Author: admin

ಕೂತಲ್ಲೇ ಆಹಾರ ತರಿಸಿಕೊಂಡು ತಿನ್ನುವ ಕಾಲದಲ್ಲಿ ಸ್ವಿಗ್ಗಿ, ಜೊಮ್ಯಾಟೋ ದಂತಹ ದೈತ್ಯ ಕಂಪನಿಗಳು ಅದನ್ನೇ ಬಂಡವಾಳ ಮಾಡಿಕೊಂಡಿವೆ. ಇದೀಗ ಜೊಮ್ಯಾಟೋ ಸಂಸ್ಥೆ ಸೋಶಿಯಲ್​​ ಮೀಡಿಯಾಗಳಲ್ಲಿ ಹೊಸ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಫುಡ್ ಡೆಲಿವೆರಿ ಆ್ಯಪ್​​ ಜೊಮ್ಯಾಟೊ ತನ್ನ ಅಧಿಕೃತ ಟ್ವಿಟರ್ ಎಕ್ಸ್​​​​​​ ಖಾತೆಯಲ್ಲಿ “ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ, ಅಗತ್ಯವಿದ್ದರೆ ಮಾತ್ರ ಮಧ್ಯಾಹ್ನದ ಸಮಯದಲ್ಲಿ ಆಹಾರವನ್ನು ಆರ್ಡರ್ ಮಾಡಿ, ಇಲ್ಲದಿದ್ದರೆ ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ತೀವ್ರವಾದ ಶಾಖದ ಅಲೆ, ಕೆಲವೊಮ್ಮೆ ಗಾಳಿ ಮಳೆಗೆ ಆರ್ಡರ್ ಹೆಚ್ಚಾದಂತೆ ಡೆಲಿವರಿ ಬಾಯ್ಸ್ ​​ಗಳ ಕಾಳಜಿಯ ಮೇರೆಗೆ ಜೊಮ್ಯಾಟೊ ತನ್ನ ಗ್ರಾಹಕರನ್ನು ಈ ರೀತಿ ಒತ್ತಾಯಿಸಿದೆ ಎಂದು ಹೇಳಲಾಗಿದೆ. ಆದರೆ ಹಲವರು ಇದಕ್ಕೆ ಟೀಕೆ ಮಾಡಿದ್ದು, ಕೆಲವರು ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದು ಹಂತಕ್ಕೆ ಮಕಾಡೆ ಮಲಗಿದೆ. ಬಿಜೆಪಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಉತ್ತರ ಪ್ರದೇಶ ಎಂದೇ ಹೇಳಬಹುದು. ಸುಮಾರು 80 ರಷ್ಟು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಈ ಹಿಂದೆ ಎರಡು ಬಾರಿ ಬಿಜೆಪಿ 70ಕ್ಕೂ ಅಧಿಕ ಸ್ಥಾನ ಗೆದ್ದು ಜಯಭೇರಿ ಬಾರಿಸಿತ್ತು. ಆದರೆ ಈ ಸಲ ಕೇವಲ 30ರ ಆಸುಪಾಸಿನಲ್ಲಿ ತೃಪ್ತಿಪಟ್ಟುಕೊಂಡಿದೆ. ಉತ್ತರ ಪ್ರದೇಶ ದೇಶದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ. ಈ ರಾಜ್ಯದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಅದು ದೇಶದ ಅಧಿಕಾರ ಹಿಡಿಯುತ್ತದೆ ಎಂಬ ಮಾತಿದೆ. ಅಖಿಲೇಶ್ ಯಾದವ್ ಅವರ ಸಾಮ್ರಾಜ್ಯವಾಗಿದ್ದು ಯುಪಿ ಇತ್ತೀಚೆಗೆ 10 ವರ್ಷಗಳ ಬಳಿಕ ಬಿಜೆಪಿ ಭದ್ರಕೋಟೆ ಆಗಿ ಮಾರ್ಪಟ್ಟತ್ತು. 2014ರಲ್ಲಿ ಯಾರೂ ಊಹಿಸದ ರೀತಿಯಲ್ಲಿ 80ರಲ್ಲಿ 71 ಸ್ಥಾನಗಳನ್ನು ಗೆದ್ದು ಬೀಗಿತು. 2019ರಲ್ಲಿ ಅಷ್ಟು ದೊಡ್ಡ ಯಶಸ್ಸು ಸಿಗದಿದ್ದರೂ 62 ಸ್ಥಾನಗಳನ್ನು ಗೆದ್ದಿತ್ತು. ಕಳಕೊಂಡದ್ದು ಕೇವಲ 9 ಸ್ಥಾನಗಳನ್ನಾಗಿದ್ದರಿಂದ ಯಾರೂ ಅಷ್ಟಾಗಿ ತಲೆ…

Read More

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ದೂರಿನ ಮೇರೆಗೆ ಸಿಬಿಐ ಎಫ್​ಐಆರ್ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ. ಬೆಂಗಳೂರು ಪೂರ್ವ ವಲಯದ ಡಿಜಿಎಂ ಜೆ. ಮಹೇಶ್ ಎಂಬುವರ ದೂರಿನ ಮೇರೆಗೆ ಐವರ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿಕೊಂಡಿದ್ದು, ಬ್ಯಾಂಕ್​ ನ ಮೂವರು ಅಧಿಕಾರಿಗಳು ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ಅಲ್ಲದೆ, ಈ ಸಂಬಂಧ ಸಚಿವ ಬಿ. ನಾಗೇಂದ್ರ ಅವರಿಗೂ ಕೂಡ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈ ಕೇಸ್ ಸಿಬಿಐಗೆ ವರ್ಗಾವಣೆ ಆಗುವ‌ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಎಸ್ಐಟಿ ಈ ಪ್ರಕರಣದ ವರ್ಗಾವಣೆಗೆ ನಿರಾಕರಿಸಿದರೆ ಸಿಬಿಐ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಯೂನಿಯನ್‌ ಬ್ಯಾಂಕ್ ‌ನಲ್ಲಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಖಾತೆಯಿಂದ 18 ನಕಲಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಆಗಿತ್ತು.…

Read More

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೆಂಗಳೂರು ಎಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಮಾರತಹಳ್ಳಿ ಎಸಿಪಿ ಶ್ರೀಮತಿ ಪ್ರಿಯದರ್ಶಿನಿ ಸಾನೆಕೊಪ್ಪ ಅವರ ನೇತೃತ್ವದಲ್ಲಿ ಎಚ್. ಎ. ಎಲ್ ಪೊಲೀಸ್ ಇನ್ಸ್ಪೆಕ್ಟರ್ ಅಜಾರಹುದ್ದಿನ್ ಜೊತೆಗೆ ಅತಿಥಿ ಗಣ್ಯರ ಜೊತೆಗೂಡಿ ಪೊಲೀಸ್ ಠಾಣೆ ಆವರಣದಲ್ಲಿ ಸಾಕಷ್ಟು ಸಸಿಗಳನ್ನು ನೆಡಲಾಯಿತು. ಸಕಲ ಚರಾಚರ ಜೀವರಾಶಿಗಳಿಗಿರುವುದು ಒಂದೇ ಭೂಮಿ ದುರಾಸೆಗಾಗಿ ಕಲುಷಿತಗೊಳಿಸಿದರೆ ಜೀವರಾಶಿಗಳು ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ. ಎಸಿಪಿ ಪ್ರಿಯದರ್ಶಿನಿ ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಪರಿಸರ ಜಾಗೃತಿ ಮೂಡಿಸುವುದು ಅಗತ್ಯ. ಯಾವುದೇ ಜೀವಿ ಬದುಕಲು ಸುತ್ತಮುತ್ತಲ ಉತ್ತಮ ಪರಿಸರ ಅವಶ್ಯಕ. ಇಲ್ಲದಿದ್ದರೆ ಜೀವಸಂಕುಲದ ಬದುಕಿಗೆ ಕುತ್ತು. ಮಳೆ, ಗಾಳಿ ಮುಂತಾದ ಪ್ರಕೃತಿದತ್ತ ಕ್ರಿಯೆ ಗೆ ಸೂಕ್ತ ಪರಿಸರವಿಲ್ಲದಿದ್ದರೆ ನಮ್ಮ ಬದುಕು ದುರಂತವಾಗಲಿದೆ” ಎಂದರು. “ಪರಿಸರದ ಮೇಲೆ ಮಾನವ ದೌರ್ಜನ್ಯ ನಿತ್ಯ ನಡೆದರೆ ಊಟವಿರಲಿ, ಶುದ್ಧಗಾಳಿ ಸಿಗದಂತಹ ಪರಿ ಸ್ಥಿತಿಯಿದೆ. ಹಾಗಾಗಿ ನಾವುಗಳು ಪರಿಸರ ಉಳಿವಿಗೆ ನಮ್ಮ…

Read More

ಚಂದ್ರಬಾಬು ನಾಯ್ಡು ಜೂ.9 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಈ ಕಾರ್ಯಕ್ರಮವನ್ನು ಮುಂದೂಡಲಾಗುತ್ತಿದೆ. ಆರಂಭದಲ್ಲಿ ಯೋಜಿಸಲಾದ ಜೂನ್‌ 9 ರ ಬದಲು ಜೂ.12 ಕ್ಕೆ ಮುಂದೂಡಬಹುದು. ನರೇಂದ್ರ ಮೋದಿ ಅವರು ಮೇ.9 ರಂದು ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳ ಪೈಕಿ ಟಿಡಿಪಿ 16 ಸ್ಥಾನಗಳನ್ನು ಗೆದ್ದುಗೊಂಡಿದೆ. ಆರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ, ನಟ-ರಾಜಕಾರಣಿ ಪವನ್‌ ಕಲ್ಯಾಣ್‌ ಅವರ ಜನಸೇನಾ ಪಕ್ಷವು ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ದೇಶದ ಜನರು ನಿರೀಕ್ಷೆ ಮಾಡಿರದ ಫಲಿತಾಂಶ ಹೊರಬಿದ್ದಿದೆ. ಮೂರನೇ ಸಲಕ್ಕೂ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇನೆಂದು ಭೀಗುತ್ತಿದ್ದ ಬಿಜೆಪಿ 240 ಕ್ಕೆ ತೃಪ್ತಿಪಟ್ಟಿದೆ. NDA ಗೆ ಸರಳ ಬಹುಮತ ದೊರೆತರೂ ಮಿತ್ರಪಕ್ಷಗಳನ್ನು ನಂಬಿ ಕೂರುವಂತಿಲ್ಲ. ಹೀಗಾಗಿ ಸರ್ಕಾರ ರಚನೆಗೆ ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ NDA ಮೈತ್ರಿ ಕೂಟಗಳ ಸಭೆ ಕೂಡ ನಡೆದಿದೆ. ಈ ಸಭೆಯಲ್ಲಿ ಇತರ ಪಕ್ಷಗಳು ಬಿಜೆಪಿಗೆ ದೊಡ್ಡ ದೊಡ್ಡ ಬೇಡಿಕೆಯನ್ನೇ ಇಟ್ಟಿದ್ದಾವೆ ಎಂದು ತಿಳಿದು ಬಂದಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಬರದ ಕಾರಣ ಮೈತ್ರಿ ಪಕ್ಷಗಳೊಂದಿಗೆ ಸಮ್ಮಿಶ್ರ ಸರಕಾರ ರಚಿಸಬೇಕಿದೆ. ಅದರಲ್ಲಿ ಟಿಡಿಪಿಮತ್ತು ಜೆಡಿಯು ಪಕ್ಷಗಳದ್ದೇ ಪ್ರಮುಖ ಪಾತ್ರ. ಹೀಗಾಗಿ ನೂತನ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ತಮ್ಮ ಪಕ್ಷಗಳಿಗೆ ನೀಡಬೇಕು ಎಂದು ಮೈತ್ರಿಕೂಟದ ನಾಯಕರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ, ಬಿಜೆಪಿ ನಾಯಕತ್ವ ಇಕ್ಕಟ್ಟಿಗೆ ಸಿಲುಕಿದೆ. ಎನ್‌ ಡಿಎ 2.0 ಸರ್ಕಾರದ ಅವಧಿಯಲ್ಲಿ ಪ್ರಮುಖ ಖಾತೆಗಳನ್ನು ಬಿಜೆಪಿಯೇ ಇಟ್ಟುಕೊಂಡಿತ್ತು. ಕಮಲ ಪಾಳಯಕ್ಕೆ…

Read More

ಬೆಂಗಳೂರು: ದೈಹಿಕವಾಗಿ ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. “ಜೀವನಶೈಲಿ ಮತ್ತು ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ಜನ ವರ್ಗಕ್ಕೆ ಆರೋಗ್ಯ ಮತ್ತು ಅಗತ್ಯ ಚಿಕಿತ್ಸೆಗೆ ಒದಗಿಸಲು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿ, ಜಾರಿ ಮಾಡುತ್ತಿದ್ದೇವೆ” ಎಂದರು. “ಕ್ಯಾನ್ಸರ್ ನಂತಹ ಮಾರಕ ರೋಗವನ್ನೂ ಗುಣಪಡಿಸುವುದು ಸಾಧ್ಯವಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿದೆ” ಎಂದರು. “ಹಿಂದಿನವರ ಆರೋಗ್ಯ ಪದ್ಧತಿ ಮತ್ತು ಶ್ರಮಾಧಾರಿತ ಜೀವನ ಶೈಲಿ ಅವರನ್ನು ಗಟ್ಟಿಮುಟ್ಟಾಗಿ ಸದೃಡವಾಗಿ ಇಟ್ಟಿತ್ತು” ಎಂದರು. “ಇಂಥಾ ಆರೋಗ್ಯ ತಪಾಸಣಾ ಶಿಬಿರಗಳು ಮೇಲಿಂದ ಮೇಲೆ ಆಗಬೇಕು. ರಾಜ್ಯದ ಮೂಲೆ ಮೂಲೆಗಳಲ್ಲೂ ನಡೆಸಬೇಕು” ಎಂದು ಅಧಿಕಾರಿಗಳಿಗೆ…

Read More

ತುಮಕೂರು: ನಿನ್ನೆ ಸಂಜೆ ಎಡೆಬಿಡದೆ ಸುರಿದ ಬಾರಿ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ತುಮಕೂರು ನಗರದ ಬೃಹತ್ ಕೆರೆಯಾಗಿರುವ ಅಮಾನಿಕೆರೆ ತೂಬಿನಿಂದ ಹೊರ ಬರುತ್ತಿರುವ ನೀರು ನೆರೆಯುಕ್ತವಾಗಿ ಹರಿದು ಬರುತ್ತಿದ್ದು, ಕೆರೆಗೆ ಕೈಗಾರಿಕಾ ತ್ಯಾಜ್ಯ ಮತ್ತು ರಾಸಾಯನಿಕಯುಕ್ತ ನೀರು ಹರಿದು ಬರುತ್ತಿದೆ. ಇಂದು ಬೆಳಗ್ಗೆಯಿಂದ ತುಮಕೂರು ಅಮಾನಿಕೆರೆಯ ಎಸ್ ಮಾಲ್ ಎದುರಿನ ಕೆರೆ ತೂಬ್ ನಿಂದ ಹೊರ ಬರುತ್ತಿರುವ ವಿಷಯುಕ್ತ ಹಾಗೂ ಕಲುಷಿತ ನೀರನ್ನ ಗಮನಿಸಿದರೆ, ಇಡೀ ಅಮಾನಿಕೆರೆಗೆ ಕೈಗಾರಿಕಾ ತ್ಯಾಜ್ಯ ಸೇರಿರಬಹುದು ಮತ್ತು ಕೆರೆಯಲ್ಲಿರುವ ಜಲಚರಗಳ ಮಾರಣ ಹೋಮವಾಗಬಹುದು. ಕೂಡಲೇ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕ ಸುರಕ್ಷಾ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ. ಮಹೇಶ   ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಕೆರೆ ನೀರು ಕುಡಿಯಲು ಯೋಗ್ಯವಾಗುವುದಿಲ್ಲ. ಅಮಾನಿಕೆರೆ ನೀರನ್ನು ತುಮಕೂರು ನಗರಕ್ಕೆ ಮರುಬಳಕೆಗೆ ಹೇಮಾವತಿ ಜಲಸಂಗ್ರಹ ಮಾಡುವ ಬುಗುಡನಹಳ್ಳಿ ಮತ್ತು ಪಿ.ಎನ್. ಪಾಳ್ಯಕ್ಕೆ ಪಂಪಿಂಗ್ ಮಾಡಿ, ಜಲಶುದ್ದೀಕರಣದ ಕೇಂದ್ರದ ಮೂಲಕ ತುಮಕೂರು…

Read More

ಸರಗೂರು: ತಾಲ್ಲೂಕಿನ ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮಕ್ಕೆ, ಅರಣ್ಯಾಧಿಕಾರಿ ಹನುಮಂತರಾಜು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. “ನಮ್ಮ ಪೃಥ್ವಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ. ಇದು ನಮ್ಮ ವಾಸಸ್ಥಾನ. ಭೂಮಿಯಲ್ಲಿನ ಜೀವಿಗಳ ಉಗಮ, ವಿಕಾಸ, ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಪಂಚಭೂತಗಳಿಂದ ನಿರ್ಮಿತವಾದ ನಮ್ಮ ಪರಿಸರ. ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಸುತ್ತಲಿನ ವಾತಾವರಣವೇ ಪರಿಸರ” ಎಂದು ಸರಗೂರು ವಲಯ ಅರಣ್ಯಾಧಿಕಾರಿ ಹನುಮಂತರಾಜು ತಿಳಿಸಿದರು. “21ನೇ ಶತಮಾನದ ಸ್ಪರ್ಧಾತ್ಮಕ, ಯಾಂತ್ರಿಕ ಜೀವನದ ಜಂಜಾಟದಲ್ಲಿ ನಾವೆಲ್ಲರೂ ತಲ್ಲೀನರಾಗಿದ್ದೇವೆ. ಅಭಿವೃದ್ಧಿ, ಹಣದ ಬೆನ್ನತ್ತಿ ಓಡುವ ಈ ಓಟದಲ್ಲಿ, ಪ್ರಕೃತಿ, ಪರಿಸರದ ಕುರಿತಾದ ಆಸ್ಥೆ ಮರೆಯಾಗಿದೆ. ಆ ಕಾರಣದಿಂದ ದಿನೇ ದಿನೇ ಪ್ರಕೃತಿ ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ತನ್ನ ಜೀವವೈವಿಧ್ಯತೆಯನ್ನು, ತನ್ನ ನೈಸರ್ಗಿಕ ಸೌಂದರ್ಯ, ತನ್ಮಯತೆಯನ್ನು ಕಳೆದುಕೊಳ್ಳುತ್ತಿದೆ” ಎಂದರು. “ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಶಾಲಾ ಸಲಹೆಗಾರರು ಕೆಂಡಗಣ್ಣಸ್ವಾಮಿ ಮಾತನಾಡಿ, ನಮ್ಮ ಸುತ್ತಲಿನ ಸ್ವಚ್ಛತಾ ಸಮಸ್ಯೆಯೇ ಇರಲಿ ಅಥವಾ…

Read More

ಹೆಚ್.ಡಿ.ಕೋಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹೆಚ್.ಡಿ.ಕೋಟೆ ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈಲ್ವಾನ್ ಕಾಲೋನಿಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಚಿಕ್ಕೆರೆಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಮತ್ತು ತಾಲ್ಲೂಕು ಬಾಬು ಜಗನ್ ಜೀವನ ಸಮಿತಿ ಅಧ್ಯಕ್ಷರು ನಾಗರಾಜು, ತಾಲೂಕಿನ ಕೃಷಿ ಮೇಲ್ವಿಚಾರಕ ರಾಜು ಬಿ.ಜೆ. ಉದ್ಘಾಟಿಸಿದರು. ನಂತರ ನಾಗರಾಜು ಮಾತನಾಡಿ, “ಉತ್ತಮ ಆರೋಗ್ಯ ಜೀವನ ನಡೆಸಬೇಕಾದರೆ ಆಮ್ಲಜನಕ ಪೂರೈಕೆ ಚೆನ್ನಾಗಿರಬೇಕು, ಒಂದು ಗಿಡ ನೆಟ್ಟು ಒಂದು ಮರವನ್ನು ಕಡಿಯುವಂತೆ ಕಾನೂನು ಬಂದರೆ ಮರಗಿಡಗಳ ರಕ್ಷಣೆ ಆಗುತ್ತದೆ ಎಂದು ತಿಳಿಸಿದರು. ಅರಣ್ಯ ಇಲಾಖೆಯಿಂದ ನೀಡುವ ಗಿಡಗಳನ್ನು ಅವರವರ ಸ್ವಂತ ಜಮೀನಿನಲ್ಲಿ ನೆಡುವುದರ ಮೂಲಕ ನಮ್ಮ ರಕ್ಷಣೆ ಮಾಡಿಕೊಳ್ಳುವುದರ ಬಗ್ಗೆ ತಿಳಿಸಿದರು. ನಂತರ ಮಾತನಾಡಿದ ಕೃಷಿ ಮೇಲ್ವಿಚಾರಕ ರಾಜು ಬಿ.ಜೆ. ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ತಾಲೂಕಿನ ಆದ್ಯಂತ ವಲಯ ಮೇಲ್ವಿಚಾರಕರ ಸಹಕಾರದೊಂದಿಗೆ 10…

Read More