Author: admin

ಕೇಂದ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಕಸರತ್ತು ನಡೆಸುತ್ತಿದೆ. ಇದರಲ್ಲಿ ಪ್ರಮುಖ ಎನ್.ಡಿ.ಎ ನಾಯಕರಾದ ಆಂದ್ರದ ಚಂದ್ರಬಾಬು ನಾಯ್ಡು ದೆಹಲಿಯಲ್ಲಿಯೇ ಇಂಡಿಯಾ ಕೂಟದ ಭಾಗವಾಗಿರುವ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ನನ್ನು ಬೇಟಿಯಾಗಿ ಕುತೂಹಲ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ಎನ್.ಡಿ.ಎ ಕೂಟದ ಪ್ರಮುಖರನ್ನು ಸೆಳೆಯುವ ಸತತ ಪ್ರಯತ್ನಗಳನ್ನು ತೆರೆಮರೆಯಲ್ಲಿ ನಡೆಸುತ್ತಿದೆ ಎನ್ನಲಾಗಿದ್ದು, ಈ ಭೇಟಿ ಅದರ ಒಂದು ಭಾಗವಾಗಿರಬಹುದು ಎಂಬ ಚರ್ಚೆ ಜೋರಾಗಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಎನ್‌.ಡಿ.ಎ ಮೈತ್ರಿ ಪಕ್ಷಗಳಾದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಗಳು ಎನ್‌.ಡಿ.ಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿವೆ. ಇತ್ತ ಇಂಡಿಯಾ ಕೂಟ ಸರ್ಕಾರ ರಚನೆಯಿಂದ ಹಿಂದೆ ಸರಿದಿದೆ ಎನ್ನಲಾಗಿದ್ದರೂ ಆ ಬಗೆಗಿನ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನಲಾಗಿದೆ. ದೆಹಲಿ ಇಂದಿರಾ ಗಾಂಧಿ ಏರ್‌ ಪೋರ್ಟ್‌ನಲ್ಲಿ ಈ ಎರಡು ಪ್ರಾದೇಶಿಕ ಪಕ್ಷಗಳ ನಾಯಕರು ಪರಸ್ಪರ ಭೇಟಿಯಾಗಿದ್ದಾರೆ. ಫೋಟೋ…

Read More

ಲೋಕಸಭಾ ಚುನಾವಣೆ ಫಲಿತಾಂಶ(Lok Sabha Election 2024) ಹೊರಬಿದ್ದಿದೆ. ಈ ಬಾರಿ ಅತ್ಯಂತ ಕಡಿಮೆ ಮತಗಳಲ್ಲಿ ಅಂದರೆ ಇನ್ನೇನು ಸೋತೆ ಬಿಟ್ರು ಅನ್ನೋವಾಗ ಗೆಲುವಿನ ಪತಾಕೆ ಹಾರಿಸಿದವರು ಯಾರ್ಯಾರು ?ನೆಕ್‌ ಟು ನೆಕ್‌ ಫೈಟ್‌ ನೀಡಿ ಕೇವಲ ಕೆಲವೇ ಕೆಲವು ಮತಗಳ ಅಂತರದಲ್ಲಿ ಗೆದ್ದವರು ಯಾರು ಗೊತ್ತೇ? ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರು ಶಿವಸೇನಾ (ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್. ಇವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಕೇವಲ 48 ಮತಗಳಿಂದ ಶಿವಸೇನಾ UBT ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು ಸೋಲಿಸಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವವರು ಕೇರಳದ ಅಟ್ಟಿಂಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಡೂರ್ ಪ್ರಕಾಶ್. ಈ ಚುನಾವಣೆಯಲ್ಲಿ, 684 ಮತಗಳಿಂದ ಜಯಗಳಿಸಿದ್ದಾರೆ. ಜೈಪುರ ಗ್ರಾಮಾಂತರದಿಂದ ಬಿಜೆಪಿಯ ರಾವ್ ರಾಜೇಂದ್ರ ಸಿಂಗ್ (1,615 ಮತಗಳು) ಮತ್ತು ಛತ್ತೀಸ್‌ಗಢದ ಕಂಕೇರ್‌ ನಿಂದ ಅವರ ಪಕ್ಷದ ಸಹೋದ್ಯೋಗಿ ಬ್ರೋಜರಾಜ್ ನಾಗ್ (1,884…

Read More

ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಾಗಿ ಹೊರಹೊಮ್ಮಿರುವವರ ಪೈಕಿ 105 ಅಭ್ಯರ್ಥಿಗಳು(ಶೇ 19ರಷ್ಟು) ತಮ್ಮ ಶೈಕ್ಷಣಿಕ ಅರ್ಹತೆ 5ನೇ ತರಗತಿಯಿಂದ 12ನೇ ತರಗತಿ ಎಂದು ಘೋಷಿಸಿದ್ದು, 420 ಅಭ್ಯರ್ಥಿಗಳು(ಶೇ 77 ರಷ್ಟು) ತಮ್ಮ ಶೈಕ್ಷಣಿಕ ಅರ್ಹತೆ ಪದವಿ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್‌(ಎಡಿಆರ್) ತಿಳಿಸಿದೆ. ವಿಜೇತ ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ತಾವು ಐದನೆಯ ತರಗತಿವರೆಗೆ ಓದಿದ್ದೇವೆ ಎಂದು ಘೋಷಿಸಿಕೊಂಡಿದ್ದರೆ, ನಾಲ್ವರು ವಿಜೇತ ಅಭ್ಯರ್ಥಿಗಳು ಎಂಟನೆಯ ತರಗತಿವರೆಗೆ ವ್ಯಾಸಂಗ ಮಾಡಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. 34 ವಿಜೇತ ಅಭ್ಯರ್ಥಿಗಳು ತಾವು 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವುದಾಗಿ ಹೇಳಿಕೊಂಡಿದ್ದರೆ, 65 ವಿಜೇತ ಅಭ್ಯರ್ಥಿಗಳು ತಾವು 12ನೇ ತರಗತಿವರೆಗೆ ವ್ಯಾಸಂಗ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ವಿಜೇತ ಅಭ್ಯರ್ಥಿಗಳ ಪೈಕಿ 17 ಮಂದಿ ಅಭ್ಯರ್ಥಿಗಳು ಡಿಪ್ಲೊಮಾ ಪದವೀಧರರಾಗಿದ್ದರೆ, ಓರ್ವ ಅಭ್ಯರ್ಥಿ ಕೇವಲ ಅಕ್ಷರಸ್ಥ ಮಾತ್ರ ಆಗಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಥಿಂಕ್-ಟ್ಯಾಂಕ್ PRS ಶಾಸಕಾಂಗ ಸಂಶೋಧನೆಯ ಮತ್ತೊಂದು ವಿಶ್ಲೇಷಣೆಯ ಪ್ರಕಾರ, 543…

Read More

ಸರಗೂರು: “ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ದಲಿತ ಚಳುವಳಿ ಸಂಸ್ಥಾಪಕ ಹಾಗೂ ಪ್ರೊಫೆಸರ್ ಬಿ. ಕೃಷ್ಣಪ್ಪ ರವರ, 88 ವರ್ಷದ ಜನ್ಮದಿನಾಚರಣೆ ಜೂ. 9 ಭಾನುವಾರ ದಂದು ಬೆಂಗಳೂರು ಪುರಭವನದಲ್ಲಿ ನಡೆಯಲಿದೆ” ಎಂದು ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ತಿಳಿಸಿದರು. ತಾಲ್ಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ದಂದು ದಸಂಸ (ಅಂಬೇಡ್ಕರ್ ವಾದ) ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸ್ವಾತಂತ್ರೋತ್ತರ ಕಾಲಮಾನದಲ್ಲಿ ಘಟಿಸಿದ ದಲಿತ ಚಳುವಳಿ ಮತ್ತು ಕರ್ನಾಟಕದ ನೆಲದಲ್ಲಿ ಅದು ಹುಟ್ಟು ಹಾಕಿದ್ದ ಸ್ಥಿತ್ಯಂತರಗಳನ್ನು ದಾಖಲಿಸದಿರಲು ಸಾಧ್ಯವಿಲ್ಲ. ಎಪ್ಪತ್ತರ ದಶಕದ ಹೊತ್ತಿಗೆ ವಿದ್ಯಾವಂತ, ಮೊದಲು ದಲಿತ ತಲೆಮಾರು ಕರ್ನಾಟಕದಲ್ಲಿ ಹುಟ್ಟಿ ದಲಿತ ಸಮುದಾಯಗಳ ಮೇಲೆ ಜಾತಿಯ ಕಾರಣಕ್ಕೆ ಆಗುತ್ತಿದ್ದ ಶೋಷಣೆ, ಹಿಂಸೆ, ದೌರ್ಜನ್ಯಗಳ ವಿರುದ್ಧ ಮಾತನಾಡಿದರು ಎಂದು ತಿಳಿಸಿದರು. ಬಿ. ಕೃಷ್ಣಪ್ಪ ನವರು ದಲಿತ ಹೋರಾಟಗಾರರಾಗಿ ಅಷ್ಟೇ ಅಲ್ಲದೆ ಪತ್ರಕರ್ತರಾಗಿ ಲೇಖಕರಾಗಿ ಮತ್ತು ಅಂಬೇಡ್ಕರ್ ವಾದದ ಕಣ್ಣನೋಟದಿಂದ ಸಾಹಿತ್ಯ, ಸಮಾಜ, ರಾಜಕಾರಣವನ್ನು ಗ್ರಹಿಸಲು ಪ್ರಯತ್ನಿಸಿದ ಅಪೂರ್ವ…

Read More

ಬೆಂಗಳೂರು: “ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿ ಈ ರಾಜ್ಯದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು. ಅವರ ಹಾದಿಯಲ್ಲಿಯೇ ನಡೆಯುವ ಪ್ರಯತ್ನವನ್ನು ನಮ್ಮ ಸರ್ಕಾರವೂ ಮಾಡುತ್ತದೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಇರುವ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ ಅರಸುರವರ 42ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. “ದೇವರಾಜ ಅರಸು ಅವರು ಒಬ್ಬ ಜಾತ್ಯಾತೀತ ವ್ಯಕ್ತಿ.  ಸಾಮಾಜಿಕ ನ್ಯಾಯದ ಹರಿಕಾರ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಸಮಾಜದ ತಳವರ್ಗದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮೇಲಕ್ಕೆತ್ತುವ, ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಿದರು.  ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತಂದರು. ಮೈಸೂರು ರಾಜ್ಯಕ್ಕೆ…

Read More

ಬೆಂಗಳೂರು: ಜೂನ್. 8 ರಂದು ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪ್ರಧಾನಿ ಮೋದಿ ಪದಗ್ರಹಣದ ಸಮಾರಂಭದ ವೇಳೆಯೇ ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದೆ. ಜೂ.8 ರಂದು 3 ನೇ ಬಾರಿಗೆ ದೇಶದ ಪ್ರಧಾನಿಯಾಗಿ ‘ನರೇಂದ್ರ ಮೋದಿ’ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ. 3 ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರೆ. ಜೂ.8 ರಂದು ಸಂಜೆ ದೆಹಲಿಯಲ್ಲಿ ನರೇಂದ್ರ ಮೋದಿ’ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

500 ವರ್ಷಗಳ ಬಳಿಕ ನಿರ್ಮಾಣವಾದ ರಾಮಮಂದಿರದಿಂದ ಖುಷಿಗೊಂಡ ಹಿಂದೂ ಸಮುದಾಯದ ಈ ಖುಷಿಯೇ ಮತವಾಗಿ ಬದಲಾಗಿ ಮುಂದೆ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಎಂದೇ ನಂಬಲಾಗಿತ್ತು. ಆದರೆ ಮಂದಿರ ಉದ್ಘಾಟನೆಯಾಗಿ ಕೇವಲ 4 ತಿಂಗಳ ಅಂತರದಲ್ಲಿ ನಡೆದ ಚುನಾವಣೆಯಲ್ಲಿ ರಾಮನ ನೆಲದಲ್ಲಿಯೇ ಬಿಜೆಪಿ ಹೀನಾಯವಾಗಿ ಸೋತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಅಲ್ಲಿ ಅಂತಾರಾಷ್ಟ್ರೀಯ ಏರ್’ಪೋರ್ಟ್‌ನ್ನು ನಿರ್ಮಿಸಲಾಗಿತ್ತು ಅಲ್ಲಿಗೆ ರೈಲು ಸೇವೆಗಳನ್ನು ಹೆಚ್ಚು ಮಾಡಲಾಗಿತ್ತು. ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ ನಂತರವೂ ರಾಮ ನಗರಿಯಲ್ಲಿ ಏಕೆ ಸೋತಿತು? ಅಲ್ಲಿನ ಸ್ಥಳೀಯರು ಈ ಬಗ್ಗೆ ಹೇಳೋದೆನು? ಅಯೋಧ್ಯೆಯ ಸ್ಥಳೀಯ ಸಮಸ್ಯೆಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಯಕರ ಗಮನಕ್ಕೆ ಬಾರದೇ ಹೋಯ್ತು. ರಾಮ ಮಂದಿರ ಹಾಗೂ ಅಯೋಧ್ಯೆಯ ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಭೂಸ್ವಾಧೀನದ ವಿರುದ್ಧ ಅಯೋಧ್ಯೆಯ ಹಲವು ಗ್ರಾಮಗಳ ಜನ ತೀವ್ರ ಆಕ್ರೋಶಗೊಂಡಿದ್ದರು. ನಿರುದ್ಯೋಗ, ಹಣದುಬ್ಬರ, ಭೂಸ್ವಾಧೀನದ ಕೋಪದ ಜೊತೆಗೆ ಬಿಜೆಪಿಯ ಅಭ್ಯರ್ಥಿ ಲಲ್ಲು ಸಿಂಗ್…

Read More

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರು ಶಾಸಕರು ಮತ್ತು ಒಬ್ಬರು ವಿಧಾನ ಪರಿಷತ್ ಸದಸ್ಯರು ಜಯಗಳಿಸಿದ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಖಚಿತವಾಗಿದೆ. ಚನ್ನಪಟ್ಟಣ ಶಾಸಕರಾದ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಶಿಗ್ಗಾಂವಿ ಶಾಸಕರಾದ ಬಸವರಾಜ ಬೊಮ್ಮಾಯಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಸಂಡೂರು ಶಾಸಕ ತುಕಾರಾಂ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ವಿಧಾನಪರಿಷತ್ ದಕ್ಷಿಣ ಕನ್ನಡ -ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪ್ರತಿನಿಧಿಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ್ದು, ಈ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದು ಖಚಿತವಾಗಿದೆ. ಹಾಲಿ ವಿಧಾನಸಭೆಯ ಈ ಮೂವರು ಸದಸ್ಯರು ಮತ್ತು ವಿಧಾನ ಪರಿಷತ್ತಿನ ಈ ಒಬ್ಬ ಸದಸ್ಯ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ್ದು, ಇವರಿಂದ ತೆರವಾಗಲಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಮಾಜಿ ಸಿಎಂ ಬಂಗಾರಪ್ಪನವರ ಮಕ್ಕಳಾದ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ನಡುವೆ ಶೀತಲ ಸಮರ ಮುಂದುವರೆದಿದೆ. ಗೀತಾ ಸಹೋದರ ಮಧು ಬಂಗಾರಪ್ಪ ಜೊತೆ ಗುರ್ತಿಸಿಕೊಂಡಿದ್ದಾರೆ. ಅಣ್ಣ-ತಮ್ಮರ ಜಗಳ ಮುಂದುವರೆದಿದೆ. ಕುಮಾರ್ ಬಂಗಾರಪ್ಪ ಬಿಜೆಪಿ ಪಕ್ಷದಲ್ಲಿದ್ದಾರೆ. ಇನ್ನು ಮಧು ಕಾಂಗ್ರೆಸ್ ಶಾಸಕರಾಗಿದ್ದಾರೆ ಶಿಕ್ಷಣ ಸಚಿವವಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದರಿ ಗೀತಾ ಶಿವರಾಜ್’ಕುಮಾರ್ ಈ ಬಾರಿ ಶಿವಮೊಗ್ಗದ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಗೀತಾ ಪರ ಪತಿ ನಟ ಶಿವರಾಜ್‌ಕುಮಾರ್ ಭರ್ಜರಿ ಪ್ರಚಾರ ನಡೆಸಿದ್ದರು. ದುನಿಯಾ ವಿಜಯ್, ಅನುಶ್ರೀ ಸೇರಿದಂತೆ ಕೆಲ ತಾರೆಯರು ಕೈ ಜೋಡಿಸಿದ್ದರು. ಗೀತಾ ಸೋಲಿನ ಬಗ್ಗೆ ಸುದೀರ್ಘ ಪೋಸ್ಟ್ ಮಾಡಿ ಕುಮಾರ್ ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. ಮಧು, ಶಿವಣ್ಣ, ಗೀತಾ ಎಲ್ಲರ ಬಗ್ಗೆ ವ್ಯಂಗ್ಯವಾಡಿದ್ದಾರೆ. “ಧಿರೋದ್ದಾತ ನಾಯಕ ಬಂಗಾರಪ್ಪ ಅವೆರನ್ನು ನನ್ನ ತಮ್ಮ ಹಾಗೂ ತಂಗಿ ತಮ್ಮ ಸ್ವಾರ್ಥಸಾಧನೆಗಾಗಿ, ಕೇವಲ ಒಂದು ಲೋಕಸಭಾ ಕ್ಷೇತ್ರಕ್ಕೆ ಅಂದರೆ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದು ಇವರ ಸಂಕುಚಿತ ಸ್ವಭಾವದಿಂದ. ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ…

Read More

ತಿಪಟೂರು: ತಿಪಟೂರು ಟೈಮ್ಸ್ ನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಹಿತ್ಯ ಆಲ್ ಇಂಡಿಯಾ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 592 ಅಂಕಗಳನ್ನು ಗಳಿಸಿದ್ದು, 4 ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಸಮಸ್ಥಾಪಕ ಕಾರ್ಯದರ್ಶಿ ಗಂಗಾಧರ್ ತಿಳಿಸಿದರು. ಎಸ್ ಎಸ್ ಎಲ್ ಸಿ ಯಲ್ಲಿ ಸಾಧಾರಣ ಅಂಕ ಗಳಿಸಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡಿದ್ದು, ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸುದ್ದಿಗೋಷ್ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್, ಆಡಳಿತ ಅಧಿಕಾರಿ ಅನುಪ್, ಬೋಧಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ವರದಿ: ಆನಂದ್ ತಿಪ್ಟೂರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More