Author: admin

ಇಲಾನ್ ಮಸ್ಕ್ ಅನ್ನುವ ಹೆಸರು ಎಲ್ಲರಿಗೂ ಗೊತ್ತಿದೆ. ವಿಶ್ವದ ಅತೀ ದೊಡ್ಡ ಶ್ರೀಮಂತ, ಪ್ರಚಂಡ ಬುದ್ಧಿವಂತಿಕೆ ಹೊಂದಿರುವ ವ್ಯಕ್ತಿ. ಅಷ್ಟೇ ವಿವಾದಗಳಿಗೂ ಕಾರಣನಾಗಿರುವ ವ್ಯಕ್ತಿ. ಇದೀಗ ಎಲಾನ್ ಮಸ್ಕ್ ಮತ್ತೊಂದು ದೊಡ್ಡ ಲೈಂಗಿಕ ಆರೋಪದ ಸುಳಿಗೆ ಸಿಲುಕಿದ್ದಾರೆ. ಇಲಾನ್ ಮಸ್ಕ್ ವಿರುದ್ಧ ಈ ಹಿಂದೆ ಸಾಕಷ್ಟು ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿದ್ದವು. ಇದೀಗ ಸ್ಪೇಸ್ ಎಕ್ಸ್ ಮಾಜಿ ಮಹಿಳಾ ಸಿಬ್ಬಂದಿ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಸ್ಪೇಸ್ ಎಕ್ಸ್ ಕಂಪನಿಯಲ್ಲಿ ಹುಡುಗಿಯರನ್ನು ಲೈಂಗಿಕ ವಸ್ತುಗಳಂತೆ ನೋಡಲಾಗುತ್ತಿದೆ ಎಂದು ಮಾಜಿ ಉದ್ಯೋಗಿಗಳು ಆರೋಪವನ್ನು ಮಾಡುತ್ತಿದ್ದಾರೆ. ಕಂಪನಿಯೊಳಗೆ ಎಲಾನ್ ಮಸ್ಕ್ ಮಹಿಳಾ ಉದ್ಯೋಗಿಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಇದರ ವಿರುದ್ಧ ಧ್ವನಿ ಎತ್ತಿದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಇದೀಗ ಮಹಿಳಾ ಉದ್ಯೋಗಿಗಳು ಸಿಡಿದೆದ್ದಿದ್ದಾರೆ. ಎಂಟು ಮಂದಿ ಮಾಜಿ ಉದ್ಯೋಗಿಗಳು ಮಸ್ಕ್ ವಿರುದ್ಧ ಕಾನೂನು ಮೊಕದ್ದಮೆ ಹೂಡುವುದಕ್ಕೆ ಸಿದ್ಧವಾಗಿದ್ದಾರೆ. ಕೆಲಸದ ಸ್ಥಳದಲ್ಲಿ ಇಲಾನ್ ಮಸ್ಕ್ ಅಶ್ಲೀಲವಾಗಿ ಮಾತನಾಡುತ್ತಾರೆ. ಹುಡುಗಿಯರನ್ನು ಅವರ ಬ್ರಾ ಸೈಜ್…

Read More

ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಮಗುವಿನ ಕತ್ತು ಸೀಳಿ ಒಲೆಯ ಮೇಲೆ ಸುಡಲು ಯತ್ನಿಸಿದ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ. ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದಳು ಎಂಬುದು ತಿಳಿದುಬಂದಿದೆ. ಮೊದಲು ಮಗುವಿನ ಕತ್ತು ಸೀಳಿ ನಂತರ ಮೃತದೇಹವನ್ನು ಮನೆಯೊಳಗಿನ ಒಲೆಯ ಮೇಲೆ ಸುಡಲು ಪ್ರಯತ್ನಿಸಿದರು ಎಂದು ಮೂಲಗಳು ಹೇಳಿವೆ. ದೇವಿ ಅವರ ಪತಿ ಕಪಿಲ್ ಕುಮಾರ್ ಅವರು ಕೆಲಸದಿಂದ ಮನೆಗೆ ಹಿಂದಿರುಗಿದಾಗ ತಮ್ಮ ಮಗ ಸತ್ತಿರುವುದನ್ನು ಕಂಡಾಗ ನಿಜಾಂಶ ತಿಳಿದುಬಂದಿದೆ. ಆಘಾತಕ್ಕೊಳಗಾದ ಕುಮಾರ್ ತಕ್ಷಣ ಕುಟುಂಬ ಸದಸ್ಯರನ್ನು ಸಹಾಯಕ್ಕಾಗಿ ಕರೆದರು. ಕುಟುಂಬ ಸದಸ್ಯರು ಬಂದಾಗ, ದೇವಿ, ಸಲಿಕೆ ಹಿಡಿದು ಅವರನ್ನು ಮತ್ತು ಕುಮಾರ್ ಅವರನ್ನು ಮನೆಯಿಂದ ಓಡಿಸಿದರು. ಈ ಭೀಕರ ಘಟನೆಯ ಬಗ್ಗೆ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಮ್ ಅರ್ಜ್ ಮತ್ತು ಸರ್ಕಲ್ ಆಫೀಸರ್ ಚಂದ್‌ ಪುರ ಭರತ್ ಸೋಂಕರ್ ಆಗಮಿಸಿ ಪರಿಶೀಲಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ನಾವು ನೆಮ್ಮದಿಯಿಂದ ನಿದ್ದೆ ಮಾಡುವ ಜಾಗವೇ ನಮ್ಮ ಬೆಡ್ ರೂಂ. ಬೆಡ್ ರೂಂ ವಾಸ್ತು ಬಗ್ಗೆ ಗಮನವಿರಲಿ. ವಾಸ್ತು ದೋಷದಿಂದಾಗಿ ಬೆಡ್ ರೂಂನಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ಸಂಗಾತಿ ನಡುವೆ ಆಗಾಗ ಜಗಳವಾಗುತ್ತದೆ. ಸುಖ-ಶಾಂತಿಗಾಗಿ ಬೆಡ್ ರೂಂ ವಾಸ್ತು ಬಗ್ಗೆ ಗಮನ ನೀಡುವುದು ಬಹಳ ಮುಖ್ಯ. ಮಲಗುವ ಕೋಣೆ ಪಶ್ಚಿಮ-ದಕ್ಷಿಣ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ.ಮಲಗುವ ಕೋಣೆಯನ್ನು ಈಶಾನ್ಯ ಮೂಲೆಯಲ್ಲಿ ಮಾಡೋದಕ್ಕೆ ಹೋಗಬೇಡಿ. ಏಕೆಂದರೆ ಇದು ಧನಾತ್ಮಕ ಶಕ್ತಿ ಹರಿದು ಬರೋದಕ್ಕೆ ಅಡ್ಡಿಪಡಿಸುತ್ತದೆ. ಬೆಡ್ ರೂಂನಲ್ಲಿ ಹಿಂಸಾತ್ಮಕ ಫೋಟೋಗಳನ್ನು ಹಾಕಬೇಡಿ. ಇದು ಜಗಳವನ್ನು ಹೆಚ್ಚು ಮಾಡುತ್ತದೆ. ಮಲಗುವ ಕೋಣೆಯ ಬಣ್ಣಗಳು ಶಾಂತಿಯುತ ವಾತಾವರಣವನ್ನು ಸೃಷ್ಟಿಸುವಂತಿರಬೇಕು. ಬಣ್ಣಗಳನ್ನು ನೋಡಿದ ತಕ್ಷಣ ಅದು ನಮ್ಮ ಕಣ್ಣಿಗೆ ಹೊಡೆಯುವಂತಿರಬಾರದು. ಇನ್ನೂ ಕೋಣೆಯ ತುಂಬಾ ಕನ್ನಡಿ ಇಡೋದಕ್ಕೆ ಹೋಗಬೇಡಿ. ಇದು ಕೂಡ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ನೀವು ಮಲಗುವ ಕೋಣೆಯಲ್ಲಿ ಕೆಲವೊಂದು ಸಸ್ಯಗಳು ಇದ್ದರೆ ತುಂಬಾನೇ ಒಳ್ಳೆಯದು. ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಅಕ್ವೇರಿಯಂ ಇಡಬಾರದು. ಇದು ದಂಪತಿ ಆರೋಗ್ಯದಲ್ಲಿ…

Read More

ಕೇಂದ್ರ ಸರ್ಕಾರ ನೀಡುವ ಪಿಂಚಣಿಗೆ ಅರ್ಹರಾದ ವ್ಯಕ್ತಿಗಳು ತಮ್ಮ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಅಗತ್ಯವಿದ್ದಲ್ಲಿ ಬ್ಯಾಂಕ್ ಸಿಬ್ಬಂದಿಯನ್ನೇ ಮನೆಗೆ ಕರೆಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಈ ಕುರಿತು ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುತ್ತಿದ್ದು, ಓಡಾಡಲು ಸಾಧ್ಯವಾಗದಿದ್ದಲ್ಲಿ ಅಂತಹವರಿಂದ ಜೀವಿತ ಪ್ರಮಾಣ ಪತ್ರವನ್ನು ಪಡೆಯಲು ಬ್ಯಾಂಕುಗಳು ತಮ್ಮ ಅಧಿಕಾರಿಗಳನ್ನು ಮನೆಗೆ ಕಳುಹಿಸಿಕೊಡಬಹುದು. ಇಲ್ಲವಾದಲ್ಲಿ ಡಿಜಿಟಲ್ ಮೂಲಕ ಪಿಂಚಣಿದಾರರು ತಮ್ಮ ಮುಖ ಚಹರೆ ಬಳಸಿ ಜೀವಿತ ಪ್ರಮಾಣ ಪತ್ರ ಸಲ್ಲಿಸಬಹುದು ಎಂದು ಹೇಳಲಾಗಿದೆ. ಮಾಸಿಕ ಪಿಂಚಣಿ ಪಡೆಯಲು ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಪಿಂಚಣಿ ವಿತರಣಾ ಪ್ರಾಧಿಕಾರಗಳಿಗೆ (ಪಿಡಿಎ) ಜೀವ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಆದರೆ ಈಗ ಪಿಂಚಣಿದಾರರು ಕಚೇರಿಗಳಿಗೆ ಹೋಗದೆ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ (Animal Husbandry & Veterinary Services Karnataka) ಖಾಲಿ ಇರುವ ಬರೋಬ್ಬರಿ 400 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (AHVS Karnataka Recruitment 2024). ಪಶು ವೈದ್ಯಾಧಿಕಾರಿ ಹುದ್ದೆ ಇದಾಗಿದ್ದು, ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುತ್ತದೆ. ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಒಟ್ಟು 400 ಹುದ್ದೆಗಳಿದ್ದು, ಈ ಪೈಕಿ ಕಲ್ಯಾಣ ಕರ್ನಾಟಕಕ್ಕೆ 14 ಪೋಸ್ಟ್‌ ಮೀಸಲಿಡಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 52,640 ರೂ. ಮಾಸಿಕ ವೇತನ ದೊರೆಯಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅಂಗೀಕೃತ ಪಶುವೈದ್ಯಕೀಯ ವಿಜ್ಞಾನ ವಿಶ್ವ ವಿದ್ಯಾನಿಲಯ ಅಥವಾ ಕೃಷಿ ವಿಶ್ವ ವಿದ್ಯಾನಿಲಯದಿಂದ ಬಿ.ವಿ.ಎಸ್‌.ಸಿ. / ಬಿ.ವಿ.ಎಸ್‌.ಸಿ ಆಯಂಡ್‌ ಎಎಚ್‌ ಪದವಿ ಪಡೆದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯ. ಪ್ರವರ್ಗ 2 ಎ, 2 ಬಿ, ಪ್ರವರ್ಗ 3 ಎ…

Read More

ಭಾರತೀಯ ರೈಲ್ವೆಯು ಎರಡು ಹೊಸ ವಂದೇ ಭಾರತ್‌ ರೈಲುಗಳನ್ನು ಓಡಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಎರಡು ರೈಲು ಮಾರ್ಗಗಳು ಜನರಿಗೆ ಅನುಕೂಲ ಆಗುತ್ತದೆ ಎಂದು ಭಾವಿಸಲಾಗಿದೆ. ಇತ್ತೀಚೆಗೆ, ಎರಡು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಉತ್ತರ ರೈಲ್ವೆ ಮೊರಾದಾಬಾದ್ ವಿಭಾಗದ ವಿಭಾಗಕ್ಕೆ ಸೇರಿಸಲಾಗುತ್ತಿದೆ ಎನ್ನಲಾಗಿದೆ. ಒಂದು ಡೆಹ್ರಾಡೂನ್‌ನಿಂದ ದೆಹಲಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಇನ್ನೊಂದು ಡೆಹ್ರಾಡೂನ್ ಮತ್ತು ಲಕ್ನೋ ನಡುವಿನ ಪ್ರಯಾಣಿಕರಿಗೆ ಬರೇಲಿಯ ಮೂಲಕ ಚಲಿಸುತ್ತದೆ. ಇದಲ್ಲದೆ, ಈಶಾನ್ಯ ರೈಲ್ವೆ ಇಜ್ಜತ್‌ ನಗರ ವಿಭಾಗವು ವಂದೇ ಭಾರತ್ ಎಕ್ಸ್‌’ಪ್ರೆಸ್ ಸೇವೆಯನ್ನು ಸೇರಿಸುವತ್ತ ಗಮನಹರಿಸುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಲಕ್ನೋ–ದೆಹಲಿ, ರಾಮನಗರ–ಆಗ್ರಾ, ಕತ್ಗೊಡಮ್–ದೆಹಲಿ, ಮತ್ತು ತನಕ್‌ ಪುರ–ಲಖನೌಗಳಂತಹ ಬಹುಸಂಖ್ಯೆಯ ಮಾರ್ಗಗಳಲ್ಲಿ ಸಂಚರಿಸುವ ಯೋಜನೆಗಳು ಚುನಾವಣಾ ಅವಧಿಗೆ ಮುಂಚೆಯೇ ಚರ್ಚೆಯಲ್ಲಿವೆ. ಭಾರತೀಯ ರೈಲ್ವೇಯು ಲಕ್ನೋ-ದೆಹಲಿ, ಕತ್ಗೊಡಮ್-ದೆಹಲಿ, ತನಕ್‌’ಪುರದಿಂದ ಪಿಲಿಭಿತ್, ಷಹಜಹಾನ್‌’ಪುರ ಮತ್ತು ಸೀತಾಪುರ್ ಮೂಲಕ ಲಕ್ನೋವರೆಗೆ ಮತ್ತು ಇನ್ನೊಂದು ರಾಮನಗರದಿಂದ ಆಗ್ರಾವರೆಗಿನ ಮಾರ್ಗದ ನೀಲನಕ್ಷೆಗಳನ್ನು ಮ್ಯಾಪ್ ಮಾಡಿದೆ. ಈ ಹೊಸದಾಗಿ ಯೋಜಿಸಲಾದ ವಂದೇ…

Read More

ಬೆಂಗಳೂರಿನ ನೇರಳೆ ಮಾರ್ಗದ ಮೆಟ್ರೋ ಮಾರ್ಗದಲ್ಲಿ ವ್ಯತ್ಯಯ ಕಂಡು ಬಂದಿದೆ. ಇಂದು ಬೆಳಗ್ಗೆ 9:58 ಗಂಟೆ ಸುಮಾರಿಗೆ ಮೆಟ್ರೋ ಹತ್ತಿದ್ದ ಪ್ರಯಾಣಿಕರು ಇನ್ನೇನು ಇಳಿಯಬೇಕು ಎಂದು ಕಾದು ನಿಂತಿದ್ದು ಡೋರ್ ಓಪನ್ ಆಗದೆ ಬೋಗಿ ಒಳಗಡೆ ಲಾಕ್ ಆಗಿದ್ದರು. ಮುಂಜಾನೆ 9:58ರಲ್ಲಿ ವ್ಯತ್ಯಯವುಂಟಾಗಿದ್ದ ನೇರಳೆ ಮಾರ್ಗದ ಮೆಟ್ರೋ ಸಂಚಾರ ಬೆಳಗ್ಗೆ 11:30 ರ ವೇಳೆಗೆ ಸಹಜ ಸ್ಥಿತಿಗೆ ಮರಳಿದೆ. ಬೆಳಗ್ಗೆ ಕೆಲಸಕ್ಕೆ ತರಳುವ ವೇಳೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆ ಉಂಟಾದ ಕಾರಣ ಕಚೇರಿಗಳಿಗೆ ತಲುಪಲು ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗಿತ್ತು. ಈಗ ಮೆಟ್ರೋ ಸೇವೆ ಎಂದಿನಂತೆ ಸಹಜ ಸ್ಥಿತಿಗೆ ಬಂದಿದೆ. ಆದರೂ ಜನರಲ್ಲಿ ಕೊಂಚ ಭಯ ಉಂಟಾಗಿದೆ. ಇವತ್ತು ಸಂಭವಿಸಿದ ಸಮಸ್ಯೆಯಿಂದಾಗಿ ಪ್ರಯಾಣಿಕರು ಒಂದು ಗಂಟೆಗಳ ಕಾಲ ಮೆಟ್ರೋ ರೈಲಿನ ಒಳಗಡೆಯೇ ಲಾಕ್ ಆಗುವಂತಾಗಿತ್ತು. ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಬೋಗಿಯ ಡೋರ್ ​ಗಳು ಓಪನ್ ಆಗದೆ ಲಾಕ್ ಆಗಿದ್ದವು. ಗಂಟೆಗಟ್ಟಲೆ ಕಾದರೂ ಡೋರ್ ಓಪನ್ ಆಗದೆ ಒಳಗಡೆ ಇದ್ದ…

Read More

ಬೆಂಗಳೂರು: ಪತ್ನಿ ನಾಗರತ್ನ ವಿರುದ್ಧ ವಿಚ್ಛೇದನಾ ಕೋರಿ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿದೆ. ನಟ ದುನಿಯಾ ವಿಜಯ್ ಕ್ರೌರ್ಯದ ಆಧಾರದಲ್ಲಿ 2018ರಲ್ಲಿ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೇ ಆರೋಪ ಸಾಭೀತು ಪಡಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್ ಸಲ್ಲಿಸಿದ್ದ ವಿಚ್ಛೇಧನ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬಳ್ಳಾರಿಯ ಸಿರುಗುಪ್ಪ ತಾಲೂಕಿನ ನಡವಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಮೊಸಳೆ ದಾಳಿ ನಡೆಸಿದ್ದು, ನದಿ ದಡದಲ್ಲಿ ಮೇಯುತ್ತಿದ್ದ ಆಕಳನ್ನ ಮೊಸಳೆಗಳು ಎಳೆದೊಯ್ದಿವೆ. ಮೊಸಳೆ ದಾಳಿಗೆ ಬಲಿಯಾದ ಆಕಳು, ಕಂಪ್ಲಿ ಗಾದಿಲಿಂಗಪ್ಪ ಎನ್ನುವವರಿಗೆ ಸೇರಿದ್ದಾಗಿವೆ. ನೋಡ ನೋಡುತ್ತಿದ್ದಂತೆ ನಾಲ್ಕು ಮೊಸಳೆಗಳು ಆಕಳನ್ನ ಹಿಡಿದು ನದಿ ಒಡಲಿಗೆ ಎಳೆದೊಯ್ದಿದ್ದು, ನದಿ ಮಧ್ಯೆ ಹೋಗಿ ಮೊಸಳೆಗಳು ಆಕಳನ್ನ ತಿಂದಿವೆ ಎನ್ನಲಾಗಿದೆ. ಪದೇ ಪದೇ ಮೊಸಳೆ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿರೋದಕ್ಕೆ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದ್ದು, ನಿರ್ಲಕ್ಷ್ಯ ಮಾಡುತ್ತಿರುವ ಜಿಲ್ಲಾಡಳಿತ ಹಾಗೂ ಜನಪ್ರತಿನಿದಿಗಳ ವಿರುದ್ದ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296  

Read More

ಮಲಗಿದ ಕೂಡ್ಲೇ ಕೆಲವರಿಗೆ ಗೊರಕೆ ಹೊಡೆಯುವ ಅಭ್ಯಾಸವಿರುತ್ತದೆ. ಆದರೆ ಅವರ ಪಕ್ಕದಲ್ಲಿ ಮಲಗಿದವರ ಕಷ್ಟವನ್ನು ಹೇಳಲು ಅಸಾಧ್ಯ. ಇದರಿಂದಾಗಿ ಎಷ್ಟೋ ಬಾರಿ ಪಕ್ಕದಲ್ಲಿ ಮಲಗಿದವರು ಕಿರಿಕಿರಿಯನ್ನು ಅನುಭವಿಸುತ್ತಾರೆ. ಈ ಮನೆ ಮದ್ದನ್ನು ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಗೊರಕೆ ಸಮಸ್ಯೆ ನಿವಾರಣೆಗೆ ಸರಳ ಮನೆಮದ್ದುಗಳು: ಉಗುರು ಬೆಚ್ಚನೆಯಾಗಿರುವ ಬೆಣ್ಣೆ ಅಥವಾ ಬ್ರಾಹ್ಮಿ ಆಯಿಲ್‌ನನ್ನು ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಮೂಗಿಗೆ 2 ಡ್ರಾಪ್‌ ಬಿಡುವುದರಿಂದಲೂ ಗೊರಕೆ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಬಿಸಿ ನೀರಿಗೆ ಅರ್ಧ ಚಮಚದಷ್ಟು ಏಲಕ್ಕಿ ಹುಡಿಯನ್ನು ಹಾಕಿ ಮಿಕ್ಸ್‌ ಮಾಡಿ. ಪ್ರತಿ ನಿತ್ಯ ಮಲಗುವ ಮುನ್ನ ಸೇವಿಸಿದರೆ ಗೊರಕೆ ಸಮಸ್ಯೆಗೆ ನಿವಾರಣೆ ಸಾಧ್ಯ. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಬಿಸಿ -ಬಸಿಯಾದ  ನೀರನ್ನು ಸೇವನೆ ಮಾಡುವುದರಿಂದ  ಸಾಮಾನ್ಯ ಶೀತದಿಂದ ಗಂಟಲಿನಲ್ಲಿ ಸಂಗ್ರಹವಾಗಿರುವ ಲೋಳೆಯಂತಹ ಅಂಶ ಕರಗುತ್ತದೆ. ಇದರಿಂದ ಗೊರಕೆ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More