Author: admin

ಅಮರಾವತಿ: ಜೂನ್ 12 ರಂದು ಮೂರನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, . ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೇಸರಪಲ್ಲಿ ಐಟಿ ಪಾರ್ಕ್ ನಲ್ಲಿ ನಾಯ್ಡು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್ 12 ರಂದು ಬೆಳಿಗ್ಗೆ 11:27 ಕ್ಕೆ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೇಸರಪಲ್ಲಿ ಐಟಿ ಪಾರ್ಕ್ನಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಯ್ಡು ಅವರು 1995 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು ಮತ್ತು 2004 ರವರೆಗೆ ಆಡಳಿತ ನಡೆಸಿದರು. ಒಂದು ದಶಕದ ನಂತರ ಮತ್ತು ಅಖಂಡ ರಾಜ್ಯವನ್ನು ತೆಲಂಗಾಣ ಮತ್ತು ಉಳಿದ ಆಂಧ್ರಪ್ರದೇಶವಾಗಿ ವಿಭಜಿಸಿದ ನಂತರ, ನಾಯ್ಡು 2014 ರಲ್ಲಿ ಹೊಸದಾಗಿ ರಚಿಸಲಾದ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು. ಆದಾಗ್ಯೂ, ವೈಎಸ್‌ಆರ್ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡಿದ್ದರಿಂದ ಅವರು 2019 ರ ಚುನಾವಣೆಯಲ್ಲಿ ಸೋತರು. ಐದು…

Read More

ಚಂಡಿಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ನೂತನ ಸಂಸದೆ ಕಂಗನಾ ರಣಾವತ್ ಅವರಿಗೆ ಭದ್ರತಾ ಸಿಬ್ಬಂದಿ  ಕುಲ್ವಿಂದರ್​ ಕೌರ್​ ಅವರಿಗೆ ಗಾಯಕ ವಿಶಾಲ್ ದದ್ಲಾನಿ ಕೆಲಸದ ಆಫರ್ ನೀಡಿದ್ದಾರೆ. ‘ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿಯ ಸಿಟ್ಟು ಏನು ಎಂಬುದು ನನಗೆ ಚೆನ್ನಾಗಿ ಅರ್ಥ ಆಗುತ್ತದೆ. ಕುಲ್ವಿಂದರ್​ ಕೌರ್​ ವಿರುದ್ಧ ಸಿಐಎಸ್ ​ಎಫ್​ ನವರು ಏನಾದರೂ ಕ್ರಮ ಕೈಗೊಂಡರೆ, ಅವರಿಗಾಗಿ ನನ್ನಲ್ಲಿ ಉದ್ಯೋಗ ಕಾದಿರುತ್ತದೆ ಎಂಬುದನ್ನು ನಾನು ಖಚಿತಪಡಿಸುತ್ತೇನೆ. ಜೈ ಹಿಂದ್​, ಜೈ ಜವಾನ್​, ಕೈ ಕಿಸಾನ್​’ ಎಂದು ವಿಶಾಲ್​ ದದ್ಲಾನಿ ಇನ್ ​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ‘ಸ್ಕ್ಯಾನ್​ ಮಾಡಲು ಕಂಗನಾ ಅವರಿಗೆ ತಮ್ಮ ಫೋನ್​ ನೀಡಲು ಸೂಚಿಸಲಾಯಿತು. ಆದರೆ ಈಗ ತಾನು ಸಂಸದೆ ಎಂಬ ಕಾರಣಕ್ಕೆ ಅವರು ಫೋನ್​ ನೀಡಲು ನಿರಾಕರಿಸಿದರು. ಅಲ್ಲಿಂದ ವಾಗ್ವಾದ ಶುರುವಾಯಿತು. ಕುಲ್ವಿಂದರ್​ ಕೌರ್​ ಅವರನ್ನು ಕೆಲಸದಿಂದ ತೆಗೆದುಹಾಕಿದರೆ ಯಾರಾದರೂ ಅವರನ್ನು ನನ್ನ ಸಂಪರ್ಕಕ್ಕೆ ತನ್ನಿ. ಅವರಿಗೆ…

Read More

ತುಮಕೂರು: ರಾಷ್ಟ್ರೀಯ ಹೆದ್ದಾರಿ 4ಕ್ಕೆ ಅಡ್ಡಲಾಗಿ ನಿರ್ಮಿಸಿರುವ  ಯಲ್ಲಾಪುರಕ್ಕೆ ಹೋಗುವ ಅಂಡರ್ ಪಾಸ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದಾಗಿ ಪಾವಗಡ, ಮಧುಗಿರಿ, ಕೊರಟಗೆರೆಗೆ ಹೋಗುವ ಪ್ರಯಾಣಿಕರ ಪರದಾಡುವಂತಾಯಿತು.   ರಾಷ್ಟ್ರೀಯ ಹೆದ್ದಾರಿ 4ಕ್ಕೆ ಅಡ್ಡಲಾಗಿ ನಿರ್ಮಿಸಿರುವ ಅಂಡರ್ ಪಾಸ್ ಇದಾಗಿದ್ದು, ಇಲ್ಲಿ ಟ್ರಾಪಿಕ್ ಜಾಮ್ ಆಗಿ  ಸುಮಾರು 30ನಿಮಿಷಗಳ ಕಾಲ ಆಂಬುಲೆನ್ಸ್ ಮತ್ತು ಶಾಲಾ ಬಸ್ ಗಳು, ಫ್ಯಾಕ್ಟರಿಯ ಬಸ್ ಗಳು ರಸ್ತೆಯುದ್ದಕ್ಕೂ ಕ್ಯೂ ನಿಲ್ಲುವಂತಾಯಿತು. ವಿಡಿಯೋ ನೋಡಿ:

Read More

ತುಮಕೂರು:  ಲೇಡಿಸ್ ಹಾಸ್ಟೆಲ್ ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ತುಮಕೂರು ನಗರದ ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಈ ಹಾಸ್ಟೆಲ್ ನಲ್ಲಿ 300 ವಿದ್ಯಾರ್ಥಿನಿಯರಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಿಲ್ಲ. ಇನ್ನೂ ಹೊಗೆ ಕಾಣಿಸಿಕೊಂಡ ವೇಳೆ ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ಹೊರ ಬಂದ ಕಾರಣ ಯಾವುದೇ  ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಹೊಗೆಯ ಪರಿಣಾಮ 6 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ ನಡೆಸಿ ಅಧಿಕಾರಿಗಳು ಹಾಗೂ ಹಾಸ್ಟೆಲ್ ವಾರ್ಡನ್, ವಿದ್ಯಾರ್ಥಿನಿಯರ ಬಳಿ ಮಾಹಿತಿ ಪಡೆದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಒಂದಾದ ಚಂದನ್ ಶೆಟ್ಟಿ- ನಿವೇದಿತಾ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದುಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದಾರೆ. ಶಾಂತಿನಗರ ಕೋರ್ಟ್ ನಲ್ಲಿ ನಿನ್ನೆ ಕೇಸ್ ದಾಖಲಿಸಿದ್ದಾರೆ. ಪ್ರಕರಣದ ಮೊದಲ ವಿಚಾರಣೆ ಹಿನ್ನೆಲೆಯಲ್ಲಿ ಇಬ್ಬರೂ ಇಂದು 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾದರು ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಬಗ್ಗೆ ಚಂದನ್ ಮತ್ತು ನಿವೇದಿತಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಅವರು ಡಿವೋರ್ಸ್ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರಿಬ್ಬರ ನಡುವಿನ ದಾಂಪತ್ಯ ಜೀವನ ಬಿರುಕುಗೊಳ್ಳಲು ಕಾರಣವೇನೆಂಬುದು ತಿಳಿದುಬಂದಿಲ್ಲ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಪರಿಚಿತಗೊಂಡು, ಆನಂತರ ಹೊರಗೆ ಬಂದಮೇಲೆ ಪ್ರೀತಿಯಲ್ಲಿದ್ದರು. ಬಳಿಕ ಹಿರಿಯರ ಒಪ್ಪಿಗೆ ಮೇರೆಗೆ 2020ರ ಫೆಬ್ರವರಿಯಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ಈ ಜೋಡಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ…

Read More

ಭಾರತೀಯ ಸೇನೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಸ್ಪೋರ್ಟ್ಸ್​ಪರ್ಸನ್​ (ಹವಿಲ್ದಾರ್ & ನಾಯ್ಬ್ ಸುಬೇದಾರ್) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಭಾರತೀಯ ಸೇನೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು. ಭಾರತೀಯ ಸೇನೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 17.5 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಫಿಜಿಕಲ್ ಫಿಟ್​​ನೆಸ್​ ಟೆಸ್ಟ್​,ಫಿಜಿಕಲ್ ಸ್ಟಾಂಡರ್ಡ್ಸ್​ ಟೆಸ್ಟ್​ & ಸ್ಕಿಲ್ ಟೆಸ್ಟ್​, ಮೆಡಿಕಲ್ ಟೆಸ್ಟ್​ ಇರುತ್ತದೆ. ಸೆಪ್ಟೆಂಬರ್​ 30, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ ಅಭ್ಯರ್ಥಿಗಳು ಆಫ್​​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ಅರ್ಜಿ ಕಳುಹಿಸುವ ವಿಳಾಸವನ್ನು ಈ ಕೆಳಗೆ ನೀಡಲಾಗಿದೆ.…

Read More

ಇದೀಗ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸೀತಾ–ರಾಮ ಕಲ್ಯಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೀಗ ಅದ್ಧೂರಿಯಾಗಿ ನಿಶ್ಚಿತಾರ್ಥವೂ ನೆರವೇರುತ್ತಿದೆ. ಇನ್ನೇನು ಯಾವುದೇ ವಿಘ್ನ ಬಾರದಂತೆ ಸೀತಾ-ರಾಮ ಒಂದಾದರೆ ಸಾಕಪ್ಪ ಎನ್ನುವುದು ಅಭಿಮಾನಿಗಳ ಆಸೆ. ಇದರ ನಡುವೆಯೇ , ಸೀತಾ ಉಟ್ಟ ಸೀರೆಯ ಬಗ್ಗೆ ಚರ್ಚೆ ಸುರುವಾಗಿದೆ. ಇಂಕ್ ಬಣ್ಣದ ಮೇಲೆ ಬೆಳ್ಳಿ ಬಣ್ಣದ ದೊಡ್ಡ ಹೂಗಳ ಡಿಸೈನ್ ಇರುವ ಸೀರೆಯನ್ನು ಸೀತಾ ಉಟ್ಟಿದ್ದಳು. ಇದಕ್ಕೆ ಕಾಂಬಿನೇಶನ್ ಆಗಿ ಸ್ಯಾಂಡಲ್ ವುಡ್ ಕಲರ್ ಬ್ಲೌಸ್ ತೊಟ್ಟಿದ್ದಳು. ಇದನ್ನು ವೀಕ್ಷಕರು ಸ್ವಲ್ಪವೂ ಇಷ್ಟಪಟ್ಟಿರಲಿಲ್ಲ. ಥೂ ಮಿಸ್ ಮ್ಯಾಚ್, ಅಷ್ಟೂ ಗೊತ್ತಾಗಲ್ವಾ? ಡ್ರೆಸ್ ಸೆನ್ಸ್ ಇಲ್ವಾ?ಸೀತಾ ಈ ಲುಕ್‌ನಲ್ಲಿ ಅಜ್ಜಿ ಥರ ಕಾಣ್ತಿದ್ದಾಳೆ. ಎಂಬ ಕಾಮೆಂಟ್ ಗಳು ಬರುತ್ತಿವೆ. ಸೀತಾ ಪಾತ್ರ ಮಾಡುತ್ತಿರುವ ವೈಷ್ಣವಿ ಗೌಡ ಅವರೂ ತಮ್ಮ ಸೀರೆಯ ಬಗ್ಗೆ ಬಂದಿರುವ ನೂರಾರು ಕಮೆಂಟ್ಗಳನ್ನು ಓದಿ ತಾವು ಉಟ್ಟ ಸೀರೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಾವು ಅಂದು ಉಟ್ಟುಕೊಂಡಿದ್ದ ಸೀರೆ-ಬ್ಲೌಸ್ ನೋಡಿ ವೀಕ್ಷಕರಿಗೆ ತುಂಬಾ ಬೇಸರವಾಗಿರುವ…

Read More

ಹೊಸ ಸಂಸದರು ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದು, ಸಂಸದರಿಗೆ ಸಿಗುವ ಸಂಬಳ ಎಷ್ಟು? ಭತ್ಯೆ, ಇತರ ಸೌಲಭ್ಯಗಳು ಯಾವುದು ಎಂಬುದು ಮಾಹಿತಿ ಇಲ್ಲಿದೆ. ಒಬ್ಬ ಸಂಸದರ ಬೇಸಿಕ್ ಸಂಬಳ ತಿಂಗಳಿಗೆ ಒಂದು ಲಕ್ಷ ರೂಪಾಯಿ. ಹಣದುಬ್ಬರ, ಜೀವನ ನಿರ್ವಹಣೆಯ ಆಧಾರದ ಮೇಲೆ 2018ರಲ್ಲಿ ಪರಿಷ್ಕೃತಗೊಂಡ ವೇತನ ಹೆಚ್ಚಳದ ಬಳಿಕದ ಅಂಕಿ-ಅಂಶ(ಸಂಬಳ) ಇದಾಗಿದೆ. ಸಂಸತ್ ಕಲಾಪ, ಸಮಿತಿ ಸಭೆಗೆ ಹಾಜರಾಗುವ ವೇಳೆ ಸಂಸದರಿಗೆ ಪ್ರತಿದಿನ 2,000 ಸಾವಿರ ರೂಪಾಯಿ ಭತ್ಯೆ ಲಭ್ಯವಾಗಲಿದೆ. ಇದು ಊಟೋಪಚಾರ, ವಸತಿಯ ಖರ್ಚನ್ನು ಒಳಗೊಂಡಿದೆ. ಒಬ್ಬ ಸಂಸದರು ಕಚೇರಿ ನಿರ್ವಹಣೆಗಾಗಿ ಪ್ರತಿ ತಿಂಗಳು 60,000 ರೂಪಾಯಿ ಪಡೆಯುತ್ತಾರೆ. ಸ್ಟೇಷನರಿ, ದೂರವಾಣಿ ಸಂಪರ್ಕ, ಕಚೇರಿ ಸಿಬಂದಿಗಳ ಸಂಬಳ ಇದರಲ್ಲಿ ಸೇರಿದೆ. ಒಬ್ಬ ಸಂಸದರು ಕ್ಷೇತ್ರದ ಭತ್ಯೆಯಾಗಿ ಪ್ರತಿ ತಿಂಗಳು 70,000 ರೂಪಾಯಿ ಪಡೆಯುತ್ತಾರೆ. ಕಚೇರಿ ನಿರ್ವಹಣೆ ಹಾಗೂ ಕ್ಷೇತ್ರದೊಳಗಿನ ತಿರುಗಾಟದ ಖರ್ಚು-ವೆಚ್ಚ ಇದರಲ್ಲಿ ಸೇರ್ಪಡೆಯಾಗಲಿದೆ. ಸಂಸದರಿಗೆ ಪ್ರತಿವರ್ಷ ತಾವೂ ಸೇರಿದಂತೆ ಕುಟುಂಬ ಸದಸ್ಯರು 34 ಬಾರಿ ಉಚಿತವಾಗಿ ವಿಮಾನ…

Read More

ವಿಜ್ಞಾನದ ಪ್ರಕಾರ ಹಿರಿಯರ ಕಾಲಿಗೆ ಬಿದ್ದು ನಮಸ್ಕರಿಸುವುದರಿಂದ ದೇಹದಲ್ಲಿ ರಕ್ತದ ಸಂಚಲನ ಆಗುತ್ತದೆ ಇದರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಹಿರಿಯರ ಪಾದವನ್ನು ಸ್ಪರ್ಶಿಸಿ ಆಶೀರ್ವಾದವನ್ನು ಹಿಂದಿನಿಂದಲೂ ಪಡೆದುಕೊಳ್ಳುತ್ತಾ ಬಂದಿದ್ದೇವೆ ಆದರೆ ಮೂರು ವ್ಯಕ್ತಿಗಳ ಕಾಲಿಗೆ ಎಂದಿಗೂ ಬೀಳಬಾರದು ! ಹಿರಿಯರ ಪಾದ ಮುಟ್ಟಿ ನಮಸ್ಕರಿಸಿದರೆ ಆ ವ್ಯಕ್ತಿಗೆ ಶಕ್ತಿ, ಜ್ಞಾನ, ವಿದ್ಯೆ ಮತ್ತು ಪ್ರಸಿದ್ಧಿ ಪ್ರಾಪ್ತಿಯಾಗುತ್ತೆ. ಇದರರ್ಥ ಹಿರಿಯರು ಈ ಜಗತ್ತಿನಲ್ಲಿ ನಮಗಿಂತಲೂ ಅನುಭವಸ್ಥರಾಗಿರುತ್ತಾರೆ. ಹಾಗೆ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿರುತ್ತಾರೆ. ಸಮಾಜದ ಒಳಿತಿಗಾಗಿ ಶ್ರಮವಹಿಸ್ತಾ ಇರೋರಿಗೆ ನಮಿಸೋದ್ರಲ್ಲಿ ಅರ್ಥವಿದೆ. ತಿಳುವಳಿಕೆ ಇಲ್ದೆ ಮೂರ್ಖತನದಿಂದ ವರ್ತಿಸುವ ವ್ಯಕ್ತಿಗಳು, ಸಮಾಜಘಾತಕರು, ಕೇವಲ ಹಣದಿಂದಲೇ ಶ್ರೀಮಂತರಾಗಿದ್ದು ಕೆಟ್ಟ ಗುಣ ಹೊಂದಿರುವ ವ್ಯಕ್ತಿಗಳು, ಬೇರೆಯವರಿಗೆ ಕೆಡುಕು ಬಯಸುವ ವ್ಯಕ್ತಿಗಳಿಗೆ ಯಾವುದೇ ಮಹತ್ವ ಕೊಡೋ ಅಗತ್ಯವಿಲ್ಲ ಅಂತಾರೆ ಆಚಾರ್ಯ ಚಾಣಕ್ಯರು. ಆಚಾರ್ಯ ಚಾಣಕ್ಯರ ಪ್ರಕಾರ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡರೆ ಅವರ ಜ್ಞಾನ,ಬುದ್ಧಿ, ಪ್ರಸಿದ್ದಿ ಪ್ರಾಪ್ತಿಯಾಗುತ್ತದೆ. ಆಚಾರ್ಯ ಚಾಣಕ್ಯರ ಪ್ರಕಾರ ದ್ರೋಹಿಗಳು, ಕಪಟ ಮನಸ್ಸಿನವರು,…

Read More

ಚಿಕ್ಕಮಗಳೂರು: ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ 30 ಮಂಗಗಳನ್ನು ಹತ್ಯೆಗೈದ ಅಮಾನವೀಯ ಕೃತ್ಯ ಎನ್‌ಆರ್‌ ಪುರದ ದ್ಯಾವಣ ಬಳಿ ನಡೆದಿದೆ. 16 ಗಂಡು, 14 ಹೆಣ್ಣು ಹಾಗೂ 4 ಮರಿ ಮಂಗಗಳನ್ನು ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳು ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ, ಬಳಿಕ ಅದನ್ನು ತಿಂದ ಮಂಗಗಳು ಪ್ರಜ್ಞೆ ತಪ್ಪಿದಾಗ, ಅವುಗಳ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ. ಸಾವಿಗೀಡಾದ 30 ಮಂಗಗಳ ತಲೆಯ ಮೇಲೂ ಒಂದೇ ರೀತಿಯ ಗಾಯಗಳಾಗಿವೆ. ಹತ್ಯೆ ಮಾಡಿದ ಬಳಿಕ ದ್ಯಾವಣ ಬಳಿಯ ರಸ್ತೆಯಲ್ಲಿ ಎಸೆದಿದ್ದಾರೆ. ಸ್ಥಳಕ್ಕೆ ಡಿಎಫ್‍ಓ, ಆರ್‍ಎಫ್‍ಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More