Subscribe to Updates
Get the latest creative news from FooBar about art, design and business.
- ಉತ್ತಮ ಆಡಳಿತದಿಂದ ಸರ್ವತೋಮುಖ ಪ್ರಗತಿ ಸಾಧ್ಯ: ಕೆ.ಮಂಜುನಾಥ್
- ಪಾವಗಡ ತಾ.ಪಂ ಇ.ಒ. ಉತ್ತಮ್ ಕುಮಾರ್ ವಿರುದ್ಧ ಪಿಡಿಒಗಳ ದೂರು..!
- ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ: 100 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಸಂಕಲ್ಪ ಯಾತ್ರೆ
- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಾವಶ್ಯಕ: ಡಾ.ಹನುಮಂತನಾಥ ಸ್ವಾಮೀಜಿ ಕರೆ
- ಕ್ಯಾನ್ಸರ್ ಪೀಡಿತ ಮಹಿಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಸಾವಿರ ರೂ. ನೆರವು
- ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಪರ ಸಂಘಟನೆಗಳ ಆಗ್ರಹ
- ಮಹಾರಾಜವಾಡಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ: ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ
- ಬೀದರ್: ಔರಾದ್ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ
Author: admin
ತುಮಕೂರು: ವಿವೇಕಾನಂದ ಕ್ರೀಡಾ ಸಂಸ್ಥೆ ವತಿಯಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿ ಅಂತಿಮ ಹಂತ ತಲುಪಿದೆ. ಭಾನುವಾರ ಸೆಮಿಫೈನಲ್, ಫೈನಲ್ ಪಂದ್ಯಗಳು ನಡೆಯಲಿವೆ. ಶುಕ್ರವಾರ ಸಂಜೆ ಟೂರ್ನಿಗೆ ಚಾಲನೆ ನೀಡಲಾಯಿತು. ಶನಿವಾರ ಲೀಗ್ ಹಂತದ ಪಂದ್ಯಗಳು ನಡೆದವು. ಪುರುಷರ ವಿಭಾಗದಲ್ಲಿ 13, ಮಹಿಳೆಯರ ವಿಭಾಗದಲ್ಲಿ 8 ತಂಡಗಳು ಪಾಲ್ಗೊಂಡಿವೆ. ತುಮಕೂರು, ದಾವಣಗೆರೆ, ಮೈಸೂರು, ರಾಯಚೂರು, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳ ಆಟಗಾರರು ಭಾಗವಹಿಸಿದ್ದಾರೆ. ಅಯೋಜಕರು ಕ್ರೀಡಾಪಟುಗಳ ವಾಸ್ತವ್ಯಕ್ಕೆ ಅಗತ್ಯ ವ್ಯವಸ್ಥೆ ಮಾಡಿದ್ದಾರೆ. ಜೂನಿಯರ್ ಕಾಲೇಜು ಮೈದಾನದ ಮಿನಿ ಕ್ರೀಡಾಂಗಣದಲ್ಲಿ ಎರಡು ಕೊಕ್ಕೊ ಅಂಕಣ ಸಿದ್ಧಪಡಿಸಲಾಗಿದೆ. ಕ್ರೀಡಾಪಟುಗಳ ರಕ್ಷಣೆ ದೃಷ್ಟಿಯಿಂದ ಮ್ಯಾಟ್ ಅಳವಡಿಸಲಾಗಿದೆ. ಪಂದ್ಯಾವಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಂದ್ಯಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯ ಜನ ಸೇರುತ್ತಿದ್ದಾರೆ. ಕ್ರೀಡಾಕೂಟದ ಪ್ರತಿ ಪಂದ್ಯವು ರೋಚಕತೆ ಹೆಚ್ಚಿಸುತ್ತಿದೆ. ಮೊದಲ ಪಂದ್ಯದಿಂದಲೇ ಮೂಡುಬಿದಿರೆಯ ಆಳ್ವಾಸ್ ತಂಡಗಳು ಉತ್ತಮ ಪ್ರದರ್ಶನದೊಂದಿಗೆ ಮುನ್ನಡೆಯುತ್ತಿವೆ. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಕುರುಬೂರು ಕೊಕ್ಕೊ ತಂಡದ ಆಟಗಾರ್ತಿಯರು…
ತಿಪಟೂರು: ನಗರದ ಗುರುಕುಲಾನಂದಶ್ರಮದಲ್ಲಿ ಕೋನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯಿಂದ ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ ಹಾಗೂ ದ್ವಿದಳ ಧಾನ್ಯಗಳ ಯೋಜನೆಗೆ ಶನಿವಾರ ಚಾಲನೆ ನೀಡಲಾಯಿತು. ಕೇಂದ್ರ ರೈಲ್ವೆ ಮತ್ತು ಜಲಶಕ್ತಿರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮಾತನಾಡಿ, ದೇಶದಲ್ಲಿ ಧಾನ್ಯ ಹಾಗೂ ಬೇಳೆಕಾಳು ಉತ್ಪಾದನೆ ಇನ್ನೂ ಬೇಡಿಕೆಗೆ ತಕ್ಕಷ್ಟು ಇಲ್ಲ. 1960ರ ದಶಕದಿಂದಲೇ ಆಹಾರ ಕೊರತೆ ನಿವಾರಣೆಗೆ ಹಸಿರು ಕ್ರಾಂತಿ ನಡೆದಿದೆ. ಆದರೆ ಇಂದಿನ ಸ್ಥಿತಿಯಲ್ಲಿ ದ್ವಿದಳ ಧಾನ್ಯ ಬೆಳೆಗಳ ಸ್ವಾವಲಂಬನೆಗೆ ಹೊಸ ಕ್ರಾಂತಿಯ ಅವಶ್ಯಕತೆ ಎದುರಾಗಿದೆ ಎಂದರು. ಈ ಯೋಜನೆಯಿಂದ ರೈತರ ಕೈಗೆ ತಂತ್ರಜ್ಞಾನ, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸುತ್ತದೆ. ವಿಜ್ಞಾನಾಧಾರಿತ ಕೃಷಿ ಮತ್ತು ಸಂಗ್ರಹಣೆ ವ್ಯವಸ್ಥೆ ಮೂಲಕ ರೈತನ ಆದಾಯವನ್ನು ದ್ವಿಗುಣಗೊಳಿಸುತ್ತದೆ ಎಂದರು. ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ರೈತ ಬೆಳೆದ ಬೆಳೆಗಳಿಗೆ ಸರ್ಕಾರವು ಸಹಾಯಕವಾಗಬೇಕು. ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಮಾಡಬೇಕಿದೆ. ಭಾರತ ಸರ್ಕಾರವು ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಿದ್ದು, ಕೃಷಿವಲಯ ಅಭಿವೃದ್ಧಿಯಾಗಬೇಕಾದರೆ…
ಶಿರಾ: ಶ್ರೀರಾಮ ಸದಾ ನೆನಪಿನಲ್ಲಿ ಉಳಿಯುವಂತೆ ವಾಲ್ಮೀಕಿ ರಾಮಾಯಣ ರಚಿಸಿದ್ದಾರೆ. ಒಂದು ವೇಳೆ ವಾಲ್ಮೀಕಿ ರಾಮಾಯಣ ರಚಿಸದಿದ್ದರೆ ಇಂದು ರಾಮ ನಮ್ಮ ಮುಂದೆ ಇರುತ್ತಿರಲಿಲ್ಲ. ಆದ್ದರಿಂದ ರಾಮನಷ್ಟೇ ವಾಲ್ಮೀಕಿ ಸಹ ಪೂಜನೀಯ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ಹನುಮಂತನಗರದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ನಾಯಕ (ಪಾಳೇಗಾರ) ಸಮುದಾಯದವರು ದೇಶದಲ್ಲಿ ಉತ್ತಮ ಆಡಳಿತ ನೀಡಿದ್ದು, ಶಿರಾದಲ್ಲಿ ಕಸ್ತೂರಿ ರಂಗಪ್ಪ ನಾಯಕ ನಿರ್ಮಿಸಿರುವ ಕೋಟೆ ಇದಕ್ಕೆ ಸಾಕ್ಷಿಯಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ, ವಿದ್ಯೆಯಿಂದ ಮಾತ್ರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮುದಾಯ ಸದೃಢರಾಗಲು ಸಾಧ್ಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ಜಾತಿವಾರು ಸಮೀಕ್ಷೆಯಲ್ಲಿ ನಾಯಕ ಸಮುದಾಯದ ಪ್ರತಿಯೊಬ್ಬರು ಜಾತಿ ಕಾಲಂನಲ್ಲಿ ನಾಯಕ ಎಂದು ಬರೆಸಿ, ನಮ್ಮಲ್ಲಿರುವ ಅಸಮಾಧಾನ ದ್ವೇಷವಾಗಿ ಪರಿವರ್ತನೆ ಆಗಬಾರದು. ರಾಜಕೀಯವಾಗಿ ದ್ವೇಷವಿದ್ದರೂ ಸಮುದಾಯದ ಏಳಿಗೆಗಾಗಿ ಎಲ್ಲರೂ ಒಗ್ಗೂಡಬೇಕು ಎಂದರು. ಶಿಡ್ಲೆಕೋಣದ ವಾಲ್ಮೀಕಿ ಸಂಸ್ಥಾನ ಮಠದ ಪೀಠಾಧ್ಯಕ್ಷ…
ತುಮಕೂರು: ಅತಿಯಾದ ಮೊಬೈಲ್ ಬಳಕೆಯಿಂದ ಅಪರಾಧ ಚಟುವಟಿಕೆಗಳಲ್ಲಿ ಸಿಲುಕುವುದು ಹೆಚ್ಚಾಗುತ್ತಿದೆ ಎಂದು ಮನೋವೈದ್ಯ ಲೋಕೇಶ್ ಬಾಬು ಆತಂಕ ವ್ಯಕ್ತಪಡಿಸಿದರು. ನಗರದ ಕಲಾ ಕಾಲೇಜಿನ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರದಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಮಾನಸಿಕ ಅರಿವು ಕುರಿತ ಸಂವಾದದಲ್ಲಿ ಮಾತನಾಡಿದರು. ಮೊಬೈಲ್ ನ ಅತಿಯಾದ ಬಳಕೆ ಅನಾಹುತ, ಅಪರಾಧ ಚಟುವಟಿಕೆಗಳಿಗೆ ಆಹ್ವಾನಿಸುತ್ತದೆ. ವಿದ್ಯಾರ್ಥಿ ಸಮೂಹ ಎಚ್ಚರಿಕೆ ವಹಿಸಬೇಕು. ಮೊಬೈಲ್ ಬಳಕೆ ಮನುಷ್ಯರನ್ನು ದಡ್ಡರನ್ನಾಗಿಸುತ್ತಿದೆ. ಎಲ್ಲವನ್ನು ಮೊಬೈಲ್ ನಲ್ಲಿ ನೋಡುತ್ತಾ ವ್ಯಸನಿಗಳಾಗುತ್ತಿದ್ದಾರೆ. ಇದೊಂದು ಮಾನಸಿಕ ಅನಾರೋಗ್ಯ ಎಂದರು. ಕಲಾ ಕಾಲೇಜು ಪ್ರಾಂಶುಪಾಲರಾದ ಜಿ.ದಾಕ್ಷಾಯಿಣಿ, ಪ್ರಾಧ್ಯಾಪಕ ಬಿ.ಕರಿಯಣ್ಯ, ಲೇಖಕಿ ಬಾ.ಹ.ರಮಾಕುಮಾರಿ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತಾ, ಪ್ರಧಾನ ಕಾರ್ಯದರ್ಶಿ ಸಾ.ಚ.ರಾಜಕುಮಾರ್, ಸಾಂತ್ವನ ಕೇಂದ್ರದ ಪಾರ್ವತಮ್ಮ ಇತರರು ಪಾಲ್ಗೊಂಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ಪಾವಗಡ: ಭೀಮಾ ನದಿಯ ತೀರದ ಯಾದಗಿರಿ, ಶಹಪುರ ಮತ್ತು ಕಲಬುರ್ಗಿ ಭಾಗಗಳಲ್ಲಿ ನೆರೆ ಪೀಡಿತರ ಸಹಾಯಕ್ಕಾಗಿ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಇನ್ಫೋಸಿಸ್ ಸಂಸ್ಥೆಯ ಸಹಯೋಗದಲ್ಲಿ 2,000 ಪರಿಹಾರ ಕಿಟ್ ಗಳನ್ನು ತಯಾರಿಸುತ್ತಿದೆ. ಪಟ್ಟಣದಲ್ಲಿ ತುಮಕೂರು ವಿವಿಯ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಆಶ್ರಮದ ಭಕ್ತರು ಕೈಜೋಡಿಸಿ ಕಿಟ್ ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಪ್ರತೀ ಬಾರಿ ಪ್ರವಾಹ ಉಂಟಾದಾಗ ಮಾನವೀಯ ಸಹಾಯದ ಹಸ್ತ ಚಾಚುವ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಬಾರಿ ಕೂಡ ಉತ್ತರ ಕರ್ನಾಟಕದ ನೆರೆ ಬಾಧಿತರಿಗೆ ಪರಿಹಾರ ವಿತರಿಸಲು ಸಜ್ಜಾಗಿದೆ. ಸ್ವಾಮೀಜಿ ಅವರು, “ಬಾಧಿತರ ನೋವನ್ನು ತಣಿಸಲು ನಮ್ಮ ಆಶ್ರಮ ಸದಾ ಮುಂದಿರುತ್ತದೆ. ಈ ಬಾರಿ ಸಹ ತಂಡವು ತಕ್ಷಣದ ನೆರವಿಗಾಗಿ ಸಜ್ಜಾಗಿದೆ,” ಎಂದು ಮಾಹಿತಿ ನೀಡಿದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ತುಮಕೂರು: ಇತ್ತೀಚೆಗೆ ಹದಿಹರೆಯದವರಲ್ಲಿ ಮಾನಸಿಕ ಒತ್ತಡ, ಖಿನ್ನತೆ, ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು. ನಗರದ ವಿದ್ಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಮನೋವಿಜ್ಞಾನ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನಸಿಕ ಆರೋಗ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಜೀವನ ಕೌಶಲಗಳ ತರಬೇತಿ ನೀಡಬೇಕು. ಉತ್ತಮ ಆರೋಗ್ಯವು ಒತ್ತಡ ನಿಭಾಯಿಸಿ, ಸಕಾರಾತ್ಮಕ ಆಯ್ಕೆಗೆ ಸಹಾಯ ಮಾಡುತ್ತದೆ ಎಂದರು. ಮನೋವೈದ್ಯ ಲೋಕೇಶ್ ಬಾಬು, `ಅತಿಯಾದ ಒತ್ತಡ, ಒಂಟಿತನವು ಆತಂಕ, ಖಿನ್ನತೆಗೆ ಕಾರಣವಾಗಬಹುದು. ಮಾನಸಿಕ ಅಸ್ವಸ್ಥತೆ ಸಮಯದಲ್ಲಿ ವೃತ್ತಿಪರರಿಂದ ಸಹಾಯ ಪಡೆಯಬೇಕು’ ಎಂದು ಸಲಹೆ ಮಾಡಿದರು. ಮನೋವಿಜ್ಞಾನ ಸಂಘದ ಅಧ್ಯಕ್ಷ ಪ್ರೊ.ಗಂಗಾಧರ್, ಕಾರ್ಯದರ್ಶಿ ಎಸ್.ಪಿ.ಟವಿಕುಮಾರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜಿ.ಎಲ್.ಸೌಮ್ಯಾ, ವಿದ್ಯಾ ಕಾಲೇಜು ವ್ಯವಸ್ಥಾಪಕ ನಿರ್ದೇಶಕ ಅರ್ಜುನ್, ಪ್ರಾಂಶುಪಾಲರಾದ ಶಿಲ್ಪಾ, ನಿರ್ದೇಶಕ ರಾಜೇಶ್ ಇತರರು ಉಪಸ್ಥಿತರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಬೆಂಗಳೂರು: ಪ್ರಿಯತಮೆಗೆ ಹಣ, ಆಭರಣ ಕೊಡಲು ತಮ್ಮ ಸಂಬಂಧಿಕರ ಮನೆಯಲ್ಲಿಯೇ ನಗದು ಸೇರಿದಂತೆ 52.71 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳ್ಳತನ ಮಾಡಿ ನಾಟಕವಾಡಿದ್ದ ಯುವಕನೊಬ್ಬನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಟ್ಟಿಹಳ್ಳಿಯ ನಿವಾಸಿ ಶ್ರೇಯಸ್(22) ಬಂಧಿತ ಆರೋಪಿ. ಈತ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ತಮ್ಮದೇ ಊರಿನ ಸಂಬಂಧಿಕರಾದ ಹರೀಶ್ ಎಂಬುವವರ ಮನೆಗೆ ಈ ಶ್ರೇಯಸ್ ಆಗಾಗ್ಗೆ ಹೋಗುತ್ತಿದ್ದ. ಕಳೆದ ತಿಂಗಳ 14ರಂದು ಹರೀಶ್ ಅವರ ತಾಯಿ ಮನೆಗೆ ಬೀಗಹಾಕಿ ಪಕ್ಕದ ಬೀದಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಮನೆಯ ಬಳಿ ಬಂದ ಶ್ರೇಯಸ್ ಬೀಗ ಮುರಿದು 3.46 ಲಕ್ಷ ರೂ. ನಗದು, 416 ಗ್ರಾಂ ಚಿನ್ನವನ್ನು ದೋಚಿ ಹೋಗಿದ್ದನು.ಕಳ್ಳತನ ಮಾಡಿದ್ದ. ಕೆಲವು ಆಭರಣಗಳನ್ನು ಬನ್ನೇರುಘಟ್ಟದಲ್ಲಿ ವಾಸವಿರುವ ತನ್ನ ಪ್ರಿಯತಮೆಗೆ ಕೊಟ್ಟಿದ್ದು, ಉಳಿದ ಆಭರಣಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಮುತ್ತೂಟ್ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದ. ನಗದನ್ನು ಸೂರ್ಯಸಿಟಿಯಲ್ಲಿರುವ ಬ್ಯಾಂಕ್ ನ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದ. ನಂತರ ಹರೀಶ್ ಅವರ…
ಬೆಂಗಳೂರು: ಡಿಸೆಂಬರ್ ನಲ್ಲಿ ರಾಜಕೀಯ ಕ್ರಾಂತಿಯಾಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬದಲಾಗುತ್ತಾರೆ, ನಿತಿನ್ ಗಡ್ಕರಿ ಹೊಸದಾಗಿ ಪ್ರಧಾನಿಯಾಗುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ. ಕ್ರೈಸ್ಟ್ ವಿಶ್ವವಿದ್ಯಾಲಯ ಅಸೋಷಿಯೇಟ್ ಡಿನ್ ಸಹಾಯಕ ಡಾ. ಸ್ವಪ್ನ ಎಸ್. ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಋತುಚಕ್ರ ನೀತಿ ಕುರಿತು ಸಮಿತಿಯ ಸದಸ್ಯರ ಜೊತೆ ಚರ್ಚೆ ನಡೆಸಿ, ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಸಚಿವರನ್ನು ಔತಣಕೂಟಕ್ಕೆ ಕರೆದಿರುವುದು ವಿಶೇಷವೇನಿಲ್ಲ. ನಮಲ್ಲಿ ನವೆಂಬರ್ ಕ್ರಾಂತಿ ಎಂಬುದೇನಿಲ್ಲ. ಆದರೆ ಕೇಂದ್ರದಲ್ಲಿ ನಿತಿನ್ ಗಡ್ಕರಿ ಪ್ರಧಾನಿಯಾಗುತ್ತಾರೆ ಎಂದರು. ಬಿಜೆಪಿಯಲ್ಲಿನ ಆಂತರಿಕ ಚರ್ಚೆಗಳನ್ನು ನಾನು ಹೇಳುತ್ತಿದ್ದೇನೆ. ಮೋದಿ ಅವರ ವಿರುದ್ಧ ಬಿಜೆಪಿಯ ನಾಯಕರಾಗಲಿ, ಮಾಧ್ಯಮದವರಾಗಲಿ ಮಾತನಾಡಲು ಅವಕಾಶ ಇಲ್ಲದಂತಹ ವಾತಾವರಣವಿದೆ. ಹೀಗಾಗಿ ಡಿಸೆಂಬರ್ ಒಳಗಾಗಿ ಬದಲಾವಣೆಯಾಗುತ್ತದೆ ಎಂದರು. ಪ್ರಧಾನಿಯವರು ತಮ್ಮ ಹುದ್ದೆಯ ಜವಾಬ್ದಾರಿ ಮರೆತು ನಡೆದುಕೊಳ್ಳುತ್ತಿದ್ದಾರೆ. ವಿದೇಶಗಳಿಗೆ ಹೋದರೆ ಏನೋ ಒಂದು ಮಾತನಾಡುತ್ತಾರೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋದಾಗ ಪ್ರಾಸ ಬದ್ದವನ್ನಾಗಿ ಮಾತನಾಡುತ್ತಾರೆ. ಇದು ಪ್ರಧಾನಿ…
ಸರಗೂರು: ಪ್ರತಿಯೊಬ್ಬರು ತಮ್ಮ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ.ತಾವು ಮಾಡುವ ಕೆಲಸದ ಸ್ಥಳಗಳಲ್ಲಿ ತಮ್ಮ ಕಣ್ಣುಗಳನ್ನು ಆರೈಕೆ ಮಾಡಿಕೊಳ್ಳಿ. ಪ್ರತಿ 20 ನಿಮಿಷಗಳಿಗೊಮ್ಮೆ ಕಣ್ಣಿಗೆ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಕೆ.ಆರ್.ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಚೇತನ್ ಕುಮಾರ್ ತಿಳಿಸಿದರು. ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವತಿಯಿಂದ, ವಿಶ್ವದೃಷ್ಟಿ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರರಂದು ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾರಿನಂಶವಿರುವ ಸೊಪ್ಪು ಮತ್ತು ತರಕಾರಿಗಳನ್ನು ಸೇವಿಸಿ, ಪ್ರೋಟಿನ್ ಯುಕ್ತ ಸಮತೋಲನ ಆಹಾರವನ್ನು ಸೇವಿಸಿದರೆ ಕಣ್ಣಿಗೆ ರಕ್ಷಣೆ ಸಿಗುತ್ತದೆ. ನಾನು 2,800 ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಮಾಡಿರುತ್ತೇನೆ. ಒಂದೂ ಕೂಡ ಯಾವುದೇ ವೈಪಲ್ಯವಿಲ್ಲ ಎಂದು ಹೇಳಲಿಕ್ಕೆ ಇಚ್ಚಿಸುತ್ತೇನೆ ಎಂದರು. ಆಸ್ಪತ್ರೆಯ ನಿರ್ದೇಶಕ ಡಾ ರವೀಂದ್ರನಾಥ್ ಮಾತನಾಡಿ, ನನ್ನ ಗುರುಗಳು ಈ ಆಸ್ಪತ್ರೆಯಲ್ಲಿ ನಾನು ಸೇವೆ ಮಾಡಲು ಸದಾ ನಿಮ್ಮೊಂದಿಗೆ ಸಿದ್ದನಿದ್ದೇನೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಮಕ್ಕಳ ಕಣ್ಣಿನ ಶಸ್ತ್ರ ಚಿಕಿತ್ಸಾ ತಜ್ಞರು, ವಿಠ ಇಂಟರ್ ನ್ಯಾಷಿನಲ್…
ಸರಗೂರು: ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಆದಿ ಕರ್ನಾಟಕ ಮಹಾಸಭಾವು ನೂತನ ತಾಲೂಕು ಸರಗೂರಿನಲ್ಲಿಯೂ ಅಸ್ತಿತ್ವಕ್ಕೆ ಬಂದಿದ್ದು, ಮಹಾಸಭಾವು ಎರಡನೇ ಅವಧಿಗೆ ತನ್ನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನರಾಜಣ್ಣ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಮಹಾಸಭಾದ ಸಭೆಯಲ್ಲಿ ಮಾತನಾಡಿದ ಅವರು, ಗೌರವಾಧ್ಯಕ್ಷರಾಗಿ ಇದಿಯಪ್ಪ, ಉಪಾಧ್ಯಕ್ಷರಾಗಿ ಪುಟ್ಟಸ್ವಾಮಿ, ಚಿನ್ನಣ್ಣ, ಕಾಳಸ್ವಾಮಿ, ನಾಗೇಂದ್ರ, ಬಿಡಗಲು ಶಿವಣ್ಣ, ಪ್ರದಾನ ಕಾರ್ಯದರ್ಶಿ ಹಾದನೂರು ಪ್ರಕಾಶ್, ಖಜಾಂಚಿಯಾಗಿ ಲಂಕೆ ಶ್ರೀನಿವಾಸ್, ಸಹಕಾರ್ಯದರ್ಶಿಯಾಗಿ ಸೂರ್ಯಕುಮಾರ್, ನಿರ್ದೇಶಕರಾಗಿ ಹಾಲಯ್ಯ, ವೆಂಕಟಾಚಲ, ಕೂಡಗಿ ಗೋವಿಂದರಾಜು, ಸಣ್ಣಪಾಪ, ಕೆ.ಗೋವಿಂದ ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಮಹಾಸಭಾವು ಜನಾಂಗದ ಅಭಿವೃದ್ಧಿ, ತಾಲೂಕು ಅಭಿವೃದ್ಧಿಯೊಂದಿಗೆ ಇತರೆ ಜನಾಂಗದವರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡು ಸಮಾಜವನ್ನು ಮುಂಚೂಣಿಗೆ ತರುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಸಮಾಜದ ನೀಡಲಾದ ಜವಾಬ್ದಾರಿಯನ್ನು ಅರಿತು ಕಪ್ಪು ಚುಕ್ಕಿ ಬರದಂತೆ ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡಲಾಗುವುದು. ಜನರನ್ನು ಜಾಗೃತಿ ಮೂಡಿಸಲಾಗುವುದು ಎಂದರು. ಸುಪ್ರೀಂ ಕೋರ್ಟ್ ಕಲಾಪ…