Author: admin

ತುಮಕೂರು: ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಮಾರಂಭದ ಉದ್ಘಾಟನೆಗೆ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಅವರನ್ನು ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ರಾಜ್ಯ ಜಂಟಿ ಕಾರ್ಯದರ್ಶಿ ರಂಗನಾಥ್, ಜಿಲ್ಲಾಧ್ಯಕ್ಷರಾದ ಜಿ.ಕರುಣಾಕರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್ ಮಂಜುನಾಥ್ ಗೌಡ,ಜಿಲ್ಲಾ ಖಜಾಂಚಿ ಕಂಬಣ್ಣ,ಹಿರಿಯರಾದ ನಾಗರಾಜು,ಸಂಪಾದಕ ಮಿತ್ರರಾದ ಸಿದ್ದರಾಜು,ಅಭಿಷೇಕ್ ಉಪಸ್ಥಿತರಿದ್ದರು. ವರದಿ: ನಂದೀಶ್ ನಾಯ್ಕ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಶಿವಮೊಗ್ಗ: ಜಾಗತೀಕರಣದ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಧರ್ಮ– ಸಂಸ್ಕೃತಿ- -ಸಂಸ್ಕಾರಗಳು ಮರೆಯಾಗುತ್ತಿದ್ದು, ಲೋಕದ ಜ್ಞಾನವೇ ಅವರಲ್ಲಿ ಕಾಣ ಬರುತ್ತಿಲ್ಲ,ಇಂದು ಧರ್ಮದ ಉಳಿವಿಗೆ ಮಕ್ಕಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ಅಗತ್ಯವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು. ಅವರಿಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಶ್ರೀ ಕ್ಷೇತ್ರ ಹೊಂಬುಜ ಜ್ಜೈನಮಠದಲ್ಲಿ ನಡೆದ ಇಂದ್ರಧ್ವಜ ಆರಾಧನೆ ಹಾಗೂ ಮುನಿಶ್ರೀ ಶಾಂತಿ ಸಾಗರ ಮಹಾರಾಜರ ಅಂಚೆಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಧಾರ್ಮಿಕ ಕಾರ್ಯಗಳ ಆಚರಣೆಯಿಂದ ದಿಗಂಬರ ಪರಂಪರೆ ಮುಂದುವರೆಯಲು ಸಾಧ್ಯ ಎಂದ ಅವರು, ಪ್ರಪಂಚಿಕ ಜ್ಞಾನ ದೂರ ದೃಷ್ಟಿಯಿಂದ ಇಂದು ಪರಂಪರೆ ಉಳಿದಿದೆ, ಶಾಂತಿ ಸಾಗರ್ ಮಹಾರಾಜರು ತ್ಯಾಗದ ಮೂಲಕ ಮನುಚ್ಚರಿಯೇಗೆ ಹೆಚ್ಚಿನ ಹೊತ್ತು ನೀಡಿದರು , ಅವರ ಸವಿನೆನಪಿಗಾಗಿ ಈಗ ಅಂಚೆ ಚೀಟಿ ಬಂದಿದೆ ಎಂದು ಅವರು, ನಾನು ಹಳೆ ವಸ್ತುಗಳನ್ನ ಸಂಗ್ರಹಿಸಿ ನಮ್ಮ ವಸ್ತು ಸಂಗ್ರಹಾಲಯದಲ್ಲಿ ಇಡುತ್ತೀನಿ ಈ ಅಂಚೆಚೀಟಿ ಮನೆ ಮನೆಗೆ ತಲುಪುವುದರಿಂದ ಆರಾಧಿಸ…

Read More

ತುಮಕೂರು: ವಾಣಿಜ್ಯ ವಿಭಾಗಕ್ಕಾಗಿ 5 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ವಿವಿಯು ನಿರ್ಧರಿಸಿದ್ದು, ಹೊಸ ವರ್ಷದಿಂದ ಕಟ್ಟಡ ನಿರ್ಮಾಣ ಕಾರ್ಯರಂಭವಾಗಲಿದೆ ಎಂದು ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ತಿಳಿಸಿದರು. ವಿವಿ ಕಲಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗವುಗುರುವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ‘ಆರಂಭ’ ಹಾಗೂ ಡಾ.ಜಿ. ಪರಮೇಶ್ವರ್ ಬ್ಲಾಕ್‌ಗೆ ಸ್ಥಳಾಂತರಗೊಂಡಿರುವ ವಿಭಾಗದಉದ್ಘಾಟನೆ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಭವಿಷ್ಯದ ನಾಯಕರಾಗಬೇಕಾದರೆ ಸ್ವಯಂಶಿಸ್ತನ್ನು ಮೈಗೂಡಿಸಿಕೊಳ್ಳಬೇಕು.ಯಶಸ್ವಿ ವ್ಯಕ್ತಿಯಾಗಲು ಕೋಶ ಓದಬೇಕು-ದೇಶ ಸುತ್ತಬೇಕು.ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ಸುರಕ್ಷಿತ ವಾತಾವರಣ ಸೃಷ್ಟಿಸಬೇಕು.ಅಧಿಕಾರಿಗಳು ವಿದ್ಯಾರ್ಥಿಗಳ ಜೊತೆ ಬೆರೆತುಅವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸೂಕ್ತ ಪರಿಹಾರಒದಗಿಸಬೇಕುಎಂದರು. ಸ್ಕಿಲ್‌ಫಿಕ್ಸ್ ಸಂಸ್ಥೆಯ ಸಂಸ್ಥಾಪಕ ವಿನಯ್ ಪಾಟೀಲ್ ಮಾತನಾಡಿ, ಸಕಾರಾತ್ಮಕವಾಗಿ ಮಕ್ಕಳ ಮೇಲೆ ಪ್ರಭಾವ ಬೀರಿದಾಗಅವರಲ್ಲಿಜ್ಞಾನೋದಯವಾಗುತ್ತದೆ.ಸಾಮಾಜಿಕ ಮಾಧ್ಯಮಗಳಲ್ಲಿ ಇತರರ ಬದುಕಿನ ಭಾಗವನ್ನು ವೀಕ್ಷಿಸುತ್ತಾಕಾಲಾಹರಣ ಮಾಡುವ ಬದಲು ನಮ್ಮ ಬಲವನ್ನು, ಆತ್ಮವಿಶ್ವಾಸವನ್ನು ಅರಿಯುವ ಕಾರ್ಯವಾಗಬೇಕುಎಂದು ತಿಳಿಸಿದರು. ಸಂಕೀರ್ಣ, ಅಸ್ಪಷ್ಟ, ಅನಿಶ್ಚಿತ ಬದುಕನ್ನು ಸಾಗಿಸುತ್ತಿದ್ದೇವೆ. ಮನಸ್ಥಿತಿಯನ್ನು ಸದೃಢ ಮಾಡಿಕೊಳ್ಳಬೇಕು.ಭವಿಷ್ಯವನ್ನುಇಂದೇ ನಿರ್ಧರಿಸಿ, ಆ ಗುರಿಯೆಡೆದೆ ಸಾಗುವ…

Read More

ಜೈಪುರ: ಅಭ್ಯರ್ಥಿಯೊಬ್ಬರು ಮತದಾನದ ವೇಳೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ ಡಿಎಂ)ನ ಕಪಾಳಕ್ಕೆ ಥಳಿಸಿದ ಘಟನೆ ರಾಜಸ್ಥಾನದ ಉಪ ಚುನಾವಣೆ ಮತದಾನದ ವೇಳೆ ನಡೆದಿದೆ. ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಹಲ್ಲೆ ನಡೆಸಿದ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.  ಘಟನೆಯ ಬೆನ್ನಲ್ಲೇ ನರೇಶ್ ಮೀನಾರನ್ನು ಪೊಲೀಸರು ಬಂಧಿಸಿದ್ದಾರೆ. ಡಿಯೋಲಿ-ಉನಿಯಾರಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ, ಚುನಾವಣಾ ನಿಯಮಗಳನ್ನು ಮೇಲ್ವಿಚಾರಣೆ ಮಾಡಲು ಕರ್ತವ್ಯದಲ್ಲಿದ್ದ ಎಸ್‌ ಡಿಎಂ ಅಮಿತ್ ಚೌಧರಿ ಮೇಲೆ ಹಲ್ಲೆ ನಡೆಸಿದ್ದರು. ಚುನಾವಣಾಧಿಕಾರಿಯು ಮೂವರನ್ನು ಬಳಿಸಿಕೊಂಡು ಮತ ಹಾಕುತ್ತಿದ್ದರು. ಹೀಗಾಗಿ ಅವರಿಗೆ ಕಪಾಳ ಮೋಕ್ಷ ಮಾಡಿರುವುದಾಗಿ ಮೀನಾ ಆರೋಪಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ನವದೆಹಲಿ: ಎನ್ ಸಿಪಿ ಹಿರಿಯ ಮುಖಂಡ ಬಾಬಾ ಸಿದ್ದಿಕಿ ಹತ್ಯೆಯ ಪ್ರಮುಖ ಆರೋಪಿ ಕುಮಾರ್ ಗೌತಮ್, ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಿದ ಬಳಿಕ, ದಾಳಿಯಲ್ಲಿ ಸಿದ್ದಿಕಿ ಬದುಕಿದ್ದಾರಾ, ಅಥವಾ ಸಾವಿಗೀಡಾಗಿದ್ದಾರಾ ಎಂದು ದೃಢಪಡಿಸಿಕೊಳ್ಳಲು  ಆಸ್ಪತ್ರೆಯ ಹೊರಗೆ ನಿಂತಿದ್ದ ಎನ್ನುವುದನ್ನು ಇದೀಗ ಆರೋಪಿಯೇ ಬಹಿರಂಗಪಡಿಸಿದ್ದಾನೆ. ಗುಂಡಿನ ದಾಳಿಯ ನಂತರ, ತಾನು ಬೇಗನೆ ತನ್ನ ಅಂಗಿಯನ್ನು ಬದಲಾಯಿಸಿ ಆಸ್ಪತ್ರೆಯ ಹೊರಗೆ ಜನಸಮೂಹದ ನಡುವೆ 30 ನಿಮಿಷಗಳ ಕಾಲ ನಿಂತಿದ್ದೆ ಎಂದಿರುವ  ಶೂಟರ್, ಬಾಬಾ ಸಿದ್ದಿಕಿಯ ಮೇಲೆ ದಾಳಿಯ ನಂತರ ಲೀಲಾವತಿ ಆಸ್ಪತ್ರೆಯ ಹೊರಗೆ ನಿಂತಿದ್ದಾಗಿ ಹೇಳಿಕೊಂಡಿದ್ದಾನೆ. ಸಿದ್ದಿಕಿಯ ಸ್ಥಿತಿ ಗಂಭೀರವಾಗಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ  ಸ್ಥಳದಿಂದ ತೆರಳಿದ್ದನಂತೆ. ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮೂವರು ದುಷ್ಕರ್ಮಿಗಳು  ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಕೊಂದಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಕೊಲೆಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ಲಂಡನ್‌: ಮೈಸೂರು ಹುಲಿ ಟಿಪ್ಪು ಸುಲ್ತಾನ್ ನ ಖಡ್ಗ 3.4 ಕೋಟಿ ರೂಪಾಯಿಗೆ ಹರಾಜಾಗಿದೆ. ಈ ಖಡ್ಗವು ಟಿಪ್ಪು ಸುಲ್ತಾನ್‌ನ ವೈಯಕ್ತಿಕ ಶಸ್ತ್ರಗಾರದ ಭಾಗವಾಗಿತ್ತು. 1799 ರಲ್ಲಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಟಿಪ್ಪು ಸೋಲುತ್ತಾನೆ. ಈ ಸಂದರ್ಭದಲ್ಲಿ ಟಿಪ್ಪುವಿನ ಖಡ್ಗವನ್ನು  ಆಗಿನ ಬ್ರಿಟೀಷ್ ಸೇನೆಯ ಕ್ಯಾಪ್ಟನ್ ಚೇಮ್ಸೌ ಆ್ಯಂಡ್ರ್ಯೂ ಡಿಕ್ ಎಂಬಾತನಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಈ ಖಡ್ಗದ ಮೂಲವನ್ನು ಸೆರಿಂಗಪಟ್ಟಂ ಕದನದಲ್ಲಿ ಗುರುತಿಸಬಹುದು. ಸ್ಟೀಲ್‌ ತಲ್ವಾರ್‌ ಮೈಸೂರಿನ ವಿಶಿಷ್ಟ ಲಕ್ಷಣವಾದ ಬುಬ್ರಿ (ಟೈಗರ್‌ ಸ್ಟ್ರೈಪ್‌) ಅಲಂಕಾರವನ್ನು ಖಡ್ಗ ಹೊಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು: ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿಯಾದ ಪರಿಣಾಮ  ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರೋ ಘಟನೆ  ಮಧುಗಿರಿ ತಾಲ್ಲೂಕಿನ ಕೊಡಗದಾಲ ಗ್ರಾಮದ‌ ಬಳಿ ನಡೆದಿದೆ. ನಿಟ್ರಹಳ್ಳಿ ನಿವಾಸಿ ಲೋಕೇಶ್ (45) ಮೃತ ದುರ್ದೈವಿಯಾಗಿದ್ದಾರೆ. ಚಿಂತಾಮಣಿ ಯಿಂದ ಹಾವೇರಿಗೆ ತೆರಳುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ನಾಡಕಚೇರಿಯಲ್ಲಿ ಬುಧವಾರ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ನಾಗಲಮಾಡಿಕೆ ಹೋಬಳಿಯ ಪ್ರಭಾರ ಉಪತಹಶೀಲ್ದಾರ್ ಹಾಗೂ ಕಂದಾಯ ನಿರಕ್ಷಕರಾದ ಕೆ.ವಿ. ನಾರಾಯಣ ರವರು ಫಲಾನುಭವಿಗಳಿಗೆ ವಿವಿಧ ಮಾಶಾಸನ ಆದೇಶ ಪತ್ರಗಳನ್ನು ವಿತರಿಸಿದರು. ಈ ವೇಳೆ ಗ್ರಾಮ ಲೆಕ್ಕಾಧಿಕಾರಿ ಪುನೀತ್ ಕುಮಾರ್, ನಾಡಕಚೇರಿ ಸಿಬ್ಬಂದಿ, ಗ್ರಾಮ ಸಹಾಯಕರು ಹಾಗೂ ಸಾರ್ವಜನಿಕರು ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪಾವಗಡ: ನವೆಂಬರ್ 14 ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಸ್ಥಳೀಯ ಶಾಸಕರಾದ ಹೆಚ್.ವಿ.ವೆಂಕಟೇಶ್ ಮತ್ತು ಮಾಜಿ ಸಚಿವರಾದ ವೆಂಕಟರಮಣಪ್ಪ ಗುರುವಾರ ಪಾವಗಡದ ಶಾಸಕರ ಕಚೇರಿಯಲ್ಲಿ ಮಧುಮೇಹ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಪುರಸಭಾ ಅಧ್ಯಕ್ಷ ಪಿ.ಹೆಚ್.ರಾಜೇಶ್, ಸದಸ್ಯ ಎನ್.ರವಿ, ಉದ್ಯಮಿ ಪರಮೇಶ್ವರ್ ಸೇರಿ ಇನ್ನು ಅನೇಕರು ಇದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೀದರ್: ರಾಜ್ಯವನ್ನು ನಶಾ ಮುಕ್ತ ರಾಜ್ಯವನ್ನಾಗಿಸುವ ಸಂಕಲ್ಪದೊಂದಿಗೆ ಭಾಲ್ಕಿ ಉಪ-ವಿಭಾಗದ ಡಿವೈಎಸ್ಪಿ ಶಿವಾನಂದ ಪವಾಡ ಶೆಟ್ಟಿರವರ ಮಾರ್ಗದರ್ಶನದಲ್ಲಿ ಕಮಲ ನಗರ ಪೊಲೀಸರು ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಡೆಸಿದರು. ಅಮರೇಶ ಸಿ.ಪಿ.ಐ ಕಮಲನಗರ ವೃತ್ತರವರ ನೇತೃತ್ವದಲ್ಲಿ ಚಂದ್ರಶೇಖರ, ಬಾಲಾಜಿ, ಪಿ.ಎಸ್.ಐ ಇವರು ಡೋಣಗಾಂವ್-ಎಮ್ ಗ್ರಾಮದಲ್ಲಿ ಮಾದಕ ದ್ರವ್ಯ ವಿರೋಧಿ Appನ್ನು ಸಾರ್ವಜನಿಕರಿಗೆ ಪರಿಚಯಿಸಿಕೊಟ್ಟರು. ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಮುಕ್ತ ಮಾಡುವ ಸಲುವಾಗಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪೊಲೀಸರ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More