Author: admin

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ಮೋದಿಯವರ ಕುಟುಂಬ ಎಂಬ ಪದ ಬಳಸಿ ಪ್ರಚಾರವನ್ನು ನಡೆಸಿದರು.  ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹೆಸರಿನ ಮುಂದೆ ‘ಮೋದಿ ಕಾ ಪರಿವಾರ್’ ಎಂದು ಬರೆದುಕೊಂಡಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ‘ಮೋದಿ ಕಾ ಪರಿವಾರ್’ ಪದವನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ. “ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ‘ಮೋದಿ ಕಾ ಫ್ಯಾಮಿಲಿ’ ಎಂದು ಬರೆದಿದ್ದರು. ಇದು ನನಗೆ ಸಾಕಷ್ಟು ಶಕ್ತಿಯನ್ನು ನೀಡಿತು. ಭಾರತದ ಜನರು ಎನ್ಡಿಎಗೆ ಸತತ ಮೂರನೇ ಅವಧಿಗೆ ಬಹುಮತ ನೀಡಿದ್ದಾರೆ, ಇದು ಒಂದು ರೀತಿಯ ದಾಖಲೆಯಾಗಿದೆ ಮತ್ತು ನಮ್ಮ ದೇಶದ ಸುಧಾರಣೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಜನಾದೇಶವನ್ನು ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬೆಂಬಲಿಗರಿಗೆ…

Read More

ಕುವೈತ್: ಕುವೈತ್ ನ ಮಂಗಾಫ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಐವರು ಭಾರತೀಯರು ಸೇರಿದಂತೆ ಕನಿಷ್ಠ 53 ಮಂದಿ ಸಜೀವ ದಹನವಾಗಿದ್ದಾರೆ. ಕುವೈತ್ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 53 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸಂತಾಪ ಸೂಚಿಸಿದೆ. “ಈ ದುರಂತದಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ” ಎಂದು ಇಎಎಂ ಡಾ.ಎಸ್.ಜೈಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುವೈತ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಅಲ್ಲದೇ ಅಗ್ನಿ ಅವಘಡದಲ್ಲಿ ಕೆಲವು ಭಾರತೀಯ ಕಾರ್ಮಿಕರು ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯು ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲಿದೆ ಎಂದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ನನ್ನ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಮಾಡುವಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ನಾನು ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಫಿರ್ಯಾದಿ ಮಹಿಳೆಗೆ ದೂರು ನೀಡುವುದೇ ಹವ್ಯಾಸವಾಗಿತ್ತು. ಎಫ್‌ಐಆರ್ ದಾಖಲಾದ ನಂತರ ವಿಚಾರಣೆಗೆ ಹಾಜರಾಗಿದ್ದೆ. ಏ.12ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೆ. ನನ್ನ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಮಾಡುವಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇರೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಮಾಜಿ ಸಿಎಂ ಯಡಿಯೂರಪ್ಪ ನನ್ನ 17 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದರು. ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ…

Read More

ಪಾಪ್ ಕಾರ್ನ್‌ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಪ್ತಮಿ ಗೌಡ. ಕಾಂತಾರ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ನಟಿಯಾಗಿಬಿಟ್ಟರು. ನಟ ಯುವ ರಾಜ್‌ ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿ ಸಪ್ತಮಿ ಗೌಡ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ಯುವ ಪತ್ನಿ ಶ್ರೀದೇವಿ ಭೈರಪ್ಪ ಉತ್ತರಿಸಿದ ಲೀಗಲ್ ನೋಟಿಸ್‌ ನಲ್ಲಿ ನಟಿ ಸಪ್ತಮಿ ಹೆಸರು ಉಲ್ಲೇಖಿಸಿದ್ದರು. ಯುವ ಹಾಗೂ ಸಪ್ತಮಿ ನಡುವೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಇದು ಸಪ್ತಮಿ ಗೌಡ ಕೆರಳಿಸಿದೆ. ಇದೀಗ ಶ್ರೀದೇವಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಸಜ್ಜಾಗಿದ್ದಾರೆ. ಶ್ರೀದೇವಿ ಭೈರಪ್ಪ ಆರೋಪಗಳಿಂದ ನಟಿ ಸಪ್ತಮಿ ಗೌಡ ಹಾಗೂ ಸಪ್ತಮಿ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಯುವ ರಾಜ್‌ ಕುಮಾರ್ ಹಾಗೂ ಶ್ರೀದೇವಿ ನಡುವಿನ ವಿಚ್ಚೇದನದಲ್ಲಿ ನಮ್ಮ ಪುತ್ರಿಯನ್ನು ಎಳೆದು ತಂದಿದ್ದೇಕೆ? ಯಾವ ಆಧಾರದಲ್ಲಿ ಸಪ್ತಮಿ ಗೌಡ ಹೆಸರು ಉಲ್ಲೇಖಿಸಿದ್ದಾರೆ ಎಂದು ಸಪ್ತಮಿ ಪೋಷಕರು ಆಕ್ರೋಶಗೊಂಡಿದ್ದಾರೆ. ಸಪ್ತಮಿ ಗೌಡ ಜೊತೆ ಸಮಾಲೋಚಿಸಿ…

Read More

ಯಾವುದೇ ಅನಗತ್ಯ ಹೇಳಿಕೆಗಳನ್ನು ನೀಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಬಿನೆಟ್‌ ಸಭೆಯಲ್ಲಿ ಸಚಿವರಿಗೆ ಸೂಚಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಮೋದಿ ಅವರು ತನ್ನ ಸಂಪುಟದ ಸದಸ್ಯರ ಮೊದಲ ಸಭೆ ನಡೆಸಿದರು. ಈ ವೇಳೆ, ಯಾವುದೇ ಅನಗತ್ಯ ಸಾರ್ವಜನಿಕ ಹೇಳಿಕೆಗಳನ್ನು ನೀಡಬೇಡಿ. ಅಗತ್ಯವಿರುವಾಗ ಆಯಾ ಸಚಿವಾಲಯಗಳಿಗೆ ನೇರವಾಗಿ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಮಾತನಾಡಿ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂತ್ರಿಗಳು ಸರಿಯಾಗಿ ಸಮಯಪಾಲನೆ ಮಾಡಬೇಕು. ಇದರಿಂದ ಸಚಿವಾಲಯದ ಸಿಬ್ಬಂದಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದಂತಾಗುತ್ತದೆ. ಸಚಿವಾಲಯದ ನಿರ್ಧಾರಗಳನ್ನು, ಸಂಬಂಧಿಸಿದ ಕಡತಗಳನ್ನು ರಾಜ್ಯ ಮಂತ್ರಿ ಜೊತೆ ಹಂಚಿಕೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ಮುಗಿದ ಕೂಡಲೇ ಖಾತೆಗಳನ್ನು ಪ್ರಕಟಿಸಲಾಗಿದೆ. ಪ್ರಮುಖ 5 ಸಚಿವಾಲಯಗಳನ್ನು ಬಿಜೆಪಿ ತನ್ನ ಬಳಿಯೇ ಇಟ್ಟುಕೊಂಡಿದೆ ಮತ್ತು ಈ ಹಿಂದೆ ನಿರ್ವಹಣೆ ಮಾಡಿದವರಿಗೆ ನೀಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೂಕಿನ ಸಿಂಗ್ರಿ ಸಂಜಪ್ಪ ಕಲ್ಯಾಣ ಮಂಟಪದಲ್ಲಿ ಇಂದು 1800ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಲಾಯಿತು. ರಂಗಾಪುರ ಮಠದ ಶ್ರೀ ಗುರುಪರದೇಶಿ ಸ್ವಾಮಿಗಳ ಸಮ್ಮುಖದಲ್ಲಿ ಶಿಬಿರದ ಉದ್ಘಾಟನೆ ನಡೆಯಿತು. ಸ್ವಾಮೀಜಿಗಳು ಮದ್ಯವ್ಯಸನಿಗಳಿಗೆ ಮಾರ್ಗದರ್ಶನ ನೀಡುತ್ತಾ, “ಸಪ್ತ ವ್ಯಸನಗಳಲ್ಲಿ ಮದ್ಯವ್ಯಸನವೆಂಬುದು ಅತ್ಯಂತ ಅಪಾಯಕಾರಿ ಹಾಗೂ ಕೆಟ್ಟ ವ್ಯಸನವಾಗಿದ್ದು, ಈ ಸಮಾಜವನ್ನು ವ್ಯಸನಮುಕ್ತಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಇಂದಿಗೆ 1800 ನೇ ಹಜ್ಜೆಯನ್ನು ಯಶಸ್ವಿಯಾಗಿಟ್ಟು, ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವ ಕಠಿಣ ಪ್ರಯತ್ನಕ್ಕೆ ಸಾಕ್ಷಿಯಾಗಿದೆ” ಎಂದು ಶುಭ ಹಾರೈಸಿದರು. ಶಿಬಿರದ ಅದ್ಯಕ್ಷರಾಗಿರುವ ಟಿ.ಸಿ. ತರಕಾರಿ ಗಂಗಾಧರ್ ರವರು ಮಾತನಾಡಿ, “ಯೋಜನೆಯ ವತಿಯಿಂದ ನಡೆಯುತ್ತಿರುವ ಈ ಮಹತ್ವದ ಸೇವೆಗೆ ನನ್ನನ್ನು ಅದ್ಯಕ್ಷರನ್ನಾಗಿ ನೇಮಿಸಿ, ಮಂಜುನಾಥಸ್ವಾಮಿಯ ಹೆಸರಿನಲ್ಲಿ ಬಡಜನರಿಗೆ ಸೇವೆ ಸಲ್ಲಿಸಲು ಒಂದು ಅವಕಾಶವನ್ನು ಕೊಟ್ಟಿರುವುದು, ನನ್ನ ಪುಣ್ಯವೇ ಸರಿ. ಈ ತರಹದ ಯೋಜನೆಯ ಯಾವುದೇ ಕಾರ್ಯಕ್ರಮವಿರಲಿ ನನ್ನ ಬೆಂಬಲ ಸದಾ ಇರುತ್ತದೆ. ಜೊತೆಗೆ ಇಲ್ಲಿರುವ ಎಲ್ಲಾ ಮದ್ಯವಸನಿಗಳು ಪಾನಮುಕ್ತರಾದಾಗ ನಮ್ಮೆಲ್ಲರ ಸೇವೆಗೆ ನಿಜವಾದ ಅರ್ಥ…

Read More

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗಾಗ ತಮ್ಮ ಅಜ್ಞಾನದ ಪ್ರದರ್ಶನ ಮಾಡುತ್ತಾ ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿರುತ್ತಾರೆ. ‘ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷಕ್ಕೆ ಮತ ತಂದು ಕೊಟ್ಟಿಲ್ಲ’ ಎನ್ನುವುದು ಅವರ ಇತ್ತೀಚಿನ ಸಂಶೋಧನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಶೋಕ್ ಅವರೇ, ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾಕೆ ಇಷ್ಟೊಂದು ಸಿಟ್ಟು? ಮತ್ಸರ? ಅದರ ಫಲಾನುಭವಿಗಳಾದ ಬಡವರು, ಮಹಿಳೆಯರು, ಯುವಜನರ ಬಗ್ಗೆ ಯಾಕೆ ನಿಮಗೆ ಇಷ್ಟೊಂದು ದ್ವೇಷ, ಅಸಹನೆ? ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಜನತೆ ಮಾತ್ರವಲ್ಲ ದೇಶದ ಜನತೆ ಕೂಡಾ ಸೋಲಿಸಿದ್ದು ಮೋದಿ ಗ್ಯಾರಂಟಿಗಳನ್ನೇ ಹೊರತು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನಲ್ಲ. ಅಶೋಕ್ ಅವರೇ, ಈಗಲಾದರೂ ಎಚ್ಚೆತ್ತುಕೊಂಡು ಸತ್ಯವನ್ನು ಎದುರಿಸಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಗಿಂತ ಶೇ.13ರಷ್ಟು ಹೆಚ್ಚು ಮತಗಳನ್ನು ರಾಜ್ಯದ ಮತದಾರರು ಈ ಬಾರಿ ನಮಗೆ ನೀಡಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು…

Read More

ಸರ್ಕಾರದ ಸಹಾಯಧನ ಯೋಜನೆಯಡಿ ‘ಭಾರತ್ ಗೌರವ್’ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದ್ದು, ಪ್ರತಿ ಯಾತ್ರಾರ್ಥಿಗಳಿಗೆ 5,000 ರೂಪಾಯಿಗಳ ಸಹಾಯಧನ ಲಭ್ಯವಾಗುತ್ತದೆ. ಇದರ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾತ್ರಾರ್ಥಿಗಳು ರಾಮೇಶ್ವರದ ರಾಮೇಶ್ವರ ದೇವಾಲಯ, ಕನ್ಯಾಕುಮಾರಿಯ ಶ್ರೀ ಭಗವತಿ ದೇವಾಲಯ, ಮದುರೈಯ ಶ್ರೀ ಮೀನಾಕ್ಷಿ ದೇವಾಲಯ ಹಾಗೂ ತಿರುವನಂತಪುರಂನ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪಡೆಯಬಹುದಾಗಿದೆ. ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15,000 ರೂಪಾಯಿಗಳಾಗಿದ್ದು, ಕರ್ನಾಟಕ ಸರ್ಕಾರದಿಂದ 5,000 ರೂಪಾಯಿ ಸಹಾಯಧನ ಲಭ್ಯವಾಗುವ ಕಾರಣ ಯಾತ್ರಿಕರು ಕೇವಲ ಹತ್ತು ಸಾವಿರ ರೂಪಾಯಿ ಪಾವತಿಸಿದರೆ ಸಾಕಾಗುತ್ತದೆ. ಇನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ಸಿ ಅಧಿಸೂಚನೆ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರು ಮತ್ತು ಅವರ ಕುಟುಂಬದ ಒಬ್ಬ ಸದಸ್ಯರನ್ನು ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆ ಯೋಜನೆಯಡಿ ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುತ್ತದೆ. ವಿಶೇಷ ರೈಲು ಜೂನ್ 23ರಂದು ಹೊರಡುತ್ತಿದ್ದು ಜುಲೈ 1 ರಂದು…

Read More

ಬ್ಯಾಂಕಾಕ್: ಬ್ಯಾಂಕಾಕ್ ನ ಪ್ರಸಿದ್ಧ ಸಾಕುಪ್ರಾಣಿ ಮಾರುಕಟ್ಟೆ ಚಟುಚಾಕ್ ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ದುರಂತದಲ್ಲಿ 100ಕ್ಕೂ ಅಧಿಕ ಅಂಗಡಿಗಳು ಸುಟ್ಟುಹೋಗಿದ್ದು ಪಂಜರದಲ್ಲಿ ಇರಿಸಲಾಗಿದ್ದ ನಾಯಿ, ಬೆಕ್ಕುಗಳು, ಪಕ್ಷಿಗಳು, ಹಾವುಗಳ ಸಹಿತ ನೂರಾರು ಪ್ರಾಣಿಗಳು ಸಾವನ್ನಪ್ಪಿವೆ ಎಂದು ಪೊಲೀಸರು ಹೇಳಿದ್ದಾರೆ. ಚಟುಚಾಕ್ ಮಾರುಕಟ್ಟೆಯ ಆಲಂಕರಿಕ ಮೀನುಗಳ ವಿಭಾಗದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಿಪ್ರವಾಗಿ 14,000 ಚದರಡಿ ಪ್ರದೇಶದ 100ಕ್ಕೂ ಅಧಿಕ ಸ್ಟಾಲ್ ಗಳಿಗೆ ವ್ಯಾಪಿಸಿದೆ. ಮನುಷ್ಯರು ಸಾವನ್ನಪ್ಪಿದ ಅಥವಾ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ಆದರೆ ಪಂಜರದಲ್ಲಿಟ್ಟಿದ್ದ ಹಲವು ಸಾಕುಪ್ರಾಣಿಗಳು ಸಾವನ್ನಪ್ಪಿವೆ. ಸುಮಾರು 2 ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದ್ದು ದುರಂತದ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಟಿಬೆಟಿಯನ್ನರ ಸ್ವ-ನಿರ್ಣಯದ ಹಕ್ಕನ್ನು ಅಂಗೀಕರಿಸುವ ನಿರ್ಣಯವನ್ನು ಕೆನಡಾದ ಸಂಸತ್ತು ಅವಿರೋಧವಾಗಿ ಅಂಗೀಕರಿಸಿದೆ. `ಟಿಬೆಟ್ ನ ಸ್ವಯಂ ನಿರ್ಣಯದ ಹಕ್ಕನ್ನು ಘೋಷಿಸುವ ನಿರ್ಣಯವನ್ನು ಕೆನಡಾ ಸಂಸತ್ತು ಅಂಗೀಕರಿಸಿದೆ ಎಂದು ಹೇಳಲು ರೋಮಾಂಚನವಾಗುತ್ತಿದೆ ಎಂದು ಕೆನಡಾ ಟಿಬೆಟ್ ಸಮಿತಿ ಸಿಟಿಸಿ `ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. ಚೀನಾವು ಟಿಬೆಟಿಯನ್ನರ ವಿರುದ್ಧ ವ್ಯವಸ್ಥಿತ ಸಾಂಸ್ಕೃತಿಕ ಸಮೀಕರಣದ ನೀತಿಯನ್ನು ನಡೆಸುತ್ತಿದೆ ಮತ್ತು ಟಿಬೆಟಿಯನ್ನರು, ಜನರು ಮತ್ತು ರಾಷ್ಟ್ರವಾಗಿ ಸ್ವಯಂ ಹಕ್ಕನ್ನು ಪಡೆದುಕೊಳ್ಳಬಹುದು ಎಂದು ಸದನವು ಅವಿರೋಧ ಒಪ್ಪಿಗೆಯ ಮೂಲಕ ಗುರುತಿಸಿದೆ ಎಂದು ನಿರ್ಣಯದ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ. `ಟಿಬೆಟಿಯನ್ನರು ತಮ್ಮ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನೀತಿಗಳನ್ನು ಯಾವುದೇ ಬಾಹ್ಯ ಶಕ್ತಿಗಳ ಹಸ್ತಕ್ಷೇಪವಿಲ್ಲದೆ ಮುಕ್ತವಾಗಿ ಆಯ್ಕೆ ಮಾಡಲು ಅಧಿಕಾರವನ್ನು ಹೊಂದಿದ್ದಾರೆ. ಈ ಸಬಲೀಕರಣವು ಮುಂದಿನ ಟಿಬೆಟಿಯನ್ ಆಧ್ಯಾತ್ಮಿಕ ಮುಖಂಡ, 14ನೇ ದಲಾಯಿ ಲಾಮಾರ ಉತ್ತರಾಧಿಕಾರಿಯ ಆಯ್ಕೆಯಲ್ಲಿ ಮಧ್ಯಪ್ರವೇಶಿಸದಂತೆ ಚೀನಾವನ್ನು ನಿಷೇಧಿಸುತ್ತದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಇದು 1950ರಲ್ಲಿ ಟಿಬೆಟನ್ನು ಸ್ವಾಧೀನಪಡಿಸಿಕೊಂಡ ಅಂದಿನಿಂದ ಟಿಬೆಟ್ ಐತಿಹಾಸಿಕವಾಗಿ…

Read More