Subscribe to Updates
Get the latest creative news from FooBar about art, design and business.
- ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
- ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
- ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಅವರಿಗೆ ರಾಜ್ಯಮಟ್ಟದ ‘ಕನ್ನಡ ಜಂಗಮ’ ಪ್ರಶಸ್ತಿ
- KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್: ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ
- ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು
- ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ
- ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆ: ರಾಜ್ಯ ಉಪಾಧ್ಯಕ್ಷರಾಗಿ ಎಂ. ದಾಸಪ್ಪ ಆಗತ್ತೂರು ನೇಮಕ
- ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ದ್ರೋಹ ಬಗೆದ ಸರ್ಕಾರ!
Author: admin
ಬೆಂಗಳೂರು: ಕೃಷಿ ನವೋದ್ಯಮಗಳ ಪ್ರೋತ್ಸಾಹ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಸದಾ ಸಿದ್ದ ಎಂದು ಕೃಷಿ ಸಚಿವರಾದ ಎನ್ .ಚಲುವರಾಯಸ್ವಾಮಿ ತಿಳಿಸಿದ್ದಾರೆ. ವಿಕಾಸ ಸೌಧದ ತಮ್ಮ ಕಚೇರಿಯಲ್ಲಿ ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಪುಡ್ ಪಾರ್ಕ್ ಗಳ ಪುನಶ್ಚೇತನ ಹಾಗೂ ಸಿರಿಧಾನ್ಯಗಳಿಗೆ ಸಂಬಂಧಿತ ಕಾರ್ಯಾಚರಣೆಯಲ್ಲಿರುವ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಇಲಾಖೆ ಸಹಭಾಗಿತ್ವದಲ್ಲಿ ರೈತರೊಂದಿಗೆ ಸಂಪರ್ಕಿಸುವ ಕುರಿತು ಸಭೆ ನಡೆಸಿ ಅವರು ಮಾತನಾಡಿದರು. ಸಭೆಯಲ್ಲಿ ಕೃಷಿ ನವೋದ್ಯಮಗಳ ಸ್ಥಿತಿಗತಿ, ಅವುಗಳು ಎದುರಿಸುತ್ತಿರುವ ಸವಾಲುಗಳು, ಸಿರಿಧಾನ್ಯ ಆಧಾರಿತ ಉದ್ಯಮಗಳನ್ನು ಬಲ ಪಡಿಸಲು ಅಗತ್ಯ ಇರುವ ಸರ್ಕಾರದ ನೆರವಿನ ಕುರಿತು ಕೃಷಿ ಸಚಿವರು ಸ್ಟಾರ್ಟಪ್ ಉದ್ಯಮಿಗಳ ಅಭಿಪ್ರಾಯ ಆಲಿಸಿದರು. ಸಿರಿ ಧಾನ್ಯ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕೊರತೆ ಇದೆ. ಹಾಗಾಗಿ ಪ್ರೋತ್ಸಾಹ ಧನ ಯೋಜನೆ ಮುಂದುವರೆಸುವ ಜೊತೆಗೆ ಉತ್ಪಾದನೆಯನ್ನು 30 ಸಾವಿರದಿಂದ 50 ಸಾವಿರ ಹೆಕ್ಟೇರ್ ಗೆ ಏರಿಕೆ ಮಾಡಲು ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಚಲುವರಾಯಸ್ವಾಮಿ ಸೂಚಿಸಿದರು. ರೈತರೊಂದಿಗೆ ಉದ್ದಿಮೆದಾರರ ನೇರ ಖರೀದಿ ವ್ಯವಸ್ಥೆ ಮಾಡಿಸುವ ಬಗ್ಗೆ ಚಿಂತನೆ…
ಕಲಬುರಗಿ: ಪ್ರಸಕ್ತ ವರ್ಷ ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನಲ್ಲಿ ಮಳೆ ವಾಡಿಕೆಗಿಂತ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆ ಆಶದಾಯಕವಾಗಿವೆ. ಈ ವರ್ಷ ರಾಜ್ಯದಾದ್ಯಂತ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಸೋಮವಾರ ಇಲ್ಲಿನ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೂವರೆಗೆ 33 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಇದು ಗುರಿಗೆ ಶೇ.40ರಷ್ಟು ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೇವಲ 8.37 ಲಕ್ಷ ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿತ್ತು ಎಂದು ಸಚಿವರು ಮಾಹಿತಿ ನೀಡಿದರು. ರಾಜ್ಯದಲ್ಲಿ ಮುಂಗಾರು ಪೂರ್ವ 115 ಮಿ.ಮೀ ಮಳೆಯಾದರೆ ಜೂನ್ ಮಾಹೆಯಲ್ಲಿ ಒಟ್ಟಾರೆ 148 ಮಿ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 95 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ 40 ಮಿ.ಮೀ ಹೆಚ್ಚು. ಅದೇ ರೀತಿ ಉತ್ತರ ಒಳನಾಡಿನಲ್ಲಿ 78 ಮಿ.ಮೀ. ಮಳೆ ವಾಡಿಕೆಯಾದರೆ, ಮಳೆ ಬಿದ್ದಿದ್ದು 134 ಮಿ.ಮೀ. ಇನ್ನು ಮಳೆನಾಡು, ಕರಾವಳಿಯಲ್ಲಿ…
ಸರಗೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಪವಿತ್ರಗೌಡ ವಿರುದ್ಧ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ದರ್ಶನ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದಕ್ಕಾಗಿ ಕೊಲೆಯಾಗಿರುವ ರೇಣುಕಾ ಸ್ವಾಮಿ ಪರವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ದರ್ಶನ್ ಮತ್ತು ಪವಿತ್ರಗೌಡ ಹಾಗೂ ಸಹಚರರು ಆರೋಪಿಗಳನ್ನು ಗಲ್ಲಿಗೆ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ತಾಲ್ಲೂಕಿನ ಪಟ್ಟಣದ ಸಂತೆ ಮಾಸ್ತಮ್ಮ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ದರ್ಶನ್ ವಿರುದ್ಧ ವಿವಿಧ ಘೋಷಣೆ ಕೂಗುತ್ತ ನಡೆಸಿ ಅದೇ ಬಸ್ ನಿಲ್ದಾಣದ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತೆರಳಿ ಮುಂಭಾಗದಲ್ಲಿ ಪ್ರತಿಭಟನಕಾರರು ಜಮಾಯಿಸಿ ಮಳೆಯನ್ನು ಲೆಕ್ಕಿಸದೆ ಮಳೆಯಲ್ಲಿ ಪ್ರತಿಭಟನೆ ನಡೆಸಿದರು. ನಂತರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಡಿ ಜಿ ಶಿವರಾಜಪ್ಪ ಮಾತನಾಡಿ ಚಿತ್ರದುರ್ಗದ ಮೃತ…
ಪಾವಗಡ: ನಾಡಿನ ಸಮಕಾಲಿನ ಕನ್ನಡ ಸಾಹಿತ್ಯದ ಮೇರು ಬರಹಗಾರ್ತಿ ನಾಡೋಜ ಡಾ.ಕಮಲಾ ಹಂಪನಾರವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯದರ್ಶಿ ಐ.ಎ.ನಾರಾಯಣಪ್ಪ ತಿಳಿಸಿದರು. ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಸರ್ಕಾರಿ ಬಾಲಕರ ಶಾಲೆಯಲ್ಲಿ ಭಾನುವಾರದಂದು ಹೋಬಳಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ದಿವಂಗತರಾದ ನಾಡೋಜ ಡಾ. ಕಮಲಾ ಹಂಪನಾರವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು. ತಾಲ್ಲೂಕಿನ ಮೂಲದ ಮಹಿಳೆಯಾದ ಕಮಲಾ ಹಂಪನಾ ರವರು ಉತ್ತಮ ಸ್ತ್ರೀ ಸಂವೇದನಾ ಬರಹಗಾರರು ಹಾಗೂ 71 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ಸಾಹಿತ್ಯ ಸೇವೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಂಡಿದೆ ಎಂದರು. ಹೋಬಳಿ ಘಟಕದ ಅಧ್ಯಕ್ಷರಾದ ಹೊ.ಮ.ನಾಗರಾಜು ಮಾತನಾಡಿದರು. ಪದಾಧಿಕಾರಿಗಳಾದ ಕೃಷ್ಣಕುಮಾರ್, ಎ.ಎಸ್.ರಘುನಂದನ್, ಸತ್ಯನಾರಾಯಣಚಾರಿ, ತಿರುಮಲೇಶ ಸೇರಿದಂತೆ ನಂದೀಶ್ ನಾಯ್ಕ, ಹರೀಶ್, ತೇಜಸ್ ಇದ್ದರು. ವರದಿ : ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಸಶ್ಮಾನದಲ್ಲಿ ಅಂತಿಮ ವಿಧಿಗಳನ್ನು ನಡೆಸಿದ ಅನಂತರ ತಿರುಗಬಾರದು ಎಂದು ಹೇಳಲಾಗುತ್ತದೆ. ಯಾಕೆ ಗೊತ್ತೆ ? ಇಲ್ಲಿದೆ ಸನಾತನ ಧರ್ಮದ ನಿಯಮಗಳು ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಆತನ ಆತ್ಮವು ದೇಹವನ್ನು ತೊರೆಯುತ್ತದೆ. ಅಂತಿಮ ವಿಧಿಗಳನ್ನು ನಡೆಸಿದ ಬಳಿಕ ದೇಹವು ಬೂದಿಯಾಗುತ್ತದೆ. ಆದರೆ ಆತ್ಮವು ಅಲ್ಲೇ ಇರುತ್ತದೆ. ಆತ್ಮವನ್ನು ಶಾಶ್ವತ ಮತ್ತು ಅವಿನಾಶಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಯಾವುದೇ ಕತ್ತಿ, ಬೆಂಕಿ ಅಥವಾ ನೀರು ಆತ್ಮವನ್ನು ನಾಶಮಾಡುವುದಿಲ್ಲ. ಸ್ಮಶಾನ ಕಾರ್ಯದ ಬಳಿಕ ವ್ಯಕ್ತಿಯ ಆತ್ಮವು ಬೇರೆ ಲೋಕಕ್ಕೆ ಪ್ರಯಾಣ ಬೆಳೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸತ್ತವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆಯ ಅನಂತರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಹಿಂತಿರುಗಿ ನೋಡಿದಾಗ ಕುಟುಂಬಕ್ಕೆ ಆತ್ಮದ ಬಾಂಧವ್ಯವು ಅದನ್ನು ಇನ್ನೊಂದು ಲೋಕಕ್ಕೆ ಹಾದುಹೋಗದಂತೆ ತಡೆಯುತ್ತದೆ. ಗರುಡ ಪುರಾಣದಲ್ಲಿ ಉಲ್ಲೇಖಿಸಿದಂತೆ ಮರಣದ ಅನಂತರ ಸತ್ತ ವ್ಯಕ್ತಿಯ ಆತ್ಮವು ಸ್ಮಶಾನದಲ್ಲಿ ನಡೆಯುವ ಅವನ ಕೊನೆಯ ಚಟುವಟಿಕೆಗಳನ್ನು ವೀಕ್ಷಿಸುತ್ತದೆ. ಮೃತನ ಕುಟುಂಬದ ಸದಸ್ಯರು ಸ್ಮಶಾನದಲ್ಲಿ ಇರುವುದರಿಂದ ಸತ್ತ…
ಬೆಂಗಳೂರು: 17 ವರ್ಷ ವಯಸ್ಸಿನ ಬಾಲಕನನ್ನು ರಾಡ್ ನಿಂದ ಹೊಡೆದು ಹತ್ಯೆ ಮಾಡಿ, ಖಾಲಿ ಜಾಗವೊಂದರಲ್ಲಿ ಎಸೆದು ಹೋಗಿರುವ ಘಟನೆ ಬೆಂಗಳೂರಿನ ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಿಗೆರೆ ಬಳಿ ನಡೆದಿದೆ. ಅಬ್ಬಿಗೆರೆಯ 17 ವರ್ಷದ ಬಾಲಕ ಮಂಜುನಾಥ್ ಎಂಬಾತನೆ ಕೊಲೆಯಾದ ಬಾಲಕ. ಕಳೆದ ರಾತ್ರಿ ಈತನನ್ನು ಹತ್ಯೆ ಮಾಡಲಾಗಿದೆ. ರಾಡ್ ನಲ್ಲಿ ತಲೆಗೆ ತೀವ್ರವಾಗಿ ದಾಳಿ ಮಾಡಿದ್ದರಿಂದ ಮಂಜುನಾಥ್ ಸಾವನ್ನಪ್ಪಿದ್ದಾನೆ. ನಂತರ ದುಷ್ಕರ್ಮಿಗಳು ಮೃತದೇಹವನ್ನು ಅಬ್ಬಿಗೆರೆ ಬಳಿಯ ಖಾಲಿ ಜಾಗದಲ್ಲಿ ಎಸೆದು ಪರಾರಿಯಾಗಿದ್ದಾರೆ. ಪ್ರೀತಿ ವಿಚಾರಕ್ಕಾಗಿ ಜಗಳ ನಡೆದು, ಅದು ವಿಕೋಪಕ್ಕೆ ತಿರುಗಿದ್ದರಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಬೇಲೂರು: ವ್ಯಾಪಾರ ಮಾಡುವ ನೆಪದಲ್ಲಿ ಅಂಗಡಿಗೆ ಬಂದ ವ್ಯಕ್ತಿ ಮಾಲೀಕನನ್ನು ಯಾಮಾರಿಸಿ ಗಲ್ಲಾ ಪೆಟ್ಟಿಗೆ ಬೀಗ ಮುರಿದು 2 ಲಕ್ಷ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಬೇಲೂರು ತಾಲೂಕು ಹಗರೆಯಲ್ಲಿ ನಡೆದಿದೆ. ಹಗರೆಯ ಸಿದ್ದಲಿಂಗೇಶ್ವರ ಟ್ರೇಡರ್ಸ್ ಕೀಟನಾಶಕ ಅಂಗಡಿಗೆ ಚೀಲ ಕೊಳ್ಳುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಮೊದಲು ಇಪ್ಪತ್ತು ಚೀಲ ಕೊಂಡು ಕೊಂಡು ಹಣ ನೀಡಿದ್ದಾನೆ. ನಂತರ ಮತ್ತೆ ನೂರೈವತ್ತು ಚೀಲ ಬೇಕೆಂದು ಕೇಳಿದ್ದಾನೆ. ಅಷ್ಟು ಚೀಲ ಅಂಗಡಿಯಲ್ಲಿ ದಾಸ್ತಾನಿಲ್ಲದ ಕಾರಣಕ್ಕಾಗಿ ಪಕ್ಕದ ಮಳಿಗೆಯಿಂದ ಚೀಲ ಇರುವುದಾಗಿ ತಿಳಿಸಿದ ಮಾಲೀಕ ಶಿವಣ್ಣ ನೂರೈವತ್ತು ಚೀಲದ ಹಣ ಪಡೆದು ಚೀಲ ತರುವುದಾಗಿ ಅನತಿ ದೂರದಲ್ಲಿರುವ ಮಳಿಗೆಗೆ ಹೋಗಿದ್ದಾರೆ. ಆ ಸಮಯವನ್ನೇ ಕಾಯುತ್ತಿದ್ದ ವ್ಯಕ್ತಿ ಗಲ್ಲಪೆಟ್ಟಿಗೆಯನ್ನು ಕಬ್ಬಿಣದ ಸರಳಿನಿಂದ ಮೀಟಿ ಬೀಗವನ್ನು ಹೊರ ತೆಗೆದು ಎರಡು ಲಕ್ಷ ರೂ.ಗೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿದ್ದಾನೆ. ಮಾಲೀಕ ಚೀಲ ತೆಗೆದುಕೊಂಡು ಬಂದು ನೋಡಿದಾಗ ಹಣ ಕಳುವಾಗಿರುವುದು ಕಂಡು ಬಂದಿದ್ದು ಕೂಡಲೇ ಬೈಕ್ ನಲ್ಲಿ…
ನರಸಿಂಹರಾಜಪುರ:ಸಾರ್ವಜನಿಕ ಸ್ಥಳದಲ್ಲಿ ಲಾಂಗ್ (ತಲವಾರ್) ಝಳಪಿಸುತ್ತ ಸೆರೆಹಿಡಿದ ಚಿತ್ರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಹಾಗೂ ವಾಹನದಲ್ಲಿ ಲಾಂಗ್ ಇರಿಸಿಕೊಂಡು ಸಂಚರಿಸಿದ ಆರೋಪದ ಮೇಲೆ ಯುವಕರಿಬ್ಬರನ್ನು ಪೊಲೀಸರು ಸಂಜೆ ಬಂಧಿಸಿದ್ದಾರೆ. ಪಟ್ಟಣದ ೬ನೇ ವಾರ್ಡ್ ಬೆಟ್ಟಗೆರೆ ನಿವಾಸಿಗಳಾದ ಮೆಕಾನಿಕ್ ಸೈಯದ್ ಸಲ್ಮಾನ್ (೨೨) ಮತ್ತು ಕಾರ್ಪೆಂಟರ್ ಮಹಮ್ಮದ್ ಸಾದಿಕ್ (೨೫) ಬಂಧಿತರು. ಇಬ್ಬರು ವ್ಯಕ್ತಿಗಳು ಕಪ್ಪು ಕಾರಿನಲ್ಲಿ ಲಾಂಗ್ ಇರಿಸಿಕೊಂಡು ಹೆದರಿಕೆ ಹುಟ್ಟಿಸುವ ರೀತಿಯಲ್ಲಿ ಶೆಟ್ಟಿಕೊಪ್ಪ ಗ್ರಾಮದ ಕಡೆಯಿಂದ ಬರುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಇನ್ ಸ್ಪೆಕ್ಟರ್ ಗುರುದತ್ ಕಾಮತ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿದ್ದರು. ತಾಲ್ಲೂಕಿನ ಸೌತಿಕೆರೆ ಗ್ರಾಮದ ಬಳಿ ಕಾರನ್ನು ತಡೆದು ಪರಿಶೀಲಿಸಿದಾಗ ಲಾಂಗ್ ಕಂಡುಬಂದಿತ್ತು. ನಮ್ಮನ್ನು ನೋಡಿ ಜನರು ಹೆದರಿಕೊಳ್ಳಬೇಕು ಎಂಬ ಉದ್ದೇಶ ದಿಂದ ಲಾಂಗ್ ತೋರಿಸುತ್ತ ಓಡಾಡಿದ್ದೆವು ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಯುಧ ಮತ್ತು ಕಾರು ವಶಪಡಿಸಿ ಕೊಂಡಿರುವ ಪೊಲೀಸರು ಆಯುಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಯುವರಾಜ್,…
ವಿಜಯಪುರ: ಗ್ಯಾರಂಟಿ ಯೋಜನೆ ಜಾರಿಗೆ ತಂದು ಸರ್ಕಾರದ ಖಜಾನೆ ಖಾಲಿಯಾಗಿದೆ. ಬ್ರಿಟಿಷ್ ಮಾದರಿಯಲ್ಲಿ ಉಪ್ಪಿನ ಮೇಲೆ ಕರ ವಿಧಿಸಿದಂತೆ ದರ ಏರಿಕೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನೇ ಸರಿಯಾಗಿ ನೀಡುತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ವಕ್ಫ್ ಆಸ್ತಿ ಕುರಿತು ಪ್ರಸ್ತಾಪಿಸಿದ ಯತ್ನಾಳ್, ದೇಶದಲ್ಲಿ 12 ಲಕ್ಷ ಎಕರೆ ಜಮೀನು ವಕ್ಫ್ ಆಸ್ತಿ ಇದೆ. ಇದನ್ನು ಬಡವರಿಗೆ ಹಂಚಿಕೆ ಮಾಡಿ. ಇವೆಲ್ಲವನ್ನು ಮಾಜಿ ಪ್ರಧಾನಿ ದಿ.ನೆಹರೂ ಮಾಡಿದ್ದಾರೆ. ವಕ್ಫ್ ನವರು ಇದು ನಮ್ಮ ಆಸ್ತಿ ಎಂದರೆ ನ್ಯಾಯಾಲಯಕ್ಕೆ ಹೋಗಲಾಗೊಲ್ಲ. ವಿಶೇಷ ನ್ಯಾಯಾಲಯಕ್ಕೆ ಹೋಗಬೇಕು. ಅಲ್ಲಿ ನ್ಯಾಯವಾದಿಯೂ ಮುಸ್ಲಿಂ ಇರುತ್ತಾನೆ. ಎಲ್ಲರೂ ಅವರೇ ಅಲ್ಲಿ ನಮಗೆ ನ್ಯಾಯ ಸಿಗೊಲ್ಲ. ನಮಗೆ ನೆಹರು ಮಾಡೆಲ್ ಬೇಡ, ನಮಗೆ ಮೋದಿ ಯೋಜನೆ ಬೇಕು ಎಂದರು. ವಿಜಯಪುರದಲ್ಲಿ ವಕ್ಫ್ ಆಸ್ತಿ ಕುರಿತು ಹೈಕೋರ್ಟ್‌ಗೆ ಹೋಗುತ್ತೇನೆ. ದೇಶದ 12 ಲಕ್ಷ ಎಕರೆ ವಕ್ಫ್ ಆಸ್ತಿ ಬಡವರಿಗೆ ಹೋಗಬೇಕು. ಬಡವರಿಗೆ…
ವಿಶ್ವದಾದ್ಯಂತ ಮೊಟ್ಟೆಗಳನ್ನು ಪ್ರೋಟೀನ್ ಗಳ ನಿಧಿ ಎಂದು ಹೇಳಲಾಗುತ್ತದೆ. ಪ್ರಪಂಚದಾದ್ಯಂತ ಜನರು ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ.ಮೊಟ್ಟೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಿದ್ದರೂ, ನೀವು ಅದನ್ನು ಹೇಗೆ ತಯಾರಿಸುತ್ತೀರಿ ಎಂಬುದರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ. ಬಹುತೇಕ ಮಂದಿ ಮೊಟ್ಟೆಯ ಹಳದಿ ಭಾಗವನ್ನು ತ್ಯಜಿಸುತ್ತಾರೆ. ಆದರೆ ನಿಮಗೆ ಮೊಟ್ಟೆಯಿಂದ ಹೆಚ್ಚಿನ ಪೋಷಕಾಂಶ ಬೇಕು ಅನ್ನೋದಾದರೆ ಮೊಟ್ಟೆಯ ಹಳದಿಭಾಗವನ್ನೂ ತಿನ್ನಬೇಕು. ಏಕೆಂದರೆ ಮೊಟ್ಟೆಯಲ್ಲಿರುವ ಹೆಚ್ಚಿನ ಪೋಷಕಾಂಶಗಳು ಅದರ ಹಳದಿ ಲೋಳೆಯಲ್ಲಿಯೇ ಹೆಚ್ಚಾಗಿರುತ್ತವೆ. ಮೊಟ್ಟೆಯಹಳದಿ ಬಿಳಿ ಭಾಗವನ್ನೂ ತಿನ್ನೋದ್ರಿಂದ ಹೊಟ್ಟೆ ತುಂಬಿದಂತಿರುತ್ತದೆ. ಬಹಳ ಸಮಯ ಹೊಟ್ಟೆ ಹಸಿಯುವುದಿಲ್ಲ. ಹೀಗಾಗಿ ಇದನ್ನು ಡಯಟ್ ನಲ್ಲಿ ಸೇರಿಸೋದು ಬಹುಮುಖ್ಯ ಎನ್ನುತ್ತಾರೆ ನ್ಯೂಟ್ರಿಷಿಯನ್ಸ್. ಬಿ-5 ಶೇ.7, ವಿಟಮಿನ್ ಬಿ-12 ಶೇ.9 ರಂಜಕ ಶೇ.9, ವಿಟಮಿನ್ ಬಿ2 ಶೇ.15, ಸೆಲೆನಿಯಮ್ ಶೇ.22, ಇರುವುದರಿಂದ ಮೊಟ್ಟೆಯನ್ನು ತಿನ್ನುವಾಗ ಹಳದಿ ಭಾಗಕ್ಕೂ ಗಮನ ಕೊಡಿ ಸಂಪೂರ್ಣ ಪೋಷಕಾಂಶ ಹೊಂದಿ. ಒಂದು ಮಧ್ಯಮ ಗಾತ್ರದ ಮೊಟ್ಟೆ (53 ಗ್ರಾಂ)…