಯರಾದ ಪದ್ಮಾಕ್ಷಿ ಲೋಕೇಶ್, ಚೇತನ್,…
ಮಧುಗಿರಿ: ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರವು ಅನ್ನದಾತರು ಮತ್ತು ಬಡವರ ಪಾಲಿಗೆ ಮಾರಕವಾಗಲಿದೆ ಎಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗಿರೇಗೌಡನಹಳ್ಳಿ ಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿದರೆ ಯೂನಿಟ್ ದರ ಏರಿಕೆಯಾಗಲಿದೆ. ಅಲ್ಲದೆ, ಕೃಷಿ ಪಂಪ್ ಸೆಟ್ ಗಳಿಗೂ ಇವುಗಳನ್ನು ಅಳವಡಿಸುವ ಹುನ್ನಾರ ನಡೆದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಜೆಸ್ಕಾಂ ಈಗಾಗಲೇ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಬಯಲು ಸೀಮೆಯ ಪ್ರಮುಖ ಬೆಳೆಯಾದ ಹುಣಸೆ ಕೃಷಿಯು ಕೂಲಿ ಮತ್ತು ಸಂಸ್ಕರಣಾ ವೆಚ್ಚದಿಂದಾಗಿ ನಷ್ಟದಲ್ಲಿದೆ. ಆದ್ದರಿಂದ ಹುಣಸೆಯನ್ನು ‘ಫಸಲ್ ಭೀಮಾ’ ಯೋಜನೆಯಡಿ ತರಬೇಕು ಮತ್ತು ಜಿಲ್ಲೆಯಲ್ಲಿ ಹುಣಸೆ ಸಂಸ್ಕರಣಾ ಘಟಕ ಹಾಗೂ ಪ್ರತ್ಯೇಕ…
ವೈ.ಎನ್. ಹೊಸಕೋಟೆ (ಪಾವಗಡ): ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ಕೇಂದ್ರದ ಹೃದಯಭಾಗದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಆವರಣವು ಇತ್ತೀಚೆಗೆ ಮದ್ಯಪಾನಿಗಳ ಅಡ್ಡೆಯಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಾಲಾ ಆವರಣದಲ್ಲಿ ಪ್ರತಿನಿತ್ಯ ರಾತ್ರಿ ವೇಳೆ ಕಿಡಿಗೇಡಿಗಳು ಮದ್ಯಪಾನ ಮಾಡಿ, ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಮರುದಿನ ಶಾಲೆಗೆ ಬರುವ ಶಿಕ್ಷಕರು ಮತ್ತು ಪುಟ್ಟ ವಿದ್ಯಾರ್ಥಿಗಳು ಈ ಮದ್ಯದ ಬಾಟಲಿಗಳು, ಗುಟ್ಕಾ ಪ್ಯಾಕೆಟ್‌ಗಳು ಮತ್ತು ಇತರ ಕಸವನ್ನು ಸ್ವಚ್ಛಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಶಾಲಾ ಸಂಕೀರ್ಣದಲ್ಲಿ ಉರ್ದು ಶಾಲೆ, ಸಾರ್ವಜನಿಕ ಗ್ರಂಥಾಲಯ ಹಾಗೂ ವಾಲಿಬಾಲ್ ಕ್ರೀಡಾಂಗಣವೂ ಇದೆ. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಓದುಗರು, ಕ್ರೀಡಾಪಟುಗಳು ಹಾಗೂ ಪೋಷಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಸಂಜೆಯಾಗುತ್ತಿದ್ದಂತೆ ಕಿಡಿಗೇಡಿಗಳು ಶಾಲೆಯ ಆವರಣ ಗೋಡೆ ಹಾಗೂ ಗೇಟ್ ಹಾರಿ ಒಳಬಂದು, ರಂಗಮಂದಿರ ಮತ್ತು ಶಾಲಾ ಕಟ್ಟಡಗಳ ಬಳಿ ಕುಳಿತು ಮದ್ಯಪಾನ, ಧೂಮಪಾನದಂತಹ ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಮದ್ಯದ…
ಕೊರಟಗೆರೆ: ಏಪ್ರಿಲ್ 1 ರಿಂದ ಆರಂಭವಾಗಿರುವ ಸ್ವಯಂ ಗಣತಿ ಕಾರ್ಯದಲ್ಲಿ ಸಾರ್ವಜನಿಕರು ಮೂಲಕ ಅಭಿವೃದಿಗೆ ಭಾಗವಹಿಸುವ ಕೈ ಜೋಡಿಸಬೇಕೆಂದು ತಹಶೀಲಾರ್ ಕೆ.ಮಂಜುನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅವರು ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮೊಬೈಲ್ ಮೂಲಕ ಸಾರ್ವಜನಿಕರು ಸ್ವಯಂ ಗಣತಿ ಮಾಡುವುದು ಹೇಗೆ ಎಂಬುದನ್ನು ಖುದ್ದು ತಿಳಿಸಿದ ಅವರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ಭಾರತ ಸರ್ಕಾರ ಜನಗಣತಿ ಮಾಡುತ್ತಿದೆ. ಅದರಂತೆ ಈಗ 2027 ರ ಜನ ಗಣತಿ ಏಪ್ರಿಲ್ 1 ರಿಂದ ಪ್ರಾರಂಭವಾಗಿ ಏಪ್ರಿಲ್ 15 ರವರೆಗೆ ಸ್ವಯಂ ಗಣತಿ ನಂತರ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಮಾಡಲಿದ್ದಾರೆ ಎಂದರು. ಕೊರಟಗೆರೆ ತಾಲ್ಲೂಕಿನ 388 ಗ್ರಣಗಳಿದ್ದು, ಗಣತಿ ಕಾರ್ಯಕ್ಕೆ 54 ಸಿಬ್ಬಂದಿಯನ್ನು ಮತ್ತು 8 ಅಧಿಕಾರಿಗಳನ್ನು ಹಾಗೂ ಪುರಸಭಾ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು, ಗಣತಿ ಕಾರ್ಯಕ್ಕೆ 10 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 2011ರ ಗಣತಿಯನ್ನು ತಾಳೆ ನೋಡಿಕೊಂಡು ಗಣತಿಕಾರ್ಯ ಮಾಡಲಾಗುವುದು. ಈ ಗಣತಿ…
ತಿಪಟೂರು: ಸತತ 31 ವರ್ಷಗಳ ಮಾಧ್ಯಮ ಕ್ಷೇತ್ರದ ದೀರ್ಘ ಸೇವೆಯ ಜೊತೆಯಲ್ಲೇ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಮುದ್ರಣ ಮತ್ತು ದೃಶ್ಯ ಮಾಧ್ಯಮ ಸೇವೆ ಮಾಡಿರುವ ಇವರ ಆದಿತ್ಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಿಸಿದ ಕೈಗಾರಿಕೆಗಳ ಸಬ್ಸಿಡಿ ಹಗರಣ, ಮಟ್ಕಾ ಆನ್ ಲೈನ್ ಬೆಟ್ಟಿಂಗ್ ಮತ್ತು ಬಿಟ್ ಕಾಯಿನ್ ಕುರಿತ ತನಿಖಾ ವರದಿಗಳಲ್ಲಿ ಸರ್ಕಾರದ ಕೋಟ್ಯಾಂತರ ರೂಪಾಯಿ ವಂಚನೆಯಾಗುತ್ತಿರುವ ಸಬ್ಸಿಡಿ ಹಗರಣ ಕುರಿತ ಸಮಗ್ರ ತನಿಖಾ ವರದಿಗೆ ಕೆಯುಡಬ್ಲ್ಯೂಜೆ ರಾಜ್ಯ ಮಟ್ಟದ ಟಿ ಕೆ ಮಲಗೊಂಡ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜಿಲ್ಲಾ ಮಟ್ಟದ ತುಮಕೂರು ವಾರ್ತೆಯಿಂದ 1995 ರಲ್ಲಿ ತಿಪಟೂರು ತಾಲ್ಲೂಕು ವರದಿಗಾರ/ಪ್ರತಿನಿಧಿಯಾಗಿ ಮಾದ್ಯಮ ಸೇವೆ ಆರಂಭಿಸಿ ನಂತರ ಸಂಜೆವಾಣಿ (1996 — 1999) ಜನ ವಾಹಿನಿ(1998), ಆದಿತ್ಯ ವಾಣಿ ವಾರ ಪತ್ರಿಕೆ(1999–2022), ವಿಜಯ ಕರ್ನಾಟಕ (2000–2012), ಕನ್ನಡ ಸೇನೆ ರಾಜ್ಯ ಮಟ್ಟದ ವಾರ ಪತ್ರಿಕೆ (2005–2012), ಅಮೋಘ ವಾರ್ತೆ, ತುಮಕೂರು (2006–2015), ಸಿಇಓ ಆಗಿ ರಾಜ್ಯ ಮಟ್ಟದ ಮಯೂರ…
ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ. ಶಿಲ್ಪಾ ಶ್ರೀನಿವಾಸ್ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ. ಬಂಗಾರಪೇಟೆ ತಾಲ್ಲೂಕಿನ ಶ್ರೀ ಶಿವಶನೈಶ್ಚರ ದೇವಾಲಯದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ರವರು “ದೇವರು ಸೃಷ್ಠಿಸೋ ಸಿನಿಮಾದಲ್ಲಿ ನಾವೆಲ್ಲಾ ಪಾತ್ರಧಾರಿಗಳು” ಎಂಬ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಚಿತ್ರೀಕರಣ ಮುಕ್ತಾಯವಾಯಿತು. ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥಾವಸ್ತು ವಿರುವ ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ ಅಭಿಜಿತ್, ಶಿಲ್ಪಾ ಶ್ರೀನಿವಾಸ್, ಶೋಭರಾಜ್, ನಾಗೇಂದ್ರ ಅರಸ್, ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಪ್ರಿಯ, ಪಂಚಾಕ್ಷರಯ್ಯ, ಮರಿಸ್ವಾಮಿ, ಅಮೃತ ಕಾಳೆ,ಶಂಖನಾದ ಆಂಜಿನಪ್ಪ, ಮಾಸ್ಟರ್ ವೀರ ಧನುಷ್, ಅನ್ನಪೂರ್ಣ, ನಂದಿನಿ ಕಮ್ಮಯ್ಯ, ಧನ್ಯ ಭೂಮಿಕಾ ಶ್ರೀ.ಬೇಬಿ ಶಾರಿಕಾ ಕಾರ್ತೀಕ್, ಲಕ್ಷಿತ ಮನೋ ಮೊದಲಾದವರು ನಟಿಸಿದ್ದಾರೆ. ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ರಾಜೀವ್ ಕೃಷ್ಣ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಾಹಸ ಮತ್ತು ನೃತ್ಯ ನಿರ್ದೇಶನದ ಹೊರೆ ಹೊತ್ತಿರುವುದು ವಿಶೇಷ. ಛಾಯಾಗ್ರಹಣ ಪ್ರಮೋದ್, ಸಂಕಲನ ಡಿ ಮಲ್ಲಿ, ಸಂಗೀತ ಅನಿರುದ್ಧ ಶಾಸ್ತ್ರಿ, ಸಾಹಿತ್ಯ…
ಊರು: ಸುರಪುರವೆಂಬ ಹಳ್ಳಿ, ಮಿತ್ರರ ಹೆಸರು: ಸೋಮ, ಭೀಮ, ಮತ್ತು ಚಾಮ. ವರ್ಗ: ಸ್ವಲ್ಪ ಮಧ್ಯಮ ವರ್ಗದ ಬಡತನದ ಜೀವನ, ಮಾತಿಗೆ ಸೇರುವ ಜಾಗ: ಊರ ಹೊರಗಿನ ಅರಳಿ ಕಟ್ಟೆ. ಚಾಮ: (ಆತುರದಿಂದ ಓಡಿಕೊಂಡು ಬಂದು ಸೋಮನ ಮನೆ ಮುಂದೆ ಇದ್ದ ಸೋಮನನ್ನು ಕುರಿತು..) ಲೇ ಸೋಮ ಭೀಮನಿಗೆ ಹುಚ್ಚು ನಾಯಿ ಕಡಿದಿದೆಯಂತೆ ಬಾರೊ ಹೋಗಿ ನೋಡಿಕೊಂಡು ಬರುವ..(ಗಾಬರಿ) ಸೋಮ: ಹೌದನ್ಲ.. ಅಯ್ಯೋ ಫ್ರಂಡು ಗೆ ಇಂತ ಸ್ಥಿತಿ ಬಂತೇ? ಸರಿ ನಡಿ ಹೋಗುವ ಪಾಪ ಟ್ರೀಟ್ ಮೆಂಟ್ ಗ್ರೀಟ್ ಮೆಂಟ್ ತಗೊಂಡವನೋ ಇಲ್ವೋ ನೋಡವ ನಡಿ..(ಓಡೋಡಿ ಕೊಂಡು ಭೀಮನ ಮನೆಗೆ ಬರುತ್ತಾರೆ..) ಸೋಮ: ( ಕಾಲು ಹಿಡಿದುಕೊಂಡು ಕೂತಿದ್ದ ಭೀಮನನ್ನು ನೋಡಿ..) ಅಯ್ಯೋ ಯಾಕ್ಲಾ ಹೀಗಾಯ್ತು, ಹುಚ್ಚು ನಾಯಿ ಕಚ್ಚೈತಂತೆ…. ಭೀಮ: ಯಾವನ್ಲ ಹೇಳಿದ್ದು ಹುಚ್ಚು ನಾಯಿ ಕಚ್ಚೈತೆ ಅಂತ.. ಹುಚ್ಚು ನಾಯಿ ಅಲ್ಲ ಕಣ್ಲಾ ಬೀದಿ ನಾಯಿ ಕಚ್ಚಿರದು.. ಸೋಮ: ಹೌದನ್ಲ..ಯಾವ ಮೋಟ್ ಗೋಡೆ ಹಾರಕ್ಕೆ ಹೋಗಿದ್ಲಾ…? ಭೀಮ:…
ತುಮಕೂರು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಟ್ಟಿ ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯ ವಿವಿಧ ತಾಂಡಾ ಮತ್ತು ಹಟ್ಟಿಗಳ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಜಿಲ್ಲಾ ಪಂಚಾಯಿತಿ ವತಿಯಿಂದ ನಿವೇಶನ ರಹಿತರಿಗೆ 20 ಸಾವಿರ ನಿವೇಶನಗಳನ್ನು ನೀಡಲು ಪ್ರಯತ್ನ ನಡೆಯುತ್ತಿದ್ದು, ಇದನ್ನು ಗ್ರಾಮ ಪಂಚಾಯಿತಿಗಳ ಮೂಲಕ ವಿತರಿಸಲಾಗುವುದು ಎಂದು ಜಿ.ಪಂ ಸಿಇಒ ಬಿ.ವಿ. ಅಶ್ವಿಜ ಮಾಹಿತಿ ನೀಡಿದರು. 1971ರ ಭಾರತ–ಪಾಕಿಸ್ತಾನ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಡಾ. ಬಾಬು ಜಗಜೀವನ್ ರಾಮ್ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ಮತ್ತು ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಅವರು ನೀಡಿದ ಕೊಡುಗೆಯನ್ನು ಜಿಲ್ಲಾಧಿಕಾರಿಗಳು ಸ್ಮರಿಸಿದರು. ಬಾಬು…
ತುರುವೇಕೆರೆ: ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ದಲಿತ ಸಂಘರ್ಷ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಜಯಂತಿಗಳನ್ನು ಆಚರಿಸುವ ನೈತಿಕ ಅರ್ಹತೆ ಇಲ್ಲ ಎಂದು ಸಮಿತಿಯ ಮುಖಂಡರು ಕಿಡಿಕಾರಿದ್ದಾರೆ. ಪಟ್ಟಣದ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನ್ ರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್, ಸರ್ಕಾರದ ಧೋರಣೆಯನ್ನು ಖಂಡಿಸಿದರು. ಹಾವನೂರು, ಕಾಂತರಾಜು, ನಾಗಮೋಹನ್ ದಾಸ್ ಹಾಗೂ ಎ.ಜೆ.ಸದಾಶಿವ ಆಯೋಗದ ವರದಿಗಳ ಪ್ರಕಾರ ರಾಜ್ಯದಲ್ಲಿ ಮಾದಿಗ ಸಮುದಾಯದವರು ಬಹುಸಂಖ್ಯಾತರಾಗಿದ್ದಾರೆ. ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರೂ, ಕೆಲವು ಸಚಿವರ ಹಿತಾಸಕ್ತಿ ಮತ್ತು ವಿರೋಧದಿಂದಾಗಿ ಪ್ರಕ್ರಿಯೆ ತಡೆಹಿಡಿಯಲಾಗಿದೆ ಎಂದು ಅವರು ದೂರಿದರು. ಒಳ ಮೀಸಲಾತಿ ಜಾರಿಯಾಗದ ಕಾರಣ ಸುಮಾರು 56,419 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕುಂಠಿತಗೊಂಡಿದ್ದು,…
ತಿಪಟೂರು: ನಗರದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರ 119ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ. ಷಡಕ್ಷರಿ ಅವರು, “ಬಾಬು ಜಗಜೀವನರಾಂ ಅವರು ಅಲ್ಪಸಂಖ್ಯಾತರು ಹಾಗೂ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಧೀಮಂತ ನಾಯಕ. ಬಾಬೂಜಿಯವರು ಬಾಲ್ಯದಲ್ಲಿಯೇ ಅನ್ಯಾಯ, ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಗುಣವನ್ನು ಮೈಗೂಡಿಸಿಕೊಂಡಿದ್ದರು. ಜಾತಿ ತಾರತಮ್ಯವನ್ನು ಹೋಗಲಾಡಿಸಿ ಶೋಷಿತರ ಬದುಕಿನಲ್ಲಿ ಬೆಳಕು ಮೂಡಿಸಲು ಅವರು ನಡೆಸಿದ ಹೋರಾಟ ಅವಿಸ್ಮರಣೀಯ,” ಎಂದು ಬಣ್ಣಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ ವಿಪಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ಮಾತನಾಡಿ, “ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರ ಕೊಡುಗೆ ಅಪಾರ. ತಮ್ಮ ಕುಲದ ಬಗ್ಗೆ ಅವಹೇಳನ ಮಾಡಿದವರಿಗೆ ಸ್ವಾಭಿಮಾನದ ಮೂಲಕವೇ ಅವರು ಪ್ರತ್ಯುತ್ತರ…