Subscribe to Updates
Get the latest creative news from FooBar about art, design and business.
- ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ
- ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
- ಸರಗೂರು: ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ ಶುಭಾರಂಭ
- ಭೀಕರ ಬೈಕ್ ಅಪಘಾತ: ಮರದ ತುಂಡಿಗೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ದುರಂತ ಸಾವು, ಇಬ್ಬರ ಸ್ಥಿತಿ ಗಂಭೀರ
- ಬಾಡಿಗೆ ಕಾರು ಚಾಲಕನ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹1 ಲಕ್ಷ ದಂಡ
- ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ
- ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ
- ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
Author: admin
ಪುರಾತನ ಜೈನ ಧಾರ್ಮಿಕ ಕ್ಷೇತ್ರ ಅನೇಕ ರಾಜರುಗಳು, ಪಾಳೆಗಾರರು ಆಳ್ವಿಕೆ ಬೀಡು ಹಲವು ಜಿನ ಬಿಂಬಗಳನ್ನು ತನ್ನ ಒಡಲುನಲ್ಲಿಇಟ್ಟುಕೊಂಡ ಪುರಾತನ ಕ್ಷೇತ್ರ ” ಜೈನರ ಗುತ್ತಿ” .ಇದು ಅಡಗೂರಿಗೆ ಸಮೀಪದಲ್ಲಿರುವುದರಿಂದ ಇದನ್ನು ಅಡಗೂರು ಜೈನರ ಗುತ್ತಿ ಎಂದು ಸಹ ಕರೆಯುತ್ತಾರೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಗೆ ಸೇರಿದ ಪುರಾತನ ಜೈನ ಕ್ಷೇತ್ರ ಜೈನರ ಗುತ್ತಿಗೆ ಈಗ ಪಂಚಕಲ್ಯಾಣಗಳ ಸಡಗರ ಸಂಭ್ರಮ. ಇಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರ ಹಾಗೂ ಮಾತೆ ಪದ್ಮಾವತಿ ಇದ್ದು ಇತ್ತೀಚಿಗೆ ಸುಮಾರು 54 ಅಡಿಗಳ ಎತ್ತರದ ಮುನಿಸೂರತ ತೀರ್ಥಂಕರ ಮೂರ್ತಿ ಹಾಗೂ 9 ಅಡಿಗಳ ಶೀತಲನಾಥ ತೀರ್ಥಂಕರ ಪದ್ಮಾಸನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಜೈನರ ಗುತ್ತಿಯ ಶ್ರೀ ಪಾರ್ಶ್ವನಾಥ ಬಸದಿಯ ಸಂಕೀರ್ಣವಾಗಿದ್ದು, ಗರ್ಭಗುಡಿ ಮಾತ್ರ ಇದ್ದು ಪೂರ್ವಭಿಮುಖವಾಗಿದೆ. ಪ್ರದಕ್ಷಿಣ ಪಥವಿದ್ದು ಬಸದಿಯ ಎರಡು ಬದಿ ಗಳ ಮೇಲ್ಭಾಗದಲ್ಲಿ 24 ಕೂಟಗಳನ್ನು ರಚಿಸಿ ಪದ್ಮಾಸನ ಮೂರ್ತಿಯ 24 ತೀರ್ಥಂಕರರ ಬಿಂಬಗಳಿವೆ. ಗರ್ಭಗುಡಿಯ ಶ್ರೀ ಪಾರ್ಶ್ವನಾಥ ತೀರ್ಥಂಕರ ಸ್ತಂಭಾಸನ ಬಂಗಿಯಲ್ಲಿದ್ದು…
ತುಮಕೂರು: ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯ ಘಟಕ ಹಾಗೂ ತುಮಕೂರು ಜಿಲ್ಲಾ ಘಟಕವು ಇದೇ ಪುಥಮ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟವನ್ನು ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನವೆಂಬರ್ 24ರಂದು ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರವಾಸ ಮಾಡಲಿರುವ ಕ್ರೀಡಾ ಜ್ಯೋತಿಗೆ ಸಚಿವ ಪರಮೇಶ್ವರ್ ಇಂದು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಹೊರಟ ಕ್ರೀಡಾ ಜ್ಯೋತಿ ಹೊತ್ತ ವಾಹನವನ್ನು ಚಾಲನೆ ಮಾಡುವ ಮೂಲಕ ಚಾಲನೆ ನೀಡಿದ ಸಚಿವ ಪರಮೇಶ್ವರ್, ಅವರ ಪತ್ನಿ ಕನ್ನಿಕಾ ಪರಮೇಶ್ವರ್ ಅವರು ಬಾವುಟ ಮೂಲಕ ಬೀಳ್ಕೊಟ್ಟರು. ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಪುವಾಸ ಮಾಡಲಿದ್ದು, ಸಹಕಾರ ನೀಡಿ ಯಶಸ್ವಿಗೊಳಿಸಲು ಸಚಿವರು ಇದೇ ವೇಳೆ ಕೋರಿದರು. ತುಮಕೂರಿನಿಂದ ಹೊರಟ ವಾಹನ ಕುಣಿಗಲ್ ಪಟ್ಟಣ ತಲುಪಿತು. ಕುಣಿಗಲ್ ನಿಂದ ಯಡಿಯೂರು ಮಾಯಸಂದ್ರ ಮೂಲಕ ಮಧ್ಯಾಹ್ನ 1.30 ಕ್ಕೆ ತುರುವೇಕೆರೆ ತಲುಪಲಿದೆ, ತುರುವೇಕೆರೆಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ನೊಣವಿನಕೆರೆ ಮೂಲಕ ಹೊರಟು ಮಧ್ಯಾಹ್ನ 3ಗಂಟೆಗೆ ತಿಪಟೂರು ನಗರ ತಲುಪಲಿದೆ,…
ತುಮಕೂರು: ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣದ ತೀರ್ಪು ಹೊರ ಬಿದ್ದಿದೆ. ತುಮಕೂರು ಜಿಲ್ಲಾ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಗೋಪಾಲಪುರದ ನಿವಾಸಿ ಹೊನ್ನಮ್ಮ ಡಾಬಾ ನಡೆಸುತ್ತಿದ್ದು, ಗ್ರಾಮದಲ್ಲಿ ದೇವಸ್ಥಾನ ನರ‍್ಮಿಸಲು ಮರದ ತುಂಡು ಸಂಗ್ರಹಿಸಿಟ್ಟಿದ್ದರು. ಮರದ ತುಂಡುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದಾಗಿ ಗ್ರಾಮದ ಜನರು ಹಾಗೂ ಹೊನ್ನಮ್ಮನ ಮಧ್ಯೆ ದ್ವೇಷ ಉಂಟಾಗಿತ್ತು. ಇದೇ ವಿಚಾರವಾಗಿ ಸದಾ ಒಂದಲ್ಲೊಂದು ರೀತಿಯಲ್ಲಿ ಜಗಳ ನಡೆಯುತಿತ್ತು. ದಲಿತ ಸಮುದಾಯಕ್ಕೆ ಸೇರಿದ್ದ ಹೊನ್ನಮ್ಮಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಗ್ರಾಮದಲ್ಲಿ ಮುಂದುವರಿದಿತ್ತು. ಕೊನೆಗೆ ಇದೇ ದ್ವೇಷದಲ್ಲಿ ಹೊನ್ನಮ್ಮ ಅವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. 2010ರಲ್ಲಿ ನಡೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನ್ಯಾಯಾಲಯವು, ಬರೋಬ್ಬರಿ 14 ವರ್ಷಗಳ ನಂತರ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳೆಂದು ರಂಗನಾಥ, ಮಂಜುಳ, ತಿಮ್ಮರಾಜು, ರಾಜು (ದೇವರಾಜು), ಶ್ರೀನಿವಾಸ್, ಆನಂದ (ಆನಂದಸ್ವಾಮಿ),…
ಹಾಸನ: ಜಿಲ್ಲೆಯ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ. ಕರುಣಾಕರ (40) ಸಾವಿಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸಕಲೇಶಪುರ ತಾಲ್ಲೂಕಿನ ಬಾಚೀಹಳ್ಳಿ ಗ್ರಾಮದವರಾದ ಕರುಣಾಕರ ಕಾಫಿ ಬೆಳೆಗಾರರಾಗಿದ್ದರು. ಕೌಟುಂಬಿಕ ಕಲಹದಿಂದ ನೊಂದಿದ್ದ ಈತ ಮನೆಯಲ್ಲಿ ಬಂದೂಕಿನಿಂದ ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹನೂರು: ಪುಣ್ಯ ಕ್ಷೇತ್ರ ಶ್ರೀ ಮಲೈ ಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರವು ದೇವಾಲಯದ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಸಿತು. ಕಳೆದ 27 ದಿನದಲ್ಲಿ ಸಂಗ್ರಹ ಆಗಿರುವ ಮಾದಪ್ಪನ ಹುಂಡಿಯಲ್ಲಿ 2,43,65,775/-ಕೋಟಿ ರೂ. ನಗದು 62 ಗ್ರಾಂ. ಚಿನ್ನ ಮತ್ತು 2.512 ಕೆ.ಜಿ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿದೆ. ಅಲ್ಲದೆ 05 ವಿದೇಶಿ ಕರೆನ್ಸಿ ಹಾಗೂ 2 ಸಾವಿರ ಮುಖಬೆಲೆ 22 ನೋಟುಗಳು ದೊರೆತಿದೆ. ಸಾಲೂರು ಬೃಹನಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀಗಳ ಉಪಸ್ಥಿತಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಶ್ರೀ ಮಲೈ ಮಹದೇಶ್ವರಬೆಟ್ಟದ ಖಾಸಗಿ ಬಸ್ ನಿಲ್ದಾಣ ವಾಣಿಜ್ಯ ಸಂಕೀರ್ಣ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಮತ್ತು ಶ್ರೀ ಮಲೈ ಮಹದೇಶ್ವರಬೆಟ್ಟ ಪೊಲೀಸರ ಬಂದೋಬಸ್ತ್ ನಲ್ಲಿ ಬೆಳಿಗ್ಗೆ 6:30 ಗಂಟೆಗೆ ಪ್ರಾರಂಭವಾದ ಹುಂಡಿ ಹಣ ಎಣಿಕೆ ಕಾರ್ಯವು ಸಂಜೆ 7ರವರೆಗೂ ನಡೆಯಿತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಬೆಂಗಳೂರು: ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 25 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಬೆಳ್ಳಂ ಬೆಳಗ್ಗೆ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ನಾಲ್ವರು ಅಧಿಕಾರಿಗಳಿಗೆ ಸಂಬಂಧಿಸಿದ 25 ಕಡೆಗಳಲ್ಲಿ ಲೋಕಾಯುಕ್ತ ತನಿಖಾಧಿಕಾರಿಗಳ ತಂಡ ಏಕ ಕಾಲದಲ್ಲಿ ದಾಳಿ ಮಾಡಿ ಶೋಧ ಕಾರ್ಯ ಕೈಗೊಂಡಿದೆ. ಬೆಂಗಳೂರಿನ ಬನಶಂಕರಿಯ ಒಂದನೇ ಹಂತದಲ್ಲಿರುವ ನಗರ ಯೋಜನಾ ಇಲಾಖೆಯ ನಿರ್ದೇಶಕರಾದ ತಿಪ್ಪೇಸ್ವಾಮಿ ಅವರ ನಿವಾಸ, ಕನಕಪುರ ರಸ್ತೆಯಲ್ಲಿರುವ ಅಬಕಾರಿ ಇಲಾಖೆಯ ಅಧೀಕ್ಷಕರಾದ ಮೋಹನ್ ಅವರ ನಿವಾಸ, ಮಂಡ್ಯದಲ್ಲಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಹಾಗೂ ಚಿಕ್ಕಬಳ್ಳಾಪುರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಅವರ ಮಂಗಳೂರು ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ದೂರಿನನ್ವಯ ಈ ನಾಲ್ವರು ಅಧಿಕಾರಿಗಳ ಮನೆಗಳು, ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮಂಡ್ಯ ಲೋಕಾಯುಕ್ತ…
ಇಂಫಾಲ: ಗುಂಪೊಂದು ಮಣಿಪುರದ ಜೆಡಿಯು ಶಾಸಕ ಜೋಯ್ ಕಿಶನ್ ಸಿಂಗ್ ಅವರ ನಿವಾಸಕ್ಕೆ ನುಗ್ಗಿ 18 ಲಕ್ಷ ರೂಪಾಯಿ ನಗದು ಮತ್ತು 1.5 ಕೋ.ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ತಂಗೈಬಂದ್ ಕ್ಷೇತ್ರದ ಶಾಸಕ ಕೆ ಜೋಯ್ ಕಿಶನ್ ಸಿಂಗ್ ಅವರ ತಾಯಿ ಘಟನೆ ಸಂಬಂಧ ಇಂಫಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್ ಐಆರ್ ದಾಖಲಿಸಲಾಗಿದೆ. ನವೆಂಬರ್ 16ರಂದು ಸಂಜೆ ಸುಮಾರು ಎರಡು ಗಂಟೆಗಳ ಕಾಲ ಗುಂಪು ಶಾಸಕರ ನಿವಾಸವನ್ನು ಧ್ವಂಸ ಮಾಡಿದೆ ಎಂದು ಅವರು ಹೇಳಿದರು. ಕಳೆದ ವಾರ ಜನಸಮೂಹವು ಅವರ ನಿವಾಸದ ಮೇಲೆ ದಾಳಿ ಮಾಡಿದಾಗ ಅವರ ಕುಟುಂಬದ ಸದಸ್ಯರೊಬ್ಬರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಶಾಸಕರು ದೆಹಲಿಯಲ್ಲಿದ್ದರು. ಶಾಸಕರ ನಿವಾಸದಿಂದ ಕೆಲವು ಮೀಟರ್ ದೂರದಲ್ಲಿರುವ ತಂಗೈಬಾಂಡ್ ನ ತೊಂಬಿಸಾನಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಥಾಪಿಸಲಾದ ಪರಿಹಾರ ಶಿಬಿರದಲ್ಲಿ ನೆಲೆಸಿರುವ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಯೊಬ್ಬರು, ಆಲೂಗಡ್ಡೆ ಮತ್ತು ಈರುಳ್ಳಿಯಂತಹ ತರಕಾರಿಗಳು ಮತ್ತು ಚಳಿಗಾಲದ ಬಟ್ಟೆಗಳಂತಹ ಇತರ ವಸ್ತುಗಳನ್ನು ಜನರಿಗೆ…
ತುಮಕೂರು: ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ತುಮಕೂರು ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತುಮಕೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಿ.ಎಲ್.ರಮೇಶ್ ಸೂಚಿಸಿದರು. ಅವರು ಮಂಗಳವಾರ ತುಮಕೂರು ತಾಲ್ಲೂಕು ಪಂಚಾಯಿತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಪಡೆದು, ಸದರಿ ಯೋಜನೆಗಳನ್ನು ತಾಲ್ಲೂಕಿನ ಅರ್ಹ ಫಲಾನುಭವಿಗಳಿಗೆ ಶೀಘ್ರಗತಿಯಲ್ಲಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ತುಮಕೂರು ತಾಲ್ಲೂಕಿನ ಗ್ಯಾರಂಟಿ ಯೋಜನೆಗಳ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಕುಮಾರ್ ಕೆ., ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ಅನುಷ್ಠಾನ ಇಲಾಖೆ ಅಧಿಕಾರಿಗಳು ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಮಂಗಳವಾರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಅವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, ಹಲ್ಮಿಡಿ ಶಾಸನ ಕನ್ನಡ ಲಿಪಿಯಲ್ಲಿ ರಚಿಸಲ್ಪಟ್ಟಿರುವ ಮೊಟ್ಟ ಮೊದಲ ಶಾಸನ. ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ ಈ ಶಾಸನ ದೊರೆತಿದ್ದು, ಕರ್ನಾಟಕ ಸಂಭ್ರಮ–50 ಹೆಸರಾಯಿತು. ಕರ್ನಾಟಕ–ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಈ ಶಾಸನದ ಪ್ರತಿಕೃತಿಯನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನಾವರಣಗೊಳಿಸಲಾಗಿದೆ ಎಂದು ತಿಳಿಸಿದರು. ಜಿಮ್ನಾಸ್ಟಿಕ್ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಜಿಲ್ಲಾ ಕ್ರೀಡಾ ಸಮಿತಿ ಕ್ರೀಡಾಪಟುಗಳನ್ನು ಅಭಿನಂದಿಸಿದ ಸಚಿವರು ವಾಲಿಬಾಲ್, ಫುಟ್ ಬಾಲ್, ಕಬಡ್ಡಿ, ಖೋ ಖೋ ಕ್ರೀಡೆಗಳಲ್ಲಿ ಜಿಲ್ಲೆಯು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಜಿಲ್ಲೆಯಲ್ಲಿ ಎಲ್ಲಾ ರೀತಿಯ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಜಿಲ್ಲೆಯ ಕ್ರೀಡಾಪಟುಗಳ ಅನುಕೂಲಕ್ಕಾಗಿ 58 ಕೋಟಿ ರೂ. ವೆಚ್ಚದಲ್ಲಿ ಉತ್ತಮ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ…
ತುಮಕೂರು: ತಾಲ್ಲೂಕಿನ ಹೆಬ್ಬೂರು ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರ ಆಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಅಂದಾಜು 7,286 ರೂ. ಮೌಲ್ಯದ 10.2 ಲೀಟರ್ ಪ್ರಮಾಣದ ಡೈಮಿಥೋಯೇಟ್–30% ಇ.ಸಿ.(ರೋಗಾರ್) ಎಂಬ ನಿಷೇಧಿತ ಕೀಟನಾಶಕವನ್ನು ಕೃಷಿ ಇಲಾಖೆಯ ಜಾರಿದಳ ವಿಭಾಗವು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದು ಕೀಟನಾಶಕ ಪರಿವೀಕ್ಷಕ ಹಾಗೂ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ. ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಈ ಕೀಟನಾಶಕ ಬಳಸುವುದನ್ನು ನಿಷೇಧ ಮಾಡಿದ್ದರೂ ಸಹ ಲೇಬಲ್‌ನಲ್ಲಿ ನಮೂದಿಸಿ ನ್ಯೂ ಪ್ಯಾಕ್ ಆಗ್ರೋ ಕೆಮ್ ಕಂಪನಿಯು ಡೈಮಿಥೋಯೇಟ್–30% ಇ.ಸಿ., (ರೋಗಾರ್) ಎಂಬ ಕೀಟನಾಶಕವನ್ನು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದರಿಂದ ಜಪ್ತಿ ಮಾಡಲಾಗಿದೆ. ಕೃಷಿ ಇಲಾಖೆಯ ಜಾರಿದಳ ವಿಭಾಗವು ನವೆಂಬರ್ 19ರಂದು ಶ್ರೀ ಲಕ್ಷ್ಮೀವೆಂಕಟೇಶ್ವರ ಆಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿ ನಿಯಮಾನುಸಾರ ಪರಿಶೀಲಿಸಿದಾಗ, ಮೇಲ್ಕಂಡ ಉಲ್ಲಂಘನೆ ಕಂಡು ಬಂದಿತ್ತು. ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ನಿಷೇಧಿತ ಕೀಟನಾಶಕ ದಾಸ್ತಾನಿಗೆ ಮಾರಾಟ…