Author: admin

ಕೊರಟಗೆರೆ: ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್ ಸಹಕಾರ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಯ ನಿರ್ದೇಶಕರ ಅಯ್ಕೆ ಚುನಾವಣೆ ನಡೆಯಲಿದ್ದು, ಒಟ್ಟು 362 ಮತದಾರರು ಬಿ–ವರ್ಗದ 7 ಸ್ಥಾನಗಳಿಗೆ ಮತ ಚಲಾಯಿಸಲಿದ್ದಾರೆ. ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್. ಸಹಕಾರ ಸಂಘದ 2025 ರ ಚುನಾವಣೆಯಲ್ಲಿ 8 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 4 ಸ್ಥಾನಗಳಿಗೆ ಅ.19 ರಂದು ಚುನಾವಣೆ ನಡೆಯಲಿದೆ. ಕೊರಟಗೆರೆ ತಾಲೂಕು ಟಿ.ಎ.ಪಿ.ಸಿ.ಎಂ.ಎಸ್ ಸಹಕಾರ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಯ ನಿರ್ದೇಶಕರ ಆಯ್ಕೆ ಚುನಾವಣೆ ನಡೆಯಲಿದ್ದು ಒಟ್ಟು 362 ಮತದಾರರು ಬಿ ವರ್ಗದ 7 ಸ್ಥಾನಗಳಿಗೆ ಮತ ಚಲಾಯಿಸಲಿದ್ದಾರೆ. ತಾಲೂಕು ವಿ.ಎಸ್.ಎಸ್.ಎನ್. ಸಹಕಾರ ಸಂಘಗಳಿಂದ ಉಮೇದುವಾರಿಕೆಯಾಗಿ ಬಂದ 14 ಮತದಾರರು ‘ಎ’ ವರ್ಗದ 5 ಸ್ಥಾನಕ್ಕೆ ಮತ ಚಲಾಯಿಸುವರು, ಈಗಾಗಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು, ‘ಎ’ ವರ್ಗಕ್ಕೆ 10 ಅಭ್ಯರ್ಥಿಗಳು ಹಾಗೂ ‘ಬಿ’ ವರ್ಗಕ್ಕೆ 55 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಅ.13 ನಾಮಪತ್ರ ವಾಪಸ್ ಪಡೆಯಲು ಕಡೇ ದಿನಾಂಕವಾಗಿದ್ದು. ‘ಎ’ ವರ್ಗದಿಂದ…

Read More

ಕೊರಟಗೆರೆ: ನಮ್ಮ ನಿಮ್ಮ ಜೀವನಕ್ಕೆ ಕಾನೂನು ಬಹಳ ಮುಖ್ಯ, ಹೇಗೆ ನಮ್ಮ ನೆರಳು ನಮ್ಮನ್ನು ಹೇಗೆ ಹಿಂಬಾಲಿಸುವುದೋ ಅದೇ ರೀತಿ ಕಾನೂನು ಸಹ ನಮ್ಮ ಜೊತೆ ಇರಬೇಕು ಎಂದು ಕಾನೂನು ಸಲಹೆಗಾರ ವಕೀಲರಾದ ಟಿ. ಕೃಷ್ಣಮೂರ್ತಿ ತಿಳಿಸಿದರು. ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ನಮ್ಮ ಹಕ್ಕು ಪಡೆಯಲು ನಮಗೆ ಕಾನೂನು ತುಂಬಾ ಅವಶ್ಯಕ, ಸಂವಿಧಾನದಲ್ಲಿ ಬಂದ ಕಾನೂನುಗಳ ಜೋತೆ ಹೊಸ ಹೊಸ ಕಾನೂನು ಸೇರ್ಪಡೆ ಆಗಿದೆ. ಈ ಎಲ್ಲಾ ಕಾನೂನು ನಮಗೆ ತಿಳಿದಿರಬೇಕು. ಹಾಗಾಗಿ ನಮಗೆ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ 1982 ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಬಂತು ಇದರಲ್ಲಿ ಬಹಳ ಪ್ರೀತಿಯಲ್ಲಿ ರಾಜ್ಯ ರಾಷ್ಟ್ರೀಯ ಹಾಗೂ ಜಿಲ್ಲಾ ತಾಲೂಕು ಕಾನೂನು ಪ್ರಾಧಿಕಾರಗಳಾಗಿ ವಿಂಗಡಣೆಯಾಗಿದೆ. ಬಡವರಿಗೆ ನ್ಯಾಯ ಪಡೆಯಲು ಈ ಪ್ರಾಧಿಕಾರ ಚಳುವಳಿಕೆ ನೀಡುವುದರ ಇದರ ಜೊತೆಗೆ ಯಾರು ಬಡವರು ವಕೀಲರಿಗೆ ಹಣ ನೀಡಿ ವಕೀಲರು ನೇಮಿಸಲು ಆಗದೆ…

Read More

ತುಮಕೂರು: 2025–26ನೇ ಸಾಲಿನ ತುಮಕೂರು ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯನ್ನು ದಿನಾಂಕ 24.10.2025 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೈಲ್ವೇ ಸ್ಟೇಷನ್ ರಸ್ತೆ, ತುಮಕೂರು ಇಲ್ಲಿ ಏರ್ಪಡಿಸಲಾಗಿದೆ. ಈ ಯುವಜನೋತ್ಸವ ಕಾರ್ಯಕ್ರಮದಲ್ಲಿ 15 ರಿಂದ ವರ್ಷದೊಳಗಿರುವ ವಿವಿಧ ಸಂಘಸಂಸ್ಥೆಗಳ ಯುವಕ/ ಯುವತಿಯರು ಹಾಗೂ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಕೆಳಕಂಡ ಸ್ಪರ್ಧೆಗಳ ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ. ಯುವಕ/ ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆ  ಇರುವುದಿಲ್ಲ. ಕವಿತೆ ಮತ್ತು ಭಾಷಣ ಸ್ಪರ್ಧೆ ಗುಬ್ಬಿ ವೀರಣ್ಣ ಕಲಾಕ್ಷೇತ್ರ ಬಾಲವನದಲ್ಲಿ ನಡೆಯಲಿದೆ  ಕಥೆ ಬರೆಯುವ ಸ್ಪರ್ಧೆ ತುಮಕೂರು ನಗರದ ಕೇಂದ್ರ ಗ್ರಂಥಾಲಯದಲ್ಲಿ ನಡೆಯಲಿದೆ. ಜನಪದ ಗೀತೆ ಸ್ಪರ್ಧೆಯು  ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಬಾಲಭವನದಲ್ಲಿ ನಡೆಯಲಿದೆ. ಜನಪದ ನೃತ್ಯ ಸ್ಪರ್ಧೆ ತುಮಕೂರು ರೈಲ್ವೇಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಚಿತ್ರಕಲೆ ಸ್ಪರ್ಧೆಯು ತುಮಕೂರಿನ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಜ್ಞಾನ ಮೇಳ ತುಮಕೂರು ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನಲ್ಲಿ 25.10.2025ರಂದು ನಡೆಯಲಿದೆ. ಸ್ಪರ್ಧಾಳುಗಳು ತಮ್ಮ ವಯಸ್ಸಿನ ದೃಡೀಕರಣ…

Read More

ತುಮಕೂರು: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆ ಕಟ್ಟಡವನ್ನು ಉದ್ಘಾಟನೆ ಮಾಡಿದ ಬಳಿಕ 41 ಕೋಟಿ ವೆಚ್ಚದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು. ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ್ದ ಸಚಿವರು ನೂತನ ಕಟ್ಟಡ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 69.96 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 100 ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆ ಕಟ್ಟಡವನ್ನು ನ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದರು. ಕ್ಯಾನ್ಸರ್ ಆಸ್ಪತ್ರೆಗೆ ಯಂತ್ರೋಪಕರಣ ಅಳವಡಿಕೆ ಹಾಗೂ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕಿದೆ. ಈ ಸಂಬಂಧ ಸಿದ್ಧಪಡಿಸಿರುವ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ತರಲಾಗುವುದು. ಅಲ್ಲಿ ಒಪ್ಪಿಗೆ ಸಿಕ್ಕಿದ ನಂತರ ಕೆಲಸ ಆರಂಭವಾಗಲಿದೆ. ಈಗ ಕಟ್ಟಡ ಉದ್ಘಾಟನೆಯಾದರೂ ಉಪಕರಣ ಅಳವಡಿಕೆ, ಸಿಬ್ಬಂದಿ ನೇಮಕವಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಇನ್ನೂ ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು. ಎಲ್ಲ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜಿನ ಜತೆಗೆ ಸೂಪರ್ ಸ್ಪೆಷಾಲಿಸಿ ಆಸ್ಪತ್ರೆ,…

Read More

ಕುಣಿಗಲ್‌: ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪುರುಷೋತ್ತಮ್ ಮಂಗಳವಾರ ಕುಣಿಗಲ್ ಪೊಲೀಸ್ ಠಾಣೆಗೆ ಬಂದು ಪರಿಶಿಷ್ಟರ ಕುಂದುಕೊರತೆ ಆಲಿಸಿದರು. ಡಿವೈಎಸ್‌ ಪಿ ಮತ್ತು ಅಮೃತೂರು ಪಿಎಸ್‌ ಐ ದಲಿತರ ಸಮಸ್ಯೆಗಳಿಗೆ ಸ್ಪಂದಿಸದೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಭಾನುವಾರ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟರ ಕುಂದುಕೊರತೆ ಸಭೆಯನ್ನು ದಲಿತ ಮುಖಂಡರು ಬಹಿಷ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ ಪಿ ಭೇಟಿ ನೀಡಿದ್ದರು. ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರು, ಇತ್ತೀಚೆಗೆ ತಾಲ್ಲೂಕಿನ ಹೆಗ್ಗಡತಿಹಳ್ಳಿ, ಚಾಕೇನಹಳ್ಳಿ, ಕೊಡವತ್ತಿ, ಹೊನ್ನಮಾಚನಹಳ್ಳಿ ಮತ್ತು ವಾಣಿಗೆರೆಗಳಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಡಿವೈಎಸ್‌ ಪಿ ಓಂಪ್ರಕಾಶ್ ಮತ್ತು ಅಮೃತೂರು ಪಿಎಸ್‌ ಐ ವರ್ತನೆಗಳನ್ನು ಖಂಡಿಸಿ ಮಾಹಿತಿ ನೀಡಿದರು. ಪೊಲೀಸ್ ಅಧಿಕಾರಿಗಳು ದಲಿತರೊಂದಿಗೆ ಸೌಜನ್ಯದಿಂದ ವರ್ತಿಸದೆ, ಪೂರ್ವಾಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ. ನ್ಯಾಯ ಕೇಳಲು ಹೋದವರಿಗೆ ಬೆದರಿಕೆ ಹಾಕಿ ಠಾಣೆಯಿಂದ ಹೊರಗಟ್ಟುತ್ತಿದ್ದಾರೆ ಎಂದು ದೂರಿದರು. ಸಮಸ್ಯೆಗಳನ್ನು ಆಲಿಸಿದ ಎಎಸ್‌ ಪಿ ಪುರುಷೋತ್ತಮ್, ಕೆಳ ಹಂತದ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುವ…

Read More

ಶಿರಾ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಒಂದೆಡೆ ಬೀದಿನಾಯಿ ಮತ್ತೊಂದು ಕಡೆ ಕೋತಿ, ಬೀಡಾಡಿ ದನಗಳ ಉಪಟಳವೂ ಹೆಚ್ಚುತ್ತಿದ್ದು ಜನ ಹೈರಾಣಾಗುತ್ತಿದ್ದಾರೆ. ನಗರದ ಪ್ರಮುಖ ರಸ್ತೆಯಲ್ಲಿ ಹಿಂಡು ಹಿಂಡಾಗಿ ಓಡಾಡುವ ಬೀದಿ ನಾಯಿಗಳಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಓಡಾಟ ನಡೆಸುವುದು ಕಷ್ಟವಾಗಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಚರ್ಚೆಗೆ ಬಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಬೀದಿನಾಯಿಗಳನ್ನು ಹಿಡಿಯಲು ಸಾಧ್ಯವಿಲ್ಲ, ಹಿಡಿದರೆ ಪ್ರಾಣಿ ದಯಾ ಸಂಘದವರು ಬರುತ್ತಾರೆ. ಆದ್ದರಿಂದ ಏನು ಮಾಡಲು ಸಾಧ್ಯವಿಲ್ಲ. ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡುವುದರ ಮೂಲಕ ನಾಯಿಗಳ ಹೆಚ್ಚಳಕ್ಕೆ ಕಡಿವಾಣ ಹಾಕುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಒಂದು ಸಾವಿರ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿರುವುದಾಗಿ ನಗರಸಭೆ ಆಡಳಿತ ಲೆಕ್ಕ ನೀಡಿದರು ಸಹ ನಾಯಿಗಳ ಹಾವಳಿ ಕಡಿಮೆಯಾಗಿಲ್ಲ. ಸಾಕು ನಾಯಿಗಳನ್ನು ಸಹ ಬೀದಿಗೆ ಬಿಡುವುದರಿಂದ ಸಮಸ್ಯೆ ಹೆಚ್ಚಾಗಿದೆ. ರಸ್ತೆಯಲ್ಲಿ ಮಕ್ಕಳು…

Read More

ಗುಬ್ಬಿ: ತಾಲ್ಲೂಕಿನಲ್ಲಿ ಹೆದ್ದಾರಿ ಹಾಗೂ ವರ್ತುಲ ರಸ್ತೆಗಳ ಸಮೀಪದ ಗ್ರಾಮಸ್ಥರು ರಸ್ತೆಗಳ ಎರಡೂ ಬದಿಗಳಲ್ಲಿ ಹಾಗೂ ಹೆದ್ದಾರಿಯ ವಿಭಜಕಗಳ ಮಧ್ಯೆ ಬೆಳೆದಿರುವ ಹುಲ್ಲಿನಲ್ಲಿ ರಾಸುಗಳನ್ನು ಬಿಟ್ಟು ಮೇಯಿಸುತ್ತಿದ್ದು, ಇದರಿಂದ ಅಪಘಾತಗಳ ಹೆಚ್ಚಾಗಲು ಕಾರಣವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಮೊದಲೆಲ್ಲ ರೈತರು ತಮ್ಮ ಜಮೀನುಗಳಲ್ಲಿಯೇ ರಾಸುಗಳನ್ನು ಮೇಯಿಸುತ್ತಿದ್ದರು. ಜಮೀನು ಬದುಗಳಲ್ಲಿ ವಿವಿಧ ರೀತಿಯ ಗಿಡ, ಹುಲ್ಲುಗಳನ್ನು ತಿನ್ನುತ್ತಿದ್ದರಿಂದ ರಾಸುಗಳ ಆರೋಗ್ಯವು ಉತ್ತಮವಾಗಿರುತ್ತಿತ್ತು. ಜೊತೆಗೆ ಗುಣಮಟ್ಟದ ಹಾಲನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಇತ್ತೀಚೆಗೆ ಹೆದ್ದಾರಿ ಹಾಗೂ ವರ್ತುಲ ರಸ್ತೆಗಳ ಬದಿಗಳಲ್ಲಿ ಹುಲ್ಲು ಸೊಗಸಾಗಿ ಬೆಳೆಯುತ್ತಿರುವುದರಿಂದ, ರಾಸುಗಳನ್ನು ಸುಲಭವಾಗಿ ಮೇಯಿಸಬಹುದು ಎಂಬ ಕಾರಣಕ್ಕಾಗಿ ರೈತರು ಅಲ್ಲಿಗೆ ಮೊರೆಹೋಗುತ್ತಿದ್ದಾರೆ. ಹೆದ್ದಾರಿ ಹಾಗೂ ವರ್ತುಲ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಜೊತೆಗೆ ವಾಹನಗಳು ವೇಗವಾಗಿ ಸಾಗುತ್ತಿರುವಾಗ ರಾಸುಗಳು ಅಡ್ಡಬಂದು ಅಪಘಾತಗಳು ಹೆಚ್ಚಾಗುತ್ತಿವೆ. ಇದರಿಂದ ರೈತರು ಹಾಗೂ ವಾಹನ ಸವಾರರಿಬ್ಬರೂ ತೊಂದರೆ ಅನುಭವಿಸುವಂತೆ ಆಗುತ್ತಿದೆ. ರಸ್ತೆ ವಿಭಜಕದ ಮಧ್ಯದಲ್ಲಿ ಮೇಯುತ್ತಿರುವ ರಾಸುಗಳು ವಾಹನಗಳು ಸಂಚರಿಸುವಾಗ ಅಡ್ಡ ಬಂದು ಅನೇಕ…

Read More

ಸರಗೂರು:  ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗುವ ವಿಚಾರ ‘ಸಾಮಾಜಿಕ ಮಾಧ್ಯಮ’ಗಳಲ್ಲಿ ಹೊರಬಂದ ಹಿನ್ನೆಲೆಯಲ್ಲಿ ತಾಲೂಕಿನ ಸಾಗರೆ ಗ್ರಾಮಕ್ಕೆ ತಹಶೀಲ್ದಾರ್ ಮೋಹನಕುಮಾರಿ ಅವರು ಮಂಗಳವಾರ ಭೇಟಿ ನೀಡಿ, ಅಧಿಕಾರಿಗಳು, ಗ್ರಾಮಸ್ಥರೊಂದಿಗೆ ವಿಚಾರಣಾ ಸಭೆ ನಡೆಸಿದರು. ಬಳಿಕ ವ್ಯಕ್ತಿಯೊಬ್ಬರಿಗೆ ಹಾಕಲಾಗಿದೆ ಎನ್ನಲಾಗುವ ‘ಬಹಿಷ್ಕಾರ’ ಎಂಬ ಆರೋಪ ಸತ್ಯಕ್ಕೆ ದೂರುವಾದುದು ಎಂಬ ಅಂಶ ಬೆಳಕಿಗೆ ಬಂದಿತು. “ಗ್ರಾಮದಲ್ಲಿ ದೊಡ್ಡತಾಯಮ್ಮ, ಎಸ್.ಎಂ.ನಂಜೇಗೌಡ ಎಂಬವರು ವಾಸಿಸುತ್ತಿದ್ದು, ಸರ್ವೇ ನಂ. 436ರ ಸರಕಾರಿ ಖರಾಬು ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆ ನಿರ್ಮಿಸಿಕೊಂಡಿರುವುದು ಸರ್ವೇ ಇಲಾಖೆ ನಡೆಸಲಾದ ಆಳತೆಯಲ್ಲಿ ಕಂಡು ಬಂದಿರುತ್ತದೆ. ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಜಾಗ ಬೇಕಾಗಿರುವುದರಿಂದ ಎಸ್.ಎಂ.ನಂಜೇಗೌಡ, ದೊಡ್ಡತಾಯಮ್ಮ ಅವರ ಗಮನಕ್ಕೆ ತಂದಾಗ 3 ತಿಂಗಳ ಕಾಲಾವಧಿ ನೀಡಿ ನಂತರ ಬಿಟ್ಟುಕೊಡುವುದಾಗಿ ಹೇಳಿದರು. 3 ತಿಂಗಳ ಬಳಿಕ ಮನೆ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದು, ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಯ ರಕ್ಷಣೆಗಾಗಿ ‘ಬಹಿಷ್ಕಾರ’ ಎಂಬ ಪದ ಬಳಕೆ ಮಾಡಿಕೊಂಡಿದ್ದಾರೆ” ಎಂದು ತಹಶೀಲ್ದಾರ್ ಮೋಹನಕುಮಾರಿ ಅವರಿಗೆ ಗ್ರಾಮಸ್ಥರು ದೂರಿದರು.…

Read More

ಸರಗೂರು:  ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆಯ ವೇಳೆಯಲ್ಲಿ ಒಬ್ಬ ವ್ಯಕ್ತಿಯ ಬಳಿ  ಕಪ್ಪುಕವರಿನಲ್ಲಿ ಹೂ ತೆನೆ ಬೀಜ ಮಿಶ್ರಿತ ಒಣ  ಗಾಂಜಾ ಹೊಂದಿರುವುದು ಪತ್ತೆಯಾಗಿದ್ದು,  ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯನ್ನು ನಂಜನಗೂಡು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಜಂಟಿ ಆಯುಕ್ತರು ಮೈಸೂರು ವಿಭಾಗ ಮೈಸೂರು ಹಾಗೂ ಅಬಕಾರಿ ಉಪ ಆಯುಕ್ತರು ಮೈಸೂರು ಗ್ರಾಮಾಂತರ ಜಿಲ್ಲೆ ಮತ್ತು ಅಬಕಾರಿ ಉಪ ಅಧೀಕ್ಷಕರು ನಂಜನಗೂಡು ಉಪ ವಿಭಾಗ ರವರ ನಿರ್ದೇಶನದಂತೆ ಅಬಕಾರಿ ಸಿಬ್ಬಂದಿಯೊಂದಿಗೆ ದಿನಾಂಕ ಸೋಮವಾರ ಸಮಯ 7.15 ಪಿ ಎಂ ರಂದು ಇಲಾಖಾ ವಾಹನದಲ್ಲಿ ಮಚೂರು ಗ್ರಾಮದಲ್ಲಿ  ಗಸ್ತು ನಡೆಸುತ್ತಿದ್ದಾಗ ಅಬಕಾರಿ ನಿರೀಕ್ಷಕರು ಬಾವಲಿ ಚೆಕ್ ಪೋಸ್ಟ್ ರವರಿಗೆ ದೂರವಾಣಿ ಮೂಲಕ  ಬಂದ ಮಾಹಿತಿ ಮೇರೆಗೆ  ಅವರು ಚೆಕ್ ಪೋಸ್ಟ್ ನಲ್ಲಿ ತಪಾಸಣೆಯ  ಮಾಡುತ್ತಿದ್ದರು.  ಒಬ್ಬ ಆಸಾಮಿಯ ಬಳಿ ಕಪ್ಪುಕವರಿನಲ್ಲಿ ಹೂ ತೆನೆ ಬೀಜ ಮಿಶ್ರಿತ ಒಣ  ಗಾಂಜಾ ಹೊಂದಿರುವುದರಿಂದ ಮುಂದಿನ ಕ್ರಮಕ್ಕಾಗಿ ದೂರವಾಣಿ ಕರೆ ಮಾಡಿ ಅಬಕಾರಿ ನಿರೀಕ್ಷಕರು…

Read More

ಬೀದರ್: ಜಿಲ್ಲೆಯ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನಲೆಯಲ್ಲಿ ಕೃಷಿ ಇಲಾಖೆಯ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಸಹಾಯಕ ನಿರ್ದೇಶಕ ಧೂಳಪ್ಪ ಹೊಸಾಳೆ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ. ತಾಲೂಕು ಕೃಷಿ ಅಧಿಕಾರಿ ಬಳಿ ಅಂದಾಜು 1.82 ಕೋಟಿ ಸ್ಥಿರಾಸ್ತಿ ಹಾಗೂ ಚರಾಸ್ಥ 1.52 ಕೋಟಿ ರೂ.ಪತ್ತೆ ಮಾಡಿದ್ದಾರೆ. ದಾಳಿ ವೇಳೆ ಧೂಳಪ್ಪಾ ಮನೆಯಲ್ಲಿ ನಗದು 83 ಲಕ್ಷ ರೂ. ಇರುವುದನ್ನು ಪತ್ತೆ ಮಾಡಿದ್ದಾರೆ ಒಟ್ಟು 33 ಎಕರೆ ಕೃಷಿ ಭೂಮಿ, 2 ನಿವೇಶನ. ದುಬಾರಿ ವಾಹನಗಳು. ಒಂದು ಮನೆ ಪತ್ತೆ ಮಾಡಿದ್ದು. ಒಟ್ಟು 3.39 ಕೋಟಿ ರೂ ಆಸ್ತಿ ಪತ್ತೆ ಮಾಡಿದ್ದಾರೆ. ಅಂದಾಜು 275 ಪ್ರತಿಶತ ಹೆಚ್ಚು ಆಸ್ತಿ ಇರುವುದನ್ನು ಪತ್ತೆ ಮಾಡಿದ್ದಾರೆ. ಧೂಳಪ್ಪ ಅವರಿಗೆ ಸೇರಿದ ಇಲ್ಲಿನ ಗುರುನಗರದಲ್ಲಿನ ಮನೆ. ಸ್ವಗ್ರಾಮವಾದ ಭಾಲ್ಕಿ ತಾಲೂಕಿನ ಕರಡಾಳ. ಪತ್ನಿಯ ತವರು ಮನೆಯಾದ ಕಮಲನಗರ ತಾಲೂಕಿನ ಮುಧೋಳ ಮನೆ ಹಾಗೂ ಔರಾದ್ ಪಟ್ಟಣದಲ್ಲಿ…

Read More