ಮಲಗಿದ ಕೂಡ್ಲೇ ಕೆಲವರಿಗೆ ಗೊರಕೆ ಹೊಡೆಯುವ ಅಭ್ಯಾಸವಿರುತ್ತದೆ. ಆದರೆ ಅವರ ಪಕ್ಕದಲ್ಲಿ ಮಲಗಿದವರ ಕಷ್ಟವನ್ನು ಹೇಳಲು ಅಸಾಧ್ಯ. ಇದರಿಂದಾಗಿ ಎಷ್ಟೋ ಬಾರಿ ಪಕ್ಕದಲ್ಲಿ ಮಲಗಿದವರು ಕಿರಿಕಿರಿಯನ್ನು ಅನುಭವಿಸುತ್ತಾರೆ.
ಈ ಮನೆ ಮದ್ದನ್ನು ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಗೊರಕೆ ಸಮಸ್ಯೆ ನಿವಾರಣೆಗೆ ಸರಳ ಮನೆಮದ್ದುಗಳು:
ಉಗುರು ಬೆಚ್ಚನೆಯಾಗಿರುವ ಬೆಣ್ಣೆ ಅಥವಾ ಬ್ರಾಹ್ಮಿ ಆಯಿಲ್ನನ್ನು ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಮೂಗಿಗೆ 2 ಡ್ರಾಪ್ ಬಿಡುವುದರಿಂದಲೂ ಗೊರಕೆ ಸಮಸ್ಯೆ ಪರಿಹರಿಸಿಕೊಳ್ಳಬಹುದು.
ಬಿಸಿ ನೀರಿಗೆ ಅರ್ಧ ಚಮಚದಷ್ಟು ಏಲಕ್ಕಿ ಹುಡಿಯನ್ನು ಹಾಕಿ ಮಿಕ್ಸ್ ಮಾಡಿ. ಪ್ರತಿ ನಿತ್ಯ ಮಲಗುವ ಮುನ್ನ ಸೇವಿಸಿದರೆ ಗೊರಕೆ ಸಮಸ್ಯೆಗೆ ನಿವಾರಣೆ ಸಾಧ್ಯ.
ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಬಿಸಿ -ಬಸಿಯಾದ ನೀರನ್ನು ಸೇವನೆ ಮಾಡುವುದರಿಂದ ಸಾಮಾನ್ಯ ಶೀತದಿಂದ ಗಂಟಲಿನಲ್ಲಿ ಸಂಗ್ರಹವಾಗಿರುವ ಲೋಳೆಯಂತಹ ಅಂಶ ಕರಗುತ್ತದೆ. ಇದರಿಂದ ಗೊರಕೆ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296