Author: admin

ತುಮಕೂರು: ನಮ್ಮ ಮನಸ್ಸು ಖುಷಿಯಾಗಿ ಇರಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಸುಂದರವಾಗಿರಬೇಕು. ಸ್ವಚ್ಚ ಪರಿಸರದಿಂದ ಆರೋಗ್ಯ ವೃದ್ದಿ ಜೊತೆಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ತರುನ್ನಂ ನಿಖತ್ ಹೇಳಿದರು. ನಗರದಲ್ಲಿ ಬುಧವಾರ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸುತ್ತಲಿನ ಸುಂದರ ಪರಿಸರವನ್ನು ನಾವಿದ್ದಲ್ಲಿಯೇ ನಿರ್ಮಾಣ ಮಾಡಿಕೊಳ್ಳುವುದು ನಮ್ಮ ಜಾಣ್ಮೆಯಾಗಿರಬೇಕು. ನಾವು ಪರಿಸರ ಎಂದಾಕ್ಷಣ ಗಿಡಮರಗಳ ಬಗ್ಗೆ ಮಾತನಾಡುತ್ತೇವೆ. ಅದರಾಚೆಗೆ ಸ್ವಚ್ಛ ಪರಿಸರಕ್ಕೂ ನಾವು ಆದ್ಯತೆ ನೀಡಬೇಕಾಗಿದೆ. ಇವತ್ತು ವಿವಿಧ ಖಾಯಿಲೆಗಳು ಅಪ್ಪಳಿಸಿ ಎಳೆವಯಸ್ಸಿಗೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿರುವುದು ಅಘಾತಕಾರಿ ವಿಷಯಗಳಲ್ಲೊಂದು. ಈ ನಿಟ್ಟಿನಲ್ಲಿ ನಾವು ಸ್ವಚ್ಚ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳುತ್ತ ಮುಖಮಾಡಬೇಕಿದೆ. ಚಿತ್ರಕಲಾ ಪದವಿ ಕಾಲೇಜು ನಮ್ಮ ಕಟ್ಟಡದಲ್ಲಿ ಇರೋದ್ರಿಂದ ನಿಮ್ಮ ಕಲೆಯಿಂದ ನಮ್ಮ ಕಟ್ಟಡಕ್ಕೆ ಕಳೆ ಬಂದಿದೆ ಎಂದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಚಾರ್ಯ ಕರಿಯಣ್ಣ…

Read More

ಪ್ರಧಾನ ಮಂತ್ರಿಯ ಎಷ್ಟು ಸಂಬಳ ಪಡೆಯುತ್ತಾರೆ ಎಂಬ ಕುತೂಹಲ ಹಲವರಲ್ಲಿ ಇರುತ್ತದೆ. ಭಾರತದ ಪ್ರಧಾನ ಮಂತ್ರಿ ದೇಶದ ಅತ್ಯುನ್ನತ ಕಾರ್ಯನಿರ್ವಾಹಕ ಹುದ್ದೆ ಹೊಂದಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿರುವ ಇವರು ಮಹತ್ವದ ಅಧಿಕಾರ ಮತ್ತು ಜವಾಬ್ದಾರಿ ಹೊಂದಿದ್ದಾರೆ. ಪ್ರಧಾನ ಮಂತ್ರಿಯನ್ನು ಭಾರತದ ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಇವರು ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಹೊಂದಿರುವ ಪಕ್ಷದ ಮುಖ್ಯಸ್ಥರಾಗಿರುತ್ತಾರೆ. ಪ್ರಧಾನ ಮಂತ್ರಿ ಮತ್ತು ಸಂಸದರು ಸಂಬಳದ ಜೊತೆಗೆ ಹಲವು ಸವಲತ್ತುಗಳು ಮತ್ತು ವಿಶೇಷ ಭತ್ಯೆಗಳನ್ನು ಪಡೆಯುತ್ತಾರೆ. ಪ್ರಧಾನಿ ಅಧಿಕೃತ ನಿವಾಸವನ್ನು ಬಾಡಿಗೆ ಅಥವಾ ಇತರ ವಸತಿ ವೆಚ್ಚಗಳಿಲ್ಲದೆ ಪಡೆಯುತ್ತಾರೆ. ಪ್ರಧಾನಿ ಭದ್ರತೆಯ ಹೊಣೆಯನ್ನು ವಿಶೇಷ ರಕ್ಷಣಾ ಗುಂಪು (SPG) ತೆಗೆದುಕೊಳ್ಳುತ್ತದೆ. ಪ್ರಧಾನಿ ವಿದೇಶಕ್ಕೆ ಹೋದಾಗ ಅವರ ವಾಸ್ತವ್ಯ, ಆಹಾರ ಮತ್ತು ಪ್ರಯಾಣ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಪ್ರಧಾನಿ ತಮ್ಮ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರಿ ವಾಹನಗಳು ಮತ್ತು ವಿಮಾನಗಳನ್ನು ಬಳಸುತ್ತಾರೆ. ನಿವೃತ್ತಿಯ ನಂತರ, ಅವರು ಉಚಿತ ವಸತಿ, ವಿದ್ಯುತ್, ಜೀವನಕ್ಕಾಗಿ ನೀರು ಮತ್ತು ನಿವೃತ್ತಿಯ ನಂತರ 5…

Read More

ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಚುನಾವಣೆಯಲ್ಲಿ ಮೊದಲ ಗೆಲುವು ಕಂಡಿದ್ದಾರೆ. ವಿಧಾನಸಭೆಯಲ್ಲಿ ಅವರ ಪಕ್ಷಕ್ಕೆ ನೀಡಿದ 21 ಕ್ಷೇತ್ರಗಳಲ್ಲಿ 21 ಕ್ಷೇತ್ರ, ಲೋಕಸಭೆಯಲ್ಲಿ ನೀಡಿದ ಎರಡಕ್ಕೆ ಎರಡು ಸ್ಥಾನಗಳನ್ನು ಗೆದ್ದಿದೆ. ಎನ್​​ಡಿಎ (NDA Alliance) ಜೊತೆ ಸೇರಿ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಈ ಗೆಲುವಿನ ಬಳಿಕ ಪವನ್ ಕಲ್ಯಾಣ್ ಅವರು ಖುಷಿ ಖುಷಿಯಿಂದ ಮಾತನಾಡಿದ್ದಾರೆ. ‘ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆದಿಲ್ಲ. ನಾವು ಎನ್​ಡಿಎ ಜೊತೆ ಸಂಪೂರ್ಣವಾಗಿ ಕಮಿಟ್ ಆಗಿದ್ದೇವೆ. ಎರಡನೇ ಆಲೋಚನೆಯೇ ಇಲ್ಲ’ ಎನ್​ಡಿಎ ಮೈತ್ರಿ ತೊರೆಯುವ ಮಾತೇ ಇಲ್ಲ. ನಾವು ಆಂಧ್ರಪ್ರದೇಶದ ಜನರಿಗೆ ಜವಾಬ್ದಾರಿಯುತ ಸರ್ಕಾರ ನೀಡಲು ಬದ್ಧರಾಗಿದ್ದೇವೆ. ಎನ್​ಡಿಎ ಸರ್ಕಾರ ಅದನ್ನು ಗೌರವಿಸುತ್ತದೆ’ ಎಂದು ಪವನ್ ಕಲ್ಯಾಣ್ ಅವರು ಸಾರ್ವಜನಿಕವಾಗಿ ಹೇಳಿದ್ದಾರೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ, ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷ, ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧಿಸಿತ್ತು.’ಇದು ಐತಿಹಾಸಿಕ ತೀರ್ಪಿನ ದಿನ. ಎಂದಿದ್ದಾರೆ ಪವನ್ ಕಲ್ಯಾಣ್.…

Read More

ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ (SIT) ತನಿಖೆ ತೀವ್ರಗೊಳಿಸಿದೆ. ಪ್ರಕರಣದ ಎರಡನೇ ಆರೋಪಿ ಪ್ರಜ್ವಲ್ ಕೃತ್ಯ ಎಸಗಿದ ಸ್ಥಳದಲ್ಲಿ ಶೋಧ ನಡೆಸಿ, ಈ ವೇಳೆ ತನಿಖೆಗೆ ಅವಶ್ಯಕ ಎಂದು ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಜ್ವಲ್‌ ಮನೆ ತಪಾಸಣೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಸಂಶಯಾಸ್ಪದ ಕಲೆಗಳುಳ್ಳ ಬೆಡ್‌ಶೀಟ್‌ ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ, ಡಬಲ್ ಕಾಟ್ ಹಾಸಿಗೆ ಮೇಲೆ ಅಲ್ಲಲ್ಲಿ ಇದ್ದ ಸಂಶಯಾಸ್ಪದ ಕಲೆಗಳನ್ನು ಹೊಂದಿದ್ದ ಬೆಡ್‌ಸ್ಪ್ರೆಡ್‌ ಕಂಡುಬಂದಿದೆ. ಸಿಂಗಲ್ ಕಾಟ್ ಹಾಸಿಗೆ ಮೇಲೆಯೂ ಅಲ್ಲಲ್ಲಿ ಸಂಶಯಾಸ್ಪದ ಕಲೆಗಳನ್ನು ಹೊಂದಿದ್ದ ಮೇಲ್ವಾಸು ಕಂಡುಬಂದಿದೆ. ಜೊತೆಗೆ ಒಂದು ಗ್ರೇ ಕಲರ್ ಅದರ ಮೇಲೆ ಸಿಲ್ವರ್ ಕಲರ್ ಡಿಜೈನ್ ಉಳ್ಳ ವಾಲ್ ಪೇಪರ್ ತುಂಡು ದೊರೆತಿದೆ. ಸದ್ಯ ಎಸ್‌ಐಟಿ ಅಧಿಕಾರಿಗಳು ಈ ಸೊತ್ತುಗಳನ್ನ ವಶಪಡಿಸಿಕೊಂಡು ಜಪ್ತಿ ಮಾಡಿದ್ದಾರೆ. ಜಪ್ತಿಪಡಿಸಿದ ವಸ್ತುಗಳನ್ನು ತಜ್ಞರ ಪರೀಕ್ಷೆಗೆ ರವಾನಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More

ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲಿ ಶಾಲೆಗಳು ಬೆಳಗ್ಗೆ 8-9 ಗಂಟೆಯ ಅವಧಿಯಲ್ಲಿ ಆರಂಭವಾಗುತ್ತವೆ. ಆದರೆ ಇಂಡೋನೇಷ್ಯಾದ ಈ ಪ್ರದೇಶದ ಶಾಲೆಯಲ್ಲಿ ಬೆಳಗ್ಗೆ 5.30ಕ್ಕೆ ತರಗತಿಗಳು ಆರಂಭವಾಗುತ್ತವೆ. ಮಕ್ಕಳು 4 ಗಂಟೆಗೆ ಎದ್ದು ತಯಾರಾಗಿ ಶಾಲೆಗೆ ಹೋಗುತ್ತಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಆ ಕತ್ತಲಲ್ಲಿ ಮಕ್ಕಳು ರಸ್ತೆಯಲ್ಲಿ ಆಟೋ, ಟ್ಯಾಕ್ಸಿ, ಶಾಲಾ ಬಸ್ಗಳಿಗಾಗಿ ಕಾಯುತ್ತಾ ನಿಂತಿರುತ್ತಾರೆ. ಮಕ್ಕಳು ಬೆಳಗ್ಗೆ ಬೇಗ ಏಳುವುದಿಲ್ಲ, ಮಕ್ಕಳಲ್ಲಿ ಸೋಮಾರಿತನ ಹೆಚ್ಚಾಗಿರುವುದರಿಂದ ಓದಿನ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳು ಬೇಗ ಎದ್ದರೆ ತುಂಬಾ ಲವಲವಿಕೆಯಿಂದಿರುತ್ತಾರೆ, ಹಾಗಾಗಿ ಈ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ ಶಿಕ್ಷಕರು. ಮಕ್ಕಳನ್ನು ಅಷ್ಟು ಬೆಳಗ್ಗೆ ಏಳಿಸಲು ಸಾಧ್ಯವಿಲ್ಲ, ಎದ್ದರೂ ನಿದ್ದೆ ಮಂಪರಿನಲ್ಲಿಯೇ ಇರುತ್ತಾರೆ, ವಾಹನಗಳ ವ್ಯವಸ್ಥೆಯೂ ಕಷ್ಟ, ಮಧ್ಯಾಹ್ನ ಮನೆಗೆ ಬಂದ ತಕ್ಷಣ ಮಲಗಿಬಿಡುತ್ತಾರೆ, ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ, ಮಕ್ಕಳಿಗೆ ಮೊದಲು ಸರಿಯಾದ ನಿದ್ರೆ ಬೇಕು ಎಂದಿದ್ದಾರೆ ಪಾಲಕರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಜ್ಯೋತಿಷಿ ವೇಣುಸ್ವಾಮಿ ವಿಡಿಯೊ ಮೂಲಕ ಕ್ಷಮೆ ಕೇಳಿದ್ದಾರೆ. ತೆಲುಗು ಚಿತ್ರರಂಗದವರ, ರಾಜಕಾರಣಿಗಳ ಭವಿಷ್ಯ ಹೇಳಿ ಜನಪ್ರಿಯವಾಗಿದ್ದ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ, ನಾನು ಹೇಳಿದ ಭವಿಷ್ಯ ಈ ಬಾರಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಜಗನ್ ಅವರ ವೈಸಿಪಿ ಪಕ್ಷ ಹೀನಾಯ ಸೋಲು ಕಂಡಿದ್ದು ಟಿಡಿಪಿ ಪಕ್ಷ ಭಾರಿ ವಿಜಯ ದಾಖಲಿಸಿದೆ. ಜ್ಯೋತಿಷಿ ವೇಣುಸ್ವಾಮಿ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ಜಗನ್ ಪಕ್ಷ ಮತ್ತೆ ಗೆಲ್ಲುತ್ತದೆ, ಮತ್ತೆ ಜಗನ್ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಿದೆ. ʻʻಜಗನ್ ಮತ್ತೆ ಗೆಲ್ಲುತ್ತಾರೆ ಎಂದಿದ್ದೆ. ನಾನು ಕಲಿತ ವಿದ್ಯೆಗಳ ಆಧಾರದಲ್ಲಿ ಈ ಭವಿಷ್ಯವನ್ನು ನಾನು ನುಡಿದಿದ್ದೆ. ನನ್ನ ಭವಿಷ್ಯದಲ್ಲಿ ಮೊದಲನೆಯದು ನಿಜವಾಗಿದೆ. ಮೋದಿಯವರ ಫ್ರಭಾವ ತಗ್ಗಿರುವುದು ಫಲಿತಾಂಶದಿಂದ ಗೊತ್ತಾಗುತ್ತಿದೆ. ನಾನು ಹೇಳಿದ ಭವಿಷ್ಯ ಈ ಬಾರಿ ತಪ್ಪಾಗಿದೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಆಂಧ್ರ ರಾಜಕೀಯದ ಬಗ್ಗೆ ಹೇಳಿರುವ ಭವಿಷ್ಯ ತಪ್ಪಾಗಿರುವ ಕಾರಣ, ಇಂದಿನಿಂದ ರಾಜಕೀಯ ಮತ್ತು ಚಿತ್ರರಂಗದ ಗಣ್ಯರ ವೈಯಕ್ತಿಕ ಜೀವನದ…

Read More

ತುರುವೇಕೆರೆ: ನಮ್ಮ ತಾಲೂಕಿನಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಆಗಿ ಸೋಮಣ್ಣನವರಿಗೆ 44,000 ಮತಗಳ ಅಂತರ ನೀಡಿ ಗೆಲ್ಲಿಸಿದ್ದಾರೆ. ಅವರ ಗೆಲುವಿಗೆ ಶ್ರಮಿಸಿದಂತ ಜೆಡಿಎಸ್, ಬಿಜೆಪಿ ಮತದಾರರಿಗೆ ಕೃತಜ್ಞತೆಗಳನ್ನು ಮಾಧ್ಯಮದ ಮೂಲಕ ಸಲ್ಲಿಸುತ್ತೇನೆ ಎಂದು ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಪಟ್ಟಣದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ತಿಳಿಸಿದರು. ಈ ಕ್ಷೇತ್ರದ ಅಭಿವೃದ್ಧಿಗೆ ವಿ. ಸೋಮಣ್ಣನವರು ಹೆಚ್ಚು ಒತ್ತನ್ನು ಕೊಡಬೇಕು ಎಂದು ಒತ್ತಾಯಿಸಿದರು. ಮುಂದುವರೆದು ಮಾತನಾಡಿ, “ನಮ್ಮ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸಮುದಾಯದ ಬೇಡಿಕೆಗಳು ಹೆಚ್ಚಾಗಿದ್ದು, ಅವುಗಳನ್ನು ಈಡೇರಿಸಬೇಕು. ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗುತ್ತಿರುವುದು ಬಹಳ ಹರ್ಷದಾಯಕವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಹೊಂದಾಣಿಕೆಯು ದಕ್ಷಿಣ ಕರ್ನಾಟಕದಲ್ಲಿ ಬಹಳ ಯಶಸ್ವಿಯಾಗಿದೆ. ನಮ್ಮ ಕ್ಷೇತ್ರದಿಂದಲೂ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪಾರ್ಲಿಮೆಂಟಿಗೆ ಕಳಿಸಿರುತ್ತೇವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ ಮಂಡ್ಯ ಜಿಲ್ಲೆಯ ಜನತೆಗೆ ಧನ್ಯವಾದಗಳು. ಈ ರಾಷ್ಟ್ರದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಒಳ್ಳೆಯ ಫಲಿತಾಂಶ ಜನತೆ ನೀಡಿದ್ದಾರೆ. ಕೋಲಾರದಲ್ಲಿ ಮಲ್ಲೇಶ್…

Read More

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಬಳಿ ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರ ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕರಾದ ಮುತ್ತಮ್ಮ(70), ಪುಟ್ಟಮ್ಮ(63) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಇಂದು ಮಧ್ಯಾಹ್ನ ಜೋಳ ಬಿತ್ತನೆ ಮಾಡುತ್ತಿದ್ದ ವೇಳೆ ಮಳೆ ಬಂದಿದೆ. ಈ ಹಿನ್ನಲೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಅರಕಲಗೂಡು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪ್ರಾದೇಶಿಕ ವಲಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಸಸ್ಯಕಾಶಿ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಪುಣ್ಯಕ್ಷೇತ್ರದಲ್ಲಿ, ಗಿಡ ನೆಡುವ ಮುಖೇನ ಶ್ರೀ ಮಠದ ಶ್ರೀಗಳು ಹಸಿರು ಕ್ರಾಂತಿಗೆ ಚಾಲನೆ ನೀಡಿದರು. ಅರಣ್ಯ ಇಲಾಖೆ ಅಧಿಕಾರಿ ರವಿಕುಮಾರ್ ಪ್ರತಿ ಹಳ್ಳಿ ಹಳ್ಳಿಯಲ್ಲೂ ಗಿಡಗಳ ನೆಡುವ ಮುಖೇನ ಹಸಿವು ಕ್ರಾಂತಿ ಕಾರ್ಯಕ್ರಮ ಮಾಡುವ ಆಶಯವನ್ನು ವ್ಯಕ್ತಪಡಿಸಿದರು. ಕೊರಟಗೆರೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ, ಕೋರ್ಟ್ ಆವರಣದಲ್ಲಿ, ಸರ್ಕಾರಿ ಶಾಲೆಗಳ ಆವರಣದಲ್ಲಿ ಸೇರಿದಂತೆ ಸಿದ್ದರಬೆಟ್ಟದ ಸತ್ಯಕಾಶಿ ಕ್ಷೇತ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡಲಾಯಿತು ಎಂದು ತಾಶಿಲ್ದಾರ್ ಮಂಜುನಾಥ್ ತಿಳಿಸಿದರು. ವರುಣನ ಕೃಪೆ, ವನ್ಯಜೀವಿಗಳ ಸಂರಕ್ಷಣೆ, ತಂಪಾದ ಗಾಳಿ, ಕುಡಿಯುವ ನೀರು, ಮನುಷ್ಯನಿಗೆ ಅತ್ಯವಶ್ಯಕ.  ಇವೆಲ್ಲವೂ ಒಳಗೊಂಡಂತೆ ಸುಂದರ ಅರಣ್ಯ ಪ್ರದೇಶ ನಿರ್ಮಾಣಕ್ಕಾಗಿ ಈ ಹಸಿರು ಕ್ರಾಂತಿ ಮುಖ್ಯ. ಸರ್ಕಾರದ ಚಿಂತನೆಯಂತೆ ಅರಣ್ಯ ಇಲಾಖೆ ವತಿಯಿಂದ, ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಪಾರ್ಕ್ ನಿರ್ಮಾಣಕ್ಕೆ ನಿರ್ಧರಿಸಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಶಿಲ್ಪಾ ತಿಳಿಸಿದರು.…

Read More

ವೀಳ್ಯದೆಲೆ ನೀರನಲ್ಲಿ ಕುದಿಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಇದಕ್ಕಾಗಿ ಮೊದಲು ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಒಂದು ಲೋಟ ನೀರು ಹಾಕಿ ವೀಳ್ಯದೆಲೆಯನ್ನು ತುಂಡು ಮಾಡಿ ಅದರಲ್ಲಿ ಹಾಕಿ. 5 ರಿಂದ 7 ನಿಮಿಷಗಳ ಕಾಲ ನೀರನ್ನು ಕುದಿಸಿ ಮತ್ತು ಶೋಧಿಸಿದ ನಂತರ ಅದನ್ನು ಕುಡಿಯಿರಿ. ಆರೋಗ್ಯ ಪ್ರಯೋಜನ: ಮಲಬದ್ಧತೆ ಸಮಸ್ಯೆ ಇರುವವರಿಗೆ ಈ ವೀಳ್ಯದೆಲೆ ನೀರು ತುಂಬಾ ಉಪಯುಕ್ತ. ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ವೀಳ್ಯದೆಲೆಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ತೆರವುಗೊಳಿಸುತ್ತದೆ. ಇದು ಶೀತ, ಕೆಮ್ಮು ಮತ್ತು ಗಂಟಲು ನೋವನ್ನು ಸಹ ನಿವಾರಿಸುತ್ತದೆ. ವೀಳ್ಯದೆಲೆಯ ನೀರು ಸಹ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದಲ್ಲದೆ, ಮಧುಮೇಹದಿಂದ ಉಂಟಾಗುವ ತೊಂದರೆಗಳನ್ನು ಸಹ ಕಡಿಮೆ ಮಾಡುತ್ತದೆ. ವೀಳ್ಯದೆಲೆಯ ನೀರು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ‌ಗಳ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಇದು ಹೃದಯವನ್ನು ಆರೋಗ್ಯಕರವಾಗಿಸುತ್ತದೆ.…

Read More