Subscribe to Updates
Get the latest creative news from FooBar about art, design and business.
- ಕೆಪಿಸಿಸಿಗೆ ಬಿ.ಕೆ.ಹರಿಪ್ರಸಾದ್ ಹೊಸ ಸಾರಥಿ: ಹೈಕಮಾಂಡ್ ಮಹತ್ವದ ನಿರ್ಧಾರ
- ಸಿಎಂ ಕುರ್ಚಿ ನನ್ನದಲ್ಲ, ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ: ಸಿಎಂ ಡಿ.ಕೆ.ಶಿವಕುಮಾರ್
- ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ!
- ಸಾದರ ಸಮುದಾಯ ಭವನದಲ್ಲಿ ಸಪ್ತಗಿರಿ ಆಸ್ಪತ್ರೆ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ
- ಖಾಸಗಿ ಶಾಲೆಗಳ ಮಾದರಿಯಲ್ಲೇ, ಸರ್ಕಾರಿ ಶಾಲೆಗಳ ರೂಪಾಂತರ: ಡಿ.ಕೆ.ಶಿವಕುಮಾರ್
- ತುಮಕೂರು ವಿವಿ 19ನೇ ಘಟಿಕೋತ್ಸವ: 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕ
- ಶಾಲೆಗಳ ಪುನರಾರಂಭ: ದಾಖಲಾತಿ ಆಂದೋಲನಕ್ಕೆ ಡಿ.ಸಿ. ಚಾಲನೆ
- ಸಚಿವ ಸ್ಥಾನದ ಆಸೆ ನನಗೂ ಇದೆ ಕೊಟ್ಟರೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವೆ: ಹೆಚ್.ವಿ.ವೆಂಕಟೇಶ್
Author: admin
ಬೆಂಗಳೂರು : ಆರ್.ಆರ್.ನಗರ ಶಾಸಕ ಮುನಿರತ್ನ ವಿಚಾರವಾಗಿ ನೋಟಿಸ್ ಕೊಟ್ಟಿದ್ದೇವೆ. ಎಫ್ ಎಸ್ ಎಲ್ ವರದಿ ಬಳಿಕ ಶಾಸಕ ಸ್ಥಾನದ ರಾಜೀನಾಮೆ ಪಡೆಯುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನೋಟಿಸ್ ನೀಡಿದ್ದೇವೆ, ಎಫ್ ಎಸ್ ಎಲ್ ವರದಿ ಬಳಿಕ ಶಾಸಕ ಸ್ಥಾನದ ರಾಜೀನಾಮೆ ಪಡೆಯುತ್ತೇವೆ ಎಂದರು. ಜಾತಿಗಣತಿ: ಜಾತಿಗಣತಿ ಹೇಳಿ ಮಾಡಿಸಿದ್ದಾರೆಂದು ನಿಮ್ಮ ಪಕ್ಷದವರೇ ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್, ಕೆ. ಸುಧಾಕರ್, ಶಾಮನೂರು ಶಿವಶಂಕರಪ್ಪ ವಿರೋಧ ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯದವರು ಕೂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನಿಮ್ಮ ಗೊಂದಲಗಳನ್ನು ಬಿಜೆಪಿಯ ಮೇಲೆ ಹಾಕಬೇಡಿ ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಬೆಳಗಾವಿ ಸಚಿವರು ರೋಡ್ ಶೋ ಮಾಡುತ್ತಿದ್ದಾರೆ. ಉದ್ಯಮಿಗಳು ಮಾಡುವ ರೀತಿ ಸಚಿವರು ರೋಡ್ ಶೋ ಮಾಡುತ್ತಿದ್ದಾರೆ.ಕೊಡಗು, ಚಾಮರಾಜನಗರ, ಚಿಕ್ಕಮಂಗಳೂರು ಕಡೆಗೆ ರೋಡ್ ಶೋ ನಡೆಸಿದ್ದಾರೆ. ನಾನೇ ಸಿಎಂ ನಾನೇ ಸಿಎಂ ಅಂತ ಯಾರು ಹೇಳುತ್ತಿದ್ದಾರೆ? ಡಿ.ಕೆ. ಹೇಳಿಕೆಗಳಿಗೆ ಕಡಿವಾಣ…
ಹುಬ್ಬಳ್ಳಿ: ವ್ಯಾಪಾರಿಯೊಬ್ಬರ ಬೆತ್ತಲೆ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಜೋಯಾ ನದಾಫ, ಪರ್ವಿನ ಬಳ್ಳಾರಿ, ಸಯ್ಯದ್ ತಹಶೀಲ್ದಾರ, ತೌಸಿಫ್, ಅಬ್ದುಲ್ ಬಂಧಿತರಾಗಿದ್ದಾರೆ ಎಂದು ಡಿಸಿಪಿ ಮಹಾನಿಂಗ ನಂದಗಾಂವಿ ತಿಳಿಸಿದ್ದಾರೆ. ಪಾತ್ರೆ ವ್ಯಾಪಾರಿ ಚಗನ್ ಲಾಲ್ ಎಂಬುವರೆ ಈ ಗ್ಯಾಂಗ್‌ನಿಂದ ಮೋಸಕ್ಕೊಳಗಾಗಿರುವ ವ್ಯಾಪಾರಿಯಾಗಿದ್ದು, ಬಂಧಿತ ಜೋಯಾ, ಚಗನ್ ಲಾಲ್ ಅವರ ಮೊಬೈಲ್ ಗೆ ಕರೆಮಾಡಿ ಪರಿಚಯಿಸಿಕೊಂಡು ಉಣಕಲ್ ಕ್ರಾಸ್ ಗೆ ಕರೆಸಿಕೊಂಡಿದ್ದಾಳೆ. ನಂತರ ರಾಜನಗರದ ಮನೆಗೆ ಕರೆದುಕೊಂಡು ಹೋಗಿ ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾಳೆ. ತದನಂತರ ಐವರು ಸೇರಿ ಕೇಳಿದಷ್ಟು ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಚಗನ್ ಲಾಲ್‌ರು ಸೋಮವಾರ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ತಂಡದ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಂದ ಎರಡು ಬೈಕ್, ಐದು ಮೊಬೈಲ್ ಫೋನ್ಸ್, 9…
ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ಹೊಸ ಹೇರ್ ಸ್ಟೈಲ್ ಗೆ ಬಂದ ಕಾಮೆಂಟ್ ಗಳಿಗೆ ತಲೆಬಾಗಿ ಕೊನೆಗೂ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಕೆದರಿದ ಕೂದಲುಗಳನ್ನು ಬಿಟ್ಟು ಪೋಸ್ ಕೊಟ್ಟಿದ್ದ ಪ್ರತಾಪ್ ಸಿಂಹ ಹೊಸ ಸ್ಟೈಲ್ ಕೆಲವರಿಗೆ ಇಷ್ಟವಾಗಿದ್ದರೆ, ಸಾಕಷ್ಟು ಜನ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ನೀವು ಜನಪ್ರತಿನಿಧಿಯಾಗಿ ಈ ರೀತಿಯಾಗಿ ಕೆದರಿದ ಕೂದಲಿನಿಂದ ಕಾಣಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿ ಬಂದಿತ್ತು. ವರದಿಗಳ ಪ್ರಕಾರ ಕೇಂದ್ರ ಸಚಿವರೊಬ್ಬರು ಕೂಡ ಪ್ರತಾಪ್ ಸಿಂಹ ಅವರನ್ನ ತರಾಟೆಗೆತ್ತಿಕೊಂಡಿದ್ದರಂತೆ. ಹೀಗಾಗಿ ಕೊನೆಗೂ ಪ್ರತಾಪ್ ಸಿಂಹ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಮೇಲ್ನೋಟಕ್ಕೆ ಇದು ಅವೈಜ್ಞಾನಿಕ ಜಾತಿಗಣತಿ ಎಲ್ಲಾ ಸಮುದಾಯಕ್ಕೂ ಸಾಮಾಜಿಕ, ಶೈಕ್ಷಣಿಕ ನ್ಯಾಯ ಸಿಗಬೇಕು, ಆ ರೀತಿಯಲ್ಲಿ ವರದಿಯನ್ನ ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ. ಜಾತಿ ಜನಗಣತಿ ಜಾರಿಗೆ ವಿರೋಧ ವ್ಯಕ್ತಪಡಿಸಿ ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾನಾಡಿದ ಅವರು, ನಾನು ಹಿಂದೆ ಇದರ ಬಗ್ಗೆ ಒಂದು ಸಾರಿ ಪ್ರಸ್ತಾಪ ಮಾಡಿದ್ದೆ, ನಮ್ಮ ಒಕ್ಕಲಿಗರಲ್ಲಿ ಒಳಪಂಗಡಗಳು ಇವೆ. ಲಿಂಗಾಯತರಲ್ಲೂ ಒಳಪಂಗಡಗಳು ಇವೆ ಎಂದು ಹೇಳಿದರು. ಕುಂಚಿಟಿಗರು ಕೇವಲ ಕುಂಚಿಟಿಗ ಅಂತ ಬರೆದಿರ್ತಾರೆ ನಮ್ಮಲ್ಲಿ ಕುಂಚಿಟಿಗ ಒಕ್ಕಲಿಗ ಅಂತ ಬರೆದಿರಲ್ಲ, ಸರ್ಪ ಒಕ್ಕಲಿಗರು ಇದ್ದಾಗ ಕೇವಲ ಸರ್ಪರು ಅಂತ ಬರಿತಾರೆ, ಅದ್ಯಾವುದು ಕೂಡಾ ಆಗ ನಮ್ಮ ಸಮುದಾಯದ ಪಟ್ಟಿಯಲ್ಲಿ ಬರಲ್ಲ ಎಂದು ಹೇಳಿದರು. ಇವರು ವರದಿ ತಯಾರು ಮಾಡಿದವರು ಕೂಡಾ ಕುಂಚಿಟಿಗ ಅಂತ ಬರೆದುಕೊಂಡು ಹೋಗಿರ್ತಾರೆ ನಮ್ಮಲ್ಲಿ ವಿರೋಧ ಯಾಕೆ ಅಂದ್ರೆ ಒಟ್ಟಿಗೆ ಒಕ್ಕಲಿಗ ಅಂತ ಮಾಡಲಿ ಅಂತ. ಲಿಂಗಾಯತ ಸಮುದಾಯದಲ್ಲೂ ಸಹ ಅದೇ ರೀತಿ ಆಗಿರಬಹುದು ಎಂದರು. ಅವರಲ್ಲಿಯೂ…
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಕುರಿತು ಜಾರಿನಿರ್ದೇಶನಾಲಯ (ಇಡಿ) ಮುಡಾ ಅಧಿಕಾರಿಗಳಿಗೆ ದಾಖಲೆ ನೀಡಲು ನೋಟೀಸ್ ಜಾರಿ ಮಾಡಿದೆ. ಈಗಾಗಲೇ ಇಡಿ ಪ್ರಕರಣಕ್ಕೆ ಸಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ದೇವರಾಜ್ ವಿರುದ್ಧ ಇಸಿಐಆರ್ ದಾಖಲಿಸಿತ್ತು. ಇದರ ಬೆನ್ನಲ್ಲೇ ಪ್ರಕರಣದ ಪ್ರಮುಖ ಕೇಂದ್ರ ಬಿಂದು ಆಗಿರುವ ಮುಡಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿರುವ ಇಡಿ ಮೂರರಿಂದ 4 ದಿನದೊಳಗೆ ಸಂಭಂಧಪಟ್ಟ ದಾಖಲೆಗಳನ್ನು ನೀಡಬೇಕೆಂದು ಸೂಚನೆ ಕೊಟ್ಟಿದೆ. ಮೈಸೂರಿನ ಕೆಸರೆ ಗ್ರಾಮದಲ್ಲಿ 50:50ರ ಅನುಮಪಾತದಲ್ಲಿ ನಿವೇಶನ ಹಂಚಿಕೆ ಸಂಭಂದ ಕೇಳಿಬಂದಿರುವ ಆರೋಪಗಳ ಕುರಿತು ಸಮಗ್ರವಾದ ದಾಖಲೆಗಳನ್ನು ಒದಗಿಸಬೇಕು. ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ನಾಲ್ಕು ದಿನದೊಳಗೆ ದಾಖಲೆಗಳನ್ನು ತರಬೇಕೆಂದು ಮುಡಾ ಆಯುಕ್ತರಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಮೈಸೂರು ನಗರದಿಂದ 15 ಕಿ.ಮೀ ದೂರದಲ್ಲಿರುವ ಕೆಸರೆ ಗ್ರಾಮದಲ್ಲಿ ಮುಖ್ಯಮಂತ್ರಿ ಪತ್ನಿಗೆ ಪರ್ಯಾಯ ನಿವೇಶನ ನೀಡಬೇಕಾದಲ್ಲಿ ಯಾವುದಾದರೂ ಬಡಾವಣೆಯನ್ನು…
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ಹಳೆಯ ಮಿತ್ರ ಕಾಂಗ್ರೆಸ್ ನ ಕೈ ಬಿಟ್ಟು, ಬಿಜೆಪಿಗೆ ಜೈ ಎನ್ನುತ್ತಾರಾ ಅನ್ನುವ ಅನುಮಾನ ಇದೀಗ ಸೃಷ್ಟಿಯಾಗಿದೆ. ಒಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ನ್ಯಾಷನಲ್ ಕಾನ್ಫರೆನ್ಸ್ ಗೆದ್ದಿರುವುದು 42 ಸ್ಥಾನಗಳು. ಇನ್ನೊಂದು ಪಕ್ಷದ ಬೆಂಬಲದೊಂದಿಗೇ ಒಮರ್ ಅಬ್ದುಲ್ಲಾ ಸರ್ಕಾರ ನಡೆಸಬೇಕಿದೆ. ಹೀಗಿರುವಾಗ ಕಾಂಗ್ರೆಸ್ ಜೊತೆಗೇ ಇರುತ್ತಾರಾ ಅಥವಾ ಬಿಜೆಪಿ ಕೈ ಹಿಡಿಯುತ್ತಾರಾ ಎಂಬ ಅನುಮಾನ ಮೂಡಿದೆ. ಜಮ್ಮು ಕಾಶ್ಮೀರದಲ್ಲಿ ತಮ್ಮ ಪಕ್ಷದ ಗೆದ್ದ ಬಳಿಕ ಒಮರ್ ಅಬ್ದುಲ್ಲಾ ನಿನ್ನೆಯಿಂದ ಮೋದಿ ಸರ್ಕಾರವನ್ನು ಕೊಂಡಾಡುತ್ತಿದ್ದಾರೆ. ಮೋದಿ ಸರ್ಕಾರ ಈ ಹಿಂದೆ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅದನ್ನು ಬಿಟ್ಟು ನಾವು ಕೇಂದ್ರದ ಜೊತೆಗೇ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ. ಹೀಗಾಗಿ ಒಮರ್ ಅಬ್ದುಲ್ಲಾ 29 ಸ್ಥಾನ ಗೆದ್ದಿರುವ ಬಿಜೆಪಿ ಬೆಂಬಲ ಪಡೆದರೂ ಅಚ್ಚರಿಯಿಲ್ಲ. ಒಂದು ವೇಳೆ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಒಮರ್ ಅಬ್ದುಲ್ಲಾ…
ನವದೆಹಲಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಕಾಂತಾರ ಸಿನಿಮಾದ ಅಭಿನಯಕ್ಕಾಗಿ ನಟ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಿದರು. ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’ ಮತ್ತು ಈ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅದಷ್ಟೇ ಅಲ್ಲ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ‘ಕೆಜಿಎಫ್ 2’ಗೆ ರಾಷ್ಟ್ರ ಪ್ರಶಸ್ತಿ ದಕ್ಕಿದ್ದು, ಚಿತ್ರದ ನಿರ್ಮಾಣ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಮಧ್ಯಂತರ ಸಿನಿಮಾಗಾಗಿ ಬೆಸ್ಟ್ ಡೆಬ್ಯೂ ನಿರ್ದೇಶಕ ಬಸ್ತಿ ದಿನೇಶ್ ಶೆಣೈ. ಅತ್ಯುತ್ತಮ ಸಂಕಲನಕ್ಕಾಗಿ ಸುರೇಶ್ ಅರಸ್‌ಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕನ್ನಡದ ನಟಿ ನಿತ್ಯಾ ಮೆನನ್‌ಗೆ ‘ತಿರುಚಿತ್ರಂಬಲಂ’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಹಲವು ವರ್ಷಗಳ ಬೇಡಿಕೆಯಾದ ಗ್ರಾಚ್ಯುಟಿ ಬಗ್ಗೆ ಸಚಿವ ವಿ.ಸೋಮಣ್ಣ ಮಹತ್ವದ ಮಾಹಿತಿ ನೀಡಿದ್ದು, ಕಾರ್ಯಕರ್ತೆಯರಿಗೆ ಗ್ರ್ಯಾಚುಯಿಟಿ ಸೇರಿದಂತೆ ಇರುವ ಹಲವು ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ಬಳಿಗೆ ನಿಯೋಗವನ್ನು ಕರೆದೊಯ್ಯುವುದಾಗಿ ಭರವಸೆ ನೀಡಿದ್ದಾರೆ. ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಪೌಷ್ಟಿಕತೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಹಕ್ಕಿನೆಡೆಗೆ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಮಾತನಾಡಿದರು. ಹಿಂದಿನ ವರ್ಷಗಳಲ್ಲಿ ಎದುರಾಗಿದ್ದ ಕೋವಿಡ್‌ನಂತಹ ಭೀಕರ ಪರಿಸ್ಥಿತಿಯಲ್ಲಿ ಜನ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದರು. ಈ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ಎಂದರು. ಜನ ಭಯ ಪಡುವ ಸಮಯದಲ್ಲೂ ಆರೋಗ್ಯ ಇಲಾಖೆ ಜೊತೆಗೂಡಿ ಅಂಗನವಾಡಿ ಕಾರ್ಯಕರ್ತೆಯರು ಮಾಡಿದ ಸೇವೆಯನ್ನು ಕಣ್ಣಾರೆ ಕಂಡಿದ್ದೇನೆ. ಆದರೆ, ಕಾರ್ಯಕರ್ತೆಯರು ತಮ್ಮ ಶ್ರಮಕ್ಕೆ ತಕ್ಕ ಸ್ಥಾನಮಾನಗಳನ್ನು ಪಡೆದುಕೊಂಡಿಲ್ಲ. ನೀವು ನ್ಯಾಯಯುತವಾಗಿ ಮುಂದಿಟ್ಟಿರುವ ಬೇಡಿಕೆಗಳನ್ನು ಪರಿಗಣಿಸುತ್ತೇವೆ ಎಂದು ಭರವಸೆ ನೀಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ಕಾರವಾರ: ರಾಜ್ಯದಲ್ಲಿ 34 ಸರ್ವೆ ಎಡಿಎಲ್ ಆರ್ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 364 ಸರ್ವೆಯರ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಸಿಎಂ ಅನುಮತಿ ನೀಡಿದ್ದಾರೆ. ಸರ್ವೆಯರ್ ಹುದ್ದೆಗಳ ನೇಮಕಾತಿ ಕೂಡ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. 1091 ಲೈಸೆನ್ಸ್ ಸರ್ವೆಯರ್ ಗಳ ನೇಮಕ ಮಾಡಲಾಗಿದೆ. ಗ್ರಾಮ ಆಡಳಿತಾಧಿಕಾರಿ ಹುದ್ದೆ ಖಾಲಿ ಇವೆ. ಒಂದು ಸಾವಿರ ಗ್ರಾಮ ಲೆಕ್ಕಗರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ತಹಶೀಲ್ದಾರ್ ಕೋರ್ಟ್ ಗಳಲ್ಲಿ ಬಾಕಿ ಉಳಿದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ವಹಿಸಲಾಗಿದೆ. ಈ ಹಿಂದೆ 212 ದಿನಗಳಲ್ಲಿ ವಿಲೇವಾರಿಯಾಗುತ್ತಿದ್ದ ಪ್ರಕರಣಗಳು ಈಗ 76 ದಿನಗಳಲ್ಲಿ ವಿಲೇವಾರಿ ಆಗುತ್ತಿವೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು : 14 ಮಂದಿ ಪಾಕ್ ಪ್ರಜೆಗಳನ್ನು ಜಿಗಣಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಡೆದಿದೆ. ದೇಶದ ನಾನಾ ಭಾಗಗಳಲ್ಲಿ ಅಡಗಿ ಕುಳಿತಿದ್ದ 14 ಮಂದಿ ಪಾಕ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಈ ಮೂಲಕ ಇದುವರೆಗೆ 22 ಮಂದಿ ಪಾಕ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈ, ದೆಹಲಿ, ಹೈದರಾಬಾದ್ ಗೆ ತೆರಳಿದ ಪೊಲೀಸರ ತಂಡ ಅಕ್ರಮವಾಗಿ ಭಾರತದಲ್ಲಿ ನೆಲೆಯೂರಿದ್ದ ಪಾಕ್ ಪ್ರಜೆಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296