Subscribe to Updates
Get the latest creative news from FooBar about art, design and business.
- ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಅವರಿಗೆ ರಾಜ್ಯಮಟ್ಟದ ‘ಕನ್ನಡ ಜಂಗಮ’ ಪ್ರಶಸ್ತಿ
- KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್: ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ
- ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು
- ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ
- ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆ: ರಾಜ್ಯ ಉಪಾಧ್ಯಕ್ಷರಾಗಿ ಎಂ. ದಾಸಪ್ಪ ಆಗತ್ತೂರು ನೇಮಕ
- ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ದ್ರೋಹ ಬಗೆದ ಸರ್ಕಾರ!
- ಅಕ್ರಮ ಸಾರಾಯಿ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಿ: ಗೌತಮ್ ಪಿ. ಮೇತ್ರೆ ಆಗ್ರಹ
- ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್
Author: admin
ಬೀದರ್: ಇಲ್ಲಿನ ಹೊರವಲಯದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (KVAFSU) ನಕಲಿ ಬಿಲ್ ಸೃಷ್ಟಿಸಿ ಬರೋಬ್ಬರಿ ₹45 ಕೋಟಿಗೂ ಅಧಿಕ ಹಣದ ಹಗರಣ ಎಸಗಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ನಿವೃತ್ತ ಕಂಟ್ರೋಲರ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು: ಎಚ್. ಡಿ. ನಾರಾಯಣಸ್ವಾಮಿ (ವಿಶ್ರಾಂತ ಕುಲಪತಿ) ಕೆ. ಎಲ್. ಸುರೇಶ್ (ನಿವೃತ್ತ ಪ್ರಭಾರ ಹಣಕಾಸು ನಿಯಂತ್ರಣಾಧಿಕಾರಿ) ಮೃತ್ಯುಂಜಯ ಹಿರೇಮಠ (ವಿಶ್ವವಿದ್ಯಾಲಯದ ಎಫ್‌ಡಿಎ) ಬೊಪ್ಪಣ್ಣ (ಬೆಂಗಳೂರು ಎಂಟರ್‌ಪ್ರೈಸಸ್ ಮಾಲೀಕರು) ಮಂಜುನಾಥ (ಬೆಂಗಳೂರು ಎಂಟರ್‌ಪ್ರೈಸಸ್ ಮಾಲೀಕರು) ರಾಮಗೊಂಡ ಕಳೆದ 2017–18ರ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ₹45 ಕೋಟಿಗೂ ಅಧಿಕ ಮೊತ್ತದ ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ನಿಯಮಬಾಹಿರವಾಗಿ ಅಕ್ರಮ ಎಸಗಲಾಗಿತ್ತು. ಈ ಅವಧಿಯಲ್ಲಿ ಎಚ್. ಡಿ. ನಾರಾಯಣಸ್ವಾಮಿ ಅವರು ಕುಲಪತಿಯಾಗಿ ಹಾಗೂ ಕೆ.ಎಲ್.ಸುರೇಶ್ ಅವರು ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಶ್ವವಿದ್ಯಾಲಯದ ಎಫ್ ಡಿಎ…
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 58 ತಾಂಡಾಗಳ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC), ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ 35ಕ್ಕೂ ಹೆಚ್ಚು ಲಂಬಾಣಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ಅದ್ಧೂರಿಯಾಗಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ಸೇವಾಲಾಲ್ ಮರಿಯಮ್ಮ ತಾಂಡಾಭಿವೃದ್ಧಿ ಟ್ರಸ್ಟ್ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಜಯಂತೋತ್ಸವ ಸೇವಾ ಸಮಿತಿಯ ಜಂಟಿ ಸಹಯೋಗದಲ್ಲಿ ಈ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಧಕ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಟ್ರೋಫಿ, ಶ್ರೀ ಸೇವಾಲಾಲ್ ಮಹಾರಾಜರ ಚಿತ್ರವಿರುವ ಶಾಲು, ಗುಣಮಟ್ಟದ ಬ್ಯಾಗ್, ನೀರಿನ ಬಾಟಲ್, ಫೈಲ್, ಪುಸ್ತಕಗಳು ಸೇರಿದಂತೆ ವಿವಿಧ ವಿದ್ಯಾಸಾಮಗ್ರಿಗಳನ್ನು ನೀಡಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಲಾ 3,000 ರೂಪಾಯಿ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಣ್ಯರು, “ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ,…
ಬಾವಿ ಕಪ್ಪೆ ಬಾವಿಯೊಳಗೆ “ಇದೇ ಜಗ”ವೆಂದಿತಯ್ಯಾ ಸಾಗರ ಕಂಡ ಮೊಸಳೆಯೂ “ನನ್ನದೇ ಲೋಕ” ಎಂದಿತಯ್ಯಾ। ಸಿಂಹ ತಾನು ಕಾಡಿನ ರಾಜ ಎಂದು ಗರ್ವ ಪಟ್ಟಿತಯ್ಯಾ ಸಣ್ಣ ಇಲಿಯ ಬಲೆಯೊಳಗೆ ಬಿದ್ದು ಮೌನಗೊಂಡಿತಯ್ಯಾ। ಓಟದ ಮೊಲ ಗೆಲುವು ತನ್ನದು ಎಂದು ನಿದ್ರೆ ಹೊತ್ತಿತಯ್ಯಾ ಛಲದ ಆಮೆ ಹೆಜ್ಜೆ ಬಿಡದೆ ಗುರಿಯ ತಲುಪಿತಯ್ಯಾ। ಅಜ್ಜಿ ತನ್ನ ಕೋಳಿಯ ಕೂಗೇ ಜಗದ ಬೆಳಕು ಎಂದಳಯ್ಯಾ ತನ್ನೆಲ್ಲ ಉರಿದು ಹಣತೆ ಮಾತ್ರ ಇರುಳ ಕಳೆದು ನಿಂತಿತಯ್ಯಾ। ಮೊಸಳೆ ಕುತಂತ್ರ ಮಾಡಿ ಕೋತಿಯ ಹೃದಯ ಬೇಡಿತಯ್ಯಾ ಬುದ್ಧಿಯ ಕೋತಿ ಮಾತಿನಲಿ ತನ್ನ ಪ್ರಾಣ ಉಳಿಸಿತಯ್ಯಾ। ಗೋವು ಮಾತು ಕೊಟ್ಟ ಬಳಿಕ ಹುಲಿಯ ಮುಂದೆ ನಿಂತಿತಯ್ಯಾ ಸತ್ಯದ ಶಕ್ತಿ ಕಂಡ ಹುಲಿ ತನ್ನ ಹೃದಯ ಕರಗಿತಯ್ಯಾ। ಮುಂಗುಸಿಯನು ಕೊಂದ ತಾಯಿ ದುಡುಕಿ ಕಣ್ಣೀರು ಸುರಿತಯ್ಯಾ ಮಗುವ ಕಾಯ್ದ ಹಾವಿನ ಶವ ತೊಟ್ಟಿಲ ಬಳಿಯ ಕಂಡಿತಯ್ಯಾ। “ನಾನೆ ಮೇಲು” ಎಂದ ಮನುಜ ಭೂಮಿಯೆಲ್ಲ ಸುತ್ತಿತಯ್ಯಾ ದೇವನಿಗಿಂತ ತಾನೇ ದೊಡ್ಡ ಎಂದು ಅಹಂಕಾರ…
ತುರುವೇಕೆರೆ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದ ನಿಗೂಢ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ತುರುವೇಕೆರೆ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಪ್ರಕರಣ ನಡೆದು 4 ತಿಂಗಳ ಬಳಿಕ ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಬೆಚ್ಚಿಬೀಳಿಸುವ ಸತ್ಯ ಹೊರಬಂದಿದ್ದು, ಅಕ್ರಮ ಸಂಬಂಧ ಹೊಂದಿದ್ದ 53 ವರ್ಷದ ಪ್ರಿಯಕರನೇ ಈ ಭೀಕರ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಕಳೆದ ಜನವರಿ 30ರಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಂಚೆಹಳ್ಳಿ ಅರಣ್ಯ ಪ್ರದೇಶದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಹಂತಕರು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮುಖ ಮತ್ತು ದೇಹವನ್ನು ಸುಟ್ಟು ಹಾಕಿದ್ದರಿಂದ, ಮೃತದೇಹ ಯಾರದ್ದು ಎಂದು ಪತ್ತೆ ಹಚ್ಚುವುದು ಪೊಲೀಸರಿಗೆ ಆರಂಭದಲ್ಲಿ ದೊಡ್ಡ ಸವಾಲಾಗಿತ್ತು. ಇದಕ್ಕೂ ಮುನ್ನ, ಅಂದರೆ ಜನವರಿ 28 ರಂದೇ ಶ್ವೇತಾ (26) ಎಂಬ ವಿವಾಹಿತ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದರು. ನಾಪತ್ತೆಯಾದ ಶ್ವೇತಾಳ ಪೋಷಕರನ್ನು ಸಂಪರ್ಕಿಸಿದ ಪೊಲೀಸರು, ಆಕೆಯ ತಾಯಿಯ…
ನವದೆಹಲಿ/ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ’ಗೆ ಕೇಂದ್ರ ಗೃಹ ಸಚಿವಾಲಯ ದೊಡ್ಡ ಶಾಕ್ ನೀಡಿದೆ. ದ್ವೇಷ ಭಾಷಣ ನಿಯಂತ್ರಣಕ್ಕೆ ದೇಶದಲ್ಲಿ ಈಗಾಗಲೇ ಇರುವ ಕಾನೂನು ವ್ಯವಸ್ಥೆಯೇ ಸಾಕಷ್ಟು ಸಮರ್ಪಕವಾಗಿದೆ. ಹೀಗಾಗಿ ಹೊಸ ಕಾಯ್ದೆಯ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಮಸೂದೆಗೆ ಬ್ರೇಕ್ ಹಾಕಿದೆ. ಇದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ. ಮೇ 12ರಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಕಳುಹಿಸಿರುವ ಪತ್ರದಲ್ಲಿ, “ರಾಜ್ಯ ಸರ್ಕಾರವು ಈ ಮಸೂದೆಯ ಮೂಲಕ ಪರಿಹರಿಸಲು ಪ್ರಯತ್ನಿಸುತ್ತಿರುವ ವಿಷಯಗಳು ಈಗಾಗಲೇ ಹೊಸದಾಗಿ ಜಾರಿಗೆ ಬಂದಿರುವ ‘ಭಾರತೀಯ ನ್ಯಾಯ ಸಂಹಿತೆ (BNS) 2023’ ಮತ್ತು ಇತರ ಕೇಂದ್ರ ಕಾನೂನುಗಳ ವ್ಯಾಪ್ತಿಯಲ್ಲಿ ಸೇರಿವೆ. ಹೀಗಾಗಿ ರಾಜ್ಯಗಳು ಪ್ರತ್ಯೇಕವಾಗಿ ಇಂತಹ ಕಾನೂನುಗಳನ್ನು ಜಾರಿಗೊಳಿಸುವುದರಿಂದ ಕಾನೂನುಗಳ ಪುನರಾವರ್ತನೆಯಾಗುತ್ತದೆ ಮತ್ತು ದೇಶಾದ್ಯಂತ ಇರುವ ಏಕರೂಪತೆಯ ಕೊರತೆಗೆ ಕಾರಣವಾಗಬಹುದು” ಎಂದು ಅಭಿಪ್ರಾಯಪಟ್ಟಿದೆ. ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯವು…
ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣವಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಪ್ರವಾಸಿಗರಿದ್ದ ಟಿಟಿ (Tempo Traveller) ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ ಅದೃಷ್ಟವಶಾತ್ ವಾಹನದಲ್ಲಿದ್ದ ಎಲ್ಲಾ 13 ಪ್ರವಾಸಿಗರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಬೆಂಗಳೂರಿನಿಂದ 13 ಜನರ ತಂಡವೊಂದು ಟಿಟಿ ವಾಹನವನ್ನು ಬಾಡಿಗೆಗೆ ಪಡೆದುಕೊಂಡು ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿತ್ತು. ಸೋಮವಾರ ಸಂಜೆ ಪ್ರವಾಸ ಮುಗಿಸಿಕೊಂಡು ರಸ್ತೆಯ ಇಳಿಜಾರಿನಲ್ಲಿ ವಾಪಸ್ ಹೋಗುತ್ತಿದ್ದಾಗ, ಹಿಂದೆ ಕುಳಿತಿದ್ದ ಪ್ರಯಾಣಿಕರೊಬ್ಬರ ಪಾದರಕ್ಷೆ (ಚಪ್ಪಲಿ) ಜಾರಿ ಚಾಲಕನ ಕಾಲಿನ ಬಳಿ ಬಂದು ಬಿದ್ದಿದೆ. ಪಾದರಕ್ಷೆಯು ಎಕ್ಸಲೇಟರ್ ಹಾಗೂ ಬ್ರೇಕ್ ಮಧ್ಯೆ ಸಿಲುಕಿಕೊಳ್ಳಬಹುದು ಎಂಬ ಆತಂಕದಿಂದ ಚಾಲಕ ಅದನ್ನು ಕೈಯಿಂದ ತೆಗೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಗಾಡಿ ನ್ಯೂಟ್ರಲ್ ಗೇರಿಗೆ ಬಿದ್ದಿದ್ದರಿಂದ, ತೀವ್ರ ಇಳಿಜಾರಿನ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಕ್ಕದಲ್ಲಿದ್ದ ಕಂದಕಕ್ಕೆ ಉರುಳಿ ಬಿದ್ದಿದೆ. ಟಿಟಿ ವಾಹನ ಕಂದಕಕ್ಕೆ ಬೀಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸ್ಥಳೀಯ ‘ಪ್ರವಾಸಿ ಮಿತ್ರ’ರ…
ಚೆನ್ನೈ: ಹೊಸ ತಮಿಳು ಸಿನಿಮಾಗಳು ಬಿಡುಗಡೆಯಾದ ಮೊದಲ ಏಳು ದಿನಗಳ ಕಾಲ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ ಐದು ಶೋಗಳನ್ನು ಪ್ರದರ್ಶಿಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗಷ್ಟೇ ತಮಿಳು ಚಿತ್ರರಂಗದ ಪ್ರತಿನಿಧಿಗಳು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ, ಸಿನಿಮಾ ಬಿಡುಗಡೆಯ ಆರಂಭದ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ದಿನಕ್ಕೆ ಐದು ಶೋಗಳನ್ನು ಪ್ರದರ್ಶಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಚಲನಚಿತ್ರ ರಂಗದ ಈ ಮನವಿಗೆ ತಕ್ಷಣವೇ ಸ್ಪಂದಿಸಿದ ಸಿಎಂ ವಿಜಯ್ ನೇತೃತ್ವದ ಸರ್ಕಾರ ಇದೀಗ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ತಂದಿದೆ. ಈ ಹಿಂದಿನ ತಮಿಳುನಾಡು ಸಿನಿಮಾ ನಿಯಂತ್ರಣ ನಿಯಮಗಳ ಪ್ರಕಾರ, ಚಿತ್ರಮಂದಿರಗಳಲ್ಲಿ ಸಾಮಾನ್ಯ ದಿನಗಳಲ್ಲಿ ದಿನಕ್ಕೆ ಕೇವಲ ನಾಲ್ಕು ಶೋಗಳ ಪ್ರದರ್ಶನಕ್ಕೆ ಮಾತ್ರ ಅವಕಾಶವಿತ್ತು. ಕೇವಲ ವಿಶೇಷ ಹಬ್ಬ ಹರಿದಿನಗಳು ಹಾಗೂ ಸಾರ್ವಜನಿಕ ರಜಾ ದಿನಗಳಲ್ಲಿ ಮಾತ್ರ ಹೆಚ್ಚುವರಿಯಾಗಿ ಒಂದು ಶೋ (ಒಟ್ಟು 5 ಶೋ) ನಡೆಸಲು ವಿಶೇಷ…
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಥವಾ ಯಾವುದೇ ರೀತಿಯ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋಗಿರುವುದು ರಾಜ್ಯಸಭೆ ಮತ್ತು ವಿಧಾನ ಪರಿಷತ್ (MLC) ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು. ಇದರೊಂದಿಗೆ ಕೇಂದ್ರದ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿಯಾಗಲು ಅವರು ತೆರಳಿದ್ದಾರೆಯೇ ಹೊರತು ನಾಯಕತ್ವ ಬದಲಾವಣೆಗಲ್ಲ” ಎಂದು ಹೇಳಿದರು. ಸರ್ಕಾರದ ದೆಹಲಿ ಪ್ರವಾಸವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ದೇಶಪಾಂಡೆ, “ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ಮಂತ್ರಿಗಳು ದೆಹಲಿಗೆ ಹೋಗುತ್ತಿರಲಿಲ್ಲವೇ? ವಿರೋಧ ಪಕ್ಷದವರು ಜವಾಬ್ದಾರಿಯಿಂದ ಟೀಕೆ ಮಾಡಬೇಕು. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಯಾರೂ ಸುಮ್ಮನೆ ಮಾತಾಡಬಾರದು” ಎಂದು ಕಿಡಿಕಾರಿದರು. ಮುಂದುವರಿದು ಮಾತನಾಡಿದ…
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಕಾಂಗ್ರೆಸ್ ನಾಯಕರು ರಾಜಕೀಯಗೊಳಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಅಲ್ಲದೆ, ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ತಕ್ಷಣವೇ ಕಡಿತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರ ವಿಧಿಸಿರುವ ಹೆಚ್ಚಿನ ವ್ಯಾಟ್ ನಿಂದಾಗಿ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೆಹಲಿ ಸೇರಿದಂತೆ ದೇಶದ ಇತರ ಹಲವು ರಾಜ್ಯಗಳಿಗಿಂತ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರವು ಇಂಧನ ಬೆಲೆ ಏರಿಕೆಯಿಂದ ಹೆಚ್ಚುವರಿ ಆದಾಯ ಗಳಿಸುತ್ತಿದ್ದರೂ, ವ್ಯಾಟ್ ಕಡಿಮೆ ಮಾಡುವ ಬದಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ” ಎಂದು ಟೀಕಿಸಿದರು. “ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆದಾಯ ಹೋಗುತ್ತಿಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ಇಂಧನ ತೆರಿಗೆಯಿಂದ ವಾರ್ಷಿಕವಾಗಿ ಸುಮಾರು 6,000 ಕೋಟಿ ರೂ.ಗಳಷ್ಟು ಹೆಚ್ಚುವರಿ ಆದಾಯ ಪಡೆಯುತ್ತಿದೆ. ಈ ಹಣವನ್ನು ಸರ್ಕಾರ ತನ್ನ…
ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದಲ್ಲಿ ನದಿಗಳ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ನದಿಗಳಿಗೆ ಸಂಸ್ಕರಿಸದ ತ್ಯಾಜ್ಯ ನೀರನ್ನು ನೇರವಾಗಿ ಹರಿಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಮಂಗಳವಾರ ಖಡಕ್ ಸೂಚನೆ ನೀಡಿದ್ದಾರೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕುಮಾರಧಾರಾ ನದಿಗೆ ಸಂಸ್ಕರಿಸದ ತ್ಯಾಜ್ಯವನ್ನು ನೇರವಾಗಿ ಹರಿಯಬಿಡುತ್ತಿರುವವರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದರು. ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಮಲಿನ ಹಾಗೂ ತ್ಯಾಜ್ಯ ಜಲ ಸಂಸ್ಕರಣಾ ಘಟಕಗಳನ್ನು (STP) ನಿರಂತರವಾಗಿ ಪರಿಶೀಲನೆ ನಡೆಸಬೇಕು. ಯಾರಾದರೂ ಮೊದಲ ಬಾರಿಗೆ ಸಂಸ್ಕರಿಸದ ತ್ಯಾಜ್ಯವನ್ನು ನದಿಗೆ ಬಿಟ್ಟಿದ್ದರೆ ಅವರಿಗೆ ಆರಂಭಿಕ ಎಚ್ಚರಿಕೆ ನೀಡಬೇಕು. ಆದಾಗ್ಯೂ, ಪದೇ ಪದೇ ಇದೇ ತಪ್ಪು ಮುಂದುವರಿಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು…