Author: admin

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಕೇಳಿರಬಹುದು. ಅಂತೆಯೇ ಈ ಗಾದೆಯ ಸಲುವಾಗಿ ಒಂದು ಘಟನೆ ನಡೆದಿದೆ. ಹೌದು, ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ತೇಲುತ್ತಿದೆಯೆಂದು ಸ್ಥಳೀಯರು ಪೊಲೀಸರನ್ನು ಕರೆಸಿದ್ದು, ಕೂಡಲೇ ನೀರಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಪೊಲೀಸರು ಮೇಲಕ್ಕೆತ್ತುವ ಸಂದರ್ಭದಲ್ಲಿ ದಿಢೀರನೇ ಆ ವ್ಯಕ್ತಿ ಎಚ್ಚರಗೊಂಡಿದ್ದಾನೆ. ಈ ಅಚ್ಚರಿಯ ಪ್ರಕರಣ ತೆಲಂಗಾಣದ ಹನುಮಕೊಂಡ ಎಂಬಲ್ಲಿ ನಡೆದಿದ್ದು, ಕಲ್ಲಿನ ಕೆಲಸ ಮಾಡುವ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕೆರೆಯ ನೀರಿನಲ್ಲಿಯೇ ಹಾಯಾಗಿ ಮಲಗಿರುತ್ತಾನೆ. ಸುಮಾರು ಹೊತ್ತಿನಿಂದ ದೇಹದಲ್ಲಿ ಯಾವುದೇ ಚಲನವಲನ ಇಲ್ಲದಿರುವುದನ್ನು ಗಮನಿಸಿದ ಅಲ್ಲಿನ ಸ್ಥಳೀಯರು ಈ ವ್ಯಕ್ತಿ ಸತ್ತು ಬಿದ್ದಿದ್ದಾನೆ ಎಂದು ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ದೇಹವಿರುವ ಸ್ಥಳಕ್ಕೆ ಬಂದಿದ್ದಾರೆ. ಕೆರೆಯಿಂದ ದೇಹವನ್ನು ಪೊಲೀಸರು ಮೇಲಕ್ಕೆತ್ತುವ ಸಂದರ್ಭದಲ್ಲಿ ಆ ವ್ಯಕ್ತಿ ಎದ್ದು ನಿಲ್ಲುತ್ತಾನೆ. ಆತ ಎಚ್ಚರಗೊಂಡದ್ದನ್ನು ಕಂಡು ಅಲ್ಲಿದ್ದ ಎಲ್ಲರೂ ಒಮ್ಮೆಗೆ ಶಾಕ್‌ ಆಗುತ್ತಾರೆ. ನಂತರ ಇದು ಕುಡಿದ ಮತ್ತಿನಲ್ಲಿ ನಡೆದ ಎಡವಟ್ಟು ಎಂದು ಪೊಲೀಸರಿಗೆ…

Read More

ಕೊಪ್ಪಳ: ಈಗಿನ ಎನ್ ಡಿಎ ಸರಕಾರ ಬಹಳ ದಿನ ಉಳಿಯೋದಿಲ್ಲ. ಇಂಡಿಯಾ ಸರಕಾರ ಬರುವ ಕಾಲ ಹತ್ತಿರವಿದೆ ಎಂದು ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದಿದ್ದಾರೆ. ‘ಸಾಮಾಜಿಕ ಪರಿಕಲ್ಪನೆ, ಡಾ. ಬಾಬಾ ಸಾಹೇಬ ಅಂಬೇಡ್ಕರರ ಸಂವಿಧಾನ ಒಪ್ಪಿಕೊಂಡಿರುವ ಆಂಧ್ರದ ಚಂದ್ರಬಾಬು ನಾಯ್ಡು, ಬಿಹಾರದ ನಿತೀಶ್ ಕುಮಾರ್ ಇದ್ದಾರೆ. ಯಾವ ಸಂದರ್ಭದಲ್ಲಿ ಬೇಕಾದರೂ ಈಗಿನ ಸರಕಾರ ಬೀಳಬಹುದು. ಮಮತಾ ಬ್ಯಾನರ್ಜಿ ಸಹ ಈಗ ಸರಕಾರ ಅಸ್ಥಿರತೆಯ ಬಗ್ಗೆ ಹೇಳಿದ್ದಾರೆ. ಅದು ನಿಜವಾಗಬಹುದು’ ಎಂದಿದ್ದಾರೆ. “ಮೂರನೆಯ ಬಾರಿ ಮೋದಿ ಪ್ರಧಾನಿಯಾಗಿದ್ದಾರೆ ಶುಭಾಶಯಗಳು. ನರೇಂದ್ರ ಮೋದಿಯವರಿಗೆ ಕಡಿಮೆ ಸ್ಥಾನ ಬರುತ್ತವೆ ಎಂದು ಮೊದಲೇ ಹೇಳಿದ್ದೆ. ಈಗ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿದೆ. ದೇಶದಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಈ ಬಾರಿ ಮೋದಿ ತಪ್ಪು ಮಾಡುವುದಕ್ಕೆ ಬಿಡುವುದಿಲ್ಲ. ರಾಹುಲ್ ಗಾಂಧಿ ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ. ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ಅಪಹಾಸ್ಯ ಮಾಡಿದ್ದರು” ಎಂದರು. “ಬಿಜೆಪಿಯವರಿಗೆ ರಾಮ ಹಾಗೂ ಹನುಮ…

Read More

ರಾಜ್ಯ ಸರ್ಕಾರ ಕಮ್ಯುನಲ್ ಗವರ್ನಮೆಂಟ್ ಆಗಿ ಬದಲಾಗಿದೆ. ಈ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅರಾಜಕತೆ, ಗೂಂಡಾಗಿರಿ, ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೆ ವೇಳೆಯಲ್ಲಿ ಗೂಂಡಾಗಳು ನಿರ್ಭಯರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ವೇಳೆ ಮಂಗಳೂರಿನಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಮತೀಯ ಚಟುವಟಿಕೆಗಳಿಗೆ ಕುಮಕ್ಕು ನೀಡುತ್ತಿದೆ ಎಂದು ಕಿಡಿಕಾರಿದರು. ಯಾವುದೇ ಅನುಮತಿ ಪಡೆಯದೆ ಒಂದಷ್ಟು ಜನ ಸೇರಿಕೊಂಡು ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ನಮಾಜು ಮಾಡುವುದು ರಸ್ತೆಯಲ್ಲಿ ಅಲ್ಲ. ಅದಕ್ಕಾಗಿಯೇ ಮಸೀದಿ ಇದೆ. ಹೀಗೆ ರಸ್ತೆಯಲ್ಲಿ ನಮಾಜು ಮಾಡುವವರ ಮೇಲೆ ಪೊಲೀಸರು ಸುಮೊಟೊ ಕೇಸು ದಾಖಲಿಸಿದರೆ ಅಂತ ಪೊಲೀಸರನ್ನು ಕಡ್ಡಾಯ ರಜೆ ಮೇಲೆ ಕಳಿಸುತ್ತಾರೆ. ರಾಜ್ಯ ಸರ್ಕಾರ ಒಂದು ಕೋಮುನವರ ಮೇಲೆ ದಾಖಲಾಗಿರುವ ಎಲ್ಲಾ ಕೇಸುಗಳನ್ನು ವಾಪಾಸ್ ತೆಗೆದುಕೊಳ್ಳುತ್ತಿದೆ. ಇದೇ…

Read More

ಮಾಸ್ಕೋ: ರಶ್ಯದ ಎಸ್ಯು-34 ಬಾಂಬರ್ ವಿಮಾನ ಕಾಕಸಸ್ ಪರ್ವತ ಪ್ರದೇಶಗಳಲ್ಲಿ ಅಪಘಾತಕ್ಕೆ ಒಳಗಾಗಿದ್ದು ವಿಮಾನದಲ್ಲಿದ್ದ ಸಿಬ್ಬಂದಿ ಮೃತಪಟ್ಟಿರುವುದಾಗಿ ರಕ್ಷಣಾ ಇಲಾಖೆಯನ್ನು ಉಲ್ಲೇಖಿಸಿ ರಶ್ಯದ ಆರ್ಐಎ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ. ಉತ್ತರ ಒಸ್ಸೆಟಿಯಾ-ಅಲಾನಿಯಾ ಪ್ರದೇಶದಲ್ಲಿ ವಾಡಿಕೆಯ ತರಬೇತಿ ಹಾರಾಟದಲ್ಲಿದ್ದ ರಶ್ಯ ವಾಯುಪಡೆಯ ಎಸ್ಯು-34 ಬಾಂಬರ್ ವಿಮಾನ ಪತನವಾಗಿದ್ದು ದುರಂತಕ್ಕೆ ತಾಂತ್ರಿಕ ವೈಫಲ್ಯ ಕಾರಣವಾಗಿರಬಹುದು. ಅಪಘಾತದಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಪಘಾತದ ಪ್ರದೇಶದಲ್ಲಿ ಯಾವುದೇ ಹಾನಿ ಅಥವಾ ನಷ್ಟ ಸಂಭವಿಸಿಲ್ಲ ಎಂದು ವರದಿ ಹೇಳಿದೆ. ವಿಮಾನದಲ್ಲಿ ಎಷ್ಟು ಸಿಬ್ಬಂದಿಗಳಿದ್ದರು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಸೋವಿಯತ್ ಒಕ್ಕೂಟ ಮೂಲದ ಸೂಪರ್ಸಾನಿಕ್ ಮಧ್ಯಮ ಶ್ರೇಣಿಯ ಬಾಂಬರ್ ವಿಮಾನ ಇದು ಎಂದು ವರದಿ ಮಾಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಸಾಮಾನ್ಯ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಖ್ಯಾತ ಸಿನಿಮಾ ನಟ ದರ್ಶನ್ ಅವರನ್ನು ನ್ಯಾಯಾಲಯ ಮುಂದಿನ ಏಳು ದಿನಗಳ ತನಕ ಪೊಲೀಸ್ ಕಸ್ಟಡಿಗೆ ನೀಡಿದೆ. ನೆನ್ನೆ ಸಂಜೆ ನ್ಯಾಯಾಲಯಕ್ಕೆ ದರ್ಶನ್ ಮತ್ತು ಟೀಂ ಅನ್ನು ಹಾಜರುಪಡಿಸಲಾಗಿದೆ. ಈ ವೇಳೆ ವಿಚಾರಣೆಯನ್ನು ನ್ಯಾಯಾಧೀಶರು ನಡೆಸಿರುತ್ತಾರೆ. ಪೊಲೀಸರಿಂದ ನಿಮಗೆ ಏನಾದರೂ ತೊಂದರೆ ಆಯಿತೇ..? ಎಂದು ಮೊದಲಿಗೆ ಕೇಳಿದ್ದಾರೆ. ಬಳಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ದರ್ಶನ್ ಕೈಕಟ್ಟಿ ನ್ಯಾಯಾಧೀಶರ ಎದುರು ನಿಂತಿದ್ದರು. ಮಾತ್ರವಲ್ಲ ಕಣ್ಣೀರು ಹಾಕಿದರು. ಇದಾದ ಬಳಿಕ ನ್ಯಾಯಾಲಯ ತನ್ನ ಆದೇಶವನ್ನು ಪ್ರಕಟಿಸುತ್ತೆ, ಮುಂದಿನ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸೂಚಿಸುತ್ತೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಸತ್ಯಾಸತ್ಯತೆ ತಿಳಿದು ಬರಬೇಕು. ಇದಕ್ಕೆ ಸಮಗ್ರ ತನಿಖೆಯ ಅವಶ್ಯಕತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯ ಪಡುತ್ತದೆ. ಮಾತ್ರವಲ್ಲ ನಟ ದರ್ಶನ್ ಪ್ರಭಾವಿಯಾಗಿದ್ದು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಇದೇ ವೇಳೆ ನ್ಯಾಯಾಲಯ ತಿಳಿಸಿದೆ. ಸದ್ಯ…

Read More

ಬೆಂಗಳೂರು: ನಟ ದರ್ಶನ್ ಮತ್ತು ಸಹಚರರಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರ ಮನವಿ ಮೇರೆಗೆ ಆರೋಪಿಗಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ. ದರ್ಶನ್ ಹಾಗೂ ಸಹಚರರನ್ನು 14 ದಿನ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಕರೆದುಕೊಂಡು ಹೋಗಿದ್ದು, ಕೊಲೆಯಾದ ಸ್ಥಳ, ಶವ ಎಸೆದ ಜಾಗದಲ್ಲಿ ಮಹಜರು ನಡೆಸಬೇಕಿದೆ. ಮೊಬೈಲ್ ಡೇಟಾ ಸಂಗ್ರಹಿಸಬೇಕು. ಆಯುಧ ಜಪ್ತಿ ಮಾಡಬೇಕಿದೆ. ದರ್ಶನ್ ಸೆಲೆಬ್ರಿಟಿ ಆಗಿರುವುದರಿಂದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದ್ದು, ಅವರನ್ನು 14 ದಿನ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ SPP ರಾಜಿನಾಮೆ ನೀಡಿದ್ದಾರೆ. ಪ್ರಜ್ವಲ್ ರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಪರವಾಗಿ ಕೋರ್ಟ್​ನಲ್ಲಿ ವಾದಿಸಲು ರಾಜ್ಯ ಸರ್ಕಾರ ಜಾಯ್ನಾ ಕೊಥಾರಿ ಅವರನ್ನು ಹೆಚ್ಚುವರಿ ಎಸ್​ ಪಿಪಿಯಾಗಿ ನೇಮಕ ಮಾಡಿತ್ತು. ಇತ್ತೀಚೆಗಷ್ಟೇ ಇದೇ ಪ್ರಕರಣಕ್ಕೆ ರಾಜ್ಯ ಸರ್ಕಾರ ನೇಮಿಸಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಎನ್ ಜಗದೀಶ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದೀಗ ಜಾಯ್ನಾ ಕೊಥಾರಿ ಅವರು ಇಂದು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡ (SIT) ಪರ ವಾದಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಆಗಿ ಬಿಎನ್ ಜಗದೀಶ ಅವರನ್ನು ರಾಜ್ಯ ಸರ್ಕಾರ ನೇಮಿಸಿತ್ತು. ಬಳಿಕ ವಿಚಾರಣಾ ನ್ಯಾಯಾಲಯ ಮತ್ತು ಸೆಷನ್‌ಗಳ ಮುಂದೆ ಪ್ರಾಸಿಕ್ಯೂಷನ್‌ನ್ನು ಸಮರ್ಥಿಸಲು ರಾಜ್ಯ ಸರ್ಕಾರವು, ಹಿರಿಯ ವಕೀಲರಾದ ಅಶೋಕ್ ಎನ್ ನಾಯಕ್ ಮತ್ತು ಜಾಯ್ನಾ ಕೊಥಾರಿ ಅವರನ್ನು ಹೆಚ್ಚುವರಿ ಎಸ್‌ಪಿಪಿಗಳಾಗಿ ಸರ್ಕಾರ ನೇಮಿಸಿತ್ತು. ಇದರ…

Read More

ತುಮಕೂರು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್‌.ಟಿ.ಎಸ್.ಸಿ.‌ (ಪೋಕ್ಸೋ) ಜೀವಾವಧಿ(ಸಾಯುವವರೆಗೂ) ಶಿಕ್ಷೆ ಮತ್ತು 1 ಲಕ್ಷದ ಐದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನೊಂದ ಬಾಲಕಿಯ ತಂದೆ 5 ವರ್ಷಗಳ ಹಿಂದೆ ಮೃತಪಟ್ಟ ಕಾರಣ, ತಾಯಿ, ತಮ್ಮ, ತಂಗಿ ಜೊತೆಗೆ ತನ್ನ ತಾತನ ಮನೆಯಲ್ಲಿ ವಾಸವಿದ್ದಳು. ಮೇ 2022ರಲ್ಲಿ ಈ ಘಟನೆ ನಡೆದಿದ್ದು, ಶನಿವಾರ ದಿನ ಬಾಲಕಿ ಬಸ್‌ ಸಿಗದ ಕಾರಣ ಶಾಲೆಗೆ ಹೋಗಲು ಸಾಧ್ಯವಾಗದೇ ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ ಅಡುಗೆ ಮಾಡಲು ಅಡುಗೆ ಕೋಣೆಗೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಗೆ ಸಂಬಂಧದಲ್ಲಿ ತಾತಾನಾಗಬೇಕಾದ ಅಪರಾಧಿ ಶ್ರೀನಿವಾಸ ಎಂಬಾತ ಮನೆಯೊಳಗೆ ಪ್ರವೇಶಿಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ವಿಚಾರ ಯಾರಿಗಾದರೂ ತಿಳಿಸಬಾರದು ಎಂದು ಪ್ರಾಣ ಬೆದರಿಕೆ ಹಾಕಿದ್ದ. ನಂತರ ಬಾಲಕಿ ಒಬ್ಬಳೇ ಇದ್ದ ದಿನಗಳಲ್ಲಿ…

Read More

ತುಮಕೂರು: ಜಾತ್ರಾ ಮಹೋತ್ಸವದಲ್ಲಿ ನೀಡಿದ ಕಲುಷಿತ ನೀರು ಸೇವಿಸಿ  ಹತ್ತಕ್ಕೂ ಹೆಚ್ಚು ಮಂದಿ ಭಕ್ತರು ಅಸ್ವಸ್ಥ ಗೊಂಡಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ನಡೆದಿದೆ. ತೀವ್ರ ಸ್ವಸ್ಥಗೊಂಡ ಭಕ್ತರನ್ನು ತುಮಕೂರು ಜಿಲ್ಲೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಮಳೆ ಕೂಡ ಹೆಚ್ಚಾಗಿದೆ, ಮಳೆ ನೀರಿನಿಂದನೋ ಅಥವಾ  ಊಟದಿಂದನೋ  ಕೆಲವರು ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಮೇಲ್ನೋಟಕ್ಕೆ ಲಭ್ಯವಾಗುತ್ತಿದೆ . ಪೆದ್ದಣ್ಣ, ಲಕ್ಷ್ಮಮ್ಮ ಎನ್ನುವವರಿಗೆ ಗಂಭೀರವಾಗಿತ್ತು, ಈಗ ಚೇತರಿಕೆ ಆಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಅಸ್ವಸ್ಥಗೊಂಡಿರುವ ಆರು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಾತ್ರಾ ಮಹೋತ್ಸವದ ವೇಳೆ ಸುಮಾರು 15ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು ಇನ್ನು ಕೆಲವರನ್ನು ಮಧುಗಿರಿ  ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ದಸರಾ ಮಹೋತ್ಸವದಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ 38 ವರ್ಷದ ‘ಅಶ್ವತ್ಥಾಮ’ ಆನೆಯು ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮಂಗಳವಾರ ಮೃತಪಟ್ಟಿದೆ. 2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಅಶ್ವತ್ಥಾಮನನ್ನು ಸೆರೆ ಹಿಡಿಯಲಾಗಿತ್ತು. ಶಾಂತ ಹಾಗೂ ಗಾಂಭೀರ್ಯ ಸ್ವಭಾವಕ್ಕೆ ಹೆಸರಾಗಿದ್ದ ಅದನ್ನು ನಾಲ್ಕು ವರ್ಷದಲ್ಲಿಯೇ 2021ರ ದಸರೆಗೆ ಕರೆತರಲಾಗಿತ್ತು. ಅದಕ್ಕೆ ನಡಿಗೆ ತಾಲೀಮು ಸೇರಿದಂತೆ ವಿವಿಧ ತಾಲೀಮನ್ನು ನೀಡಲಾಗಿತ್ತು. 2022ರ ದಸರೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿತ್ತು. ಹುಣಸೂರು- ಪಿರಿಯಾಪಟ್ಟಣ ತಾಲ್ಲೂಕಿನ ಗಡಿ ಭಾಗದ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದ ಆನೆಯು ಆಹಾರ ಅರಸಿ ಕಾಡಿಗೆ ತೆರಳಿತ್ತು. ಸೋಲಾರ್ ಬೇಲಿ ಮೇಲೆ ವಿದ್ಯುತ್ ತಂತಿಯು ಬಿದ್ದಿದ್ದರಿಂದ ವಿದ್ಯುತ್ ಆಘಾತದಿಂದ ಅಶ್ವತ್ಥಾಮ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More