Subscribe to Updates
Get the latest creative news from FooBar about art, design and business.
- ಬೀದರ್: ಡಿಸೆಂಬರ್ 30ರಂದು ಸಂತಪುರದಲ್ಲಿ ಬೃಹತ್ ರಕ್ತದಾನ ಶಿಬಿರ
- ಪಿ.ಎನ್.ಕೃಷ್ಣ ಮೂರ್ತಿ ಹುಟ್ಟು ಹಬ್ಬ: ಪೌರ ಕಾರ್ಮಿಕರಿಗೆ ಬೆಚ್ಚನೆಯ ಹೊದಿಕೆ ವಿತರಣೆ
- ಕೊರಟಗೆರೆ | ಇಂದು ಹಾಲು ಶೇಖರಣಾ ಘಟಕ ಉದ್ಘಾಟಿಸಲಿರುವ ಡಾ.ಜಿ.ಪರಮೇಶ್ವರ್
- ಉತ್ತಮ ಆಡಳಿತದಿಂದ ಸರ್ವತೋಮುಖ ಪ್ರಗತಿ ಸಾಧ್ಯ: ಕೆ.ಮಂಜುನಾಥ್
- ಪಾವಗಡ ತಾ.ಪಂ ಇ.ಒ. ಉತ್ತಮ್ ಕುಮಾರ್ ವಿರುದ್ಧ ಪಿಡಿಒಗಳ ದೂರು..!
- ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ: 100 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಸಂಕಲ್ಪ ಯಾತ್ರೆ
- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಾವಶ್ಯಕ: ಡಾ.ಹನುಮಂತನಾಥ ಸ್ವಾಮೀಜಿ ಕರೆ
- ಕ್ಯಾನ್ಸರ್ ಪೀಡಿತ ಮಹಿಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಸಾವಿರ ರೂ. ನೆರವು
Author: admin
ಪಾವಗಡ: ಶತ ಶತಮಾನಗಳಿಂದ ನಾಡಿನ ಜನರಿಗೆ ಅನ್ನ ನೀಡುವ ಒಕ್ಕಲಿಗ ಸಮುದಾಯ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ ಎಂದು ಆದಿಚುಂಚನಗಿರಿ ಸಂಸ್ಥಾನದ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ, ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಕ್ಕಲಿಗರ ಕುಲ ಕಸುಬು ವ್ಯವಸಾಯ. ಈ ಭಾಗದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ನೀರಾವರಿ ಯೋಜನೆಗಳು ಅನುಷ್ಠಾನವಾಗಬೇಕು. ಜನತೆ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು. ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆದಿಚುಂಚನಗಿರಿ ಸಂಸ್ಥೆಯಿಂದ ಮಧುಗಿರಿ, ಕೊರಟಗೆರೆ ಭಾಗದಲ್ಲಿ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದರು. ಶಾಸಕ ಎಚ್.ವಿ. ವೆಂಕಟೇಶ್ ಮಾತನಾಡಿ, ಒಕ್ಕಲಿಗ ಸಮಾಜ ಸಂಘಟಿತರಾಗಿ, ಸಮುದಾಯಕ್ಕೆ ಬೇಕಾದ ಸೌಕರ್ಯ ಕಲ್ಪಿಸಲಾಗುವುದು ಎಂದರು. ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕೆಂಪೇಗೌಡರು ಕೋಟೆ, ಪೇಟೆಗಳ ನಿರ್ಮಾಣದ ಮೂಲಕ ಎಲ್ಲಾ ವರ್ಗದ ಜನರ ಅಭಿವೃದ್ಧಿಗಾರಿ ಶ್ರಮಿಸಿದ್ದರು. ಕೆರೆ ಕಟ್ಟೆಗಳ ನಿರ್ಮಾಣ, ಮಾರುಕಟ್ಟೆಗಳ ನಿರ್ಮಾಣ ಮಾಡಿದ್ದ ಅವರು ತಮ್ಮ ಆಳ್ವಿಕೆಯ…
ಪಾವಗಡ: ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಹೊರವಲಯದಲ್ಲಿ ಇರುವ ಈಶ್ವರ ದೇವಾಲಯದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಬಾಲಾಜಿ ಮಠವನ್ನು ಗುರುವಾರದಂದು ಭಕ್ತಿಭಾವದಿಂದ ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ನಾಗಾನಂದ ಸ್ವಾಮೀಜಿ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿ ಪೂಜೆ, ಭಜನೆ ಹಾಗೂ ಧ್ಯಾನ ಕಾರ್ಯಕ್ರಮಗಳಲ್ಲಿ ತೊಡಗಿದರು. ಮಠದ ಆಶಯವಾಗಿ “ಶ್ರೀ ನಾದಾಬ್ರಹ್ಮ ಯೋಗದಿಂದ ಆರೋಗ್ಯ ಕ್ಷೇಮ ಮತ್ತು ಯೋಗ ಕ್ಷೇಮ” ಎಂಬ ಸಂದೇಶವನ್ನು ಪ್ರಚಾರ ಮಾಡಲಾಯಿತು. ನಾದಾಬ್ರಹ್ಮ ಯೋಗದ ಮೂಲಕ ದೈಹಿಕ–ಮಾನಸಿಕ ಆರೋಗ್ಯ, ಆತ್ಮಶುದ್ಧಿ ಹಾಗೂ ಆಧ್ಯಾತ್ಮಿಕ ಶಾಂತಿಯ ಅನುಭವವನ್ನು ಪಡೆಯಬಹುದು ಎಂದು ಸ್ವಾಮೀಜಿಯವರು ಭಕ್ತರಿಗೆ ತಿಳಿಸಿದರು. “ಭವರೋಗ ಪಿಂಡದಿಂದ ಆರೋಗ್ಯ ಪಿಂಡ, ಮಂತ್ರ ಪಿಂಡ, ಯೋಗ ಪಿಂಡ ಮತ್ತು ಕೊನೆಗೆ ಬ್ರಹ್ಮಾಂಡ ಪಿಂಡದತ್ತ ಸಾಗುವ ಪಯಣವೇ ನಾದಾಬ್ರಹ್ಮ ಯೋಗ,” ಎಂದು ಸ್ವಾಮೀಜಿಯವರು ಉಪದೇಶಿಸಿದರು. ಈ ಯೋಗದಿಂದ ಹೃದಯರೋಗ, ತಲೆನೋವು, ಹೊಟ್ಟೆನೋವು ಮುಂತಾದ ದೈಹಿಕ ತೊಂದರೆಗಳು ನಿವಾರಣೆಯಾಗುತ್ತವೆ. ಮನಸ್ಸು ಚುರುಕಾಗುತ್ತದೆ, ಆಲಸ್ಯ-ಸೋಮಾರಿತನ ದೂರಾಗುತ್ತದೆ ಎಂದು ಅವರು ಹೇಳಿದರು. “ಕಾಯಕವೇ ಕೈಲಾಸ,…
ವೈ.ಎನ್.ಹೊಸಕೋಟೆ: ಯಲ್ಲಪ್ಪನಾಯಕನ ಹೊಸಕೋಟೆ ಸಂಸ್ಥಾನದ ನಿರ್ಮಾತೃ ಪಾಳೇಗಾರ ಕಾಲದಿಂದಲೂ ಸಾಗಿ ಬಂದಿರುವ ಪಾರಂಪರಿಕ ಜಂಬೂ ಸವಾರಿಯು ಗುರುವಾರದ ವಿಜಯದಶಮಿಯಂದು ಎಂದಿನಂತೆ ಈ ವರ್ಷವೂ ಗ್ರಾಮದಲ್ಲಿ ನಡೆಯಿತು. ಸಂಸ್ಥಾನದ ದೊರೆಯ ಮನೆಯಲ್ಲಿ ಪಾಡ್ಯಮಿಯಿಂದಲೇ ಆರಂಭಗೊಂಡಿದ್ದ ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಪೂರ್ಣಗೊಂಡ ನಂತರ ವಿಜಯದಶಮಿಯಂದು ಸಂಜೆ 3 ಗಂಟೆ ಸಮಯದಲ್ಲಿ ಅಶ್ವಾರೂಢರಾದ ದೊರೆ ರಾಜಾ ಜಯಚಂದ್ರರಾಜುರವರು ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ಕೊಂಬು ಕಹಳೆ ವಾದ್ಯತಾಳಗಳೊಂದಿಗೆ, ದಂಡು ದಳವಾಯಿವಾಯಿಗಳು, ಸಂಸ್ಥಾನದ ಖಾವಂದಾರರುಗಳಿಂದ ಕೂಡಿದ ಮೆರೆವಣಿಗೆ ಗ್ರಾಮದೇವತೆ ಗೌರಸಮುದ್ರ ಮಾರಮ್ಮ, ತುಮ್ಮಲುಮಾರಮ್ಮ, ನಿಡಗಲ್ ಮಾರಮ್ಮ, ಬೊಮ್ಮಲಿಂಗೇಶ್ವರ, ಕೊಲ್ಲಾಪುರದಮ್ಮ, ರಾಮದೇವರು, ಇತ್ಯಾದಿ ದೇವರುಗಳ ಉತ್ಸವ ಮೂರ್ತಿಗಳೊಂದಿಗೆ ಪುರ ಜನರ ಸಮೇತವಾಗಿ ಹೊರಟ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿ ಬಂದು ಗ್ರಾಮದ ಪೂರ್ವದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಸೇರಿತು. ಬನ್ನಿ ಮಂಟಪದ ಬನ್ನಿ ಮರಕ್ಕೆ ದೊರೆಯು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಾಲ್ಕು ದಿಕ್ಕುಗಳಿಗೂ ಅಂಬು ಹಾಕಿ ಎಲ್ಲಾ ಕಡೆ ಮಳೆ ಬಿದ್ದು…
ತುಮಕೂರು: ಸರ್ಕಾರದ ಆದೇಶದಂತೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯೊಬ್ಬರಿಗೆ ಧರ್ಮದ ಹೆಸರಿನಲ್ಲಿ ಅವಮಾನಿಸಿ, ಸಮೀಕ್ಷೆಗೆ ಅವಕಾಶ ನೀಡದೇ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಸ್ಲಿಂ ಸಮುದಾಯದ ಶಿಕ್ಷಕಿ ಎಂಬ ಕಾರಣಕ್ಕೆ ಸಮೀಕ್ಷೆಗೆ ಅವಕಾಶ ನೀಡದೆ ಗಲಾಟೆ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಮುಸ್ಲಿಂ ಆಗಿ ಸಮೀಕ್ಷೆಗೆ ಹೇಗೆ ಮನೆ ಬಳಿ ಬಂದಿದ್ದೀಯಾ? ಸಮೀಕ್ಷೆ ಮಾಡಲು ನೀನು ಯಾರು? ಮುಸ್ಲಿಮರ ಮನೆ ಹತ್ತಿರ ಬಿಟ್ಟುಕೊಳ್ಳಬಾರದು. ಮನೆ ಬಳಿಗೆ ಏಕೆ ಬರುತ್ತೀರಾ? ಸಮೀಕ್ಷೆಗೆ ಬರುವಾಗ ಗುರುತಿನ ಕಾರ್ಡ್ ಏಕೆ ತಂದಿಲ್ಲ? ಎಂದೆಲ್ಲ ಪ್ರಶ್ನಿಸಿ ಶಿಕ್ಷಕಿಯನ್ನು ಅವಮಾನಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ನಮ್ಮಮನೆ ಸಮೀಪದಲ್ಲೇ ಇದ್ದು, ಐ.ಡಿ ಕಾರ್ಡ್ ತರುತ್ತೇನೆ. ಸಮೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ಶಿಕ್ಷಕಿ ಮನವೊಲಿಸಲು ಮುಂದಾದರೂ, ಅವಕಾಶ ನೀಡದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಶಿಕ್ಷಕಿ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿರುವ ಮಾಹಿತಿ ಲಭ್ಯವಾಗಿಲ್ಲ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಪಾವಗಡ: ವಿಜಯದಶಮಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬುಧವಾರ ಅಯುಧಪೂಜೆ ದಿನ ಪಟ್ಟಣದ ಶನೈಶ್ಚರ ದೇಗುಲದ ಮುಂದೆ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶನೈಶ್ಚರ ದೇಗುಲ, ನಾಗಲಮಡಿಕೆ ಸುಬ್ರಹ್ಮಣೇಶ್ವರ ದೇಗುಲ, ಸಂಕಾಪುರ ಸುವರ್ಚಲಾ ಅಂಜನೇಯ ದೇಗುಲ ಸೇರಿದಂತೆ ಹಲವು ದೇಗುಲಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಶನೈಶ್ಚರ ದೇಗುಲದಲ್ಲಿ ಸೀತಲಾದೇವಿಗೆ ನಿತ್ಯ ವಿವಿಧ ಅಲಂಕಾರ ಮಾಡಲಾಗಿತ್ತು. ಪಟ್ಟಣದಲ್ಲಿ ನಡೆದ ಜಂಬೂ ಸವಾರಿಯಲ್ಲಿ ತಹಶೀಲ್ದಾರ್ ವೈ.ರವಿ ಅವರು ವಾದ್ಯವೃಂದದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಶಮಿ ವೃಕ್ತಕ್ಕೆ ಪೂಜೆ ಸಲ್ಲಿಸಿದರು. ವೈ.ಎನ್.ಹೊಸಕೋಟೆಯಲ್ಲಿ ರಾಜಮನೆತನದ ಸಾಂಪ್ರದಾಯಿಕ ಜಂಬೂ ಸವಾರಿ ನಡೆಯಿತು. ರಾಜಾ ಜಯಚಂದ್ರರಾಜು ಅವರು ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭವಾಯಿತು. ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ನಡೆದ ಈ ಮೆರವಣಿಗೆ ಬನ್ನಿ ಮಂಟಪಕ್ಕೆ ತಲುಪಿತು. ಅಲ್ಲಿ ಶಮಿ ಪತ್ರೆ ಹಂಚಿಕೆ ಮತ್ತು ಶುಭಾಶಯಗಳ ವಿನಿಮಯ ನಡೆಯಿತು. ಬೆಸ್ಕಾಂ ಕಚೇರಿಯಲ್ಲಿರುವ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಸಹ ವಿಶೇಷ ಪೂಜೆ ನಡೆಯಿತು. ಬನ್ನಿ ಮಂಟಪಕ್ಕೆ ಬಂದ…
ಹುಳಿಯಾರು: ತುರ್ತು ಪರಿಸ್ಥಿತಿಯಲ್ಲಿ ಸ್ವಯಂ ಸೇವಕರು ನೀಡಿದ ಬಲಿದಾನವನ್ನು ಇಂದಿನ ಪೀಳಿಗೆ ಮರೆಯಬಾರದು ಮತ್ತು ಯುವಜನರನಲ್ಲಿ ದೇಶಪ್ರೇಮ ಬೆಳೆಸಲು ಒತ್ತು ನೀಡಲಾಗುವುದು ಎಂದು ದಕ್ಷಿಣ ಪ್ರಾಂತ್ಯ ಬಾಲಗೋಕುಲ ಸಂಯೋಜಕ ಉಮೇಶ್ ತಿಳಿಸಿದರು. ಪಟ್ಟಣದ ಪ್ರಸನ್ನ ಗಣಪತಿ ದೇಗುಲದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಮತ್ತು ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘದ ನೂರು ವರ್ಷಗಳ ಪ್ರಯಾಣವು ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಿತ್ರಣವನ್ನು ಬದಲಾಯಿಸಿದೆ, ಡಾ.ಕೇಶವ ಬಲಿರಾಂ ಹೆಡಗೇವಾರ್ ಅವರು 1925 ವಿಜಯದಶಮಿ ದಿನ ಸಂಘವನ್ನು ಸ್ಥಾಪಿಸಿದರು. ಹಿಂದೂ ಸಮಾಜವನ್ನು ಬಲಿಷ್ಠಗೊಳಿಸಿ, ಸಂಘಟಿತ ಶಕ್ತಿಯಿಂದ ಸಮಾಜ ರಕ್ಷಣೆ ಕಾರ್ಯ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಸನ್ನ ಗಣಪತಿ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಮೋಹನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ತಿಪಟೂರು: ಗಾಂಧೀಜಿ ಅವರ ಸತ್ಯ, ಅಹಿಂಸೆ, ಶಾಂತಿ ಮತ್ತು ಸ್ವಚ್ಛತೆ ಮೌಲ್ಯಗಳನ್ನು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ಮತ್ತು ಶಿಸ್ತನ್ನು ಅನುಸರಿಸಬೇಕು ಎಂದು ಶಾಸಕ ಕೆ.ಷಡಕ್ಷರಿ ಸಲಹೆ ನೀಡಿದರು. ನಗರಸಭೆ ಕಾರ್ಯಾಲಯದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಗಾಂಧೀಜಿ ಮಾರ್ಗದರ್ಶನದಿಂದಲೇ ಭಾರತ ಸ್ವಾತಂತ್ರ್ಯ ಪಡೆದುಕೊಂಡಿದೆ ಎಂದು ಸ್ಮರಿಸಿದರು. ಗಾಂಧೀಜಿಯ ಸ್ವಚ್ಛತಾ ಸಂದೇಶ ಮತ್ತು ಅಹಿಂಸಾ ಸಿದ್ಧಾಂತವು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಶಿಸ್ತು ಮತ್ತು ತ್ಯಾಗದ ಪ್ರತೀಕ ಎಂದು ತಿಳಿಸಿದ ಶಾಸಕರು, ಅವರ ‘ಜೈ ಜವಾನ್ — ಜೈ ಕಿಸಾನ್’ ಘೋಷಣೆ ರಾಷ್ಟ್ರದಲ್ಲಿ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು. ಇಬ್ಬರ ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸಿದಾಗಲೇ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ‘ನಮಸ್ತೆ’ ಯೋಜನೆಯಡಿಯಲ್ಲಿ ಸುರಕ್ಷತಾ ಸಲಕರಣೆಗಳನ್ನು…
ಕುಣಿಗಲ್: ಶಾಸಕ ಡಾ.ರಂಗನಾಥ್ ಅವರು ನವರಾತ್ರಿ ಒಂಬತ್ತು ದಿನಗಳ ಉಪವಾಸ ಮುಗಿಸಿ, ತಾಲ್ಲೂಕಿನ ಗಡಿಭಾಗದ ವಗೆರಗೆರೆ ಗ್ರಾಮದ ದಲಿತ ಸಮುದಾಯದ ವಿಧವೆ ಜಯಮ್ಮ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಜಯಮ್ಮನವರು ಶಾಸಕರಿಗೆ ವಿಶೇಷ ಭೋಜನ ಬಡಿಸಿದರು. ಉಪವಾಸ ಅಂತ್ಯಗೊಳಿಸಲು ಬಂದ ಶಾಸಕರನ್ನು ದಲಿತ ಮುಖಂಡರು ಎತ್ತಿನಗಾಡಿ ಮೆರವಣಿಗೆಯೊಂದಿಗೆ ಸಂಭ್ರಮದಿಂದ ಸ್ವಾಗತಿಸಿದರು. ಊಟಕ್ಕೆ ಗ್ರಾಮೀಣ ಸೊಗಡಿನ ಮುದ್ದೆ, ಸುಪ್ಪಿನ ಸಾರು ಮತ್ತು ಪಾಯಸ ಬಡಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ಟ್ ಮತ್ತು ಬಿಬಿಎಂಪಿ ವಿಭಜನೆ ಕಾರ್ಯವನ್ನು ಕುಮಾರಸ್ವಾಮಿ ಅವರು ಮಾಡಲು ಯೋಚಿಸಿದಾಗ ಯಾವುದೇ ಟೀಕೆ ಇರಲಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ಅವರು ಅದೇ ಕಾರ್ಯ ಮಾಡಲು ಹೋದಾಗ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ವಿಚಾರ ಹಾಗೂ ತಾಲ್ಲೂಕಿನ ನೀರಾವರಿ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಶಾಸಕರು ಸಹಕರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕುಣಿಗಲ್ ಬೆಂಗಳೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬಂದರೆ ಈ…
ತುಮಕೂರು: ನಗರದಲ್ಲಿ ಗುರುವಾರ ತುಮಕೂರು ದಸರಾ’ ಅಂಗವಾಗಿ ಜರುಗಿದ ‘ಜಂಬೂ ಸವಾರಿ’ಗೆ ಜಿಲ್ಲೆಯ ನಾನಾ ಕಡೆಗಳಿಂದ ಬಂದಿದ್ದ ಸಾವಿರಾರು ಜನ ಸಾಕ್ಷಿಯಾದರು. ಕಲಾ ತಂಡಗಳ ವೈಭವ, ಗಜ ಪಡೆಯ ಗಾಂಭೀರ್ಯದ ನಡೆಯನ್ನು ಕಣ್ಣುಂಬಿಕೊಂಡರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು. ಅಂಬಾರಿ ಹೊತ್ತ ಶ್ರೀರಾಮ ಆನೆಯ ಜತೆಗೆ ಎರಡು ಲಕ್ಷ್ಮೀ ಆನೆಗಳು ರಾಜ ಬೀದಿಯಲ್ಲಿ ಗಾಂಭೀರ್ಯದಲ್ಲೇ ಹೆಜ್ಜೆ ಹಾಕಿದವು. ದಸರಾ ಪ್ರಯುಕ್ತ ಜಿಲ್ಲಾ ಆಡಳಿತದಿಂದ ಸೆ. 22ರಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಕೊನೆಯ ದಿನ ನಡೆದ ಅಂಬಾರಿ ಮೆರವಣಿಗೆ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಟೌನ್‌ಹಾಲ್ ಬಳಿ ಸಾರ್ವಜನಿಕರಿಗೆ ಅಸನದ ವ್ಯವಸ್ಥೆ ಮಾಡಲಾಗಿತ್ತು. ಟೌನ್ ಹಾಲ್ ಹತ್ತಿರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸಿ, ನಮಿಸಿದರು. ಶಾಸಕರಾದ ಟಿ.ಬಿ.ಜಯಚಂದ್ರ, ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಗ್ಯಾರಂಟಿ…
ತುಮಕೂರು: ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನಾವು ಭಾವಿಸಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಬದಲಾವಣೆ ಆಗುತ್ತಾರೆ ಎಂದು ಹೇಳಿದವರು ಯಾರು? ಸಿದ್ದರಾಮಯ್ಯನವರು ಈಗ ಮುಖ್ಯಮಂತ್ರಿಯಾಗಿದ್ದಾರೆ, ಅವರೇ ಮುಂದುವರಿಯುತ್ತಾರೆ ಎಂದರು. ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಇಷ್ಟೆಲ್ಲಾ ಹೇಳಿಯೂ ಕೂಡ ಹೈಕಮಾಂಡ್ ನಾಯಕರು ತೆಗೆದುಕೊಳ್ಳುವ ತೀರ್ಮಾನ ಒಪ್ಪಿಕೊಳ್ಳುತ್ತೇನೆ ಅಂತನೂ ಅವರೇ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಕ್ರಾಂತಿ ಇಲ್ಲ, ಎಲ್ಲವೂ ಶಾಂತಿ. ಗಾಂಧಿ ಜಯಂತಿ ದಿನ ಶಾಂತಿ ಹೇಳಬೇಕೆ ಹೊರತು ಕ್ರಾಂತಿ ಅಲ್ಲ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC