Author: admin

ಸೂರಜ್ ರೇವಣ್ಣನ  ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುತ್ತಿದ್ದಂತೆಯೇ ಇತ್ತ ಹೊಳೆನರಸೀಪುರದಲ್ಲಿ ಸಂತ್ರಸ್ತನ ವಿರುದ್ಧವೇ ದೂರು ದಾಖಲಾಗಿದೆ. ಸೂರಜ್ ರೇವಣ್ಣನ ಆಪ್ತ ಶಿವಕುಮಾರ್ ಎನ್ನುವಾತ ಸಂತ್ರಸ್ತನ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್​ ಮೇಲ್​ ದೂರು ನೀಡಿದ್ದಾನೆ. ಆದ್ರೆ, ಇದೀಗ ಸಂತ್ರಸ್ತನ ದೂರಿನ ಅನ್ವಯ ಸೂರಜ್​ನನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆಯೇ ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಶಿವಕುಮಾರ್ ನಾಪತ್ತೆಯಾಗಿದ್ದಾನೆ. ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ ನಂತರ ಶಿವಕುಮಾರ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿವಕುಮಾರ್ ನಾಪತ್ತೆಯಾಗಿದ್ದಾನೆ. ಸಂತ್ರಸ್ತನ ವಿರುದ್ಧ ಶಿವಕುಮಾರ್​​ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಹೋಗಿಯೇ ಸೂರಜ್ ರೇವಣ್ಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಶಿವಕುಮಾರ್, ಸೂರಜ್ ರೇವಣ್ಣ ಜೊತೆಗಿದ್ದೇ ಪಿತೂರಿ ನಡೆಸಿದ್ನಾ? ಎನ್ನುವ ಅನುಮಾನಗಳು ಎಡೆಮಾಡಿಕೊಟ್ಟಿವೆ. ‘ಸೂರಜ್ ರೇವಣ್ಣ ವಿರುದ್ಧದ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ. ಐದು ಕೋಟಿ ಹಣ ನೀಡದಿದ್ದರೆ…

Read More

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸಾವನಪ್ಪಿದ ಘಟನೆ ಕಾರ್ಕಳದ ಬೆಳ್ಮಣ್ ಸಮೀಪದ ನಂದಳಿಕೆ ಕ್ರಾಸ್ ನಲ್ಲಿ ನಡೆದಿದೆ. ನಂದಳಿಕೆ ನಿವಾಸಿ ಪ್ರಣಮ್ಯ ಶೆಟ್ಟಿ (14) ಮೃತ ಬಾಲಕಿಯಾಗಿದ್ದಾರೆ. ನಂದಳಿಕೆಯ ಲಕ್ಷ್ಮೀ ಜನಾರ್ದನ ದೇವಾಲಯದ ಪೂಜೆಗೆಂದು ಹೆದ್ದಾರಿ ಬದಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್‌ ಫಿಕ್ಷನ್ ಫ್ಯಾಂಟಸಿ ಸಿನಿಮಾ ‘ಕಲ್ಕಿ 2898 AD’. ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಹಾಗೂ ಕಮಲ್ ಹಾಸನ್ ರೀತಿಯ ಘಟಾನುಘಟಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹೊಸ ಟ್ರೈಲರ್ ನೋಡಿ ಸಿನಿರಸಿಕರು ಬೆರಗಾಗಿದ್ದಾರೆ. ಸಿ.ಅಶ್ವಿನಿ ದತ್ ಮತ್ತು ಅವರ ಇಬ್ಬರು ಪುತ್ರಿಯರಾದ ಸ್ವಪ್ನಾ ಮತ್ತು ಪ್ರಿಯಾ ಅವರ ನೇತೃತ್ವದಲ್ಲಿ, 50 ವರ್ಷ ವಯಸ್ಸಿನ ನಿರ್ಮಾಣ ಸಂಸ್ಥೆಯು ಕಲ್ಕಿ 2898 ADಯನ್ನು ತಯಾರಿಸಲು 600 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಕಲ್ಕಿ 2898 AD ಇಷ್ಟೊಂದು ಹೈ ಬಜೆಟ್‌ನಲ್ಲಿ ತಯಾರಾದ ಮೊದಲ ಭಾರತೀಯ ಚಲನಚಿತ್ರವಾಗಿದೆ. ಕಲ್ಕಿ USA ಒಂದರಲ್ಲೇ 210 IMAX ಸ್ಕ್ರೀನ್‌ಗಳನ್ನು ಪಡೆಯುವಲ್ಲಿ ಗಮನಾರ್ಹವಾದ ಸಾಧನೆಯನ್ನು ಸಾಧಿಸಿದೆ, ಇದುವರೆಗಿನ ಯಾವುದೇ ಭಾರತೀಯ ಚಿತ್ರಕ್ಕೆ ಇಷ್ಟು ಸ್ಕ್ರೀನ್‌ ದೊರೆತಿರಲ್ಲಿಲ್ಲ. USAನಲ್ಲಿ ಮುಂಗಡ ಮಾರಾಟವು 2 ಮಿಲಿಯನ್ USD ಗಳಿಸಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.…

Read More

ನಟ ಯುವ ರಾಜ್​ ಕುಮಾರ್  ದಾಂಪತ್ಯದಲ್ಲಿ ಬಿರುಕು ಮೂಡಿದೆ. ಯುವ ರಾಜ್ ​ಕುಮಾರ್ ತಮ್ಮ ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಬಯಸಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ವಿಚ್ಛೇದನ ಅರ್ಜಿಯಲ್ಲಿ ಸಹ ಅನೈತಿಕ ಸಂಬಂಧದ ಆರೋಪ ಮಾಡಲಾಗಿತ್ತು. ನಟಿ ಸಪ್ತಮಿ ಗೌಡ ಹೆಸರು ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿತ್ತು. ಇದೀಗ ಆಡಿಯೋ ಒಂದು ವೈರಲ್ ಆಗಿದ್ದು, ಅದು ಸಪ್ತಮಿ ಗೌಡ ಅವರದ್ದೇ ಎನ್ನಲಾಗುತ್ತಿದೆ. ಈ ಆಡಿಯೋವನ್ನು ಸಪ್ತಮಿ, ವಿಜಯ್ ಕಿರಗಂದೂರು ಅವರಿಗೆ ಕಳಿಸಿದ್ದಾರೆ ಎನ್ನಲಾಗುತ್ತಿದೆ. ‘ಯುವ’ ಸಿನಿಮಾದ ಸೆಟ್ ​ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತುಗಳು ಸಹ ಈ ಹಿಂದೆ ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಪ್ತಮಿ ಹಾಗೂ ಯುವ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿತ್ತು. ಆ ಸಮಯದಲ್ಲಿ ಸಪ್ತಮಿ ಅವರು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಈ ಕಳಿಸಿದ್ದ ಆಡಿಯೋ ಇದು ಎನ್ನಲಾಗುತ್ತಿದೆ. ಈಗ ವೈರಲ್ ಆಗಿರುವ ಆಡಿಯೋ ಮಹಿಳೆಯೊಬ್ಬರು…

Read More

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡ್ತಿದೆ. ಈ ಪ್ರಕರಣದಲ್ಲಿ ಈಗ ನಟ ದರ್ಶನ್ ಸೇರಿದಂತೆ 17 ಮಂದಿ ಅರೆಸ್ಟ್ ಆಗಿ, ಜೈಲಿಗೆ ಹೋಗಿದ್ದಾರೆ. ಇದೀಗ ಮತ್ತೊಂದು ಸುದ್ದಿ ಸಂಚಲನವಾಗಿದೆ.ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ ಎನ್ನುವ ಆರೋಪ ಕೇಳಿಬರುತ್ತಿದೆ. ಇದೀಗ ‘ಬಿಗ್ ಬಾಸ್‌’ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ ಒಂದು ಗಂಭೀರ ಆರೋಪ ಮಾಡಿದ್ದಾರೆ. ಅದೇನೆಂದರೆ, ರೇಣುಕಾ ಸ್ವಾಮಿ ಕ್ರಿಯೆಟ್ ಮಾಡಿದ್ದ ಫೇಕ್ ಅಕೌಂಟ್‌ ಗಳಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು ಎಂದಿದ್ದಾರೆ. ಈ ಕುರಿತು ಚಿತ್ರಾಲ್ ರಂಗಾಸ್ವಾಮಿ ಅವರು, “ಸದ್ಯ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಯಾರಿಗೂ ಸಪೋರ್ಟ್ ಮಾಡುವುದಕ್ಕೆ ಬಂದಿಲ್ಲ. ರೇಣುಕಾ ಸ್ವಾಮಿ ಫ್ಯಾಮಿಲಿಗೆ ದೇವರು ಆದಷ್ಟು ಶಕ್ತಿ ಕೊಡಲಿ. ಆದರೆ ಈ ರೇಣುಕಾ ಸ್ವಾಮಿ ಇನ್ನೂ ಒಂದಿಬ್ಬರಿಗೆ ಇದೇ ಮೆಸೇಜ್ ಕಳುಹಿಸಿದ್ದರು, ಅದಕ್ಕೆ ಸಂಬಂಧಿಸಿದಂತೆ ದೂರು ಕೂಡ ದಾಖಲಾಗಿತ್ತು. ಅವರು ಮೆಸೇಜ್ ಕಳುಹಿಸುತ್ತಿದ್ದ…

Read More

ತುಮಕೂರು: ಸಾಹಿತಿ ಡಾ.ಕಮಲಾ ಹಂಪನಾ ರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನುಡಿನಮನ ಸಲ್ಲಿಸಲಾಯಿತು. ಇದೇ ವೇಳೆ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ, ಕಮಲಾ ಹಂಪನಾರವರು ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ  ೬೦ ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿದ್ದಾರೆ. ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. ಅವರ ದೀರ್ಘಕಾಲಿಕ ಹಾಗೂ ಮೌಲಿಕ ಕೊಡುಗೆಗೆ ಸಂದ ಗೌರವಗಳಲ್ಲಿ ಪ್ರಮುಖವಾದುವು,  ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ ೭೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸರ್ಕಾರದ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ. ಡಾ. ಕಮಲಾ ಹಂಪನಾ ಅವರ ಬರವಣಿಗೆಯ ಹರಹು ದೊಡ್ಡದು ಎಂದರು. ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ ೬೦ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಕೃತಿಗಳೂ ಸೇರಿವೆ. ನಾಟಕ, ಕತೆಗಳು ಮತ್ತು ವಚನಗಳಲ್ಲಿ…

Read More

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆ ಅರೆಬೆತ್ತಲಾಗಿ ಸುಮಾರು 1.5 ಕಿ.ಮೀ. ಓಡಿ ತನ್ನ ಪ್ರಾಣ ಉಳಿಸಿಕೊಂಡ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಬಳಿ ನಡೆದಿದ್ದು, ನಾಗರಿಕ ಸಮಾಜ ಬೆಚ್ಚಿಬಿದ್ದಿದೆ. ಮಹಿಳೆ ಅರೆನಗ್ನವಾಗಿ ಓಡಿಬರುತ್ತಿರುವುದನ್ನು ನೋಡಿದ ಸಾರ್ವಜನಿಕರು ಪನ್ವಾಸ ಪೊಲೀಸ್‌ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಪೊಲೀಸರು ಮಹಿಳೆಯನ್ನು ರಕ್ಷಿಸಿ, ವಿಚಾರಣೆ ಮಾಡಿದಾಗ ನಡೆದ ವಿಷಯವನ್ನು ಹೇಳಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜಬಲ್ಪುರ ಮತ್ತು ಮಾಂಡ್ಲಾದ ಇಬ್ಬರು ಪ್ರೇಮಿಗಳು ಉಜ್ಜಯಿನಿಗೆ ಓಡಿಬಂದಿದ್ದರು. ಆದ್ರೆ ಉಳಿಯಲು ಮನೆ ಹಾಗೂ ಮಾಡೋಕೆ ಕೆಲಸ ಇರಲಿಲ್ಲ. ಇಬ್ಬರೂ ಕೆಲಸ ಹುಡುತ್ತಿದ್ದಾಗ ರವಿ ಎಂಬ ಹುಡುಗನ ಪರಿಚಯವಾಗಿದೆ.. ಆತ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ತಾಜ್‌ ಪುರಕ್ಕೆ ಕರೆದೊಯ್ದಿದ್ದಾನೆ. ಬಳಿಕ ಅಲ್ಲಿ ಗುಡಿಸಲೊಂದರಲ್ಲಿ ಇಬ್ಬರನ್ನೂ ಇರುವಂತೆ ಸೂಚನೆ ನೀಡಿದ್ದರು. ನಂತರ ಮಹಿಳೆಯ ಪ್ರಿಯಕರನನ್ನು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುವಂತೆ ಹೊರಗೆ ಕಳುಹಿಸಿದ್ದು,  ಇದೇ ವೇಳೆ ಆರೋಪಿ ರವಿ ತನ್ನ ಇನ್ನೊಬ್ಬ ಸ್ನೇಹಿತ ಇಮ್ರಾನ್‌ ಎಂಬಾತನನ್ನು ಗುಡಿಸಲಿಗೆ ಕರೆಸಿಕೊಂಡಿದ್ದಾನೆ.…

Read More

ಮಹಿಳೆಯ ಮೈಮಾಟ ನೋಡಿ ಸಾಲ ನೀಡಿದ ಬ್ಯಾಂಕ್‌ ಸಿಇಒ ಇದೀಗ ಬೀದಿಗೆ ಬಿದ್ದಿದ್ದು, ಅಂತಿಮವಾಗಿ 4 ಕೋಟಿ ರೂಪಾಯಿಗಳನ್ನು ಕಳೆದುಕೊಂಡು ವಿಧಿ ಇಲ್ಲದೆ ಈಗ ಪೊಲೀಸರ ಮೊರೆ ಹೋಗಿದ್ದಾನೆ. ಮಹಾರಾಷ್ಟ್ರದ ಥಾಣೆಯ ಕೋ ಆಪರೇಟಿವ್‌ ಬ್ಯಾಂಕ್‌ನ ವಡಾಲಾ ಬ್ರಾಂಚ್‌ಗೆ 2016ರಲ್ಲಿ ಮಹಿಳೆಯೊಬ್ಬರು ಲೋನ್‌ಗಾಗಿ ಭೇಟಿ ನೀಡಿದ್ದಳು.. ಈ ವೇಳೆ ಆಕೆ ಕೊಟ್ಟ ಮನೆಯ ದಾಖಲೆಗಳ ಬಗ್ಗೆ ಸಿಬ್ಬಂದಿಗೆ ಅನುಮಾನ ಬಂದಿತ್ತು.. ಹೀಗಾಗಿ ಥಾಣೆಯ ಕೊಪ್ರಿ ಬಳಿ ಇರುವ ಆನಂದ್ ನಗರ ಪ್ರದೇಶದಲ್ಲಿರುವ ಮಹಿಳೆಯ ಮನೆಯ ಸಮೀಕ್ಷೆ ಮಾಡಲು ನಿರ್ಧರಿಸಲಾಗಿತ್ತು.. ಅದಕ್ಕಾಗಿ ಸಿಇಒ ಆಕೆಯ ಮನೆಗೆ ಹೋಗಿದ್ದರು. 2017ರ ಫೆಬ್ರವರಿಯಲ್ಲಿ ಕೊ ಆಪರೇಟಿವ್‌ ಬ್ಯಾಂಕ್‌ ನ ಸಿಇಒ, ಮಹಿಳೆಯ ಮನೆಗೆ ಹೋಗಿದ್ದು, ಪರಿಶೀಲನೆ ಮಾಡಿದ್ದಾರೆ.. ಈ ವೇಳೆ ದಾಖಲೆ ಸರಿ ಇಲ್ಲ ಅನ್ನೋದು ಗೊತ್ತಾಗಿದೆ.. ಆದ್ರೆ ಈ ವೇಳೆ ಆಕೆ ಮೈಮಾಟ ಪ್ರದರ್ಶನ ಮಾಡಿದ್ದಾಳೆ. ಸಿಇಒನನ್ನು ಮಂಚಕ್ಕೆ ಕರೆದಿದ್ದಾಳೆ. ಆಕೆಯ ಮೋಹಕ್ಕೆ ಬಿದ್ದ ಸಿಇಒ 3 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಿ,…

Read More

ಹಾವೇರಿ: ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗನ ಮೇಲೆ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ದಾಳಿ ಮಾಡಿ ಪರಾರಿಯಾಗಿರುವ ಘಟನೆ ನಡೆದಿರೋದು ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಗೋಕಾಕ್‌ ಸರ್ಕಲ್‌ ನಡೆದಿದೆ. ಆಬಿದ್‌ ಅಲ್ಲಾಭಕ್ಷ್‌ ಚೌದ್ರಿ( 30) ಹಲ್ಲೆಗೊಳಗಾದ ಯುವಕನಾಗಿದ್ದಾನೆ.  ಈತ ಸವಣೂರಿನಲ್ಲಿ ಗ್ಯಾರೇಜ್‌ ಕೆಲಸ ಮಾಡುತ್ತಿದ್ದ. ಈ ವೇಳೆ ಎರಡು ಬೈಕ್‌ ಗಳಲ್ಲಿ ಬಂದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ.. ಮಚ್ಚಿನಿಂದ ಕೊಚ್ಚಿದ್ದರಿಂದ ಆಬಿದ್‌ ಅಲ್ಲಾಭಕ್ಷ್‌ ಚೌದ್ರಿ ಸ್ಥಿತಿ ಚಿಂತಾಜನಕವಾಗಿದೆ.. ಆತನನ್ನು ಸವಣೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಸವಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ದೂರಸಂಪರ್ಕ ಕಾಯ್ದೆ-2023ರ ಅಡಿಯಲ್ಲಿ ನಿರ್ಮಿಸಿದ ಕೆಲ ನಿಯಮಾವಳಿಗಳನ್ನು ಜೂನ್ 26ರಿಂದ ಜಾರಿಗೆ ತರಲಾಗುತ್ತದೆ. ಈ ಸಂಬಂಧ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಭಾರತೀಯ ಟೆಲಿಗ್ರಾಫ್ ಕಾಯ್ದೆ–1885, ವೈರ್‍ಲೆಸ್ ಟೆಲಿಗ್ರಫಿ ಕಾಯ್ದೆ-1993 ಮತ್ತು ಟೆಲಿಗ್ರಾಫ್ ವೈರ್ಸ್ (ಕಾನೂನುಬಾಹಿರ ಸ್ವಾಧೀನ) ಕಾಯ್ದೆ–1950ರ ಆಧಾರದಲ್ಲಿ ರಚಿಸಿದ್ದ ದೂರಸಂಪರ್ಕ ವಲಯದ ನಿಬಂಧನಾ ಚೌಕಟ್ಟಿನ ಬದಲು ಹೊಸ ನಿಯಮಾವಳಿ ಜಾರಿಗೆ ಬರಲಿದೆ. ದೂರಸಂಪರ್ಕ ಕಾಯ್ದೆ–2023ರ ಸೆಕ್ಷನ್ 1,2, 10ರಿಂದ 30, 42ರಿಂದ 44, 46, 47, 50 ರಿಂದ 58, 61 ಮತ್ತು 62 ಜೂನ್ 26ರಂದು ಜಾರಿಗೆ ಬರಲಿದೆ ಎಂದು ಅಧಿಸೂಚನೆ ಹೇಳಿದೆ. ಈ ನಿಯಮಾವಳಿಗಳ ಅಡಿಯಲ್ಲಿ ಸರ್ಕಾರ ಯಾವುದೇ ಅಥವಾ ಎಲ್ಲ ದೂರಸಂಪರ್ಕ ಸೇವೆಗಳು ಅಥವಾ ನೆಟ್‍ ವರ್ಕ್‍ಗಳನ್ನು ಹಾಗೂ ಪೈಲಟ್ ಪ್ರಾಜೆಕ್ಟ್‍ ಗಳನ್ನು ರಾಷ್ಟ್ರೀಯ ಭದ್ರತೆ, ವಿದೇಶಗಳ ಜತೆಗಿನ ಸ್ನೇಹಸಂಬಂಧ ಅಥವಾ ಯುದ್ಧ ಕಾಲದಲ್ಲಿ ನಿಯಂತ್ರಿಸುವ ಅಥವಾ ನಿರ್ವಹಣೆಯನ್ನು ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…

Read More