Subscribe to Updates
Get the latest creative news from FooBar about art, design and business.
- ಬೀದರ್: ಡಿಸೆಂಬರ್ 30ರಂದು ಸಂತಪುರದಲ್ಲಿ ಬೃಹತ್ ರಕ್ತದಾನ ಶಿಬಿರ
- ಪಿ.ಎನ್.ಕೃಷ್ಣ ಮೂರ್ತಿ ಹುಟ್ಟು ಹಬ್ಬ: ಪೌರ ಕಾರ್ಮಿಕರಿಗೆ ಬೆಚ್ಚನೆಯ ಹೊದಿಕೆ ವಿತರಣೆ
- ಕೊರಟಗೆರೆ | ಇಂದು ಹಾಲು ಶೇಖರಣಾ ಘಟಕ ಉದ್ಘಾಟಿಸಲಿರುವ ಡಾ.ಜಿ.ಪರಮೇಶ್ವರ್
- ಉತ್ತಮ ಆಡಳಿತದಿಂದ ಸರ್ವತೋಮುಖ ಪ್ರಗತಿ ಸಾಧ್ಯ: ಕೆ.ಮಂಜುನಾಥ್
- ಪಾವಗಡ ತಾ.ಪಂ ಇ.ಒ. ಉತ್ತಮ್ ಕುಮಾರ್ ವಿರುದ್ಧ ಪಿಡಿಒಗಳ ದೂರು..!
- ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ: 100 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಸಂಕಲ್ಪ ಯಾತ್ರೆ
- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಾವಶ್ಯಕ: ಡಾ.ಹನುಮಂತನಾಥ ಸ್ವಾಮೀಜಿ ಕರೆ
- ಕ್ಯಾನ್ಸರ್ ಪೀಡಿತ ಮಹಿಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಸಾವಿರ ರೂ. ನೆರವು
Author: admin
ಕುಣಿಗಲ್: ಬೆಸ್ಕಾಂ ಸಿಬ್ಬಂದಿ ಯಡವಟ್ಟಿನಿಂದಾಗಿ ಜಾತಿವಾರು ಸಮೀಕ್ಷೆಗೆ ಸರಿಯಾದ ಮನೆ ವಿಳಾಸ ಸಿಗುತ್ತಿಲ್ಲ ಎಂದು ಆರೋಪಿಸಿದ ಸಮೀಕ್ಷೆದಾರರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ಪಟ್ಟಣದ ಕುವೆಂಪು ನಗರದಲ್ಲಿ ಸಮೀಕ್ಷೆಗೆ 20 ಶಿಕ್ಷಕರ ನಿಯೋಜಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಮನೆ ವಿಳಾಸ ಹುಡುಕಲಾಗದೆ, ಜಿಪಿಎಸ್ ಲೊಕೇಶನ್ ಹಾಕಿದರೆ ಅಂಚೆಪಾಳ್ಯ, ಊರಾಚೆ, ಮರದ ಕೆಳಗೆ ತೋರಿಸುತ್ತಿತ್ತು. ಇದರಿಂದ ಬೇಸತ್ತ ಶಿಕ್ಷಕರು ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಮೇಲ್ವಿಚಾರಕ ಮಹೇಶ್ ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಶನಿವಾರ ಅಗತ್ಯ ಸಿಬ್ಬಂದಿ ಕಳಿಸುವ ಭರವಸೆ ನೀಡಿದ್ದರು. ಶನಿವಾರ ಬೆಳಿಗ್ಗೆ 20ಕ್ಕೂ ಹೆಚ್ಚು ಶಿಕ್ಷಕರು ಸಮೀಕ್ಷೆಗೆ ಬಂದಾಗ ಒಬ್ಬರೇ ಬೆಸ್ಕಾಂ ಸಿಬ್ಬಂದಿ ಇದ್ದು, ಸರಿಯಾದ ಮಾಹಿತಿ ಕೊಡಲು ವಿಫಲವಾದ ಕಾರಣ ಬೇಸತ್ತ ಶಿಕ್ಷಕರು ಎಸ್ ಬಿಐ ಬ್ಯಾಂಕ್ ಬಳಿ ಜಮಾವಣೆಗೊಂಡು ಬೆಸ್ಕಾಂ ಸಿಬ್ಬಂದಿ ನಡೆ ಖಂಡಿಸಿ ಧರಣಿಗೆ ಮುಂದಾದರು. ಮೇಲ್ವಿಚಾರಕ ಮಹೇಶ್ ಮಾತನಾಡಿ, ಬೆಸ್ಕಾಂ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಶೆಡ್, ದನದ ಕೊಟ್ಟಿಗೆಗೆ ಸ್ಟಿಕ್ಕರ್ ಹಾಕಿದ್ದಾರೆ. ಜಿಪಿಎಸ್ ವಿಳಾಸ ಹುಡುಕಲು ಹೋದರೆ…
ಕುಣಿಗಲ್: ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಆತುರವಾಗಿ ವರದಿ ಪಡೆದು ಒಕ್ಕಲಿಗರ ಮೀಸಲಾತಿಗೆ ಧಕ್ಕೆಯಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನಂಜಾವಧೂತ ಸ್ವಾಮೀಜಿ ಎಚ್ಚರಿಸಿದರು. ಪಟ್ಟಣದಲ್ಲಿ ಶನಿವಾರ ನಡೆದ ಒಕ್ಕಲಿಗರ ಮಾಹಿತಿ ಮತ್ತು ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಹಠಕ್ಕೆ ಬಿದ್ದು ಸಮೀಕ್ಷೆ ಮಾಡುತ್ತಿದ್ದು, ಅಂಕಿ ಅಂಶಗಳ ಪ್ರಕಾರ ಶೇ.70ರಷ್ಟು ಮುಗಿದಿದ್ದರೂ, ಗೊಂದಲಗಳು ನಿವಾರಣೆಯಾಗಿಲ್ಲ. ಸಮೀಕ್ಷೆ ವರದಿ ರಾಜಕೀಯ ಮೀಸಲಾತಿಗೆ ಪೂರಕವಾಗಿದ್ದು, ಸರ್ಕಾರಕ್ಕೆ ಸಮೀಕ್ಷೆ ಮುಗಿಸಿ ವರದಿ ಪಡೆಯಲು ಆತುರ ಯಾಕೆ? ಒಂದು ವೇಳೆ ವರದಿ ಆಧರಿಸಿ ಒಕ್ಕಲಿಗರ ಶೇ.4 ಮೀಸಲಾತಿಗೆ ಧಕ್ಕೆಯಾದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದರು. ಮುಖ್ಯಮಂತ್ರಿ ತಮ್ಮ ಸಮುದಾಯದವರಿಗೆ ‘ಕುರುಬ’ ಎಂದು ಮಾತ್ರ ಬರೆಸಲು ಸೂಚನೆ ನೀಡಿದ್ದಾರೆ. ಆದರೆ ಕೆಲ ಒಕ್ಕಲಿಗರು ಪ್ರತಿಷ್ಠೆಯಿಂದಾಗಿ ಸಮೀಕ್ಷೆಯ ಸೂಕ್ಷ್ಮಗಳ ಅರಿವಿಲ್ಲದೆ ಮಾಹಿತಿ ನೀಡುತ್ತಿದ್ದಾರೆ. ಸಮೀಕ್ಷೆಯ ನೂನ್ಯತೆಗಳನ್ನು ಸರಿಪಡಿಸಿ, ಸಮೀಕ್ಷೆಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದರು. ವಿಶ್ವ ಒಕ್ಕಲಿಗರ ಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ…
ಕೊರಟಗೆರೆ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಅರಸಾಪುರ ಬಳಿ ನಡೆದಿದೆ. ಅರಸಾಪುರದ ಶಕುಂತಲಮ್ಮ(39), ಗಂಗಮ್ಮ(36) ಮೃತಪಟ್ಟವರು ಎಂದು ಗುರುತಿಸಲಾಗಿದೆ. ದನ ಮೇಯಿಸಲೆಂದು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಕೃಷಿಹೊಂಡದ ಬಳಿಯಲ್ಲಿ ಮೃತರ ಚಪ್ಪಲಿ, ಮೊಬೈಲ್ ಪತ್ತೆಯಾಗಿದೆ. ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿಗಳು ಪೊಲೀಸರ ತನಿಖೆಯ ನಂತರ ತಿಳಿದು ಬರಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬೆಳಧರ ಬಳಿಯಲ್ಲಿ ಶನಿವಾರ ಸಂಜೆ ನಡೆದಿದೆ. ಮೃತಪಟ್ಟವರನ್ನು ಕೊರಟಗೆರೆ ತಾಲ್ಲೂಕಿನ ಕತ್ತಿನಾಗೇನಹಳ್ಳಿಯ ಶಿವಕುಮಾರ್ (28), ಗೋವಿಂದಪ್ಪ (60), ಬೈಚಾಪುರದ ಶಿವಶಂಕ (28) ಎಂದು ಗುರುತಿಸಲಾಗಿದೆ. ಕತ್ತಿನಾಗೇನಹಳ್ಳಿಯ ಗೋಪಾಲ್ (28), ರೆಡ್ಡಿಹಳ್ಳಿಯ ಶಂಕರ್ (28) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಧರ್ಮಸ್ಥಳಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ‘ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಟಿಪ್ಪು ಸುಲ್ತಾನ್ ನನ್ನ ಬಹಳ ಅವಹೇಳನಕಾರಿಯಾಗಿ ತೋರಿಸಲಾಗುತ್ತೆ. ಆದ್ರೆ ನಾನು ಓದಿರುವ ಪ್ರಕಾರ ಕನ್ನಂಬಾಡಿ ಕಟ್ಟೆಯನ್ನ ಪ್ರಾರಂಭ ಮಾಡಿದ್ದೇ ಅವನು. ಅನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಕಾಲದಲ್ಲಿ ಅದನ್ನ ಸಂಪೂರ್ಣ ಮಾಡಿದ್ದಾರೆ. ನಮ್ಮ ಮಕ್ಕಳಿಗೆ ಇತಿಹಾಸ ಸ್ಪಷ್ಟವಾಗಿ ತಿಳಿಸಬೇಕು, ಅದನ್ನ ತಿರುಚಬಾರದು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಒಡೆಯರ್ ಕಾಲದಲ್ಲಿ ಕೆಆರ್ ಎಸ್ ಸಂಪೂರ್ಣ ಮಾಡಬೇಕಾದ್ರೆ ಹಣಕಾಸಿನ ತೊಂದರೆ ಬಂತು. ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು ಹೋಗಿ ಬಾಂಬೆಯಲ್ಲಿ ಮಾರ್ತಾರೆ. ನಾವು ಇದನ್ನ ಮರೆಯಬಾರದು ಎಂದೂ ರಾಜಣ್ಣ ತಿಳಿದ್ದಾರೆ. ಟಿಪ್ಪು ಸುಲ್ತಾನ್ ನಾಲ್ಕು ಯುದ್ಧ ಮಾಡ್ತಾನೆ. 3ನೇ ಯುದ್ದದಲ್ಲಿ ಸೋತು ಬಿಡ್ತಾನೆ. ಈ ವೇಳೆ ಬ್ರಿಟಿಷ್‌ನವರು 3 ಕೋಟಿ 30 ಲಕ್ಷ ಯುದ್ಧದ ಖರ್ಚು ಕೇಳಿದ್ದಕ್ಕೆ ಆತ ಮಕ್ಕಳನ್ನು ಅಡವಿಡುತ್ತಾನೆ. ಜೈಲಿನಲ್ಲಿ ಇಟ್ಟ ಮಕ್ಕಳನ್ನ ದುಡ್ಡು ಕೊಟ್ಟು ಬಿಡಿಸಿಕೊಳ್ಳಬೇಕಾದರೆ, 4ನೇ ಯುದ್ಧದಲ್ಲಿ ಮೀರ್ ಸಾದಿಕ್ ಕಥೆಯಿಂದಾಗಿ ಸೋಲುತ್ತಾನೆ. ಟಿಪ್ಪು ಸುಲ್ತಾನ್ ಗೆ ಮೀರ್ ಸಾದಿಕ್…
ತುಮಕೂರು: ಸಕಾರಣವಿಲ್ಲದೆ ಡೇರಿ ಆಡಳಿತ ಮಂಡಳಿ ವಜಾ ಮಾಡಿರುವುದನ್ನು ವಿರೋಧಿಸಿ ಕುಣಿಗಲ್ ತಾಲ್ಲೂಕು ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ನಿರ್ದೇಶಕರು ನಗರದಲ್ಲಿರುವ ಸಹಕಾರ ಇಲಾಖೆ ಸಹಾಯಕ ನಿಬಂಧಕರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಡೇರಿ ಆಡಳಿತ ಮಂಡಳಿ ನಿರ್ಣಯ ಧಿಕ್ಕರಿಸಿ, ರಾಜಕೀಯ ದುರುದ್ದೇಶದಿಂದ ಆಡಳಿತ ಮಂಡಳಿ ವಜಾಗೊಳಿಸಲಾಗಿದೆ. ಹೊಸದಾಗಿ ಡೇರಿ ಕಾರ್ಯದರ್ಶಿ ನೇಮಕ ಮಾಡಿದ ನಂತರ ಈ ರೀತಿ ಮಾಡಲಾಗಿದೆ. ಎಲ್ಲ ರೀತಿಯಲ್ಲೂ ನಿಯಮ ಪಾಲನೆಯಾಗಿದ್ದರೂ ಉದ್ದೇಶಪೂರ್ವಕವಾಗಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಇದಕ್ಕೆ ಕಾರಣಕರ್ತರಾದ ಸಹಕಾರ ಇಲಾಖೆ ಸಹಾಯಕ ನಿಬಂಧಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸೂಪರ್ ಸೀಡ್ ಮಾಡುವ ಮುನ್ನ ಅನುಸರಿಸಬೇಕಾದ ಕಾನೂನು ಕ್ರಮಗಳನ್ನು ಪಾಲಿಸಿಲ್ಲ. ಸಂಘಕ್ಕೆ ನೋಟಿಸ್ ಸಹ ನೀಡದೆ, ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಕೂಡಲೇ ಆದೇಶ ವಾಪಸ್ ಪಡೆಯಬೇಕು. ವಯೋ ನಿವೃತ್ತಿಯಿಂದ ತೆರವಾದ ಕಾರ್ಯದರ್ಶಿ ಸ್ಥಾನಕ್ಕೆ ನಿಯಮಬದ್ಧವಾಗಿ ಮಾಡಿರುವ ನೇಮಕಕ್ಕೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದರು. ಜೆಡಿಎಸ್, ಬಿಜೆಪಿ ಮುಖಂಡರ…
ಕೊರಟಗೆರೆ : ಈ ದೇಶಕ್ಕೆ ಅನ್ನ ನೀಡುವ ರೈತನ ಯಾರು ಕೂಡ ಮರೆಯಬಾರದು, ದೇಶದಲ್ಲಿ ಯಾರು ಕೂಡ ಉಪವಾಸ ಇರಬಾರದು ಎನ್ನುವ ಉದ್ದೇಶದಿಂದ ರೈತ ಬಿಸಿಲಿನಲ್ಲಿ ದುಡಿದು ನಮಗೆಲ್ಲ ಅನ್ನ ಕೊಡುತ್ತಾನೆ. ಪ್ರತಿನಿತ್ಯ ನಾವು ಅನ್ನದಾತನನ್ನ ಸ್ಮರಿಸಬೇಕಿದೆ ಎಂದು ಬೆಳ್ಳಾವಿ ಕಾರದೇಶ್ವರ ಮಠದ ಪೀಠಾಧ್ಯಕ್ಷ ಕಾರದ ವೀರಬಸವ ಮಹಾಸ್ವಾಮಿ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿಯ ಹೆಚ್.ವಿ.ಪಾಳ್ಯ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಗಾಂಧಿಕೃಷಿ ವಿಜ್ಞಾನಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಹಾಗೂ ಗ್ರಾಪಂ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಕೃಷಿ ಮಂಥನ ಮತ್ತು ಬೆಳೆ ಕ್ಷೇತ್ರೋತ್ಸವ, ರೈತ ಹಾಗೂ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ ಅದರೆ ರೈತನ ಪರಿಸ್ಥಿತಿ ಯಾರು ಕೇಳೋದಿಲ್ಲ. ಇವತ್ತಿನ ಯುವ ಪೀಳಿಗೆ ಕೃಷಿಯ ಕಡೆ ಹೆಚ್ಚು ಒತ್ತು ನೀಡುವ ಸಲುವಾಗಿ ಜಿಕೆವಿಕೆ ಸೇರಿ ಗ್ರಾಮೀಣ ಭಾಗದ ರೈತರಿಗೆ ಇವತ್ತಿನ ಮಳೆಯ ಅನುಗುಣವಾಗಿ ಬೆಳೆ ಬೆಳೆಯುವುದರ ಬಗ್ಗೆ ಕಳೆದ…
ಮೈಸೂರಿನ ವಿಜ್ಞಾನ ಶಿಕ್ಷಕರಾದ ಶ್ರೀ ಮಲ್ಲೇಶ್ ರವರಿಗೆ ಮೊದಲು ನನ್ನ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ಕೊನೆಯಲ್ಲಿ ಶಿಕ್ಷಕರು ಓಲ್ಟರ್ ಕೇಳಿದ್ದ ಒಂದು ಪ್ರಶ್ನೆಯನ್ನು ಉಲ್ಲೇಖಿಸಿರುತ್ತೀರಿ. ಬಹಳ ಸಂತೋಷವಾಯಿತು. ವಿಜ್ಞಾನ ಆಸಕ್ತರಿಗೆ ಇಂತಹ ವಿಷಯಗಳು ಮತ್ತಷ್ಟು ತಿಳಿಯುವ ಅಥವಾ ತಿಳಿದಿದ್ದನ್ನು ತಿಳಿಸುವ ಉತ್ಸುಕತೆ ಉಂಟಾಗುತ್ತದೆ. ಈಗ ವಿಚಾರಕ್ಕೆ ಬರುವುದಾದರೆ, ರಾತ್ರಿಯ ಆಕಾಶದಲ್ಲಿ ಹಲವಾರು ಕೋಟಿ ನಕ್ಷತ್ರಗಳು ಎಲ್ಲ ದಿಕ್ಕಿನಲ್ಲಿ ಇದ್ದರೂ, ಅವುಗಳಿಂದ ನಿರಂತರ ಬೆಳಕು ಬರುತ್ತಿದ್ದರೂ ಕೂಡ ಆಗಸದ ಬಣ್ಣ ಮಾತ್ರ ಕಪ್ಪು ಏಕೆ? ಈ ಪ್ರಶ್ನೆಗೆ ನನಗೆ ತಿಳಿದಿರುವ ಅತ್ಯಂತ ಸಮಾಧಾನಕರ ಉತ್ತರ ತಿಳಿಸಲು ಬಯಸುತ್ತೇನೆ. ಇದನ್ನು ತಿಳಿಯುವ ಮೊದಲು, ಈ ಸಂದರ್ಭದಲ್ಲಿ ನಾನು ಬಹಳ ಹಿಂದೆ ನಕ್ಷತ್ರಗಳ ‘ಟ್ರಯಾಂಗಲ್ ಥಿಯರಿ’ (ನಕ್ಷತ್ರಗಳ ತ್ರಿಕೋನ ಸಿದ್ಧಾಂತ) ಬಗ್ಗೆ ಒಂದು ಸಣ್ಣ ಚಿತ್ರಸಹಿತ ಲೇಖನ ಬರೆದಿದ್ದೆ. ಅದು ಬಾಲವಿಜ್ಞಾನ ಎಂಬ ಮಾಸ ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾಗಿತ್ತು. ಆ ಸಿದ್ಧಾಂತವನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಕ್ಷಮೆ ಇರಲಿ ಈ ಸಿದ್ಧಾಂತದ ಬಗ್ಗೆ ಬಹುಶಃ ಶಿಕ್ಷಕರಿಗೆ…
ಸರಗೂರು: ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಒಂದೇ ಸೂರಿನಡಿ 32 ಇಲಾಖೆಗಳು ಬರುವಂತೆ ‘ಪ್ರಜಾಸೌಧ’ ಕಟ್ಟಡ ವಿನ್ಯಾಸಗೊಳಿಸಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಶಾಸಕರು, ಅರಣ್ಯ ಮತ್ತು ವಸತಿ ವಿಹಾರಧಾಮ ಸಂಸ್ಥೆಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 8.60 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ‘ಪ್ರಜಾಸೌಧ’ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾಜಿ ಶಾಸಕ ದಿ.ಎಸ್.ಚಿಕ್ಕಮಾದು, ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ್ ಅವರು ಸತತ ಪರಿಶ್ರಮದಿಂದಾಗಿ ಹೋಬಳಿ ಕೇಂದ್ರವಾಗಿದ್ದ ಸರಗೂರು, ಕೋಟೆ ತಾಲೂಕಿನಿಂದ ಬೇರ್ಪಟ್ಟು ನೂತನ ತಾಲೂಕಾಗಿ ಘೋಷಣೆಯಾಗಿ 8 ವರ್ಷ ಕಳೆದಿದೆ. ಸದ್ಯ ನೀರಾವರಿ ಇಲಾಖೆ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿಕೊಂಡು ಸಿಎಂ ಸಿದ್ದರಾಮಯ್ಯ ಅವರಿಂದ ಅನುದಾನ ಬಿಡುಗಡೆ ಮಾಡಿಸಿ ‘ಪ್ರಜಾಸೌಧ’ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇಲ್ಲಿ 32 ಇಲಾಖೆಗಳೂ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದರು. ಆಸ್ಪತ್ರೆ, ಕೋರ್ಟ್, ಅಗ್ನಿಶಾಮಕ ಠಾಣೆ:…
ಬೀದರ್: ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ಭವಾನಿ ದೇವಿಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕೊನೆಯ ದಿನ ಗ್ರಾಮದ ಮಾದಿಗ ಸಮುದಾಯದಿಂದ ಬಸವೇಶ್ವರ ವೃತ ಸೇರಿದಂತೆ ವಿವಿಧ ಬಡಾವಣೆಗಳಿಂದ ದೇವಿಯ ಭವ್ಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಿದಾಸ ಧೂಳೆ, ಪ್ರಭಾಕರ್ ಇಂಗಳೇ, ರಾಜಕುಮಾರ್ ಹಚಕಮಟೆ, ಬಂಡೆಪ್ಪ ಧೂಳೆ ಹಾಗೂ ಊರಿನ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC