Subscribe to Updates
Get the latest creative news from FooBar about art, design and business.
- ಉತ್ತಮ ಆಡಳಿತದಿಂದ ಸರ್ವತೋಮುಖ ಪ್ರಗತಿ ಸಾಧ್ಯ: ಕೆ.ಮಂಜುನಾಥ್
- ಪಾವಗಡ ತಾ.ಪಂ ಇ.ಒ. ಉತ್ತಮ್ ಕುಮಾರ್ ವಿರುದ್ಧ ಪಿಡಿಒಗಳ ದೂರು..!
- ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ: 100 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಸಂಕಲ್ಪ ಯಾತ್ರೆ
- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಾವಶ್ಯಕ: ಡಾ.ಹನುಮಂತನಾಥ ಸ್ವಾಮೀಜಿ ಕರೆ
- ಕ್ಯಾನ್ಸರ್ ಪೀಡಿತ ಮಹಿಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಸಾವಿರ ರೂ. ನೆರವು
- ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಪರ ಸಂಘಟನೆಗಳ ಆಗ್ರಹ
- ಮಹಾರಾಜವಾಡಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ: ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ
- ಬೀದರ್: ಔರಾದ್ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ
Author: admin
ತುಮಕೂರು: ಕಬಡ್ಡಿ ಪಂದ್ಯದಲ್ಲಿ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜತೆಗೆ ಬೆಟ್ಟಿಂಗ್ ಕಟ್ಟಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ 500 ರೂಪಾಯಿ ಕಳೆದುಕೊಂಡಿದ್ದಾರಂತೆ! ನಗರದಲ್ಲಿ ಭಾನುವಾರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಫೈನಲ್ ಪಂದ್ಯಗಳು ನಡೆದವು. ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ಮತ್ತು ವಿಜಯಪುರ ತಂಡಗಳು ಮುಖಾಮುಖಿಯಾದವು. ದಕ್ಷಿಣ ಕನ್ನಡ ತಂಡವು 36–26 ಅಂಕಗಳಿಂದ ವಿಜಯಪುರ ತಂಡಕ್ಕೆ ಸೋಲುಣಿಸಿತು. ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿದ ನಂತರ ಪರಮೇಶ್ವರ ಮಾತನಾಡಿದರು. ನಾನು 500 ಕಳೆದುಕೊಂಡು ಬಿಟ್ಟೆ. ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಜತೆ ಬೆಟ್ಟಿಂಗ್ ಮಾಡಿಕೊಂಡಿದ್ದೆ ಎಂದು ಗೃಹ ಸಚಿವರು ಹೇಳಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 62 ತಂಡಗಳು ಈ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿವೆ. ಈ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲ ತಂಡಗಳಿಗೆ ಅಭಿನಂದನೆಗಳು. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಬಹುಮುಖ್ಯ…
ತಿಪಟೂರು: ಗ್ರಾಮಾಂತರ ಧರ್ಮಸ್ಥಳ ಯೋಜನಾ ಕಚೇರಿಯಲ್ಲಿ ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ತುಮಕೂರು ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಪೂಜೆಯಲ್ಲಿ ಗಣ ಹೋಮ, ವಾಹನಗಳ ಪೂಜೆ, ಲಕ್ಷ್ಮಿ ಪೂಜೆಯನ್ನು ನೆರವೇರಿಸಲಾಯಿತು. ಈ ಪೂಜೆಗೆ ಗುರುಕುಲ ಮಠದ ಇಮ್ಮಡಿ ಬಸವ ದೇಶೀ ಕೇಂದ್ರ ಸ್ವಾಮೀಜಿ ರವರು ಆಗಮಿಸಿ ಶುಭ ಹಾರೈಸಿದರು. ಶಾಸಕರಾದ ಕೆ. ಷಡಕ್ಷರಿ, ತಹಶೀಲ್ದಾರ್ ಮೋಹನ್, ನಿವೃತ್ತ ACP ಲೋಕೇಶ್ವರ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರು, ಒಕ್ಕೂಟ ಪದಾಧಿಕಾರಿಗಳು, ತಾಲೂಕಿನ ಗಣ್ಯರು, ತಾಲೂಕಿನ ಪತ್ರಕರ್ತರು, ಹಾಗೂ ಯೋಜನೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು. ವರದಿ: ಆನಂದ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೀದರ್: ಪೋಷಕತ್ವ ಯೋಜನೆಯ ಕುರಿತು ಜನರಿಗೆ ಇನ್ನು ಹೆಚ್ಚಿನ ಜನಜಾಗೃತಿಯನ್ನು ಮೂಡಿಸುವ ಕುರಿತು ರಾಜ್ಯಮಟ್ಟದ ಪೋಷಕತ್ವ ಯೋಜನೆ ತಂಡದೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯ ಕಚೇರಿ ಬೀದರ್ ನಲ್ಲಿ ಸಭೆ ನಡೆಯಿತು. ಈ ಸಭೆಯನ್ನು ಪ್ರಾರ್ಥನೆ ಮೂಲಕ ಆರಂಭ ಮಾಡಲಾಯಿತು. ಈ ಸಭೆಯಲ್ಲಿ ಸ್ವಾಗತವನ್ನು ಪೋಷಕತ್ವ ಯೋಜನೆಯ ರಾಜ್ಯ ಸಂಚಾಲಕರಾದ ಶಿವಮಲ್ಲು ಅವರು ಮಾಡಿದರು ಮತ್ತು ಸಭೆಯ ಕುರಿತು ತಿಳುವಳಿಕೆಯನ್ನು ಮೂಡಿಸಿದರು. ಈ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಫಾದರ್ ವರ್ಗೀಸ್ ಪಲ್ಲಿಪುರಂ ಅವರು, ಪೋಷಕತ್ವ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು. ಪೋಷಕತ್ವ ಯೋಜನೆಯಲ್ಲಿ ಇರುವಂತಹ ಹೊಸ ಬದಲಾವಣೆ ಕುರಿತು ಮಾಹಿತಿಯನ್ನು ಕೊಟ್ಟರು. ರಾಜ್ಯಮಟ್ಟದಲ್ಲಿ ಯಾವ ರೀತಿಯಲ್ಲಿ ಪೋಷಕತ್ವ ಯೋಜನೆಯು ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು. ಡಾನ್ ಬಾಸ್ಕೊ ಚಿಕ್ಕಪೇಟೆ ಸಂಸ್ಥೆಯ ನಿರ್ದೇಶಕರಾದ ಫಾದರ್ ಸ್ಟೀವನ್ ಲಾರೆನ್ಸ್ ಮಾತನಾಡಿ, ಪೋಷಕತ್ವ ಯೋಜನೆ ಕುರಿತು ಹಾಗೂ ಡಿ. ಸಿ. ಪಿ. ಯು. ನ ಸದಸ್ಯರು ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ನಾವೆಲ್ಲರೂ…
ತುಮಕೂರು: ಈದ್ಗಾ ಮೈದಾನ, ರಸ್ತೆಯಲ್ಲಿ ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆದುಕೊಳ್ಳುತ್ತಾರೆಯೇ? ಇದನ್ನು ತಡೆಯಲು ಸಾಧ್ಯವಿದೆಯೇ? ಎಂದು ಶಾಸಕ ಕೆ.ಎನ್.ರಾಜಣ್ಣ ಶನಿವಾರ ಪ್ರಶ್ನಿಸಿದರು. ಅನುಮತಿ ಇಲ್ಲದೆ ರಸ್ತೆಯಲ್ಲಿ ನಮಾಜ್ ಮಾಡಿದರೆ ತಡೆಯುವ ಶಕ್ತಿ ಇದೆಯೇ? ಅನುಮತಿ ಕೊಡಿ ಎಂದು ಅವರು ಬರುತ್ತಾರೆಯೇ? ಅನುಮತಿ ತೆಗೆದುಕೊಳ್ಳಿ ಎಂದು ನಾವು ಹೇಳುತ್ತೇವೆಯೆ? ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾರಿ ಮಾಡಲು ಸಾಧ್ಯವಾಗುವ ಕಾನೂನು ಜಾರಿಗೆ ತರಬೇಕು. ಜಾರಿ ಮಾಡಲಾಗದ ಕಾನೂನು ಜಾರಿಗೆ ತಂದರೆ, ಅದು ಪುಸ್ತಕದಲ್ಲಿ ಇರುತ್ತದೆ. ಹೊಸ ನಿಯಮ ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಶತಮಾನೋತ್ಸವದ ಪ್ರಯುಕ್ತ ನಗರದಲ್ಲಿ ಶನಿವಾರ ಸಂಘ ಶತಾಬ್ದ ಪಥ ಸಂಚಲನ ನಡೆಯಿತು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾವಿರಾರು ಮಂದಿ ಗಣ ವೇಷಧಾರಿಗಳು ಸೇರಿದ್ದರು. ಕರಿ ಟೋಪಿ, ಖಾಕಿ ಪ್ಯಾಂಟ್, ಬಿಳಿ ಅಂಗಿ ತೊಟ್ಟು, ಕೈಯಲ್ಲಿ ದೊಣ್ಣೆ ಹಿಡಿದು ಹೆಜ್ಜೆ ಹಾಕಿದರು. ಅರ್‌ಎಸ್‌ಎಸ್ ಜಿಲ್ಲಾ ಪ್ರಮುಖ್ ನಾಗೇಂದ್ರಪ್ರಸಾದ್ ನೇತೃತ್ವದಲ್ಲಿ ಎರಡು ತಂಡಗಳು ಪ್ರತ್ಯೇಕವಾಗಿ ಪಥ ಸಂಚಲನ ನಡೆಸಿದವು. ಒಂದು ತಂಡ ಕಾಲೇಜು ಮೈದಾನದಿಂದ ಹೊರಟು ಭದ್ರಮ್ಮ ವೃತ್ತ, ಬಿದುರುಮಳೆ ತೋಟದ ರಸ್ತೆ, ಕರಿಬಸವೇಶ್ವರ ಮಠ, ಹೊರಪೇಟೆ ರಸ್ತೆ, ಹೊರಪೇಟೆ ವೃತ್ತದಿಂದ ಗುಂಚಿ ವೃತ್ತ ತಲುಪಿತು. ಮತ್ತೊಂದು ತಂಡ ಕಾಲೇಜು ಮೈದಾನದಿಂದ ಸಾಗಿ ಬಿ.ಎಚ್.ರಸ್ತೆ, ಟೌನ್‌ಹಾಲ್, ಸ್ವಾತಂತ್ರ್ಯ ಚೌಕದಿಂದ ಗುಂಚಿ ವೃತ್ತ ಸೇರಿತು. ಗುಂಚಿ ವೃತ್ತದ ಬಳಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿರೇಶಾನಂದ ಸರಸ್ವತಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ…
ತುಮಕೂರು: ಸಹಕಾರ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಮಾಜಿ ಸಹಕಾರ ಸಚಿವರೂ ಆದ ಶಾಸಕ ಕೆ.ಎನ್.ರಾಜಣ್ಣ ಶನಿವಾರ ಹೇಳಿದರು. ನಾನು ಸಚಿವನಾಗಿದ್ದಾಗ ತಿದ್ದುಪಡಿ ಮಾಡಿ ರೂಪಿಸಿರುವ ಕಾನೂನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರ ಅದರ ಮಹತ್ವ ಜನರಿಗೆ ಅರಿವಾಗುತ್ತದೆ. ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಹೊಸ ಕಾಯ್ದೆ ಬಗ್ಗೆ ಅಕ್ಕಪಕ್ಕದ ರಾಜ್ಯದವರೂ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಹಕಾರ ಸಂಘ, ಸಂಸ್ಥೆಗಳಲ್ಲಿ ಚುನಾವಣೆಗೆ ಸ್ಪರ್ಧಿಸುವವರು ತಮ್ಮ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಆಸ್ತಿ ವಿವರ ಸಲ್ಲಿಸುವ ರೀತಿಯಲ್ಲಿ ಸಹಕಾರ ಕ್ಷೇತ್ರದ ಚುನಾವಣೆಯಲ್ಲೂ ಆಸ್ತಿ ವಿವರ ನೀಡುವುದು ಕಡ್ಡಾಯವಾಗಿದೆ ಎಂದರು. ಹಾಲು ಉತ್ಪಾದಕರ ಸಹಕಾರ ಸಂಘಗಳು, ವ್ಯವಸಾಯ ಸೇವಾ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೂ ಮೀಸಲಾತಿ ತರಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಇರುವಂತೆ ಇಲ್ಲೂ ಮೀಸಲಾತಿ ಕಲ್ಪಿಸಲಾಗಿದೆ. ಸಹಕಾರ…
ಸರಗೂರು: ಪಟ್ಟಣದ 4ನೇ ವಾರ್ಡಿನಲ್ಲಿ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲಿಂಗಕ್ಕೆ ಕೊಳಗ ಪ್ರತಿಷ್ಠಾಪನೆ ಭಾನುವಾರದಂದು ವಾರ್ಡಿನ ಮುಖಂಡ ಸಮ್ಮುಖದಲ್ಲಿ ನೆರವೇರಿತು. ಸರಗೂರು ನಾಡದೇಶ ಯಜಮಾನರು ಗಣೇಶ ಅವರು ಲಿಂಗಕ್ಕೆ ಕೊಳಗವನ್ನು ಬಳುವಳಿಯಾಗಿ ನೀಡಿ ಸಾಂಪ್ರದಾಯಕವಾಗಿ ಪೂಜಾ ಕಾರ್ಯ ನೆರವೇರಿಸಿ ಕೊಳಗವನ್ನು ಪ್ರತಿಷ್ಠಾಪನೆ ಮಾಡಿಕೊಟ್ಟರು. ಬಳಿಕ ಮಾತನಾಡಿದ ಅವರು, ದೇವಸ್ಥಾನದ ಉದ್ಘಾಟನೆ ಸಂದರ್ಭದಲ್ಲಿ ನಾನು ಸಮಾಜಕ್ಕೆ ಕೊಳಗವನ್ನು ಬೆಳವಳಿಯಾಗಿ ನೀಡುವುದಾಗಿ ತಿಳಿಸಿದ್ದೆ, ಅದರಂತೆ ನಾನು ನಿಮಗೆ ನೀಡಿದ್ದೇನೆ, ಸರಗೂರು ಪಟ್ಟಣದಲ್ಲಿ ಎಲ್ಲ ಸಮಾಜವು ಸೇರಿ ಚಂದ್ರಮೌಳೇಶ್ವರ ಗರಡಿ ಬಸಪ್ಪ ಹಾಗೂ ನಾಡ ದೇವತೆಯ ಮಾರಮ್ಮನ ದೊಡ್ಡ ಹಬ್ಬವನ್ನು ಮಾಡುತ್ತಿದ್ದೆವು. ಆದರೆ ಬದಲಾವಣೆಯನ್ನು ಬಯಸಿ ಹೊಂದಾಣಿಕೆಯಾಗದೆ ಇದ್ದದ್ದರಿಂದ ಸರಗೂರಿನಲ್ಲಿ ನಡೆಯುತ್ತಿದ್ದ ವಿಶೇಷವಾದ ಹಬ್ಬ ಸುಮಾರು ವರ್ಷಗಳಿಂದ ನಿಂತು ಹೋಗಿದೆ ಈ ಹಬ್ಬವನ್ನು ನಾವೆಲ್ಲರೂ ಸೇರಿ ಮುಂದುವರಿಸಿಕೊಂಡು ಹೋಗಬೇಕೆಂಬುದು ನನ್ನ ಮನವಿ ಎಂದ ಅವರು, ಇಲ್ಲಿ ವಿಚಾರವನ್ನು ನಿಮ್ಮ ಸಮುದಾಯದ ಮುಖಂಡರು ಮಾತುಕತೆ ನಡೆಸಿ ನಮಗೆ ತಿಳಿಸಿದ ನಂತರ ನಾವು ಎಲ್ಲಾ ಸಮುದಾಯ ಒಂದು…
ವಿ.ಎಂ.ಎಸ್.ಗೋಪಿ, ಲೇಖಕರು, ಸಾಹಿತಿಗಳು, ಬೆಂಗಳೂರು. ದೀಪಾವಳಿ ಹಿಂದೂಗಳಿಗೆಲ್ಲ ಸಡಗರ ಸಂಭ್ರಮದ ಹಬ್ಬ ವರ್ಷವಿಡೀ ಆಚರಿಸುವ ಹಬ್ಬಗಳಲ್ಲಿ ದೀಪಾವಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಭಾರತದಾದ್ಯಂತ ಆಚರಿಸುವ ಹಬ್ಬವೆಂದರೆ ದೀಪಾವಳಿ “ತಮಸೋಮ ಜ್ಯೋತಿಗಮಯ” ಕತ್ತಲಿನಿಂದ ಬೆಳಕಿನ ಕಡೆಗೆ ದೀಪಾವಳಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ. ದೀಪಗಳ ಹಬ್ಬದ ವೈಶಿಷ್ಟವೇ ಅಂಥಾದ್ದು. ದೀಪ+ ಆವಳಿ= ದೀಪಾವಳಿ. ಎಲ್ಲಿ ಕತ್ತಲಿದೆಯೋ ಅಲ್ಲಿ ಬೆಳಕಿರಬೇಕು. ಕತ್ತಲೆಂದರೆ ಅಜ್ಞಾನ ಕತ್ತಲೆಂದರೆ ಅಂಧಕಾರ. ಕತ್ತಲೆಂದರೆ ಸೋಲು. ಬೆಳಕು ಎಂದರೆ ಯಶಸ್ಸು. ಕತ್ತಲೆಂದರೆ ಕಷ್ಟಗಳ ಸಂಕೋಲೆ ಬೆಳಕೆಂದರೆ ಬಿಡುಗಡೆ. ಅಂದರೆ ನಮ್ಮ ಅಜ್ಞಾನವನ್ನು ಬೆಳಕಿನ ಮೂಲಕ ತೊಡೆದು ಹಾಕೋ ಹಬ್ಬವೇ ದೀಪಾವಳಿ. ಈ ದೀಪಾವಳಿ ಅಮಾವಾಸ್ಯೆಗೂ ಇಲ್ಲಿ ಮಹತ್ವವಿದೆ. ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆಯೂ ನಡೆಯುತ್ತದೆ. ಲಕ್ಷ್ಮಿಯು ಕತ್ತಲನ್ನು ಕಳೆದು ಬೆಳಕು ತರುವ ಮಹಾ ತೆಜಸ್ವಿನಿ. ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವುದೇ ಬದುಕು. ಹೀಗಾಗಿ ದೀಪಾವಳಿಯಲ್ಲಿ ನಡೆಯುವ ಜ್ಯೋತಿ ಸ್ವರೂಪಿಣಿ ಲಕ್ಷ್ಮಿಯ ಪೂಜೆ ಭಯ ಭಕ್ತಿಯಿಂದ…
ಸರಗೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸುತ್ತಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಿ ಅಭಿವೃದ್ಧಿಗೊಳಿಸಲು ಸಹಕಾರ ನೀಡಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲೂಕಿನ ಕಳಸೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶನೇಶ್ವರ ದೇವಸ್ಥಾನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಸಾಕಷ್ಟು ರಸ್ತೆಗಳು ಹದಗೆಟ್ಟಿದ್ದು, ರಸ್ತೆ, ಶಾಲಾ ಕಾಲೇಜು ಅಭಿವೃದ್ಧಿಗೆ ಮಾಜಿ ದಿ ಶಾಸಕ ಚಿಕ್ಕಮಾದು, ಅಭಿವೃದ್ಧಿ ಹರಿಕಾರ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ತಾಲೂಕಿನ ಬಗ್ಗೆ ಹೆಚ್ಚು ಗಮನ ಕೊಟ್ಟು ಅಭಿವೃದ್ಧಿ ಪಡಿಸಲು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು. ಕಳಸೂರು ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ರಸ್ತೆ, ಅಭಿವೃದ್ಧಿ ಮಾಡಲಾಗಿದೆ. ಮಾರಮ್ಮನ ದೇವಸ್ಥಾನಕ್ಕೆ ಹೆಚ್ಚಿನ ಅನುದಾನ ಕೇಳಿದ್ದೀರಿ. ದೇವಸ್ಥಾನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕೆಲಸ ಕಾರ್ಯಗಳು ಮಾಡಲಾಗುವುದು ಎಂದರು. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗಳಿಗೂ ತಲುಪಿಸುವ ಕೆಲಸ ನಮ್ಮ…
ಬೆಂಗಳೂರು: ವಿಧಾನಸೌಧ ಮುಂಭಾಗದಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ ಹಾಗೂ ಹೋಂಡಾ ಇಂಡಿಯಾ ಫೌಂಡೇಶನ್ ರವರ ಸಹಯೋಗದಲ್ಲಿ 50 ಸಂಚಾರ ಗಸ್ತು ವಾಹನಗಳನ್ನು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ಬಿಟಿಪಿ ಅಸ್ತ್ರಂ ಆ್ಯಪ್ ನಲ್ಲಿ ನೂತನವಾಗಿ ಸೇರ್ಪಡೆ ಮಾಡಿರುವ ‘ಇ–ಆ್ಯಕ್ಸಿಡೆಂಟ್’ ಹೊಸ ಆವಿಷ್ಕಾರವನ್ನು ಅವರು ಬಿಡುಗಡೆ ಮಾಡಿದರು. ಅಪಘಾತದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು ಹಾಗೂ ವಿಮೆ ಪಡೆದುಕೊಳ್ಳಲು ಸರಳಗೊಳಿಸುವ ನಿಟ್ಟಿನಲ್ಲಿ ಪರಿಚಯಿಸಲಾಗಿದೆ. ಬಿಟಿಪಿ ಅಸ್ತ್ರಂ ಆ್ಯಪ್ ನಲ್ಲಿ ಇ–ಆ್ಯಕ್ಸಿಡೆಂಟ್ ಮೂಲಕ ರಿಪೋರ್ಟ್ ಮಾಡಿದರೆ ಸುಲಭವಾಗಿ ವಿಮೆ ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಹೋಂಡಾ ಇಂಡಿಯಾ…